ದೈನಂದಿನ ಅಪರಾದ ವರದಿ.
ದಿನಾಂಕ 24.05.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-05-2014 ರಂದು ಪಿರ್ಯಾದಿದಾರರಾದ ಶ್ರೀ ಶ್ರವಣ್ ಕುಮಾರ್ ರವರು ಮುಡಿಪು ಇನ್‌ಪೋಸಿಸ್ ಕಡೆಗೆ ಅಸೈಗೋಳಿ ಮುಖಾಂತರ ತನ್ನ ಮೋಟಾರು ಸೈಕಲ್ನಲ್ಲಿ ಹೋಗುತ್ತಾ ಕೊಣಾಜೆ ಗ್ರಾಮದ ಯುನಿವರ್ಸಿಟಿ ಬಳಿಯ ಲಯನ್ಸ್ ಕ್ಲಬ್ ಬಳಿ ತಲುಪುತ್ತಿದ್ದಂತೆ ಬೆಳಿಗ್ಗೆ 06-30 ಗಂಟೆ ಸಮಯ ಪಿರ್ಯಾದಿದಾರರ ಮೋಟಾರು ಸೈಕಲ್ನ ಮುಂದಿನಿಂದ ಮೋಟಾರ್ ಸೈಕಲ್ ನಂಬ್ರ ಕೆಎ-19ಇಜೆ-1118 ನೇಯದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಅಡ್ಡ ಬಂದ ನಾಯಿಯನ್ನು ಸದ್ರಿ ಮೋಟಾರು ಸೈಕಲ್ ಸವಾರ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಪಲ್ಟಿ ಆಗಿ ಬಿದ್ದವರನ್ನು ನೋಡಲಾಗಿ ಸದ್ರಿ ಮೋಟಾರು ಸೈಕಲ್ ಸವಾರನ ತಲೆ, ಮೈಕೈಗೆ ಗಾಯವಾಗಿದ್ದು, ನೋಡಿದಾಗ ಪಿರ್ಯಾದಿ ಪರಿಚಯದ ಇನ್ಫೋಸಿಸ್ ಉದ್ಯೋಗಿ ನಿತಿನ್ ಕುಮಾರ್ ಎಂಬವರಾಗಿರುತ್ತದೆ. ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಆಸ್ಪತ್ರೆಗೆ ಸಾಗಿಸಿ ವೈದ್ಯಾಧಿಕಾರಿಯವರು ಪರೀಕ್ಷಿಸಿದಲ್ಲಿ ಮೃತಪಟ್ಟಿರುವುದಾಗಿದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-05-2014ರಂದು ಮದ್ಯಾಹ್ನ 02-15 ಗಂಟೆಗೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ತಿಬ್ಲೆಪದವು ಕ್ರಾಸ್ ಎಂಬಲ್ಲಿ ಇಕ್ಬಾಲ್ ತಾನು ಚಲಾಯಿಸುತ್ತಿದ್ದ ಮೊಟಾರು ಸೈಕಲ್ ನಂಬ್ರ ಕೆ.ಎ.19 ಇಕೆ 4542ರಲ್ಲಿ ಸಹ ಸವಾರನಾಗಿ ತಯೂಬ್ ಎಂಬುವರನ್ನು ಕುಳ್ಳಿರಿಸಿಕೊಂಡು ನಾಟೆಕಲ್ ಕಡೆಯಿಂದ ತಿಬ್ಲೆಪದವು ಕಡೆಗೆ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರ ತಯೂಬ್ ರವರಿಗೆ ಎಡಕೈಯ ಕಟ್ಟಿನ ಬಳಿ ಗುದ್ದಿದ ರೀತಿಯ ರಕ್ತದ ಗಾಯವಾಗಿರುತ್ತದೆ. ಗಾಯಾಳು ದೇರಳಕಟ್ಟೆ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 21-05-2014ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಮನೋಜ್ ಕುಮಾರ್ ರವರ ಕಂಪೆನಿಯ ಸೇಲ್ಸ್ ಎಕ್ಸಿಕ್ಯೂಟಿವ್ ರಾದ ತನ್ಮಯಿ ಕಾಮತ್ ಹಾಗೂ ದೀಪಕ್ ಚೌಟ ಇವರುಗಳು ಕಂಪೆನಿಯ ಕೆಲಸದ ನಿಮಿತ್ತ ಬೈಕ್ ನಂ. ಕೆ.ಎ. 21 ಕ್ಯೂ 0075 ರಲ್ಲಿ ಮಂಗಳೂರುಗೆ ತೆರಳಿದ್ದು ಬೈಕನ್ನು ತನ್ಮಿಯಿ ಕಾಮತ್ ರವರು ಚಲಾಯಿಸಿ ಕೊಂಡಿದ್ದು ಹಿಂಬದಿ ದೀಪಕ್ ಚೌಟ್ ರವರು ಕುಳಿತುಕೊಂಡಿದ್ದರು. ಇವರುಗಳು ಮಂಗಳೂರುನಲ್ಲಿ ಕೆಲಸ ನಿರ್ವಹಿಸಿ ವಾಪಾಸು ಬೈಕಂಪಾಡಿ ಆಫೀಸ್ ಗೆ ಬರುತ್ತಿದ್ದಾಗ ಸಂಜೆ ಸಮಯ ಸುಮಾರು 4-30ಗಂಟೆಗೆ ಪಣಂಬೂರು ಎಂ.ಸಿ.ಎಫ್ ಬಳಿ ಇರುವ ರೈಲ್ವೇ ಗೇಟ್ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಮಂಗಳೂರು ಸುರತ್ಕಲ್ ರಾ.ಹೆ.. 66 ರಲ್ಲಿ ತನ್ಮಯಿ ಕಾಮತ್ ರವರು ದೀಪಕ್ ಚೌಟ್ ಸಹಸವಾರನಾಗಿ ರವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಬೈಕಿನ ಹಿಂದಿನ ಟಯರು ಆಕಸ್ಮಿಕವಾಗಿ ಒಡೆದು ಹೋದುದರಿಂದ ಬೈಕ್ ಸ್ಕಿಡ್ ಆಗಿ ರಸ್ತೆಗೆ ಮಗುಚಿಬಿದ್ದು ಬೈಕ್ ರೈಡರ್ ತನ್ಮಯಿ ಕಾಮತ್ ರವರಿಗೆ ತರಚಿದ ಗಾಯ ಮತ್ತು ದೀಪಕ್ ಚೌಟ ರವರಿಗೆ ತಲೆಗೆ ಗಂಭೀರ ಗಾಯಗೊಂಡವರನ್ನು ಸ್ಥಳೀಯರು ಮಂಗಳೂರು ಜ್ಯೋತಿ ಸರ್ಕಲ್ ಬಳಿ ಇರುವ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ದೀಪಕ್ ಚೌಟ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಚಿಕಿತ್ಸೆಯಲ್ಲಿದ್ದ ದೀಪಕ್ ಚೌಟ ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 23-05-2014 ರಂದು ಬೆಳಿಗ್ಗೆ 09-15 ಗಂಟೆಗೆ ಮೃತಪಟ್ಟಿರುತ್ತಾರೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-2014 ರಂದು 18-30 ಗಂಟೆಯಿಂದ ದಿನಾಂಕ 03-04-2014ರಂದು ಬೆಳಿಗ್ಗೆ 10-15 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ ಟೆಲಿಕಾಂ ಅಪಾರ್ಟಮೆಂಟ್ ನ 4 ನೇ ಬ್ಲಾಕ್ ನ ಎದುರುಗಡೆ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ಶೇಖರ್ ಎ.ಎಸ್. ರವರ ಆರ್. ಸಿ. ಮಾಲಕತ್ವದ 2007 ನೇ ಮೋಡಲ್ ನ ಅಂದಾಜು ರೂಪಾಯಿ 20000/- ಬೆಲೆ ಬಾಳುವ ಕಪ್ಪು ಬಣ್ಣದ KA 19 W 7348 ನೇ ನೊಂದಣಿ ಸಂಖ್ಯೆಯ ಸುಜುಕಿ ಕಂಪನಿಯ Zeus ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಟೂಲ್ಸ್ ಬಾಕ್ಸ್ ನಲ್ಲಿ ಸದ್ರಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ R.C Insurance ನ ಜೆರಾಕ್ಸ್ ಪ್ರತಿ ಕೂಡ ಇದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ದಿನಾಂಕ 23-05-2014ರಂದು 15-00 ಗಂಟೆಯ ತನಕ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-05-2014 ರಂದು ಮಧ್ಯಾಹ್ನ 12-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಾದ ಮೂಡುಪೆರಾರ ಗ್ರಾಮದ ಕಜೆ ಪದವು ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ಯೋಗೀಶ್ ಆಚಾರಿ ರವರ ಬಾವ ವಿಶ್ವನಾಥ ಆಚಾರಿ, ಪ್ರಾಯ: 42 ವರ್ಷ ಇವರು ಬಜಪೆ ಕಡೆಯಿಂದ ಕೈಕಂಬ ಕಡೆಗೆ ತನ್ನ ಬಾಬ್ತು ದ್ವಿಚಕ್ರ ನಂ: ಕೆಎ 19 ಇಕೆ 3391 ರಲ್ಲಿ ಹೋಗುತ್ತಿದ್ದಾಗ, ಅವರ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಬಜಪೆ ಕಡೆಗೆ ಟಿಪ್ಪರ್ ಲಾರಿ ನಂ: ಕೆಎ 19 ಡಿ 795 ನ್ನು ಅದರ ಚಾಲಕ ತನ್ನ ಬಾಬ್ತು ಟಿಪ್ಪರ್ ಲಾರಿಯನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬಾವ ವಿಶ್ವನಾಥ ಆಚಾರಿ ರವರ ದ್ವಿಚಕ್ರ ವಾಹನ ನಂ: ಕೆಎ 19 ಇಕೆ 3391 ಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಿಶ್ವನಾಥ ಆಚಾರಿ ರವರು ತಲೆಗೆ ಮತ್ತು ಶರೀರಕ್ಕೆ ತೀವ್ರ ಜಖಂಗೊಂಡಿದ್ದು, ಅವರನ್ನು 108 ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಕುರಿತು ಮಂಗಳೂರು ಜ್ಯೋತಿ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಸಂಜೆ 5-15 ಗಂಟೆಗೆ ಮೃತಪಟ್ಟಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಂಜಪ್ಪ ಶೆಟ್ಟಿ ರವರ ಮಗಳಾದ ಶ್ರೀಮತಿ ನಯನ ಪ್ರಾಯ 23 ವರ್ಷ ಎಂಬಾಕೆಯನ್ನು ಸುಮಾರು 2 ವರ್ಷಗಳ ಹಿಂದೆ ಹಾಸನದ ಮಂಜುನಾಥ ಎಂಬವರಿಗೆ ವಿವಾಹ ಮಾಡಿಸಿ ಕೊಟ್ಟಿದ್ದು, ಆ ಬಳಿಕದಿಂದ ಮಂಜುನಾತನು ಶ್ರೀಮತಿ ನಯನರವರಿಗೆ ಮಾನಸಿಕ ಹಿಂಸೆ ನೀಡುತ್ತಲೇ ಬಂದಿದ್ದು ಪ್ರಸ್ತುತ ಇವರು ಎನ್ಐಟಿಕೆ ಬಳಿ ಮುಂಚೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯದಲ್ಲಿದ್ದು, ಗಂಡನ ಹಿಂಸೆ ತಾಳಲಾರದೆ ಆಕೆಯು ದಿನಾಂಕ 23-05-14 ರಂದು ಬೆಳೆಗ್ಗೆ ಸುಮಾರು 11-00 ಗಂಟೆಗೆ ಸುರತ್ಕಲ್ನ ಶ್ರೀನಿವಾಸ ನಗರ ಮುಂಚೂರು ಎಂಬಲ್ಲಿ ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಸಾದ್ ರವರ ಅತ್ತೆ ಶಾಂಬವಿ ಎಂಬವರಿಗೆ ಮೈ ಹುಷಾರಿಲ್ಲದ ಕಾರಣ ಕಾನಾ ಮಿಸ್ಕಿತ್ ಆಸ್ಪತ್ರೆಗೆ ಬರುವರೇ ದಿನಾಂಕ 22-05-14 ರಂದು ಸಂಜೆ 19-00 ಗಂಟೆಗೆ ಪಿರ್ಯಾದಿದಾರರ ಜೊತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಾ ಮಿಸ್ಕಿತ್ ಆಸ್ಪತ್ರೆ ಎದುರು ತಲುಪಿದಾಗ ಸುರತ್ಕಲ್ ಕಡೆಯಿಂದ ಕಾನ ಕಡೆಗೆ ಕೆಎ 21-ಆರ್-4710 ನೇ ಮೋಟಾರು ಸೈಕಲ್ ಅನ್ನು ಅದರ ಸವಾರ ಶ್ರವಣ್ ಕುಮಾರ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಇತರ ವಾಹನಗಳನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿದಾರರ ಅತ್ತೆಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ಮಣ್ಣು ರಸ್ತೆಯ ಮೇಲೆ ಬಿದ್ದು ಬಲ ಕಾಲು ಮೂಳೆ ಮುರಿತದ ಗಾಯ ಹಾಗೂ ಗಲ್ಲಕ್ಕೆ ರಕ್ತ ಗಾಯವಾಗಿ ಹಲ್ಲಿನ ಸೆಟ್ ಅಲ್ಲಾಡುತ್ತಿದ್ದು ಒಂದು ಹಲ್ಲು ಕಟ್ ಆಗಿದ್ದು ಚಿಕತ್ಸೆ ಬಗ್ಗೆ ಮಿಸ್ಕಿತ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
No comments:
Post a Comment