ದೈನಂದಿನ ಅಪರಾದ ವರದಿ.
ದಿನಾಂಕ 23.05.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.05.2014 ರಂದು ಪಿರ್ಯಾದುದಾರರಾದ ಡಾ. ಭಾಸ್ಕರ್ ಕೆ.ಆರ್. ರವರು ತಮ್ಮ ಬಾಬ್ತು KA-05-MR-1899ನೇ ನಂಬ್ರದ ಕಾರನ್ನು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಕಡೆಯಿಂದ ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮದ್ಯಾಹ್ನ 1:15 ಗಂಟೆ ಸಮಯಕ್ಕೆ ಕ್ಲಾಕ್ ಟವರ್ ನಲ್ಲಿರುವ ಮಂಗಳಾದೇವಿ ಜ್ಯೂವೆಲ್ಲರಿ ಶಾಫ್ ಬಳಿ ತಲುಪಿ ವಾಹನ ಸಂಚಾರ ತಡೆ ಇದ್ದುದರಿಂದ ಪಿರ್ಯಾದುದಾರರು ತಮ್ಮ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡಿರುವ ಸಮಯ ರಾವ್ & ರಾವ್ ಕಡೆಯಿಂದ ಹಂಪನಕಟ್ಟೆ ಕಡೆಗೆ KA-19-AD-6669ನೇ ನಂಬ್ರದ ಬಸ್ಸನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ನಿಂತಿದ್ದ ಕಾರಿನ ಬಲಗಡೆಯಿಂದ ಚಲಾಯಿಸಿಕೊಂಡು ಹೋಗುವ ಸಮಯ ಪಿರ್ಯಾದುದಾರರ ಕಾರಿನ ಮುಂಬಿದಿಗೆ ಢಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿರುವುದಾಗಿದೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-05-2014 ರಂದು ಮಧ್ಯಾಹ್ನ 14-00 ಗಂಟೆಗೆ ಹೊಯಿಗೆ ಬೈಲ್ ಮಾರ್ಡನ್ ರೈಸ್ ಮಿಲ್ ಕಲ್ಲುರ್ಟಿ ದೈವಸ್ಥಾನ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಜನಾರ್ಧನ ರವರ ಮಗನಾದ ಸಂಜಯ್ @ ವರುಣ್ ಎಂಬವನು ತನ್ನ ಸ್ನೇಹಿತರಾದ ರಾಜೇಶ್ ಮತ್ತು ಮಹೇಶ ಎಂಬವರೊಂದಿಗೆ ಇದ್ದಾಗ ಆಶು @ ಅಶ್ರಿತ್ ಎಂಬವನು ತಾನು ಹೊಂದಿದ್ದ ಡಿಯೋ ಕಪ್ಪು-ಗ್ರೇ ಬಣ್ಣದ ಮೋಟಾರು ಸೈಕಲ್ ನಲ್ಲಿ ಬಂದು ಸಂಜಯ್ @ ವರುಣನ ತಲೆಗೆ, ಕುತ್ತಿಗೆಗೆ, ಹೊಟ್ಟೆಗೆ ಹಿಗ್ಗಾಮುಗ್ಗವಾಗಿ ಹರಿತವಾದ ಚೂರಿಯಿಂದ ತಿವಿದಿದ್ದು, ತಿವಿತದ ತೀವ್ರತೆಗೆ ಸಂಜಯ್ @ ವರುಣನು ಅಲ್ಲೇ ಬಿದ್ದಾಗ ಆಶು ಮತ್ತು ಆತನೊಂದಿಗೆ ಬಂದಿದ್ದ ಇತರರು ಓಡಿ ಹೋಗಿದ್ದು, ಅಚಾನಕ್ ಆಗಿ ನಡೆದ ಈ ಘಟನೆಯಿಂದ ಸಂಜಯ್ @ ವರುಣನ ಜೊತೆಯಲ್ಲಿದ್ದ ರಾಜೇಶ್ ಎಂಬವನು ಅಲ್ಲಿಂದ ಓಡಿ ಬಂದು ಸಂಜಯ್ @ ವರುಣನ ತಂದೆ ಫಿರ್ಯಾದುದಾರರಾದ ಜನಾರ್ಧನ ರವರಿಗೆ ನಡೆದ ಘಟನೆ ಬಗ್ಗೆ ತಿಳಿಸಿ ಸಂಜಯ್ @ ವರುಣ್‌ನನ್ನು ಪೊಲೀಸರು ಎ.ಜೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರಬೇಕೆಂದು ಹೇಳಿದಂತೆ ಫಿರ್ಯಾದುದಾರರು ಕೂಡಲೇ ಎ.ಜೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋಗಿ ವೈದ್ಯಾಧಿಕಾರಿರವರಲ್ಲಿ ವಿಚಾರಿಸಿದಾಗ ಸಂಜಯ್ @ ವರುಣನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಘಟನೆಗೆ ಕಾರಣವೇನೆಂದರೆ ಸಂಜಯ್ @ ವರುಣನ ಸ್ನೇಹಿತರಾದ ಚಿನ್ನು ಮತ್ತು ಜಯಪ್ರಕಾಶ್ ಇವರುಗಳು ಕುದ್ರೋಳಿಯಲ್ಲಿರುವ ಪರೋಟಿ ಅಂಗಡಿಯಲ್ಲಿ ಇದ್ದಾಗ ಆಶು @ ಆಶ್ರಿತ್ ಈತನು ಅವರುಗಳಿಗೆ ಸಿಗರೇಟಿನಿಂದ ಸುಟ್ಟಿದ್ದು, ಆ ವಿಷಯವನ್ನು ಚಿನ್ನು ಮತ್ತು ಜಯಪ್ರಕಾಶ್ ಇವರುಗಳು ಸಂಜಯ್ @ ವರುಣನಿಗೆ ತಿಳಿಸಿದ್ದು, ಆ ಬಗ್ಗೆ ಆಶು @ ಆಶ್ರಿತ್ನಿಗೆ ಸಂಜಯ್ @ ವರುಣನು ಕೇಳಿದ್ದು, ಆದೇ ವೈಮನಸ್ಸಿನಿಂದ, ಸಂಜಯ್ @ ವರುಣನನ್ನು ಆಶು @ ಆಶ್ರಿತ್ನು ಕೊಲೆ ಮಾಡಿರುವುದಾಗಿದೆ.
3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-05-2014 ರಂದು ಪಿರ್ಯಾದಿದಾರರಾದ ಶ್ರೀ ರಾಮಣ್ಣ ರವರು ತನ್ನ ಹೆಂಡತಿಯೊಂದಿಗೆ ಜಗಳವಾಡಿ ಊರಿಗೆ ಹೋಗುವರೇ ತನ್ನ ಮಗಳಾದ ಕಲ್ಪನಾ (19 ವರ್ಷ) ಳನ್ನು ಕರೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ಸ್ ನಿಲ್ದಾಣದಕ್ಕೆ ಸಮಯ ಸುಮಾರು 18-30 ಗಂಟೆಗೆ ಬಂದಿದ್ದು, ತನ್ನ ಬಳಿ ಇದ್ದ ಸಾಮಾನುಗಳನ್ನು ಕೆಎಸ್‌ಆರ್‌ಟಿಸಿ ಬಸ್ಸ್ ನಿಲ್ಲಾಣದ ಹೊರಗಡೆ ರಸ್ತೆಯಲ್ಲಿ ಇಟ್ಟು ಅಲ್ಲಿ ತನ್ನ ಮಗಳನ್ನು ನಿಲ್ಲಿಸಿ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಬಸ್ಸ್ ನಿಲ್ದಾಣಕ್ಕೆ ಹೋಗಿ ಇಟ್ಟು ಉಳಿದ ಸಾಮಾನು ಹಾಗೂ ಮಗಳನ್ನು ಕರೆದುಕೊಂಡು ಬರುವರೇ ಹೋದಾಗ ಅಲ್ಲಿ ನಿಂತಿದ್ದ ಮಗಳು ಕಲ್ಪನಾ ಕಾಣೆಯಾಗಿರುತ್ತಾಳೆ.
4.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರ ಬಳ್ಳಾಲ್‌ಬಾಗ್ ಇನ್ಲ್ಯಾಂಡ್ ಅವೆನ್ಯೂ ಕಟ್ಟಡ 2ನೇ ಮಹಡಿಯಲ್ಲಿ ಕಾರ್ಯಚರಿಸುತ್ತಿದ್ದ ಡಿಎಚ್ಆರ್ಸಿ ಟೂರ್ & ಟ್ರಾವೆಲ್ಸ್ ಸಂಸ್ಥೆಯ ಮ್ಯಾನೇಜರ್ ಪ್ರದೀಪ್, ಮಾಲಿಕ ಮಹಮ್ಮದ್ ಆಲಿ ಮತ್ತು ಸಿಬ್ಬಂದಿಗಳಾದ ಅಗಸ್ಟಿನ್, ಅಪ್ಸಲ್, ಪ್ರಮೀಳಾ ಎಂಬವರು ಗಳು ಸಿಂಗಾಪುರ ದೇಶದಲ್ಲಿ ನರ್ಸಿಂಗ್ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿರುತ್ತಾರೆ ಎಂಬ ಪ್ರಕಟಣೆಯನ್ನು ಮನೋರಮ ಪತ್ರಿಕೆಯಲ್ಲಿ ಪ್ರಕಟಿಸಿದ್ದು ಇದನ್ನು ಗಮನಿಸಿದ ಪಿರ್ಯಾದಿದಾರರಾದ ಶ್ರೀ ಸುಜೀತ್ ಅಗಷ್ಟೀನ್ ರವರು ಹಾಗೂ ಇತರರು ಸದ್ರಿ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಿ ಸಂದರ್ಶನದಲ್ಲಿ ತೇರ್ಗಡೆ ಗೊಂಡು ಸಂಸ್ಥೆಯವರು ನಿರ್ದಿಷ್ಟ್ ಪಡಿಸಿದ ಶುಲ್ಕ ಅಂದರೆ 3 ಕಂತುಗಳಲ್ಲಿ ತಲಾ ಒಂದೊಂದು ಲಕ್ಷದಲ್ಲಿ 2 ಕಂತುಗಳ 2 ಲಕ್ಷ ಹಣವನ್ನು ಸದ್ರಿ ಸಂಸ್ಥೆಗೆ ಪಾವತಿಸಿದರೂ ಕೂಡಾ ಅರ್ಜಿದಾರರಿಗೆ ಇತರರಿಗೆ ಉದ್ಯೋಗವನ್ನು ಒದಗಿಸದೇ, ಹಣವನ್ನು ಹಿಂತಿರುಗಿಸದೇ ಆರೋಪಿತರುಗಳು ಉದ್ದೇಶಪೂರ್ವಕವಾಗಿ ಅರ್ಜಿದಾರರ ಹಾಗೂ ಇತರರನ್ನು ನಂಬಿಸಿ ಮೋಸ ಮಾಡಿರುವುದಾಗಿದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-05-2014 ರಂದು ರಾತ್ರಿ ಸುಮಾರು 20-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕುಲಶೇಖರ ಅವಿನಾಶ್ ಮೊಶಾಯಿಕ್ ರಸ್ತೆಯಲ್ಲಿ ಪಿರ್ಯಾದುದಾರರಾದ ಶ್ರೀ ಸಮಂತ್ ಸೆರೆಗಾರ್ ರವರು ತನ್ನ ಕಾರು ನಂ. ಕೆಎ-19ಎಂ.ಡಿ-5179 ನೇದರಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ಬೊಲೆರೋ ಜೀಪ್ ನಂ. ಕೆಎ-19ಎಂ.ಡಿ-5085 ನೇ ವಾಹನದ ಚಾಲಕನು ಪಿರ್ಯಾದುದಾರಲ್ಲಿ ಜೀಪಿಗೆ ಸೈಡ್ ಕೊಡುವ ವಿಚಾರದಲ್ಲಿ ತಕರಾರು ಮಾಡಿ ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರು ಯಾತಕ್ಕಾಗಿ ವಿನಾಕಾರಣ ಬೈಯುತ್ತೀ ಎಂದು ಕೇಳಿದಾಗ ಆತನು ಒಮ್ಮೆಲೇ ಜೀಪಿನಿಂದ ಇಳಿದು ಪಿರ್ಯಾದುದಾರರ ಕಾರಿನ ಬಳಿಗೆ ಬಂದು ಕೈಯ ಮುಷ್ಠಿಯಿಂದ ಪಿರ್ಯಾದಾರರ ಮೂಗಿಗೆ, ತಲೆಗೆ, ಮೈ ಕೈಗೆ ಗುದ್ದಿ ರಕ್ತಗಾಯ ಪಡಿಸಿ ಪಿರ್ಯಾದುದಾರರನ್ನು ಮುಂದಕ್ಕೆ ಹೋಗದಂತೆ ಅಡ್ಡಗಡ್ಡಿ ತಡೆದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಪಿರ್ಯಾದುದಾರರ ಕಾರಿನ ಮುಂಭಾಗದ ಲೈಟ್ ಸ್ವಿಚ್, ಸೈಡ್ ಮಿರರ್ ಹಾಗೂ ಇತರ ಭಾಗಗಳನ್ನು ಜಖಂ ಮಾಡಿರುವುರುವುದಾಗಿದೆ. ಅಲ್ಲದೇ ಜೀವಪಿನಲ್ಲಿದ್ದ ಇನ್ನೋರ್ವ ವ್ಯಕ್ತಿ ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದಿರುತ್ತಾರೆ.
6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.5.2014 ರಂದು ಫಿರ್ಯಾದಿದಾರರಾದ ಶ್ರೀ ಲೋಕಯ್ಯರವರ ಮಗ ಮನೆಯಿಂದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬರ್ ಕೆಎ 19 EK 8472 ನೇಯದನ್ನು ಮನೆಯಿಂದ ಚಲಾಯಿಸಿಕೊಂಡು ಕಾಲೇಜಿಗೆ ಹೋಗಿ ಎಂದಿನಂತೆ ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆಯ ಗಣಪತಿ ಕಟ್ಟೆಯ ಬಳಿ ಯಾಧವ ಟೈಲರ್ ಅಂಗಡಿಯ ಎದುರಿನಲ್ಲಿ ಬಂದ್ ಇರುವ ಅಂಗಡಿ ಎದುರು ಸಮಯ ಸುಮಾರು ಬೆಳಿಗ್ಗೆ 9.00 ಗಂಟೆಗೆ ನಿಲ್ಲಿಸಿ ಕಾಲೇಜಿಗೆ ಹೋಗಿದ್ದು, ಕಾಲೇಜು ಮುಗಿದ ನಂತರ ಸಂಜೆ ಸಮಯ ಸುಮಾರು 5.00 ಗಂಟೆಗೆ ಮನೆಗೆ ಹೋಗುವರೇ ಮೋಟಾರ್ ಸೈಕಲ್ ನಿಲ್ಲಿಸಿದಲ್ಲಿಗೆ ಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣದೇ ಇದ್ದುಮೋಟಾರ್ ಸೈಕಲನ್ನು ಇಟ್ಟು ಫಿರ್ಯಾದಿದಾರರ ಮಗ ಕಾಲೇಜಿಗೆ ಹೋದ ಸಮಯ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-05-2014 ರಂದು ಬೆಳಿಗ್ಗೆ 05-30 ಗಂಟೆ ಸಮಯಕ್ಕೆ ಮೂಡಬಿದ್ರೆ ಠಾಣಾ ಸರಹದ್ದಿನ ಪ್ರಾಂತ್ಯ ಗ್ರಾಮದ ಕೀರ್ತಿನಗರಕ್ಕೆ ಹೋಗುವ ಕ್ರಾಸ್ ರಸ್ತೆ ಬಳಿ ಪಿರ್ಯಾದಿದಾರರಾದ ಶ್ರೀ ಜಿನೇಂದ್ರ ಜೈನ್ ರವರು ಮೋಟಾರು ಸೈಕಲ್ ನಂಬ್ರ ಕೆಎ-02-ಎನ್-6817 ನೇದರ ಹಿಂಬದಿ ರವಿ ಎಂಬವರನ್ನು ಕೂರಿಸಿಕೊಂಡು ಗಂಟಾಲ್ಕಟ್ಟೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬೋರ್‌ವೆಲ್ ಲಾರಿ ನಂಬ್ರ ಕೆಎ-01-ಎಬಿ-7273 ನೇದನ್ನು ಅದರ ಚಾಲಕ ಕಾಂಡಿಪ್ಪನ್ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಮೋಟಾರ್ ಸೈಕಲಿನ ಮುಂದೆ ಬಂದು ಒಮ್ಮೆಲೆ ಬಲಕ್ಕೆ ಅಂದರೆ ಕೀರ್ತಿನಗರ ಕಡೆಯ ರಸ್ತೆಗೆ ತಿರುಗಿಸುವ ರಭಸದಲ್ಲಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಹಿಂಬದಿ ಕೂತಿದ್ದ ರವಿ ಮತ್ತು ಪಿರ್ಯಾದಿದಾರರು ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡ ರವಿ ಸ್ಥಳದಲ್ಲಿಯೇ ಮೃತಪಟ್ಟು ಪಿರ್ಯಾದಿದಾರರು ಸಾಮಾನ್ಯ ರೀತಿಯಲ್ಲಿ ಗಾಯಗೊಂಡಿರುತ್ತಾರೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-05-2014 ರಂದು 19-00 ಗಂಟೆಯಿಂದ ದಿನಾಂಕ 08-05-2014ರಂದು ಬೆಳಿಗ್ಗೆ 06-000 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಬೋಳಾರ ಮುಳಿಹಿತ್ಲು ನಲ್ಲಿರುವ ರವಿಚಂದ್ರ ಐಸ್ ಪ್ಲಾಟ್ ಬಳಿ ಇರುವ ಪಿರ್ಯಾದಿದಾರರಾದ ಶ್ರೀ ನಿತಿನ್ ಸಾಲ್ಯಾನ್ ರವರ ವಾಸ್ತವ್ಯದ ಇ. ಎ. ಪಾಯಸ್ ಲೈನ್ ಕಂಪೌಂಡಿನಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರು ಉಪಯೋಗಿಸುತ್ತಿದ್ದ ಅವರ ಸಂಬಂಧಿ ಅಣ್ಣ ಚೇತನ್ ಸುವರ್ಣ ರವರ ಆರ್. ಸಿ. ಮಾಲಕತ್ವದ 202012ನೇ ಮೋಡಲ್ ನ ಅಂದಾಜು ರೂಪಾಯಿ 30000/- ಬೆಲೆ ಬಾಳುವ ಕಪ್ಪು ಬಣ್ಣದ ಕೆಎ 19 ಇಇ 8665ನೇ ನೊಂದಣಿ ಸಂಖ್ಯೆಯ ಯಮಹಾ ಕಂಪನಿಯ R 15 ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-05-2014 ರಂದು ಫಿರ್ಯಾದಿದಾರರಾದ ಶ್ರೀ ನಾರಾಯಣ ಕುಂದರ್ ಎಂಬವರ ಮಗ ಸಚಿನ್, (ಪ್ರಾಯ: 32 ವರ್ಷ) ರವರು ಮಂಗಳೂರಿಗೆ ಕೆಲಸಕ್ಕೆ ಹೋದವನು ರಾತ್ರಿ ಸಮಯ ವಾಪಾಸು ಬರುತ್ತಾ ರಾತ್ರಿ ಸುಮಾರು 8-00 ಗಂಟೆಗೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಾದ, ಅದ್ಯಪಾಡಿ ಗ್ರಾಮದ, ಕೊಲ್ಲೊಟ್ಟು ಗುಳಿಗ ಪಾದೆ ಎಂಬಲ್ಲಿ ಅವರ ಬಾಬ್ತು ಮೋಟಾರು ಸೈಕಲ್ ನಂ: ಕೆಎ 19 ಇಜಿ 3401 ರಲ್ಲಿ ಕೆಂಜಾರು ಕಡೆಯಿಂದ ಅದ್ಯಪಾಡಿ ಕಡೆಗೆ ಬರುತ್ತಿದ್ದಾಗ, ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು, ಪರಾರಿಯಾಗಿ ಅಥವಾ ವಿಪರೀತ ಮಳೆ, ಗುಡುಗು-ಸಿಡಿಲು ಬರುತ್ತಿದ್ದು, ಇದರ ಆಘಾತಕ್ಕೊಳಗಾಗಿ ರಸ್ತೆ ಬದಿಯಲ್ಲಿರುವ ಸುಮಾರು 15 ಅಡಿ ಆಳದ ಹೊಂಡಕ್ಕೆ ಬಿದ್ದು, ತಲೆಗೆ ಮತ್ತು ಶರೀರಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತರಾಗಿರುವುದಾಗಿದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಅಲೋಶಿಯಸ್ ಕಾಲೇಜಿಗೆ ಹೋಗುವರೇ ಪಿರ್ಯಾದಿದಾರರಾದ ಅಬ್ದುಲ್ ರಶಾದ್ ರವರು ದಿನಾಂಕ 22-05-2014 ರಂದು ತನ್ನ ಮನೆಯಾದ ದಾರಂದಬಾಗಿಲಿನಿಂದ ಒಂದು ಅಟೋರಿಕ್ಷಾದಲ್ಲಿ ತೊಕ್ಕಟ್ಟುಗೆ ಬಂದು ವೃಂದಾವನ ಹೋಟೆಲ್ನ ಎದುರು ಇರುವ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ ತೊಕ್ಕಟ್ಟು ಓವರ್ ಬ್ರಿಡ್ಜ್ ಕಡೆಯಿಂದ ತೊಕ್ಕಟ್ಟು ಕಡೆಗೆ KA-19-B-4977 ನೇ ನಂಬ್ರದ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೂ ಅಲ್ಲಿ ಬಸ್ಸಿಗಾಗಿ ನಿಂತಿದ್ದ ಫಾತಿಮಾ ಸೇಲ್ವ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಸೊಂಟಕ್ಕೆ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯ ಹಾಗೂ ಮೂತ್ರ ಕೋಶದ ಬಳಿ ಗುದ್ದಿದ ನೋವುಂಟಾಗಿರುತ್ತದೆ. ಫಾತಿಮಾ ಸೇಲ್ವ್ ಎಂಬವರಿಗೆ ಸೊಂಟಕ್ಕೆ, ಭುಜಕ್ಕೆ ಗುದ್ದಿದ ಗಾಯ ಹಾಗೂ ತಲೆಗೆ ರಕ್ತ ಬರುವ ಗಾಯವಾಗಿರುತ್ತದೆ.
No comments:
Post a Comment