Wednesday, May 28, 2014

Daily Crime Reports 28-05-2014

ದೈನಂದಿನ ಅಪರಾದ ವರದಿ.

ದಿನಾಂಕ 28.05.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.05.2014 ರಂದು ರಾತ್ರಿ 11:30 ಗಂಟೆಯಿಂದ 27.05.2014 ಬೆಳಿಗ್ಗೆ 03:00 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ಪಾಂಡಿಕಟ್ಟಮನೆ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಆನಂದ ದೀಪಕ್ ಡಿ'ಸೋಜಾ ರವರ ಮನೆಯ ಹಿಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಒಳಗಡೆ ಕಪಾಟಿನಲ್ಲಿರಿಸಿದ ಸುಮಾರು ರೂ.7,50.000/- ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

2.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.05.2014 ರಂದು ಫಿರ್ಯಾದಿದಾರರಾದ ಶ್ರೀ ರಾಘವ ಯು. ರವರು ಮುಡಿಪು ಇರಾದ ಮದುವೆ ಕಾರ್ಯಕ್ರಮ ಮುಗಿಸಿ ತಮ್ಮಬಾಬ್ತು ಮೋಟಾರ್ಸೈಕಲ್ನಂಬ್ರ ಕೆಎಲ್‌-14ಪಿ-2732 ನೇಯದರಲ್ಲಿ ಸವಾರಿ ಮಾಡಿಕೊಂಡು ತನ್ನ ಮನೆಯ ಕಡೆ ಪ್ರಯಾಣಿಸುತ್ತಿರುವಾಗ ಸಂಜೆ ಸುಮಾರು 3:30 ಗಂಟೆಗೆ ಬಂಟ್ವಾಳ ತಾಲೂಕು, ಬಾಳೆಪುಣಿ ಗ್ರಾಮದ ಮೂಳೂರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಮುಡಿಪು ಕಡೆಯಿಂದ ಇರಾ ಕಡೆಗೆ ಈಚರ್ಲಾರಿನಂಬ್ರ ಎಂಹೆಚ್‌-04ಜಿಸಿ-4595 ನೇಯದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಬೈಕ್ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲಹಣೆಯಿಂದ ತಲೆಯ ಬಲಬದಿಗೆ ಗುದ್ದಿದ ರಕ್ತಗಾಯ, ಬಲಕಾಲಿನ ಪಾದಕ್ಕೆ ರಕ್ತಗಾಯ, ಬಲಕೈಯ ನಡು ಬೆರಳಿಗೆ, ಕುತ್ತಿಗೆಗೆ, ಎಡಕೈ ಭುಜಕ್ಕೆ ಎಡಕಾಲಿನ ತೊಡೆಗೆ ಗುದ್ದಿದ ನೋವು ಉಂಟಾಗಿದ್ದು ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26/27-05-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಭೂಷಣ ಹೆಜಮಾಡಿ ರವರ ಅಣ್ಣ ರೋಶನ್ ಹೆಜಮಾಡಿ (25 ವರ್ಷ)  ರವರು  ತನ್ನ ಬಾಬ್ತು ಕೆಎ-20-.ಎಫ್—7929 ನೇದರಲ್ಲಿ ಮುಲ್ಕಿ ಕಡೆಯಿಂದ ಹೆಜಮಾಡಿ ಕಡೆಗೆ ಹೋಗುತ್ತಾ, ರಾತ್ರಿ ಸುಮಾರು 12-00 ಗಂಟೆಗೆ ಬಪ್ಪನಾಡು ದೇವಸ್ಥಾನದ ದ್ವಾರಕ್ಕಿಂತ ಸ್ವಲ್ಪ ಮುಂದೆ ಚೆಕ್‌‌ಪೋಸ್ಟ್ ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಉಡುಪಿ ಕಡೆಯಿಂದ ಮುಲ್ಕಿ ಕಡೆಗೆ ಕೆಎ-28-ಬಿ-7776ನೇ ನಂಬ್ರದ ಮಿನಿಲಾರಿ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರೋಶನ್ ಹೆಜಮಾಡಿ ರವರ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ,  ತೀವ್ರ ಗಾಯಗೊಂಡ ರೋಶನ್ ಹೆಜಮಾಡಿ ರವರನ್ನು ಮಂಗಳೂರು .ಜೆ ಆಸ್ಪತ್ರೆಗೆ ದಾಖಲಿಸಿದ್ದು, ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 27-05-2014 ರಂದು ಮುಂಜಾನೆ 01-48 ಗಂಟೆಗೆ ಮೃತಪಟ್ಟಿರುತ್ತಾರೆ.

 

4.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.5.2014 ರಂದು ಫಿರ್ಯಾದಿದಾರರಾದ ಶ್ರೀ ಸುಧಾಕರ ಭಂಡಾರಿಯವರು ಕಿನ್ನಿಗೋಳಿಗೆ ಬಂದಿದ್ದು, ಅಲ್ಲಿಂದ ತನ್ನ ಭಾವ ಶೇಖರ ಭಂಡಾರಿಯವರೊಂದಿಗೆ  ಮನೆ ಕಡೆ ಹೋಗುವರೇ   ಕಿನ್ನಿಗೋಳಿ ಬಸ್ಸು ನಿಲ್ದಾಣದ ಕಡೆಗೆ  ಹೋಗುವರೇ   ಸುಖಾನಂದ ಶೆಟ್ಟಿ ಸರ್ಕಲ್  ಬಳಿ ರಸ್ತೆ ದಾಟುವ ವೇಳೆ   ಸಮಯ ಸುಮಾರು ರಾತ್ರಿ  8.00 ಗಂಟೆಗೆ  ಮುಲ್ಕಿ ಕಡೆಯಿಂದ   ಮೋಟಾರ್ ಸೈಕಲ್ ನಂಬರ್  ಕೆಎ 19 X 5515 ನೇದರ ಸವಾರ ಆರೋಪಿ ಹರೀಶ್ ಎಂಬಾತನು ತನ್ನ ಬಾಬ್ತು ಮೋಟಾರ್ ಸೈಕಲ್ ನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆ  ದಾಟುತ್ತಿದ್ದ    ಫಿರ್ಯಾದಿದಾರರ ಭಾವ ಶೇಖರ್   ಭಂಡಾರಿಯವರಿಗೆ  ಢಿಕ್ಕಿ ಹೊಡೆದ ಪರಿಣಾಮ  ಅವರು ರಸ್ತೆಗೆ  ಬಿದ್ದು ಗಾಯಗೊಂಡವರನ್ನು   ಚಿಕಿತ್ಸೆ  ಬಗ್ಗೆ  ಕನ್ಸೆಟ್ಟಾ  ಆಸ್ಪತ್ರೆಗೆ  ದಾಖಲಿಸಿದ್ದು  ಹೆಚ್ಚಿನ ಚಿಕಿತ್ಸೆ  ಬಗ್ಗೆ   ಎಜೆ ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ.

 

5.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಮತ್ತು ತೌಸೀಫ್, ಮುಕ್ತಾರ, ಮಹಮ್ಮದ್ ನಿಸ್ಸಾರ್, ಮಹಮ್ಮದ್ ಆರಿಫ್ ಗೋವಾ ರಾಜ್ಯದಲ್ಲಿ ರೂಸ್ಟರ್ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿರುವಾಗ ಅದೇ ಹೋಟೇಲ್ ಮ್ಯಾನೇಜರ್ ಬಾಪು ಕುಂಞ ರವರು ಹೊರದೇಶಕ್ಕೆ ಹೋದರೆ ಹೆಚ್ಚು ಸಂಬಳ ಸಿಗುತ್ತದೆ. ತನ್ನ ಸ್ನೇಹಿತನಾದ ಗಜೇತನ್ ಆಲ್ಬರ್ಟ್ ಡಿ'ಸೋಜಾ ರವರಲ್ಲಿ ವೀಸಾ ರೆಡಿ ಇದೆ ಎಂದು ಹೇಳಿದಂತೆ, ಪಿರ್ಯಾದಾರರು ಮತ್ತು ಇತರ ಮೂವರು ಬೆಹರಿನ್ ಗೆ ಹೋಗಲು ತೀರ್ಮಾನಿಸಿ ಆರೋಪಿ ಬಾಪು ಕುಂಞ ರವರು ತಿಳಿಸಿದಂತೆ .ಸಿ..ಸಿ.  ಪಿ.ಎಮ್. ರೋಡ್ ಶಾಖೆಯ ಎಕೌಂಟ್ ನಂಬ್ರ 002301541014 ಕ್ಕೆ ದಿನಾಂಕ 14-11-2013 ರಂದು 15,000/-, ತೌಸೀಫ್ ಮತ್ತು ಮುಕ್ತಾರ್ ದಿನಾಂಕ 16-11-2013 ರಂದು 15,000/- ರೂ ಮತ್ತು 50,000/-ರೂ , ದಿನಾಂಕ 25-11-2013 ರಂದು ಮಹಮ್ಮದ್ ಆರೀಫ್ 15,000/- ಮತ್ತು ಮಹಮ್ಮದ್ ನಿಸ್ಸಾರ್ 14-11-2013 ರಂದು ರೂ 15,000/- ಹೀಗೆ ಒಟ್ಟು 1,10,000/- ಹಣವನ್ನು ಖಾತೆಗೆ ಹಾಕಿದ್ದು, ವೀಸಾ ಬಾರದೇ ಇದ್ದಾಗ ಆರೋಪಿ ಬಾಪು ಕುಂಞ ಮೊಬೈಲ್ ನಂಬ್ರ 8600905735 ಮತ್ತು ಗಜೇತನ್ ಆಲ್ಷರ್ಟ್ ಡಿ'ಸೋಜಾ ಮೊಬೈಲ್ ನಂಬ್ರ 9673079859 ಕ್ಕೆ ಫೋನ್ ಮಾಡಿ ಸಂಪರ್ಕಿಸಿದಾಗ ನಿಮಗೆ ಹಣ ಕೊಡುವುದಿಲ್ಲ ನೀವು ಹಣ ಕೇಳಲು ನಿಮ್ಮಲ್ಲಿಗೆ ಬಂದರೆ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.

 

6.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಬಜಪೆ ಗ್ರಾಮದ SEZ ವಲಯದ JBF ಕಂಪೆನಿಯ ಮೈನ್ ಗೇಟ್ ನಲ್ಲಿ  ದಿನಾಂಕ: 27-05-2014 ರಂದು ಪಿರ್ಯಾದಿದಾರರಾದ ಶ್ರೀ ಸುನಿಲ್ ಪೂಜಾರಿ ಮತ್ತು ಉಮೇಶ್, ರಂಜಿತ್ ರವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಬೃಹತ್ ಗಾತ್ರದ ಮೈನ್ ಗೇಟ್ ಸರಿಯಾಗಿ ಕೆಲಸ ಮಾಡದೇ ಇದ್ದುದರಿಂದ ಅದನ್ನು ಪಿರ್ಯಾದಿದಾರರು ಹಾಗೂ ಅವರ ಜೊತೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮೇಶ್ ಮತ್ತು ರಂಜಿತ್ ಎಂಬವರು ನಿಧಾನವಾಗಿ ತೆರೆದು ಅದರ ಟ್ರ್ಯಾಕ್ ಗೆ ಅಳವಡಿಸಲೆಂದು ಪ್ರಯತ್ನಿಸಿದ ಸಮಯ, ಗೇಟ್ ಸರಿಯಾಗಿ ನಿರ್ವಹಣೆ ಇಲ್ಲದೇ ಇದ್ದುದರಿಂದ,  ಅವರು  ನಿಂತಿದ್ದ ಬದಿಗೆ ಗೇಟ್ ಮಗುಚಿ ಬಿದ್ದ ಪರಿಣಾಮ,  ಅಲ್ಲಿದ್ದ ಉಮೇಶ್ ರವರು ಭಾರವಾದ ಕಬ್ಬಿಣದ ಗೇಟಿನ ಅಡಿಗೆ ಸಿಲುಕಿ, ಅವರ ತಲೆಗೆ ತೀವ್ರ  ರೀತಿಯ ಗಾಯವಾಗಿ ಅವರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಲ್ಲದೇ, ರಂಜಿತ್ ರವರ ಬಲ ಮೊಣಕಾಲಿಗೆ ಗೇಟ್ ಬಡಿದುದರಿಂದ ಅವರ ಬಲ ಕಾಲಿಗೆ ಎಲುಬು ಮುರಿತದ ಗಾಯವಾಗಿದ್ದು, ಪಿರ್ಯಾದಿದಾರರಿಗೆ ಎಡಬದಿಯ ತಲೆಗೆ ಗುದ್ದಿದ್ದ ಗಾಯವಾಗಿದ್ದು, ಗಾಯಾಳುಗಳು  ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಘಟನೆಗೆ JBF ಕಂಪೆನಿಯ ಸೈಟ್ ಇನ್ ಚಾರ್ಜ್ , , ಹೆಚ್.ಆರ್. ಡಿಪಾರ್ಟ್ ಮೆಂಟ್ ಮತ್ತು  ಕಂಪೆನಿಯ ಇತರರು ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯತನ ತೋರಿರುವುದೇ ಕಾರಣವಾಗಿದೆ

 

7.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26/05/2014 ರಂದು ಫಿರ್ಯಾಧಿದಾರರಾದ ಶ್ರೀಮತಿ ಸರಸ್ವತಿಯವರು ತನ್ನ ಪಕ್ಕದ ಮನೆಗೆ ಟಿ.ವಿ. ನೋಡಲು ಹೋಗಿ ತನ್ನ ಮನೆಗೆ ಬಂದ ಸಮಯ ರಾತ್ರಿ ಸುಮಾರು 8-00 ಗಂಟೆಗೆ ಕತ್ತಿಯೊಂದಿಗೆ ಅಕ್ರಮವಾಗಿ ಪಿರ್ಯಾಧಿದಾರರ ಮನೆಯ ಒಳಗೆ ಪ್ರವೇಶಿಸಿದ ಚೆನ್ನಮ್ಮ ಎಂಬಾಕೆಯು ತನಗೆ ಇದ್ದ ಹಳೆಯ ದ್ವೇಷದಿಂದ ಪಿರ್ಯಾಧಿದಾರರಿಗೆ ಅವಾಚ್ಯ ವಾಗಿ ಬೈದು ಕತ್ತಿಯಿಂದ ಕಡಿದು ಕೈ ಮತ್ತು ಕಣ್ಣಿನ ಬಳಿ ಗಾಯವುಂಟು ಮಾಡಿರುವುದಲ್ಲದೇ ನೆರೆಮನೆಯವರು ತಡೆಯಲು ಬಂದರು ನೀನು ಊರಲ್ಲಿ ನಿಲ್ಲ ಬಾರದು ನಿಂತಲ್ಲಿ ನಿನ್ನನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ.

 

8.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-05-2014 22-30 ಗಂಟೆಯಿಂದ ದಿನಾಂಕ:20-05-2014 07-30 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ದೇವಸ್ಥಾನ ಬಳಿಯ ಪಿರ್ಯಾದಿದಾರರಾದ ಶ್ರೀ ಕೆ. ಶ್ರೀನಾಥ್ ಪ್ರಭು ರವರ ಬಾಬ್ತು ಮನೆಯ ಕಂಪೌಂಡಿನೊಳಗೆ ಪಾರ್ಕ್ ಮಾಡಿದ್ದ 2014ನೇ ಮೊಡಲಿನ ಸಿಲ್ವರ್ ಬಣ್ಣದ  ಚಾಸಿಸ್ ನಂ.MBLJF32ABEGB08980, ಇಂಜಿನ್ ನಂ.JF32AAEGB08466, KA 19 EK8445 ನೇ ನೊಂದಣಿ ಸಂಖ್ಯೆಯ ಹೀರೋ ಮೆಸ್ಟ್ರೋ ಕಂಪನಿಯ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ 47,450/- ರೂ ಆಗಬಹುದು.

No comments:

Post a Comment