ದೈನಂದಿನ ಅಪರಾದ ವರದಿ.
ದಿನಾಂಕ 01.07.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-06-2014 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಸುರತ್ಕಲ್ ನ ಇಡ್ಯಾ ಗ್ರಾಮದ ಕಾನಾ ಬಸ್ಸು ತಂಗುದಾಣದ ಬಳಿ ಕೆ.ಎ. 30 ಜೆ 2633 ನೇ ನಂಬ್ರದ ದ್ವಿಚಕ್ರ ವಾಹನ ಸವಾರನು ಅವರ ಬಾಬ್ತು ವಾಹನವನ್ನು ಬಾಳಾ ಕಡೆಯಿಂದ ಸುರತ್ಕಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾನಾ ಬಸ್ಸು ತಂಗುದಾಣದ ಬಳಿ ರಸ್ತೆ ಬದಿ ನಿಂತು ಕೊಂಡಿದ್ದ ರವಿ ಎಂಬವರಿಗೆ ಡಿಕ್ಕಿ ಮಾಡಿದ್ದು. ಡಿಕ್ಕಿಯ ಪರಿಣಾಮ ರವಿರವರು ರಸ್ತೆ ಬದಿಗೆ ಎಸೆಯಲ್ಪಟ್ಟು ತಲೆಗೆ ಗಂಬೀರ ಸ್ವರೂಪದ ಗುದ್ದಿದ ಗಾಯವಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-06-2014 ರಂದು ಬೆಳಿಗ್ಗೆ 01-00 ಗಂಟೆಗೆ ಮೃತ ಪಟ್ಟಿರುತ್ತಾರೆ. ಎಂಬುದಾಗಿಯೂ ಈ ಅಪಘತಕ್ಕೆ ದ್ವಿಚಕ್ರ ವಾಹನದ ಸವಾರನ ಅತೀ ವೇಗ ಹಾಗೂ ನಿರ್ಲಕ್ಷತನ, ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ಚಾಲನೆಯೇ ಕಾರಣವಾಗಿರುತ್ತದೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-06-14 ರಂದು ಸಂಜೆ ಸಮಯ ಪಿರ್ಯಾದಿದಾರರಾದ ಶ್ರೀ ವಿನೋದ್ ಸಾಲ್ಯಾನ್ ರವರು ತನ್ನ ಅತ್ತೆ ಚಂದ್ರ ಪ್ರಭಾ ರವರೊಂದಿಗೆ ಮಂಗಳೂರಿನಿಂದ ಕಾವೂರಿಗೆ ಬಂದು ಕಾವೂರಿನಲ್ಲಿ ಆಹಾರ ಪದಾರ್ಥ ಖರೀದಿಸಿ ಅರಮನೆ ಬೇಕರಿ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿ ಸುಮಾರು 8-30 ಗಂಟೆಗೆ ಬಜ್ಪೆ ಕಡೆಯಿಂದ ಕಾವೂರು ಕಡೆಗೆ ಕೆಎ-19-ಎಕ್ಸ್ - 2867 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಸುಬ್ರಹ್ಮಣ್ಯ ಶರ್ಮಾ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರ ಅತ್ತೆ ಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಹಣೆಗೆ ರಕ್ತಗಾಯವಾಗಿ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-06-2014 ರಂದು ಪಿರ್ಯಾದಿದಾರರಾದ ಶ್ರೀ ಸುನೀಲ್ ರವರು ತಾನು ಚಾಲಕನಾಗಿ ದುಡಿಯುತ್ತಿದ್ದ ಆಟೋ ರಿಕ್ಷಾ ನಂಬ್ರ ಕೆ.ಎ-19-ಬಿ-4813 ನೇದರಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಮಂಗಳೂರು ನಗರದ ಬಳ್ಳಾಲ್‌ಬಾಗ್‌ನಿಂದ ದುರ್ಗಾಮಹಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಮದ್ಯಾಹ್ನ 1:00 ಗಂಟೆಗೆ ವೇರ್‌ಹೌಸ್ ಜಂಕ್ಷನ್ ತಲುಪಿದಾಗ, ಮಂಗಳಾ ಸ್ಟೇಡಿಯಂ ಕಡೆಯಿಂದ ವಿಶಾಲ್ ನರ್ಸಿಂಗ್ ಹೋಂ ಕಡೆಗೆ ಕೆ.ಎ-20-ಕ್ಯೂ-8362 ನೇ ದ್ವಿಚಕ್ರ ವಾಹನವನ್ನು ಅದರ ಸವಾರನು ಹಿಂಬದಿಯಲ್ಲಿ ಒಬ್ಬರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಎರಡೂ ರಸ್ತೆಗೆ ಮಗುಚಿ ಬಿದ್ದು, ಗಾಯಗೊಂಡ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿರುವುದಾಗಿದೆ. ದ್ವಿಚಕ್ರ ವಾಹನ ಸವಾರ ಅನಿಲ್ ಫೆರ್ನಾಂಡೀಸ್‌ರವರಿಗೆ ಮುಖದ ಬಲಭಾಗದ ಹಣೆಗೆ ರಕ್ತ ಗಾಯ ಹಾಗೂ ಸಹ ಸವಾರ ಮಣಿರವರಿಗೆ ತಲೆಯ ಭಾಗಕ್ಕೆ ಗುದ್ದಿದ ನಮೂನೆಯ ಗಾಯ, ಬಲಕಾಲಿಗೆ ರಕ್ತ ಬರುವ ತರಚಿದ ಗಾಯವಾಗಿರುತ್ತದೆ. ಅಲ್ಲದೇ ಎರಡೂ ವಾಹನಗಳು ಜಖಂಗೊಂಡಿರುತ್ತದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30/06/2014 ರಂದು ಫಿರ್ಯಾದುದಾರರಾದ ಶ್ರೀ ಹರ್ಷರಾಜ್ ರವರು ಅವರ ಸ್ಕೂಟರ್ ನಲ್ಲಿ ಕೆ ಪಿ ಟಿ ಕಡೆಯಿಂದ ಕೊಟ್ಟಾರಾ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದುದಾರರ ಪರಿಚಯದ ಶೇಖರ ಎಂಬವರು ಅವರ ಬಾಬ್ತು ಬುಲೆಟ್ ಬೈಕ್ ನಂಬ್ರ CTV 7441 ನ್ನು ಕೋಟ್ಟಾರಾ ಚೌಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಲ್ಯಾಂಡ್ ಮಾರ್ಕ ಕ್ರಾಸ್ ಬಳಿ ತಲುಪಿದಾಗ ಅವರ ಮುಂದಿನಿಂದ ಹೊಗುತ್ತಿದ್ದ ಕೆನರಾ ಡ್ರೈವಿಂಗ್ ಸ್ಕೂಲ್ ಬಾಬ್ತು ಕಾರು ನಂಬ್ರ KA-19-MA-1139 ನ್ನು ಅದರ ಚಾಲಕ ನಿರ್ಲಕ್ಷತನದಿಂದ ಒಮ್ಮೆಲೆ ಬ್ರೆಕ್ ಹಾಕಿದ ಪರಿಣಾಮ ಬುಲೆಟ್ ಬೈಕಿಗೆ ಕಾರಿನ ಹಿಂಬದಿ ಬಾಡಿ ತಾಗಿ ಸವಾರ ಸಮೇತ ರಸ್ತೆಗೆ ಬಿದ್ದು ಏಡಕಾಲಿಗೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿ AJ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-01-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಕಮಲ ರವರು ಆರೋಪಿ ವಿಠಲ ಎಂಬವರೊಂದಿಗೆ ಮದುವೆಯಾಗಿದ್ದು ಅಲ್ಲಿಂದ ಈ ದಿನದ ವರೆಗೆ ನಿರಂತರವಾಗಿ ಪಿರ್ಯಾದಿದಾರರಲ್ಲಿ ರೂ. 50.000/- ಹಣವನ್ನು ವರದಕ್ಷಿಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದು ಈ ಸಂದರ್ಭದಲ್ಲಿ ಪಿರ್ಯಾದಿ ಬಳಿ ವರದಕ್ಷಿಣೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ಮಾನಸಿಕವಾಗಿ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದು ಜೀವ ಬೆದರಿಕೆ ಒಡ್ಡಿರುವುದಲ್ಲದೇ ಆರೋಪಿಯು ಪಿರ್ಯಾದಿಯ ಮನೆಗೆ ವರದಕ್ಷಿಣೆಯ ಹಣವನ್ನು ಕೊಡುವವರೆಗೆ ಮನೆಗೆ ಬರುವುದಿಲ್ಲವಾಗಿ ತಿಳಿಸಿರುವುದಾಗಿದೆ.
6.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-06-2014 ರಂದು ಪಿರ್ಯಾದಿದಾರರಾದ ಶ್ರೀ ಪುಷ್ಪರಾಜ್ ರವರು ಕೆಲಸದ ನಿಮಿತ್ತ ಕುತ್ತಾರು ಪೆಟ್ರೋಲ್ ಪಂಪುನಿಂದ ಪಿರ್ಯಾದಿದಾರರ ಬಾಬ್ತು ಮೋಟಾರು ಸೈಕಲ್ KA-19-ED-8922 ನೇಯದಕ್ಕೆ ಪೆಟ್ರೋಲ್ ತುಂಬಿಸಿ ಕುತ್ತಾರಿನಿಂದಾಗಿ ಕಲ್ಲಾಪುವಿನ ಪಂಪು ಹೌಸಿಗೆ ತೆರಳುತ್ತಿರುವಾಗ ಕುತ್ತಾರಿನಿಂದ ಕೊರಗಜ್ಜ ಕಟ್ಟೆಯಿಂದಾಗಿ ಸ್ವಲ್ಪ ಮುಂದಕ್ಕೆ ತಲುಪುವಾಗ್ಗೆ ಸಮಯ ಸುಮಾರು 12:45 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ ಒಂದು ಅಟೋರಿಕ್ಷಾವು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ಕೆಳಗೆ ಬಿದ್ದು, ಬಲ ಕಾಲಿನ ಬೆರಳುಗಳಿಗೆ ರಕ್ತ ಬರುವ ತೀವ್ರ ತರದ ಗಾಯವಾಗಿರುತ್ತದೆ.
No comments:
Post a Comment