ದೈನಂದಿನ ಅಪರಾದ ವರದಿ.
ದಿನಾಂಕ 22.05.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಿಚರ್ಡ ಡಿ'ಸೋಜಾ ರವರ ಚಿಕ್ಕಮ್ಮನ ಮಗ ಮೈಕಲ್ ಡಿ;ಸೋಜಾ ಪ್ರಾಯ 55 ವರ್ಷ ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು ದಿನಾಂಕ 02-05-2014 ರಂದು ಸಮಯ ಸುಮಾರು ಮಧ್ಯಾಹ್ನ12:30 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಹತ್ತಿರದಲ್ಲಿರುವ ಹೇರ್ ಕಟ್ಟಿಂಗ್ ಸೆಲೂನ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗು ಮನೆಗೂ ಬಾರದೆ, ಅವನ ಸ್ವಂತ ಊರಾದ ಬಾಂಬೆಯ ಮಡಲದಲ್ಲಿರುವ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಕಾಣೆಯಾದವರು ಈ ಮೊದಲು ಎರಡು ವರ್ಷಗಳ ಹಿಂದೆ ಇದೇ ರೀತಿ ಬಾಂಬೆಯ ತನ್ನ ಮನೆಯಿಂದ ನಾಸಿಕ್ಗೆ ಹೋಗಿ ಬರುವುದಾಗಿ ಹೇಳಿ ಹೋದವರು ತುಂಬಾ ದಿನಗಳ ನಂತರ ಹಿಂತಿರುಗಿ ಬಂದಿದ್ದು ಈ ಬಾರಿಯು ಕೂಡಾ ಬರಬಹುದೆಂಬ ನಿರೀಕ್ಷೆಯಿಂದ ವಿಳಂಬವಾಗಿ ದೂರು ನೀಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.05.2014 ರಂದು ಬೆಳಿಗ್ಗೆ ಸುಮಾರು 09.30 ಗಂಟೆಗೆ ಮಹೇಂದ್ರ ಪಿಕಪ್ ವಾಹನ ನಂಬ್ರ KA19-D-4122 ನ್ನು ಅದರ ಚಾಲಕ ಕುಡುಪು ಕಡೆಯಿಂದ ಕಲ್ಪನೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕುಲಶೇಖರ ಅಂಚೆ ಕಛೇರಿ ಎದುರು ತಲುಪುವಾಗ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಂಬ್ರ KA17-A-454 ನೇದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಟಿಪ್ಪರ್ ಲಾರಿ ಹಿಂದಕ್ಕೆ ಚಲಿಸಿ ಮೋಟರ್ ಸೈಕಲ್ ನಂಬ್ರ KA19-U-4094ಕ್ಕೆ ಡಿಕ್ಕಿಯಾಗಿ ಸವಾರ ಚಂದ್ರಶೇಖರ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತಗಾಯಗೊಂಡು ಸಿಟಿ ಆಸ್ಪತ್ರೆಯಲ್ಲಿ ಚಿಕೆತ್ಸೆಯಲ್ಲಿರುತ್ತಾರೆ.ಅಪಘಾತದ ವೇಳೆ ಕುಡುಪು ಕಡೆಯಿಂದ ಕಲ್ಪನೆ ಕಡೆಗೆ ಬರುತ್ತಿದ್ದ ಜೈಲೋ ಕಾರು ನಂಬ್ರ KA19-D-8378 ನೇದಕ್ಕೆ ಕೂಡಾ ಪಿಕಪ್ ವಾಹನ ಡಿಕ್ಕಿಯಾಗಿರುತ್ತದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-05-2014 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದುದಾರರಾದ ಗೋಪಾಲ್ ಪ್ರಭು ರವರು ಕಾವೂರಿನಲ್ಲಿರುವ ಸಮಯ ಪರಿಚಯದ ಭಾಸ್ಕರ ಎಂಬವರ ಜೊತೆ ಮಾತಾನಾಡಿದಾಗ ಅವರು "ತಾನು ಬಹಳ ಟೆನ್ಷನ್ ನಲ್ಲಿದ್ದೇನೆ ಮಾನಾಡಬೇಡ" ಎಂದು ಹೇಳಿದಾಗ ಪಿರ್ಯಾದುದಾರರು "ನಿಮಗೇನು ಅಷ್ಟು ಟೆನ್ಷನ್" ಎಂದು ಹೇಳಿದ್ದು ಕೋಪಗೊಂಡ ಬಾಸ್ಕರ ಕೈಯಲ್ಲಿದ್ದ ಮಿಕ್ಸಿ ಜಾರ್ ನಿಂದ ಪಿರ್ಯಾದುದಾರರ ತಲೆಗೆ ಹೊಡೆದು ಗಾಯಗೊಳಿಸಿದ್ದಾಗಿದೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಸಫ್ವಾನ್ ರವರು ನಗರದ ರಾವ್ ಎಂಡ್ ರಾವ್ ಸರ್ಕಲ್ ಬಳಿ ಇರುವ ಟಾರ್ ಟವರ್ಸ್ ನ ರಾಯೆಲ್ ಕಲೆಕ್ಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಲೂ ತನ್ನ ಮನೆಯಾದ ಫರಂಗಿ ಪೇಟೆಯಿಂದ ತನ್ನ ಬಾಬ್ತು ಕೆ.ಎ. 19, ಇ.ಎಫ್. 6837 ನೇ ಪಲ್ಸರ್ ಪಲ್ಸರ್ ಮೋಟಾರ್ ಬೈಕ್ ನಲ್ಲಿ ಬೆಳಿಗ್ಗೆ ಅಂಗಡಿಗೆ ಬಂದು ಬೈಕಿನಲ್ಲಿ ರಾತ್ರಿ ಮನೆಗೆ ಹೋಗುವುದಾಗಿದೆ. ದಿನಾಂಕ 19-05-2014 ರಂದು ಬೆಳಿಗ್ಗೆ ಎಂದಿನಂತೆ ತನ್ನ ಬೈಕಿನಲ್ಲಿ ಮನೆಯಿಂದ ಬಂದು ಅಂಗಡಿಯ ಕೆಲಸ ಮುಗಿಸಿ ರಾತ್ರಿ ಸುಮಾರು 9:00 ಗಂಟೆಗೆ ಮನೆಗೆ ಹೋಗುವಷ್ಟರಲ್ಲಿ ಗುಡುಗು ಸಿಡಿಲು ಮಳೆಯಿದ್ದ ಕಾರಣ ತನ್ನ ಮೋಟಾರು ಬೈಕ್ ನ್ನು ಅಂಗಡಿ ಕಟ್ಟಡದ ಕೆಳಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ ಮಾಡಿ ಹ್ಯಾಂಡ್ ಲಾಕ್ ಹಾಕಿ ಹೋಗಿದ್ದು, ದಿನಾಂಕ 20-05-2014 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಬಂದು ನೋಡಲಾಗಿ ಪಾರ್ಕ ಮಾಡಿದ ಸ್ಥಳದಲ್ಲಿ ಬೈಕ್ ಇಲ್ಲದೇ ಇದ್ದು, ಈ ಬಗ್ಗೆ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಯಾಗದೇ ಇದ್ದು, ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಬೈಕ್ ನ ವಿವರ ಕೆ.ಎ. 19, ಇಎಫ್ 6837ಬಣ್ಣ- ಕಪ್ಪು, ಬಜಾಜ್ ಪಲ್ಸರ್ ಮೊಡೆಲ್ 2012, ಇಂಜಿನ್ ನಂಬ್ರ DHZCCD67397, ಚಾಸೀಸ್ ನಂಬ್ರ MD2A11CZOCCD68003. ಅಂದಾಜು ಮೌಲ್ಯ ರೂ. 49,000/- ಆಗಿರುತ್ತದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಜೆಪ್ಪು ಕಾಸಿಯಾ ಹೈಸ್ಕೂಲ್ ಬಳಿಯ ವಾಸಿಯಾದ ಪಿರ್ಯಾದಿದಾರರಾದ ಶ್ರೀಮತಿ ಶಹನಾಜ್ ಬೇಗಂ ರವರು ಪಾಂಡೆಶ್ವರದ ಪ್ಲಾನೆಟ್ ಸೆಲ್ ಎಂಬ ಮೋಬೈಲ್ ಅಂಗಡಿಗೆ ಮೋಬೈಲ್ ರೀಪೆರಿಗೆಂದು ಹೋಗುತ್ತಿದ್ದ ಸಮಯ ಎಂ.ಆರ್ ಭಟ್ ಲೆನ್ ನಿವಾಸಿ ಮೊಹ್ಮದ್ ತಸ್ಲಿಮ್ ಎಂಬಾತನು ಪಿರ್ಯಾದಿದಾರರಾದ ಶ್ರೀಮತಿ ಶಹನಾಜ್ ಬೇಗಂ ಎಂಬುವರ ಪರಿಚಯ ಮಾಡಿಕೊಂಡು ತಾನು ಮಂಗಳೂರು ನಗರದಲ್ಲಿ ಸ್ವಂತ ಮೊಬೈಲ್ ಅಂಗಡಿಯನ್ನು ತೆರೆಯಲು ಉದ್ದೇಶಿಸಿರುತ್ತೇನೆ, ಅದಕ್ಕೆ ನಿಮ್ಮ ಸಹಾಯ ಬೇಕು,ಅಂಗಡಿಯಲ್ಲಿ ಬರುವ ಲಾಭಾಂಶದಲ್ಲಿ ನಿಮಗೆ ಸಮ ಪಾಲು ಕೊಡುತ್ತೇನೆ, ಅಂಗಡಿ ನಡೆಸಲು ಸುಮಾರು 5 ಲಕ್ಷ ರೂಪಾಯಿ ಬೇಕಾಗುತ್ತದೆ ನೀವು 2.5 ಲಕ್ಷ ರೂಪಾಯಿಯನ್ನು ನೀಡಿ ಉಳಿದ ಹಣವನ್ನು ನಾನು ಹಾಕುತ್ತೇನೆ ಎಂದು ಹೇಳಿದಾಗ, ಪಿರ್ಯಾದಿದಾರರಲ್ಲಿ ಕೊಡಲು ಹಣವಿವೆಂದು ಹೇಳಿದ್ದಕ್ಕೆ, ನಿಮ್ಮಲ್ಲಿರುವ ಚಿನ್ನಾಭರಣವನ್ನು ನೀಡಿ ಅದನ್ನು ಗಿರವಿ ಇರಿಸಿ ಹಣ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿ ದಿನಾಂಕ 16-03-2008 ರಂದು 25 ಪವನು ಚಿನ್ನಾಭರಣವನ್ನು ಪಿರ್ಯಾದಿದಾರರ ಅಣ್ಣನಾದ ಆಸೀಪ್. ಕೆ ರವರು ಆರೋಪಿಯು ಕೇಲಸ ಮಾಡುತ್ತಿರುವ ಪಾಂಡೇಶ್ವರದ ಮೋಬೈಲ್ ಅಂಗಡಿಗೆ ತೆರಳಿ ಆರೋಪಿಗೆ ನೀಡಿದ್ದು ಆರೋಪಿಯು ನಿಮ್ಮ ಚಿನ್ನಾಭರಣವನ್ನು ಅಡವಿರಿಸಿ 6 ತಿಂಗಳಲ್ಲಿ ಬಿಡಿಸಿ ವಾಪಾಸು ಕೊಡುತ್ತೇನೆ ಹಾಗೂ 10 ದಿನದೊಳಗೆ ಅಂಗಡಿ ಪ್ರಾರಂಬಿಸುತ್ತೇನೆ ಎಂಬುದಾಗಿ ಮೋಸದಿಂದ ಆರೋಪಿಯು ಚಿನ್ನಾಭರಣವನ್ನು ಪಡೆದುಕೊಂಡು ಅಂಗಡಿಯನ್ನು ತೆರೆಯದೇ ಹಣವನ್ನು ಖರ್ಚು ಮಾಡಿದ್ದಲ್ಲದೆ ಗಿರವಿ ಇಟ್ಟಿದ್ದ ಚಿನ್ನಾಭರಣವನ್ನು ನೀಡದೆ ಮೋಸ ಮಾಡಿ ನಂಬಿಕೆ ದ್ರೋಹ ಎಸಗಿರುತ್ತಾರೆ. ಅಲ್ಲದೆ ಆರೋಪಿತರ ಬಳಿಗೆ ಪಿರ್ಯಾದಿದಾರರು ತನ್ನ ಅಣ್ಣನ ಜೊತೆ ಹೋಗಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಒಡ್ಡಿರುತ್ತಾರೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-05-2014 ರಂದು 20-00 ಗಂಟೆಯಿಂದ 21-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ ಈಜಿಡೇ ಬಳಿಯಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ಅವೀನಾಶ್ ಪ್ರಸಾದ್ ಎ. ರವರ ಆರ್. ಸಿ. ಮಾಲಕತ್ವದ 2011ನೇ ಮೋಡಲ್ ನ ಅಂದಾಜು ರೂಪಾಯಿ 42500/- ಬೆಲೆ ಬಾಳುವ ನೀಲಿ ಬಣ್ಣದ ಕೆಎ 19 ಇಸಿ 5204ನೇ ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕ್ ನ ಟೂಲ್ಸ್ ಬಾಕ್ಸ್ ನಲ್ಲಿ ಸದ್ರಿ ಬೈಕ್ ಗೆ ಸಂಬಂಧಿಸಿದ R. C ಮತ್ತು Insurance ನ ಜೇರಾಕ್ಸ್ ಪ್ರತಿ ಕೂಡ ಇದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ದಿನಾಂಕ 21-05-2014 ರಂದು ಸಂಜೆ 17-00 ಗಂಟೆಯವರೆಗೆ ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸಾವಿತ್ರಿ ರವರು ಮೂಲತಃ ಬೆಳಗಾಂ ಜಿಲ್ಲೆಯವರಾಗಿದ್ದು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಎಕ್ಕೂರಿನಲ್ಲಿ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ಗಂಡ ರಾಯನ ಗೌಡ ಯಾನೆ ರವಿ ಎಂಬವರು ದಿನಾಂಕ 11-05-2014 ರಂದು ಸಂಜೆ 4-00 ಗಂಟೆಗೆ ಚರ್ಚ್ಗೆ ಹೋಗುತ್ತೇನೆಂದು ಹೇಳಿ ಎಕ್ಕೂರಿನ ಮನೆಯಿಂದ ಹೋದವರು ವಾಪಾಸು ಬಾರದೆ ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರು ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ.
No comments:
Post a Comment