Tuesday, June 3, 2014

Daily Crime Reports 03-06-2014

ದೈನಂದಿನ ಅಪರಾದ ವರದಿ.

ದಿನಾಂಕ 03.06.201418:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮತಿ ಆರ್. ಸಗುಂತಲಾ, ಸಬ್ ಪೊಸ್ಟ್ ಮಾಸ್ಟರ್, ಸಬ್ ಪೊಸ್ಟ್ ಆಫೀಸ್, ಕೊಡಿಯಾಲ್ ಬೈಲ್, ಮಂಗಳೂರು ರವರು ದಿನಾಂಕ 31-05-2014 ರಂದು 18-00 ಗಂಟೆಗೆ ಮಂಗಳೂರು ಕೊಡಿಯಲ್ಬೈಲ್ನಲ್ಲಿರುವ ಸಬ್‌‌ಪೋಸ್ಟ್‌‌ ಆಫೀಸಿನ ಬಾಗಿಲಿಗೆ ಬೀಗವನ್ನು ಹಾಕಿ ಹೋಗಿದ್ದು, ದಿನಾಂಕ 02-06-2014 ರಂದು ಬೆಳಿಗ್ಗೆ 08-00 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಅಂಚೆ ಕಛೇರಿಯ ಹಂಚನ್ನು ತೆಗೆದು ಒಳಪ್ರವೇಶಿಸಿ ಅಂಚೆ ಕಛೇರಿಯಲ್ಲಿದ್ದ ದಾಖಲೆ ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಳವಿಗೆ ಪ್ರಯತ್ನಿಸಿರುವುದಾಗಿದೆ.

 

2.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ನಡುಗೋಡು ಗ್ರಾಮದ ಮೂಡು ದೇವಸ್ಯ ಎಂಬಲ್ಲಿರುವ ಫಿರ್ಯಾದಿದಾರರಾದ ಕು. ವಿಜೇತ ಶೆಟ್ಟಿಯವರು  ತನ್ನ ಮನೆಯ ಸಮೀಪ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕಕ್ಕೆಂದು ಹಾಕಲಾಗಿರುವ ವಿದ್ಯುತ್ ತಂತಿಗಳನ್ನು ಜೋಡಿಸಿರುವ ಸಲಕರಣೆಗಳು ಹಳೆಯದಾಗಿದ್ದು, ಅದನ್ನು ಬದಲಾಯಿಸುವಂತೆ ಮೆಸ್ಕಾಂ ಇಲಾಖೆಯವರಿಗೆ ಈ ಹಿಂದೆ ತಿಳಿಸಿದ್ದರೂಮೆಸ್ಕಾಂ ಇಲಾಖೆಯವರು ಸಕಾಲಕ್ಕೆ ಬದಲಾಯಿಸದೇ  ನಿರ್ಲಕ್ಷ್ಯತನ ವಹಿಸಿರುವುದರಿಂದ  ದಿನಾಂಕ 03-06-2014 ರಂದು ಬೆಳಿಗ್ಗೆ 05-45 ಗಂಟೆಗೆ  ಹಾಲು ಕರೆಯಲೆಂದು ಹಟ್ಟಿಗೆ ಹೋಗುತ್ತಿದ್ದ  ಪಿರ್ಯಾದಿದಾರರ ತಾಯಿ ಶ್ರೀಮತಿ ಶೋಬಾ ಶೆಟ್ಟಿ (57 ವರ್ಷ) ಯವರ ಮೈಮೇಲೆ ವಿದ್ಯುತ್ ತಂತಿ ಕಡಿದು ಬಿದ್ದು, ಮೈ ಮೇಲೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. 

 

3.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಶೀದ್ ರವರು ಈ ಹಿಂದೆ ಮಂಗಳೂರು ತಾಲೂಕು, ಬಜಪೆ ಗ್ರಾಮದ , ಶಾಂತಿಗುಡ್ಡೆ ಎಂಬಲ್ಲಿ ಉಮ್ಮರಬ್ಬ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಮಯ ಆ ರೂಮಿನ ಬಾಬ್ತು ಕರೆಂಟ್ ಬಿಲ್ ನ್ನು ಪಾವತಿ ಮಾಡಲು ಅಸಾಧ್ಯವಾಗಿದ್ದು, ಅದನ್ನು ತಾನು ಇನ್ನೆರಡು ದಿವಸಗಳಲ್ಲಿ ಪಾವತಿ ಮಾಡುವುದಾಗಿ ತಿಳಿಸಿದ್ದರೂ, ಉಮ್ಮರಬ್ಬ ಮತ್ತು ಅವರ ಮಗ ಹನೀಫ್ ದಿನಾಂಕ: 06-02-2014 ರಂದು ಮಧ್ಯಾಹ್ನ 12-30 ಗಂಟೆಗೆ ಶಾಂತಿ ಗುಡ್ಡೆ ಅಂಗಡಿಯ ಬಳಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಮರದ ರೀಪಿನಿಂದ ಮತ್ತು ಮರದ ದೊಣ್ಣೆಯಿಂದ ಹನೀಫ್ ಮತ್ತು ಉಮ್ಮರಬ್ಬರ ವರು ನನಗೆ ಹೊಡೆದು ತಲೆಗೆ ಗಾಯಗೊಳಿಸಿದ್ದಲ್ಲದೇ ನೀನು ಇನ್ನು ಮುಂದೆ ಇಲ್ಲಿದ್ದರೆ ನಿನ್ನ ಕೈಕಾಲು ಮುರಿದು ಹಾಕುತ್ತೇವೆ ಎಂದು  ಜೀವ ಒಡ್ಡಿರುತ್ತಾರೆ.

 

4.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-06-2014 ರಂದು 12-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಬಾಬು ಶೆಟ್ಟಿ ರವರು, ದೇಸೋಡಿ, ಭಂಡಾಬೈಲ್‌, ಪಂಜತ್ತಾಯ ದೇವಸ್ಥಾನದ ಬಳಿ, ಕುತ್ತಾರ್ಮುನ್ನೂರು ಗ್ರಾಮ, ಮಂಗಳೂರು ತಾಲೂಕು ಎಂಬಲ್ಲಿರುವ ತನ್ನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಸಮಯ ನಂಬರ್ಪ್ಲೇಟ್ಅಳವಡಿಸಿದ ಹೊಸ ಓಮ್ನಿ ವಾಹನವನ್ನು ಅದರ ಚಾಲಕ ಅಬ್ದುಲ್ಖಾದರ್ಎಂಬವರು ಎಲ್ಯಾರ್ಪದವು ಕಡೆಯಿಂದ ಕುತ್ತಾರ್ಜಂಕ್ಷನ್ಕಡೆಗೆ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಮೋಟಾರು ಸೈಕಲ್ನಂಬ್ರ KA 19 EF 7342 ನೇ ನಂಬ್ರದ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದನು. ಮೋಟಾರು ಸೈಕಲ್ಸವಾರ ರೋಲನ್ಮತ್ತು ಸಹಸವಾರೆ ಸುನೀತಾ ಎಂಬವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಓಮ್ನಿ ಚಾಲಕ ಅಬ್ದುಲ್ಖಾದರ್ಓಮ್ನಿಯನ್ನು ಬಿಟ್ಟು ಪರಾರಿಯಾಗಿರುತ್ತಾನೆ. ಪಿರ್ಯಾದುದಾರರು ಒಮ್ನಿಯನ್ನು ನೋಡಿದಾಗ ಅದರ ಒಳಗೆ ಒಂದು ಹೋರಿಯನ್ನು ಹಿಂಸಾತ್ಮಕ ರೀತಿಯಲ್ಲಿ ಕೈಕಾಲುಗಳನ್ನು ಕಟ್ಡಿ ತುಂಬಿಸಿರುವುದು ಕಂಡು ಬಂತು. ಸದ್ರಿ ಹೋರಿಯನ್ನು ಅಬ್ದುಲ್ಖಾದರ್‌‌ರವರು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಮಾಂಸ ಮಾಡಲು ಕಸಾಯಿ ಖಾನೆಗೆ ಸಾಗಿಸುತ್ತಿದ್ದುದಾಗಿದೆ.

 

5.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-06-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಆಸೀಫ್ ರವರ ತಂದೆಯವರ ಬಾಬ್ತು ಆಕ್ಟಿವಾ ಹೊಂಡಾ ದಿಚಕ್ರ ವಾಹನ ನಂಬ್ರ ಕೆ.. 19.ಇಇ.9606 ನೇದರಲ್ಲಿ ಸಹಸವಾರರಾಗಿ ಅವರ ತಂದೆಯವರು ಸವಾರರಾಗಿ ಮನೆಯಿಂದ ಕಾಟಿಪಳ್ಳ 7ನೇ ಬ್ಲಾಕಿನ ವೆಲ್ ಕಮ್ ಸ್ಟೋರ್ ಗೆ ತೆರಳಿ ನಂತರ ಅಲ್ಲಿಂದ ವಾಪಾಸು ಮನೆ ಕಡೆಗೆ ಹೋಗುತ್ತಿರುವಾಗ್ಗೆ ರಾತ್ರಿ 10-00 ಗಂಟೆಗೆ 7ನೇ ಬ್ಲಾಕ್, ಕಾಟಿಪಳ್ಳ, ಚೈತನ್ಯ ಶಾಲೆ ಬಳಿ ಎದುರಿನ ಅಡ್ಡ ರಸ್ತೆ ಕಡೆಯಿಂದ ಮುಖ್ಯ ರಸ್ತೆಗೆ ಕೆ.. 19.ಇ ಹೆಚ್.5735ನೇ ಆಕ್ಟಿವಾ ಹೋಂಡಾದ ಸವಾರನು ಅವರ ಬಾಬ್ತು ಸದ್ರಿ ವಾಹನವನ್ನು ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಾಲಾಯಿಸಿಕೊಂಡು ಪಿರ್ಯಾದಿದಾರರ ಬಾಬ್ತು ಆಕ್ಟಿವಾ ಹೋಡಾಕ್ಕೆ ಡಿಕ್ಕಿ ಮಾಡಿದ ಪರಿಣಾಮ ಎರಡೂ ವಾಹನ ರಸ್ತೆಗೆ ಬಿದ್ದು ಪಿರ್ಯಾದಿ ಹಾಗೂ ಅವರ ತಂದೆಯವರಿಗೆ ತೀರ್ವ ತರಹದ ರಕ್ತ  ಗಾಯವಾಗಿದ್ದು ಈ ಅಪಘಾತಕ್ಕೆ ಕೆ.. 19.ಇ ಹೆಚ್.5735ನೇ ಆಕ್ಚಿವಾ ಹೊಂಡಾದ ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೇಯೇ ಕಾರಣವಾಗಿರುತ್ತದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-06-2014 ರಂದು ಪಿರ್ಯಾದಿದಾರರಾದ ಶ್ರೀ ಆದಂ ಕುಂಞ ರವರು ತನ್ನ ಹೆಂಡತಿ ರುಕಿಯಾ ಮಕ್ಕಳಾದ ಸಮೀರಾ, ಶೀಫಾ, ರವರೊಂದಿಗೆ ಕೆಎ 21 ಎಂ 5608 ನೇ ಆಲ್ಟೋ ಕಾರಿನಲ್ಲಿ ಮುರುಳ್ಯ ಸುಳ್ಯದ ಮನೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದು ಕಾರನ್ನು ಚಲಾಯಿಸುತ್ತಿದ್ದ ಮೊಹಮ್ಮದ್ಸಿನಾನ್ಎಂಬವರು ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಗೆ ಮಂಗಳೂರು ತಾಲೂಕಿನ ವಳಚ್ಚಿಲ್ಎಂಬಲ್ಲಿಗೆ ತಲುಪುತ್ತಿದ್ದಂತೆ, ಒಮ್ಮೆಲೇ ಬ್ರೇಕ್ಹಾಕಿದ್ದರಿಂದ ಕಾರು ರಸ್ತೆಯಲ್ಲಿ ಮೂರು-ನಾಲ್ಕು ಪಲ್ಟಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈಯ ಕೋಲು ಕೈ ಎಲುಬು ಮುರಿತವಾಗಿದ್ದು, ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಪಿರ್ಯಾದಿ ಹೆಂಡತಿ ರುಕಿಯಾ ರವರ ಹಣೆಯ ಭಾಗಕ್ಕೆ ಮತ್ತು ಕೆನ್ನೆಯ ಬಳಿ  ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರಳ ಮಗಳು ಸಮೀರಾಳ ಎರಡೂ ಕಾಲಿನ ಮೊಣಗಂಟಿನ ಬಳಿ ಮತ್ತು ಸೊಂಟದ ಎಡಭಾಗದಲ್ಲಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಇನ್ನೊಬ್ಬಳು ಮಗಳು 4 ವರ್ಷ ಪ್ರಾಯದ ಶೀಫಾ ಎಂಬವಳ ಎಡಕೋಲು ಕೈಗೆ ಸಿಪ್ಪೆ ಸುಳಿದ ತರಹದ ರಕ್ತಗಾಯವಾಗಿರುತ್ತದೆ. ಕಾರಿನ ಚಾಲಕನಾದ ಮಹಮ್ಮದ್ಸಿನಾನ್ಎಂಬವರ ತಲೆಗೆ ರಕ್ತಗಾಯವಾಗಿರುತ್ತದೆ.

No comments:

Post a Comment