ದೈನಂದಿನ ಅಪರಾದ ವರದಿ.
ದಿನಾಂಕ 22.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-06-2014 ರಂದು ಸಂಜೆ ಪಿರ್ಯಾದಿದಾರರಾದ ವೀಣಾ ಸಿ.ಎಲ್. ರವರು ಅವರ ಬಾಬ್ತು ಕೆ.ಎ. 03.ಎಂ.ಎಲ್.425 ನೇ ಕಾರಿನಲ್ಲಿ ಕೂಳೂರು ಕಡೆಯಿಂದ ಕಾವೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಂಜೆ 6-00 ಗಂಟೆ ಸಮಯಕ್ಕೆ ಕಾವೂರು ಸಪ್ತಗಿರಿ ಹೋಟೇಲ್ ಎದುರಿಗೆ ತಲುಪುತ್ತಿದಂತೆ ಪಿರ್ಯಾದಿದಾರರ ಹಿಂದಿನಿಂದ ಕೆ.ಎ.19.ಯು.9802 ನೇ ಮೋಟಾರು ಸೈಕಲ್ ಸವಾರ ಬಾಸ್ಕರ ಗಟ್ಟಿ ಎಂಬವರು ಸದ್ರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರನ್ನು ಓವರ್ ಟೇಕ್ ಮಾಡುವ ಬರದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಕಾರಿನ ಬಲಗಡೆಯಿಂದ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ಜಖಂಗೊಳಿಸಿಕೊಂಡು ಮುಂದಕ್ಕೆ ಹೋಗಿ ಮೋಟಾರು ಸೈಕಲ್ ಸಮೇತಾ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿರುತ್ತಾನೆ. ಈ ಅಪಘಾತಕ್ಕೆ ಸದ್ರಿ ಮೋಟಾರು ಸೈಕಲ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.
2.ಮಂಗಳೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-06-2014 ರಂದು ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕ ಶ್ರೀ ಗೋಪಾಲ್ ಕೊಟಪಾಡಿರವರು ಹಾಗೂ ಠಾಣಾ ಸಿಬ್ಬಂದಿಗಳು ಕೊಟ್ಟಾರಚೌಕಿಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ, ಮದ್ಯಾಹ್ನ 11:45 ಗಂಟೆ ಸಮಯಕ್ಕೆ ಮಂಗಳೂರು ಕಡೆಯಿಂದ ಕೂಳೂರು ಫೆರಿ ಸಾರ್ವಜನಿಕ ರಸ್ತೆಯಲ್ಲಿ ಕೆ.ಎ-20-ಬಿ-5935 ನೇ ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೊಟ್ಟಾರಚೌಕಿಯ ಬಳಿ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದುದ್ದನ್ನು ನೋಡಿ ನಿಲ್ಲಿಸುವರೇ ಸೂಚನೆಯನ್ನು ಕೊಟ್ಟರೂ, ಚಾಲಕನು ಬಸ್ಸನ್ನು ನಿಲ್ಲಿಸದೇ ಅದೇ ವೇಗದಲ್ಲಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದರಿಂದ, ಸದ್ರಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯ ವಿರುದ್ದ ಕಲಂ 279, ಐ,ಪಿ.ಸಿ ರೂಲ್ 218 ಜೊತೆಗೆ 177 ಐ.ಎಂ.ವಿ ಕಾಯ್ದೆಯಡಿ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದಾಗಿದೆ.
3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-06-2014 ರಂದು ಪಿರ್ಯಾಧಿದಾರರಾದ ಶ್ರೀ ಪ್ರವೀಣ್ ರವರು ತಮ್ಮ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತನಾದ ನೀತಿನ್ ನೊಂದಿಗೆ ರಾತ್ರಿ ಸುಮಾರು 08-30 ಗಂಟೆಗೆ ಬೋಳೂರು ಯುನೈಟೆಡ್ ಸ್ಪೋರ್ಟ್ಸ ಕ್ಲಬ್ ಬಳಿಯ ರಾಮಮೂರ್ತಿ ಎಂಬ ಡಾಕ್ಟರ್ ಕ್ಲಿನಿಕ್ ಬಳಿ ಬಂದು ಅಲ್ಲೇ ಪಕ್ಕದಲ್ಲಿರುವ ಉಮೇಶ ಎಂಬವರ ಜನರಲ್ ಸ್ಟೋರ್ ಬಳಿ ಮಾತನಾಡುತ್ತಿರುವಾಗ ನೀತಿನ್ ತನ್ನ ಬಳಿ ಹಣ ಇಲ್ಲ, ಖರ್ಚಿಗೆ 50 ರೂಪಾಯಿ ಇದ್ರೆ ಕೊಡು ಎಂದು ಕೇಳಿದ, ಅದಕ್ಕೆ ಪಿರ್ಯಾಧಿದಾರರು ನನ್ನ ಬಳಿ ಕೂಡ ಖರ್ಚಿಗೆ ಹಣವಿಲ್ಲ ಎಂದು ಹೇಳಿದಾಗ ನೀತಿನ್ ನು ಒಮ್ಮೇಲೆ ಪಿರ್ಯಾಧಿದಾರರಿಗೆ ಹಾಗೂ ಅವರ ತಾಯಿಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಪಕ್ಕದಲ್ಲಿದ್ದ ಜನರಲ್ ಸ್ಟೋರ್ ನ ಬದಿಯಲ್ಲಿದ್ದ ಖಾಲಿ ಸೋಡಾದ ಬಾಟಲಿಯನ್ನು ತುಂಡು ಮಾಡಿ ಪಿರ್ಯಾಧಿದಾರರ ಎಡಕೆನ್ನೆಗೆ ತಿವಿದು ರಕ್ತಗಾಯ ಮಾಡಿರುವುದಾಗಿದೆ.
4.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಬ್ದುಲ್ ತೌಸೀಫ್ ರವರು ಉತ್ತರ ದಕ್ಕೆಯಲ್ಲಿ ಮಂಜಿಗೆ ಸಾಮಾನು ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದು, ಮಂಗಳೂರು ನಗರದಲ್ಲಿ ಓಡಾಡಲು ಅವರ ದೊಡ್ಡಪ್ಪ ಅಹಮ್ಮದ್ ರವರ ಹೆಸರಿನಲ್ಲಿರುವ ಕೆಎ-19-ಇಬಿ-4940 ನೇ ನಂಬ್ರದ ಕರಿಝ್ಮಾ (ಹೀರಾಹೋಂಡಾ) ಮೋಟಾರ್ ಸೈಕಲನ್ನು ಉಪಯೋಗಿಸುತ್ತಿದ್ದು, ದಿನಾಂಕ 19-06-2014 ರಂದು ಕೆಲಸ ಮುಗಿಸಿ ಮನೆಗೆ ಹೋಗುವರೇ ರಾತ್ರಿ 8:30 ಗಂಟೆಗೆ ಉತ್ತರ ದಕ್ಕೆಯ ಸುಜೀರ್ ಬಿಲ್ಡಿಂಗ್ ಅಡಿಯಲ್ಲಿ ಪಾರ್ಕ್ ಮಾಡಿ ಹೋಗಿದ್ದು, ಬಳಿಕ ದಿನಾಂಕ 20-06-2014 ರಂದು ಬೆಳಿಗ್ಗೆ 11:00 ಗಂಟೆಗೆ ಬಂದು ನೋಡಿದಾಗ ಬೈಕ್ ಕಾಣೆಯಾಗಿದ್ದು, ಸುತ್ತ ಮುತ್ತಲು ಹಾಗೂ ಮಂಗಳೂರು ನಗರದಲ್ಲಿ ಹುಡುಕಲಾಗಿ ಎಲ್ಲೂ ಬೈಕ್ ಪತ್ತೆಯಾಗದೇ ಇದ್ದು, ಬೈಕನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಇದರ ಅಂದಾಜು ಬೆಲೆ ರೂ 48,000/- ಆಗಬಹುದು. ಕಾಣೆಯಾದ ಮೋಟಾರ್ ಸೈಕಲ್ ವಿವರ: HERO HONDA KARIZMA, ENGINE NO. MC 38EBAGF00523, CHASIS NO. MBLMC38ELAGF00531, COLOR: BLACK, MODEL: 2010 ಆಗಿರುತ್ತದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಧನಲಕ್ಷ್ಮೀ ರವರ ಗಂಡನಾದ ಮನೋಜಕುಮಾರ ಪ್ರಾಯ 39 ಎಂಬುವರು ಉಳ್ಳಾಲದ 108 ಅಂಬ್ಯುಲೆನ್ಸ ವಾಹನದ ಚಾಲಕರಾಗಿದ್ದು ದಿನಾಂಕ 20/06/2014 ರಂದು ಬೆಳಗ್ಗೆ 7.30 ಕ್ಕೆ ಮಂಗಳೂರು ಜಪ್ಪುವಿನಲ್ಲಿರುವ ತನ್ನ ಮನೆಯಿಂದ ಕೆಲಸಕ್ಕೆಂದು ತೆರಳಿದ್ದು ವಾಪಾಸು ಮನೆಗೆ ಬಾರದೆ ಇರುವುದರಿಂದ ಉಳ್ಳಾಲಕ್ಕೆ ಹೋಗಿ ವಿಚಾರಿಸಿದಾಗ ನಿನ್ನೆ ಸಾಯಂಕಾಲ 16.00 ಗಂಟೆಗೆ ಮನೆಗೆ ಹೊಗುತ್ತೇನೆ ಎಂಬುದಾಗಿ ಅಲ್ಲಿಂದ ಹೊರಟವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಮೊಬೈಲ್ ಕರೆ ಮಾಡಿದಾಗ ಮೊಬೈಲ್ ಕರೆಯನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ದೂರಿನಲ್ಲಿ ತಿಳಿಸಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-06-2014 ರಂದು ಸಂಜೆ 3-00 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಎಂಬಲ್ಲಿ KA 03 9007 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತನ್ನ ಎದುರುಗಡೆಯಿಂದ ಬರುತ್ತಿದ್ದ KA 19 Y 2741 ನೇ ನಂಬ್ರದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಬಾಲಕೃಷ್ಣ ಕಾರಂತ್ ಎಂಬವರು ಜಖಂಗೊಂಡು ಮಂಗಳೂರು S.C.S ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿಗಳಾದ ಸುಬ್ಬು @ ಸುಬ್ರಹ್ಮಣ್ಯ ಮತ್ತು ಕಿರಣ್ @ ಅಚ್ಯುತ್ @ ಸ್ವಾಮಿ, ಸುನಿಲ್ ಕುಮಾರ್ @ ಕೌಂಟಿ, ಹಾಗೂ ರೋಹಿತ್ ಎಂಬವರು ಭೂಗತ ಪಾತಕಿಗಳಾದ ರವಿ ಪೂಜಾರಿ ಹಾಗೂ ಕಲಿ ಯೋಗೀಶರ ಅನತಿಯಂತೆ ದಿನಾಂಕ:21/06/2014 ರಂದು ಸಂಜೆ 3-00 ಗಂಟೆಗೆ ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಕುಂಟಪದವು ಎಂಬಲ್ಲಿ ಮಂಗಳೂರಿನ ಬಿಲ್ಡರ್ ನವರಾದ ಇನ್ ಲ್ಯಾಂಡ್ ಬಿಲ್ಡರ್ ಸಿರಾಜ್ ಹಾಗೂ ವಿಶ್ವಾಸ್ ಬಿಲ್ಡರ್ ಅಬ್ದುಲ್ ರವೂಫ್ ಪುತ್ತಿಗೆ ಎಂಬವರುಗಳನ್ನು ಕೊಲೆ ಮಾಡುವ ಸಂಚನ್ನು ರೂಪಿಸಿ ಆ ಕೊಲೆಯನ್ನು ಮಾಡಲು ಯಾವುದೇ ಪರವಾನಿಗೆಯಿಲ್ಲದ 3 ಪಿಸ್ತೂಲ್ ಹಾಗೂ 17 ಸಜೀವ ಗುಂಡುಗಳನ್ನು ವಶದಲ್ಲಿರಿಸಿಕೊಂಡದ್ದಲ್ಲದೇ ಈ ಕೊಲೆ ಸಂಚಿಗೆ ಕಲಿ ಯೋಗೀಶನು ನೀಡಿದ ರೂ.1,50,000/- ವನ್ನು ವಶದಲ್ಲಿಟ್ಟುಕೊಂಡು ಮೇಲಿನ ಸ್ಥಳದಲ್ಲಿ ಕೊಲೆಗೆ ಸಿದ್ದತೆ ನಡೆಸುತ್ತಾರೆಂಬ ಮಾಹಿತಿಯಂತೆ ಸಿ.ಸಿ.ಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜ ರವರು ಅವರ ಸಿಬ್ಬಂದಿಗಳ ಜೊತೆ ದಾಳಿ ಮಾಡಿದಾಗ ಆರೋಪಿತರ ಪೈಕಿ ಸುನಿಲ್ ಕುಮಾರ್ @ ಕೌಂಟಿ, ಹಾಗೂ ರೋಹಿತ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದು ವಶಕ್ಕೆ ಸಿಕ್ಕಿದ ಸುಬ್ಬು @ ಸುಬ್ರಹ್ಮಣ್ಯ ಮತ್ತು ಕಿರಣ್ @ ಅಚ್ಯುತ್ @ ಸ್ವಾಮಿ ಎಂಬವರಿಂದ ಮೇಲ್ಕಂಡ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಬಜ್ಪೆ ಠಾಣೆಗೆ ತಂದು ಹಾಜರುಪಡಿಸಿದ್ದಾಗಿದೆ.
No comments:
Post a Comment