ದೈನಂದಿನ ಅಪರಾದ ವರದಿ.
ದಿನಾಂಕ 07.06.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-06-2014 ರಂದು ಬೆಳಗ್ಗಿನ ಜಾವ 02-00 ಗಂಟೆಗೆ ಯಾರೋ ಮೂರು ಜನ ಅಪರಿಚಿತರು ಮಂಗಳೂರು ನಗರದ ಪಳ್ನೀರ್ ಕಾಪ್ರಿಗುಡ್ಡದಲ್ಲಿರುವ ಫಿರ್ಯಾದಿದಾರರಾದ ಶ್ರೀ ಸುರೇಶ್ ಶೇಣವ ರವರ ಬಾಬ್ತು ವೈಭವ ಎಂಬ ಹೆಸರಿನ 17/15/1222/4 ಡೋರ್ ನಂಬ್ರದ ಮನೆಯ ಕಾವಲುಗಾರನನ್ನು ಕಟ್ಟಿ ಹಾಕಿ, ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಿ, ಮನೆಯ ಎದುರು ಬಾಗಿಲು ಮುರಿದು ಒಳಗಡೆ ಪ್ರವೇಶಿಸಿ ಮರದ ಕಪಾಟಿನಲ್ಲಿದ್ದ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಯಿಂದ ಸಿಟಿಝನ್ ಕಂಪೆನಿಯ ವಾಚ್-1, ಸಿಲ್ವರ್ ಬೌಲ್-1 ಸಿಲ್ವರ್ ಟ್ರೇ-1 ಇತ್ಯಾದಿ ಸೊತ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.
2.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನೂರಜಹಾನ್ ಐ. ರವರ ಗಂಡನಾದ ಇಬ್ರಾಹಿಂ ಅಬ್ದುಲ್ಲಾ ಶೇಖ್ ಎಂಬವರು ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆಯನ್ನು ಬೆಂಗಳೂರು ಮತ್ತು ವೆಲ್ಲೂರುಗಳಲ್ಲಿನ ವಿವಿಧ ಆಸ್ಪತ್ರೆಯಲ್ಲಿ ನೀಡಿಸಿದ್ದು, ಈ ಮಧ್ಯೆ ಪಿರ್ಯಾದಿದಾರರು ಗಂಡನ ಬರಹೈನ್ ದೇಶದಲ್ಲಿನ ಎಲ್ಲಾ ವ್ಯವಹಾರಗಳನ್ನು ವಿದೇಶಕ್ಕೆ ಹೋಗಿ ಬರುತ್ತಾ ನೋಡಿಕೊಳ್ಳುತ್ತಿದ್ದು, ಈ ಸಂಬಂಧ ಎಲ್ಲಾ ವ್ಯವಹಾರಕ್ಕೆ ಸಂಬಂಧಪಟ್ಟ ಮೂಲ ದಾಖಲೆಪತ್ರ, ಅವರ ಸ್ಥಿರಾಸ್ತಿ ಪತ್ರಗಳನ್ನು ತನ್ನ ತಂಗಿ ಪರ್ವಿನ್ ಇಸ್ಮಾಯಿಲ್ ರವರಲ್ಲಿ ಇಟ್ಟುಕೊಂಡಿರಲು ನೀಡಿದ್ದು, ಈ ಸಮಯ ಗಂಡನ ಸಂಬಂಧಿಕರಾದ ಅರ್ಷಾದ್ ಮತ್ತು ಇಕ್ಬಾಲ್ ರವರು ಪಿರ್ಯಾದಿದಾರರ ತಂಗಿಯಿಂದ ದಾಖಲೆಪತ್ರಗಳನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಪರ್ವಿನ್ ಇಸ್ಮಾಯಿಲ್ ಉಲ್ಸೂರು ಪೊಲೀಸ್ ಠಾಣೆ ಬೆಂಗಳೂರಿನಲ್ಲಿ ಪಿರ್ಯಾದಿ ನೀಡಿರುತ್ತಾರೆ. ಆರೋಪಿಗಳಾದ ಅರ್ಷದ್ ಮತ್ತು ಇಕ್ಬಾಲ್ ರವರು ಕಾನೂನಿಗೆ ವಿರುದ್ದವಾಗಿ ಪಿರ್ಯಾದಿದಾರರ ಗಂಡನ ಬಾಭ್ತು ಎಲ್ಲಾ ದಾಖಲೆಪತ್ರಗಳನ್ನು ಮತ್ತು ಸ್ಥಿರಾಸ್ತಿ ದಾಖಲೆ ಪತ್ರಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಲ್ಲದೇ, ಪ್ರಸ್ತುತ ಪಿರ್ಯಾದಿದಾರರ ಗಂಡನಾದ ಇಬ್ರಾಹಿಂ ಅಬ್ದುಲ್ಲಾ ಶೇಖ್ ಅಕ್ರಮವಾಗಿ ಯಾವುದೇ ಸಂಪರ್ಕ ಇಲ್ಲದೇ ಹಾಗೆ ಬಚ್ಚಿಟ್ಟುಕೊಂಡಿದ್ದು, ಈ ಬಗ್ಗೆ ಪಿರ್ಯಾದಿದಾರರು ಗಂಡನ ಮೊಬೈಲ್ ದೂರವಾಣಿಗೆ ಫೋನ್ ಮಾಡಿದಾಗಲೂ ಸಂಪರ್ಕಕ್ಕೆ ಸಿಗದೇ ಹಾಗೆ ಮಾಡಿದ್ದು, ಈ ಸಮಯ ಆರೋಪಿಗಳಾದ ಅರ್ಷದ್ ಮತ್ತು ಇಕ್ಬಾಲ್ ರವರಿಂದ ಪಿರ್ಯಾದಿದಾರರ ಗಂಡನ ವಾಪಾಸಾತಿ ಬಗ್ಗೆ ಹಾಗೂ ದಾಖಲಾತಿಗಳ ವಾಪಾಸಾತಿಗೆ ಪಿರ್ಯಾದಿದಾರರ ಮೊಬೈಲ್ ಗೆ ದೂರವಾಣಿ ಕರೆ ಮಾಡಿ ಡಿಮ್ಯಾಂಡ್ ಮಾಡಿದ್ದು, ಈತನ್ಮಧ್ಯೆ ಮಂಗಳೂರು ಇಂಡಿಯಾನ ಹಾಸ್ಪಿಟಲ್ ನ ಡಾ. ಯೂಸೂಫ್ ಎಂಬವರು ದೂರವಾಣಿ ಕರೆ ಮಾಡಿ ಪಿರ್ಯಾದಿದಾರರ ಗಂಡ ನವರು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿ, ನೋಡಲು ಆಸ್ಪತ್ರೆ ಬಾರದಂತೆ ಅಡ್ಡಿಪಡಿಸಿ ಬೆದರಿಕೆ ಒಡ್ಡಿರುವುದಾಗಿದೆ.
3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ದೀಪಿಕಾ ಕಪೂರ್, ಪ್ರೊಪ್ರೈಟರ್ ಇನ್ನೋವೇಶನ್ಸ್ ಎಂ.ಜಿ ರಸ್ತೆ ಮಂಗಳೂರು ಎಂಬವರು ಆರೋಪಿ ಸಾಖೆತ್ ಶೆಟ್ಟಿ ಮತ್ತು ಇತರರು ದಿನಾಂಕ 08-02-2014 ರಂದು ಬೋಂದೇಲ್ ಸಮೀಪ ಇರುವ 2 ಎಕ್ರೇಸ್ ಲ್ಯಾಂಡ್ ಎಂಬ ಸ್ಥಳದಲ್ಲಿ ಮಿಸ್ಟರ್ & ಮಿಸ್ ಮಂಗಳೂರು ಎಂಬ ಸ್ಪರ್ಧೆಯನ್ನು ನಡೆಸುವರೇ ಪಿರ್ಯಾದಿದಾರರ ಸ್ಪಾನ್ಸರ್‌ಶಿಪ್ ಪಡೆದಿದ್ದು, ಈ ಬಗ್ಗೆ ಪಿರ್ಯಾದಿದಾರರು ತನ್ನ ಸಂಸ್ಥೆಯ ಮೂಲಕ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಸ್ಟೇಜ್, ಸೌಂಡ್, ಮ್ಯೂಸಿಕ್ ವಗೈರೆ ಸವಲತ್ತುಗಳನ್ನು ಮಾಡಿಕೊಟ್ಟಿದ್ದು ಈ ಬಗ್ಗೆ ಆರೋಪಿಗಳು ಪಿರ್ಯಾದಿದಾರರಿಗೆ ಕೊಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಅದನ್ನು ಕೊಡುವಂತೆ ಕೇಳಿದಾಗ ಆರೋಪಿಗಳು ಪಿರ್ಯಾದಿದಾರರಿಗೆ ಮತ್ತು ಅವರ ಗಂಡ ಅಶೋಕ್ ಕಪೂರ್‌ರವರಿಗೆ ಜೀವ ಬೆದರಿಕೆ ಹಾಕಿ ಹಣವನ್ನು ಕೊಡುವುದಿಲ್ಲವೆಂದು, ನೀನು ಏನು ಬೇಕಾದರೂ ಮಾಡಿಕೋ ಎಂದು ಬೆದರಿಸಿರುವುದಾಗಿ ಸಾರಾಂಶವಿರುತ್ತದೆ. ಈ ಬಗ್ಗೆ ಮಾನ್ಯ ಜೆಎಂಎಫ್ಸಿ 3 ನೇ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣವನ್ನು ದಾಖಲಿಸಿರುವುದಾಗಿದೆ.
No comments:
Post a Comment