Wednesday, May 21, 2014

Daily Crime Reports 19-05-2014

ದೈನಂದಿನ ಅಪರಾದ ವರದಿ.

ದಿನಾಂಕ 19.05.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-05-2014ರಂದು ರಾತ್ರಿ 10-20 ಗಂಟೆಗೆ ಮಂಗಳೂರು ತಾಲೂಕು ಹರೇಕಳ ಗ್ರಾಮದ ನ್ಯೂ ಪಡಪು ಶಾಂತಿನಗರ ಎಂಬಲ್ಲಿ ಆಟೋ ರಿಕ್ಷಾ ಕೆ..19ಡಿ 9556 ನ್ನು ಅದರ ಚಾಲಕನು ಅತೀ ವೇಗ ಮತ್ತು ದುಡುಕುತನದಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾವು ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಸದ್ರಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಾದ ಶ್ರೀ ವಿಲ್ಫ್ರೆಡ್ ಡಿಸೋಜಾ ರವರಿಗೆ ಎಡಗಾಲಿಗೆ ಗುದ್ದಿದ ರೀತಿಯ ಗಾಯ ಹಾಗೂ ಮೈ ಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಫತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.  

 

2.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 16-05-2014 ರಂದು ರಾತ್ರಿ ಸುಮಾರು 7-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೃಷ್ಣಪ್ಪ ಪೂಜಾರಿ ರವರು ಮನೆಗೆ ಹೋಗುವರೇ ವಿದ್ಯಾಗಿರಿ ಬಸ್ಸ್ನಿಲ್ದಾಣದ ಬಳಿ ರಸ್ತೆಯ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ಮೂಡಬಿದ್ರೆ ಕಡೆಯಿಂದ ಕೆಎ 19 ಇಡಿ 2488 ನೇಯ Aviator ದ್ವಿಚಕ್ರದ ಸವಾರ ಪುನಿತ್ರಾಜ್ಎಂಬವನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು  ಗದ್ದಕ್ಕೆ, ಬಲ ಕಣ್ಣಿನ ಬಳಿ, ಬಲ ಹಣೆಗೆ ರಕ್ತ ಗಾಯ, ಬಲ ಕಣ್ಣಿನ ಬಳಿ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.     

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 18/05/2014 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ರವಿ ಕುಮಾರ್ ರವರು ಅವರ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ ಕೆಎ 04 ಎಂಡಿ 5056 ನೇದನ್ನು ಉಜಿರೆ ಕಡೆಯಿಂದ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ನೆಲ್ಲಿಕಾರು ಎಂಬಲ್ಲಿ ಹಿಂದಿನಿಂದ ಬಂದ ಇಂಡಿಕಾ ಕಾರು ನಂಬ್ರ  ಕೆಎ 01 ಎಸಿ 9332 ನೇಯದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತವನ್ನುಂಟು ಮಾಡಿದ ಇಂಡಿಕಾ ಕಾರನ್ನು ಅದರ ಚಾಲಕ ನಿಲ್ಲಿಸದೇ ಘಟನಾಸ್ಥಳದಿಂದ ಪರಾರಿಯಾಗಿರುತ್ತಾರೆ.

 

4.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-05-2014ರಂದು ರಾತ್ರಿ 09-00  ಗಂಟೆಗೆ ಪಿರ್ಯಾದುದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರು ಅವರ ಬಾಬ್ತು ಕೆಎ-19-ಇಸಿ-3702ನೇ ಮೋಟಾರ್ ಸೈಕಲಿನಲ್ಲಿ ಹತ್ತಿರದ ಮೂಡುಶೆಡ್ಡೆ ಮಸೀದಿಗೆ ಹೋಗಿ ವಾಪಾಸು ಪಿರ್ಯಾದುದಾರರ ಮನೆಯಾದ ಮೂಡುಶೆಡ್ಡೆ ಗ್ರಾಮದ ಶಾಲೆಪದವಿನ ಮನೆ ಎದುರಲ್ಲಿ ರಾತ್ರಿ 10-00 ಗಂಟೆಗೆ ನಿಲ್ಲಿಸಿ   ಮನೆಗೆ ಹೋಗಿ ಊಟ ಮಾಡಿ ಮಲಗಿದ್ದು, ಮರುದಿವಸ ಬೆಳಿಗ್ಗೆ 05-00 ಗಂಟೆಗೆ ಮಂಗಳೂರಿನ  ದಕ್ಕೆಗೆ ಹೋಗುವರೇ ಮೋಟಾರ್ ಸೈಕಲ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣೆಯಾಗಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮೋ.ಸೈಕಲ್ ವಿವರ: ಮೋಟಾರ್ ಸೈಕಲ್ ನಂಬ್ರ ಕೆಎ-19-ಇಸಿ-3702 1.ಮೋಟಾರ್ ಸೈಕಲ್ ಬಣ್ಣ ಸಿಲ್ವರ್ ಕಲರ್, 2)ಮೋಡಲ್ ಪ್ಯಾಶನ್ ಪ್ರೋ, 3)ಚಾಸಿಸ್ ನಂ MBLHA10AHAGM51793,  4)ಇಂಜಿನ್ ನಂ HA10EDRGM61949 , 5)ಅಂದಾಜು ಮೌಲ್ಯ 35,000/-.

 

5.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-05-2014 ರಂದು ರಾತ್ರಿ 08-45 ಗಂಟೆ ವೇಳೆಗೆ ಮಂಗಳೂರು ತಾಲೂಕು ಕೃಷ್ಣನಗರ ಬೊಂದೆಲ್ ಎಂಬಲ್ಲಿನ ಬಾಲಕರ ಬಾಲಮಂದಿರದಲ್ಲಿದ್ದ ಬಾಲಕ ಪ್ರಸನ್ನ (14) ಎಂಬವನು ತಪ್ಪಿಸಿಕೊಂಡು ಹೋಗಿ ಕಾಣೆಯಾಗಿದ್ದು ಇದುವರೆಗೆ ಬಾಲಕನು ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದವರ ಚಹರೆ:- ಮಾ.ಪ್ರಸನ್ನ, ಪ್ರಾಯ 14ವರ್ಷ, ತಂದೆ-ದಿವಂಗತ ಮಂಜುನಾಥ, ಗೋದಿ ಮೈ ಬಣ್ಣ, ಕುತ್ತಿಗೆಯ ಬಲಭಾಗ  ಹಾಗೂ ತಲೆಯ ಭಾಗದಲ್ಲಿ ಚಿಕ್ಕ ಮಚ್ಚೆಯಿದೆ, ಕೆಂಚು ಕೂದಲು, ಎತ್ತರ-5 ಅಡಿ 2 ಇಂಚು, 35 ಕೆ.ಜಿ ತೂಕ, ಕನ್ನಡ, ಮಾತಾಡುತ್ತಾರೆ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಅಚ್ಚ ನೀಲಿ ಬಣ್ಣದ ಅರ್ದ ತೋಳಿನ ಶರ್ಟ್ ಧರಿಸಿರುತ್ತಾನೆ.

 

6.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಾದೇಶ್ ಟಿ.ಎಸ್. ರವರು ವ್ಯವಹಾರದ ನಿಮಿತ್ತ ಗುಜರಾತ್ ಗೆ ಹೋಗಿ ದಿನಾಂಕ 17-05-2014 ರಂದು ಬೆಳಗ್ಗೆ ಸುಮಾರು 8:00 ಗಂಟೆಗೆ ಮಂಗಳೂರು ಬಂದು, ಮಂಗಳೂರಿನ ಮಿಲಾಗ್ರಿಸ್ ಹತ್ತಿರ ಇಳಿದಿದ್ದು, ನಡೆದುಕೊಂಡು ಹಂಪನಕಟ್ಟೆ ಕಡೆಗೆ ಬರುವಾಗ ಇಬ್ಬರು ಅಪರಿಚಿತರು ಕಾಣಸಿಕ್ಕಿ ಪಿರ್ಯಾದಿದಾರರಲ್ಲಿ ಉಡುಪಿ ಕೃಷ್ಣ ಮಂದಿರಕ್ಕೆ ಹೇಗೆ ಹೋಗಬೇಕೆಂದು ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು "ನಾನು ಸಹ ಹೋಗಲಿರುವುದಾಗಿ" ತಿಳಿಸಿದ್ದು, ಅವರೊಂದಿಗೆ ರೈಲ್ವೆ ಸ್ಟೇಷನ್ ಕಡೆಗೆ ಬಂದಿದ್ದು, ಖರ್ಚಿಗೆ ಹಣ ಬೇಕಾಗಿದ್ದುದರಿಂದ ರೈಲ್ವೇ ಸ್ಟೇಷನ್ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ನಿಂದ ರೂ. 2000/- ಹಣವನ್ನು ಡ್ರಾ ಮಾಡಿ ಅಪರಿಚಿತರೊಂದಿಗೆ ಆಟೋವೊಂದರಲ್ಲಿ ನಗರದ ರಾವ್ & ರಾವ್ ಸರ್ಕಲ್ ಬಳಿ ಇರುವ ಗ್ಲೋಬಲ್ ಲಾಡ್ಜ್ ಗೆ ಬಂದು ಪಿರ್ಯಾದಿದಾರರು ತನ್ನ ಹೆಸರಿನಲ್ಲಿ ರೂ. 1000/- ಹಣವನ್ನು ನೀಡಿ ರೂಮ್ ಮಾಡಿದ್ದು, ತದನಂತರ ಮೂರು ಜನ ಒಟ್ಟಿಗೆ ರೂಮ್ ನಲ್ಲಿದ್ದು, ಪಿರ್ಯಾದಿದಾರರು ಬ್ಯಾಗ್ ಮತ್ತು ಬಟ್ಟೆಬರೆಗಳನ್ನು ಇಟ್ಟು ಸ್ನಾನಕ್ಕೆ ಬಾತ್ ರೂಮ್ ಗೆ ಹೋಗಿದ್ದು, ಸಮಯ ಬೆಳಿಗ್ಗೆ 08:30 ಗಂಟೆಗೆ ವಾಪಾಸ್ಸು ಬಂದು ನೊಡಿದಾಗ ಅಪರಿಚಿತರಿಬ್ಬರೂ ರೂಮ್ ನಲ್ಲಿ ಇಲ್ಲದೇ ಇದ್ದು, ಅನುಮಾನಗೊಂಡು ಪಿರ್ಯಾದಿದಾರರು ತನ್ನ ಪ್ಯಾಂಟ್ ಕಿಸೆಯಲ್ಲಿಟ್ಟಿದ್ದ ಎಟಿಎಂ ಕಾರ್ಡ್ ಚೆಕ್ ಮಾಡಿದಾಗ ಕಾಣೆಯಾಗಿದ್ದು, ಸ್ವಲ್ಪ ಹೊತ್ತಿನ ನಂತರ ಪಿರ್ಯಾದಿದಾರರ ಮೊಬೈಲ್ ಗೆ ಎಸ್.ಎಂ.ಎಸ್. ಬಂದಿದ್ದು, ಅಪರಿಚಿತರು ಪಿರ್ಯಾದಿದಾರರ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ ಬ್ಯಾಂಕ್ ನೇದರ ಎಟಿಎಂ ಕಾರ್ಡ್ ನಿಂದ ಹಣ ಡ್ರಾ ಮಾಡಿರುವುದು ತಿಳಿದು ಬಂದಿದ್ದು, ಸದ್ರಿ ಅಪರಿಚಿತ ಇಬ್ಬರು ವ್ಯಕ್ತಿಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು ನಂಬಿಸಿ ಎಟಿಎಂ ಕಾರ್ಡ್ ನ್ನು ಕಳವು ಮಾಡಿ ಒಟ್ಟು ರೂ. 36,000/- ಹಣವನ್ನು ಡ್ರಾ ಮಾಡಿಕೊಂಡಿರುತ್ತಾರೆ.

 

7.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಬಿ.ಎ. ರವರು ಸುಮಾರು 2 ತಿಂಗಳಿನಿಂದ ಮಂಗಳೂರು ನಗರದ ಕೊಡಿಯಾಲ್ಬೈಲ್ನಲ್ಲಿರುವ ಯೆನೆಪೋಯ ಆಸ್ಪತ್ರೆಯ ಬಳಿ ಇರುವ ಯೆನೆಪೋಯ ಎನೆಕ್ಸ್ಬಿಲ್ಡಿಂಗ್ನಲ್ಲಿ ಪೈಂಟಿಂಗ್ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ 18-05-2014 ರಂದು ಸಹ ಪೈಂಟಿಂಗ್ಕೆಲಸ ಮಾಡುತ್ತಿದ್ದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯಕ್ಕೆ ಚಹಾ ಕುಡಿಯುವ ಸಮಯವಾಗಿದ್ದು ಕೆಲಸದವರ ಪೈಕಿ ಪರಂಗಿಪೇಟೆಯ ಬಶೀರ್ಎಂಬಾತನು ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸಮಾಡಿಕೊಂಡಿದ್ದು, ಫಿರ್ಯಾದಿದಾರರು, ರೈಟರ್ರೋಶನ್ಹಾಗೂ ಉಳಿದ ಕೆಲಸದವರು ಚಹಾ ಕುಡಿಯುವ ಸಲುವಾಗಿ ಆಸ್ಪತ್ರೆಯ ಕ್ಯಾಂಟೀನ್ಗೆ ಹೋಗಿ ಚಹಾ ಕುಡಿದು ಸುಮಾರು 3-45 ಗಂಟೆ ಸಮಯಕ್ಕೆ ವಾಪಾಸು ಪೈಂಟಿಂಗ್ಕೆಲಸ ಮಾಡುತ್ತಿದ್ದ ಜಾಗಕ್ಕೆ ಬರುವ ವೇಳೆ ಪೈಂಟಿಂಗ್ಕೆಲಸ ಮಾಡುತ್ತಿದ್ದ ಒಬ್ಬರು ಆಸ್ಪತ್ರೆಯ ಬಿಲ್ಡಿಂಗ್ ಹಿಂಭಾಗದಲ್ಲಿ ಬಿದ್ದಿದ್ದಾರೆ ಎಂದು ರಸ್ತೆಯಲ್ಲಿ ಹೋಗುವ ಜನ ಮತ್ತು ಆಸ್ಪತ್ರೆಯ ಸೆಕ್ಯೂರಿಟಿಯವರು ಪೈಂಟಿಂಗ್ಕೆಲಸ ಮಾಡುತ್ತಿದ್ದ ಬಶೀರ್ಎಂಬಾತನು ಬಿಲ್ಡಿಂಗ್ ಮೇಲಿನಿಂದ ಕಾಲು ಜಾರಿ ಕೆಳಗೆ ಬಿದ್ದಿರುತ್ತಾನೆ ಎಂದು ತಿಳಿಸಿದ್ದು, ಅಲ್ಲಿಗೆ ಹೋಗಿ  ನೋಡಲಾಗಿ ಬಶೀರನು ನೆಲದಲ್ಲಿ ಬಿದ್ದಿದ್ದು ತಲೆಯಲ್ಲಿ ರಕ್ತ ಸೋರುತ್ತಿತ್ತು. ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಯೆನೆಪೋಯ ಆಸ್ಪತ್ರೆಗೆ ಬಶೀರನನ್ನು ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರು ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪೈಂಟಿಂಗ್ಕೆಲಸ ಮಾಡಿಸುತ್ತಿದ್ದ ಕಂಟ್ರಾಕ್ಟರ್  ಜೀತನ್‌, ರೈಟರ್ರೋಶನ್ಮತ್ತು ಆಸ್ಪತ್ರೆಯ ಆಡಳಿತ ವರ್ಗದವರು ಕಟ್ಟಡದ ಮಹಡಿಗಳಲ್ಲಿ ಪೈಂಟಿಂಗ್ಕೆಲಸ ಮಾಡಿಸುತ್ತಿದ್ದ ಸಮಯದಲ್ಲಿ ಸರಿಯಾದ ಸುರಕ್ಷತಾ ಕ್ರಮವನ್ನು ಅನುಸರಿಸದೇ ನಿರ್ಲಕ್ಷ ವಹಿಸಿದ್ದರಿಂದ ಬಶೀರನು 3ನೇ ಮಹಡಿಯಿಂದ ನೆಲಕ್ಕೆ ಬಿದ್ದು ಮೃತಪಟ್ಟಿರುವುದಾಗಿದೆ.

 

8.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-05-2014 ರಂದು ಸಂಜೆ 18-30 ಗಂಟೆಯಿಂದ ದಿನಾಂಕ 10-05-2014 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ ಶ್ರೀ ಕೃಷ್ಣ ಭಜನಾ ಮಂದಿರದ ಬಳಿ ಇರುವ ಫಿರ್ಯಾದುದಾರರಾದ ಶ್ರೀ ಕೆ. ರತ್ನಾಕರ ರವರ ಬಾಬ್ತು ವಾಸ್ತವ್ಯದ 24-3-242 ಮನೆ ನಂಬ್ರದ ಬಳಿಯಲ್ಲಿ ಫಿರ್ಯಾದಿದಾರರು ಉಪಯೋಗಿಸುತ್ತಿದ್ದ ಅವರ ಸ್ನೇಹಿತ ಅದ್ನಾಲ್ ಕೆ ಇವರ ಆರ್.ಸಿ ಮಾಲಕತ್ವದ ಕಪ್ಪು ಬಣ್ಣದ 2004 ನೇ ಮಾಡೆಲ್ KA 19 S 7581 ನೋಂದಣಿ ಸಂಖ್ಯೆಯ ಅಂದಾಜು ರೂ 15000/- ಮೌಲ್ಯದ ಯಮಹಾ ಕಂಪೆನಿಯ FAZER ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

9.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-05-2014 ರಂದು ಫಿರ್ಯಾದುದಾರರಾದ ಶ್ರೀ ರಾಮಲಿಂಗಾ ರವರ ಮತ್ತು ಅವರ ಗೆಳೆಯರಾದ ಮಣಿಕಂಠ ಹಾಗೂ ಬಾಲಾಜಿಯವರು ರಾತ್ರಿ ಸುಮಾರು 10-30 ಗಂಟೆಯ ವೇಳೆಗೆ ಮಂಗಳೂರು ಮೀನಿನ ದಕ್ಕೆಯ ಬಳಿಯಲ್ಲಿ ಮಾತನಾಡಿಕೊಂಡಿದ್ದಾಗ ಫಿರ್ಯಾದಿದಾರರ ಪರಿಚಯದ ಆರೋಪಿ ವಿಜಯ್ ಎಂಬಾತ ಇತರ ಇಬ್ಬರನ್ನು ಕರೆದುಕೊಂಡು ಬಂದು ಫಿರ್ಯಾದುದಾರರನ್ನು ತಡೆದು " ನಿನಗೆ ನಾವು ಕೇಳಿದರೆ ಮೀನು ಪದಾರ್ಥ ಕೊಡಲು ಆಗುವುದಿಲ್ಲವೇ?" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದುದಾರರ ಎಡ ಕೈಗೆ ಹೊಡೆದಿದ್ದು, ಆಗ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಫಿರ್ಯಾದುದಾರರ ಗೆಳೆಯರಾದ ಮಣಿಕಂಠ, ಬಾಲಾಜಿ ರವರು ಬಿಡಿಸಲು ಬಂದಾಗ ಆರೋಪಿ ವಿಜಯನ ವಿರುದ್ದ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರು ತಂದಿದ್ದ ಮರದ ರೀಪಿನಿಂದ ಮಣಿಕಂಠ ಹಾಗೂ ಬಾಲಾಜಿ ರವರಿಗೆ ಹೊಡೆದು ರಕ್ತಗಾಯಗೊಳಿಸಿರುತ್ತಾರೆ. ನಂತರ ಆರೋಪಿ ವಿಜಯನು ಫಿರ್ಯಾದುದಾರರು ಹಾಗೂ ಗೆಳೆಯರನ್ನು ಉದ್ದೇಶಿಸಿ "ಇನ್ನು ಮುಂದೆ ನಮ್ಮ ಮುಂದೆ ಬಾಲ ಬಿಚ್ಚಿದರೆ ನಿಮ್ಮ ಕೈಕಾಲು ಮುರಿದು ಹಾಕಿ ಜೀವ ಸಹಿತ ಬದುಕರಲು ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಘಟನೆಯ ವೇಳೆ  ಅಲ್ಲಿಗೆ ಬಂದ ಮುತ್ತು ಹಾಗೂ ಇತರರನ್ನು ಕಂಡು ಮೂವರು ಆರೋಪಿಗಳು ಹಲ್ಲೆ ನಡೆಸಿದ ಮರದ ರೀಪನ್ನು ಅಲ್ಲೇ ಬಿಸಾಡಿ ಪರಾರಿಯಾಗಿರುತ್ತಾರೆ.

 

10.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-05-2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಸಲೀಂ ರವರು ಶುಕ್ರವಾರದ ಪ್ರಾರ್ಥನೆಗೆಂದು ಕುಂಪಲ ಬೈಪಾಸ್ನಲ್ಲಿರುವ ನೂರಾನಿ ಜುಮ್ಮಾ ಮಸೀದಿಗೆ ಹೋಗಿ ಪ್ರಾರ್ಥನೆಯನ್ನು ಮುಗಿಸಿ ಮನೆಗೆ ಹೋಗಲೆಂದು ಮಸೀದಿಯ ಹಿಂಬದಿಯ ಕಾಲುದಾರಿಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 1:45 ಗಂಟೆಗೆ ಮುಸ್ತಾಕ್ ಅಹಮ್ಮದ್, ಶೇಖ್ ನವಾಜ್ ಅಶ್ರಫ್ ಮತ್ತು ಸೌಕತ್ಖಾನ್ ರವರುಗಳು ಕಾಣಸಿಕ್ಕಿ ಇವರುಗಳ ಪೈಕಿ ಮುಸ್ತಾಕ್ ಅಹಮ್ಮದ್ ಎಂಬಾತನು ಪಿರ್ಯಾದಿದಾರರಲ್ಲಿ "ನೀನು ಮಸೀದಿಯ ಒಳಗೆ ಮಸೀದಿಯ ಒಳಗೆ ನನ್ನ ಹತ್ತಿರ ಮೀಟಿಂಗ್ ಕರೆಯಲು ಆಗುವುದಿಲ್ಲವಾ" ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನೀನು ಮೀಟಿಂಗ್ ಕರೆಯಲು ಹೇಳುವವನು ಯಾರು, ನಿನಗೆ ಮೀಟಿಂಗ್ ಕರೆಯುತ್ತೇನೆ ಎಂದು ಹೇಳಿ ಕೈಯಲ್ಲಿದ್ದ ಕಬ್ಬಿಣದ ಸರಳಿನಿಂದ ಹೊಡೆಯಲು ಬಂದಾಗ ಪಿರ್ಯಾದಿದಾರರು ತನ್ನ ಬಲ ಕೈಯನ್ನು ಅಡ್ಡ ಹಿಡಿದಾಗ ಕಬ್ಬಿಣದ ಸರಳು ಕೈಗೆ ತಾಗಿ ರಕ್ತ ಗಾಯವಾಗಿರುತ್ತದೆ. ಮುಸ್ತಾಕ್ ಅಹಮ್ಮದ್ ರವರ ಜೊತೆಯಲ್ಲಿದ್ದ ನವಾಜ್ ಅಶ್ರಫ್ ಮತ್ತು ಸೌಕತ್ಖಾನ್ ರವರುಗಳು ಪಿರ್ಯಾದಿದಾರರಿಗೆ ಕೈಯಿಂದ ಹೊಟ್ಟೆಗೆ, ತಲೆಗೆ ಹೊಡೆದು ಗುದ್ದಿದ ಗಾಯವಾಗಿರುತ್ತದೆ. ಅಲ್ಲದೇ ಇನ್ನು ಮುಂದೆ ನೀನು ಮೀಟಿಂಗ್ ವಿಷಯದಲ್ಲಿ ತಲೆ ಹಾಕಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ. ಘಟನೆಗೆ ಕಾರಣವೇನೆಂದರೆ ಜುಮ್ಮಾ ಮಸೀದಿಯ ಅಧ್ಯಕ್ಷರುಗಳಿಗೆ ಮತ್ತು ಕಮೀಟಿಯ ಸದಸ್ಯರುಗಳ ನಡುವೆ ಸುಮಾರು 2 ತಿಂಗಳ ಹಿಂದೆ ದೂರು ನೀಡಿರುವುದರಿಂದ ನಮ್ಮೋಳಗೆ ವೈಮನಸ್ಸು ಆಗಿರುತ್ತದೆ.

 

11.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-05-2014 ರಂದು ಪಿರ್ಯಾದಿದಾರರಾದ ಡಾ. ಪವನ್ ಚಂದ್ ಅತ್ತಾವರ್ ರವರು ತನ್ನ ಬಾಬ್ತು ಕೆಎ-19-ಎಂಡಿ-4275 ನೇ ಕಾರಿನಲ್ಲಿ ರಾ.ಹೆ.66 ರಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ತೆರಳುತ್ತಿರುವ ಸಮಯ ಬೆಳಿಗ್ಗೆ 08-45 ಗಂಟೆಗೆ ಇಡ್ಯಾ ಗ್ರಾಮದ ಸುರತ್ಕಲ್ ಜಂಕ್ಷನ್ ಬಳಿ ತಲುಪಿದಾಗ ಕೆಎ-19-ಎಎ-4567 ನೇ ಬಸ್ಸಿನ ಚಾಲಕ ಶಂಶೀರ್ ಎಂಬಾತನು ಕಾಟಿಪಳ್ಳ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗದ ಬಲಬದಿಯ ಬಂಪರ್, ಹೆಡ್ ಲೈಟ್, ಬಾನೆಟ್, ಇತ್ಯಾದಿ  ಜಖಂಗೊಂಡಿರುತ್ತದೆ.

 

12.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-05-2014 ರಂದು ಪಿರ್ಯಾದಿದಾರರಾದ ಶ್ರೀ ಸುರೇಶ್ ರವರ ಸಂಬಂದಿ ಅಣ್ಣನವರಾದ ಜಾರಪ್ಪ ರವರ ಟಾಟಾ ಮ್ಯಾಜಿಕ್ ಐರಿಸ್ ವಾಹನವು ರಾ.ಹೆ 66 ರಲ್ಲಿ ಚೇಳ್ಯಾರು ಕ್ರಾಸ್ ಬಳಿ ಪಿಕ್ ಅಪ್ ವಾಹನಕ್ಕೆ  ಅಪಘಾತವಾಗಿ ಜಾರಪ್ಪನವರಿಗೆ ಗಾಯವಾಗಿರುವುದಾಗಿ ಪಿರ್ಯಾದಿದಾರರಿಗೆ ಮಾಹಿತಿ ಬಂದಂತೆ, ಪಿರ್ಯಾದಿದಾರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಿರ್ಯಾದಿದಾರರ ಅಣ್ಣ ಜಾರಪ್ಪರವರು ಅಪಘಾತದಿಂದ ಗಾಯಗೊಂಡಿದ್ದು  ಸದ್ರಿಯವರನ್ನು ಅದೇ  ಟಾಟಾ ಮ್ಯಾಜಿಕ್ ವಾಹನ ನಂಬ್ರ ಕೆ.. 21. . 9065ನೇದರ  ಹಿಂಬದ ಸೀಟಿನಲ್ಲಿ ಕುಳ್ಳಿರಿಸಿದ್ದು ತಲೆಗೆ, ಕೈಗೆ, ರಕ್ತ ಗಾಯವಾಗಿದ್ದು ಸರಿಯಾಗಿ ಮಾತನಾಡುಲು ಆಗದೇ ಇದ್ದು ಪಿರ್ಯಾದಿದಾರರು ಅಪಘಾತ ಮಾಡಿದ ವಾಹನದ ಬಗ್ಗೆ ಕೇಳಲು ಪಿಕ್ ಅಪ್ ಗಾಡಿಯ ನಂಬ್ರ ತಿಳಿದಿರುವುದಾಗಿ ತಲೆಯಾಡಿಸಿ ತಿಳಿಸಿದ್ದು ಆದರೆ ನಂಬ್ರ ಹೇಳಲು ಆಗದೇ ಇದ್ದು,  ಅಪಘಾತವು ದಿನ ದಿನಾಂಕ 17-05-2014 ರಂದು ಅಪರಾಹ್ನ 2-30 ಗಂಟೆ ಸಮಯಕ್ಕೆ ಆಗಿರುವುದಾಗಿ ನಂತರ ಅವರನ್ನು ಚಿಕಿತ್ಸೆ ಬಗ್ಗೆ ಕುಂಟಿಕಾನ .ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಪಘಾತಕ್ಕೆ ಅಪಘಾತವನ್ನುಂಟು ಮಾಡಿ ಪರಾರಿಯಾದ ಪಿಕ್ ಅಪ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ.

 

13.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17/18-05-2014 ರಂದು ಪಿರ್ಯಾದಿದಾರರಾದ ಶ್ರೀ ಜನಾರ್ಧನ ಬಂಜನ್ ರವರು ರಾತ್ರಿ ವೇಳೆ ಮನೆಯಲ್ಲಿ ಮಲಗಿರುವ ಸಮಯ ಸುಮಾರು 12-00 ಗಂಟೆಗೆ ಪಿರ್ಯಾದಿದಾರರು ಮಲಗಿದ ಕೋಣೆಯ ಕಿಟಕಿಯನ್ನು ಯಾರೋ ಹೊರಗಿನಿಂದ ಕೈಯಿಂದ ಬಡಿಯುತ್ತಿದ್ದುದನ್ನು ಗಮನಿಸಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದಾಗಿ ಸಂಶಯದಿಂದ ಪಿರ್ಯಾದಿದಾರರು  ಸುತ್ತಮುತ್ತಲಿನ ಮನೆಯವರಿಗೆ ಪೋನ್ ಮುಖಾಂತರ ವಿಚಾರ ತಿಳಿಸಿದ್ದು ಸುಮಾರು 01-00 ಗಂಟೆ ಸಮಯಕ್ಕೆ ನೆರೆಮನೆಯವರು ಮತ್ತು  ಪಿರ್ಯಾದಿದಾರರು  ಹೊರಗಡೆ ಬಂದಾಗ ಸದ್ರಿ ವ್ಯಕ್ತಿಯು ಅಲ್ಲಿಂದ ಸುಮಾರು 50 ಮೀಟರ್ ದೂರಕ್ಕೆ ಓಡಿ ಆಯತಪ್ಪಿ ಕೆಳಗೆ ಬಿದ್ದವನನ್ನು ಹಿಡಿದು ವಿಚಾರಿಸಿದಾಗ ಆತನು ತನ್ನ ಹೆಸರು ಅಜೀಜ್ ಎಂದು ಹೇಳಿದ್ದು ಸದ್ರಿ ವ್ಯಕ್ತಿಯು ಓಡಿ ಕೆಳಗೆ ಬಿದ್ದ ಪರಿಣಾಮ ಎರಡೂ ಕಾಲುಗಳಿಗೆ ಗುದ್ದಿದ ಗಾಯ ಹಾಗೂ ತಲೆಗೆ ತರಚಿದ ಗಾಯವಾಗಿರುತ್ತದೆ.

No comments:

Post a Comment