ದೈನಂದಿನ ಅಪರಾದ ವರದಿ.
ದಿನಾಂಕ 17.05.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-05-2014 ರ ರಾತ್ರಿ 20.30 ಗಂಟೆಗೆ ಪಿರ್ಯಾದಿದಾರರಾದ ಮಂ.ಪೂರ್ವ ಸಂಚಾರ ಠಾಣೆಯ ಸಿಬ್ಬಂದಿಯಾದ ಶ್ರೀ ರಾಜೇಶ ಬಿ ಸಿಪಿಸಿ-1010 ನೇಯವರು ಮಂಗಳೂರು ನಗರದ ಕರಾವಳಿ ವೃತ್ತದಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ ಒಬ್ಬ ವ್ಯಕ್ತಿಯು ಕುಡಿದ ಅಮಲಿನಲ್ಲಿ ತನ್ನ ಕಾರು ನಂಬ್ರ ಕೆಎ-19 ಎಂಎಪ್ -1984ನೇ ಕರಿ ಬಣ್ಣದ ಇಂಡಿಕಾ ಕಾರನ್ನು ಬೆಂದೂರ್ ವೆಲ್ ನಿಂದ ಕರಾವಳಿ ವೃತ್ತದ ಕಡೆಗೆ ಚಲಾಯಿಸಿಕೊಂಡು ಬಂದು ಕರಾವಳಿ ವೃತ್ತದ ಮಧ್ಯೆದಲ್ಲಿ ನಿಲ್ಲಿಸಿದಾಗ ಪಿರ್ಯಾದಿದಾರರು ಮುಂದಕ್ಕೆ ಹೋಗಲು ಸೂಚಿಸಿದಾಗ ಕಾರಿನಲ್ಲಿದ್ದ ವ್ಯಕ್ತಿಯು ಕಾರಿನಿಂದ ಇಳಿದು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವನಿರ್ವಹಿಸುತ್ತಿದ್ದ ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಎದೆಗೆ, ಕೈಗೆ , ಹಾಗೂ ಕೆನ್ನೆಗೆ ಕೈಯಿಂದ ಹೊಡೆದುದ್ದಲ್ಲದೇ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-05-2014 ರಂದು 14.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸಿರಾಜ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂ KA 19EB 288 ನೇದರಲ್ಲಿ ಅಬ್ದುಲ್ ಖಾದರ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಎಸ್ ಕೋಡಿ ಕಡೆಯಿಂದ ಮುಲ್ಕಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕೆನರಾ ಲೈಟಿಂಗ್ಸ್ ಎದುರು ತಲುಪುವಾಗೆ ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಇನೋವಾ ಕಾರ್ ನಂ KA 20 M 9640 ನೇದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸಿರಾಜ್ ಮತ್ತು ಸಹಸವಾರ ಅಬ್ದುಲ್ ಖಾದರ್ ಬೈಕ್ ಸಮೇತಾ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಪಿರ್ಯಾದಿ ಸಿರಾಜ್ ರವರಿಗೆ ಎಡಗಾಲಿನ ಪಾದಕ್ಕೆ ,ಎಡ ಮೋಣಕಾಲಿಗೆ, ಎಡಕೈಯ ಮೋಣ ಗಂಟಿಗೆ ರಕ್ತಗಾಯ ಮತ್ತು ಗುದ್ದಿದ ನೋವುಂಟಾಗಿರುವುದಲ್ಲದೇ ಸಹಸವಾರ ಅಬ್ದುಲ್ ಖಾದರ್ ಎಂಬವರಿಗೆ ಎಡಕಾಲಿನ ತೋಡೆ,ಎಡ ಕಾಲಿನ ಕೋಲು ಕಾಲು, ಎಡ ಭುಜಕ್ಕೆ ರಕ್ತಗಾಯ ಹಾಗೂ ಗುದ್ದಿದ ಗಾಯ ಉಂಟಾಗಿದ್ದು, ಪಿರ್ಯಾದಿ ಮತ್ತು ಅಬ್ದುಲ್ ಖಾದರ್ ರವರು ಮುಕ್ಕ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.5.2014 ರಂದು ಫಿರ್ಯಾದಿದಾರರಾದ ಶ್ರೀಮತಿ ಲೀಲಾ ಕೆ. ಶೆಟ್ಟಿ ರವರು ತನ್ನ ಅಕ್ಕನ ಮಗಳಾದ ಉಷಾ ಶೆಟ್ಟಿಯವರ ಜೊತೆ ಮತ್ಸ್ಯಗಂಧಾ ರೈಲು ನಂಬರ್ 12619 B2 49,50 ನೇದರಲ್ಲಿ ಪ್ರಯಾಣಿಕರಾಗಿ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವರೇ ಬ್ಯಾಗಿನಲ್ಲಿ ಚಿನ್ನಾಭರಣಗಳು ಇರುವ ಬಾಕ್ಸ್ ನೊಂದಿಗೆ ಧಾಣೆಯಿಂದ ಹೊರಟಿದ್ದು ರಾತ್ರಿ 9.00 ಗಂಟೆ ಸುಮಾರಿಗೆ ಮಲಗಿದ್ದು ಮರುದಿನ ಅಂದರೆ 16.5.2014 ರಂದು ಬೆಳಿಗ್ಗೆ ಮುಲ್ಕಿಯಲ್ಲಿ ಇಳಿಯಲಿಕ್ಕಿದ್ದು 5.00 ಗಂಟೆಗೆ ಎದ್ದು ಕುಳಿತುಕೊಂಡಿದ್ದು ನಂತರ ಮುಲ್ಕಿಯಲ್ಲಿ 6.30 ಗಂಟೆಗೆ ಇಳಿದು ತನ್ನ ಸಂಬಂಧಿಕರ ಕಾರಿನಲ್ಲಿ ತನ್ನ ಮನೆಗೆ ತೆರಳಿ ಬ್ಯಾಗನ್ನು ನೋಡಿದಾಗ ಬ್ಯಾಗಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಬಾಕ್ಸ್ ಕಾಣದೇ ಇದ್ದು ರೈಲಿನಲ್ಲಿ ಮಲಗಿದ ಸಮಯ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿಕೊಂಡು ಹೋದ ಚಿನ್ನಾಭರಣಗಳ ಒಟ್ಟು ಮೌಲ್ಯ 5,00,000/- ಆಗಬಹುದು.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ನಿಶಾ ಎಸ್. ಕುಮಾರ್ ರವರ ಗಂಡನಾದ ಆರೋಪಿ ಶೈಲೆಶ್ ಕುಮಾರ್ ಎಂಬವರು ದಿನಾಂಕ 02-11-2011 ರಂದು ಫಿರ್ಯಾದುದಾರರ ಹೆಸರಿನಲ್ಲಿದ್ದ BSNL MOBILE NUMBER ಸಿಮ್ ನ್ನು ಜನರಲ್ ಮೆನೆಜರ್ ಬಿಎಸ್.ಎನ್.ಎಲ್ ಮಂಗಳೂರು ರವರಿಗೆ ಫಿರ್ಯಾದುದಾರರ ನಕಲಿ ಸಹಿಯನ್ನು ಹಾಕಿ ಅರ್ಜಿ ಗುಜಾರಯಿಸಿ, ಸದ್ರಿ ಸಿಮ್ ಕಾರ್ಡನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸಿ ಒಂದು ವಾರದ ಬಳಿಕ ಸದ್ರಿ ಸಿಮ್ ನ್ನು ಆರೋಪಿ ಶೈಲೆಶ್ ಕುಮಾರ್ ರವರ ಹೆಸರಿಗೆ ವರ್ಗಾವಣೆಗೊಳಿಸಿ. ಬಿಎಸ್.ಎನ್.ಎಲ್ ಅಧಿಕಾರಿಗಳು ಹಾಗೂ ಶೈಲೇಶ್ ಕುಮಾರ್ ರವರು ಫಿರ್ಯಾದುದಾರರಿಗೆ ನಂಬಿಕೆ ದ್ರೋಹ ಎಸಗಿರುತ್ತಾರೆ. ಈ ವಿಷಯವು ಫಿರ್ಯಾದುದಾರರಿಗೆ ಜನವರಿ 2014 ರಲ್ಲಿ ತಡವಾಗಿ ಗಮನಕ್ಕೆ ಬಂದಿರುವುದಿರಂದ ದೂರು ನೀಡುವರೆ ತಡವಾಗಿರುತ್ತದೆ.
No comments:
Post a Comment