Friday, June 20, 2014

Daily Crime Reports 20-06-2014

ದೈನಂದಿನ ಅಪರಾದ ವರದಿ.

ದಿನಾಂಕ 20.06.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

2

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19.06.2014 ರಂದು ಬೆಳಿಗ್ಗೆ ಸುಮಾರು 07:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ಹಮೀದ್ ರವರ ಮಗನಾದ ಮಹಮ್ಮದ್ರಿಜ್ವಾನ್‌ (07) ಎಂಬಾತನು ತನ್ನ ಮನೆಯಾದ ಮಂಗಳೂರು ತಾಲೂಕು, ಪಾವೂರು ಗ್ರಾಮದ ಕಂಡಿಗ ಎಂಬಲ್ಲಿಂದ ಪಕ್ಕ ಮಹಮ್ಮದ್ಎಂಬವರ ಮನೆಗೆ ಹಾಲು ತರಲೆಂದು ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ವಯರನ್ನು ಗಮನಿಸದೇ ತುಳಿದು ಬಿದ್ದಾಗ ವಯರ್ಕೈಗೆ ಹಾಗೂ ಮೈಗೆ ತಗುಲಿ ವಿದ್ಯುತ್ಶಾಕ್ಹೊಡೆದು ಚಿಂತಾಜನಕ ಸ್ಥಿತಿಯಲ್ಲಿ ಇದ್ದವನನ್ನು ಫಿರ್ಯಾದಿದಾರರು ಮತ್ತು ಇತರರು ಸೇರಿ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿದಲ್ಲಿ ಮಹಮ್ಮದ್ರಿಜ್ವಾನ್ನು ಮೃತ ಪಟ್ಟಿರುತ್ತಾನೆ. ಘಟನೆಗೆ ಮುಸ್ಕಾಂ ಇಲಾಖೆಯವರ ನಿರ್ಲಕ್ಷತನವೇ ಕಾರಣವಾಗಿರುತ್ತದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 16-06-2014 ರಂದು ಬೆಳಿಗ್ಗೆ 06-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೇಶವ ರವರು ಮಂಗಳೂರು ನಗರದ ಬೆಂದೂರುವೆಲ್ ನಲ್ಲಿರುವ ಡಯಾನಾ ಅಪಾರ್ಟಮೆಂಟ್ ಬಳಿ ತಾನು ಉಪಯೋಗಿಸಿಕೊಂಡಿರುವ ಪಿರ್ಯಾದಿದಾರರ ಸ್ನೇಹಿತ ರಾಜೇಶ್ ಎಂಬವರ ಆರ್.ಸಿ ಮಾಲಕತ್ವದ KA 19 EK 0225ನೇ ನೋಂದಣಿ ಸಂಖ್ಯೆಯ, ಚಾಸೀಸ್.ನಂ: MBLJF32ABDGK15904, ಇಂಜಿನ್ ನಂಬ್ರ: JF32AADGK16014 ಕಪ್ಪು ಬಣ್ಣದ 2013ನೇ ಮೊಡೆಲಿನ ಅಂದಾಜು ಮೌಲ್ಯ 47,450/- ರೂ. ಬೆಲೆ ಬಾಳುವ ಹೀರೋ ಕಂಪನಿಯ ಮ್ಯಾಸ್ಟ್ರೋ ಡಿಲಕ್ಸ್ BS III ದ್ವಿ-ಚಕ್ರ ವಾಹನವನ್ನು  ಪಾರ್ಕ್ ಮಾಡಿಟ್ಟು ಹಾಲು ಹಾಕಲು ಹೋಗಿ ವಾಪಸು 06-30 ಗಂಟೆಗೆ ದ್ವಿ-ಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಸದ್ರಿ ದ್ವಿ-ಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಸದ್ರಿ ವಾಹನವನ್ನು ಇಲ್ಲಿಯ ತನಕ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

3.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 18-06-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಸೌರಭ ಶೆಟ್ಟಿ ರವರು ಕದ್ರಿ ಕಂಬ್ಳ ರಸ್ತೆಯಲ್ಲಿ ಸೌರಭ್ ಅಪಾರ್ಟಮೆಂಟ್ ಹೆಸರಿನ ಕಾಮಗಾರಿ ಕೆಲಸ ನಡೆಯುತ್ತಿರುವ ಬಗ್ಗೆ ಪಿರ್ಯಾದಿಗೆ ತನ್ನ ತಂದೆಯವರು ತಿಳಿಸಿದಂತೆ ಕಾಮಗಾರಿ ಕೆಲಸ ನೋಡಿಕೊಳ್ಳಲು ಬಂದಾಗ ಸಮಯ ಸುಮಾರು 11.45 ಗಂಟೆಗೆ ಪಿರ್ಯಾದಿಯ ಕಟ್ಟಡದಲ್ಲಿ ಅನಧೀಕೃತವಾಗಿ ವಾಸಮಾಡಿಕೊಂಡಿದ್ದ ಸುರೇಶ್ ಶೆಟ್ಟಿ ಎಂಬಾತನು ಪಿರ್ಯಾದಿ ಬಳಿ ಬಂದು ತನ್ನ ತಂದೆಯನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ವಸತಿ ಸಂಕೀರ್ಣದ ನೀರು ಸರಬರಾಜುನ್ನು ನಿಲ್ಲಸಿದ ಬಗ್ಗೆ ನಿಂದಿಸಿ ತಡೆದು ನಿಲ್ಲಿಸಿ ಅಲ್ಲಿಯೇ ಇದ್ದ ಕಲ್ಲನ್ನು ಹೆಕ್ಕಿ ಪಿರ್ಯಾದಿಯ ಕುತ್ತಿಗೆಯ ಎಡಭಾಗಕ್ಕೆ ಹಾಗೂ ಎದೆಯ ಮಧ್ಯ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದು ನಂತರ ಪಿರ್ಯಾದಿಯು ತನ್ನ ತಂದೆ ಮತ್ತು ಸ್ನೇಹಿತರು ಬಂದಾಗ ಆರೋಪಿ ಸುರೇಶ್ ಶೆಟ್ಟಿಯು ಅಲ್ಲಿಂದ ಹೋಗುತ್ತಾ ನಿಮ್ಮನ್ನು ಮುಂದಕ್ಕೆ ಜೀವ ಸಹಿತ ಬದುಕಲು ಬಿಡುವುದಿಲ್ಲ, ಪೊಲೀಸರಿಗೆ ದೂರು ಕೊಟ್ಟಲ್ಲಿ ಮುಂದಕ್ಕೆ ನೋಡಿಕೊಳ್ಳತ್ತೇನೆ ಎಂಬುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 18.06.2014 ರಂದು ರಾತ್ರಿ 23.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸುಶೀಲಾ ಡಿ. ಶೆಟ್ಟಿ ರವರು ವಾಸವಾಗಿರುವ ಸೌರಬ್ ಅಪಾರ್ಟಮೆಂಟ್ ಪ್ಲಾಟಿಗೆ ಆರೋಪಿಯವರುಗಳಾದ ಬಾಲಕೃಷ್ಣ ಶೆಟ್ಟಿ ಹಾಗೂ ಸೌರಭ್ ಶೆಟ್ಟಿಯವರು ಹಾಗೂ ಒಟ್ಟಿಗೆ ಇತರರು 10 ಮಂದಿ ಆಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ಕೈಯಿಂದ ಹೊಡೆದು ಪಿರ್ಯಾದಿಗೆ ದೂಡಿರುತ್ತಾರೆ, ಸದ್ರಿ ಪಿರ್ಯಾದಿಯು ಬಿದ್ದು ಸ್ಮೃತಿ ತಪ್ಪಿದ್ದು ಅವರ ಮಕ್ಕಳು ಮಂಗಳೂರು ನಗರದ ಒಮೇಗಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಸದ್ರಿ ಪಿರ್ಯಾದಿಯು ಹೃದೋಗಿಯಾಗಿರುತ್ತಾರೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಫಿರ್ಯಾದಿದಾರರಾದ ಶ್ರೀ ಕೃಷ್ಣ ರವರಿಗೆ ದಿನಾಂಕ 18.6.2014 ರಂದು ನೆರೆಮನೆ ವಾಸಿ ಉಳೆಪ್ಪಾಡಿ ಗ್ರಾಮದ ಶೀನ ಬಂಗೇರ ಮತ್ತು ಆತನ ಹೆಂಡತಿ ರುಕ್ಮಿಣಿ ಎಂಬವರು ಐಕಳ ಗ್ರಾಮ ಪಂಚಾಯತ್ ಆವರಣದಲ್ಲಿ ತಡೆದು ನಿಲ್ಲಿಸಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

 

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪುನೀತ್ ಕೊಟ್ಟಾರಿ ರವರು ಹಿಂದೂ ಧರ್ಮಿಯರಾಗಿದ್ದು, ದೇವರು ಹಾಗೂ ದೈವಗಳನ್ನು ಸಂಪೂರ್ಣವಾಗಿ ನಂಬಿ ಜೀವನ ನಡೆಸುವವರಾಗಿದ್ದು, ಮಂಗಳೂರು ಕೆ.ಎಸ್. ರಾವ್ ರಸ್ತೆಯಲ್ಲಿರುವ ನವಕರ್ನಾಟಕ ಪಬ್ಲಿಕೇಷನ್ (ಪೈ) ಲಿಮಿಟೆಡ್ ನಿಂದ "ಬೆತ್ತಲೆ ಪೂಜೆ ಯಾಕೆ ಕೂಡದು" ಎಂಬ ಪುಸ್ತಕವನ್ನು ಖರೀದಿಸಿ ಓದಿದ್ದು, ಸದ್ರಿ ಪುಸ್ತಕದ ಪುಟ ಸಂಖ್ಯೆ 37 ರಲ್ಲಿ "ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೈವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದೆ", ಮತ್ತು ಪುಟ ಸಂಖ್ಯೆ 71 ರಲ್ಲಿ "ಬರೀ ಪುರಾಣ ಕತೆಗಳನಷ್ಟೆ ಅಲ್ಲ, ಕೆಳಜಾತಿಯ ತುಳುವರ ತಂಡಗಳು ಆಡುತ್ತಿದ್ದ ಕೋಲ" ಗಳ ಹಾಗೂ ಪಂರ್ಜುಲಿ ದೈವದ ಬಗ್ಗೆ ಕೇವಲವಾಗಿ ಸಾಮಾನ್ಯ ಕಲ್ಲಿಗೆ ಹೋಲಿಸಿ, ಅದರ ಮೇಲೆ ಮೂತ್ರ ವಿಸರ್ಜನ ಮಾಡಿದ್ದೆ ಎಂಬುದಾಗಿ, ಪಂಜುರ್ಲಿ ಕೋಲ ಕೇವಲ ನಟನೆ ಎಂದು ಅವಹೇಳನಕಾರಿಯಾಗಿ ಪಿರ್ಯಾದಿದಾರರ ಸಮೇತ ಸಮಸ್ತ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಲೇಕಖರಾದ ಆರೋಪಿ ಯು.ಆರ್. ಅನಂತಮೂರ್ತಿ ಯವರು ಬರೆದು, ಅದನ್ನು ಬೆಂಗಳೂರಿನ ಜಯನಗದ 'ವಸಂತ ಪ್ರಕಾಶನ" ಪುಸ್ತಕ ಪ್ರಕಟಿಸಿರುವುದಾಗಿದೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19-06-2014 ರಂದು ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ವನಿತಾ ಪಿಂಟೊ ರವರು ತನ್ನ ಮಗಳನ್ನು ಮನೆಯಿಂದ ಕರೆದುಕೊಂಡು ಕಾರ್ಮೇಲ್ ಸ್ಕೂಲ್ ಗೆ ಬಂದು ತಾನು ಬಂದಿದ್ದ ಕೆಎ 19 ಇಎ 8464 ಏಸಿಸ್ ದ್ವಿಚಕ್ರ ವಾಹನವನ್ನು ಶಾಲಾ ಕಂಪೌಂಡ್ ನಲ್ಲಿ ಬೆಳಿಗ್ಗೆ 8-30 ಗಂಟೆಗೆ ಪಾರ್ಕ್ ಮಾಡಿ ಮಗುವನ್ನು ಎಲ್ ಕೆ ಜಿ ಕ್ಲಾಸ್ ಗೆ ಬಿಡುವರೇ ಹೋಗಿದ್ದು, ಹೋಗಿ ವಾಪಾಸು ಬರುವ ವೇಳೆ ಆರೋಪಿತ ಇನಾಯತ್ ಆಲಿ ಎಂಬಾತನು ಪಿರ್ಯಾದಿದಾರರ ದ್ವಿಚಕ್ರ ವಾಹನದ ಸೀಟಿನ ಕೆಳಭಾಗದಲ್ಲಿರುವ ಡ್ಯಾಶ್ ಬಾಕ್ಸ್ ನಲ್ಲಿ   ಇರಿಸಿದ್ದ ನಗದು ಹಣ ರೂಪಾಯಿ 500 ನ್ನು ಕಳವು ಮಾಡಿದ ವೇಳೆ ಸಾರ್ಜಜನಿಕರು ಹಿಡಿದು ಕೊಂಡಿರುತ್ತಾರೆ. ಸದ್ರಿಯಾತನನ್ನು ಪಿರ್ಯಾದಿದಾರರು ಸಾರ್ವಜನಿಕರ ಸಹಾಯದಿಂದ  ಠಾಣೆಗೆ ಕರೆತಂದು ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಲಿಖಿತ ಪಿರ್ಯಾದನ್ನು ನೀಡಿರುವುದಾಗಿದೆ. ಅಲ್ಲದೇ ಮೊದಲು ಕೂಡಾ ಆರೋಪಿತ ಇನಾಯತ್ ಆಲಿ ಹಲವಾರು ಬಾರಿ ಪಿರ್ಯಾದಿದಾರರ  ದ್ವಿಚಕ್ರ ವಾಹನದಲ್ಲಿ ಇರಿಸಿದ್ದ ನಗದು ಹಣವನ್ನು ಕಳವು ಮಾಡಿರುತ್ತಾನೆ.

 

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 18-06-2014 ರಂದು ಪಿರ್ಯಾದಿದಾರರಾದ ಶ್ರೀ ರಾಜು ರವರು ತಣ್ಣೀರುಬಾವಿಗೆ ಬೋಟ್ ನಲ್ಲಿ ಹೋಗುವರೇ ಸ್ಟೇಟ್ ಬ್ಯಾಂಕ್ ನಿಂದ ಧಕ್ಕೆ ಕಡೆಗೆ ನಡೆದುಕೊಂಡು ಹೋಗುವ ಸಮಯ ಉಪ್ಪಿನ ಧಕ್ಕೆಯ ಬಳಿ ತಲುಪುತ್ತಿದ್ದಂತೆ, ಜೋರಾಗಿ ಮಳೆ ಬಂದಿರುವುದರಿಂದ, ಅಲ್ಲಿಯೇ ಹತ್ತಿರವಿದ್ದ ಸಿಮೆಂಟ್ ಗೋಡಾನ್ ಬಳಿ ನಿಂತಿದ್ದಾಗ, ಸಮಯ ಸುಮಾರು ರಾತ್ರಿ 9-00 ಗಂಟೆಗೆ, 3 ಮಂದಿ ಅಪರಿಚಿತ ಯುವಕರು ಬಂದು ಪಿರ್ಯಾದಿದಾರರನ್ನು ಇಲ್ಲಿ ಯಾಕೆ ನಿಂತು ಕೊಂಡಿದ್ದೀಯಾ ಎಂದು ಹೇಳಿದಾಗ, ಪಿರ್ಯಾದಿದಾರರು, ನೀವು ಯಾರು ನನ್ನನ್ನು ಕೇಳಲು ಎಂದು ಹೇಳಿದ್ದು, ಸಮಯ ಅವರೊಳಗೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ, ಯುವಕರ ಪೈಕಿ ಓರ್ವನು, ಪಿರ್ಯಾದಿದಾರರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದಿರುವುದಲ್ಲದೇ, ಮರ್ತೋರ್ವ ವ್ಯಕ್ತಿ ಅಲ್ಲಿಯೇ ಇದ್ದ ಮರದ ತುಂಡಿನಿಂದ ಪಿರ್ಯಾದಿದಾರರ ತಲೆಗೆ, ಮೈಮೇಲೆ ಹಾಗೂ ಕಾಲುಗಳಿಗೆ ಹಲ್ಲೆ ಮಾಡಿರುತ್ತಾರೆ. ಬಳಿಕ ಮೂವರುಗಳು ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು ಕಾಲುಗಳಿಂದ ತುಳಿದಿರುವುದರಿಂದ, ಪಿರ್ಯಾದಿದಾರರ ತಲೆಗೆ ರಕ್ತ ಗಾಯ ಹಾಗೂ ಕೈಕಾಲುಗಳಿಗೆ ಗುದ್ದಿದ ನೋವು ಉಂಟಾಗಿರುತ್ತದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19-06-2014 ರಂದು ಸುರತ್ಕಲ್ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ರಾಜೇದ್ರ ಬಿ. ರವರು ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಬಗ್ಗೆ ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ಗಣೇಶಪುರ, ಕಡೆ ಸಂಚರಿಸಿಕೊಂಡು ರಾತ್ರಿ 7-15 ಗಂಟೆಗೆ ಕಾನ ಲಾನ್ಸ್ ವೇ ಬಾರ್ ಎದುರು ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಜೋಕಟ್ಟೆ ಕಡೆಯಿಂದ ಕಾನ ಕಡೆಗೆ ಕಾರಿಡಾರ್ರಸ್ತೆಯಲ್ಲಿ ಒಂದು ಟೆಂಪೊವನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬರುತ್ತಿರುವುದನ್ನು ಗಮಿನಿಸಿ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಆತನು ಪಿರ್ಯಾದಿದಾರರು ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕಾರಿಡಾರ್ ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಚಾಲಕನು ಸೀಟಿನಿಂದ ಇಳಿದು ಲಾನ್ಸ್ ವೇ ಬಾರ್ ಹಿಂಬದಿ ಓಡಿ ಹೋಗಿದ್ದು ಸಂಶಯಗೊಂಡ ಪಿರ್ಯಾದಿದಾರರು ಆತನನ್ನು ಪತ್ತೆ ಮಾಡುವರೇ ಸಿಬ್ಬಂದಿಗಳನ್ನು ಕಳುಹಿಸಿದ್ದು, ಪಿರ್ಯಾದಿದಾರರು ಮತ್ತು ಉಳಿದ ಸಿಬ್ಬಂದಿಗಳು ಸದ್ರಿ ವಾಹನವನ್ನು ಪರಿಶೀಲಿಸಿದಾಗ ಸದ್ರಿ ವಾಹನವು  ಕೆ.-20-ಬಿ-4308 ನೇ ಟಾಟಾ ಏಸ್ ಹೆಚ್ ಟಿ ಯಾಗಿದ್ದು ವಾಹನದ ಹಿಂಬದಿ ಬಿಳಿ ಬಣ್ಣದ 3 ಗೋಣಿಚೀಲದಲ್ಲಿ ಸುಮಾರು 25 ಕೆ ಜಿ ಕೇಬಲ್ ವಯರ್ ಗಳಿದ್ದು ಅದರ ಅಂದಾಜು ಮೌಲ್ಯ ಸುಮಾರು 15000 ರೂ ಆಗಬಹುದಾಗಿದ್ದು ಚಾಲಕ ಪತ್ತೆಯಾಗದೇ ಇರುವುದಾಗಿದೆ.

No comments:

Post a Comment