ದೈನಂದಿನ ಅಪರಾದ ವರದಿ.
ದಿನಾಂಕ 09.05.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 2 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 8.5.2014 ರಂದು ಫಿರ್ಯಾದಿದಾರರಾದ ಶ್ರೀ ಸುರೇಶ್ ರವರು ತನ್ನ ಬಾಬ್ತು ಟವೇರಾ ಕಾರು ನಂಬರ್ ಕೆಎ 19 ಡಿ 4316ನೇದರಲ್ಲಿ ಬಾಡಿಗೆದಾರರನ್ನು ಕರೆದುಕೊಂಡು ಮಂಗಳೂರು ಕಡೆಯಿಂದ ಕಾಪು ಕಡೆಗೆ ಹೋಗುವರೇ ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕಾರ್ನಾಡು ಬೈಪಾಸ್ ಬಳಿಯಿಂದ ರಾ ಹೆದ್ದಾರಿ66 ರಲ್ಲಿ ಸ್ವಲ್ಪ ಮುಂದೆ ತಲುಪಿದಾಗ ಹಿಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ 20 ಸಿ 3326ನೇ ಬಸ್ಸಿನ ಚಾಲಕ ಆರೋಪಿ ಗಣಪತಿ ಎಂಬಾತನು ತನ್ನ ಬಾಬ್ತು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬಾಬ್ತು ಟವೇರಾ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಜಖಂ ಆಗಿರುತ್ತದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 8.5.2014 ರಂದು ಫಿರ್ಯಾದಿದಾರರಾದ ಶ್ರೀ ಯೋಗೀಶ್ ಶೆಟ್ಟಿಯವರು ಮದುವೆ ಕಾರ್ಯಕ್ರಮದ ನಿಮಿತ್ತ ತನ್ನ ಕುಟುಂಬದವರೊಂದಿಗೆ ಸುರತ್ಕಲ್ ತಡಂಬೈಲ್ ಬಂಟರ ಭವನಕ್ಕೆ ಕೆಎ 19 ಡಿ 1497ನೇ ಮಿನಿ ಬಸ್ಸಿನಲ್ಲಿ ತೆರಳುವಾಗ್ಗೆ ಸಮಯ ಬೆಳಿಗ್ಗೆ ಸುಮಾರು 11.30 ಗಂಟೆಗೆ ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಹಳೆಯಂಗಡಿ ರಾಹೆ 66 ರಲ್ಲಿ ಕೆನರಾ ಬ್ಯಾಂಕ್ ಎದುರುಗಡೆ ತಲುಪುವಾಗ್ಗೆ ಕೆಎ 19 ಡಿ 1497ನೇ ಮಿನಿ ಬಸ್ಸಿನ ಚಾಲಕ ಆರೋಪಿ ತಿಲಕ್ ಎಂಬಾತನು ಎದುರುಗಡೆಯಿಂದ ತೆರಳುತ್ತಿದ್ದು ಆಲ್ಟೋ ಕಾರನ್ನು ಓವರ್ ಟೇಕ್ ಮಾಡಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ಬಾಬ್ತು ಮಿನಿ ಬಸ್ಸನ್ನು ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ರಾಹೆ 66 ರಲ್ಲಿ ಡಿವೈಡರ್ ಮಧ್ಯೆ ಎಡಮಗ್ಗುಲಿಗೆ ಮಗುಚಿ ಬಿದ್ದ ಪರಿಣಾಮ ಮಿನಿಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಕಮತಿ ಶೆಟ್ಟಿ ಪ್ರಾಯ 48 ವರ್ಷ ಪುಷ್ಪಾ ಪ್ರಾಯ 58 ವರ್ಷ ಹಾಗೂ ಮತ್ತಿತ್ತರಿಗೆ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಗಾಯಾಳು ಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಸಂತೋಷ್ ರವರು ಕಳೆದ ಸುಮಾರು 5-6 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕಟ್ಟಡಗಳ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಈಗ ಸುಮಾರು 2 ತಿಂಗಳಿನಿಂದ ಮಂಗಳೂರಿನ ಸುರೇಶ್ ಅತ್ವಾರ್ ಎಂಬವರ ಮಹಾಲಕ್ಷ್ಮೀ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಮಂಗಳೂರು ತಾಲೂಕು ಬಡಗಮಿಜಾರು ಗ್ರಾಮದಲ್ಲಿರುವ ಮೈಟ್ ಕಾಲೇಜ್ ಕ್ಯಾಂಪಸ್‌ನ ಒಳಗೆ ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡದಲ್ಲಿ ಕೆಲಸ ನಡೆಯುತ್ತಿದ್ದ ಸಮಯ ಪಿರ್ಯಾದಿದಾರರೊಂದಿಗೆ ಹೆಲ್ಪರ್ ಕೆಲಸ ಮಾಡುವ ಸಮೀಮ್ ಎಂಬವನು ಉತ್ತರ ಪ್ರದೇಶದವನಾಗಿದ್ದು ಆತನು ಕಟ್ಟಡದ 3 ನೇ ಅಂತಸ್ತಿನಲ್ಲಿ ನೀರು ಬಿಟ್ಟು ಕ್ಯೂರಿಂಗ್ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 3-45 ಗಂಟೆಗೆ ಮಹಡಿಯ ಬದಿಯಲ್ಲಿ ಯಾವುದೇ ತಡೆಗೋಡೆ ಇಲ್ಲದ ಕಾರಣ ಆಯ ತಪ್ಪಿ ನೆಲ ಅಂತಸ್ತಿಗೆ ಬಿದ್ದು ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದು ಕೆಲಸಗಾರರಿಗೆ ಸೂಕ್ತ ಸುರಕ್ಷತಾ ಕ್ರಮ ಹಾಗೂ ರಕ್ಷಣಾ ಸಲಕರಣೆಗಳನ್ನು ಒದಗಿಸದೇ ಕಂಪೆನಿಯ ಮಾಲಿಕರಾದ ಸುರೇಶ್ ಅತ್ವಾರ್ ಮತ್ತು ಮೇಲ್ವಿಚಾರಕ ಕೃಷ್ಣ ಖಾರ್ವಿಯವರ ನಿರ್ಲಕ್ಷತನವೇ ಈ ತಕ್ಷೀರಿಗೆ ಕಾರಣವಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಡಿ. ಅರುಣ್ ಬೆಂಗಳೂರಿನಲ್ಲಿ ಖಾಯಂ ವಿಳಾಸದಾರರಾಗಿದ್ದು ಹಾಗೂ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯಲ್ಲಿ ಇರುತ್ತಾರೆ ಅವರ ಪತ್ನಿ ಮೂಡಬಿದ್ರೆ ಒಂದು ಮನೆಯನ್ನು ಬಾಡಿಗೆಗೆ ದಿನಾಂಕ : 23-04-2014 ರಿಂದ ವಾಸ ಇರುತ್ತಾರೆ. ವಾಸ ಇರುವ ಸಮಯದಲ್ಲಿ ದಿನಾಂಕ : 01-05-2014 ರಂದು ರಾತ್ರಿ ಪಿರ್ಯಾದಿದಾರರ ಹೆಂಡತಿ ಮಲಗಿರುವ ಸಮಯದಲ್ಲಿ ಯಾರೋ ಕಳ್ಳರು ಅಡುಗೆಯ ಕೋಣೆಯ ಮುಖಾಂತರ ಒಳಗೆ ಬಂದು ಮನೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಬಂಗಾರದ ಸರ - 1 , ಸುಮಾರು 10 ಗ್ರಾಂ ವುಳ್ಳ ಕಿವಿಯೋಲೆಗಳು ಮತ್ತು ಹೆಚ್ಪಿ ಲಾಪ್ಟಾಪ್ -1 ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಸ್ವತ್ತಿನ ಅಂದಾಜು ಮೌಲ್ಯ 94,000 ಆಗಬಹುದು.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೇವ್ಜಿಬೈ ಹೆಚ್. ಪಾಟೇಲ್ ರವರು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ಪಣಂಬೂರು ಡಿಕ್ಸಿ ಶಿಫಿಂಗ್ ಕಂಪೆನಿಯ ಯಾರ್ಡ ಸಮೀಪ ಟಿಂಬರ್ ಯಾರ್ಡನ್ನು ಹೊಂದಿದ್ದು ದಿನಾಂಕ 19/03/2014 ರಂದು ಕೇರಳದ ISSA SAW MILL KERALA ಇವರಿಗೆ ಪಿರ್ಯಾದಿದಾರರ ಯಾರ್ಡಿನಲ್ಲಿ ಇರುವ 1258/50 CUBIC FEET ನ 27 ROUND LOG BRAMA TEAK WOOD ನ್ನು CUBIC FEET ಗೆ 3400 ರೂಪಾಯಿಯಂತೆ ಕೇರಳದ ಟಿಂಬರ್ ಬ್ರೊಕರ್ ಆದ ಜುಬೇರ್ ಎಂಬವರು ಖರಿದೀಸಿದ್ದು ಅವುಗಳನ್ನು 7 ದಿನಗಳ ಒಳಗೆ ಪಿರ್ಯಾದಿದಾರರ ಯಾರ್ಡಿನಿಂದ ಸಾಗಿಸ ಬೇಕಾಗಿಯೂ ತಪ್ಪಿದಲ್ಲಿ CUBIC FEET ಗೆ 500 ರೂಪಾಯಿಗಳಂತೆ ಹೆಚ್ಚಿಗೆ ದರವನ್ನು ನೀಡ ಬೇಕಾಗಿ ಪಿರ್ಯಾದಿದಾರರು ತಿಳಿಸಿದ್ದು. ಅಲ್ಲದೇ ಮರವನ್ನು ಕೇರಳ ರಾಜ್ಯ ಸರಕಾರಕ್ಕೆ ಸಲ್ಲಿಸ ಬೇಕಾಗಿದ್ದ ಸಿ,ಎಸ್,ಟಿ ಮತ್ತು ಕರ್ನಾಟಕ ರಾಜ್ಯ ಸರಕಾರದ vat ತೆರಿಗೆಯ ಬಾಬ್ತು ಹಣವನ್ನು ಡೆಪೋಸಿಟ್ ಇಡಬೇಕಾಗಿ ಪಿರ್ಯಾದಿದಾರರು ತಿಳಿಸಿದ್ದು ಅದಕ್ಕೆ ಸಂಬಂದ ಪಟ್ಟವರು ಒಪ್ಪಿಗೆಯನ್ನು ನೀಡಿದ್ದರು ಆದರೇ ಜುಬೇರ ರವರು ಮರದ ಲೋಗನ್ನು ಸಾಗಿಸದೆ ಪಿರ್ಯಾದಿದಾರರ ಯಾರ್ಡಿನಲ್ಲೇ ಇರಿಸಿದ್ದು ಪಿರ್ಯಾದಿದಾರರು ಹಲವಾರು ಬಾರಿ ಅವರಿಗೆ ಸೊತ್ತನ್ನು ಕೊಂಡು ಹೋಗುವಂತೆ ತಿಳಿಸಿದರೂ ಟಿಂಬರನ್ನು ಕೊಂಡು ಹೋಗದೆ ಇದ್ದು ದಿನಾಂಕ 02/05/2014 ರಂದು ಜುಬೈರ್ ರವರು ಪಿರ್ಯಾದಿದಾರರಿಗೆ ಫೋನ್ ಮಾಡಿ ಸೊತ್ತನ್ನು ಕೊಂಡು ಹೋಗುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಈ ಮೂದಲು ಮಾಡಿಕೊಂಡ ಬಾಯ್ದಾರೆ ಒಪ್ಪಂದವನ್ನು ಪೊರೈಸಿ ಸೊತ್ತನ್ನು ಕೊಂಡು ಹೋಗುವಂತೆ ತಿಳಿಸಿದಾಗ ಜುಬೇರ್ ರವರು ದಿನಾಂಕ 05/05/2014 ರಂದು ಮಂಗಳೂರಿಗೆ ಬಂದು ಜೊತೆಯಲ್ಲಿ ಕುಳಿತು ಮಾತನಾಡಿ ಸೊತ್ತನ್ನು ಕೊಂಡು ಹೋಗುವುದಾಗಿ ಹೇಳಿದ್ದರು ಪಿರ್ಯಾದಿದಾರರು ಮತ್ತು ಜುಬೇರ್ ರವರು ಮಾಡಿಕೊಂಡ ಬಾಯ್ದಾರೆ ಒಪ್ಪಂದವನ್ನು ಜುಬೇರ್ ಉಲ್ಲಂಘಿಸಿ ದಿನಾಂಕ 02/05/2014 ರಂದು ಮಧ್ಯಾಹ್ನದ ನಂತರ ಪಿರ್ಯಾದಿದಾರರ ಬೈಕಂಪಾಡಿ ಯಾರ್ಡಿಗೆ ಬಂದು ಅಲ್ಲಿ ಇರಿಸಿದ್ದ 27 BARMA TEAK WOOD LOG ನ್ನು ಜುಬೈರ್ ಮತ್ತು ಪಿರ್ಯಾದಿದಾರರ ರೈಟರ್ ಆದ ವಿವೇಕಾನಂದ ಪೂಜಾರಿ ಮತ್ತು ಕೆ.ಎಲ್ 57 ಎಫ್ 1759 ಮತ್ತು ಕೆ,ಎ 19 ಸಿ 1340 ನಂಬ್ರದ ಲಾರಿಯ ಚಾಲಕ ಮತ್ತು ಮಾಲಕರು ಸೇರಿ ಯಾವುದೇ ಬಿಲ್ಲು ವಗೈರೆ ಇಲ್ಲದೆ ಲಾರಿಯಲ್ಲಿ ಹೆರಿಕೊಂಡು ಕೇರಳಕ್ಕೆ ಸಾಗಿಸಿ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ.
6.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-04-14 ರಂದು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ದೀಪಕ್ ಪೆಟ್ರೋಲ್ ಬಂಕಿನ ಬಳಿ ಇರುವ ಮೆ. ಟ್ರಾನ್ಸ್ ಲಿಂಕ್ಸ್ ಲಾರಿ ಆಪೀಸಿನ ಎದುರುಗಡೆಯಿಂದ ಆರೋಪಿತರುಗಳು ಕೆಎ-16ಬಿ-7991ನೇ ನಂಬ್ರದ ಟ್ರಕ್ ನಲ್ಲಿ 14640 ಎಂಟಿ ಬೆಲೆ 234240 ರೂ ಮೌಲ್ಯದ ಮೆಟ್ ಕೋಕ್ ನ್ನು ಕಿರ್ಲೋಸ್ಕರ್ ಪರಸ್ ಇಂಡಸ್ಟ್ರೀಸ್ ಕಂಪೆನಿಗೆ ತಲುಪಿಸದೆ ಮೆಟ್ ಕೋಕ್ ನ್ನು ಯಾರಿಗೋ ಮಾರಾಟ ಮಾಡಿ ಪಿರ್ಯಾದಿದಾರರಿಗೆ ಮತ್ತು ಕಿರ್ಲೋಸ್ಕರ್ ಪರ್ರಸ್ ಇಂಡಸ್ಟ್ರೀಸ್ ಕಂಪೆನಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.05.2014 ರಂದು ಬೆಳಿಗ್ಗೆ 9:00 ಗಂಟೆಗೆ ಪಿರ್ಯಾದಿದಾರರಾದ ಶ್ರಿ ವಾಮನ ಮೂಲ್ಯ ರವರು ಮೇರ್ಲದಲಪದವು ರಾಜೇಶ್ವರ್ ಶಾಲಾ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ನೋಂದಣೆ ಆಗದ ಪಲ್ಸರ್ ಮೋಟಾರು ಸೈಕಲ್‌ನ್ನು ಅದರ ಸವಾರನು ರಾಜೇಶ್ವರ್ ಶಾಲೆಯ ಎದುರುಗಡೆಯಿಂದ ಸದ್ರಿ ಮೋಟಾರು ಸೈಕಲ್ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಎಡ ಕಾಲಿಗೆ, ತೊಡೆಗೆ ಗುದ್ದಿದ ಗಾಯವಾಗಿರುತ್ತದೆ, ಅಲ್ಲದೆ ಬೈಕ್ ಸಾವರನ ಹಿಂಬದಿ ಕುಳಿತ ಮಾರೇಶ್ ಎಂಬವರಿಗೆ ಮೂಗಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಮಂಗಳೂರು ತೇಜಸ್ವೀನಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದು ಪಿರ್ಯಾದಿದಾರರನ್ನು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.
No comments:
Post a Comment