Tuesday, July 15, 2014

Daily Crime Reports 15-07-2014

ದೈನಂದಿನ ಅಪರಾದ ವರದಿ.

ದಿನಾಂಕ 15.07.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-07-2014 ರಂದು ಪಿರ್ಯಾದಿದಾರರಾದ ಶ್ರೀ ದಿಕ್ಷೀತ್ ರವರು ಸಹ ಸವಾರರಾಗಿ ವಿನಯ್ ರವರ ಬಾಬ್ತು ಕೆ ಎ-19-ಇಸಿ-6034 ನೇ ನಂಬ್ರದ ಮೋಟರು ಸೈಕಲ್ ನಲ್ಲಿ ವಿನಯ್ ರವರು ಸವಾರರಾಗಿದ್ದು ಕೊಂಡು ಬೋಂದೆಲ್ ಮೂಡು ಶೆಡ್ಟೆ ರಸ್ತೆಯಲ್ಲಿ ಹೋಗುತ್ತಾ ಸಂಜೆ ಸುಮಾರು 4-00 ಗಂಟೆಗೆ ಮೂಡು ಶೆಡ್ಡೆ ಗ್ರಾಮದ ಮಂಜಲ್ ಪಾದೆ ಎಂಬಲ್ಲಿ ಏರು ರಸ್ತೆ ಬಳಿ ತಲುಪಿದಾಗ ಏರು ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ-19-ಬಿ-8868 ನೆ ನಂಬ್ರದ ಬಸ್ ಅನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಹಿಂದಕ್ಕೆ ಚಲಾಯಿಸಿದ ಪರಿಣಾಮ ವಿನಯ್ ರವರು ಮೋಟರು ಸೈಕಲ್ ಸಮೇತ ಬಸ್ಸಿನಡಿಗೆ ಬಿದ್ದು ಅವರ ಎರಡೂ ಕಾಲುಗಳಿಗೆ ರಕ್ತ ಗಾಯವಾಗಿದ್ದು ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-05-2014 ರಂದು 20-00 ಗಂಟೆಯಿಂದ ದಿನಾಂಕ 23-06-2014ರಂದು ಬೆಳಿಗ್ಗೆ 09-00 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ಟೋಲ್ ಗೇಟ್ ಬಳಿಯಿರುವ ಪಿರ್ಯಾದಿದಾರರಾದ ಶ್ರೀ ನಿಖಿಲ್ ವಿವೇಕ್ ರವರ ವಾಸದ ಮನೆಯ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಪಿರ್ಯಾದಿದಾರರ ಬಾಬ್ತು 2005ನೇ ಮೊಡೆಲಿನ ಚಾಸಿಸ್ ನಂಬ್ರ: 05F09C11416, ಇಂಜಿನ್ ನಂಬ್ರ: 05F08M08324, ಅಂದಾಜು 15,000/- ರೂ. ಬೆಲೆ ಬಾಳುವ ಕಪ್ಪು ಮತ್ತು ನೇರಳೆ ಬಣ್ಣದ ಹೀರೋ ಹೋಂಡಾ ಕಂಪನಿಯ KA 19U 4305ನೇ ನೋಂದಣಿ ಸಂಖ್ಯೆಯ ಪ್ಯಾಶನ್ ಪ್ಲಸ್ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ ರವರು ಕರ್ನಾಟಕ (1) ನಾಗರೀಕ ಸೇವೆಯ ಮಂಗಳೂರು (1) ನೇದರ 4 ಕೇಂದ್ರಗಳಾದ ಸುರತ್ಕಲ್, ಕದ್ರಿ, ಲಾಲ್ ಭಾಗ್, ಬಾವಟಗುಡ್ಡೆ ಕೇಂದ್ರಗಳ ಕೋ-ಆರ್ಡಿನೇಟರ್ ಹುದ್ದೆಯನ್ನು ನಿರ್ವಹಿಸಿಕೊಂಡಿದ್ದು, ದಿನಾಂಕ 11-07-2014 ರಂದು ಸಾಯಂಕಾಲ ಯಾವ ಮುನ್ಸೂಚನೆ ನೀಡದೇ ಕೆಲಸ ಮುಗಿಯುವ ರಾತ್ರಿ 8:00 ಸಮಯಕ್ಕೆ ಬಾವಟಗುಡ್ಡೆ ಕೇಂದ್ರಕ್ಕೆ ಆಗಮಿಸಿದ ಕರ್ನಾಟಕ (1) ಪ್ರಾಜೆಕ್ಟ್ ಮ್ಯಾನೇಜರ್ ಕೇಶವನ್, ಕರ್ನಾಟಕ (1) ಪ್ರಾಜೇಕ್ಟ್ ಡೆವಲಪ್ ಮೆಂಟ್ ಆಫೀಸರ್ ನವೀನ್ ಶೆಟ್ಟಿ ಹಾಗೂ ಪೂರ್ಣಚಂದ್ರ ಎಂಬವರು ಪಿರ್ಯಾದಿದಾರರನ್ನು ರಾತ್ರಿ 8:00 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬಲಾತ್ಕಾರವಾಗಿ ವಿಚಾರಣೆಗೆ ಒಳಪಡಿಸಿ ತಲೆಗೆ ಹೊಡೆದು ಚಿತ್ರಹಿಂಸೆ ನೀಡಿ, ಬೇಡದ ಶಬ್ದಗಳಿಂದ ನಿಂದಿಸಿ, ವಿಚಿತ್ರ ರೀತಿಯಲ್ಲಿ ಪ್ರಶ್ನೆ ಕೇಳಿ ಬೆದರಿಸಿ, ಜಾತಿ ನಿಂದಿಸಿ ಬಲಾತ್ಕಾರವಾಗಿ ಬೆದರಿಸಿ, ಪಿರ್ಯಾದಿದಾರರಿಂದ ತಪ್ಪೊಪ್ಪಿಗೆ ಮತ್ತು ರಾಜೀನಾಮೆ ಪತ್ರ ಬರೆಯಿಸಿದ್ದು, ಸಮಯ ಕಛೇರಿಯಲ್ಲಿ ಡಾಟಾ ಎಂಟ್ರಿ ಒಪರೇಟರ್ ಶ್ರೀಮತಿ ಶೋಭಾ ಮತ್ತು ಸೆಕ್ಯೂರಿಟಿ ಗಾರ್ಡ್ ಇದ್ದು, ಬಳಿಕ ಆರೋಪಿತರು ಪಿರ್ಯಾದಿದಾರರನ್ನುದ್ದೇಶಿಸಿ "ನಿನ್ನನ್ನು ಜೀವಮಾನದಲ್ಲಿ ನೆಮ್ಮದಿಯಾಗಿರಲು ಬಿಡುವುದಿಲ್ಲ ಹಾಗೂ ಎಲ್ಲಿಯೂ ಕೆಲಸ ಸಿಗದ ಹಾಗೆ ಮಾಡುತ್ತೇವೆ, ತಿಂಗಳು 30 ರೊಳಗೆ ಕೆಲಸಕ್ಕೆ ಬಾ ನಂತರ ನೋಡೊಣ" ಎಂದು ಆಫೀಸ್ ನಿಂದ ಹೊರ ಬಿಟ್ಟಿದ್ದು, ನಂತರ ತಡರಾತ್ರಿ ಆಟೋವೊಂದರದಲ್ಲಿ ಪಿರ್ಯಾದಿದಾರರು ಮನೆಗೆ ಹೋಗಿದ್ದು, ನೋವು ಉಲ್ಬಣಿಸಿದ ಕಾರಣ ಮರುದಿನ ದಿನಾಂಕ 13-07-2014 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಪುನಃ .ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-07-2014ರಂದು ರಾತ್ರಿ ಸುಮಾರು 10 ಗಂಟೆಯಿಂದ 12 ಗಂಟೇಯೊಳಗಿನ ಸಮಯ ಮೂಳೂರು ಮುಂಡಿತ್ತಾಯ ದೈವಸ್ಥಾನದ ಮುಖ್ಯ ಗೋಪುರದ ಬಳಿ ಇರಿಸಿದ್ದ ಕಾಣಿಕೆ ಹುಂಡಿಯನ್ನು ಯಾರೋ ಕಳ್ಳರು ರಾಡಿನಿಂದ ಬೀಗವನ್ನು ಮುರಿದು ಕಳುವು ಮಾಡಿಕೊಂಡು ಹೋಗಿದ್ದು ,ಸದ್ರಿ ಕಾಣಿಕೆ ಹುಂಡಿಯಲ್ಲಿ ಅಂದಾಜು ರೂಪಾಯಿ 4000 ಇರಬಹುದಾಗಿದೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-07-2014 ರಂದು ಬೆಳಿಗ್ಗೆ ಪಿರ್ಯಾದುದಾರರಾದ ಶ್ರೀ ತುಷಾರ್ ಬಲ್ಲಾಲ್ ರವರು ತನ್ನ ಮನೆಯಿಂದ ಕಾಲೇಜಿಗೆ ಹೋಗುವರೇ, ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿಂದ ಕೆಎ 19 ಡಿ 955 ನೇ ಬಸ್ಸನ್ನು ಹತ್ತಿ ಅದರಲ್ಲಿ ತೊಕ್ಕೊಟ್ಟು ಕಡೆಗೆ ಪ್ರಯಾಣಿಸಿ, ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿ ಬೆಳಿಗ್ಗೆ 08-10 ಗಂಟೆ ಸುಮಾರಿಗೆ ಬಸ್ಸು ಬಂದು ನಿಂತ ಬಳಿಕ ಪಿರ್ಯಾದುದಾರರು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಂತೆ, ಬಸ್ಸಿನ ಚಾಲಕ ಯಾವುದೇ ಸೂಚನೆ ನೀಡದೇ ತೀವ್ರ ನಿರ್ಲಕ್ಷ್ಯತದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿರುವುದರಿಂದ, ಪಿರ್ಯಾದುದಾರರು ಬಸ್ಸಿನಿಂದ ಎಸೆಯಲ್ಪಟ್ಟು, ಅವರ ಎಡಪಾದದ ಬೆರಳಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿರುತ್ತದೆ. ಅಲ್ಲಿ ಸೇರಿದ ಜನರು ಪಿರ್ಯಾದುದಾರರನ್ನು ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ದಾಖಲಿಸಿದ್ದು, ಗಾಯ ತೀವ್ರಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲುಪಡಿಸಿರುವುದಾಗಿದೆ.

No comments:

Post a Comment