Saturday, May 3, 2014

Daily Crime Reports 03-05-2014

ದೈನಂದಿನ ಅಪರಾದ ವರದಿ.

ದಿನಾಂಕ 03.05.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-11-2013 ರಂದು ಪಿ.ವಿ.ಎಸ್ ಕಲಾಕುಂಜ ಕೋಡಿಯಲ್ ಬೈಲು ಹಾಲ್ ನಲ್ಲಿ ಹಿಂದೂ ಸಂಪ್ರಾದಾಯದಂತೆ ವಿಘ್ನೇಶ್ ಮಲ್ಯ ಎಂಬುವರೊಂದಿಗೆ  ಪಿರ್ಯಾದಿದಾರರಾದ ಶ್ರೀಮತಿ ರಮ್ಯಾ ಪೈ ಕೆ. ರವರಿಗೆ ಮದುವೆಯಾಗಿದ್ದು, ಮದುವೆಯ ಸಮಯ ಪಿರ್ಯಾದಿದಾರರ ತವರು ಮನೆಯಿಂದ ಸುಮಾರು 200 ಗ್ರಾಂ ಚಿನ್ನ, ವಜ್ರದ ಕಿವಿಯೋಲೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟು 4 ಲಕ್ಷ ಹಣವನ್ನು ವರದಕ್ಷಿಣೆಯಾಗಿ ನೀಡಿ, ಮದುವೆಯ ಸಂಪೂರ್ಣ ಖರ್ಚನ್ನು ಅವರ ತಂದೆ ತಾಯಿಯವರೆ ಭರಿಸಿದ್ದರು. ಮದುವೆಯ ನಂತರ ಪಿರ್ಯಾದಿದಾರರು ಗಂಡನ ಮನೆಯಲ್ಲಿ ವಾಸವಾಗಿದ್ದಾಗ  ಅವರ ಗಂಡ ಒಂದೇ ರೂಮಿನಲ್ಲಿ ಮಲಗಿದ್ದರೂ ಮಾತನಾಡದೇ ಎಸ್. ಎಂ.ಎಸ್. ಮಾಡಿ ಮಾತನಾಡುತ್ತಿದ್ದು, ಈ ಬಗ್ಗೆ ಪಿರ್ಯಾದಿದಾರರು ಪ್ರಶ್ನಿಸಿದರೆ ಅವರ ತಾಯಿಯ ರೂಮಿನಲ್ಲಿ ಹೋಗಿ ಮಲಗುತ್ತಿದ್ದರು, ಈಗಲೇ ಮಗು ಬೇಡವೆಂದು ಮಾತ್ರೆಗಳನ್ನು ಕೊಡುತ್ತಿದ್ದರು. ಮಾತ್ರೆಗಳನ್ನು ತಿನ್ನದಿದ್ದಾಗ ಪಿರ್ಯಾದಿಯ ಅತ್ತೆ ಅವಾಚ್ಯ ಶಬ್ದಗಳಿಂದ ಬೈದು ಜುಟ್ಟು ಹಿಡಿದು ಬಗ್ಗಿಸಿ ಬಾಯಿಗೆ ಹಾಕುತ್ತಿದ್ದರು. ಅಲ್ಲದೇ ಪ್ರತಿ ತಿಂಗಳು ಪಿರ್ಯಾದಿಗೆ ಬಲತ್ಕಾರವಾಗಿ ಪರೀಕ್ಷೆ ಮಾಡುತ್ತಿದ್ದರು. ಅಲ್ಲದೇ ನಿಮ್ಮ ಮನೆಯವರು ನೀಡಿದ ವರದಕ್ಷಿಣೆ ಸಾಕಾಗುವುದಿಲ್ಲ ನೀನು ವರದಕ್ಷಿಣೆ ತರುವ ವರೆಗೆ ಮಗು ಬೇಡ ಎಂದು ಹೊಡೆಯುತ್ತಿದ್ದರು. ಪಿರ್ಯಾದಿಯ ಎಲ್ಲಾ ಚಿನ್ನವನ್ನು ಅತ್ತೆಯ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು, ಇತ್ತೀಚೆಗೆ ಪಿರ್ಯಾದಿಯ ಸೋದರ ಎಂ. ಟೆಕ್ ಮಾಡಲು ಕೆನರಾ ಬ್ಯಾಂಕ್ ನಿಂದ ಲೋನ್ ಮಾಡಿದ್ದು, ಪಿರ್ಯಾದಿಯ ಗಂಡ ನನಗೂ ಅಷ್ಟೆ ಹಣ ತೆಗೆದುಕೊಂಡು ಬಾ ಎಂದು ಚಿತ್ರ ಹಿಂಸೆ ಕೊಟ್ಟು, ಆತ್ಮಹತ್ಯೆ ಮಾಡಲು ಪ್ರರೇಪಿಸುತ್ತಿದ್ದರು. ಮಾರ್ಚ್ 11-2014 ರಂದು ಪಿರ್ಯಾದಿಗೆ ತುಂಬಾ ಹೊಟ್ಟೆ ನೋವು ಇದ್ದು, ಗಂಡನಲ್ಲಿ ತಿಳಿಸಿದಾಗ ಬೆಳಿಗ್ಗೆ ನೋಡುವಾ ಸುಮ್ಮನೆ ಮಲಗು ಎಂದು ಬೈದು ಮಲಗಿದರು. ಬೆಳಗ್ಗೆ ಪಿರ್ಯಾದಿಗೆ ಎಳಲು ಆಗದಿದ್ದಾಗ ನೀನು ನಾಟಕ ಮಾಡುತ್ತಿದ್ದೀಯಾ ನೀನು ಎಲ್ಲಾದರೂ ಹೋಗಿ ಸಾಯಿ ವರದಕ್ಷಿಣೆ ತರುವವರೆಗೆ ನಾವು ನಿನ್ನನ್ನು ಮದ್ದಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಅತ್ತೆಗಂಡ ಬೈದು ನಂತರ ಗಂಡ ಕೆಲಸಕ್ಕೆ ಹೋದರು. ಆಮೇಲೆ ಅತ್ತೆ ನಿನ್ನ ಮದ್ದಿಗೆ ಹಣ ಕೊಡಲು ನಮಗೆ ಹುಚ್ಚು ಹಿಡಿದಿಲ್ಲ ಎಲ್ಲಾದರೂ ಹೋಗಿ ಸಾಯಿ ಎಂದು ಬೈದಾಗ ಪಿರ್ಯಾದಿ ಮನೆಬಿಟ್ಟು ತಾಯಿ ಮನೆಗೆ ಬಂದು ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಪಿರ್ಯಾದಿಯ ತಂದೆ ಪಿರ್ಯಾದಿಯ ಗಂಡನವರಲ್ಲಿ ಆಸ್ಪತ್ರೆಗೆ ಬರುವಂತೆ ಬೇಡಿಕೊಂಡಾಗ ಬಾಯಿಗೆ ಬಂದಂತೆ ಬೈದು ವರದಕ್ಷಿಣೆ ತರದಿದ್ದರೆ ಅವಳು ನಮ್ಮ ಮನೆಗೆ ಬರುವುದು ಬೇಡ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-04-2014 ರಂದು  20-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಶೇಖ್ ರಹಿಮಾನ್ ರವರು ರೈಲ್ವೆ ಸ್ಟೇಷನ್ ಕಡೆಯಿಂದ ಹಂಪನ್ ಕಟ್ಟೆ ಕಡೆಗೆ ವೆನ್ಲಾಕ್ ಅಸ್ಪತ್ರೆಯ ಹಿಂಬದಿ ರಸ್ತೆಯಿಂದ ನಡೆದು ಕೋಂಡು ಬರುತ್ತಾ ಹೋಟೆಲ್ ಕೈರಳಿ ಎದುರು ತಲುಪುವಾಗ ಎದುರಿನಿಂದ ಅಂದರೆ ಹಂಪನ್ ಕಟ್ಟೆ ಕಡೆಯಿಂದ ನಂಬ್ರ ತಿಳಿಯದ ಕಾರು ಚಾಲಕ ತನ್ನ ಬಾಬ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಎಡ ತೊಡೆಗೆ ತೀವ್ರ ಸ್ವರೂಪದ ಗುದ್ದಿದ ಗಾಯವುಂಟಾಗಿ ವೆನ್ಲಾಕ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಕಾರು ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಅಪಘಾತದ ನಂತರ ಪಿರ್ಯಾದುದಾರರು ಕೆಲ ದಿನಗಳು ಬಸ್ಸು ನಿಲ್ದಾಣದಲ್ಲಿ ಮಲಗಿಕೊಂಡಿದ್ದು, ನಂತರ ಅಸ್ಪತ್ರಗೆ ದಾಖಲಾಗಿದ್ದರಿಂದ ಪಿರ್ಯಾದು ನೀಡಲು ತಡವಾಗಿರುತ್ತದೆ.

 

3.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25.04.2014 ರಂದು ಉತ್ತರಪ್ರದೇಶ ರಾಜ್ಯದ ಲಕ್ನೋ ಎಂಬಲ್ಲಿ ಖ್ಯಾತ ಯೋಗಗುರು ಬಾಬಾ ರಾಮ್ದೇವ್ಎಂಬವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ "ರಾಷ್ಟ್ರೀಯ ಪಕ್ಷವೊಂದರ ಮೂಂಚೂಣಿ ನೇತಾರರನ್ನು ಟೀಕಿಸುತ್ತಾ ಅವರು ದಲಿತ ಮನೆಗಳಿಗೆ ಹೋಗುವುದು ಹನಿಮೂನ್ಹಾಗೂ ಪಿಕ್ನಿಕ್ಗಳಿಗಾಗಿ ಎಂದು ಅತ್ಯಂತ ಅಘಾತಕಾರಿಯಾದ ಹೇಳಿಕೆ ನೀಡಿದ್ದು, ಈ ಬಗ್ಗೆ ದಿನಾಂಕ 26.04.2014 ರಂದು ಮತ್ತು 27.04.2014 ರ ವಿವಿಧ ಟಿ.ವಿ.ಚಾನಲ್ಮತ್ತು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಹೇಳಿಕೆಯಿಂದ ಪರಿಶಿಷ್ಟ ಸಮುದಾಯ ಮತ್ತು ದಲಿತ ವರ್ಗದವರಿಗೆ ಮತ್ತು ಪ್ರಜ್ಞಾವಂತ ಮಹಿಳೆಯರಿಗೆ ತೀವ್ರ ಅವಮಾನಕ್ಕೆ, ಅವಹೇಳನಕ್ಕೆ ಕಾರಣವಾಗಿರುತ್ತದೆ. ಇವರ ಹೇಳಿಕೆಯಿಂದ ಸುಮಾರು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರಾದ ಫಿರ್ಯಾದಿದಾರರಿಗೆ ಅವಮಾನವಾಗಿರುತ್ತದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-05-2014 ರಾತ್ರಿ 10.00 ಗಂಟೆಯಿಂದ 02-05-2014 ಬೆಳ್ಳಿಗೆ 6.00 ಗಂಟೆಯ ನಡುವೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ರೊಬರ್ಟ್ ಡಿ'ಸೋಜಾ ರವರ ಬಾಬ್ತು ಪುತ್ತಿಗೆ ಗ್ರಾಮದ ಮಸ್ಟಾರ್ ಕಂಪೌಂಡು ಎಂಬಲ್ಲಿರುವ ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಹೊಡೆದು  ಒಳ ಪ್ರವೇಶಿಸಿ ಮನೆಯ ಒಳಗೆ ಸೆಲ್ಫ್ ಕಪಾಟಿನಲ್ಲಿಟ್ಟಿದ್ದ ಸುಮಾರು 10 ಪವನ್ ಬಂಗಾರದ ಆಭರಣ ಮತ್ತು ರೂ. 3500 ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 2,03,500 /- ರೂ ಆಗಬಹುದು.

 

5.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.05.2014 ರಂದು ಪ್ರಕರಣದ ಫಿರ್ಯಾದಿದಾರರಾದ ಶ್ರೀ ಕುದ್ರೋಳಿ ಹಸನ್ ಜಮೀರ್ ಅಳಕೆ ಮಾರ್ಕೆಟ್ ಬಳಿ ಇರುವ ತನ್ನ ಗುಜಿರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಮಯ ಮಧ್ಯಾಹ್ನ ಸುಮಾರು 3.30 ಗಂಟೆಗೆ ಅಂಗಡಿಯ ಎದುರು ಬಾಗಿಲಿನಿಂದ ಎರಡು ಜನ ಮತ್ತು ಹಿಂದಿನ ಬಾಗಿಲಿನಿಂದ ಎರಡು ಜನ ಒಟ್ಟಿಗೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ "ಕೊತ್ತು ರಂಡ್ರೆ ಮೂನುಕು" ಎಂಬುದಾಗಿ ಜೋರು ಬೊಬ್ಬೆ ಹೊಡೆಯುತ್ತಾ ಫಿರ್ಯಾದಿದಾರರಿಗೆ ಪರಿಚಯವಿರುವ ಆರೋಪಿಗಳಾದ ನೌಫಲ್, ಕಣ್ಣೂರು ಆಸೀಫ್ , ಜಿಯಾ ಮತ್ತು ಮುಸ್ತಫಾ ಎಂಬವರು ಅವರ ಕೈಯಲ್ಲಿದ್ದ ಲಾಂಗ್ ಮತ್ತು ಮಚ್ಚಿನಿಂದ ಕಡಿಯಲು ಯತ್ನಿಸಿದಾಗ ಫಿರ್ಯಾದಿದಾರರು ಕೈಯನ್ನು ತಲೆಗೆ ಅಡ್ಡವಾಗಿ ಹಿಡಿದರು. ನೌಫಲ್ ನು ಬೀಸಿದ ತಲವಾರಿನ ಪೆಟ್ಟು ಫಿರ್ಯಾದಿದಾರರ ತೋರು ಬೆರಳಿನ ಮಧ್ಯಕ್ಕೆ ಬಿದ್ದು ತೀವ್ರ ಸ್ವರೂಪದ ಗಾಯವಾಗಿದ್ದು ಮತ್ತು ಹಿಂದಿನ ಬಾಗಿಲಿನಿಂದ ಬಂದ ಆಸಿಫ್ ನು ಕತ್ತಿಯಿಂದ ಎಡಬದಿ ಸೊಂಟಕ್ಕೆ ಚಚ್ಚಿದನು. ಇನ್ನೊಬ್ಬ ವ್ಯಕ್ತಿ ಮುಸ್ತಫಾ ಎಂಬಾತನು ಚೂರಿಯಿಂದ ಫಿರ್ಯಾದಿದಾರರ ಮಂಡಿಯ ಬಳಿ ಚುಚ್ಚಿದನು. ಆ ಸಮಯ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಿದ್ದು, ಆರೋಪಿಗಳು ಫಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ ಕೊಲ್ಲುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾಗಿದೆ. ನಂತರ ಫಿರ್ಯಾದಿದಾರರು ಕಾಫಿ ಕಾರ್ನರ್ ಹೋಟೆಲ್ ನ ಕಡೆಯಿಂದ ಓಡಿ ಹೋಗಿದ್ದು, ನಂತರ ಆರೋಪಿಗಳು ಯಾವುದೋ ವಾಹನದಲ್ಲಿ  ಪರಾರಿಯಾಗಿರುತ್ತಾರೆ.

 

6.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01/05/2014 ರಂದು 13.30 ಗಂಟೆಗೆ ಮಂಗಳೂರು ತಾಲೂಕು ಕೊಂಡಮೂಲೆ ಗ್ರಾಮದ ಜಳಕದಕಟ್ಟೆ ಎಂಬಲ್ಲಿ ಅಜಾರು ಕಡೆಯಿಂದ ನಿಡ್ಡೋಡಿ ಕಡೆಗೆ ಮಾರುತಿ ಇಕೋ ವ್ಯಾನ್ ನಂಬ್ರ KA 20 C 9445 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ನಿಡ್ಡೋಡಿ ಕಡೆಯಿಂದ ಅಜಾರು ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್  ನಂಬ್ರ KA 19 ED 4103 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ರಸ್ತೆಗೆ ಬಿದ್ದು, ಅದರಲ್ಲಿ ಸವಾರಿ ಮಾಡುತ್ತಿದ್ದ ಸವಾರ ಅಮೃತ್ ಎಸ್. ರಾವ್ ರವರಿಗೆ ಮೂಳೆ ಮುರಿತದಂತಹದ ತೀವೃ ಸ್ವರೂಪದ ಗಾಯವಾಗಿರುವುದಲ್ಲದೇ, ಸಹಸವಾರ ರೂಪೇಶ್ ರವರಿಗೆ ಸಾದಾ ತರಹದ ತರಚಿದ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಕಿನ್ನಿಗೋಳಿ ಕಸ್ಸೆಟ್ಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗಾಯಾಳು ರೂಪೇಶ್ ರವರು ಹೊರರೋಗಿಯಾಗಿ ಚಿಕಿತ್ಸೆ ಪಡೆದುದಲ್ಲದೇ, ಗಾಯಾಳು ಅಮೃತ್ ಎಸ್. ರಾವ್ ರವರು  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-05-2014 ರಂದು ಪಿರ್ಯಾದಿದಾರರಾದ ಶ್ರೀಮತಿ ವೇದಾ ರವರ ಸುಮಾರು 3.5 ವರ್ಷ ಪ್ರಾಯದ ಶ್ರೀನಿಧಿ ಎಂಬ ಮಗು ಪಿರ್ಯಾದಿದಾರರು ಕೆಲಸ ಮಾಡುವ ಪಂಪುವೆಲ್ಎಂಬಲ್ಲಿರುವ ಆಶಾಕಿರಣ ಎಂಬ ಸಂಸ್ಥೆಯ ಕಂಪೌಂಡಿನ ಒಳಗೆ ಗ್ರೌಂಡಿನಲ್ಲಿ ಸಂಜೆ ಸುಮಾರು 7-30 ಗಂಟೆಯಿಂದ 8-00 ಗಂಟೆಯ ಒಳಗೆ ಆಟವಾಡಿಕೊಂಡಿದ್ದವಳು ಕಾಣೆಯಾಗಿದ್ದು, ಅಲ್ಲಿ ಸುತ್ತಮುತ್ತಲೂ ಹುಡುಕಾಡಿದಲ್ಲಿ ಎಲ್ಲೂ ಪತ್ತೆಯಾಗದೇ ಇರುವುದಾಗಿದೆ.

No comments:

Post a Comment