ದೈನಂದಿನ ಅಪರಾದ ವರದಿ.
ದಿನಾಂಕ 02.05.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.04.2014 ರ 18-00 ಗಂಟೆಯಿಂದ 01.05.2014 ರ 10.00 ಗಂಟೆಯ ಮಧ್ಯೆ ಮಂಗಳೂರು ನಗರದ ಬಲ್ಮಠ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ ನ ಕಚೇರಿಯ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತುಂಡರಿಸಿ ಕಛೇರಿ ಒಳಗೆ ಪ್ರವೇಶಿಸಿ ಮನೇಜರ್ ಕ್ಯಾಬಿನ್ ಡ್ರಾವರಿನಲ್ಲಿ ಇಟ್ಟಿದ್ದ ಲಾಕರಿನ ಕೀ ಯನ್ನು ತೆಗೆದು ಅದೇ ಕೀ ಯ ಸಹಾಯದಿಂದ ಲಾಕರನ್ನು ತೆರೆದು ಲಾಕರಿನ ಒಳಗೆ ಇಟ್ಟಿದ್ದ ನಗದು ರೂ.75,005/- ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.3.2014 ರಂದು ಫಿರ್ಯಾದಿದಾರರಾದ ರಮ್ಯಾ ರಾವ್ ರವರು ತನ್ನ ತಾಯಿಯೊಂದಿಗೆ ತಾಯಿಯವರ ಊರಾದ ಮಡಿಕೇರಿಯ ಗೋಣೆಕೊಪ್ಪಕ್ಕೆ ಹೋಗಿದ್ದು ದಿನಾಂಕ 17.3.2014 ರಂದು ವಾಪಾಸು ತನ್ನ ಮನೆಯಾದ ಮಂಗಳೂರು ತಾಲೂಕು ಐಕಳ ಗ್ರಾಮದ ದಾಮಸ್ ಕಟ್ಟೆಯಲ್ಲಿರುವ ಪ್ರ ಮೀಳಾ ವಿಲ್ಲಾ ಮನೆಗೆ ವಾಪಾಸು ಬಂದು ನೋಡಲಾಗಿ ಮನೆಯ ಹಿಂಬದಿಯ ಕಿಟಕಿಗೆ ಅಳವಡಿಸಿದ ಮರದ ರೀಪನ್ನು ತುಂಡರಿಸಿ ಒಳಪ್ರವೇಶಿಸಿ ಗೋದ್ರೇಜ್ ನಲ್ಲಿ ಇರಿಸಿದ್ದ ಒಂದು ಜೊತೆ ಕಿವಿ ಬೆಂಡೋಲೆ ಸುಮಾರು 3.5 ಗ್ರಾಂ ಮತ್ತು ಕಾಲು ಗೆಜ್ಜೆ 1 ಜೊತೆ ಹಾಗೂ ಹಸಿರು ಬಣ್ಣದ ಹರಳುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ 7,500/- ಆಗಿರಬಹುದು.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 27-04-2014 ರಂದು ಬೆಳಿಗ್ಗೆ 12-00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮೂಡಬಿದ್ರೆ ಪೇಟೆಯಿಂದ ಹಾಲು ಖರೀದಿಸಿ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ರೇಂಜ್ ಫಾರೆಸ್ಟ್ ಕಛೇರಿ ರಸ್ತೆಯಲ್ಲಿ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಗ್ಯಾರೇಜ್ ಬಳಿ ತಲುಪಿದಾಗ ಹಿಂದಿನಿಂದ ಹೊಂಡಾ ಆ್ಯಕ್ಟೀವಾ ವಾಹನ ನಂ ಕೆಎ 19 ಇಕೆ 2855 ನ್ನು ಅದರ ಸವಾರ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಮೂಳೆಮುರಿತದ ಗಾಯವಾಗಿರುತ್ತದೆ. ವಾಹನ ಚಾಲಕ ಮತ್ತು ಇತರರು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-05-2014 ರಂದು ಪಿರ್ಯಾದಿದಾರರಾದ ಶ್ರೀ ಪ್ರೇಮ್ ಪ್ರಕಾಶ್ ರವರು ಅವರ ಸ್ನೇಹಿತ ಪ್ರಶಾಂತ್ ರೈ ರವರ ಬಾಬ್ತು ಕೆ ಎ 19-ಇಜೆ-0686 ನೇ ಮೋಟಾರು ಸೈಕಲ್ ನಲ್ಲಿ ಪ್ರಶಾಂತ್ ರೈರವರು ಸವಾರರಾಗಿಯೂ ಪಿರ್ಯಾದಿದಾರರು ಹಿಂಬದಿ ಸಹ ಸವಾರರಾಗಿ ಬೈಕಂಪಾಡಿಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದು ಸಮಯ 11-20 ಗಂಟೆಗೆ ಪ್ರಶಾಂತ್ ರೈರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಸುರತ್ಕಲ್ ಗ್ರಾಮದ ಎನ್ ಐ ಟಿ ಕೆ ಮುಖ್ಯ ಗೇಟ್ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಬಿಳಿ ಇಂಡಿಕಾ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ಪಿರ್ಯಾದಿದಾರರಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಮೋಟಾರು ಸೈಕಲ್ ಸವಾರರು ರಸ್ತೆಗೆ ಬಿದ್ದು ಪ್ರಶಾಂತ್ ರೈರವರ ಎಡ ಕಾಲು ಒಳ ಜಖಂಗೊಂಡಿದ್ದು ಅಲ್ಲದೇ ಪಿರ್ಯಾದಿದಾರರಿಗೆ ಬಲಕೈ ಅಂಗೈ ಮತ್ತು ಎಡ ಕೈಗೆ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದವರು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಪ್ರಶಾಂತ್ ರೈ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಪಘಾತ ಪಡಿಸಿದ ಬಿಳಿ ಇಂಡಿಕಾ ಕಾರನ್ನು ಅದರ ಚಾಲಕ ನಿಲ್ಲಿಸದೇ ಪರಾರಿಯಾಗಿರುತ್ತಾನೆ.
5.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಝೀನತ್ ರವರು 1997 ನೇ ಇಸವಿಯಲ್ಲಿ ಅಬ್ದುಲ್ ರಹೀಂ ಕಾರ್ಕಳ ಎಂಬವರೊಂದಿಗೆ ಮದುವೆ ಆಗಿದ್ದು ಅವರಿಗೆ ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳಿದ್ದು . ಪಿರ್ಯಾದಿದಾರರು ಕುಳಾಯಿಯಲ್ಲಿ ಅವರ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ಅವರ ಮನೆ ಬಳಿ ಅವರ ಗಂಡನವರ ಸಂಬಂದಿಕರ ಮನೆ ಕೂಡಾ ಇರುವುದಾಗಿದೆ. ಹೀಗಿರುತ್ತಾ ಕಳೆದ 3 ವರ್ಷಗಳ ಹಿಂದೆ ಪಿರ್ಯಾದಿಯ ಗಂಡನಿಗೆ ಇನ್ನೊಂದು ಮಹಿಳೆ ಜೊತೆ ಸಂಬಂದವಿರುವ ಬಗ್ಗೆ ಸಂಶಯ ಮೂಡಿ ಬಂದುದರಿಂದ ಪಿರ್ಯಾದಿದಾರರು ಈ ಬಗ್ಗೆ ಗಂಡನವರಲ್ಲಿ ಕೇಳಿದಾಗ ಪಿರ್ಯಾದಿದಾರರಿಗೆ ಪಿರ್ಯಾದಿಯ ಗಂಡ ಹೊಡೆದುದಲ್ಲದೇ ತದನಂತರ ಪಿರ್ಯಾದಿ ಗಂಡ ಹಾಗೂ ಗಂಡನ ಅಣ್ಣ ರಫೀಕ್, ರಫೀಕ್ ನ ಹೆಂಡತಿ ಶ್ರೀಮತಿ ಸಫ್ರಾಝ್, ಅವರ ತಂಗಿ ಶಾಫಿಯಾ, ಜೊಹರಾ, ಮತ್ತು ಅವರ ಬಾವಾ ಹಂಝ ರವರುಗಳು ಪಿರ್ಯಾದಿದಾರರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದುದಲ್ಲದೇ ಪಿರ್ಯಾದಿಯ ಮಕ್ಕಳಿಗೂ ಹೊಡೆದು ಬೆದರಿಕೆ ಹಾಕುತ್ತಿದ್ದುದಾಗಿಯೂ, ಅಲ್ಲದೇ ಇತ್ತೀಚೆಗೆ ಪಿರ್ಯಾದಿಯ ಗಂಡ ನವರು ರಝೀದಾ ಬಾನು ಎಂಬ ಮಹಿಳೆಯೊಬ್ಬಳನ್ನು ಮನೆಗೆ ಕರೆದುಕೊಂಡು ಬಂದು ನಿಲ್ಲಿಸಿದ್ದು ಆ ಬಳಿಕ ಪಿರ್ಯಾದಿ ಗಂಡ ಹಾಗೂ ಅವರ ಮೇಲಿನ ಎಲ್ಲಾ ಸಂಬಂದಿಕರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದಾಗಿದೆ.
No comments:
Post a Comment