ದೈನಂದಿನ ಅಪರಾದ ವರದಿ.
ದಿನಾಂಕ 29.05.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014 ರಂದು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಬರ್ಕೆ ಠಾಣಾ ಪಿಎಸ್ಐ ಶ್ರೀ ಮೊಹಮ್ಮದ್ ಶರೀಫ್ ರವರು ಠಾಣಾ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 10-30 ಗಂಟೆಗೆ ಎಂ.ಜಿ ರಸ್ತೆಯಿಂದ ವಿವೇಕನಗರ ತಿರುವು ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯ ಎಡ ಬದಿಯಲ್ಲಿ ಕೈಯಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ನಲ್ಲಿ ತುಂಬಿದ ಕಟ್ಟನ್ನು ಹಿಡಿದುಕೊಂಡು ನಿಂತಿದ್ದ ಹುಡುಗನು ವಾಹನವನ್ನು ನೋಡಿ ತನ್ನ ಬಳಿ ಇದ್ದ ಕಟ್ಟನ್ನು ಬಿಸಾಡಿದ್ದು ಇದರಿಂದ ಸಂಶಯಗೊಂಡು ವಿಚಾರಿಸಿದಾಗ ಆತನು ತಾನು ಬಿಸಾಡಿದ ಕಟ್ಟದಲ್ಲಿ ಗಾಂಜಾ ಇರುವುದಾಗಿ ಅದನ್ನು ಹೆಚ್ಚಾಗಿ ಶಾಲಾ ಗಿರಾಕಿಗಳಿಗೆ ಮಾರುತ್ತಿರುವುದಾಗಿ ತಿಳಿಸಿದ್ದು, ಸದ್ರಿ ಪ್ಲಾಸ್ಟಿಕ್ ಕಟ್ಟದಲ್ಲಿ ಸಣ್ಣ ಸಣ್ಣ ಬಿಳಿ ಪ್ಲಾಸ್ಟಿಕ್ ಪೊಟ್ಟಣದಲ್ಲಿ ತುಂಬಿ ಪ್ಯಾಕ್ ಮಾಡಿದ 70 ಗಾಂಜಾ ಪ್ಯಾಕೆಟ್ ಇದ್ದು ಅದರ ತೂಕ ಒಟ್ಟು 200 ಗ್ರಾಂ ಆಗಬಹುದು. ಇದರ ಅಂದಾಜು ಬೆಲೆ 7000/- ಆಗಬಹುದು. ಆರೋಪಿತರು ಯಾವುದೇ ಪರವಾನಿಗೆ ಇಲ್ಲದೇ ಗಾಂಜಾವನ್ನು ಹೊಂದಿರುವುದರಿಂದ ಆರೋಪಿತರ ಮೇಲೆ ಪ್ರಕರಣ ದಾಖಲಿಸಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014 ರಂದು ರಾತ್ರಿ ಸುಮಾರು 19-00 ಗಂಟೆ ಸಮಯಕ್ಕೆ ಕೆಎ-20-ಝಡ್-2398ನೇ ನಂಬ್ರದ ಕಾರನ್ನು ಅದರ ಚಾಲಕ ಮಂಜುನಾಥ್ ಮಲ್ಯ ರವರು ಹಳೆಯಂಗಡಿ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಡುಪಣಂಬೂರು ಕಿರುಸೇತುವೆಯ ನಂತರ ಕಾರನ್ನು ಚತುಷ್ಪಥ ರಸ್ತೆಯ ಎಡಬದಿಯ ರಸ್ತೆಯಲ್ಲಿ ಹೋಗುವ ಬದಲು, ಬಲಬದಿಯ ಕೋಲ್ನಾಡು ಕಡೆಯಿಂದ ಹಳೆಯಂಗಡಿ ಕಡೆಗೆ ಹಾದು ಹೋಗುವ ರಾ,ಹೆ-66 ಏಖಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು, ಕೋಲ್ನಾಡು ಜಂಕ್ಷನ್ ಬಳಿ, ಕೋಲ್ನಾಡುವಿನಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಕೆಎ-19-ಇಕೆ-1308ನೇ ನಂಬ್ರದ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿದ್ದು, ಈ ಅಪಘಾತದ ಪರಿಣಾಮ ಮೋಟಾರ್ ಸೈಕಲ್ ಸವಾರ ಅನಿಶ್ ಶೆಟ್ಟಿ ಎಂಬವರಿಗೆ ದೇಹಕ್ಕೆ ತೀವ್ರಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹಸವಾರ ರಾಕೇಶ್ ಶೆಟ್ಟಿಗಾರ್ ಎಂಬವರಿಗೆ ಮುಖಕ್ಕೆ, ಬಲಕೈ ಮತ್ತು ಬಲಕಾಲಿಗೆ ಜಖಂ ಉಂಟಾಗಿದ್ದು, ರಾಕೇಶ್ ಶೆಟ್ಟಿಗಾರ್ ಎಂಬವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಅಪಘಾತಪಡಿಸಿದ ಕಾರು ಚಾಲಕ ಕಾರನ್ನು ಅಪಘಾತ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014 ರಂದು ಬೆಳಿಗ್ಗೆ ಹರಿಶ್ಚಂದ್ರ ಆಳ್ವ ಎಂಬವರು ತನ್ನ ಕೆಎ-19-ಇಜೆ- 8800 ನಂಬ್ರದ ಮೋಟಾರ್ ಸೈಕಲಿನಲ್ಲಿ ಕುಳಾಯಿಯಿಂದ ಉರ್ವಾಸ್ಟೋರ್ ಕಡೆಗೆ ಕಚೇರಿ ಕೆಲಸಕ್ಕೆ ಹೋಗುತ್ತಾ ಬೆಳಿಗ್ಗೆ 8-30 ಗಂಟೆಗೆ ಕೂಳೂರು ಬಳಿ 4 ನೇ ಮೈಲ್ ಬಳಿ ತಲುಪಿದಾಗ ಎದುರುಗಡೆಯಿಂದ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಕೆಎ-19-ಸಿ-5446 ನಂಬ್ರದ 2(ಎ) ಸಿಟಿಬಸ್ನ್ನು ಅದರ ಚಾಲಕ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದಿದ್ದು, ಮೋಟಾರ್ ಸೈಕಲ್ ಸವಾರರಿಗೆ ತೀವ್ರ ತರಹದ ರಕ್ತಗಾಯವಾಗಿರುವುದಾಗಿದೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-05-2014 ರಂದು ಸುಮಾರು 14-45 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ರಘುವೀರ್ ರವರು ಮೂಡುಶೆಡ್ಡೆ ಗ್ರಾಮದ ಶ್ಮಶಾನದ ಬಳಿಯ ಅಡ್ಡರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಪಿರ್ಯಾದುದಾರರ ಪರಿಚಯದ ಬಶೀರ್ ಎಂವಾತನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು "ನೀನು ಬಾರಿ ಹಣ ಕೇಳುತ್ತಿಯಾ" ಎಂದು ಹೇಳಿ ಕೈಯಿಂದ ಪಿರ್ಯಾದುದಾರರ ಎದೆಗೆ ಹೊಡೆದು ಕಾಲಿಗೆ ಮತ್ತು ಕೈಗೆ ರಕ್ತಗಾಯ ಮಾಡಿದ್ದು, ಪಿರ್ಯಾದುದಾರರು ಬೊಬ್ಬೆ ಹೊಡೆದಾಗ ಜನರು ಬರುವುದನ್ನು ಕಂಡು ಆಲ್ಲಿಂದ ಓಡಿರುವುದಾಗಿಯೂ, ಪಿರ್ಯಾದುದಾರರು ನೀಡಿದ 20 ಸಾವಿರ ಹಣವನ್ನು ವಾಪಾಸು ಕೊಡುವರೇ ಒತ್ತಾಯ ಮಾಡಿದ್ದು ಇದೇ ಕಾರಣದಿಂದ ಕೋಪಗೊಂಡು ಹಲ್ಲೆ ಮಾಡಿದ್ದಾಗಿರುವುದಾಗಿದೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ. ಚಲುವರಾಜು ಪೊಲೀಸ್ ನಿರೀಕ್ಷಕರು ಮಂಗಳೂರು ಉತ್ತರ ಪೊಲೀಸ್ ಠಾಣೆ ರವರಿಗೆ ದಿನಾಂಕ 28-05-2014 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಠಾಣೆಯಲ್ಲಿದ್ದ ಸಮಯ ಠಾಣಾ ವ್ಯಾಪ್ತಿಯ ಬಂದರಿನ ಜೆ.ಎಂ ರಸ್ತೆಯ ಅನ್ಸಾರಿ ಕ್ರಾಸ್ ರಸ್ತೆಯಲ್ಲಿ ಟಿ.ಪಿ ಅಬ್ದುಲ್ ರಹೀಂ ಎಂಬಾತನು ಆತನ ಮನೆಯ ಹತ್ತಿರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ಅನುಮತಿ ಪಡೆದು ಠಾಣಾ ಪಿ.ಎಸ್.ಐ ಹಾಗೂ ಸಿಬ್ಬಂದಿ ಹಾಗೂ ಪಂಚಯತುದಾರರು ಮತ್ತು ತಹಶೀಲ್ದಾರರೊಂದಿಗೆ ಸ್ಥಳಕ್ಕೆ ತೆರಳಿದ್ದು, ಮಂಗಳೂರು ಬಂದರಿನ ಜೆ.ಎಂ ರಸ್ತೆಯ ಅನ್ಸಾರಿ ಕ್ರಾಸ್ ರಸ್ತೆಯ ಬಳಿಯಲ್ಲಿ ಬಿಳಿ ಮತ್ತು ಕಪ್ಪು ಚೌಕುಳಿಯ ಶರ್ಟ್ ಮತ್ತು ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿ ಅನುಮಾನಸ್ಪದವಾಗಿ ನಿಂತುಕೊಂಡಿದ್ದ ವ್ಯಕ್ತಿಯ ಬಳಿ ಹೋಗಿ ಆತನ ಹೆಸರು ಕೇಳಲಾಗಿ ಟಿ.ಪಿ. ಅಬ್ದುಲ್ ರಹೀಂ @ ರಹೀಂ (39) ತಂದೆ: ಅಜೀಜ್, ವಾಸ: ಅನ್ಸಾರಿ ಕ್ರಾಸ್, ಜೆ.ಎಂ ರಸ್ತೆ, ಬಂದರು, ಮಂಗಳೂರು ಎಂಬುದಾಗಿ ತಿಳಿಸಿದ್ದು, ಆತನ ಅಂಗ ಜಪ್ತಿ ಮಾಡಿದಾಗ ಶರ್ಟ್‌ನ ಕಿಸೆಯಲ್ಲಿ ಚಿಕ್ಕ 4 ಪ್ಯಾಕೇಟ್ ಗಾಂಜಾ ಇದ್ದು, ಇದನ್ನು ಯಾಕೆ ನಿಮ್ಮ ವಶದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಈ ಗಾಂಜಾ ಪ್ಯಾಕೇಟ್‌ನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದು, ಉಳಿದ ಗಾಂಜಾ ಎಲ್ಲಿದೆ ಎಂದು ಪ್ರಶ್ನಿಸಿದಾಗ ಆತನ ವಾಸ್ತವ್ಯದ ಮನೆಯ ಬೆಡ್ರೂಮಿನ ಒಳಗಡೆ ಕರೆದುಕೊಂಡು ಹೋಗಿ ಮಂಚದ ಹಾಸಿಗೆಯ ಕೆಳಗಡೆಯಿಂದ ಬಿಳಿ ಪ್ಲಾಸ್ಟಿಕ್ ತೊಟ್ಟೆಯೊಂದನ್ನು ತೆಗೆದು ಹಾಜರುಪಡಿದ್ದನ್ನು ಪರಿಶೀಲಿಸಿದ್ದಲ್ಲಿ ಅದರಲ್ಲಿ 68 ಪ್ಯಾಕೇಟ್ ಗಾಂಜಾವಿದ್ದು, ಆತನ ಕಿಸೆಯಲ್ಲಿ ಸಿಕ್ಕಿದ 4 ಪ್ಯಾಕೇಟ್ ಸೇರಿ ಒಟ್ಟು 72 ಪ್ಯಾಕೇಟ್ ಗಾಂಜಾವಿದ್ದು, ಒಟ್ಟು 312 ಗ್ರಾಂ ತೂಕವಿದ್ದು, ಇದರ ಅಂದಾಜು ಮೌಲ್ಯ ರೂ 7,000/- ಆಗಬಹುದು. ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ದ ಕ್ರಮ ಜರುಗಿಸಿರುವುದಾಗಿದೆ.
6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-05-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಆರ್. ಸಗುಂತಲಾ, ಸಬ್ ಪೊಸ್ಟ್ ಮಾಸ್ಟರ್, ಸಬ್ ಪೊಸ್ಟ್ ಆಫೀಸ್, ಕೊಡಿಯಾಲ್ ಬೈಲ್, ಮಂಗಳೂರು ರವರು ಎಂದಿನಂತೆ ಸಂಜೆ 6-00 ಗಂಟೆಗೆ ಕೆಲಸವನ್ನು ಮುಗಿಸಿ ಕಛೇರಿಯ ಬೀಗ ಹಾಕಿ ಹೋದವರು ದಿನಾಂಕ 26-05-2014 ರಂದು ಬೆಳಿಗ್ಗೆ 07-30 ಗಂಟೆಗೆ ಕಛೇರಿಯನ್ನು ತೆರೆದು, ಕಛೇರಿಯ ಹಿಂಬಾಗದಲ್ಲಿರುವ ಮಹಿಳೆಯರ ಡ್ರೆಸ್ಸಿಂಗ್ ರೂಮ್ ಮತ್ತು ಸ್ಟಾಕ್ ರೂಂನ ಮುಖ್ಯ ದ್ವಾರದ ಗೇಟಿಗೆ ಹಾಕಿದ ಬೀಗವನ್ನು ತೆಗೆದು ನೋಡಿದಾಗ ಡ್ರೆಸ್ಸಿಂಗ್ ರೂಮಿನಲ್ಲಿದ್ದ ಒಂದು ಹಳೆಯ ಟೇಬಲ್ ಫ್ಯಾನ್, ಸ್ಟಾಕ್ ರೋಮಿನಲ್ಲಿದದ ಒಂದು ಹಾಳಾಗಿರುವ ಸಿಪಿಯು ಮತ್ತು ಹಿಂಬದಿ ಇದ್ದ ಒಂದು ಲೆಂತ್ ಪಿವಿಸಿ ಪೈಪ್ ಕಾಣೆಯಾಗಿದ್ದು, ಅದರ ಒಟ್ಟು ಬೆಲೆ ಸುಮಾರು 3,000/- ರೂ ಆಗಬಹುದು.
No comments:
Post a Comment