ನಂ. ಎಂಎಜಿ- 245 /ಮಂ.ನ/2014. ಪೊಲೀಸು ಆಯುಕ್ತರ ಕಚೇರಿ,
ಮಂಗಳೂರು ನಗರ, ಮಂಗಳೂರು
ದಿನಾಂಕ: 24-05-2014.
ಅಧಿಸೂಚನೆ
ಉಪ ಆಯುಕ್ತರು (ಅಭಿವೃದ್ದಿ) ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರುರವರು ಈ ಕಛೇರಿಗೆ ಸಲ್ಲಿಸಿರುವ ದಿನಾಂಕ: 07-05-2014 ರ ಪತ್ರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಮಂಗಳೂರು ನಗರದ ಜಪ್ಪಿನಮೊಗರು ಗ್ರಾಮಕ್ಕೆ ಸಂಬಂಧಿಸಿದಂತೆ ರಾ.ಹೆ 66 ರಿಂದ ಎಡಕ್ಕೆ ಹಾದುಹೋಗಿ ಜಪ್ಪಿನಮೊಗರು ಗ್ರಾಮವನ್ನು ಸಂಪಕರ್ಿಸುವ ಮುಖ್ಯ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಕಾಂಕೀಟೀಕರಣ ಮಾಡುವ ಸಮಯ ಅಂದರೆ ಸುಮಾರು 60 ದಿನಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ವರೆಗೆ ಸದ್ರಿ ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕೆಂದು ಕೋರಿಕೊಂಡಿರುತ್ತಾರೆ.
ಈ ಕುರಿತು ಪೊಲೀಸ್ ನಿರೀಕ್ಷಕರು, ಮಂಗಳೂರು ಗ್ರಾಮಂತರ ಪೊಲೀಸ್ ಠಾಣೆ ಇವರು ಸ್ಥಳ ಪರಿಶೀಲಿಸಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ ಮೇಲ್ಕಂಡ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾಪರ್ಾಡು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಆರ್. ಹಿತೇಂದ್ರ. ಐ.ಪಿ.ಎಸ್., ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮಂಗಳೂರು ನಗರ ಆದ ನಾನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕನರ್ಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 24-05-2014 ರಿಂದ 60 ದಿನಗಳವರೆಗೆ ಈ ಕೆಳಗೆ ಸೂಚಿಸಿರುವಂತೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾಪರ್ಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶ ಹೊರಡಿಸಿರುತ್ತೇನೆ
ಮಂಗಳೂರು ನಗರದ ಜಪ್ಪಿನಮೊಗರು ಗ್ರಾಮದ ಮುಖ್ಯ ರಸ್ತೆಯನ್ನು ಕಾಂಕ್ರೀಟೀಕರಣ ಮಾಡುವ ಸಮಯ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇದಿಸಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಯರ್ಾಯ ರಸ್ತೆಯಾಗಿ ಬಜಾಲ್ ಎಕ್ಕೂರು ಕುಡ್ತಡ್ಕ ರಸ್ತೆಯನ್ನು ಬಳಸುವಂತೆ ಆದೇಶಿಸಿರುತ್ತೇನೆ. ಈ ಆದೇಶವು ದಿನಾಂಕ: 24-05-2014 ರಿಂದ ದಿನಾಂಕ: 21-07-2014 ರವರೆಗೆ ಚಾಲ್ತಿಯಲ್ಲಿರುತ್ತದೆ.
ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ ಇವರು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 116 ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.
ಈ ಅಧಿಸೂಚನೆಯನ್ನು ದಿನಾಂಕ 24-05-2014 ರಂದು ನನ್ನ ಸ್ವ-ಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.
ಸಹಿ/-
(ಆರ್. ಹಿತೇಂದ್ರ)
ಪೊಲೀಸು ಆಯುಕ್ತರು
ಮಂಗಳೂರು ನಗರ, ಮಂಗಳೂರು
No comments:
Post a Comment