Saturday, May 31, 2014

Daily Crime Reports 31-05-2014

ದೈನಂದಿನ ಅಪರಾದ ವರದಿ.

ದಿನಾಂಕ 31.05.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಡಾ. ರಾಮಚಂದ್ರ ನಾಯಕ್ ರವರು ಎಕ್ಕೂರಿನಲ್ಲಿರುವ ಫಿಸರಿಸ್ ಕಾಲೇಜಿನಲ್ಲಿ ಎಸೋಸಿಯೇಟ್ಪ್ರೊಫೆಸರ್ಆಗಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 29-05-2014 ರಂದು ಬೆಳಿಗ್ಗೆ 9-00 ಗಂಟೆಗೆ ಕಾಲೇಜಿಗೆ ಹೋದವರು ಸಂಜೆ ಸುಮಾರು 6-00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಎದುರು ಬಾಗಿಲಿನ ಒಳಗೆ ಚೀಲಕ ಹಾಕಿದ್ದು ಹಿಂಬಂದಿಗೆ ಹೋಗಿ ನೋಡಿದಾಗ ಹಿಂದಿನ ಬಾಗಿಲು ತೆರೆದಿದ್ದು, ಒಳಗೆ ಹೋಗಿ ಪರಿಶೀಲಿಸಿದಾಗ ಯಾರೋ ಕಳ್ಳರು ಅಡುಗೆ ಮನೆಯ ಮೇಲಿನ ಕಿಟಕಿ ಬಾಗಿಲು ಮುರಿದು ಒಳ ಪ್ರವೇಶಿಸಿ ಬೆಡ್ರೂಂ ಕಪಾಟಿನ ಒಳಗಡೆ ಇದ್ದ ಚಿನ್ನಭರಣಗಳು, ಬೆಳ್ಳಿಯ ಸೊತ್ತುಗಳು, ಹಳೆಯ ಟೈಟಾನ್ ವಾಚ್, ಚೀಲ್ಲರೆ ಹಣವನ್ನು ಹಾಗೂ ಡಾಲರ್ ಕರೆನ್ಸಿ ಇತ್ಯಾದಿಗಳನ್ನು ಮನೆಯಲ್ಲಿ ಯಾರು ಇಲ್ಲದ ಸಮಯ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಇದರ ಒಟ್ಟು ಮೌಲ್ಯ 1,38,500 ಆಗಿರುತ್ತದೆ.

 

2.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-05-2014ರಂದು ಬೆಳಿಗ್ಗೆ 04-30 ಗಂಟೆ ಸಮಯಕ್ಕೆ ಕೆ.. 20 ಸಿ. 2861ನೇ ಟ್ರಾಕ್ಸ್ ತೂಫಾನ್ ವಾಹನದಲ್ಲಿ ಚಾಲಕ ಗುರುರಾಜ್ ಮೀನುಗಾರಿಕೆ ಕೂಲಿಕೆಲಸ ಮಾಡುವ ಚೆನ್ನಪ್ಪ ಮತ್ತು ಪಿರ್ಯಾದಿದಾರರಾದ ಶ್ರೀಮತಿ ಸುಮಾ ರವರು ಹಾಗೂ ಇತರರಾದ 1) ರೇಣುಕಾ 2) ಲಕ್ಷ್ಮೀ 3) ಪಾರ್ವತಿ 4) ಮಂಜುಳಾ 5)ಹೂವಕ್ಕ 6)ಇನ್ನೊಂದು ರೇಣುಕಾ ಮತ್ತಿತರರನ್ನು ಕುಳ್ಳಿರಿಸಿಕೊಂಡು ಚಿತ್ರಾಪುರದಿಂದ ಹೊರಟು ಕೂರಿಕಟ್ಟೆಯಿಂದಾಗಿ ನಂದನೇಶ್ವರ ಡಿಕ್ಸಿ ರಸ್ತೆಯಿಂದ ಪಣಂಬೂರು ಸರ್ಕಲ್ ರಾ.ಹೆ. 66ರಲ್ಲಿ ತಲುಪುತ್ತಿದ್ದಂತೆ ಸರ್ಕಲ್ ನಲ್ಲಿ ಟ್ರಾಕ್ಸ್ ತೂಫಾನ್ ನನ್ನು ಅದರ ಚಾಲಕ ಗುರುರಾಜ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೆಲೆ ಮಂಗಳೂರು ಕಡೆಗೆ ತಿರುಗಿಸಿದಾಗ ಟ್ರಾಕ್ಸ್ ಮುಂಬದಿ ಎಡಭಾಗದಲ್ಲಿ ಕುಳಿತ್ತಿದ್ದ ಚೆನ್ನಪ್ಪ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಟ್ರಾಕ್ಸ್ ಹಿಂಬದಿ ಟಯರ್ ಆತನ ಮೇಲೆ ಚಲಿಸಿದ ಪರಿಣಾಮ ತಲೆಗೆ ಉಂಟಾದ ಗಂಭೀರ ಗಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚೆನ್ನಪ್ಪನನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದ್ದಲ್ಲಿ ಚೆನ್ನಪ್ಪನು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಅಪಘಾತಕ್ಕೆ ಟ್ರಾಕ್ಸ್ ಚಾಲಕ ಗುರುರಾಜ್ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28/29-05-2014ರಂದು ರಾತ್ರಿ 09.55 ಗಂಟೆ  ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶ್ಯಾಮಲಾ ರಾವ್ ಮತ್ತು ಆಕೆಯ ಗಂಡ ರತ್ನಾಕರ್ ರಾವ್ ಎಂಬವರು  ಬೆಂಗಳೂರಿನಿಂದ K.S.R.TC ವೋಲ್ವೋ ಕ್ಲಬ್ ಕ್ರಾಸ್ ಐರಾವತ್  ಬಸ್ಸ್  ನಂಬ್ರ KA.57 F 810 ನೇದರಲ್ಲಿ  ಸೀಟು ನಂಬ್ರ 31-32 ಸೀಟಿನಲ್ಲಿ  ಕುಳಿತು ತನ್ನ  ಮನೆಯಾದ ಮುಲ್ಕಿಗೆ 09.00 ಗಂಟೆಗೆ ಬರುವಾಗ  ಜೊತೆಯಲ್ಲಿರುವ  ಸೂಟ್ ಕೇಸಿನಲ್ಲಿ  ತನ್ನ  ಬಾಬ್ತು  4 ಪವನಿನ ಸರ -1, 3 ಪವನಿನ ಶಕುಂತಲಾ ಸರ -1, 1/2ಪವನ್  ತೂಕದ ಹಸಿರು ಕಲ್ಲಿನ  ಉಂಗುರ -1, 1 ಜೊತೆ  ಬಿಳಿ ಹರಳಿನ ಬೆಂಡೋಲೆ, 1 ಗ್ರಾಂ  ತೂಕದ ಲಕ್ಷಮೀ ಚಿತ್ರವಿರುವ ನಾಣ್ಯ ಹಾಗೂ ನೊಕಿಯಾ  ಕಂಪೆನಿಯಾ 5320 ನಂಬ್ರದ  ಮೊಬೈಲ್ ನ್ನು  ಯಾರೋ ಕಳ್ಳರು ಕಳವು ಮಾಡಿ ಕೊಂಡುಹೋಗಿದ್ದು, ಇದರ ಒಟ್ಟು ಮೌಲ್ಯ ರೂ 1,50,00 ಆಗಿರುತ್ತದೆ.

 

4.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-05-2014 ರಂದು ಪಿರ್ಯಾದಿದಾರರಾದ ಶ್ರೀ ಸರ್ವೋತ್ತಮ್ ಮಾಬೆನ್ ಎಂಬವರು ಪಡುಪಣಂಬೂರುನಲ್ಲಿ ಖರೀದಿ ಮಾಡಿರುವ ಸರ್ವೆ ನಂಬ್ರ 26/07ರಲ್ಲಿ  01.50 ಎಕ್ರೆ ಸ್ಥಳವನ್ನು  ಕ್ಲೀನ್ ಮಾಡುತ್ತಿರುವಾಗ ವೇಳೆ ಸಮಯ ಸುಮಾರು  02.30 ಗಂಟೆಗೆ  ಅಲ್ಲಿಗೆ  ಬಂದ ಸೂರ್ಯ ನಾರಾಯಣ ಅವರ ಮಗ ಸೋಮನಾಥ್  ಯತೀಶ್ ಎಂಬವರು  ಬಂದು ಅವಾಚ್ಯ ಶಬ್ದಗಳಿಂದ ಬೈದು  ನಮ್ಮ ಸ್ಥಳಕ್ಕೆ ಬಂದು ಕಸ ತೆಗೆಯುವುದು ಯಾಕೆ ನನ್ನ ತಂದೆಗೆ ಯಾಕೆ ಬೈಯುತ್ತೀಯಾ ಎಂದು ಹೇಳಿ ಸೂರ್ಯನಾರಾಯಣರವರ ಮಗ ಸೋಮನಾಥ್ ನು ಕೈಯಿಂದ  ಪಿರ್ಯಾದಿದಾರರ ಬೆನ್ನಿಗೆ ಹೊಡೆದು,ನೆಲಕ್ಕೆ ಉರುಳಿಸಿ  ನೆಲದಲ್ಲಿ  ಎಳೆದುಕೊಂಡು ಬಾವಿಯ  ಹತ್ತಿರ  ಕೊಂಡು ಹೋಗಿ ಎತ್ತಿದ್ದು,  ವೇಳೆ ಬೊಬ್ಬೆ  ಕೇಳಿ  ನೆರೆಕರೆಯವರು  ಓಡಿ ಬಂದಾಗ ಆತನು ಕೆಳಗಿಳಿಸಿ ಅಲ್ಲೇ ಇದ್ದ ಒಂದು  ಕಲ್ಲಿನಿಂದ ಪಿರ್ಯಾದಿದಾರರ  ಕಾಲಿಗೆ ಗುದ್ದಿದ ಗಾಯ ವಾಗಿರುತ್ತದೆ ಹಾಗೂ ಎಳೆದಾಡಿದ  ಪರಿಣಾಮ  ಬೆನ್ನಿನಲ್ಲಿ  ತರಚಿದ  ಗಾಯವಾಗಿರುತ್ತದೆ. ಗಲಾಟೆಗೆ ಸೂರ್ಯ ನಾರಾಯಣ ಹಾಗೂ ಯತೀಶ್ ರವರ ಕುಮ್ಮಕ್ಕಿನಿಂದ ಮಾಡಿದ್ದಾಗಿದೆ. ಬಗ್ಗೆ ಚಿಕಿತ್ಸೆಗೆ ಮುಕ್ಕಾ ಶ್ರೀನಿವಾಸ್  ಆಸ್ಪತ್ರೆಗೆ  ಹೋದಲ್ಲಿ  ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

5.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-05-2014 ರಂದು 20-45 ಗಂಟೆಯಿಂದ ದಿನಾಂಕ 30-05-2014 ರಂದು ಬೆಳಿಗ್ಗೆ 6-15 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದ ಕೆಎಂಸಿ ಹಿಂಭಾಗ ಮಣಿಪಾಲ ಶಾಲೆಯ ಬಳಿ 6 ನೇ ಅಡ್ಡ ರಸ್ತೆಯಲ್ಲಿರುವ ಫಿರ್ಯಾದುದಾರರಾದ ಶ್ರೀ ರವಿಚಂದ್ರ ಬಿ. ರವರ ಬಾಬ್ತು 24-5-580-8 ಡೋರ್ ನಂಬ್ರದ ವಾಸ್ತವ್ಯದ ಮನೆಯ ಎದುರು ಬಾಗಿಲನ್ನು ಬಲತ್ಕಾರವಾಗಿ ಮೀಟಿ ತೆರೆದು ಒಳಗಡೆ ಪ್ರವೇಶಿಸಿ ಮಾಸ್ಟರ್ ಬೆಡ್ ರೂಮಿನ ಗೋಡ್ರೇಜ್ ಕಪಾಟಿನಲ್ಲಿದ್ದ ವಿವಿದ ನಮೂನೆಯ 196 ಗ್ರಾಂ ಚಿನ್ನಾಭರಣ ಹಾಗೂ ನಗದು ಹಣ ಅಂದಾಜು ರೂ 5000/- ಸೇರಿ ಒಟ್ಟು ಅಂದಾಜು ರೂ 3,89,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಶೋಕ್ ರವರು ತಮ್ಮ ಜೊತೆ ಕೆಲಸ ಮಾಡುವ ದಿನೇಶ್ಎಂಬವರನ್ನು ತನ್ನ ಬಾಬ್ತು ಬೈಕ್ನಂಬ್ರ ಕೆಎ 19 ಇಜಿ 8754 ನೇದರಲ್ಲಿ ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ತಾನು ಕೆಲಸ ಮಾಡುವ ಅಳಪೆ ಎಂಬಲ್ಲಿಂದ ದಿನಾಂಕ 30-05-2014 ರಂದು ರಾತ್ರಿ ಸುಮಾರು 8-30 ಗಂಟೆಗೆ ಹೊರಟು ರಾ.ಹೆ 66 ರಲ್ಲಿ ಜಪ್ಪಿನಮೊಗರು ಗ್ರಾಮದ ನಡುಮುಗೇರ್‌, ಎಂಬಲ್ಲಿ ಪೆಗಸಿಸ್ಹೋಟೇಲ್ಮುಂದುಗಡೆಗೆ ರಾತ್ರಿ ಸುಮಾರು 9-00 ಗಂಟೆಗೆ ತಲುಪಿದಾಗ ಎದುರುಗಡೆಯಿಂದ ಅಂದರೆ, ತೊಕ್ಕೊಟ್ಟು ಕಡೆಯಿಂದ ಬೈಕೊಂದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರ ದಿನೇಶ್ರವರು ಬೈಕ್ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಪಿರ್ಯಾದಿದಾರರಿಗೆ ಸಣ್ಣಪುಟ್ಟ ತರಚಿದ ಗಾಯ ಹಾಗೂ ದಿನೇಶ್ರವರಿಗೆ ತಲೆಗೆ ಮತ್ತು ಬಲಕಾಲಿಗೆ ಗಂಭೀರ ಗಾಯವಾಗಿದ್ದವರನ್ನು ಮಂಗಳೂರು ವೆನ್ಲಾಕ್ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು, ದಿನೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಅಪಘಾತ ನಡೆಸಿದ ಬೈಕ್ಅಪಘಾತ ಸ್ಥಳದ ಪಕ್ಕದಲ್ಲಿಯೇ ನಿಂತುಕೊಂಡಿದ್ದು ಅದರ ನಂಬ್ರ ಕೆಎ 19 ಆರ್‌ 7300 ಆಗಿದ್ದು ಅದರ ಸವಾರರ ಹೆಸರು ಗಡಿಬಿಡಿಯಲ್ಲಿ ಕೇಳಲು ಮರೆತಿರುವುದಾಗಿಯೂ, ಸದ್ರಿ ಮೋಟಾರ್ಸೈಕಲ್ಸವಾರನು ತನ್ನ ಬಾಬ್ತು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ದಿನೇಶನು  ಮೃತಪಡಲು ಕಾರಣವಾಗಿರುತ್ತದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-05-2014 ರಂದು ರಾತ್ರಿ ಸುಮಾರು 9-30 ವೇಳೆಗೆ ಪಿರ್ಯಾದಿದಾರರಾದ ಶ್ರೀ ಶಿವಕುಮಾರ್ ರವರು ತನ್ನ ಬಾಬ್ತು ಅಟೋ ರಿಕ್ಷಾವನ್ನು ಬಜಾಲ್ಕ್ರಾಸ್ಬಳಿ ಮಂಗಳಾ ಮೆಡಿಕಲ್ಎದುರುಗಡೆ ಮಣ್ಣು ರಸ್ತೆಯಲ್ಲಿ ನಿಲ್ಲಿಸಿ, ಪಕ್ಕದಲ್ಲಿಯೇ ಇದ್ದ ಜೀನಸು ಅಂಗಡಿಗೆ ಹೋಗಿದ್ದ ವೇಳೆ ಮಂಗಳೂರು ಕಡೆಯಿಂದ ಸ್ವಿಪ್ಟ್ಡಿಸೈರ್ಕಾರೊಂದನ್ನು ಅದರ ಚಾಲಕ ಕುಡಿದ ಅಮಲಿನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಬಾಬ್ತು ಅಟೋ ರಿಕ್ಷಾ ನಂಬ್ರ ಕೆಎ 19 3891 ನೇದಕ್ಕೆ ಹಿಂದಿನಿಂದ ಎಡಬದಿಗೆ ಡಿಕ್ಕಿಹೊಡೆದು, ಬಳಿಕ ಪಕ್ಕದಲ್ಲಿಯೇ ನಿಲ್ಲಿಸಿದ್ದ ಕೆಎ 19 ಇಡಿ 5101 ಬಜಾಜ್ಡಿಸ್ಕವರಿ ಬೈಕಿಗೆ ಡಿಕ್ಕಿಹೊಡೆದು ಜಖಂಗೊಳಿಸಿ, ಬಳಿಕ ಪಡೀಲ್ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಪಾದಾಚಾರಿಗೆ ಡಿಕ್ಕಿಹೊಡೆದ ಪರಿಣಾಮ ಆತನು ರಸ್ತೆಗೆ ಬಿದ್ದು ಗುದ್ದಿದ ಗಾಯವಾಗಿರುತ್ತದೆ. ಆತನನ್ನು ಮಂಗಳೂರಿನ ಆಸ್ಪತ್ರೆಗೆ ಯಾರೋ ಒಬ್ಬರು ಕರೆದುಕೊಂಡು ಹೋಗಿರುತ್ತಾರೆ. ಕಾರು ಡಿಕ್ಕಿಹೊಡೆದ ಪರಿಣಾಮ  ಅಟೋರಿಕ್ಷಾ ಮತ್ತು ಬೈಕ್ಗಳಿಗೆ ಜಖಂಗೊಂಡಿರುತ್ತದೆ.

No comments:

Post a Comment