Wednesday, May 14, 2014

Daily Crime Reports 13-05-2014

ದೈನಂದಿನ ಅಪರಾದ ವರದಿ.

ದಿನಾಂಕ 13.05.201417:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

4

ಮನೆ ಕಳವು ಪ್ರಕರಣ

:

3

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

9

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.05.2014 ರಂದು ಬೆಳಿಗ್ಗೆ ಸಮಯ ಸುಮಾರು 08.15 ಗಂಟೆಗೆ ಕಾರು ನಂಬ್ರ KA19-MB-4685 ನ್ನು ಅದರ ಚಾಲಕ ಮಹೇಶ್ ಎಂಬುವರು ಯೆಯ್ಯಾಡಿ ಕಡೆಯಿಂದ ಸರ್ಕ್ಯೂಟ್ ಹೌಸ್  ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು KPT ಜಂಕ್ಷನ್   ತಲುಪುವಾಗ, A.J ಆಸ್ಪತ್ರೆ  ಕಡೆಯಿಂದ ನಂತೂರು ಕಡೆಗೆ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ KA19-EF-2164 ಕ್ಕೆ ಡಿಕ್ಕಿ ಮಾಡಿದ ಪರಿಣಾಮ  ಮೋಟರ್ ಸೈಕಲ್ ಸವಾರ ಕಿಶೋರ್ ಕುಮಾರ್ ರಸ್ತೆಗೆ ಬಿದ್ದು ಎಡ ಕೈಗೆ ಗುದ್ದಿದ ಗಾಯ ಉಂಟಾಗಿ A.J ಆಸ್ಪತ್ರೆಗೆ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.05.2014 ರಂದು ಬೆಳಿಗ್ಗೆ ಸುಮಾರು 07.15 ಗಂಟೆಗೆ ಕುಲಶೇಖರ ಕಲ್ಪನೆಯ M.C.C  ಬ್ಯಾಂಕಿನ ಬಳಿ ರಸ್ತೆ ದಾಟುತ್ತಿದ್ದ ಶ್ರೀಮತಿ ಆಲಿಸ್ ಕುವೆಲ್ಲೋ ಎಂಬುವರಿಗೆ  ಕುಲಶೇಖರ ಕಡೆಯಿಂಧ ಮೋ.ಸೈಕಲ್ ನಂಬ್ರ KA19-U-4129 ನ್ನು ಅದರ ಸವಾರ ಸಹಸವಾರರೋಬ್ಬರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ಗಾಯಾಳು ಅಂಬೇಡ್ಕರ್ ವೃತ್ತದ ಕೆ.ಎಂ.ಸಿ  ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/05/2014 ರಂದು 20:25 ಗಂಟೆಗೆ ಲಾರಿ ನಂಬ್ರ KA-03-B-8374 ನ್ನು ಅದರ ಚಾಲಕ AJ ಆಸ್ಪತ್ರೆ ಕಡೆಯಿಂದ KPT ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬರುತ್ತ KPT ಜಂಕ್ಷನ್  ಬಳಿಯಿರುವ ಮ್ಯಾಪ್ಸ್ ಕಾಲೇಜು ಕ್ರಾಸು ರಸ್ತೆ ಬಳಿ ತಲುಪುವಾಗ ಯಾವುದೇ ಸೂಚನೆ ನೀಡದೆ ನಿರ್ಲಕ್ಷತನದಿಂದ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಮೊ,ಸೈಕಲ್ ನಂಬ್ರ KA-19-EK-7274 ಕ್ಕೆ ಡಿಕ್ಕಿಯಾಗಿ  ಮೊ, ಸೈಕಲ್ ಸವಾರನ ಮುಖಕ್ಕೆ ಗಂಭಿರ ಸ್ವರೂಪದ ಗಾಯಗೊಂಡು AJ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ತೆಯಲ್ಲಿರುತ್ತಾರೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-05-14 ರಂದು 23.00 ಗಂಟೆಯಿಂದ ದಿನಾಂಕ 13-05-14 ರಂದು 05.00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಪಿಯುಷ್ ಒಸ್ವಾಲ್ಡ್ ಪಿಂಟೋ ರವರ ಬಾಬ್ತು ಕಡಂದಲೆ ಗ್ರಾಮದ ಪೂಪಾಡಿ ಕಲ್ಲು ಬೆತ್ತಲೆ ಹೌಸ್ ಎಂಬಲ್ಲಿರುವ ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ಕಿಟಕಿಯ ಸಹಾಯದಿಂದ ಯಾವುದೋ ಸಾಧನವನ್ನು ಹಾಕಿ ಚಿಲಕ ತೆಗೆದು ಒಳಪ್ರವೇಶಿಸಿ ಬೆಡ್ ರೂಮ್ ನಲ್ಲಿ ಕಬ್ಬಿಣದ ಕಪಾಟಿನಲ್ಲಿದ್ದ ಸುಮಾರು 33 ವರೆ ಪವನ್ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 7,20,000/- ಆಗಬಹುದು.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.05.2014 ರಂದು ಪಿರ್ಯಾದಿದಾರರಾದ ಶ್ರೀ ವಿಜಿತ್ ಶೆಟ್ಟಿ ತನ್ನ ಹೊಟೇಲ್ ಶ್ರೀದ್ವಾರ ವನ್ನು  ರಾತ್ರಿ 10.30ಗಂಟೆಗೆ ಎಂದಿನಂತೆ ಬಂದ್ ಮಾಡಿ ಸ್ವಚ್ಛಮಾಡಿ ಮಲಗಲು ಹೋಗುತ್ತಿದ್ದ ಸಮಯ ಸುಮಾರು 12.30ಗಂಟೆಗೆ ಹೊಟೇಲ್ ನ ಎದುರು ಬಂದು ನೋಡುತ್ತಿರುವಾಗ ಪಣಂಬೂರು ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಂಪಾಡಿ ಪೇಟೆಯಲ್ಲಿರುವ ಬಲಾಜಿ ಹೊಟೇಲ್ ಹಾಗೂ ನಮ್ಮ ಹೊಟೇಲ್‌‌ನ ಮಧ್ಯಬಾಗದಲ್ಲಿ ಆತನು ಚಾಲಾಯಿಸುತ್ತಿದ್ದ ವಾಹನವನ್ನು ಹಠತ್ ಬ್ರೇಕ್ ಹಾಕಿ ನಿಲ್ಲಿಸಲು ಪ್ರಯತ್ನಿಸಿದಾಗ ಹತೋಟಿ ತಪ್ಪಿ ರಸ್ತೆಯ ಬಲಬದಿಯಲ್ಲಿರುವ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಸುರತ್ಕಲ್ -ಪಣಂಬೂರು ರಾ.ಹೆ.ಯ ಏಕ ಮುಖ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಕಾರು ಚಾಲಕ ರಾಖೇಶ್ನ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ರಕ್ತ ಗಾಯವಾಗಿದ್ದು ಕಾರಿನಲ್ಲಿದ್ದ ಇತರ ಇಬ್ಬರ ಪೈಕಿ ಒಬ್ಬರಿಗೆ ಕೈ ಮತ್ತು ಕಾಲುಗಳಿಗೆ ಗುದ್ದಿದ ಗಾಯವಾಗಿದ್ದು ಈ ಘಟನೆಗೆ ಕೆಎ-19 ಎಂಎ-1421ರ ಕಾರಿನ ಚಾಲಕ ರಾಖೇಶ್ ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

6.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.05.2014ರಂದು ಪಿರ್ಯಾದಿದಾರರಾದ ಶ್ರೀ ಡೆಲ್ವಿನ್ ಡಿ'ಸೋಜಾ ರವರು ತನ್ನ ಬಾಬ್ತು ಕಾರು ನಂ ಕೆಎ-19 ಪಿ-7098ನೇಯದರಲ್ಲಿ ಸುರತ್ಕಲ್ನಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು 11.30ಗಂಟೆಗೆ ಪಣಂಬೂರು ಸರ್ಕಲ್ ಬಳಿ ತಲುಪುತ್ತಿದ್ದಂತೆ ತನ್ನ ಮಂದುಗಡೆಯಿಂದ ಒರ್ವ ವ್ಯಕ್ತಿ ರಸ್ತೆ ದಾಟುವರೇ ಡಿವೈಡರ್ ಮೇಲೆ ನಿಂತಿದ್ದವನು ರಸ್ತೆಗೆ ಇಳಿಯುತ್ತಿದಂತೆ ಬೈಕಂಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ. 66 ರಲ್ಲಿ ಹೋಗುತ್ತಿದ್ದ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತದೆ ಡಿಕ್ಕಿ ಹೋಡೆದ ಪರಿಣಾಮ ಆತನಿಗೆ ಬಲ ಕಾಲಿನ ಮಣಂಗಟ್ಟಿಗೆ ರಕ್ತಗಾಯ ವಾಗಿರುತ್ತದೆ ಹಾಗೂ ಎರಡೂ ಕೈಗಳಿಗೆ ತರಚಿದ ಗಾಯ ವಾಗಿರುತ್ತದೆ ಗಾಯಗೊಂಡವನನ್ನು ಮಂಗಳೂರಿನ ಎಜೆ ಆಸ್ತತ್ರೆಗೆ ಧಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸದ್ರಿ ಅಪಘಾತ ಪಡಿಸಿದ ವಾಹನವು ಘಟನಾಸ್ಥಳದಿಂದ ನಿಲ್ಲಿಸದೇ ಪರಾರಿಯಾಗಿದ್ದು ಹಾಗೂ ಗಾಯಾಳು ಕೂಡ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದು ಪಣಂಬೂರು ಪರಿಸರದಲ್ಲಿ ಭಿಕ್ಷಾಟಣೆ ಮಾಡುವುದಾಗಿ ತಿಳಿದು ಬಂದಿರುತ್ತದೆ.

 

7.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-05-2014 ರಂದು ಫಿರ್ಯಾದಿದಾರರಾದ ಶ್ರೀ ಭವಾನಿ ಶಂಕರ್  ರವರು ಲೊಯೋಲಾ ಹಾಲಿನಲ್ಲಿ ತನ್ನ ಅಣ್ಣನ ಮಗನ ಮದುವೆ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಕೆಬಿ ಕಟ್ಟೆ ಸೆಂಟ್ರಲ್ ಬ್ಯಾಂಕ್ ಬಳಿ ನಡೆದುಕೊಂಡು ಬರುತ್ತಿರುವಾಗ ಸುಮಾರು ಸಂಜೆ 6 ಗಂಟೆಗೆ ಪಿರೇರಾ ಹೊಟೇಲಿನ ಹಿಂಬದಿ ಸುಮಾರು 5-6 ಹುಡುಗರು ಸೇರಿಕೊಂಡು ತಮ್ಮೊಳಗೆ ಗಲಾಟೆ ಮಾಡುತ್ತಿದ್ದು, ಆ ಹುಡುಗರಲ್ಲಿ ಫಿರ್ಯಾದಿದಾರರು ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಆ ಹುಡುಗರು ತುಳುಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು ಅಲ್ಲೇ ಹತ್ತಿರದ ಅಂಗಡಿಯ ಬಳಿ ಇಟ್ಟಿದ್ದ ಸೋಡಾ ಬಾಟ್ಲಿಯಿಂದ ಫಿರ್ಯಾದಿದಾರರ ತಲೆಗೆ ಹೊಡೆದಿದ್ದು, ಫಿರ್ಯಾದಿದಾರರು ಕೆಳಗೆ ಬಿದ್ದಾಗ ಫಿರ್ಯಾದಿದಾರರ ಸ್ನೇಹಿತರಾದ ಪದ್ಮನಾಭ ಪೂಂಜಾ, ಜೇಮ್ಸ್ ನೀರುಮಾರ್ಗ, ವಿಠಲ್ ಸನಿಲ್ ಎಂಬವರು ಹತ್ತಿರ ಬಂದಾಗ ಆರೋಪಿಗಳು ಓಡಿ ಹೋಗಿದ್ದು, ಬಳಿಕ ಫಿರ್ಯಾದಿದಾರರನ್ನು ಆಟೋ ರಿಕ್ಷಾದಲ್ಲಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಮಿಲಾಗ್ರೀಸ್ ಕಟ್ಟಡದ ಒಂದನೇ ಮಹಡಿಯಲ್ಲಿರುವ  ನಿಕಿಲ್ ಮಾಲಿಕತ್ವದ  ಜೋಸ್ ಸ್ಟುಡಿಯೋದಲ್ಲಿ ಪೋಟೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 11-05-2014 ರಂದು ಮಧ್ಯಾಹ್ನ 12:00 ಗಂಟೆಗೆ ಸ್ಟುಡಿಯೋದ ಬಾಗಿಲಿಗೆ ಬೀಗವನ್ನು ಹಾಕಿ ಹೋಗಿದ್ದು, ದಿನಾಂಕ 12-05-2014 ರಂದು  ಬೆಳಿಗ್ಗೆ 09:00 ಗಂಟೆಗೆ ಬಂದು ಸ್ಟುಡಿಯೋ ಗೆ ಬಂದು ನೋಡಿದಾಗ ಸ್ಟುಡಿಯೋದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಬಲಾತ್ಕಾರವಾದ ಆಯುಧದಿಂದ ಮೀಟಿ ತುಂಡರಿಸಿ ಬಾಗಿಲು ತೆರೆದು ಒಳ ಪ್ರವೇಶಿಸಿ ಸ್ಟುಡಿಯೋದ ಒಳಗಡೆ ಮರದ ಕಪಾಟಿನಲ್ಲಿರಿದ್ದ ನಿಕೋನ್ ಕಂಪೆನಿಯ ಕ್ಯಾಮೇರಾ ಮೂರು, ಲೆನ್ಸ್ ಎರಡು, ಸಿಪಿಯು ಒಂದು, ಮೊನಿಟರ್ ಎರಡು ಹಾಗೂ ಮೆಮೋರಿ ಕಾರ್ಡ ಗಳು, ನಗದು 2,500/- ರೂ ಸೇರಿ ಒಟ್ಟು 4 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

9.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-05-2014 ರಂದು  ಫಿರ್ಯಾದುದಾರರಾದ ಶ್ರೀ ಶಮೂನ್ ಖಾನ್ ರವರು ಡಿ.ಸಿ ಕಛೇರಿಯ ಮುಂಭಾಗದಲ್ಲಿ ಕಾರ್ಯ ನಿಮಿತ್ತ ಹೋಗುತ್ತಿದ್ದಾಗ " ಭಾರತಿಯ ಕ್ರಾಂತಿ ಸೇನೆ" ಯ ರಾಷ್ಟ್ರಾಧ್ಯಕ್ಷರಾದ ಪ್ರಣವಾನಂದ ಸ್ವಾಮೀ ಎಂಬವರ ನೇತ್ರತ್ವದಲ್ಲಿ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪ್ರಚೋಧನಾ ಕಾರಿ ಮತ್ತು ಕೋಮು ಭಾವನೆಯನ್ನು ಕೆರಳಿರುವಂತಹ ಸಂವಿಧಾನ ವಿರೋಧಿ ಭಾಷನವನ್ನು ಮಾಡುತ್ತಿದ್ದು, ಇವರು ತನ್ನ ಭಾಷಣದಲ್ಲಿ " ಗೋ ಹತ್ಯೆ ಮಾಡುವವರ ಕೈ ಕಾಲುಗಳನ್ನು ಕಡಿಯಬೇಕು ಮತ್ತು ಜಾನುವಾರು ವಧೆ ಮುಸ್ಲೀಮರ ಉದ್ಯೋಗ" ಎಂದು ಹೇಳಿದ್ದು, ಇದರಿಂದಾಗಿ ಕೋಮು ಪ್ರಚೋದಕ ವಾತಾವರಣ ಸೃಷ್ಟಿಸಲು ಕಾರಣವಾಗುತ್ತದೆ.

 

10.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-05-2014 ರಂದು 19-30 ಗಂಟೆಯಿಂದ ದಿನಾಂಕ 12-05-2014 ರಂದು 17-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ದಕ್ದೆಯಲ್ಲಿರುವ ಪೇರಿ ಪಾಯಿಂಟ್ ಹತ್ತಿರ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ಸಂಕೇತ್ ಬೆಂಗ್ರೆ ರವರು ಉಪಯೋಗಿಸುತ್ತಿದ್ದ ಅವರ ಸಂಬಂಧಿ ಪ್ರಧೀಪ್ ಕುಮಾರ್ ಎಂಬವರ  ಆರ್. ಸಿ. ಮಾಲಕತ್ವದ 2004ನೇ ಮೋಡಲ್ ನ ಸ್ಟಾರ್ ನೀಲಿ ಬಣ್ಣದ  ಅಂದಾಜು ರೂಪಾಯಿ 18000/- ಬೆಲೆ ಬಾಳುವ KA 19 S 9018 ನೊಂದಣಿ ಸಂಖ್ಯೆಯ ಬಜಾಜ್ ಕಂಪನಿಯ ಪಲ್ಸರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕ್ ನ ಟೂಲ್ಸ್ ಬಾಕ್ಸ್ ನಲ್ಲಿ ಸದ್ರಿ ದ್ಚಿಚಕ್ರ ವಾಹನಕ್ಕೆ ಸಂಬಂಧಪಟ್ಟ  R.C ಹಾಗೂ Insurance ನ ಜೇರಾಕ್ಸ್ ಪ್ರತಿ ಕೂಡ  ಇರುತ್ತದೆ.

 

11.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 11-05-2014 ರಂದು   ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಅಶ್ರಫ್ ರವರು ಬೆಳಿಗ್ಗೆ  ಬಸ್ಸಿಗೆ ಪ್ರಯಾಣಿಕರನ್ನು ಹತ್ತಿಸುವ  ವಿಚಾರದಲ್ಲಿ    ಮೂಡಬಿದ್ರೆ  ಬಸ್ಸು ತಂಗುದಾಣದ ಬಳಿ   ತಕರಾರು ಮಾಡಿದ  ಆರೋಪಿ  ಸಂತೋಷ್ಎಂಬಾತ   ಮದ್ಯಾಹ್ನ 13.00 ಗಂಟೆಗೆ  ಪಿರ್ಯಾದುದಾರರಿಗೆ ಹಲ್ಲೆ ನಡೆಸುವ ಸಮಾನ  ಉದ್ದೇಶದಿಂದ   ತನ್ನ ಸಹಚರರಾದ ಪ್ರವೀಣ್ಮತ್ತು ಇತರ 5-6 ಮಂದಿಯೊಂದಿಗೆ ಅಕ್ರಮ ಕೂಟ ಸೇರಿಸಿಕೊಂಡು ಪಿರ್ಯಾದಿದಾರರು ನಿರ್ವಾಹಕರಾಗಿರುವ  ಪದ್ಮಾವತಿ   ಬಸ್ಸನ್ನು  ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ, ಎಡಪದವು  ಬಸ್ಸು ತಂಗುದಾಣದ ಬಳಿ  ಅಕ್ರಮವಾಗಿ ತಡೆದು ನಿಲ್ಲಿಸಿ ಬಸ್ಸಿನ  ಒಳಗೆ ಬಂದು  ಪಿರ್ಯಾದುದಾರರಿಗೆ  ಆರೋಪಿ ಸಂತೋಷ್‌  ಅವಾಚ್ಯವಾಗಿ ಬೈದುಕೈಯಿಂದ  ಹೊಡೆದು ಕಾಲಿನಿಂದ ತುಳಿದುದ್ದಲ್ಲದೇ, ಮರದ ತುಂಡಿನಿಂದ   ಹಲ್ಲೆ  ಮಾಡಿ  ನೋವುಂಟು ಮಾಡಿದ್ದಲ್ಲದೇ ಇತರ ಆರೋಪಿಗಳು ಕೂಡ ಕೈಯಿಂದ ಹೊಡೆದು   ಮುಂದಕ್ಕೆ  ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿರುವುದಾಗಿದೆ. 

 

12.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಗೊವಿಂದ ನಾಯ್ಕ್ ರವರು ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿರುವ ವೇದವ್ಯಾಸ ಭಟ್ ಎಂಬವರ ಶ್ರೀರಾಮ ಎಂಟರ್ ಪ್ರೈಸಸ್ ಎಂಬ ಹಾರ್ಡ್ ವೇರ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ಅಂಗಡಿಯು ಪ್ರತೀದಿನ ಬೆಳಿಗ್ಗೆ  8-00 ಗಂಟೆಗೆ ತೆರೆದರೆ ರಾತ್ರಿ 7-00 ಗಂಟೆಗೆ ಬಂದ್ ಮಾಡುವುದಾಗಿದೆದಿನಾಂಕ: 10-05-2014 ರಂದು ಕೂಡಾ ಅದೇ ರೀತಿ ಸಂಜೆ 7-00 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದ ತಾನು ದಿನಾಂಕ: 12-05-2014 ರಂದು ಬೆಳಿಗ್ಗೆ 8-00 ಗಂಟೆಗೆ ಅಂಗಡಿಗೆ ಬಂದವನು ಬಾಗಿಲನ್ನು ತೆರೆದು ನೋಡಿದಾಗ ತಮ್ಮ ಅಂಗಡಿಯ ಹಿಂಬದಿ ಮೇಲ್ಛಾವಣಿಗೆ ಹಾಸಲಾದ ಸಿಮೆಂಟ್ ಶೀಟನ್ನು ತುಂಡರಿಸಿ ಯಾರೋ ಕಳ್ಳರು ಅಕ್ರಮವಾಗಿ ಒಳ ಪ್ರವೇಶಿಸಿ ಅಂಗಡಿಯಲ್ಲಿದ್ದ ಸುಮಾರು 80000/- ರೂ. ಬೆಲೆಬಾಳುವ ಹಿತ್ತಾಳೆಯ ಬಾಗಿಲಿಗೆ ಅಳವಡಿಸುವ ಹ್ಯಾಂಡಲ್ , ನೀರಿನ ಟ್ಯಾಪ್, ಲಾಕ್ ಮತ್ತು ವಯರುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ.

 

13.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-05-2014 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಸಾಹುಲ್ ಹಮೀದ್ ರವರು ಜಾಕೀರ್ ಮತ್ತು ಸಾಹುಲ್ ಹಮೀದ್ ಎಂಬವರ ಜೊತೆಗೆ ಪಡುಪೆರಾರು ಗ್ರಾಮ ಪಂಚಾಯತಿಗೆ ಮನೆಯ ಡೋರ್ ನಂಬ್ರದ ವಿಚಾರದಲ್ಲಿ ಹೋಗಿ ಪಂಚಾಯತ್ ಕಾರ್ಯಾದಶಿ ಶ್ರೀ ಮುರುನಾಳ್ ಎಂಬವರಲ್ಲಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಪಂಚಾಯತ್ ಅದ್ಯಕ್ಷ ಶ್ರೀ ಇರ್ಫಾನ್ ಎಂಬವರು ಪಿರ್ಯಾದುದಾರರನ್ನು ಉದ್ದೇಶಿಸಿ ನಿಮಗೆ ಬೇರೊಂದು ಡೋರ್ ನಂಬ್ರ ನೀಡಲು ಸಾದ್ಯವಿಲ್ಲಾ ಎಂದರು ನಂತರ ಕೋಪಗೊಂಡ ಇರ್ಪಾನ್ ರವರು ನಿನಗೆ ಒಮ್ಮೆ ಹೇಳಿದ್ದು ಅರ್ಥವಾಗುವುದಿಲ್ಲವಾ? ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿಕೊಂಡು ಅವರಿಗೆ ಕೈಯಿಂದ ಹೊಡೆದು ಕಛೇರಿಯಿಂದ ಹೊರಗೆ ದೂಡಿದಾಗ ಮೆಟ್ಟಿಲಿನ ಮೇಲೆ ಉರುಳಿ ಬಿದ್ದರು ಆಗ ಸಾಹುಲ್ ಹಮೀದ್ ಮತ್ತು ಜಾಕೀರ್ ರವರು ತಡೆಯಲು ಬಂದಾಗ ಅವರನ್ನು ಕಾರ್ಯದರ್ಶಿ ಮತ್ತು ಇರ್ಫಾನ್ ಹಿಡಿದೇಳದು ಜಾಕೀರ್ ರವರ ಶರ್ಟ್ ನ್ನು ಹರಿದು ಮುಂದಕ್ಕೆ ಪಂಚಾಯತಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿರುತ್ತಾರೆ ಈ ಘಟನೆಗೆ ಇರ್ಫಾನ್ ಹಾಗೂ ಕಾರ್ಯದರ್ಶಿರವರು ಪಿರ್ಯಾದಿದಾರರಿಂದ ಪರೋಕ್ಷ ಪ್ರತಿಫಲವನ್ನು ಅಪೇಕ್ಷಿಸಿ ಪ್ರತಿಫಲ ಸಿಗದಿದ್ದಾಗ ಕೋಪಗೊಂಡು ಡೋರ್ ನಂಬ್ರ ನೀಡಲು ನಿರಾಕರಿಸಿ ದುರುದ್ದೇಶ ಪೂರಿತವಾಗಿ ಹಲ್ಲೆ ನಡೆಸಿರುವುದಾಗಿದೆ.

 

14.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-05-2014 ರಂದು ಬೆಳಿಗ್ಗೆ 9-45 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಸಿದ್ದವೀರಪ್ಪ ರವರು ತನ್ನ ಮಗಳು ಬಾಲಮ್ಮ ತಮ್ಮನ ಹೆಂಡತಿ ಬಸಮ್ಮ ಮತ್ತು ಮೊಮ್ಮಗ ಹನುಮಂತ ಎಂಬವರೊಂದಿಗೆ  ಕೆಎ 19 ಬಿ 120 ನೇ ನಂಬ್ರ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಾ ಉಳ್ಳಾಲ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಎಂಬಲ್ಲಿ ತಲುಪುತ್ತಿದ್ದಂತೆ ಅವರ ಎದರುನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಕೆಎ 19 ಜೆಡ್‌ 6225 ನೇ ಕಾರನ್ನು ಅದರ ಚಾಲಕ ಮೊಬೈಲ್ಪೋನ್ನಲ್ಲಿ ಮಾತನಾಡಿಕೊಂಡು, ಕಾರನ್ನು ಅತೀವೇ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದುದರಿಂದ ರಿಕ್ಷಾ ಮಗುಚಿ ಬಿತ್ತು. ಈ ಪರಿಣಾಮ ಪಿರ್ಯಾದುದಾರರ ಎಡಕಾಲಿನ ಮೊಣಗಂಟಿಗೆ ತೀವ್ರ ರಕ್ತಗಾಯ, ಎಡ ಹುಬ್ಬಿಗೆ, ಎಡ ಕೆನ್ನೆಗೆ ರಕ್ತಗಾಯ , ಬಾಲಮ್ಮರವರ ಮೂಗಿ ಮತ್ತು ಕಾಲಿಗೆ ಗಾಯ, ಬಸಮ್ಮನ ತಲೆಗೆ ಗುದ್ದಿದ ಗಾಯ ಹಾಗು ಹನುಮಂತನ ತಲೆಗೂ ರಕ್ತಗಾಯವಾಗಿರುತ್ತದೆ. ಕೂಡ ಅವರನ್ನು ಅಲ್ಲಿದ್ದವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

15.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-05-2014 ರಂದು 15-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ರಾ.ಹೆ. 66 ರ ಉಳ್ಳಾಲ ಗ್ರಾಮದ ಕಾಪಿಕಾಡ್ಎಂಬಲ್ಲಿ ಮಂಗಳೂರಿನಿಂದ ತಲಪಾಡಿ ಕಡೆಗೆ ಕೆಎ 19 ಎಮ್ಡಿ 6406 ನೇ ಕಾರನ್ನು ಅದರ ಚಾಲಕ ಉಮ್ಮರ್ಫಾರೂಕ್ಎಂಬವರು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿದ್ದರಿಂದ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ಕಂಬಕ್ಕೆ ಡಿಕ್ಕಿಯಾಗಿ ಸ್ವಲ್ಪ ದೂರಕ್ಕೆ ಹೋಗಿ ಮಗುಚಿ ಬಿದ್ದಿರುತ್ತದೆ. ಕಾರಿನಲ್ಲಿದ್ದ ಪಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರ ತಲೆಗೆ ತರಚಿದ ಗಾಯ, ಪಿರ್ಯಾದುದಾರರ ಹೆಂಡತಿ ಜೈನಬಳಿಗೆ ಮತ್ತು ಮಗ ಶಮ್ರಾಝ್ನಿಗೆ ತರಚಿದ ಗಾಯ, ಮತ್ತು ಪಿರ್ಯಾದುದಾರರ ಅತ್ತೆ ಬೀಪಾತುಮ್ಮರವರ ಬಲಕೈಯ ಮೂಳೆ ಮುರಿತವಾಗಿರುತ್ತದೆ. ಈ ಅಪಘಾತದಿಂದ ಚಾಲಕ ಉಮ್ಮರ್ಫಾರೂಕ್ರವರಿಗೆ ಗುದ್ದಿ ಗಾಯವಾಗಿರುತ್ತದೆ. ಗಾಯಾಳುಗಳನ್ನು ತೊಕೊಟ್ಟು ಸಹರಾ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು, ಬೀಪಾತುಮ್ಮ ಮತ್ತು ಶಮ್ರಾಝ್ರವರು ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

16.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-05-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀಮತಿ ಸವಿತಾ ಶ್ರೀನಾಥ್ ರವರು ಅವರ ತಮ್ಮ ಸುನೀಲ್ ಅಲಿಯಾಸ್ ನವೀನ್ (24 ವರ್ಷರವರ ಬಾಬ್ತು ಕೆಎ-19-ಎಎ-2751 ನೇ ಆಟೋ ರಿಕ್ಷಾದಲ್ಲಿ ತನ್ನ ಮಕ್ಕಳಾದ ಕು. ನಿಶ್ಮಿತಾ (11 ವರ್ಷ) ಹಾಗೂ ಕು. ಮನಿಷಾ (9 ವರ್ಷ) ಎಂಬವರೊಂದಿಗೆ ಗುರುಪುರದಿಂದ ಸುರತ್ಕಲ್ ಗ್ರಾಮದ ಪಡ್ರೆ ಎಂಬಲ್ಲಿನ ತನ್ನ ತಂಗಿ ಮನೆಗೆ ರಾ ಹೆ 66 ರಲ್ಲಿ ಬರುತ್ತಿರುವಾಗ ಸಮಯ ಸುಮಾರು 10-30 ಗಂಟೆಗೆ ಪಡ್ರೆ ಶ್ರೀ ಧೂಮವತಿ ದೇವಸ್ಥಾನದ ದ್ವಾರದ ಬಳಿ ತಲುಪಿ ಪಶ್ಚಿಮ ಬದಿಯಿಂದ ಪೂರ್ವ ಬದಿಗೆ ಪಿರ್ಯಾದಿದಾರರ ತಮ್ಮ ಕೈಸನ್ನೆ ಹಾಗೂ ರಿಕ್ಷಾದ ಇಂಡಿಕೇಟರ್ ಹಾಕಿ ರಸ್ತೆಯನ್ನು ಅಡ್ಡ ದಾಟಿದಾಗ ಮುಕ್ಕ ಕಡೆಯಿಂದ ಕೆಎ 48-8722 ನೇ ಲಾರಿಯನ್ನು ಅದರ ಚಾಲಕ ಪರಮೇಶ್ವರಪ್ಪ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ಸಂಪೂರ್ಣ ಜಜ್ಜಿ ಹೋಗಿ ಅದರೊಳಗಿದ್ದ ಪಿರ್ಯಾದಿದಾರರ ಮಕ್ಕಳಾದ ನಿಶ್ಮಿತಾ ಮತ್ತು ಮನಿಷಾ ಹಾಗೂ ರಿಕ್ಷಾ ಚಾಲಕನಾದ ಪಿರ್ಯಾದಿದಾರರ ತಮ್ಮ ಸುನಿಲ್ ಎಂಬವರ ತಲೆಗೆ ಗಂಬೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಿರ್ಯಾದಿದಾರರು ರಿಕ್ಷಾದಿಂದ ಎಸೆಯಲ್ಪಟ್ಟು ಸೊಂಟದ ಮೂಳೆ ಮುರಿತವಾಗಿದ್ದು ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

17.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09-05-14 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರು ಬೆಳಿಗ್ಗೆ ಸುರತ್ಕಲ್ ಠಾಣೆಗೆ ಬರುವರೇ ಸುರತ್ಕಲ್ ಠಾಣೆಯ ಎದುರು ರಾ.ಹೆ.66 ರಲ್ಲಿ ಪಶ್ಚಿಮ ಬದಿಯ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಸಮಯ ಸುಮಾರು 11-30 ಗಂಟೆಗೆ ಕೆಎ-19-ಎಂಸಿ-6853 ನೇ ರಿಟ್ಜ್ ಕಾರನ್ನು ಅದರ ಚಾಲಕನಾದ ಇಕ್ಬಾಲ್ ಅಲಿಯಾಸ್ ಜಿಮ್ ಇಕ್ಬಾಲ್ ಎಂಬಾತನು ಸುರತ್ಕಲ್ ಕಡೆಯಿಂದ ಶುಭಗಿರಿ ಹಾಲ್ ಕಡೆಗೆ ರಸ್ತೆಯ ವಿರುದ್ಧ ದಿಕ್ಕಿನಲ್ಲಿ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಪಿರ್ಯಾದಿದಾರರ ಬಲ ಕಾಲಿನ ಪಾದದ ಮೇಲೆ ಚಲಾಯಿಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮೂರು ಬೆರಳುಗಳು ಜಖಂಗೊಂಡಿರುವುದಾಗಿದೆ, ಸದ್ರಿ ಕಾರು ಚಾಲಕನಾದ ಇಕ್ಬಾಲ್ ರವರು  ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು ಆದರೆ ಈ ತನಕ ಯಾವುದೇ ಹಣವನ್ನು ನೀಡದೇ ಇದ್ದು ಸದ್ರಿಯವರು ಚಿಕಿತ್ಸೆಯ ಹಣವನ್ನು ನೀಡುವುದಾಗಿ ಭಾವಿಸಿ ದೂರು ನೀಡಲು ತಡವಾಗಿರುತ್ತದೆ.

 

18.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11-05-14 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಶೋಭರಾಜ್ ರವರು ಅವರ ಸ್ನೇಹಿತರಾದ ಸತೀಶ್, ಅನೀಶ್, ಮತ್ತು ಮನೋಜ್ ರವರೊಂದಿಗೆ ನೆರೆಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಮನೆ ಕಡೆಗೆ ನಡೆದುಕೊಂಡು ಬರುತ್ತಿರುವಾಗ  ಸುಮಾರು 02-00 ಗಂಟೆ ಸಮಯಕ್ಕೆ ಮದ್ಯ ಕಟಿಲೇಶ್ವರಿ ದಿನಸಿ ಅಂಗಡಿ ಬಳಿ ಜೈಕರ್ನಾಟಕ ಸಂಘಟನೆಯವರು ಹಾಕಿದ ಬ್ಯಾನರನ್ನು ನೋಡಿಕೊಂಡಿರುವಾಗ ಆರೋಪಿಗಳಾದ ಹರೀಶ್, ಸಂತೋಷ್, ಮತ್ತು ನವೀನ್ ಎಂಬವರು ಟವೇರಾ ವಾಹನದಲ್ಲಿ ಬಂದು  ಅಡ್ಡ ತಡೆದು ಬ್ಯಾನರ್ ಯಾರು ಹಾಕಿದ್ದು ಎಂದು ಕೇಳಿದ್ದು ಪಿರ್ಯಾದಿದಾರರು ಗೊತ್ತಿಲ್ಲ ಎಂದು ಹೇಳಿದಾಗ ಸಂತೋಷನು ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದು ಕುತ್ತಿಗೆಯನ್ನು ಒತ್ತಿ ಹಿಡಿದಾಗ ಪಿರ್ಯಾದಿದಾರರ ಸ್ನೇಹಿತರಾದ ಸತೀಶ್ ಹಾಗೂ ಅನೀಶ್ ಎಂಬವರು ಅಲ್ಲಿಂದ ಓಡಿ ಹೋಗಿದ್ದು ಆರೋಪಿಯಾದ ನವೀನ್ ಎಂಬಾತನು ಪಿರ್ಯಾದಿದಾರರಿಗೆ ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಹರೀಶನು ಸೋಡಾ ಹಾಕುವ ಟ್ರೇ ಯಿಂದ ಪಿರ್ಯಾದಿದಾರರ ಬಲ ಕಾಲಿನ ಮೊಣಗಂಟಿಗೆ ಹೊಡೆದಿದ್ದು ಪಿರ್ಯಾದಿದಾರರ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿರುವುದಾಗಿದೆ, ಈ ಘಟನೆಯ ಸಮಯ ಪಿರ್ಯಾದಿದಾರರ ನೋಕಿಯಾ 5200 ಮೊಬೈಲ್ ಸೆಟ್ ಹಾಗೂ ಪ್ಯಾಂಟ್ ನಲ್ಲಿದ್ದ ರೂ.3500/- ಕಳೆದು ಹೋಗಿರುತ್ತದೆ.

No comments:

Post a Comment