ದೈನಂದಿನ ಅಪರಾದ ವರದಿ.
ದಿನಾಂಕ 23.06.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-06-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ರಾಮಚಂದ್ರ ರವರು ಮಂಗಳೂರು ನಗರದ ಶೇಡಿಗುರಿಯಲ್ಲಿರುವ ಅಕ್ಷಯ್ ಕ್ಯಾಟರರ್ಸರವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ವಾಪಾಸು ತನ್ನ ಮನೆಗೆ ಅಶೋಕನಗರ ಮಾರ್ಗವಾಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ರಾತ್ರಿ ಸಮಯ ಸುಮಾರು 11:30 ಗಂಟೆಗೆ ಅಶೋಕನಗರದ ಗೀತಾ ಡಾಕ್ಟರ್‌ನ ಕ್ಲಿನಿಕ್ ಬಳಿ ತಲುಪಿದಾಗ, ಅವರ ಹಿಂಬದಿಯಿಂದ ಅಂದರೆ ಅಶೋಕನಗರದಿಂದ ಉವಾಮಾರ್ಕೇಟ್ ಕಡೆಗೆ ಒಂದು ಮೋಟಾರು ಸೈಕಲನ್ನು ಅದರ ಸವಾರನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂಬದಿಯಿಂದ ಡಿಕ್ಕಿಹೊಡೆದು, ಅಲ್ಲಿಂದ ಮೋಟಾರು ಸೈಕಲ್ ಸಮೇತ ಪರಾರಿಯಾಗಿದ್ದು, ಅಪಘಾತದಿಂದ ಬಲಗಡೆಯ ಭುಜಕ್ಕೆ ತರಚಿದ ಗಾಯ ಮತ್ತು ಸೊಂಟಕ್ಕೆ ಗುದ್ದಿದ ನಮೂನೆಯ ಗಾಯವಾದ್ದವರು ಮನೆಗೆ ತೆರಳಿ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈ ದಿನ ನೋವು ವಿಪರೀತವಾದ್ದರಿಂದ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.. ಈ ಅಪಘಾತ ನಡೆಸಿದ ಮೋಟಾರುಸೈಕಲ್ನ ನಂಬ್ರ ನೋಡಿರುವುದಿಲ್ಲ, ಆದರೆ ಮೋಟಾರು ಸೈಕಲ್ ಸವಾರನನ್ನು ಮುಂದಕ್ಕೆ ನೋಡಿದರೆ ಗುರುತಿಸುವುದಾಗಿ ತಿಳಿಸಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಮರೋಳಿ ಎಂಬಲ್ಲಿ ದಿನಾಂಕ: 21-06-2014 ರಂದು ರಾತ್ರಿ 11:45 ಗಂಟೆಗೆ ಆರೋಪಿ ದಿಲೀಪ್ ಎಂಬಾತನು ಕೆಎ-19-ಎಎ-817 ನಂಬ್ರದ ಇನ್ನೋವಾ ಕಾರನ್ನು ಬಿಕರ್ನಕಟ್ಟೆ ಕಡೆಯಿಂದ ಪಡೀಲು ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದ ಪರಿಣಾಮ ರಸ್ತೆ ಬದಿಯ ಕಾಂಕ್ರಿಟ್ ಚರಂಡಿಗೆ ಕಾರಿನ ಟಯರ್ ಬಿದ್ದು, ಕಾರು ಪಲ್ಟಿಯಾಗಿ ಕಾರಿನ ಬಾಡಿಗೆ ಜಖಂ ಉಂಟಾಗಿರುತ್ತದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-06-2014ರಂದು 08-30 ಗಂಟೆಯಿಂದ ದಿನಾಂಕ: 22-06-2014ರಂದು 09-30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಎಂ.ಜೆ. ಸೆಬಾಸ್ಟೀನ್ ರವರು ತಮ್ಮ ತೋಟವಿರುವ ಸ್ಥಳವಾದ ಬೆಳ್ತಂಗಡಿಗೆ ತೆರಳಿದ್ದ ಸಮಯ ಯಾರೋ ಕಳ್ಳರು ಪಿರ್ಯಾದಿದಾರರ ವಾಸದ ಮನೆಯಾದ ಮಂಗಳೂರಿನ ಲೋವರ್ ಬೆಂದೂರಿನಲ್ಲಿರುವ ವಟ್ಟಮಾಲ ಹೌಸ್ ಎಂಬ ಮನೆಯ ಬೆಡ್ ರೂಮಿನ ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ಆ ಮೂಲಕ ಒಳಪ್ರವೇಶಿಸಿ, ಮನೆಯ ಬೆಡ್ ರೂಮ್ ಗಳಲ್ಲಿನ ಕಬ್ಬಿಣದ ಕಪಾಟುಗಳನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಬಲಾತ್ಕಾರವಾಗಿ ಮೀಟಿ ತೆರೆದು ಬಟ್ಟೆ ಬರೆ ಹಾಗೂ ಫೈಲ್ ಗಳನ್ನು ಎಳೆದು ಹಾಕಿ ಬೆಲೆ ಬಾಳುವ ಸೊತ್ತುಗಳಿಗಾಗಿ ಹುಡುಕಾಡಿದ್ದು, ಪಿರ್ಯಾದಿದಾರರ ಸೊಸೆಯ ಬೆಡ್ ರೂಮಿನಲ್ಲಿದ್ದ ಕಪಾಟಿನಲ್ಲಿರಿಸಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಕುತ್ತಿಗೆಯ ಸರ-1, ಸುಮಾರು ಒಟ್ಟು 28ಗ್ರಾಂ ತೂಕದ ಲೇಡೀಸ್ ಫಿಂಗರ್ ರಿಂಗ್-7 ಹಾಗೂ ಸುಮಾರು ಒಟ್ಟು 12 ಗ್ರಾಂ ತೂಕದ ಕಿವಿಯೋಲೆ-3 ಜೊತೆ, ಹೀಗೆ ಒಟ್ಟು ಸುಮಾರು 44 ಗ್ರಾಂ ತೂಕದ ಅಂದಾಜು ರೂ.1,14,000/- ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 22/06/2014 ರಂದು ಪಿರ್ಯಾದಿದಾರರಾದ ಶ್ರೀಮತಿ ಅಮೀನಾ ರವರು ತನ್ನ ಗಂಡನವರ ಬಾಬ್ತು ಕಾರು ನಂಬ್ರ ಕೆಎ 19 ಡಿ 9500 ನೇಯದರಲ್ಲಿ ತನ್ನ ಸಂಬಂಧಿಕರ ಜೊತೆ ತನ್ನ ಮನೆಯಿಂದ ಬೆಳಿಗ್ಗೆ ಹೊರಟು ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿರುವ ದರ್ಗಾಕ್ಕೆ ಪ್ರಾರ್ಥನೆ ಮಾಡಿ ವಾಪಾಸ್ ಉಜಿರೆಯಿಂದ ಕಿನ್ನಿಗೋಳಿ ಕಡೆಗೆ ಕಾರಿನಲ್ಲಿ ಬರುತ್ತಾ ಸಂಜೆ ಸುಮಾರು 3-30 ಗಂಟೆಗೆ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಬಾನಂಗಡಿ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಮೂಡಬಿದ್ರೆ ಕಡೆಗೆ ಟಾಟಾ ಇಂಡಿಕಾ ಕಾರು ನಂಬ್ರ ಕೆಎ 19 ಬಿ 7127 ನೇಯದನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಬದಿಯ ಚರಂಡಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ಹಾಗೂ ಹೊಟ್ಟೆಗೆ ಗುದ್ದಿದ ಗಾಯ ಉಂಟಾಗಿದ್ದು ಅಲ್ಲದೇ ಕಾರಿನಲ್ಲಿದ್ದ ಪಿರ್ಯಾದಿದಾರರ ಅಜ್ಜಿ ಜುಬೇದಾ ಎಂಬವರಿಗೆ ಎಡಕಾಲಿನ ಮೊಣಗಂಟಿಗೆ ಹಾಗೂ ಸೊಂಟಕ್ಕೆ ಗುದ್ದಿದ ನೋವುಂಟಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಧಾಕೃಷ್ಣ ಹೆಬ್ಬಾರ್ ರವರು ಬೆಳ್ತಗಂಡಿಯ ನೆರಿಯಾ ಮನೆಯಲ್ಲಿದ್ದ ಸಮಯ ಪಿರ್ಯಾದಿದಾರರ ಮಂಗಳೂರು ಕೆ.ಎಸ್. ರಾವ್ ರಸ್ತೆಯ ಪಂಚವಟಿ ಲೇನ್ ನೆರಿಯಾ ಹೌಸ್ ನ ಮೇಲ್ವಿಚಾರಕರು ಮನೆಯಲ್ಲಿ ಕಳವಾದ ಬಗ್ಗೆ ದೂರವಾಣಿ ಮೂಲಕ ತಿಳಿಸಿದಂತೆ ತನ್ನ ಸಹೋದರನಿಗೆ ಮಾಹಿತಿ ನೀಡಿದ್ದು, ಮಂಗಳೂರಿಗೆ ಬಂದು ಮನೆಯಲ್ಲಿ ಪರಿಶಿಲಿಸಲಾಗಿ ದಿನಾಂಕ 21/22-06-2014 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮಂಗಳೂರು ಕೆ.ಎಸ್. ರಾವ್ ರಸ್ತೆಯ ಪಂಚವಟಿ ಲೇನ್ ನೆರಿಯಾಹೌಸ್ ನ ಮನೆಯ ಹಿಂದುಗಡೆಯ ಬಾಗಿಲನ್ನು ಮತ್ತು ಗ್ರೀಲ್ ನ್ನು ಬಲಾತ್ಕಾರವಾಗಿ ತುಂಡು ಮಾಡಿ ಒಳಪ್ರವೇಶಿಸಿ ಮನೆಯಲ್ಲಿದ್ದ ರೋಲ್ ಗೋಲ್ಡ್, ಎರಡು ವಾಚ್ ಮತ್ತು ಒಂದು ಮೊಬೈಲ್ ಫೋನ್ ಜೊತೆಗೆ ಸಿಮ್ ನಂಬ್ರ 9343566757 ನೇಯದ್ದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 2,000/- ಆಗಬಹುದು.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-06-2014 ರಂದು ಮುಂಜಾನೆ ಸಮಯ 1-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮನುವೇಂದ್ರ ಆಳ್ವ ರವರ ಮನೆಯ ಕಂಪೌಂಡ್ ನ ಒಳಗೆ ಏನೋ ಶಬ್ದ ಕೇಳಿಸಿದ ಕೂಡಲೇ ಪಿರ್ಯಾದಿದಾರರು ಮನೆಯ ಬಾಗಿಲು ತೆರೆದು ನೋಡಿದಾಗ, ಪ್ರಾಯ ಸುಮಾರು 18-20 ವರ್ಷದ ಓರ್ವ ಯುವಕನು ಪಿರ್ಯಾದಿದಾರರ ಕಂಪೌಂಡ್ ನ ಒಳಗೆ ಇದ್ದು, ಆತನನ್ನು ಕಂಡ ಪಿರ್ಯಾದಿದಾರರು ನೀನು ಯಾರು ಎಂದು ಕೇಳಿದಾಗ, ಆತನು ಒಮ್ಮೆಲೇ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ "ನಿನಗೆ ಮತ್ತು ನಿನ್ನ ಮಗಳಿಗೆ ತುಂಬಾ ಅಹಂಕಾರ ಇದೆ. ನಿನ್ನ ಬಾರ್ ನ ವ್ಯವಹಾರವನ್ನು ಬಂದ್ ಮಾಡಿಸುತ್ತೇನೆ. ಕಲ್ಲು ಹೊಡೆದು ಹುಡಿ ಮಾಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ, ಪಿರ್ಯಾದಿದಾರರ ಜೊತೆಯಲ್ಲಿದ್ದ ಮಗಳನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಬಾಬ್ತು ಕಂಪೌಂಡ್ ನ ಒಳಗಡೆ ಪಾರ್ಕ್ ಮಾಡಿದ ಹೋಂಡಾ ಸಿಟಿ ಕಾರು ನಂಬ್ರ ಕೆಎ 19 ಎಂಎ 2362 ನೇದರ ಹಿಂಭಾಗದ ಗ್ಲಾಸಿಗೆ ಮನೆಯಲ್ಲಿದ್ದ ಹೂವಿನ ಚಟ್ಟಿಯನ್ನು ಎತ್ತಿ ಹಾಕಿ ಗ್ಲಾಸ್ ನ್ನು ಹುಡಿ ಮಾಡಿರುತ್ತಾನೆ. ಇದರಿಂದ ಪಿರ್ಯಾದಿದಾರರಿಗೆ ಸುಮಾರು 20,000/- ನಷ್ಟವಾಗಿರುತ್ತದೆ. ನಂತರ ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಕಂಪ್ಲೇಂಟ್ ಕೊಟ್ಟಲ್ಲಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ತನ್ನ ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿರುತ್ತಾನೆ. ಆರೋಪಿತನು ಪಿರ್ಯಾದಿದಾರರ ಮಗಳಿಗೆ ಪರಿಚಯ ಇದ್ದು, ಈತನ ಹೆಸರು ಸುಹಾಗ್ ರೈ ಎಂಬುದಾಗಿರುತ್ತದೆ. ಈತನು ಪಿರ್ಯಾದಿದಾರರ ಮಗಳಿಗೆ ಈ ಮೊದಲಿನಿಂದಲೂ ಆತನ ಜೊತೆಯಲ್ಲಿ ತಿರುಗಾಡಲು ಬರುವಂತೆ ಪದೇ ಪದೇ ಒತ್ತಾಯಿಸುತ್ತಿದ್ದು, ಆಕೆಯು ನಿರಾಕರಿಸಿರುವುದರಿಂದ ಇದೇ ಕಾರಣವನ್ನಿಟ್ಟು ಈ ಕೃತ್ಯ ಮಾಡಿರುವುದಾಗಿದೆ.
No comments:
Post a Comment