ದೈನಂದಿನ ಅಪರಾದ ವರದಿ.
ದಿನಾಂಕ 11.05.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-05-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀಮತಿ ಸುಧಾ ರವರು ಆತನ ಗಂಡ ದಿನೇಶ್ ಆಚಾರ್ಯ ರವರ ಬಾಬ್ತು ಕೆಎ-19-ಜೆ-2706ನೇ ನಂಬ್ರದ ಸ್ಕೂಟರಿನಲ್ಲಿ ಸಹಸವಾರರಾಗಿ ಪಡುಪಣಂಬೂರಿನಿಂದ ಹೊರಟು, ಸ್ಕೂಟರನ್ನು ದಿನೇಶ್ ಆಚಾರ್ಯ ರವರು ರಾಹೆ-66 ರಲ್ಲಿ ಕೋಲ್ನಾಡು ಕಡೆಗೆ ಚಲಾಯಿಸುತ್ತಾ, ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ಕಾರ್ನಾಡು ಗ್ರಾಮದ ಕೋಲ್ನಾಡು ಜಂಕ್ಷನ್ ನಿಂದ ಸ್ವಲ್ಪ ಹಿಂದುಗಡೆ ತಲುಪುವಾಗ್ಯೆ, ಸದ್ರಿ ಸ್ಕೂಟರಿನ ಹಿಂದುಗಡೆಯಿಂದ ಅಂದರೆ ಮಂಗಳೂರಿನಿಂದ ಮುಲ್ಕಿ ಕಡೆಗೆ ಕೆಎ-19-ಎಂ.ಸಿ-171ನೇ ನಂಬ್ರದ ಇನ್ನೋವಾ ಕಾರಿನ ಚಾಲಕ ವಿನಾಯಕ್ ಎಂಬವರು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ, ಪಿರ್ಯಾದಿದಾರರು ಮತ್ತು ಅವರ ಗಂಡ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ತರಚಿದ ಗಾಯ ಮತ್ತು ದಿನೇಶ್ ಆಚಾರ್ಯ ರಿಗೆ ತಲೆಗೆ ಮತ್ತು ಹಣೆಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡು, ದಿನೇಶ್ ಆಚಾರ್ಯರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 6.5.2014 ರಂದು ಫಿರ್ಯಾದಿದಾರರಾದ ಶ್ರೀ ಮೋಹನ್ ರವರ ಅಕ್ಕನ ಮಗ ಹರಿಪ್ರಸಾದ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ಕೆಎ 19 EK 0671 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದು ಸಮಯ ಸುಮಾರು ಸಂಜೆ 5.00 ಗಂಟೆಗೆ ಭಟ್ಟಕೋಡಿ ಶಿಬರೂರು ದ್ವಾರದಿಂದ ಸ್ವಲ್ಪ ಮುಂದೆ ಸರ್ವಿಸ್ ಸ್ಟೇಶನ್ ಬಳಿ ತಲುಪುವಾಗ್ಗೆ ಎದುರುಗಡೆಯಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಕೆಎ 19 EJ 5055 ನೇದರ ಸವಾರ ಆರೋಪಿ ಸುಕೇಶ್ ಪೂಜಾರಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಢಿಕ್ಕಿ ಹೊಡೆದ ಪರಿಣಾಮ ಕೆಎ 19 EK 0671 ನೇ ಬೈಕ್ ನ ಸವಾರ ಹರಿಪ್ರಸಾದ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-05-2014 ರಂದು ಫಿರ್ಯಾದಿದಾರರಾದ ಶ್ರೀ ಗುರುಪ್ರಸಾದ್ ರವರು ತನ್ನ ಜೊತೆಯಲ್ಲಿ ಕೆಲಸ ಮಾಡುವ ಯತೀಶ್ ಎಂಬವರ ಮೋಟಾರು ಸೈಕಲ್ ಕೆಎ-19 ಇಇ 6250 ನೇಯದರಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಕೂಳೂರು ಕಡೆಯಿಂದ ಕಾವೂರು ಕಡೆಗೆ ಹೋಗುತ್ತಾ ಪಂಜಿಮೊಗರು ವಿದ್ಯಾನಗರ ಎಂ.ವಿ ಶೆಟ್ಟಿ ಕಾಲೇಜಿನ ಬಳಿ ತಲುಪಿದಾಗ ಕಾಂಕ್ರೀಟ್ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಕೆಎ- 19 -ಎ.ಎ- 1061 ನೇಯದನ್ನು ಅದರ ಚಾಲಕರು ಯಾವುದೇ ಸೂಚನೆ ನೀಡದೇ ನಿರ್ಲಕ್ಷ್ಯತನದಿಂದ ಒಮ್ಮೆಲೆ ಬಲಕ್ಕೆ ಚಲಾಯಿಸಿದ ಪರಿಣಾಮ ಟಿಪ್ಪರ್ ಲಾರಿ ಮೋಟಾರು ಸೈಕಲ್ ಗೆ ಢಿಕ್ಕಿಯಾಗಿ ಫಿರ್ಯಾದಿದಾರರು ಮತ್ತು ಮೋಟಾರು ಸೈಕಲ್ ಸವಾರ ಯತೀಶ್ ಮೋಟಾರು ಸೈಕಲ್ ಸಮೇತ ರೆಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಗಂಭೀರ ಸ್ವರೂಪದ ಮತ್ತು ಯತೀಶ್ ಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.
No comments:
Post a Comment