Friday, May 16, 2014

Daily Crime Reports 16-05-2014

ದೈನಂದಿನ ಅಪರಾದ ವರದಿ.

ದಿನಾಂಕ 16.05.201415:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

4

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

3

ರಸ್ತೆ ಅಪಘಾತ  ಪ್ರಕರಣ

:

14

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಡಾ. ಕುಮುದಾ ರವರು 1 ನೇ ಆರೋಪಿ ಅರವಿಂದ್ ರಾವ್ ಎಂಬವರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಿನಾಂಕ 06-12-2000 ರಂದು ವೆಂಕಟರಮಣ ದೇವಸ್ಥಾನದಲ್ಲಿ ಹಿಂದೂ ಸಂಪ್ರಾದಾಯದಂತೆ ಮದುವೆಯಾಗಿ ಗಂಡನ ಮನೆಯಾದ ಪಿ.ವಿ.ಎಸ್ ಕೋಡಿಯಲ್ ಬೈಲ್ ನಲ್ಲಿ ಅತ್ತೆ ಶ್ರೀಮತಿ ರಾವ್ ಮಾವ ಹೆಚ್.ಟಿ ಜಯರಾಮ್ ರವರೊಂದಿಗೆ ವಾಸವಾಗಿರುತ್ತಾರೆ. ಇವರಿಗೆ 10 ವರ್ಷದ ಗಂಡು ಮಗು ಇರುತ್ತಾನೆ. 2009 ರಲ್ಲಿ ಪಿರ್ಯಾದಿದಾರರು ಎಂ.ಡಿ.ಎಸ್ ಪಧವಿ ಪಡೆಯಲು 1 ನೇ ಆರೋಪಿ ಹಲವು ಬ್ಯಾಂಕ್ ಗಳಿಂದ ಪಿರ್ಯಾದಿಯ ಹೆಸರಿನಲ್ಲಿ ಎಜ್ಯುಕೇಶನ್ ಲೋನ್ ತೆಗೆದು ವಿದ್ಯಾಭ್ಯಾಸ ಮುಗಿದ 1 ವರ್ಷದ ನಂತರ ಕಂತು ಪಾವತಿ ಮಾಡಬೇಕಾಗಿದ್ದು, ಕಂತು ಪಾವತಿ ಮಾಡದೇ ಇದ್ದಾಗ ಪಿರ್ಯಾದಿದಾರರು ಎಷ್ಟೇ ಕೇಳಿಕೊಂಡರೂ ಆರೋಪಿಯು ಕಂತು ಪಾವತಿ ಮಾಡದೇ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಅಪ್ಪನ ಮನೆಯಿಂದ ಹಣ ತಂದು ಸಾಲ ಕಟ್ಟು, ವರದಕ್ಷಿಣೆ ಹೇಗೂ ಕೊಡಲಿಲ್ಲ, ನಿನ್ನ ತಂದೆಗೆ ಹೇಳಿ ಬೇರೆ ಮನೆ ಮಾಡಿ ನನ್ನ ಮನೆಯಿಂದ ಹೋಗು ಎಂದು 1 ಮತ್ತು 2 ನೇ ಆರೋಪಿ ಶ್ರೀಮತಿ ರಾವ್ ರವಗಳು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದು, ಮಗುವಿನ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡದೆ, ಮಗುವಿನ ಹೋಂ ವರ್ಕ್ ಮಾಡಿಸದೇ, ಹೊಡೆದು, ಬೈದು ತೊಂದರೆ ಕೊಡುತ್ತಿದ್ದರು. ದಿನಾಂಕ 29-03-2014 ರಂದು ಮಗನೊಂದಿಗೆ ತಂದೆ ಮನೆಗೆ ಹೋದಾಗ ಆರೋಪಿಗಳು ಮನೆಯೊಳಗೆ ಪ್ರವೇಶಿಸದಂತೆ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಹಾಕಿ ಇಂಜೆಕ್ಷನ್ ಆದೇಶ ಕಳುಹಿಸಿರುತ್ತಾರೆ, ದಿನಾಂಕ 13-05-2014 ರಂದು ಸಂಜೆ 4.15 ಗಂಟೆಗೆ ಪಿರ್ಯಾದಿದಾರರು ಪಿ.ವಿ.ಎಸ್ ಬಳಿ ಕಾಲೇಜ್ ಬಸ್ಸಿನಿಂದ ಇಳಿದಾಗ ಪಿರ್ಯಾದಿಯ ಗಂಡ ಎದುರು ಬಂದು ನಿನ್ನನ್ನು ಮುಗಿಸಿ ಮಗುವನ್ನು ನನ್ನ ವಶಕ್ಕೆ ಪಡೆದುಕೊಳ್ಳುತ್ತೇನೆಂದು ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಗ್ರೇಸಿ ಗೊನ್ಸಾಲಿಸ್ ರವರು ಸುಮಾರು 2 ವರ್ಷಗಳಿಂದ ಮಂಗಳೂರಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 15-05-2014 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರಿಗೆ ಶ್ರೀಮತಿ ಆನಂದಿ ಎಂಬುವವರು ಫೋನ್ ಮಾಡಿ ಸ್ಟೇಟ್ ಬ್ಯಾಂಕ್ ಬಳಿ ಇರುವ ಮೀನಿನ ಮಾರುಕಟ್ಟೆಯಲ್ಲಿ ಹೆಣ್ಣು ಮಗು ಮಾರಾಟ ಮಾಡುವ ಬಗ್ಗೆ ತಿಳಿಸಿದ್ದು, ಪಿರ್ಯಾದಿದಾರರು ಅವರ ಸಿಬ್ಬಂದಿಯವರಾದ ಕು ರೂಪಾ ಮತ್ತು ಸುಮಂಗಳ ಎಂಬುವವರ ಜೊತೆ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಮಗುವನ್ನು ಕೊಟ್ಟಾಗಿದ್ದು, ಹುಡುಕಿದಾಗ ಮಗುವಿನ ತಂದೆ ರವಿ ಎಂಬುವವರು ಇದ್ದು, ಯಾವುದೋ ಒಂದು ಮಹಿಳೆಯೊಂದಿಗೆ ರಿಕ್ಷಾದಲ್ಲಿ ಕುಳಿತು ಹೊರಡುವ ಸಂದರ್ಭದಲ್ಲಿದ್ದು, ತಡೆದಾಗ ಮಹಿಳೆ ತಪ್ಪಿಸಿಕೊಂಡಿದ್ದು, ಮಗು ಹಾಗೂ ಆರೋಪಿ ರವಿ ಎಂಬುವವರನ್ನು ಠಾಣೆಗೆ ಕರೆತಂದಿರುತ್ತಾರೆ.

 

3.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-05-2014 ರಂದು ಸಂಜೆ 04:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿನಾಯಕ ಭಟ್ ರವರು ಕೊಟ್ಟಾರ ಚೌಕಿಯಲ್ಲಿರುವ ಜಗತ್ ಪಾಲ್ ಎಂಬ ಅಂಗಡಿಯಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿರುವಾಗ ಅಲ್ಲಿಗೆ ಬಂದ ಆರೋಪಿ ಉಲ್ಲಾಸ್ ಶೆಟ್ಟಿಯು ಪಿರ್ಯಾದಿದಾರರಲ್ಲಿ ಹಿಂದೆ ಸಾಲವಾಗಿ ನೀಡಿದ್ದ 500/- ರೂಪಾಯಿಯನ್ನು ವಾಪಾಸ್ಸು ಕೊಡು ಎಂದು ಪಿರ್ಯಾದಿಯಲ್ಲಿ ಕೇಳಿದಾಗ ಪಿರ್ಯಾದಿಯು ಈಗ ಹಣ ಇಲ್ಲ ನಂತರ ಕೊಡುತ್ತೇನೆ ಎಂದಾಗ ಕೋಪಗೊಂಡ ಆರೋಪಿತನು ಪಿರ್ಯಾದಿದಾರರಿಗೆ ಅವಾಚ್ಯಾ ಶಬ್ದಗಳಿಂದ ಬೈದು ಪಿರ್ಯಾದಿಯಲ್ಲಿದ್ದ ಮೊಬೈಲ್ ಹಾಗೂ 300/- ರೂಪಾಯಿ ಹಣವನ್ನು ತೆಗೆದುಕೊಂಡು ಆರೋಪಿತನು ಬಂದ ಮೊಟಾರ್ ಸೈಕಲ್ನಲ್ಲಿ ಪಿರ್ಯಾದಿದಾರರನ್ನು ಕುಳ್ಳಿರಿಸಿಕೊಂಡು ಬೆಸೆಂಟ್ ಜಂಕ್ಷನ್ನಲ್ಲಿರುವ ಸೈಬರ್ಶಾಪ್ಗೆ ಕರೆದುಕೊಂಡು ಹೋಗಿ ಕೆನ್ನೆಗೆ ಕೈಯಿಂದ ಹೊಡೆದು ಅಲ್ಲಿದ್ದ ಪೇಪರ್ ವೈಟ್ನಿಂದ ಎದೆಯ ಭಾಗಕ್ಕೆ ಹಲ್ಲೆ ಮಾಡಿ ಹಣವನ್ನು ಕೊಡದಿದ್ದರೆ ಕೈಕಾಲು ಮುರಿಯುತ್ತೇನೆಂದು ಬೆದರಿಕೆ ಹಾಕಿರುವುದಾಗಿದೆ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14/05/2014 ರಂದು ಪಿರ್ಯಾದುದಾರರಾದ ಶ್ರೀ ಗಣೇಶ್ ಮುರುಗನ್ ರವರು ತಮ್ಮ ಬಾಬ್ತು KA-19-EE-5975ನೇ ನಂಬ್ರದ ಸ್ಕೂಟರನ್ನು ಮಂಗಳೂರು ನಗರದಿಂದ ಪಣಂಬೂರು ಕಡೆಗೆ ಹೋಗುವರೇ ಕೊಟ್ಟಾರ ಚೌಕಿಯಿಂದ ಸರ್ವೀಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಪಿರ್ಯಾದುದಾರರ ಎದುರಿನಿಂದ ಎಲಿಯಾಸ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ KA-34-5080ನೇ ನಂಬ್ರದ ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡುವರೇ ಪಿರ್ಯಾದುದಾರರು ಸ್ಕೂಟರಿನ ಹಾರ್ನ್ ಹಾಕಿದ ಮೇರೆಗೆ ಟಿಪ್ಪರ್ ಲಾರಿಯನ್ನು ಅದರ ಚಾಲಕರು ರಸ್ತೆಯ ಎಡಬದಿಗೆ ಚಾಲಯಿಸಿದಾಗ ಪಿರ್ಯಾದುದಾರರು ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿ ಪಾಸ್ ಆಗುತ್ತಿದ್ದಂತೆ ಟಿಪ್ಪರ್ ಲಾರಿಯನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಒಮ್ಮೇಲೆ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೂಟರ್ ಲಾರಿಯ ಎದುರು ಬಲಭಾಗದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಪಿರ್ಯಾದುದಾರರ ಎದೆಗೆ ಗುದ್ದಿದ ಗಾಯ, ಎಡತೊಡೆಗೆ, ಜನನಾಂಗಕ್ಕೆ ರಕ್ತ ಗಾಯಗೊಂಡವರನ್ನು ಸದ್ರಿ ಟಿಪ್ಪರ್ ಚಾಲಕರು ಚಿಕಿತ್ಸೆಯ ಬಗ್ಗೆ ಪಣಂಬೂರು NMPT ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುವುದಾಗಿದೆ.

 

5.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾ ಕು. ನಾಗಶ್ರೀ ರವರು  ಮನೆಯಲ್ಲಿ ತಂದೆ ತಾಯಿ ತಂಗಿಯಂದಿರು, ತಮ್ಮನ ಜೊತೆಯಲ್ಲಿ ವಾಸ್ತವ್ಯವಿದ್ದು ದಿನಾಂಕ 14-05-2014 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ಮನೆಯಲ್ಲಿ ತಾಯಿ ಇಲ್ಲದೇ ಇದ್ದು ತಂಗಿಯಂದಿರು ಮತ್ತು ತಮ್ಮನಲ್ಲಿ ವಿಚಾರಿಸಿದಾಗ ತಮ್ಮ ರಘುನಂದನು ದಿನಾಂಕ 14-05-2014 ರಂದು ಬೆಳಿಗ್ಗೆ 05-30 ಗಂಟೆಗೆ ತಾಯಿ ಸೀರೆ ಉಡುತ್ತಿದ್ದು ತಾನು ತಾಯಿಯಲ್ಲಿ ದೂರ ಹೋಗುತ್ತಿದ್ದೀಯಾ ಅಮ್ಮ ಎಂದು ಕೇಳಿದಾಗ ನಾನು ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದ್ದು ಅದರಂತೆ ದಿವಸ ಬೆಳಿಗ್ಗೆ  10-00 ಗಂಟೆಗೆ ಐಡಿಯಲ್ ಕಂಪೆನಿಯಲ್ಲಿ ಕೆಲಸ ಮಾಡುವ ಪ್ರೇಮ ಎಂಬವರು ತಮ್ಮ ಮನೆಗೆ ಬಂದು ನಿನ್ನ ತಾಯಿ ದಿವಸ ಕೆಲಸಕ್ಕೆ ಬಂದಿಲ್ಲ ಎಂದು ತಿಳಿಸಿದ್ದು ನಾವು ಗಾಬರಿಗೊಂಡು ಅಕ್ಕಪಕ್ಕ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. 

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.05.2014 ರಂದು ಸಂಜೆ ಸುಮಾರು 5.00 ಗಂಟೆಗೆ ಡೆರಿನ್ ಕ್ರಿಸ್  ಮೊಂತೆರೋ ಎಂಬುವವರು ಸ್ಕೂಟರ್ ನಂಬ್ರ KA19-EJ-3091 ರಲ್ಲಿ ಸವಾರಾಗಿದ್ದುಕೊಂಡು ಹಿಂಬದಿ ಸವಾರಾಗಿ ಡೆರ್ವಿನ್ ಎಂಬುವವರನ್ನು ಕುಳ್ಳಿರಿಸಿಕೊಂಡು ಕೋಟೆಚೆನ್ನಯ್ಯ ಸರ್ಕಲ್ ಕಡೆಯಿಂದ ಕಂಕನಾಡಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ವೆಲೆನ್ಸಿಯಾ ಸರ್ಕಲ್ ಬಳಿಯಿರುವ ಕುಟುಂಬ ಸೇವಾ ಸಂಸ್ಥೆಯ  ಎದುರು  ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸವಾರ ರಿಬ್ಬರೂ ರಸ್ತೆಗೆ ಬಿದ್ದು ರಕ್ತಗಾಯಗೊಂಡು  ಯುನಿಟಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

7.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13/05/2014 ರಂದು ಸಂಜೆ ಸುಮಾರು 16:15 ಗಂಟೆಗೆ ಬಸ್ಸು ನಂಬ್ರ KL-15-8961 ನೇದರ ಚಾಲಕ ಬಲ್ಮಠ ಕಡೆಯಿಂದ ಜ್ಯೋತಿ ಸರ್ಕಲ್  ಕಡೆಗೆ ಅತೀ ವೇಗ ಮತ್ತು  ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಜ್ಯೋತಿ ಸರ್ಕಲ್ ಬಳಿ ತಲುಪುವಾಗ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ನಂಬ್ರ KA-19-EH-3971 ನೇ ದನ್ನು ಒವರ್ ಟೆಕ್ ಮಾಡುವ ಸಮಯ ಬಸ್ಸಿನ ಮುಂಭಾಗದ ಎಡಭಾಗದ ಬಾಡಿ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರನಲ್ಲಿದ್ದ ಸವಾರಳು ಮತ್ತು ಹಿಂಬದಿಯ ಸವಾರಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೂಟರಿನ ಸವಾರಳಾದ ಹರಿಣಾಕ್ಷಿಗೆ ಎಡತೋಳಿಗೆ ಮೂಳೆ ಮುರಿತದ ಗಾಯವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಹಿಂಬದಿ ಸವಾರಳಾದ ಪಿರ್ಯಾದುದಾರರಿಗೆ ಎಡಕೈಯ ಮೋಣಗಂಟಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಪಡೆದು ಕೊಂಡಿರುವುದಿಲ್ಲ.

 

8.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11/05/2014 ರಂದು ರಾತ್ರಿ ಸುಮಾರು 22:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಶಂಕರ್ ರವರು ತನ್ನ ಊರಾದ ಗುಲ್ಭರ್ಗಾಕ್ಕೆ ಹೋಗುವರೇ KSRTC ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸಿನ ಡ್ರೈವರುಗಳಲ್ಲಿ ಗುಲ್ಭರ್ಗಾಕ್ಕೆ ಹೋಗುವ ಬಸ್ಸಿನ ಬಗ್ಗೆ ವಿಚಾರಿಸಿಕೊಂಡಿರುವಾಗ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ಸು ನಂಬ್ರ KA-01-F-8533 ನೇ ದನ್ನು ಅದರ ಚಾಲಕ ಚಾಲು ಸ್ಥಿತಿಗೆ ತಂದು ಒಮ್ಮೆಲೆ ನಿರ್ಲಕ್ಷತನದಿಂದ ಚಲಾಯಿಸಿದಾಗ ಬಸ್ಸಿನ ಮುಂಭಾಗದ ಎಡಭಾಗದ ಚಕ್ರ ಫಿರ್ಯಾದುದಾರರ ಕಾಲಿಗೆ ಡಿಕ್ಕಿ ಮಾಡಿದ ಪರಿಣಾಮ ಬಸ್ಸು ನಿಲ್ದಾಣದ ಗ್ರೌಂಡಿನಲ್ಲಿ ಬಿದ್ದು ಎರಡೂ ಕಾಲಿನ ಪಾದದ ಚರ್ಮ ಕಿತ್ತು ಹೋಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. 

 

9.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.05.2014 ರಂದು 19.40 ಗಂಟೆಗೆ ಕಾರು ನಂಬ್ರ KA-04-MB-9585 ನ್ನು ಅದರ ಚಾಲಕ ಮಾರ್ಕೆಟ್ ರಸ್ತೆ ಕಡೆಯಿಂದ ಹಂಪನಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾಗಿದೆ.

 

10.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.5.2014 ರಂದು ರಾತ್ರಿ 8.00 ಗಂಟೆ   ಸಮಯಕ್ಕೆ  ಫಿರ್ಯಾದಿದಾರರಾದ ಶ್ರೀಮತಿ ಜಯಂತಿ ಕೆ ಕಾಮತ್ ಪ್ರಾಯ 71 ವರ್ಷ  ಎಂಬವರು  ಮಂಗಳೂರು ತಾಲೂಕು ಮಾನಂಪಾಡಿ ಗ್ರಾಮದ ವೆಂಕಟರಮಣ ದೇವಸ್ಥಾನದ ಬಳಿ ಇರುವ ಅನ್ನಪೂರ್ಣ  ಹಾಲ್   ಬದಿಯಲ್ಲಿರುವ  ಅಕ್ಷಯ್  ಮಾರ್ಗದ ಬಳಿಯಲ್ಲಿ  ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ  ಮುಗಿಸಿಕೊಂಡು ವಾಪಾಸು ತನ್ನ  ತಮ್ಮ ನಾರಾಯಣ  ಶೆಣೈರವರ  ಮನೆಯ ಕಡೆಗೆ ತನ್ನ ಮಾವನ  ಹೆಣ್ಣು ಮಕ್ಕಳೊಂದಿಗೆ  ನಡೆದುಕೊಂಡು ಹೋಗುತ್ತಿರುವಾಗ  ಮೋಟಾರ್ ಸೈಕಲಿನಲ್ಲಿ  ಬಿಳಿ ಬಣ್ಣದ  ಟಿ ಶರ್ಟ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಒಬ್ಬ ಅಪರಿಚಿತ ವ್ಯಕ್ತಿ ಫಿರ್ಯಾದಿದಾರರ  ಹಿಂದಿನಿಂದ ಮುಂಭಾಗಕ್ಕೆ ಹೋಗಿ ಮುಂದುಗಡೆ ಹೋಗಿ ವಾಪಾಸು ತಿರುಗಿಸಿ ಬಂದು ಫಿರ್ಯಾದಿದಾರರ ಹಿಂದುಗಡೆ ಮೋಟಾರ್ ಸೈಕಲನ್ನು ಚಾಲು ಸ್ಥಿತಿಯಲ್ಲಿ ಇರಿಸಿ ಫಿರ್ಯಾದಿದಾರರ ಬಳಿ ಬಂದವನೇ  ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ   ಸುಮಾರು 10 ಪವನ್  ತೂಕದ ಅಂದಾಜು 2,40,000/- ಮೌಲ್ಯದ  2 ಬಂಗಾರದ  ಸರಗಳನ್ನು ಎಳೆದು ಸುಲಿಗೆ  ಮಾಡಿಕೊಂಡು ಹೋಗಿರುವುದಾಗಿದೆ.

 

11.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 13-05-2014 ರಂದು 20-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಪೂರ್ಣ ಚಂದು ರವರು ತನ್ನ ಬಾಬ್ತು ಡಿಸ್ಕವರಿ ಮೋಟಾರ್ ಸೈಕಲ್ ನಂಬ್ರ ಕೆಎ-25-ಇಪಿ-0339 ನೇ ದರಲ್ಲಿ ಹಾಸನದಿಂದ ಕೆಲಸ ಮುಗಿಸಿ ಕಾರ್ಕಳ ಕಡೆಗೆ ಬರುತ್ತಾ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದ ನೆಲ್ಲಿಕಾರು ಜಂಕ್ಷನ್ ಬಳಿ ತಲುಪುವಾಗ್ಯೆ ಎದುರುನಿಂದ ಅಂದರೆ ಕಾರ್ಕಳ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ-55-2489 ನೇ ಸ್ವರಾಜ್ ಮಜ್ಡಾ ಮಿನಿ ಬಸ್ಸನ್ನು ಅದರ ಚಾಲಕ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ತೀರಾ ಬಲಬದಿಯಲ್ಲಿ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದು, ಅವರ ಬಲಕಾಲಿನ ಮೇಲೆ ಬಸ್ಸಿನ ಹಿಂದಿನ ಚಕ್ರ ಹರಿದು ಬಲಕಾಲಿನ ತೊಡೆಯ ಭಾಗ ಹಾಗೂ ಕೋಲು ಕಾಲು ಮುರಿತಕ್ಕೊಳಗಾಗಿದ್ದು, ಬಲ ಕೈ ಅಂಗೈಯ ಹಿಂಬದಿ ಭಾಗಕ್ಕೂ ಗುದ್ದಿದ ಗಾಯವಾಗಿದ್ದು,  ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

12.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಸುಜಾತ ಎಂಬವರು ಅರಣ್ಯ ಇಲಖೆಯಲ್ಲಿ ಉದ್ಯೋಗದಲ್ಲಿದ್ದು, ದಿನಾಂಕ 10-05-2014 ಬೆಳಿಗ್ಗೆ 08-00 ಗಂಟೆಗೆ ತನ್ನ ಬೊಂದೆಲ್ ನಲ್ಲಿರುವ ಕೆ.ಎಫ್.ಡಿ.ಸಿ ಕ್ವಾಟ್ರಸ್ಗೆ ಬೀಗ ಹಾಕಿ ತೊಕ್ಕೊಟ್ಟಿನಲ್ಲಿದ್ದ ತಾಯಿ ಮನೆಗೆ ಹೋಗಿದ್ದು, ದಿನಾಂಕ 12-05-2014 ಸಂಜೆ 06-30 ಗಂಟೆಗೆ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ 3 ಜೊತೆ ಬಂಗಾರದ ಬೆಂಡೋಲೆ , 4 ಗ್ರಾಂ ತೊಕದ ಹ್ಯಾಂಗಿಂಗ್, 4 ಗ್ರಾಂ ತೂಕ ಮಾಟಿ, ತಲಾ 4 ಗ್ರಾಂ ತೂಕದ ಎರಡು ಉಂಗುರು, 8 ಜೊತೆ ಬೆಳ್ಳಿಯ ಕಾಲುಗೆಜ್ಜೆ, ಚಿಲ್ಲರೆ ಹಣ ಸುಮಾರು 2000, ಮತ್ತು ತಾಮ್ರದ ಹಂಡೆ, ಹಾಗೂ ತಾಮ್ರದ ಇತರ ಸೊತ್ತು ಅಲ್ಲದೇ ನೆರೆಯವಾಸಿ ಕೊರಗಪ್ಪ ಮೂಲ್ಯ ಎಂಬವರ ಮನೆಯ ತಾಮ್ರದ ಹಂಡೆ ಒಟ್ಟು 50.000 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

13.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/05/2014 ರಂದು 00-45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ನವೀನ್ ಶ್ರೀಯಾನ್ ರವರು ತನ್ನ ಬಾಬ್ತು ಆಟೋ ರಿಕ್ಷಾದಲ್ಲಿ ಚಾಲಕ ವೃತ್ತಿ ಮಾಡಿ ತನ್ನ ಮನೆಯಾದ ಮೀನಕಳಿಯಾಕೆಂದು ಬೈಕಂಪಾಡಿಯಿಂದ ರಿಕ್ಷಾದಲ್ಲಿ ಮಿನಕಳಿಯಾ ಕೂರಿಕಟ್ಟೆ ರಸ್ತೆಯ ಗಣೇಶ ಶೀಫಿಂಗ್ ಗೋಡಾವುನ ಬಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುತ್ತಿದಂತೆ ಓರ್ವ ವ್ಯಕ್ತಿ ರಸ್ತೆ ಬದಿ ಬಿದ್ದಿದ್ದು ಅದೇ ಸಮಯಕ್ಕೆ ಅಲ್ಲಿ ಬಂದ ಇನ್ನೊರ್ವ ರಿಕ್ಷಾ ಚಾಲಕ ಆನಂದ ರವರು ಜೊತೆಯಲ್ಲಿ ಬಿದ್ದ ವ್ಯಕ್ತಿಯನ್ನು ನೋಡಲಾಗಿ ಪಿರ್ಯಾದಿಯ ಸಂಬಂದಿ ಮತ್ತು ಊರಿನ ಮುಖ್ಯಸ್ಥ ಗಂಗಾದರ ಪಾಂಗಳ ರವರರಾಗಿದ್ದು ತಲೆಯಿಂದ ಗಂಭೀರ ಗಾಯಗೊಂಡು ಪ್ರಜ್ಞಹೀನ ಸ್ಥಿತಿಯಲ್ಲಿ ಬಿದ್ದಿದ್ದು ಅಲ್ಲಿ ಸ್ವಲ್ಪ ದೂರದಲ್ಲಿ ಶ್ವಾಲ್ ಒಂದು ಬಿದ್ದಿರುವುದಾಗಿಯೂ ಅಪಘಾತ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಅಪಘಾತಕ್ಕಿಡಾದ ಗಂಗಾಧರ ಪಾಂಗಲ ರವರ ಹೋಂಡಾ ಆ್ಯವಿಎಟ್ರ್ ಕೆ, 19 ಇಹೆಚ್ 7393 ನೇ ವಾಹನ ಸಂಪೊರ್ಣ ಜಖಂಗೊಂಡು ರಸ್ತೆಯ ಪಶ್ಚಿಮ ಬದಿಯಲ್ಲಿ ಬಿದ್ದಿದ್ದು. ಅಪಘಾತ ಸ್ಥಳದಿಂದ ಹೋಂಡಾ ಆ್ಯವಿಎಟ್ರ್ ಬಿದ್ದ ಸ್ಥಳದ ತನಕ ರಸ್ತೆಯಲ್ಲಿ ವಾಹನವನ್ನು ಅಪಘಾತಕೊಳಿಸಿ ಎಳೆದುಕೊಂಡು ಹೋದ ಬಗ್ಗೆ ಕೂರುಹುಗಳು ಕಂಡು ಬರುವುದಾಗಿ. ಅಲ್ಲದೇ ಅಪಘಾತ ನಡೆಸಿದ ವಾಹನದ ಕೇಲವು ಬಿಡಿ ಭಾಗಗಳು ರಸ್ತೆಯಲ್ಲಿ ಬಿದ್ದಿರುವುದಾಗಿಯು. ಗಂಬೀರ ಗಾಯಗೊಂಡ ಗಂಗಾಧರ ಪಾಂಗಲ್ ರವರನ್ನು ಆ್ಯಂಬುಲೆನ್ಸ್ ಒಂದರಲ್ಲಿ ಕೊಂಡು ಹೋಗಿ ವೈದ್ಯರಲ್ಲಿ ಪರಿಕ್ಷೀಸಿದರಲ್ಲಿ ಗಂಗಾದರ ಪಾಂಲಗ ಮೃತಪಟ್ಟಿದ್ದು ಯಾವುದೋ ವಾಹನದ ಚಾಲಕ ದಿನಾಂಕ 15/05/2014 00-30 ಗಂಟೆಯಿಂದ 00-45 ಗಂಟೆಯ ಮಧ್ಯ ಮೀನಕಳಿಯಾ ಕೂರಿಕಟ್ಟೆ ರಸ್ತೆಯಲ್ಲಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಹೋಂಡಾ ಆ್ಯವಿಎಟ್ರ್ ಗೆ ಹಿಂದಿನಿಂದ ಡಿಕ್ಕಿ ಉಂಟುಮಾಡಿ ವಾಹನವನ್ನು ನಿಲ್ಲಿಸದೇ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ  ಪರಾರಿಯಾಗಿರುತ್ತಾರೆ.

 

14.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಕೆ ನಾರಾಯಣ ಸಾಲ್ಯಾನ್ ವಯೋವೃದ್ದರಾಗಿದ್ದು, ಕೊಡಿಯಾಲಬೈಲ್ ಗ್ರಾಮದ ಸರ್ವೆ ನಂಬ್ರ 1529/1ಪಿ ಯಲ್ಲಿ 35 ಸೆಂಟ್ಸ್ ಸ್ವಂತ ಜಮೀನನ್ನು ಹೊಂದಿದ್ದು, ನೊಂದಾಯಿತ ಕ್ರಯ ಪತ್ರ ನಂಬ್ರ 144/68-69 ರಂತೆ ಖರೀದಿ ಮಾಡಿದ ಜಮೀನಾಗಿದ್ದು, ಫಿರ್ಯಾದಿದಾರರ ಸ್ವಾಧೀನದಲ್ಲಿರುತ್ತದೆ. ಜಮೀನಿನ ಕೈ ಬರಹದ ಪಹಣಿ ಮತ್ತು ಕಂಪ್ಯೂಟರೀಕೃತ ಪಹಣಿಯಲ್ಲಿ ಫಿರ್ಯಾದಿದಾರರ ಹೆಸರು ದಾಖಲಾಗಿರುತ್ತದೆ, ಆದರೆ ವಿಸ್ತೀರ್ಣ ದಾಖಲಾಗಿರುವುದಿಲ್ಲ. ಜಮೀನಿನ ವಿಸ್ತೀರ್ಣ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದ್ರಿ ಪ್ರಕರಣವು ತನಿಖೆಯಲ್ಲಿರುವಾಗ್ಯೆ ಆರೋಪಿ ಚಿತ್ತರಂಜನ್ ಇವರು ದಿನಾಂಕ 10-9-2011 ರಂದು ವಕೀಲರ ಮುಂದೆ ಒಂದು ಅರ್ಜಿಯನ್ನು ಸಲ್ಲಿಸಿದ್ದು, ಫಿರ್ಯಾದಿದಾರರಿಗೆ ಹಾಗೂ ಪ್ರಾಧಿಕಾರಕ್ಕೆ ವಂಚನೆ ಮಾಡುವ ದುರುದ್ದೇಶದಿಂದ ಪ್ರಕರಣಕ್ಕೆ ಸಂಬಂದಪಟ್ಟ ಜಮೀನು ತಂದೆ ನಾರಾಯಣ ಎಂಬವರಿಗೆ ಸೇರಿದ್ದೆಂದು ಪ್ರತಿಪಾದಿಸುತ್ತಿದ್ದು, ಆರೋಪಿಯ ತಂದೆ ನಾರಾಯಣ ಎಂಬವರು ಮೃತ ಪಟ್ಟಿದ್ದು, ಮೃತ ಪಟ್ಟ ಬಗ್ಗೆ ಮರಣ ದಾಖಲೆ ಪತ್ರವನ್ನು ಕೂಡಾ ಹಾಜರುಪಡಿಸಿರುತ್ತಾರೆ. ಆರೋಪಿಯು ಫಿರ್ಯಾದಿದಾರರಿಗೆ ಸೇರಿದ ಜಮೀನನ್ನು ವಂಚನೆ ಮಾಡಿ ಅಕ್ರಮ ಎಸಗುವ ಉದ್ದೇಶದಿಂದ ಹಾಗೂ ಜಮೀನನ್ನು ಲಪಟಾಯಿಸುವ ಸಲುವಾಗಿ ಮಾನ್ಯ ಪ್ರಾಧಿಕಾರದ ಮುಂದೆ ದಿಕ್ಕು ತಪ್ಪಿಸುವ ಮತ್ತು ಉದ್ದೇಶಪೂರ್ವಕವಾಗಿ ಸುಳ್ಳು ಸಾಧನೆಯನ್ನು ಮಾಡುತ್ತಿರುವುದಾಗಿದೆ.

 

15.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-05-2014 ರಂದು ತನ್ನ ಕೆಎ 19 ಇಎ 7950 ನಂಬ್ರದ ಮೋಟಾರು ಸೈಕಲ್ ನಲ್ಲಿ ಪಿರ್ಯಾದಿದಾರರಾದ ಶ್ರೀ ರಾಜಾರಾಮ ಭಟ್ ರವು ಮಂಗಳೂರಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ, ಸಂಜೆ ಸುಮಾರು 4-30 ಗಂಟೆಗೆ ಮಂಗಳೂರು ತಾಲೂಕಿನ , ಮೂಳೂರು ಗ್ರಾಮದ ಗುರುಪುರ ಅಣೆ ಬಳಿ ತನ್ನ ಎದುರಿನಿಂಧ ಕೆಎ 03 ಎಂಎಫ್ 9945 ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ತನ್ನ ಬಲಕಾಲಿನ ಎರಡು ಬೆರಳುಗಳಿಗೆ ಗಾಯವಾಗಿದ್ದು, ಬೆರಳುಗಳ ಪೈಕಿ ಒಂದು ತುಂಡಾಗಿರುತ್ತದೆ.   

 

16.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ :29-04-2007  ರಂದು   ಪಿರ್ಯಾದಿದಾರರಾದ ಶ್ರೀಮತಿ ದಿವ್ಯಾ ಅಮೀನ್ ರವರು ಹಿಂದೂ ಸಂಪ್ರದಾಯದಂತೆ  ಕಟೀಲು ಶ್ರೀ ದುರ್ಗಾ ಪರಮೇಶ್ವರಿ  ದೇವಳದಲ್ಲಿ  ಆರೋಪಿ ಸಂತೋಷ್ ನನ್ನು ಮದುವೆ ಮಾಡಿಕೊಂಡಿದ್ದು, ಮದುವೆ ಸಮಯ ವದುವಿಗೆ 80 ಪವನ್  ಬಂಗಾರದ ಒಡವೆಗಳನ್ನೂ  ಹಾಗೂ ವರನಿಗೆ   40 ಗ್ರಾಂ ಬಂಗಾರದ ಒಡವೆಗಳನ್ನು ಹಾಕುವಂತೆ ಸಂತೋಷ್  ಹಾಗೂ ಆತನ ತಂದೆ ಚಂದಪ್ಪ ತಾಯಿ ಸುಮಿತ್ರ ಮತ್ತು ನಾದಿನಿ   ಬೇಡಿಕೆಯಿತ್ತು,   ಚಿನ್ನಾಭರಣವನ್ನು ಹಾಗೂ ರೂಪಾಯಿ:2 ಲಕ್ಷ ನಗದನ್ನು  ಮದುವೆಯ ಸಮಯ ಪಡೆದುಕೊಂಡು ಮದುವೆಯ ಖರ್ಚುಗಳನ್ನು ಪಿರ್ಯಾದುದಾರರ  ಮನೆಯವರಿಂದಲೇ ಮಾಡಿಸಿಕೊಂಡು ಮದುವೆಯಾಗಿ  ಗಂಡನ ಮನೆಗೆ ಹೋದ ಪಿರ್ಯಾದುದಾರ ರೊಂದಿಗೆ ಸರಿಯಾಗಿ ದಾಂಪತ್ಯ ಜೀವನ ನಡೆಸದೆ ತಡರಾತ್ರಿವರೆಗೆ ಯಾರೊಂದಿಗೊ ಪೋನಿನಲ್ಲಿ ಮಾತನಾಡುತ್ತ ಇದ್ದವನಲ್ಲಿ ಪಿರ್ಯಾದುದಾರರು  ಕೇಳಿದರೆ  ನೀವು ನಮ್ಮಷ್ಟು ಸ್ಥಿತಿವಂತರಲ್ಲ, ನಾವು ಬಯಸಿದಷ್ಟು  ವರದಕ್ಷಿಣೆ ನಿಮ್ಮಿಂದ ನಮಗೆ ಸಿಕ್ಕಿಲ್ಲ, ನಿನ್ನೊಂದಿಗೆ  ಜೀವನ ಮಾಡಲು  ಸಾದ್ಯವಿಲ್ಲ   ಎಂದು  ಹೇಳಿ  ಅವಾಚ್ಯ ಶಬ್ದಗಳಿಂದ ಬೈದು ನನಗೆ ಕೈಯಿಂದ ಹೊಡೆದು  ಕಾಲಿಂದ ತುಳಿದು   ಹಲ್ಲೆ ಮಾಡಿ, ಅಸೌಖ್ಯದ ಸಮಯ ಔಷಧಿಯನ್ನು ಕೊಡಿಸದೇ ಹಿಂಸೆ ನೀಡುತ್ತಿದ್ದು,  ವಿಚಾರವನ್ನು ಪಿರ್ಯಾದಿದಾರರು  ಅತ್ತೆ ಸುಮಿತ್ರ ಮಾವ ಚಂದಪ್ಪ ಮತ್ತು ನಾದಿನಿ ಲೀಲಾರವರಲ್ಲಿ ತಿಳಿಸಿದಾಗ ಅವರುಗಳು  ಸಂತೋಷನ  ಪರವಾಗಿಯೇ ನಿಂತು ಅವನು  ಹೇಳಿದ ರೀತಿಯಲ್ಲಿ  ನಮ್ಮ ಮನೆಯಲ್ಲಿರುವುದಾದರೆ ಇರು ಇಲ್ಲವಾದಲ್ಲಿ  ನಿನ್ನ ತವರು ಮನೆಗೆ ಹೊರಟು ಹೋಗು, ಇದು ಧರ್ಮ ಛತ್ರವಲ್ಲ  ನಿನಗೆ ಪುಕ್ಕಟೆಯಾಗಿ  ಊಟ ಹಾಕಲು  ನೀನು ಅವನು ಹೇಳಿದ ರೀತಿಯಲ್ಲಿ  ಇರಲಾಗದಿದ್ದಲ್ಲಿ  ನಿನಗೆ ನೀಡುವ  ಅನ್ನದಲ್ಲಿ ವಿಷ ಬೆರೆಸಿ  ಸಾಯಿಸುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿದವರು  ಮನೆಯಿಂದ 5 ಲಕ್ಷ  ರೂಪಾಯಿ ಹಣ  ತಂದು ಕೊಡು ಎಂದೆಲ್ಲಾ    ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ  ಪಿರ್ಯಾದುದಾರರನ್ನು    ತವರು ಮನೆಗೆ ಕಳುಹಿಸಿ ಕೊಟ್ಟವರು   ದಿನಾಂಕ: 12-05-2014 ರಂದು ಪಿರ್ಯಾದಿದಾರರು ತನ್ನ ತಮ್ಮನ  ಜೊತೆ  ಗಂಡನ ಮನೆಗೆ ಪುನಃ ಹೋದಾಗ ಅಂದು ಕೂಡ ಮನೆಯೊಳಗೆ ಬಿಡದೆ ವಾಪಸು ಕಳುಹಿಸಿರುವುದಾಗಿದೆ.    

 

17.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ದಿನೇಶ್ ಶೆಟ್ಟಿ ರವರು ಬಡಗ ಎಡಪದವು ಗ್ರಾಮದ ಬ್ರಹ್ಮ ಬೈದರ್ಕಳ ಗರಡಿಯ ಬಳಿ ಹತ್ತು ಎಕ್ರೆ ವರ್ಗ ಜಾಗದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡು ಕಪ್ಪು ಕಲ್ಲಿನ ಕೋರೆಯನ್ನು ನಡೆಸುತ್ತಿದ್ದು ಇದಕ್ಕೆ ಸದ್ರಿ ಪರಿಸರದ ಹರಿಶ್ಚಂದ್ರ, ಪದ್ಮನಾಭ, ದುರ್ಗಾಪ್ರಸಾದ್, ಹಾಗೂ ದೇವು ಎಂಬವರು ತೊಂದರೆ ಕೊಡುತ್ತಾ ಬಂದಿದ್ದು, ದಿನಾಂಕ: 13-05-2014 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರು ಕೋರೆಯ ಬಳಿ ಇದ್ದಾಗ ಅಲ್ಲಿಗೆ ಬಂದ ಆರೋಪಿಗಳು ಕಲ್ಲಿನ ಕೋರೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು ಮುಂದಕ್ಕೆ ಹೋಗದಂತೆ ತಡೆದು ಅವರ ಪೈಕಿ ಹರಿಶ್ಚಂದ್ರನು ಫಿರ್ಯಾದಿದಾರರ ಕಾಲರ್ ಹಿಡಿದು ಕೆನ್ನೆಗೆ ಮತ್ತು ಎದೆಗೆ ಕೈಯಿಂದ ಹೊಡೆದು, ಆತನ ಜೋತೆಯಿದ್ದ ಪದ್ಮನಾಭ, ದುರ್ಗಾಪ್ರಸಾದ್ ಹಾಗೂ ದೇವು ಮತ್ತು ಇತರ ಕೆಲವು ಯುವಕರುಗಳು ಕೈಯಿಂದ ಹೊಡೆದು ಕಾಲಿನಿಂದ ತುಳಿದರು. ಆಗ ಕೋರೆಯ ರೈಟರ್ ಸಂದೀಪ್ ಎಂಬವರು ತಡೆಯಲು ಬಂದಾಗ ಅವರಿಗೂ ಕೈಯಿಂದ ಹಲ್ಲೆ ಮಾಡಿ ಇನ್ನು ಮುಂದಕ್ಕೆ ನೀನು ಕೋರೆಯನ್ನು ನೆಡೆಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಫಿರ್ಯಾದಿದಾರರು ಕಲ್ಲಿನ ಕೋರೆ ನಡೆಸಬಾರದೆಂಬ ದುರುದ್ದೇಶ ದಿಂದ ರೀತಿ ಹಲ್ಲೆ ನಡೆಸಿದ್ದು ಫಿರ್ಯಾದಿದಾರರು ಮಂಗಳೂರು ವಿನಯಾ ನರ್ಸಿಂಗ್ ಹೋಂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

18.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 29/08/2013 ರಂದು ಪಿರ್ಯಾದಿದಾರರಾದ ಶ್ರೀಮತಿ ಅನಿತಾರವರಿಗೆ ಆರೋಪಿ ಕೀರ್ತಿರಾಜ್ ರವರ ಜೊತೆಯಲ್ಲಿ ಗುರು ಹಿರಿಯರು ನಿಶ್ಚಯಿಸಿದಂತೆ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಕಿನ್ನಿಕಂಬ್ಳ ಕೈಕಂಬ ರಾಧಾಕೃಷ್ಣ ಭಜನಾ ಮಂದಿರದಲ್ಲಿ ವಿವಾಹವಾಗಿದ್ದು, ವಿವಾಹದ ಖರ್ಚು ಬಾಬ್ತು ರೂ. 2,15,000/- ಹಣವನ್ನು ವರದಕ್ಷಿಣೆಯಾಗಿ ಕೀರ್ತಿರಾಜ್ ಕೈಯಲ್ಲಿ ಕೊಟ್ಟಿರುತ್ತಾರೆ. ವಿವಾಹದ ನಂತರ ಆರೋಪಿ ಹಾಗೂ ಅವನ ತಾಯಿ ಅನಿತಾರವರು ಪಿರ್ಯಾದಿದಾರರಿಗೆ ವಿನಾಃ ಕಾರಣ ಹಲ್ಲೆ ನಡೆಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಲ್ಲದೇ, ದಿನಾಂಕ: 22/04/2014 ರಂದು ಆರೋಪಿಯು ತನ್ನ ಮನೆಯಾದ ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ಬಾನೊಟ್ಟು ಮನೆಯಲ್ಲಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೀಯಾಳಿಸಿದ್ದಲ್ಲದೇ, ಇನ್ನೂ ರೂ. 1,50,000/-  ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ, ಇಲ್ಲವಾದಲ್ಲಿ ನನ್ನ ಮನೆಯೊಳಗೆ ಕಾಲಿಡಬಾರದೆಂದು ಕೈಯಿಂದ ಹಲ್ಲೆ ನಡೆಸಿ, ಪಿರ್ಯಾದಿದಾರರನ್ನು ಮನೆಯಿಂದ ಹೊರ ಹಾಕಿದ್ದು, ಹಣ ತಾರದೇ ಮನೆಗೆ ಸೇರಿಸಿಕೊಳ್ಳುವುದಿಲ್ಲವೆಂದೂ, ಮನೆಗೆ ಕಾಲಿಟ್ಟರೆ ನಿನ್ನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ.

 

19.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-05-2014 ರಂದು ಮದ್ಯಾಹ್ನ 3-20 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಿಜ್ವಾನ್ ರವರು ತನ್ನ ಕಾರು ನಂಬ್ರ ಕೆ 09 ಎನ್ 6077 ರಲ್ಲಿ ಬಜಪೆ ವಿಮಾನ ನಿಲ್ದಾಣದ ಪಾರ್ಕ್ ನಿಂದ ಬಜಪೆಯಿಂದಾಗಿ ಕೈಕಂಬ ಕಡೆಗೆ ಹೋಗುತ್ತಿರುವಾಗ ಕೈಕಂಬ ಕಡೆಯಿಂದ  ಬರುತ್ತಿದ್ದ ಸ್ಕೂಟರ್ ವೂಂದರಲ್ಲಿದ್ದ ಸವಾರ ಮತ್ತು ಸಹಸವಾರ ಪಡುಪೆರಾರ ಗ್ರಾಮದ ಪೆರಾರ ಸಾರ್ವಜನಿಕ ರಸ್ತೆಯಲ್ಲಿ  ತನ್ನ ಕಾರನ್ನು ತಡೆದು ನಿಲ್ಲಿಸಿ ಕಾರಿನ ಬಳಿಬಂದು ಆರೋಪಿ ಇರ್ಫಾನ್ ಎಂಬಾತನು " ನೀನು ಬಾರೀ ಪೊಲೀಸ್ ಕಂಪ್ಲೇಂಟ್ ಕೊಡುತ್ತೀಯಾ" ಎಂದು ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಫಿರ್ಯಾದಿದಾರರ ಬಲ ಭುಜಕ್ಕೆ , ಎದೆಗೆ ಹೊಡೆದುದಲ್ಲದೆ ಸ್ಕೂಟರ್ ನಲ್ಲಿದ್ದ ಸಹ ಸವಾರ  ಮುರನಾಳ್ ಎಂಬಾತನು ' ಈಯೆನಾ ಪೊಲೀಸ್ ಕಂಪ್ಲೇಂಟ್ ಕೊರ್ತಿನಿ ? ಎಂದು ಅವಾಚ್ಯವಾಗಿ ಬೈದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಪಿರ್ಯಾದಿದಾರರ ಎರಡೂ ಕಾಲುಗಳಿಗೆ, ಸೊಂಟಕ್ಕೆ ಕೈಗಳಿಗೆ ಹೊಡೆದುದಲ್ಲದೇ ಆರೋಪಿ ತಾರಿಕ್ ಎಂಬವನು ಪಿರ್ಯಾದಿದಾರರ ಕಾರಿನ ಹಿಂದೆ ನಿಲ್ಲಿಸಿದ ಡೆಸ್ಟರ್ ಕಾರಿನಿಂದ ಇಳಿದು ತಲವಾರಿನೊಂದಿಗೆ ಬಂದು ನಿನ್ನ ಅಣ್ಣ ಜಾಕಿರ್ ನನಗೆ ಬಾರಿ ತೊಂದರೆ ಕೊಡುತ್ತಿದ್ದಾನೆ ನಿನ್ನ ಮನೆಯಲ್ಲಿ ಯಾರಾದರೂ ಒಬ್ಬರನ್ನು ತೆಗೆದರೆ ಆತನಿಗೆ ಬುದ್ಧಿ ಬರುತ್ತದೆ ಎಂದು ಹೇಳಿ ಆತನ ಕೈಯಲ್ಲಿದ್ದ ತಲವಾರಿನಿಂದ ಕಡಿಯಲು ಯತ್ನಿಸಿದಾಗ ತಪ್ಪಿಸುವ ಸಲುವಾಗಿ ತನ್ನ ಬಲಕೈಯನ್ನು ಮೇಲಕ್ಕೆತ್ತಿ  ತಡೆದಾಗ ತಲವಾರಿನ ಏಟು ಬಲಕೋಲು ಕೈಗೆ ತಾಗಿ ರಕ್ತಗಾಯವಾಗಿರುವುದಾಗಿದೆ.

 

20.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-05-2014 ರಂದು ರಾತ್ರಿ ತನ್ನ ಗೆಳೆಯನ ಮನೆಗೆ ಕೆಎ 20-ಹೆಚ್ 8845 ನಂಬ್ರದ ಮೋಟಾರು ಸೈಕಲ್ ನಲ್ಲಿ ಹೋದ ಹರೀಶ್ ಆಚಾರ್ಯ ಅಲ್ಲಿಂದ ಮರಳಿ ಬರುತ್ತಾ 23-15 ಗಂಟೆಗೆ ತನ್ನ ಮನೆಯ ಎದುರು ರಸ್ತೆಯ ಎಡಬದಯಿಂದ ಬಲಬದಿಗೆ ಇಂಡಿಕೇಟರ್ ಹಾಕಿ ಸೂಚನೆ ನೀಡುತ್ತಾ ತನ್ನ ಬೈಕ್ ನ್ನು ಚಲಾಯಿಸಿಕೊಂಡು ರಸ್ತೆಯ ಅಂಚಿಗೆ ಬಂದಾಗ ಅವರ ಹಿಂದಿನಿಂದ ಅಂದರೆ ಕಟೀಲು ಕಡೆಯಿಂದ ಬಜಪೆ ಕಡೆಗೆ ಕಾರೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರವಾದ ರೀತಿಯಲ್ಲಿ ರಸ್ತೆ ತೀರ ಬಲಬದಿಗೆ ಚಲಾಯಿಸಿಕೊಂಡು  ಹೋಗಿ ಹರೀಶ್ ಆಚಾರ್ಯ ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿಹೊಡೆದು ವಾಹನ ಸಮೇತ ಪರಾರಿಯಾದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ತೀವ್ರ ತರಹದ ಗಾಯಗೊಂಡ ಹರೀಶ್ ಆಚಾರ್ಯ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಮೃತಪಟ್ಟದಾಗಿದೆ.

 

21.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-05-2014 ರಂದು ಫಿರ್ಯಾದಿದಾರರಾದ ಶ್ರೀ ಚಿನ್ನ ರಾಮ ಹಾಗೂ ಅವರ ಮಗು ರೀನಾ ಮತ್ತು ಜೊತೆಯಲ್ಲಿ ಕೆಲಸ ಮಾಡುವ ನಾನೂ ರಾಂ ಎಂಬವರೊಂಧಿಗೆ ಕೈಕಂಬಕ್ಕೆ ಬಂದು ಸಾಮಾನು ಖರೀದಿ ಮಾಡಿಕೊಂಡು ಕೆಎ 19 ಡಿ 9986 ನಂಬ್ರದ ಆಟೋರಿಕ್ಷಾದಲ್ಲಿ ಗಂಜಿಮಠದ ಕಡೆಗೆ ಸಂಜೆ 7-00 ಗಂಟೆಗೆ ಹೋಗುತ್ತಿದ್ದಾಗ, ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ನಲ್ಲಿ ಮೂಡಬಿದ್ರಿ ಕಡೆಯಿಂದ ಕೆಎ 19 2888 ನಂಬ್ರದ ಟೆಂಪೋವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ, ರಿಕ್ಷಾ ಮಗುಚಿ ಬಿದ್ದಿದ್ದು, ಅದರೊಳಗೆ ಇದ್ದ ಫಿರ್ಯಾದಿ, ಅವರ ಮಗು ರೀನಾ (ವರ್ಷ), ಮತ್ತು ನಾನೂ ರಾಂ (24 ವರ್ಷ) ಎಂಬವರು ಗಾಯಗೊಂಡು ಚಿಕಿತ್ಸೆಯ ಕುರಿತು ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

 

22.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಶ್ರೀಮತಿ ಮೇರಿ ಎಂ., ನಂ:ಜಿ..ಎಸ್. 7646 ವೀರಭದ್ರ ಸ್ವಾಮಿ ಬಸ್ಸು ನಿಲ್ದಾಣದ ಹಿಂಭಾಗ, ಅಮ್ಮ ದೇವಸ್ಥಾನದ ಸಮೀಪ, ಬಿ.ಜಿ. ರಸ್ತೆ, ಬಿಳೇಕಳ್ಳಿ, ಬೆಂಗಳೂರು -76  ಇವರು ತನ್ನ ತಮ್ಮನಾದ ಸಲ್ವದರ್ ಬರೆಟೋ ರವರೊಂದಿಗೆ ಮಂಗಳೂರು ಗ್ರಾಮಾಂತರದಲ್ಲಿ ವಾಸವಾಗಿರುವ ಅವರ ತಂಗಿ ಮನೆಗೆ ಹೋಗಿದ್ದು, ದಿನಾಂಕ: 19-04-2014 ರಂದು ವಾಪಸು ಬರಲು ಮಂಗಳೂರು ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ಸು ನಿಲ್ದಾಣಕ್ಕೆ ಬರಲು ಸ್ಥಳೀಯ ಬಸ್ಸಿನಲ್ಲಿ ಬರುತ್ತಿದ್ದಾಗ, ಮಾನಸಿಕ ಅಸ್ವಸ್ಥನಾದ ತನ್ನ ತಮ್ಮನು ಹಿಂದಿನ ನಿಲ್ದಾಣದಲ್ಲಿ ಇಳಿದು ಹೋಗಿ ಕಾಣೆಯಾಗಿರುತ್ತಾನೆ.  

 

23.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 9-5-2014 ರಾತ್ರಿ 8-00 ಗಂಟೆಯಿಂದ ದಿನಾಂಕ. 10-5-2014 ಬೆಳಿಗ್ಗೆ 06-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಮೈನ್ರೋಡ್ಸೀಮಾ ಮಂಜಿಲ್ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ಶೇಖ್ ಮನ್ಸೂರ್ ಅಹಮ್ಮದ್ ರವರ ಮನೆಯ ಕಂಪೌಂಡಿನ ಗೇಟಿನ ಬೀಗ ಮುರಿದು ಕಂಪೌಂಡಿನ ಒಳಗೆ ಪಾರ್ಕ್ಮಾಡಿದ್ದ ಫಿರ್ಯಾದಿದಾರರ ಬಾಬ್ತು ಕೆಎ-19-ಇಎಲ್‌-1236 ನೇ ಬಜಾಜ್ಕಂಪೆನಿಯ ಪಲ್ಸರ್‌ 220 ಸಿಸಿ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂಪಾಯಿ 98,000/- ಆಗಿದ್ದು, ಕಳವಾದ ಮೋಟಾರು ಸೈಕಲಿನ ಪತ್ತೆಗೆ ತನಕ ಪ್ರಯತ್ನಿಸಿಕೊಂಡು ಅದು ಪತ್ತೆಯಾಗದೇ ಇದ್ದು, ಕಳುವಾದ ಬೈಕ್ ವಿವರ ಕೆಳಗಿನಂತಿದೆ: ನೊಂದಣಿ ಸಂಖ್ಯೆ : KA-19-EL-1236, ಚಾಸಿಸ್‌‌ ನಂಬರ್‌;MD2A13EZ4ECL09884, ಇಂಜಿನ್ನಂಬರ್‌;DKZCEL06008    ಅಂದಾಜು ಮೌಲ್ಯ; 98,000/-, ಮಾಡಲ್‌; Bajaj PULSAR -220CC-DTSIFBS, ಬಣ್ಣ; WINERED ಆಗಿರುತ್ತದೆ.

 

24.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 13-5-2014 ರಂದು ಸಂಜೆ 6-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕೆರೆಬೈಲ್ಗುಡ್ಡೆ ಎಂಬಲ್ಲಿರುವ ರಾಘವ ಪೂಜಾರಿಯವರ ಮನೆಯ ಎದುರು ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಹರೀಶನು ಫಿರ್ಯಾದಿ ಆನಂದಮೂರ್ತಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ. ಕಲ್ಲಿನಿಂದ ಫಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯಗೊಳಿಸಿದಲ್ಲದೆ, ಆರೋಪಿ ವಿಶ್ವನಾಥ ಎಂಬವರು ದೊಣ್ಣೆಯಿಂದ ಫಿರ್ಯಾದಿದಾರರ ಭುಜಕ್ಕೆ ಬೆನ್ನಿಗೆ, ಎಡಕೈಗೆ ಹೊಡೆದು ಗುದ್ದಿದ ಗಾಯವನ್ನುಂಟು ಮಾಡಿದಲ್ಲದೆ, ಆರೋಪಿ ಸುಶೀಲ ಎಂಬವರು ಕೈಯಿಂದ ಫಿರ್ಯಾದಿದಾರರ ಕೆನ್ನೆಗೆ ಮುಖಕ್ಕೆ ಹೊಡೆದಿರುತ್ತಾರೆ. ಆಗ ಫಿರ್ಯಾದಿದಾರರು ಬೊಬ್ಬೆ ಹಾಕಿದನ್ನು ಕೇಳಿ ಅವರ ತಂಗಿ ಜ್ಯೋತಿ ಎಂಬಾಕೆಯು ಬಂದಾಗ ಆಕೆಗೆ ಸುಶೀಲ ಎಂಬವರು ಕೈಯಿಂದ ಹೊಡೆದಿದ್ದು, ವಿಶ್ವನಾಥರು ದೊಣ್ಣೆಯಿಂದ ಹೊಡೆಯುವಾಗ ಬಲಕೈ ಕೋಲು ಕೈ, ಅಂಗೈಗೆ ತರಚಿದ ಗಾಯವಾಗಿರುತ್ತದೆ.

 

25.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-05-2014 ರಂದು ಸಂಜೆ 06-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಆಸೀಫ್ ಎನ್.ಎ. ರವರು ತಮ್ಮ  ಭಾವ ಜೆ.ಮಹಮ್ಮದ್ರವರನ್ನು ತನ್ನಬಾಬ್ತು ಕೆಎ 19-ಇಕೆ-5186ನೇ ಆಕ್ಟೀವ್ಹೋಂಡಾ ಮೊಟಾರ್ಸೈಕಲ್ನಲ್ಲಿ ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಕಡೆಗೆ ಬರುತ್ತಿದ್ದಾಗ ಚೆಂಬುಗುಡ್ಡೆ ಜಂಕ್ಷನ್ಬಳಿ ತಲುಪುತಿದ್ದಾಗ ಒಬ್ಬ ಬಸ್ಸು ಚಾಲಕನು ಅತೀ ವೇಗದಿಂದ ಚಲಾಯಿಸಿ ಪಿರ್ಯಾದುದಾರರು ಚಲಾಯಿಸುತ್ತಿದ್ದ ಆಕ್ಟಿವ್ಹೊಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಕ್ಟಿವ್ಹೊಂಡಾ ಸಮೇತ ರಸ್ತೆಗೆ ಬಿದ್ದ ಪರಿಣಾಮ ಜೆ ಮಹಮ್ಮದ್ರವರ ಬಲಕೈಗೆ, ಕಿವಿಗೆ, ತಲೆಗೆ, ಎದೆಗೆ ಮುಖಕ್ಕೆ ಗುದ್ದಿದ ಗಾಯವುಂಟಾಗಿ ಅವರನ್ನು ದೇರಳಕಟ್ಟೆ ಯೆನೆಪೊಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಅಪಘಾತಕ್ಕೆ ಕೆಎ-19-ಬಿ-3229 ನೇದರ ಬಸ್ಚಾಲಕನ ಅತೀ ವೇಗ ಅಜಾಗರೂಕತೆಯೆ ಕಾರಣವಾಗಿರುತ್ತದೆ.

 

26.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-05-2014 ರಂದು ರಾತ್ರಿ ಸುಮಾರು 8:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೇವದಾಸ್ ಕೊಲ್ಯ ರವರು ಕೋಟೆಕಾರಿನಲ್ಲಿರುವ ತನ್ನ ಅಂಗಡಿಯಿಂದ ಹೊರಟು ಅಡ್ಕದ ಮೂಲಕ ತನ್ನ ಮನೆ ಕಡೆಗೆ ಬೈಕಿನಲ್ಲಿ ಹೋಗುತ್ತಾ ಅಡ್ಕ ಪದ್ಮಶ್ರೀ ಬಾರ್ ಎದುರುಗಡೆ ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 8:15 ಗಂಟೆಗೆ ಪಿರ್ಯಾದಿದಾರರ ಎದುರುಗಡೆಯಿಂದಾಗಿ ಟೆಂಪೋ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಆತನ ಎದುರುಗಡೆಯಿಂದಾಗಿ ಹೋಗುತ್ತಿದ್ದ ಒಂದು ಸ್ಕೂಟರಿಗೆ ಡಿಕ್ಕಿ ಹೊಡೆದೆನು. ಇದರ ಪರಿಣಾಮ ಸ್ಕೂಟರಿನಲ್ಲಿದ್ದ ಚಾಲಕಿ ಶ್ರೀಮತಿ. ಗೀತಾ ಮತ್ತು ಜೊತೆಗಿದ್ದ ಮಗು ರಸ್ತೆಗೆ ಬಿದ್ದು, ಶ್ರೀಮತಿ. ಗೀತಾರವರಿಗೆ ತಲೆಗೆ ರಕ್ತ ಗಾಯ ಹಾಗೂ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೆ ಮಗುವಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಗಾಯಗೊಂಡವರನ್ನು ತೊಕ್ಕಟ್ಟು ನೇತಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಅಪಘಾತಕ್ಕೆ KA-19-AA-3363 ನೇದರ ಟೆಂಪೋ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿರುತ್ತದೆ. ಅಪಘಾತಕ್ಕಿಡಾದ ಸ್ಕೂಟರಿನ ನಂಬ್ರ KA-19-EG-9122 ಆಗಿರುತ್ತದೆ.

 

27.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-05-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಪೂವಪ್ಪ ಮೂಲ್ಯ ರವರು ಸುರತ್ಕಲ್ ಗ್ರಾಮದ ಪಾವಂಜೆ ಬಸ್ಸು ತಂಗುದಾಣದ ಬಳಿ ಮನೆಗೆ ತೆರಳುವರೇ ರಾ.ಹೆ.66 ನ್ನು ದಾಟಿ ರಸ್ತೆಯ ಬಳಿ ನಿಂತಿರುವಾಗ ಸಮಯ ಸುಮಾರು 08-45 ಗಂಟೆಗೆ ಮುಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-19-ಎಂಸಿ-7005 ನೇ ಕಾರನ್ನು ಅದರ ಚಾಲಕ ಎಂ..ಅಬ್ದುಲ್ಲ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲ ಕೆನ್ನೆಗೆ ಗುದ್ದಿದ ನೋವು, ಬಲ ಕಣ್ಣಿನ ಬಳಿ ಹಾಗೂ ಬಲ ಭುಜದ ಹಿಂಬದಿ ತರಚಿದ ಗಾಯವಾಗಿದ್ದು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಅದೇ ಕಾರಿನಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

28.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 13-05-2014 ರಂದು ಬೆಳಿಗ್ಗೆ 02-00 ಗಂಟೆಗೆ KA 19 EJ 2329 ನೇ ಸ್ಕೂಟರಿನಲ್ಲಿ ಸಿರಾಜ್ನು ಆತನ ತಮ್ಮ ರಮೀಜ್ರೆಹಮಾನನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ರಾ.ಹೆ 73 ನೇ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಕಣ್ಣೂರು ಚಕ್ಪೋಸ್ಟ್ಬಳಿ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಹಮೀದ್ ರವರ ಕಾರನ್ನು ಎಡಬದಿಯಿಂದ ಓವರ್ಟೇಕ್ಮಾಡಿ ಮುಂದಕ್ಕೆ ಚಲಿಸಿ ಹೈವೆ ಬದಿಯಲ್ಲಿ ವಾಹನ ಪಾರ್ಕ್ಗಾಗಿ ಮೀಸಲಾದ ಜಾಗದಲ್ಲಿರುವ ಡಿವೈಡರ್ಕಟ್ಟೆಗೆ ಡಿಕ್ಕಿಪಡಿಸಿದ ಪರಿಣಾಮ ಆರೋಪಿ ಸಿರಾಜ್ ಕೈಗಳಿಗೆ ಮುಖಕ್ಕೆ ಕಾಲಿಗೆ ತರಚಿದ ಗಾಯವಾಗಿದ್ದು ರಮೀಜ್ರೆಹಮಾನ್ಗೆ ಹಣೆಯ ಬಲಭಾಗಕ್ಕೆ, ಗದ್ದಕ್ಕೆ ರಕ್ತಗಾಯ ಹಾಗೂ ಮೂಗಿಗೆ, ಬಲಕಣ್ಣಿನ ಬಲಬದಿ ಕುತ್ತಿಗೆಗೆ ಬಲಭುಜಕ್ಕೆ ಕೈ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿದ್ದು, ಗಾಯಳು ಆರೋಪಿ ಸಿರಾಜ್ನು ಮಂಗಳೂರು ಪಾದರ್ಮುಲ್ಲರ್ಸ್ಆಸ್ಪತ್ರೆಯಲ್ಲೂ. ಗಾಯಳು ರಮೀಜ್ರೆಹಮಾನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

No comments:

Post a Comment