Tuesday, May 27, 2014

Daily Crime Reports 27-05-2014

ದೈನಂದಿನ ಅಪರಾದ ವರದಿ.

ದಿನಾಂಕ 27.05.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.05.2014 ರಂದು ಪಿರ್ಯಾದುದಾರರಾದ ಶ್ರೀ ಅಚ್ಚುತ ಎಂ. ರವರು KA-19-MB-7402 ನೇ ನಂಬ್ರದ ಕಾರನ್ನು ಮಂಗಳೂರು ನಗರದ ಲಾಲ್ ಭಾಗ್ ಕಡೆಯಿಂದ ಪಿ.ವಿ.ಎಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಂಜೆ ಸುಮಾರು 5:30 ಗಂಟೆ ಸಮಯಕ್ಕೆ ಬಿ.ಜಿ ಸ್ಕೂಲ್ ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದುದಾರರ ಹಿಂದಿನಿಂದ KL-15-7515ನೇ ನಂಬ್ರದ ಕೇರಳ KSRTC ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ರಸ್ತೆ ಎಡ ಬದಿಗೆ ಅಂದರೆ ಜೈಲ್ ರಸ್ತೆ ಕಡೆಗೆ ತಿರುಗಿಸಿದಾಗ ಬಸ್ಸಿನ ಬಲಬದಿಯ ಹಿಂಭಾಗ ಪಿರ್ಯಾದುದಾರರ ಕಾರಿನ ಎಡಭಾಗದ ಹಿಂಭಾಗದ ಡೋರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಕಾರಿನ ಎಡಭಾಗದ ಹಿಂಬಾಗಿಲು ಜಖಂಗೊಂಡಿರುವುದು.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.05.2014 ರಂದು ಸಮಯ ಸುಮಾರು 15.15 ಗಂಟೆಗೆ ಮೋಟರ್ ಸೈಕಲ್ ನಂಬ್ರ  KL25-C-2316 ನ್ನು ಅದರ ಸವಾರ ಕದ್ರಿ ಶಿವಭಾಗ್ ಜಂಕ್ಷನ್ ಕಡೆಯಿಂದ ಕಂಕನಾಡಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು  ಹೋಗಿ ಆಗ್ನೇಸ್ ಸರ್ಕಲ್ ಬಳಿ ಇರುವ ರೈನ್ ಬೊ ಬಾರ್ ಆಂಡ್ ರೆಸ್ಟೋರೆಂಟ್  ಎದುರು  ಮುಂದಿನಿಂದ ಹೋಗುತ್ತಿದ್ದ  ಮೋಟರ್ ಸೈಕಲ್ ನಂಬ್ರ KA19-U-7666 ಕ್ಕೆ ಡಿಕ್ಕಿ ಮಾಡಿದ  ಪರಿಣಾಮ ಎರಡೂ ಮೋಟರ್ ಸೈಕಲ್ ಸವಾರರು ರಸ್ತೆಗೆ ಬಿದ್ದು, ರಕ್ತಗಾಯಗೊಂಡು S.C.S  ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/05/2014 ರಂದು ಮದ್ಯಾಹ್ನ ಸುಮಾರು 12:00 ಗಂಟೆಗೆ ಆಟೋ ರಿಕ್ಷಾ ನಂಬ್ರ KA-19-D-727 ಅದರ ಚಾಲಕ ಕಂಕನಾಡಿ ಕಡೆಯಿಂದ ಕದ್ರಿ ದೇವಸ್ಥಾನದ ಕಡೆಗೆ ಬರುತ್ತಾ ಹಾರ್ಟಿಕಲ್ಚರ್ ಜಂಕ್ಷನ್ ತಲುಪುವಾಗ ಅದರ ಚಾಲಕ ವೇಗವಾಗಿ  ಜಂಕ್ಷನ್ ಸಾಗುತ್ತಿದ್ದ ಆಟೋರಿಕ್ಷಾಕ್ಕೆ ಒಮ್ಮೆಲೆ ನಿರ್ಲಕ್ಷತನದಿಂದ ಬ್ರೆಕ್ ಹಾಕಿದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಶ್ರಿಮತಿ ರಾಜೀವಿ ಮತ್ತು ತ್ರಿವೇಣಿರವರಿಗೆ ಗುದ್ದಿದ ಗಾಯಗಳು ಉಂಟಾಗಿ SCS ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

4.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.05.2014 ರಂದು ಬೆಳಿಗ್ಗೆ 11:30 ಗಂಟೆಯಿಂದ ಸಂಜೆ 17:00 ಗಂಟೆಯ ಮದ್ಯೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ, ಸನಾ ಕಾಟೇಜ್‌, ಪಡಿಲಚ್ಚಿಲ್ಮನೆ ಎಂಬಲ್ಲಿರುವ ಫಿರ್ಯಾದಿದಾರರಾದ ಸೂಫಿ ಕುಂಞ ರವರ ಮನೆಗೆ ಮನೆಯವರು ಮನೆಯಲ್ಲಿ ಇರದ ಸಮಯ ಯಾರೋ ಕಳ್ಳರು ಮನೆಯೆ ಹಿಂಬಾಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳ ಪ್ರವೇಶಿಸಿ ಬೆಡ್ರೂಮಿನಲ್ಲಿದ್ದ ಕಪಾಟನ್ನು ಮೀಟಿ ತೆರೆದು ಕಪಾಟಿನಲ್ಲಿದ್ದ ಲಾಕರನ್ನು ಮೀಟಿ ತೆರೆದು ಅದರಲ್ಲಿದ್ದ ರೂ. 22,000/- ಅನ್ನು ಕಳವು ಮಾಡಿದ್ದು ಅಲ್ಲದೇ ಕಪಾಟಿನ ರಾಕ್ನಲ್ಲಿದ್ದ ಹಳೆಯ ಚಿನ್ನದ ತುಣುಕುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 22,000/- ಆಗಬಹುದು.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-05-2014 ರಂದು 5-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಿಚರ್ಡ್ ಕರ್ಡೋಜಾ ರವರು ಮೂಡಬಿದ್ರೆಯಿಂದ ಕೈಕಂಬ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಮಯ ಪಿರ್ಯಾದಿ ಮುಂದಿನಿಂದ ಕೆಎ 19 ಇಹೆಚ್‌ 2987 ಡಿಯೋ ದ್ವಿಚಕ್ರ ವಾಹನದ ಸವಾರ ವಿಲ್ಸನ್ಎಂಬವನು ಸಹಸವಾರನನ್ನು ಕುಳ್ಳಿರಿಸಿಕೊಂಡು ಮಂಗಳೂರು ಕಡೆಗೆ ಹೋಗುತ್ತಿರುವ ಸಮಯ ಹಂಡೇಲು ಸುತ್ತು ಬಳಿ ಮಂಗಳೂರು ಕಡೆಯಿಂದ ಕೆಎ 20 ಕೆ 2891 ಮೋಟಾರು ವಾಹನದ ಸವಾರನು ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರ ವಿಲ್ಸನ್ಎಂಬವರಿಗೆ ತಲೆಗೆ ಗಂಭೀರ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ಸಾಗಿಸಿದ ಸಮಯ ಸಂಜೆ 7-00 ಗಂಟೆಗೆ ಮೃತಪಟ್ಟಿರುವುದಾಗಿ. ಬೈಕ್ಸವಾರ ಮತ್ತು ಸಹ ಸವಾರರಿಗೆ ತಲೆಗೆ ಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.

 

6.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-05-2014 ರಂದು ಪಿರ್ಯಾದಿದಾರರಾದ ಶ್ರೀ ಅಜೀತ್ ಕೆ.ಪಿ. ರವರು ಮಂಗಳೂರು ನಗರದ ಸೆಂಟ್ರಲ್ಮಾರ್ಕೆಟ್‌‌ಗೆ ತನ್ನ ಬಾಬ್ತು ಇಂಡೆಕ್ಷನ್ಕುಕ್ಕರ್‌‌ ರಿಪೇರಿ ಮಾಡುವರೇ ಮಧ್ಯಾಹ್ನ 11-30 ಗಂಟೆಗೆ ಬಂದು ವಾಪಾಸು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿ 12-00 ಗಂಟೆಗೆ ಜ್ಯೋತಿ ಬಸ್ಸು ನಿಲ್ದಾಣದ ಬಳಿ ಇಳಿದು ನೋಡಿದಾಗ ಪಿರ್ಯಾದಿದಾರರ ಪ್ಯಾಂಟಿನ ಕಿಸೆಯಲ್ಲಿಸ್ಸ ಸುಮಾರು 26,000/- ರೂ ಬೆಲೆ ಬಾಳುವ LG NEXUS  ಕಂಪನಿಯ IMEI 357541-05-062245-7 ನಂಬ್ರದ ಮೊಬೈಲ್‌‌ ಸೆಟ್‌‌‌ನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ.   

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/05/2014 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಮಹಮ್ಮದ್ ಫಯಾಜ್ ರವರು ತನ್ನ ಮಗುವಿಗೆ ಸೌಖ್ಯವಿಲ್ಲದಿದ್ದುದರಿಂದ ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಕಲ್ಲಾಪು ಮೂಡುಪೋಡಿಯಲ್ಲಿರುವ ನಂಬ್ರ 4-142/2, ನೇ ಮನೆಗೆ ಲಾಕ್ ಮಾಡಿ ದೇರಳಕಟ್ಟೆಯಲ್ಲಿರುವ ಪತ್ನಿಯ ತವರು ಮನೆಗೆ ಹೋಗಿದ್ದು, ದಿನಾಂಕ 26/05/2014 ರಂದು 13-00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಎದುರು ಭಾಗದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆಯಲಾಗಿದ್ದು, ಪಿರ್ಯಾದುದಾರರು ಒಳಗೆ ಹೋಗಿ ನೋಡಲಾಗಿ ಮಲಗುವ ಕೋಣೆಯಲ್ಲಿರಿಸಲಾಗಿದ್ದ ಗಾದ್ರೇಜ್ ಕಪಾಟು ತೆರೆದಿದ್ದು, ಅದರಲ್ಲಿರಿಸಿದ್ದ ಸುಮಾರು 1 ½ ಪವನ್ ತೂಕ ಚಿನ್ನದ ಚೈನ್ ಒಂದು, ಎರಡುವರೆ ಪವನ್ ತೂಕದ ಹವಳ ಇರುವ ನೆಕ್ಲೆಷ್ ಒಂದು, ಕಿವಿಗೆ ಧರಿಸುವ ಚಿನ್ನದ ಗುಮಡು ಸುಮಾರು 5 ಗ್ರಾಂ ತೂಕದ್ದು ಒಂದು, ಮತ್ತು TISSOT ಕಂಪೆನಿಯ ಎರಡು ವಾಚ್‌‌ಗಳು, ಹಾಗು OMEGA ವಾಚನ್ನು ಯಾರೋ ಕಳ್ಳರು ಕಳವು ಮಾಡಿ ಹೋಗಿರುವುದು ಕಂಡು ಬಂದಿದ್ದು, ಕಳವಾದ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರುಲಕ್ಷ ಆಗಬಹುದು.

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಸಮೀರ್ ಪಿ.ಟಿ. ರವರು ಚೀಫ್‌‌ ಆಪರೇಟಿಂಗ್‌‌ ಆಫೀಸರ್‌‌ ಆಗಿರುವ ಇಂಡಿಯಾನಾ ಆಸ್ಪತ್ರೆಯಲ್ಲಿ ಲ್ಯಾಬ್‌‌ ಟೆಕ್ನೀಷನ್‌‌ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಅಮಿತ್‌‌ ರೋಯ್‌‌ ಮೊಂತೆರೋ ಮತ್ತು ಅತಾವುಲ್ಲಾ ಹಾಗೂ ಇತರರ ಸಿಬ್ಬಂದಿಗಳು ಅಸಿಸ್ಟೆಂಟ್‌‌ ಮೆನೇಜರ್‌‌ ಆದ ರಾಜೇಶ್‌‌ ಲೋಬೋ ರವರನ್ನು ವರ್ಗಾವಣೆ ಮಾಡಿದ ವಿಚಾರದಲ್ಲಿ ಹೆಚ್ಆರ್‌‌ಡಿ ವಿಭಾಗದಲ್ಲಿ ತಕರಾರು ಎಬ್ಬಿಸಿ ಆಸ್ಪತ್ರೆಯ ಕೆಲಸ ಕಾರ್ಯಗಳಿಗೆ ತೊಂದರೆಪಡಿಸಿ ಹೊರಟು ಹೋಗಿದ್ದು ದಿನಾಂಕ: 22.05.2014 ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಅಮಿತ್‌‌ ರಾಯ್‌‌ ಮೊಂತೇರೋ ಮತ್ತು ಅತಾವುಲ್ಲಾ ಹಾಗೂ ಮತ್ತಿತರ ಸಿಬ್ಬಂದಿಗಳು ಆಸ್ಪತ್ರೆಗೆ ಅಕ್ರಮ ಪ್ರವೇಶ ಮಾಡಿ ಬಲಾತ್ಕಾರವಾಗಿ ಪಂಚಿಂಗ್‌‌ ಮೆಷೀನ್‌‌ನಲ್ಲಿ ಹಾಜರಾತಿಯನ್ನು ಮಾಡಿ ಆಸ್ಪತ್ರೆಯಲ್ಲಿ ಶಾಂತಿಬಂಗ ಉಂಟುಮಾಡಿ ಆಸ್ಪತ್ರೆಯ ಇತರ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು  ಪಿರ್ಯಾದಿದಾರರಿಗೆ ಮತ್ತು ಇತರ ಆಡಳಿತ ಮಂಡಳಿಯ ಅಧಿಕಾರಿಗಳಿಗೆ  ಜೀವಬೆದರಿಕೆ ಒಡ್ಡಿರುತ್ತಾರೆ. ಆರೋಪಿತರ ಈ ಕೃತ್ಯದಿಂದ ಇತರ ಸಿಬ್ಬಂದಿಯವರಿಗೆ ತಪ್ಪು ಮಾಹಿತಿ ನೀಡಿ  ಆಸ್ಪತ್ರೆಯ ವರ್ಚಸ್ಸಿಗೆ ದಕ್ಕೆ ಉಂಟು ಮಾಡಿ  ಸುಮಾರು 3 ಲಕ್ಷ ರೂಪಾಯಿ ನಷ್ಟ ಉಂಟಾಗಿರುತ್ತದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಾರರಾದ ಶ್ರೀ ಸಂದೀಪ್ ಶೆಟ್ಟಿ ರವರ ಅಕ್ಕ ಶ್ರೀಮತಿ ಯೋಗಿತಾ ಶೆಟ್ಟಿ(40) ಎಂಬವರನ್ನು ಸುಮಾರು 15 ವರ್ಷದ ಹಿಂದೆ ಸುರೇಶ್ಶೆಟ್ಟಿ ಎಂಬವರಿಗೆ ಮದುವೆ ಮಾಡಿಕೊಂಡಿದ್ದು ಇವರು ಒರ್ವಮಗನೊಂದಿಗೆ ಅಹಮ್ಮದಾಬಾದ್‌‌ನಲ್ಲಿ ವಾಸವಾಗಿದ್ದು 2013ರ ಡಿಸೆಂಬರ್‌‌ 23 ರಂದು ತಾಯಿ ಮನೆಯಾದ ಬೊಂಡಂತಿಲಕ್ಕೆ ಬಂದಿದ್ದು ವಾಮಂಜೂರಿನಲ್ಲಿ ಅವರ ಪ್ಲ್ಯಾಟ್‌‌ ನಿರ್ಮಾಣವಾಗುತ್ತಿರುವುದರಿಂದ ಯೋಗಿತಾರವು ತಾಯಿ ಮನೆಯಲ್ಲಿ ಇದ್ದವರು ದಿನಾಂಕ: 23.05.2014 ಸಂಜೆ ಸುಮಾರು 4.15 ಗಂಟೆಗೆ ನೀರುಮಾರ್ಗಕ್ಕೆ  ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಬೊಂಡಂತಿಲದ ತಾಯಿ ಮನೆಯಿಂದ ಹೋದವರು ಸಂಬಂಧಿಕರ ಮನೆಗೂ ಹೋಗದೆ ತಾಯಿ ಮನೆಗೂ ವಾಪಾಸ್ಸು ಬಾರದೇ ಗಂಡನ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಯೋಗಿತಾ ಶೆಟ್ಟಿ ರವರ ಚಹರೆ : ಪ್ರಾಯ 40 ವರ್ಷ, ಎತ್ತರ: 5 9'', ಗೋಧಿ ವರ್ಣ, ಕುತ್ತಿಗೆಯಲ್ಲಿ ಕಪ್ಪು ಮಚ್ಚೆ ಇದೆ. ಕುತ್ತಿಗೆಯಲ್ಲಿ  ಸಣ್ಣ ಕರಿಮಣಿ ಸರ, ಬಳೆಗಳು, ಕಾಲುಂಗುರ, ಧರಿಸಿದ್ದು, ಜೀನ್ಸ್‌‌ ಪ್ಯಾಂಟ್‌‌‌ & ಬಿಳಿ ಶರ್ಟ್ಧರಿಸಿದ್ದರು.

No comments:

Post a Comment