ದಿನಾಂಕ 05.05.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-05-2014 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಮಂಗಳೂರು ತಾಲೂಕು ಐಕಳ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಸಂತೋಷ್ ಮಿನೇಜಸ್ ರವರಿಗೆ ಸೇರಿದ ಕ್ರಷರ್ ಕೋರೆಯ ಬಳಿಯಲ್ಲಿರುವ ಕ್ರಷರ್ ನ ಕೆಲಸಗಾರರು ಉಳಿದುಕೊಳ್ಳುವ ಶೆಡ್ ನಲ್ಲಿ ಆರೋಪಿತರಾದ ಕ್ರಷರ್ ಮಾಲಕ ಬೊಂದೇಲ್ ನ ಸಂತೋಷ್ ಮಿನೇಜಸ್ ರವರು, ಇನ್ನೊರ್ವ ಆರೋಪಿ ಡೆನ್ನಿಸ್ ರವರಿಂದ ಪಡೆದ ಸ್ಪೋಟಕ ವಸ್ತುಗಳಾದ ಅಮೋನಿಯಂ ನೈಟ್ರೇಟ್ 6 ಚೀಲ, ಕೇಪ್ ಮತ್ತು ಬತ್ತಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರಿಂದ ಅವುಗಳು ಸ್ಫೋಟಗೊಂಡಿದ್ದು ಸದ್ರಿ ರೂಂ ನಲ್ಲಿ ವಾಸವಾಗಿದ್ದ ಪೆರುಮಚ್ಚಿ(24), ಹಾಗೂ ಅವರ ತಾಯಿ ಶ್ರೀಮತಿ ಇರಸಮ್ಮ (65), ಹಾಗೂ ಪಿರ್ಯಾದಿದಾರರಾದ ಶ್ರೀ ಸಿ. ನಾಗರಾಜ್ ರವರ ಹೆಂಡತಿ ಶ್ರೀಮತಿ ಯಶೋಧ(30), ಮತ್ತು ಮಕ್ಕಳಾದ ಪೂಜಾ(10) ಮತ್ತು ಅಕ್ಷಯ್(8) ರವರಿಗೆ ಗಾಯವಾಗಿದ್ದು, ಈ ಘಟನೆಗೆ ಕ್ರಷರ್ ಮಾಲಕ ಬೊಂದೇಲ್ ನ ಸಂತೋಷ್ ಮಿನೇಜಸ್ ಮತ್ತು ಡೆನ್ನಿಸ್ ರವರು ಅಕ್ರಮವಾಗಿ ಶೆಡ್ ನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳು ಸ್ಫೋಟಿಸಿದ್ದರಿಂದ ಈ ದುರ್ಘಟನೆ ನಡೆದಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04/05/2014 ರಂದು ಫಿರ್ಯಾದಿದಾರರಾದ ಶ್ರೀಮತಿ ಕಾಮಾಕ್ಷಿರವರು ತನ್ನ ಗಂಡ ಮತ್ತು ಅತ್ತೆಯೊಂದಿಗೆ ಜ್ಯೋತಿನಗರದಲ್ಲಿರುವ ಮನೆಯ ಒಳಗಡೆ ಇದ್ದಾಗ ಮಧ್ಯಾಹ್ನ 12-30 ಗಂಟೆಗೆ ಗಂಡನು ಕಿರಿಕಿರಿ ಮಾಡಿದಾಗ ಫಿರ್ಯಾದಿದಾರರು ಬುದ್ದಿ ಮಾತು ಹೇಳಿದುದಕ್ಕೆ ಕೋಪಗೊಂಡು ಫಿರ್ಯಾದಿದಾರರ ಗಂಡ ವೆಂಕಟೇಶ್ ಫಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ತನ್ನ ಬಲಕೈಯಿಂದ ಫಿರ್ಯಾದಿದಾರರ ತಲೆಯ ಹಿಂಭಾಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಎಡಕೈಯಲ್ಲಿದ್ದ ಹರಿತವಾದ ಬ್ಲೇಡಿನಿಂದ ಫಿರ್ಯಾದಿದಾರರ ಕುತ್ತಿಗೆಯನ್ನು ಕೊಯ್ದು ಗಾಯಗೊಳಿಸಿದ್ದು, ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಶೈನ್ ಕುಮಾರ್ ರವರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದು, ದಿನಾಂಕ 03-05-2014 ರಂದು ರಾತ್ರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ವಾರ್ಷಿಕೋತ್ಸವ ನಡೆಯುತ್ತಿದ್ದು, ಈ ಸಮಯ ಫಿರ್ಯಾದಿದಾರರ ಸಂಬಂಧಿ ರಜನೀಕಾಂತ್ ಎಂಬವರಿಗೆ ಸೇರಿದ ಕೆಎ-19-ಇಕೆ-9985 ನೇ ನಂಬ್ರದ ಬಜಾಜ್ ಪಲ್ಸಾರ್ ಮೋಟಾರ್ ಸೈಕಲಿನಲ್ಲಿ ಬಂದು ಸದ್ರಿ ಬೈಕನ್ನು ಕೋರ್ಟು ಆವರಣದಲ್ಲಿ ಪಾರ್ಕು ಮಾಡಿದ್ದು, ರಾತ್ರಿ ಸುಮಾರು 10 ಗಂಟೆಗೆ ಕಾರ್ಯಕ್ರಮ ಮುಗಿಸಿ ಬಂದು ಬೈಕು ಪಾರ್ಕು ಮಾಡಿದ ಜಾಗದಲ್ಲಿ ಬಂದು ನೋಡಿದಾಗ ಬೈಕ್ ಕಾಣೆಯಾಗಿದ್ದು, ಸದ್ರಿ ಬೈಕನ್ನು ಯಾರೋ ಕಳ್ಳರು ದಿನಾಂಕ 03-05-2014 ರಂದು ರಾತ್ರಿ ಸುಮಾರು 7 ಗಂಟೆಯಂದ 10 ಗಂಟೆ ಮಧ್ಯೆ ಕಳವು ಮಾಡಿದ್ದು, ಕಳವಾದ ಮೋಟಾರ್ ಸೈಕಲಿನ ಅಂದಾಜು ಮೌಲ್ಯ ರೂ 85,000/- ಆಗಿರುತ್ತದೆ. ಕಳವಾದ ಮೋಟಾರ್ ಸೈಕಲಿನ ವಿವರ BAJAJ PULSAR 150 DTS, REG NO: KA-19-EK-9985, MODEL: 2014, COLOUR: BLACK, CHASSIS NO: MD2A11CZ5EWL21516, ENGINE NO: DHZWEL16193.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/05/2014 ರಂದು 13.0 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಮಾಲುದ್ದೀನ್ ಖಾದರ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 EK 9005 ನೇದರಲ್ಲಿ ತನ್ನ ಅಳಿಯ ತನ್ ವೀರ್ ಆಲಿ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಜಪೆ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಾ ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ಕಟೀಲು ದ್ವಾರದ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಟಿಪ್ಪರ್ ಲಾರಿ ನಂಬ್ರ KA 19 B 3618 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹವಾರರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಹಸವಾರ ತನ್ ವೀರ್ ಆಲಿ ರವರ ಹೊಟ್ಟೆಗೆ ಮತ್ತು ಕೈಗೆ ತೀವೃ ಸ್ವರೂಪದ ಗಾಯವಾಗಿದ್ದು, ಅವರನ್ನು ಕಿನ್ನಿಗೋಳಿ ಕಸ್ಸೆಟ್ಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಯೆನಪೋಯಾ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಅಲ್ಲದೇ ಅಪಘಾತಪಡಿಸಿದ ಟಿಪ್ಪರ್ ಲಾರಿ ಚಾಲಕನು ಗಾಯಾಳುವನ್ನು ಆಸ್ಪತ್ರೆಗೂ ಸಾಗಿಸದೇ, ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ಕೂಡಾ ತಿಳಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-05-2014 ರಂದು ಪಿರ್ಯಾದಿದಾರರಾದ ಶ್ರೀ ರೊನಾಲ್ಡ್ ಡಿ ಕೋಸ್ತ ಎಂಬವರು ತನ್ನ ಕೆಎ:19 ವೈ 2750 ನಂಬ್ರದ ಸ್ಕೂಟಿಯಲ್ಲಿ ತನ್ನತಂಗಿ ಪ್ರಸಿಲ್ಲ ಎಂಬವರ ಮಗ 4 ವರ್ಷದ ಪ್ರಾಯದ ಅನ್ವೆಲ್ ಪಾಯಸ್ನನ್ನು ಎದುರಿನಲ್ಲೂ ಮತ್ತು ಮತ್ತೊಬ್ಬತಂಗಿ ಪ್ರೇಮಾ ಡಿ ಕೋಸ್ತ ಎಂಬವರನ್ನು ಹಿಂಬದಿ ಸಹಸವಾರರಾಗಿ ಕುಳ್ಳಿರಿಸಿಕೊಂಡು ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದವರು ಮದ್ಯಾಹ್ನ ಸುಮಾರು 1.15 ಗಂಟೆಗೆ ಗುರುಪುರ ಅಣೆ ಬಳಿ ತಲುಪಿದಾಗ ಗುರುಪುರ ಕಡೆಯಿಂದ ಕೈಕಂಬ ಕಡೆಗೆ ಕೆಎ:19 ಎನ್:3357 ನಂಬ್ರದ ಟ್ರಾಕ್ಸ್ ವಾಹನವನ್ನುಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾಲಿಗೆ ಮತ್ತು ಇತರ ಕಡೆಗೂ ಮಗು ಅನ್ವಲ್ ಪಾಯಸ್ರವರ ಪಕ್ಕೆಲುಬು, ಎದೆಗೆ ಮತ್ತಿತರ ಕಡೆಗೆ ತೀವ್ರ ತರದ ಗಾಯಗಳಾಗಿದ್ದು, ಅವರಿಬ್ಬರನ್ನುಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅನ್ವಲ್ ಪಾಯಸ್ ಮೃತಪಟ್ಟಿದ್ದು, ರೊನಾಲ್ಡ್ ಡಿ ಕೋಸ್ತ್ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ರೀಟಾ ಸಿಕ್ವೇರಾ ರವರ ಅಣ್ಣ ರಿಚರ್ಡ್ ಡಿ'ಸೋಜಾ, ಪ್ರಾಯ: 50 ವರ್ಷ ಎಂಬವರು ಎಡಪದವಿನಲ್ಲಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟವುಳ್ಳವರಾಗಿದ್ದು, ಇವರು ದಿನಾಂಕ: 04-05-2014 ರಂದು ಸಂಜೆ 5-00 ಗಂಟೆ ಸಮಯಕ್ಕೆ ತನ್ನ ಮೋಟಾರು ಸೈಕಲ್ ನಂ: ಕೆಎ 19 ಆರ್ 439 ನೇದ್ದನ್ನು ಎಡಪದವು ಮೂಡಬಿದ್ರಿ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಮಂಗಳೂರು ತಾಲೂಕಿನ, ತೆಂಕ ಎಡಪದವು ಗ್ರಾಮದ ವಿವೇಕಾನಂದ ಕಾಲೇಜಿನ ಬಳಿ ಯಾವುದೋ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಪ್ರಮೋದ್ ಕುಮಾರ್ ರವರಿಗೆ 'ಬಂಟ್ ಸೋಲಾರ್ ಇಂಡಿಯಾ ಪ್ರೈ. ಲಿ. ಬೆಂಗಳೂರು ಇದರ ಪ್ರಾಂಚಾಯಿಸಿ ನೀಡುವುದಾಗಿ ಹೇಳಿ ಆರೋಪಿತರು ಅವರಿಂದ 25000/- ಹಣವನ್ನು ಚಕ್ ಮುಖಾಂತರ ಪಡೆದಿದ್ದು, ಈ ಬಗ್ಗೆ ಯಾವುದೇ ಕರಾರು ಪತ್ರವನ್ನು ಮಾಡಿಸಿರುವುದಿಲ್ಲ ಅಲ್ಲದೇ ಕಂಪೆನಿಯು ನಡೆಸಿದ ವ್ಯವಹಾರದಿಂದ ಪಿರ್ಯಾದುದಾರರಿಗೆ ಸಂದಬೇಕಾಗಿದ್ದ ಹಣವನ್ನು ನೀಡಲು ಕೂಡಾ ಕಂಪೆನಿಯು ನಿರಾಕರಿಸಿರುತ್ತದೆ. ಅಲ್ಲದೇ ಪಿರ್ಯಾದುದಾರರು ನೀಡಿದ ಚಕ್ಗಳನ್ನು ಕಂಪೆನಿಯು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದ್ದುದರಿಂದ ಕಂಪೆನಿಯ ನಿರ್ದೇಶಕರಾದ ಆರೋಪಿತ (1) ನೇಯ ಚಂದ್ರಶೇಖರ್ ಶೆಟ್ಟಿ ರವರಲ್ಲಿ ಪಿರ್ಯಾದಾರರು ವಿಚಾರಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪೊಲೀಸು ದೂರು ನೀಡುತ್ತೇನೆಂದು ಪಿರ್ಯಾದುದಾರರು ತಿಳಿಸಿದಾಗ, ಕೋಪಗೊಂಡ ಆರೋಪಿತರಾದ ಚಂದ್ರಶೇಖರ ಶೆಟ್ಟಿ, ಯೋಗೀಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀಮತಿ ಪೂರ್ಣಿಮಾ ರಜಿನಿ, ಸುತನ್ ರೈ ರವರು ದಿನಾಂಕ 03-05-2014ರಂದು ಸಂಜೆ ಕಾರು ಮತ್ತು ಬೈಕಿನಲ್ಲಿ, ಪಿರ್ಯಾದುದಾರರ ಮನೆಯಾದ ಮಂಗಳೂರು ತಾಲೂಕು, ಸೊಮೇಶ್ವರ ಗ್ರಾಮದ ನಾಗತೋಟ ಎಂಬಲ್ಲಿಗೆ ಬಂದು ಅಕ್ರಮವಾಗಿ ಮನೆಯೊಳಗಡೆ ಪ್ರವೇಶಿಸಿ, ಪಿರ್ಯಾದಿಯ ಹೆಂಡತಿಯಲ್ಲಿ "ನಿನ್ನ ಗಂಡನನ್ನು ಮುಗಿಸುತ್ತೇನೆ, ನಮ್ಮ ವಿರುದ್ದ ಪೊಲೀಸು ದೂರು ನೀಡಿದರೆ ಜಾಗ್ರತೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-05-2014 ರಂದು ಅಪರಾಹ್ನ 1-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ ರವರು ಇಡ್ಯಾ ಗ್ರಾಮದ ಸುರತ್ಕಲ್ ರೈಲ್ವೇ ಓವರ್ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಅಂದರೆ ಕಡಂಬೋಡಿ ಕಡೆಯಿಂದ ಒಂದು ದ್ವಿಚಕ್ರ ವಾಹನ (ಆಕ್ಟಿವಾ ಅಥವಾ ಅಂತಹದೇ) ದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳ ಪೈಕಿ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ಹಾಗೂ 3 ಪವನ್ ತೂಕದ ಮುತ್ತಿನ ಹಾರವನ್ನು ಎಳೆದು ಕೊಂಡು ಪರಾರಿಯಾಗಿದ್ದು ಕಸಿದುಕೊಂಡು ಹೋದ ಕರಿಮಣಿ ಸರ ಹಾಗೂ ಮುತ್ತಿನ ಸರದ ಒಟ್ಟು ತೂಕ 56 ಗ್ರಾಂ ಆಗಿದ್ದು ಒಟ್ಟು ಅಂದಾಜು ಮೌಲ್ಯ ರೂ 1,10,000/- ಆಗಬಹುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.05.2014 ರಂದು ರಾತ್ರಿ 8:00 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ ಮಾಂಡೋವಿ ಶೋ ರೂಮ್ ಮೂಂಭಾಗ ರಾ. ಹೆ 75 ರಲ್ಲಿ ಪಿರ್ಯಾದಿದಾರರಾದ ಶ್ರೀ ದಯಾನಂದ ಅಡ್ಯಾರ ರವರ ತಂದೆ ಪೂವಪ್ಪ 75 ವರ್ಷ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಿ.ಸಿ ರೋಡ್ - ಕಡೆಯಿಂದ ಮಂಗಳೂರು ಕಡೆಗೆ ಬರುತಿದ್ದ ಕೆಎಲ್ 38 – 8782 ನೇ ನಂಬ್ರ ಮಾರುತಿ ಶಿಷ್ಟ್ ಕಾರು ಚಾಲಕ ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪೂವಪ್ಪ ರವರಿಗೆ ಡಿಕ್ಕಿ ಹೊಡೆದಿದ್ದು, ಎಂ ಪೂವಪ್ಪ ಅವರಿಗೆ ತಲೆಗೆ, ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಅಪಘಾತ ಮಾಡಿದ ಕಾರಿನಲ್ಲಿಯೇ ಮಂಗಳೂರಿನ ಜ್ಯೋತಿ ಕೆ. ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ.
No comments:
Post a Comment