Monday, June 16, 2014

Daily Crime Reports 15-06-2014

ದೈನಂದಿನ ಅಪರಾದ ವರದಿ.

ದಿನಾಂಕ 15.06.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಉಸ್ಮಾನ್ ಅಹ್ಮದ್ ಶೇಖ್ ರವರ ತಂಗಿಯ ಮಗ ಝೈಫುಲ್ಲ ಎಂಬಾತನನ್ನು ಕೋರೆಯ ಕೆಲಸಕ್ಕೆಂದು ಮಂಗಳೂರು ತಾಲೂಕು ಕಂದಾವರ ಗ್ರಾಮದ ಕೌಡೂರು ಎಂಬಲ್ಲಿರುವ ಚಂದ್ರಹಾಸ ಎಂಬವರ ಕಲ್ಲಿನ ಕೋರೆಗೆ ಕರೆದುಕೊಂಡು ಹೋದ ಸಫಾನ್ ಅಲ್ಲಿ ಝೈಫುಲ್ಲ ನಿಂದ ಕೆಲಸ ಮಾಡಿಸುತ್ತಿದ್ದ ಸಮಯ ಆತನಿಗೆ ಸರಿಯಾದ ರಕ್ಷಣಾ ಸಾಮಗ್ರಿಗಳನ್ನು ನೀಡದೇ ಎತ್ತರವಾದ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿಸುತ್ತಿದ್ದುದ್ದರಿಂದ ಅಲ್ಲಿಂದ ಕೆಳಗೆ ಬಿದ್ದು ಝೈಫುಲ್ಲ ಮೃತಪಟ್ಟಿದ್ದು ಆತನ ಮರಣಕ್ಕೆ ಕೋರೆಯ ಮಾಲೀಕ ಚಂದ್ರಹಾಸ, ಕಂಟ್ರಾಕ್ಟರ್ ರಾಜೇಶ ಮತ್ತು ಜೊತೆಗಾರ ಸಫಾನ್ ರವರ ನಿರ್ಲಕ್ಷ್ಯತನ ಕಾರಣವಾಗಿದ್ದು ಘಟನೆ ದಿನ ದಿನಾಂಕ:14/06/2014 ರಂದು ಮಧ್ಯಾಹ್ನ 1-00 ಗಂಟೆಯ ಮೊದಲು ನಡೆದಿರಬಹುದಾಗಿದೆ.

 

2.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:13/06/2014 ರಂದು 19-30 ಗಂಟೆ ಸಮಯಕ್ಕೆ ಬಜಪೆ ಗ್ರಾಮದ ಸ್ವಾಮಿಲಪದವು ಎಂಬಲ್ಲಿ ಬಜಪೆ-ಕಟೀಲು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೆಎ-19-ಇಕೆ-8676 ನೇ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಟೀಲು ಕಡೆಯಿಂದ ಕೆಎ-19-ಎಂ.-1109 ನೇ ಕಾರಿನ ಚಾಲಕನು ಕಾರನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಸವಾರ ಅದೇಶ್ ಮತ್ತು ಸಹ ಸವಾರರಾದ ಆತನ ಅಕ್ಕ ಅಖಿಲಾ ರವರಿಗೆ ಗಾಯವಾಗಿದ್ದು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

3.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-06-2014 ರಂದು ರಾತ್ರಿ ಸುಮಾರು 11-30 ಗಂಟೆಗೆ ಅಕ್ಬರ್ ಎಂಬಾತನು ಸಿಟಿಎ 5150 ನೇ ಮಾರುತಿ 800 ನೇ ಕಾರಿನಲ್ಲಿ ಆತನ ಸ್ನೇಹಿತರಾದ ಅಜೀಜ್, ಇಮ್ತಿಯಾಜ್, ಆಸಿಪ್ ರವರೊಂದಿಗೆ ಕಾಟಿಪಳ್ಳ 2ನೇ ಬ್ಲಾಕ್ ಈದ್ಗಾ ಬಳಿ ಇರುವ  ಪಿರ್ಯಾದಿದಾರರಾದ ಶ್ರೀ ಮೊಹಮ್ಮದಲಿ ರವರು ವಾಸವಾಗಿರುವ ಮನೆಗೆ ಬಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ರೂಮಿನೊಳಗೆ ಮಲಗಿದ್ದ ಪಿರ್ಯಾದಿದಾರರನ್ನು ಹಿಡಿದು ಕೈಯಿಂದ ಕುತ್ತಿಗೆಗೆ ಸೊಂಟಕ್ಕೆ, ಹೊಟ್ಟೆಗೆ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದು ಇದನ್ನು ಬಿಡಿಸಲು ಬಂದ ಪಿರ್ಯಾದಿದಾರರ ಹೆಂಡತಿ ಮುಮ್ತಾಜ್ ರವರನ್ನು ದೂಡಿ ಹಾಕಿ ಅವರ ಮುಖಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು  ಪಿರ್ಯಾದಿದಾರರಿಗೆ ಹಾಗೂ ಅಕ್ಬರ್ ರವರಿಗೆ ಹಣದ ವಿಚಾರದಲ್ಲಿ ತಕರಾರು ಇದ್ದುದೇ ಹಲ್ಲೆಗೆ ಕಾರಣವಾಗಿರುತ್ತದೆ.

 

4.ಮಂಗಳೂರು  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.06.2014 ರಂದು ಪಿರ್ಯಾದಿದಾರರಾದ ಶ್ರೀ ವೆಲೆಂಟೈನ್ ಡಿ'ಸೋಜಾ, ನಗರ ಅಪರಾಧ ಪತ್ತೆ ವಿಭಾಗ, ಮಂಗಳೂರು ನಗರ ರವರಿಗೆ  ಮಂಗಳೂರು  ತಾಲೂಕು ವಳಚ್ಚಿಲ್ಎಂಬಲ್ಲಿ ಶ್ರೀನಿವಾಸ್ಕಾಲೇಜಿನ ಮುಖ್ಯ ದ್ವಾರದ ಬಳಿ ಇಬ್ಬರು ವ್ಯಕ್ತಿಗಳು  ಕೆಎ19ಇಜೆ4671 ನಂಬ್ರದ ಮೊಟಾರ್ ಸೈಕಲ್  ನಲ್ಲಿ ಬಂದವರು ಗಾಂಜಾ ಎಂಬ ನಿಶಾ ವಸ್ತುವನ್ನು ಮಾರಾಟ ಮಾಡುತ್ತಾರೆಂಬ ಖಚಿತ ವರ್ತಮಾನದ ಮೇರೆಗೆ ಮಂಗಳೂರು ತಾಲೂಕು ದಂಢಾದಿಕಾರಿಯವರ ಸಮಕ್ಷಮದಲ್ಲಿ ತನ್ನ ಸಿಬ್ಬಂದಿಗಳ ಜೊತೆಯಲ್ಲಿ ಕ್ರಮದಂತೆ ದಾಳಿ ನಡೆಸಿದಾಗ ಆರೋಪಿ ಇಮ್ತಿಯಾಜ್ ಎಂಬವನನ್ನು ಬಂಧಿಸಲು ಶಕ್ತನಾಗಿದ್ದು, ಆತನ ಜೊತೆಯಲ್ಲಿದ್ದ ವಿ ಹೆಚ್ ಶರೀಫ್ ಓಢಿ ಪರಾರಿಯಾಗಿರುವುದಾಗಿದೆ. ತಾಲೂಕು ದಂಢಾಧಿಕಾರಿ ಸಮಕ್ಷಮ ಆತನ ಅಂಗ ಜಪ್ತಿ  ಮಾಡಿದಾಗ  ಆತನ ಕೈಯಲ್ಲಿಟ್ಟುಕೊಂಡಿದ್ದ ಪ್ಲಾಸ್ಟಿಕ್ಕವರ್ನಲ್ಲಿ  ಸುಮಾರು  485 ಗ್ರಾಂ  ತೂಕದ ಮಾದಕ  ವಸ್ತುವಾದ ಗಾಂಜ ಎಂಬ  ವಸ್ತುವು  ಪತ್ತೆಯಾದ್ದುದ್ದಾಗಿದ್ದು,  ಆತನ ಪ್ಯಾಂಟಿನ ಕಿಸೆಯಲ್ಲಿ  5  ಪ್ಯಾಕೆಟ್  ಗಾಂಜ  2  ಮೊಬೈಲ್ಪೋನ್‌,  ಶರ್ಟ್  ಕಿಸೆಯಲ್ಲಿ  ಚುನಾವಣಾ ಆಯೋಗದ ಗುರುತಿನ  ಚೀಟಿ, ಕೆ.  19  ಇಜೆ  4671  ನೇ ಮೋಟಾರು  ಸೈಕ್ಲ್ ಆರ್‌.ಸಿಯ  ನಕಲು, ಮತ್ತು  ನಗದು  ಹಣ  ರೂಪಾಯಿ 3440/- ಪತ್ತೆಯಾಗಿದ್ದು  ಸದ್ರಿ  ವ್ಯಕ್ತಿಯು  ವಿ.ಹೆಚ್  ಶರೀಪ್ಎಂಬವನ  ಜೊತೆ ಸೇರಿ  ಅನದಿಕೃತವಾಗಿ  ಗಾಂಜ  ಎಂಬ ಮಾದಕ  ವಸ್ತುವನ್ನು  ಮಾರಾಟ ಮಾಡುವ  ಸಲುವಾಗಿ  ಹೊಂದಿದ್ದು, ಆತನನ್ನು  ದಸ್ತಗಿರಿ  ಮಾಡಿ  ಆತನ  ಬಳಿ  ದೊರೆತ  ಎಲ್ಲಾ ಸೊತ್ತುಗಳನ್ನು  ಸ್ವಾದೀನ  ಪಡಿಸಿಕೊಂಡಿರುವುದಾಗಿದೆ.

No comments:

Post a Comment