Wednesday, May 7, 2014

Daily Crime Reports 07-05-2014

ದೈನಂದಿನ ಅಪರಾದ ವರದಿ.

ದಿನಾಂಕ 07.05.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

3

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.05.2014 ರಂದು ಪಿರ್ಯಾದುದಾರರಾದ ಶ್ರೀ ವಿಜಯಾ ರವರು ತನ್ನ ಸಂಬಂಧಿಕರಾದ ಕೃಷ್ಣ ಎಂಬವರ ಜೊತೆ ಮಂಗಳೂರು ನಗರದ ಉರ್ವಾ ಸ್ಟೋರ್ ಸಂತೋಷ್ ಬಾರ್ & ರೆಸ್ಟೋರೆಂಟ್ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಇವರ ಹಿಂದುಗಡೆಯಿಂದ ಅಂದರೆ ಲೇಡಿಹಿಲ್ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ KA-19-D-6108ನೇ ನಂಬ್ರದ ಕಾರನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಜೊತೆ ನಡೆದುಕೊಂಡು ಹೋಗುತ್ತಿದ್ದ ಕೃಷ್ಣ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣ ರವರು ರಸ್ತೆಗೆ ಬಿದ್ದು ಅವರ ತಲೆಯ ಎಡಬದಿಗೆ ಗಂಭೀರ ಗಾಯ ಹಾಗೂ ಎರಡೂ ಕೈ ಕಾಲುಗಳಿಗೆ ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದು, ಅಲ್ಲದೇ ಅಪಘಾತ ಸಮಯ ಆರೋಪಿ ಕಾರು ಚಾಲಕ ಕಾರನ್ನು ನಿಲ್ಲಿಸದೇ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ. 

 

2.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-04-2014 ರಂದು  ಬೆಳಿಗ್ಗೆ 6-20 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕ್ಷೀರಾ ಶರಣ್ ರವರು ಮಂಗಳ ಸ್ಟೆಡಿಯಂನ ಎದುರು ತನ್ನ ಬಾಬ್ತು ಕೆಎ 19 ಎಕ್ಸ 5060ನೇ ಆಕ್ಟಿವ್ ಹೊಂಡಾವನ್ನು ನಿಲ್ಲಿಸಿ ತನ್ನ ಸ್ಯಾಮಸಂಗ್ಗ್ಯಾಲಕ್ಷಿ ಗ್ರ್ಯಾಂಡ ಮೊಬೈಲ್ನ್ನು ಸೀಟಿನಡಿಯಲ್ಲಿಟ್ಟು ಮಂಗಳ ಸ್ಟೇಡಿಯಂನೊಳಗೆ ವಾಕಿಂಗ್ ಹೋಗಿದ್ದು ವಾಪಸ್ಸು 7-20ಗಂಟೆಗೆ ವಾಕಿಂಗ್ಮುಗಿಸಿ ಬಂದು ನೊಡುವಾಗ್ಯೆ ಸಿಟಿನಡಿಯಲ್ಲಿದ್ದ ಮೋಬೈಲ್ನ್ನು ಯಾರೋ ಕಳ್ಳರು ಕಳವು ಮಡಿಕೊಂಡು ಹೊಗಿದ್ದು ಬಳಿಕ ಕಳವಾದ ಮೋಬೈಲ್ ಈವರೆಗೆ ಹುಡುಕಾಡಿದಲ್ಲಿ ಸಿಗಬಹುದೆಂದು ಭಾವಿಸಿದ್ದು ಈತನಕ ಪತ್ತೆಯಾಗಿರುವದಿಲ್ಲ  ಕಳವಾದ ಮೋಬೈಲ್ನ ಅಂದಾಜು ಮೌಲ್ಯ 18000/- ರೂ ಆಗಬಹುದು.

 

3.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಐ. ಗಿರೀಶ್ ಪ್ರಭು ರವರ ತಾಯಿ ಕಸ್ತೂರಿ ಪ್ರಭು(75) ಹಾಗೂ ಮೊಮ್ಮಗಳು ದಿನಾಂಕ 05-05-2014 ರಂದು ರಾತ್ರಿ ಊಟ  ಮಾಡಿದ ಬಳಿಕ ಮನೆಯ ಒಂದು ರೂಮನಲ್ಲಿ ಮಲಗಿದ್ದು ಪಿರ್ಯಾದಿದಾರರು ಹಾಗೂ ಮಕ್ಕಳು ಇನ್ನೋಂದು ರೂಮನಲ್ಲಿ ಮಲಗಿದ್ದು ದಿನಾಂಕ 06-05-2014 ರಂದು ಸುಮಾರು 01-30 ಗಂಟೆಗೆ ಪಿರ್ಯಾದಿದಾರರ ತಾಯಿ ಮಲಗಿದ್ದ ಕೊಣೆ ಬಾಗಿಲನ್ನು ದೂಡಿ ಒಳಗೆ ಬಂದ ಶಬ್ದಕ್ಕೆ ಪಿರ್ಯಾಧಿದಾರರ ತಾಯಿ ಕಸ್ತೂರಿ ಪ್ರಭು ರವರು ಎಚ್ಚರವಾಗಿ ಬಾಗಿಲು ತೆಗೆದು ಹೊರಗೆ ಬಂದು ಕೊಣೆಯ ಸೊಪಾದಲ್ಲಿ ಕುಳಿತ್ತಿದ್ದ ಸಮಯ ಪಿರ್ಯಾದಿದಾರರ ತಾಯಿಯ ಅರಿವೆಗೆ ಬಾರದಂತೆ ಕೈಯಲ್ಲಿದ್ದ  ಸುಮಾರು 10 ಪವನ ತೂಕದ 5 ಚಿನ್ನದ ಬಳೆಗಳನ್ನು ಯಾರೊ ಒಬ್ಬ ಕಳ್ಳನು ಕಳುವುಮಾಡಿಕೊಂಡು ಹೋಗಿರುವುದಾಗಿದೆಕಳುವಾದ ಚಿನ್ನದ ಮೌಲ್ಯ ಅಂದಾಜು 2 ಲಕ್ಷ ರೂ ಆಗಬಹುದು.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-05-2014 ರಂದು ಬೆಳಿಗ್ಗೆ ಸುಮಾರು 07.00 ಗಂಟೆಗೆ ಟಿಪ್ಪರ್ ಲಾರಿ ನಂಬ್ರ KA19-C-354 ನೇದನ್ನು ಅದರ ಚಾಲಕ ಬಿಕರ್ನಕಟ್ಟೆ ಕಡೆಯಿಂದ ಕದ್ರಿ ಶಿವಭಾಗ್  ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನ್ ತಲುಪುವಾಗ, ಪದವು ಜಂಕ್ಷನ್ ಕಡೆಯಿಂದ ಮಹಾವೀರ್ ಜಂಕ್ಷನ್ ಕಡೆಗೆ ಬರುತ್ತಿದ್ದ  ಲಾರಿ ನಂಬ್ರ MH-12-FZ-8812 ನೇದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಲಾರಿ ಮಗುಚಿ ಬಿದ್ದು, ಲಾರಿಯಲ್ಲಿ ಚಾಲಕನಾಗಿದ್ದ ಅಮುರ್ ಬಾಲಾಜಿ ಎಂಬವರ ಎಡಕಣ್ಣಿನ ಮೇಲ್ಬಾಗದಲ್ಲಿ  ರಕ್ತಗಾಯ ಮತ್ತು ಬಲಕಾಲಿನ ಕೋಲು ಕಾಲಿಗೆ ರಕ್ತಗಾಯ ,ಹಾಗೂ ಲಾರಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಬಂಟಿ ಎಂಬವರ  ತಲೆಗೆ ಗಂಭೀರ ಸ್ವರೊಪದ ಗಾಯ ಉಂಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. MH-12-FZ-8812 ರ ಚಾಲಕ ಅಮುರ್ ಬಾಲಾಜಿ ಬಿಕರ್ನಕಟ್ಟೆ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯನ್ನು  ಕಂಡು  ತಕ್ಷಣವೇ ತನ್ನ ಲಾರಿಯನ್ನು ನಿಲ್ಲಿಸಲು ಅವಕಾಶ ವಿದ್ದರೂ ನಿಲ್ಲಿಸದೆ ನಿರ್ಲಕ್ಷತನದಿಂದ ಚಲಾಯಿಸಿದ್ದಾಗಿದೆ.

 

5.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಶ್ರೀನಿವಾಸ ರವರು ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ದಿವಾಕರ್ ಕನ್ಷ ಸ್ಟ್ರಕ್ಷನ್ ನ ದೇವಾನಂದ ಎಂಬವರ ಸೂಪರ್ ವೈಸರ್ ರವರ ಅಡಿಯಲ್ಲಿ ಕೆಲಸಮಾಡಿಕೊಂಡಿದ್ದು, ಸದರಿ ಕಟ್ಟಡದ ಕೂಲಿ ಕಾರ್ಮಿಕರ ವಾಸಕ್ಕಾಗಿ ಕಟ್ಟಿದ ಶೆಡ್ ನ ಎದುರುಗಡೆ ಇನ್ನೊಂದು ಶೆಡ್ ನಿರ್ಮಿಸಲು ದಿನಾಂಕ: 5-5-2014 ರಂದು ಸಂಜೆ ವೇಳೆಗೆ ಕಟ್ಟಿದ್ದ ಸಿಮೆಂಟ್ ಇಟ್ಟಿಗೆಯ ಗೋಡೆಯು ಆಟವಾಡುತ್ತಿದ್ದ ಪಿರ್ಯಾಧಿ ಶ್ರೀನಿವಾಸ ಎಂಬವರ ಮಗ  ಪ್ರಾಯ 7 ವರ್ಷದ ಧರ್ಶನ್ ಎಂಬಾತನ ಮೇಲೆ ರಾತ್ರಿ 8-30 ಗಂಟೆಗೆ ಬಿದ್ದು ತಲೆಗೆ ಹಾಗೂ ಬಲಕೈಗೆ ತೀವ್ರ ತರದ ರಕ್ತಗಾಯವಾಗಿದ್ವನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಈ ಘಟನೆಗೆ ಕಟ್ಟಡದ ಸೂಪರ್ ವೈಸರ್ ದೇವಾನಂದರವರು ಶೆಡ್ಡಿನ ಬಳಿಯಿಂದ ಕೂಲಿ ಕಾರ್ಮಿಕರ ಮಕ್ಕಳು ಆಟವಾಡುತ್ತಿರುವುದು ಹಾಗೂ ಹಾದು ಹೋಗುವುದು ತಿಳಿದಿದದ್ದರೂ ಕೂಡಾ ಯಾವುದೇ ಜಾಗ್ರತೆ ವಹಿಸದೇ ನಿರ್ಲಕ್ಷ್ಯತನದಿಂದ ಶೆಡ್ ನಿರ್ಮಿಸಿದ್ದರಿಂದ ಸದರಿ ಸಿಮೆಂಟ್ ಇಟ್ಟಿಗೆಯ ಗೋಡೆಯ ಬಳಿ ಆಟವಾಡುತ್ತಿದ್ದ ದರ್ಶನ್ ಮೇಲೆ ಬಿದ್ದು ಈ  ಘಟನೆ ನಡೆಯಲು ಕಾರಣವಾಗಿರುತ್ತದೆ.

 

6.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-05-2014 ರಂದು ಪಿರ್ಯಾದಿದಾರರಾದ ಶ್ರೀ ಅಮುರ್ ಬಾಲಾಜಿ ನಿದ್ಬಾನಿ ರವರು ತನ್ನ ಬಾಬ್ತು ಲಾರಿ ನಂಬ್ರ. MH 12 FZ 8812 ರಲ್ಲಿ ಕೋಕೋ ಕೋಲಾ, ಸ್ಪ್ರೈಟ್, ತಮ್ಮಸ್ಪ್, ಪಾಂಟಾ ಕೋಲ್ಡ್ರಿಂಕ್ಸ್ ಟಿನ್ ಗಳನ್ನು ಹೇರಿಕೊಂಡು ಪೂನಾದಿಂದ ಕೊಚ್ಚಿ ಕಡೆಗೆ ಹೋಗುತ್ತಿರುವಾಗ ದಿನಾಂಕ: 06-05-2014 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯ ಸಮಯಕ್ಕೆ ಮಂಗಳೂರಿನ ನಂತೂರು ಎಂಬಲ್ಲಿ ತಲಪುವಾಗ್ಯೆ ಟಿಪ್ಪರ್ ಲಾರಿ ನಂಬ್ರ KA 19 C 354 ನೇದರ ಚಾಲಕ ತನ್ನ ಬಾಬ್ತು ಟಿಪ್ಪರ್ ಲಾರಿಯನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಮಗುಚ್ಚಿ ಬಿದ್ದು, ಪಿರ್ಯಾದಿದಾರರ ಲಾರಿಯಲ್ಲಿ ಹೇರಿಕೊಂಡಿದ್ದ ಕೋಲ್ಡ್ರಿಂಕ್ಸ್ ಟಿನ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಆ ಸಮಯ ತನಗೆ ಗುರುತು ಪರಿಚಯವಿರದ ಕೆಲವು ವ್ಯಕ್ತಿಗಳು ಕೋಲ್ಡ್ರಿಂಕ್ಸ್ ನ ಬಾಕ್ಸ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದರ ಅಂದಾಜು ಮೌಲ್ಯ ಕೂಡಾ ತನಗೆ ತಿಳಿದುಬರುವುದಿಲ್ಲ.   

 

7.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಜಯ ನಾಯಕ್ ಎಂಬವರು ತನ್ನ ಬಾಬ್ತು ಅಕ್ಸೆಸ್ ಮೋಟಾರ್ ಸೈಕಲ್ ನಂ ಕೆ ಎ ಇಜಿ 1780 ನೇದನ್ನು ದಿ 04-05-2014 ರಂದು ಚಲಾಯಿಸಿ ಕೊಂಡು ಬೆಳುವಾಯಿಯಿಂದ ಪಣಂಬೂರು ಕಡೆಗೆ ಹೋಗುತ್ತಿರುವ ಸಮಯ 21.00 ಗಂಟೆಗೆ ತನ್ನ ಎದುರುನಿಂದ ಬಂದ ಕೆಎ-19-ಇಎ-8455 ಮೋಟಾರ್ ಸೈಕಲ್ ಸವಾರ ಸಚಿನ್ ಎಂಬಾತನು ಸಹ ಸವಾರ ರವಿ ಎಂಬಾತನನ್ನು ಕುಳ್ಳಿರಿಸಿಕೊಂಡು ಅತೀ ವೇಗ, ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಆಕ್ಸೆಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಹಾಗೂ ಆರೋಪಿಯ ಜೊತೆಯಲ್ಲಿದ್ದ ಸಹ ಸವಾರನು  ಆಕ್ಸೆಸ್  ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಮೂಗಿಗೆ, ಗದ್ದಕ್ಕೆ, ಎಡ ಕಣ್ಣಿಗೆ ರಕ್ತ ಗಾಯವಾಗಿರುತ್ತದೆ. ಬಳಿಕ ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.

 

8.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೈಯದ್ ಅಬ್ದುಲ್ಲಾ ರವರ ತಮ್ಮ ಸೈಯ್ಯದ್ ಅಹಮ್ಮದ್ (ಅಸ್ಲಮ್ಎಂಬವರು ಮಂಗಳೂರು ತಾಲೂಕು ಕಾವೂರು ಗ್ರಾಮದ ಕೆ...ಸಿ.ಎಲ್  ಟೌನ್ ಶಿಪ್ ನಲ್ಲಿ ವಾಸವಾಗಿದ್ದುಇವರು ಬುದ್ದಿಮಾಂದ್ಯರಾಗಿದ್ದು, ದಿನಾಂಕ 04-05-2014ರಂದು ಸಾಯಂಕಾಲ 06-00 ಗಂಟೆಗೆ ಮನೆಯಿಂದ ಹೊರಗೆ ಹೋದವರು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

9.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-05-2014 ರಂದು ಪಿರ್ಯಾದುದಾರರಾದ ಶ್ರೀ ದೇವದಾಸ್ ರವರು ಯಯ್ಯಾಡಿ ಕೆಆರ್ಎಸ್‌‌ ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸಮಯ ಪಿರ್ಯಾದಿದಾರರ ಮಾವನಾದ ಸತೀಶ್ಎಂಬುವವರ ಜೊತೆಯಲ್ಲಿ ಮೇಲ್ತಲಪಾಡಿ ಕಡೆಗೆ ನಡೆದುಕೊಂಡು ತಲಪಾಡಿ ಚೆಕ್ಪೊಸ್ಟ್ಕಳೆದು ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಮಂಜೇಶ್ವರ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬಳಿಯಲ್ಲಿದ್ದ ಮಾವ ಸತೀಶ್ರಿಗೆ ಡಿಕ್ಕಿ ಹೊಡೆದನು ಇದರಿಂದ ಸತೀಶ್ರವರು ರಸ್ತೆಗೆ ಬಿದ್ದು ಮೂರ್ಚೆ ತಪ್ಪಿದ್ದು, ಅವರ ತಲೆಗೆ, ಬಲಕೈಗೆ, ಕಾಲಿಗೆ ಗಾಯಗಳಾಗಿರುತ್ತವೆ ನಂತರ ಅಲ್ಲಿಗೆ ಬಂದಿದ್ದ ಕಾರಿನ ಚಾಲಕನನ್ನು ವಿಚಾರಿಸಲಾಗಿ ಹೆಸರು ಶ್ರೀಜಿತ್ಮೊಡ ಎಂಬುದಾಗಿ ತಿಳಿಸಿರುತ್ತಾನೆ ನಂತರ ಗಾಯಾಳು ಸತೀಶ್ರವರನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತೇವೆ, ನಂತರ ರಾತ್ರಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾದಿಕಾರಿಯವರು ಸತೀಶ್ರವರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ, ಈ ಅಪಘಾತಕ್ಕೆ KA-19-MB-5411 ನೇದರ ಕಾರ್ಚಾಲಕ ಶ್ರೀಜಿತ್ಮಾಡ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿರುವುದರಿಂದಲೇ ಈ ಅಪಘಾತವು ಸಂಬವಿಸಿರುವುದಾಗಿದೆ.

 

10.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 3-5-2014 ರಂದು ಫಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಡಿ'ಸೋಜಾ ರವರು ತನ್ನ ನೆರೆಮನೆಯ ಹ್ಯಾರಿ ಡಿ ಸೋಜ ರವರ ಮಗನ ರೋಸ್ ಕಾರ್ಯಕ್ರಮಕ್ಕೆ ರಾತ್ರಿ ಸಮಯ ಹೋದವರು ಕಾರ್ಯಕ್ರಮ ಮುಗಿಸಿಕೊಂಡು ಮರುದಿನ ತಾರೀಕು. 4-5-2014 ರಂದು ಬೆಳಗಿನ ಜಾವ ನಡೆದುಕೊಂಡು ಬರುತ್ತಾ ಬೆಳಿಗ್ಗೆ ಸುಮಾರು 5-00 ಗಂಟೆಯ ಸಮಯಕ್ಕೆ ಜಪ್ಪಿನಮೊಗರು ಗ್ರಾಮದ ಜಪ್ಪಿನಮೊಗರು ಹೊಗೆ ಎಂಬಲ್ಲಿ ತನ್ನ ಮನೆಯ ಸಮೀಪಕ್ಕೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ಮನೆಯ ಬಳಿ ಇದ್ದ ತೆಂಗಿನ ಮರದ ಎಡೆಯಲ್ಲಿ ಅಡಗಿ ಕುಳಿತ್ತಿದ್ದ ಆರೋಪಿ ಕ್ಯಾಲ್ವಿನ್ ಡಿ ಸೋಜನು ಒಮ್ಮೆಲೇ ಫಿರ್ಯಾದಿದಾರರ ಮೇಲೆ ಎರಗಿ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಆತನ ಕೈಯಲ್ಲಿದ್ದ ಮರದ ಸೋಂಟೆಯಿಂದ ಅಂಗವಿಕಲನಾದ ಫಿರ್ಯಾದಿದಾರರ ಕೃತಕ ಕಾಲಿಗೆ ಹೊಡೆದ ಪರಿಣಾಮ ಫಿರ್ಯಾದಿದಾರರು ಕೆಳಗೆ ಬಿದ್ದಾಗ ಅವರ ಎಡ ಕಿವಿಗೆ ತುಳಿದು ಗಾಯಗೊಳಿಸಿದಲ್ಲದೆ, ಮರದ ಸೋಂಟೆಯಿಂದ ಫಿರ್ಯಾದಿದಾರರ ಎಡ ಕಾಲಿನ ಕೋಲು ಕಾಲಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದಲ್ಲದೆ ಆರೋಪಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಫಿರ್ಯಾದಿದಾರರಿಗೆ ತುಳಿದು, ಮೈಕೈಗೆ ಹೊಡೆದು ನೋವುಂಟು ಮಾಡಿದಾಗ ಫಿರ್ಯಾದಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿ ಅವರ ಹೆಂಡತಿಯ ಅಣ್ಣ ಆ್ಯಂಟನಿ ಡಿ ಸೋಜನು ಓಡಿಕೊಂಡು ಬರುವುದನ್ನು ಕಂಡು ಕ್ಯಾಲ್ವಿನ್ ಡಿ ಸೋಜ ಹಾಗೂ ಆತನ ಜೊತೆಯಲ್ಲಿದ್ದವರು ಮೋಟಾರ್ ಸೈಕಲಿನೊಂದಿಗೆ ಅಲ್ಲಿಂದ ಓಡಿ ಹೋಗಿರುತ್ತಾರೆ. ಗಾಯಗೊಂಡ ಫಿರ್ಯಾದಿದಾರರು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಫಿರ್ಯಾದಿದಾರರು ಅಂಗವಿಕಲನಾಗಿರುವುದರಿಂದ ಹಾಗೂ ಅವರಿಗುಂಟಾದ ಗಾಯದ ನೋವಿನಿಂದಿ ಅದೇ ದಿನ ದೂರು ನೀಡಲು ಸಾಧ್ಯವಾಗದೆ ತಡವಾಗಿ ದೂರು ನೀಎಇರುವುದಾಗಿದೆ.

 

11.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2014 ರಂದು ಅಪರಾಹ್ನ 2-00 ಗಂಟೆಯಿಂದ ದಿನಾಂಕ 21-04-2014 ರ ಬೆಳಿಗ್ಗೆ 09-00 ಗಂಟೆಯ ಮದ್ಯದ ಸಮಯದಲ್ಲಿ  ಪಿರ್ಯಾದಿದಾರರಾದ ಶ್ರೀಮತಿ ಕೆ. ಸುಮತಿ ರವರ ಮನೆಯಿಂದ ಸುಮಾರು 120 ಗ್ರಾಂ ತೂಕದ ರೂ 2,00,000/- ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.

 

12.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-05-2014 ರಂದು ಪಿರ್ಯಾದಿದಾರರಾದ ಶ್ರೀ ಸತೀಶ್ ರವರ ತಾಯಿಯವರಾದ ಶ್ರೀಮತಿ ಕೂಸಮ್ಮ ಪ್ರಾಯ 52 ವರ್ಷ ಎಂಬವರು ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಎಂಬಲ್ಲಿ ಫಿಝಾ ಮೈದಾನದ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಹಿಂದಿನಿಂದ ಅಂದರೆ ಕಾಟಿಪಳ್ಳ ಕಡೆಯಿಂದ ಸುರತ್ಕಲ್ ಕಡೆಗೆ ಯಾವುದೋ ಒಂದು ಬೈಕನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರ ತಾಯಿಗೆ ಡಿಕ್ಕಿ ಪಡಿಸಿ ಬೈಕ್ ನ್ನು ಅಲ್ಲಿ ನಿಲ್ಲಿಸದೇ ಮುಂದೆ ಪರಾರಿಯಾದ ಬಗ್ಗೆ ಪಿರ್ಯಾದಿದಾರರ ಸ್ನೇಹಿತರಾದ ಸಾಗರ್ ರವರು ತಿಳಿಸಿದಂತೆ ಪಿರ್ಯಾದಿದಾರರು ಅಪಘಾತದಿಂದ ಬಲಕೆನ್ನೆಗೆ ಗಾಯಗೊಂಡ ಅವರ ತಾಯಿಯನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಗಾಯಾಳು ಮಾತನ್ನಾಡದ ಸ್ಥಿತಿಯಲ್ಲಿ ಇದ್ದು ಅವರ ಆರೈಕೆಯಲ್ಲಿ ಪಿರ್ಯಾದಿದಾರರು ಇದ್ದುದರಿಂದ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ.

 

13.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 0405.2014 ರಂದು  ಫಿರ್ಯಾದಿದಾರರಾದ ಶ್ರೀ ಜೊಸೇಫ್ ಫರ್ನಾಂಡಿಸ್ ರವರು ತನ್ನ ಬಾಬ್ತು  KA 19  EG 5606 ನೇ  ಮೋಟಾರು ಸೈಕಲ್ನಲ್ಲಿ ತನ್ನ ಪತ್ನಿ ಫ್ಲಾವಿಯಾ ಫಿಲೋಮಿನಾರವರನ್ನು ಹಿಂಬದಿ ಸವಾರರನ್ನಾಗಿ  ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ತಮ್ಮ ಮನೆ ಕಡೆಗೆ ಹೋಗುತ್ತಾ     ರಾತ್ರಿ 22:30 ಗಂಟೆ ಸುಮಾರಿಗೆ  ಜಪ್ಪಿನಮೊಗರು  ಕಂರ್ಬಿಸ್ಥಾನ ದ್ವಾರದ ಹತ್ತಿರ ತಲಪಿದಾಗ  ತೊಕ್ಕೊಟ್ಟು ಕಡೆಯಿಂದ KA 19 MC 2175 ನೇ  ಕಾರನ್ನು  ಅದರ  ಚಾಲಕ ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರ  ಮೋಟಾರು  ಸೈಕಲ್ಗೆ ಡಿಕ್ಕಿ  ಹೊಡೆದು ಕಾರನ್ನು  ನಿಲ್ಲಿಸದೇ  ಪರಾರಿಯಾಗಿದ್ದುಈ ಅಪಘಾತದಿಂದ ಪಿರ್ಯಾದಿದಾರರ ಎಡಕಾಲಿಗೆಮತ್ತು  ಎಡ ಕೈಗೆಮತ್ತು  ಅವರ ಹೆಂಡತಿ ಫ್ಲಾವಿಯಾ ಫಿಲೋಮಿನಾರವರಿಗೆ  ಎಡಕಾಲಿಗೆಮತ್ತು  ಎಡ ಕೈಗೆಗೆ ರಕ್ತಗಾಯವಾಗಿರುವುದಾಗಿದೆ.

No comments:

Post a Comment