Friday, July 4, 2014

Daily Crime Reports 04-07-2014

ದೈನಂದಿನ ಅಪರಾದ ವರದಿ.

ದಿನಾಂಕ 04.07.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

4

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-07-2014 ರಂದು ಸಂಜೆ ಸುಮಾರು 6.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶೋಕ್ ಕೋಟ್ಯಾನ್ ರವರು ತನ್ನ ಮನೆಯ ಸಮೀಪದ ಬಿಜೈ ಬಾಳಿಗಾ ಸ್ಟೋರ್ ಗೆ ಹೋಗಲೆಂದು ಕುಂಟಿಕಾನ-ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಕಾಂಕ್ರೀಟ್ ರಸ್ತೆಯ ಬಾಳಿಗಾ ಸ್ಟೋರ್ ಬಳಿ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಕುಂಟಿಕಾನ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಕಡೆಗೆ ಒಂದು ಕಾರು ನಂ. KA-19-Z-8541 ನ್ನು ಅದರ ಚಾಲಕ ಅತಿ ವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪಿರ್ಯಾದಿದಾರರನ್ನು ಅದೇ ಕಾರಿನ ಚಾಲಕ ಹಾಗೂ ಸಾರ್ವಜನಿಕರು ಕೂಡಲೇ ಚಿಕಿತ್ಸೆಗಾಗಿ .ಜೆ. ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದು ವ್ಯೆದ್ಯರು ಪರಿಶೀಲಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಸದ್ರಿ ಕಾರು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಭಾಗದ ಸೊಂಟದ ಬಳಿ ಮೂಳೆ ಮುರಿತದ ತೀವ್ರ ಗಾಯ ಹಾಗೂ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಸ್ವರೂಪದ ಗಾಯ ಉಂಟಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-07-2014 ರಂದು ಸಮಯ ಸುಮಾರು 15.50 ಗಂಟೆಗೆ ಮಂಗಳೂರು ನಗರದ ಜ್ಯೋತಿ ಬಸ್ ನಿಲ್ದಾಣದಲ್ಲಿ ಪಿರ್ಯಾದುದಾರರಾದ ಶ್ರೀ ಸಂಜಯ್ ರವರು ಕೆಎ-13-ಎಫ್-1317 ನಂಬ್ರದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹತ್ತುತ್ತಿರುವ ಸಮಯ ಸದ್ರಿ ಬಸ್ಸಿನ ಚಾಲಕ ಬಸ್ಸನ್ನು ಒಮ್ಮೆಲೆ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದರ ಪರಿಣಾಮ ಸದ್ರಿ ಬಸ್ಸಿನ ಎಡಬದಿಯಲ್ಲಿದ್ದ ಇನ್ನೊಂದು ಬಸ್ಸಿನ ಮಧ್ಯೆ ಪಿರ್ಯಾದುದಾರರು ಸಿಕ್ಕಿ ಹಾಕಿಕೊಂಡು ಪಿರ್ಯಾದುದಾರರ ಬಲಕೈಗೆ ಮೂಳೆ ಮುರಿತದ ಗಾಯ ಹಾಗೂ ಎಡಕೈ ಭುಜಕ್ಕೆ ಗುದ್ದಿದ ಗಾಯವಾಗಿದ್ದು, ಗಾಯಾಳು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ  ಶ್ರೀಮತಿ ವೀಣಾ  ರವರ  ಗಂಡ ಭೋಜ ಶೆಟ್ಟಿಗಾರ್  ರವರು ದಿನಾಂಕ  2.7.2014  ರಂದು  ಬೆಳಿಗ್ಗೆ  9.00 ಗಂಟೆಗೆ   ತನ್ನ   ಮಕ್ಕಳಾದ   ದೀಕ್ಷಾ ( 12) ಶರಣ್ (11 ) ನಿರೀಕ್ಷ  (6)  ರವರನ್ನು  ಕಾರ್ನಾಡು  ಸಿ.ಎಸ್. ಶಾಲೆಗೆಂದು ತನ್ನ  ಮನೆಯಾದ  ಮಂಗಳೂರು ತಾಲೂಕು  ಕಾರ್ನಾಡು ಗ್ರಾಮದ   ಗೇರುಕಟ್ಟೆ ಯಲ್ಲಿನ ವನಭೋಜನ ಸಮೀಪದ ಮನೆಯಿಂದ  ಕರೆದುಕೊಂಡು ಹೋದವರು ಮಕ್ಕಳನ್ನು ಶಾಲೆಗೂ ಕರೆದುಕೊಂಡು ಹೋಗದೇ ,ಸಂಬಂಧಿಕರ ಮನೆಗೂ ಹೋಗದೇ  ವಾಪಾಸು ಮನೆಗೂ ಹೋಗದೇ  ಕಾಣೆಯಾಗಿರುವುದಾಗಿದೆ. ಕಾಣೆಯಾದವರ ಚಹರೆ  1]ಭೋಜ ಶೆಟ್ಟಿಗಾರ ಪ್ರಾಯ 42  ವರ್ಷ  ಎತ್ತರ:5.2, ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಪ್ಯಾಂಟ್ ಬೂದು ಬಣ್ಣದ  ಅರ್ಥ ತೋಳಿನ  ಶರ್ಟ, ಎಣ್ಣೆ ಕಪ್ಪು  ಮೈ ಬಣ್ಣ, ತುಳು ಕನ್ನಡ ಭಾಷೆ ಮಾತನಾಡುತ್ತಾರೆ. 2] ದೀಕ್ಷ  ಪ್ರಾಯ 12  ವರ್ಷ  ತಂದೆ ಭೋಜ ಶೆಟ್ಟಿಗಾರ  ಎತ್ತರ  4 ಅಡಿ: ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಚೂಡಿದಾರ  ಕಪ್ಪು ಪ್ಯಾಂಟ್  ಕಪ್ಪು ಟಾಫ್ :ಎಣ್ಣೆ  ಕಪ್ಪು ಮೈ ಬಣ್ಣ:  ತುಳು ಕನ್ನಡ  ಭಾಷೆ  ಮಾತನಾಡುತ್ತಾರೆ. 3] ಶರಣ್  ಪ್ರಾಯ 11  ವರ್ಷ  : ತಂದೆ: ಭೋಜ ಶೆಟ್ಟಿಗಾರ , ಎತ್ತರ 3.2 ಅಡಿ: ಧರಿಸಿರುವ ಬಟ್ಟೆ:  ಬಿಳಿ ಮತ್ತು ನೀಲಿ ಗೆರೆಯ ಅರ್ಥ ತೋಳಿನ ಶರ್ಟ  ಮತ್ತು ಖಾಕಿ ಬಣ್ಣದ  ಚಡ್ಡಿ  ಬೂದಿ ವರ್ಣ ಮೈಬಣ್ಣ : ತುಳು ಕನ್ನಡ  ಭಾಷೆ  ಮಾತನಾಡುತ್ತಾರೆ. ಗಲ್ಲದಲ್ಲಿ  ಕಪ್ಪು ಎಳ್ಳು ಮಚ್ಚೆ  ಇರುತ್ತದೆ. 4] ನಿರೀಕ್ಷ ಪ್ರಾಯ 6 ವರ್ಷ ತಂದೆ: ಭೋಜ ಶೆಟ್ಟಿಗಾರ  : ಎತ್ತರ  2 ಅಡಿ: ಧರಿಸಿರುವ ಬಟ್ಟೆ:  ಬಿಳಿ ಬಣ್ಣದ ರವಕೆ  ಬಿಳಿ ಬಣ್ಣದ ಲಂಗ  ಧರಿಸಿರುತ್ತಾರೆ  ಎಣ್ಣೆ  ಕಪ್ಪು ಮೈ ಬಣ್ಣ ತುಳು ಭಾಷೆ ಇರುತ್ತದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ  ಶ್ರೀ ಗೋಪಾಲಕೃಷ್ಣ ರವರ  ಹೆಂಡತಿ ಶ್ರೀಮತಿ ಕುಸುಮ(31) ರವರು ತನ್ನ  ಮಗಳಾದ ಕುಮಾರಿ ರಕ್ಷಿತ (ಎರಡೂವರೆ ವರ್ಷ) ರವರನ್ನು  ದಿನಾಂಕ  2.7.2014 ರಂದು ಬೆಳಿಗ್ಗೆ 9.45 ಗಂಟೆಗೆ  ತನ್ನ ಮನೆಯಾದ  ಮಂಗಳೂರು ತಾಲೂಕು  ಕಾರ್ನಾಡು ಗ್ರಾಮದ ಗೇರುಕಟ್ಟೆ ಯಲ್ಲಿನ ವನಭೋಜನ ಸಮೀಪದ ಮನೆಯಿಂದ ಕೆ.ಎಸ್ ರಾವ್ ನಗರದ ಅಂಗನವಾಡಿಗೆ ಮಗುವನ್ನು ತೂಕ ಮಾಡಿಸುವ ಸಲುವಾಗಿ ಕರೆದುಕೊಂಡು ಹೋದವಳು ವಾಪಾಸು ತನ್ನ ಮಗುವಿನೊಂದಿಗೆ   ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಕಾಣೆಯಾದವರ ಚಹರೆ 1] ಕುಸುಮ ಪ್ರಾಯ:31 ವರ್ಷ  : ಧರಿಸಿರುವ  ಬಟ್ಟೆ : ಹಳದಿ ಬಣ್ಣ  ಚೂಡಿದಾರ ಎತ್ತರ 5 ಅಡಿ, ಕೋಲು ಮುಖ: ಎಣ್ಣೆ  ಕಪ್ಪು  ಮೈ ಬಣ್ಣ. 2] ರಕ್ಷಿತ  ಪ್ರಾಯ  ಎರಡೂವರೆ ವರ್ಷ  ಧರಿಸಿರುವ  ಬಟ್ಟೆ  : ನೀಲಿ ಮತ್ತು ನೇರಳೆ ಬಣ್ಣ : ಎತ್ತರ  ಒಂದೂವರೆ ಅಡಿ: ಕೋಲು ಮುಖ: ಹೊಟ್ಟೆಯಲ್ಲಿ  ಕಪ್ಪು ಮಚ್ಚೆ  ಇರುತ್ತದೆ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-07-2014 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ  ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಅನಂತ ಮುರುಡೇಶ್ವರವರು ಜೊತೆಯಲ್ಲಿ ಸಿಬ್ಬಂದಿಯವರಾದ ಹೆಚ್. ಸಿ. 1904 ವಿಶ್ವನಾಥ, ಪಿ. ಸಿ. 351 ದಾಮೋದರ್, ಪಿ.ಸಿ. 391 ಜಯಪ್ರಕಾಶ್ ಇವರುಗಳನ್ನು ಕರೆದುಕೊಂಡು ರೌಂಡ್ಸ್ ಸಂಚರಿಸುತ್ತಾ, ಸಮಯ ಬೆಳಿಗ್ಗೆ 11-30 ಗಂಟೆಗೆ ಕೇಂದ್ರ ರೈಲ್ವೆ ನಿಲ್ದಾಣ ಕಡೆಯಿಂದ ಹಂಪನಕಟ್ಟೆ ಕಡೆಗೆ ಹಾದು ಹೋದ ರಸ್ತೆಯಲ್ಲಿ ಹೋಗುತ್ತಿರುವಾಗ, ಮುತ್ತಪ್ಪ ಗುಡಿಯ ಬಳಿಯಲ್ಲಿ ಓರ್ವ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು, ಪೊಲೀಸ್ ವಾಹನವನ್ನು ಕಂಡು ಸ್ಥಳದಿಂದ ಹೋಗಲು ಪ್ರಯತ್ನಿಸಿದವನ್ನು ತಡೆದು ನಿಲ್ಲಿಸಿ, ಸದ್ರಿ ಸ್ಥಳದಲ್ಲಿ ನಿಂತುಕೊಂಡಿರುವ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದು , ಆತನ ಹೆಸರು ವಿಳಾಸ ಕೇಳಲಾಗಿ , ಆತನು ತನ್ನ ಹೆಸರು ಚೆಲುವರಾಜ್ @ ಚೆಲುವ, ಪ್ರಾಯ 35 ವರ್ಷ, ತಂದೆ-ದಿ| ಗೋಪಾಲ @ ಅಮಲಿ ಗೋಪಾಲ, ಮಟನ್ ಸ್ಟಾಲ್ ಬಳಿ ಮನೆ, ಜೋಡು ರಸ್ತೆ, ಕುಕಂದೂರು ಗ್ರಾಮ, ಇಮ್ಮುಂಜಿ ರಸ್ತೆ, ಅಜೇಕಾರ್, ಕಾರ್ಕಳ, ಉಡುಪಿ ಜಿಲ್ಲೆ. ಎಂಬುದಾಗಿ ತಿಳಿಸಿದ್ದು ಸದ್ರಿಯಾತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ತಡವರಿಸುತ್ತಾ, ತಾನು ಮೊದಲು ಅಂದರೆ 2013 ನೇ ಇಸವಿಯ ಮಾರ್ಚ್  ತಿಂಗಳಿನಲ್ಲಿ ಮಂಗಳೂರು ನಗರದ ಲಾಲ್ ಬಾಗ್  ನಲ್ಲಿರುವ  ಕೆ. ಎಸ್. ಆರ್. ಟಿ. ಸಿ. ಬಸ್ಸ್ ನಿಲ್ದಾಣದ ಹಿಂಭಾಗದಲ್ಲಿರುವ ಒಂದು ಚಾಮುಂಡೇಶ್ವರಿ ಗುಡಿಗೆ ತೆರೆದಿಟ್ಟಿದ್ದ ಬಾಗಿಲಿನ ಮೂಲಕ ರಾತ್ರಿ ವೇಳೆಯಲ್ಲಿ ಒಳಗಡೆ ಪ್ರವೇಶಿಸಿ ಕಳವು ಮಾಡಿರುವ ಚಿನ್ನಾಭರಣ ನನ್ನಲ್ಲಿ ಇದ್ದು ಅದನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡು, ಆತನ  ಕಿಸೆಯಿಂದ ಚಿನ್ನದ ಸರ-1, ಹಾಗೂ ಒಂದು ಚಿನ್ನದ ತಾಳಿಯನ್ನು ತೆಗೆದು ತೋರಿಸಿದ್ದು, ಸದ್ರಿಯಾತನಲ್ಲಿರುವ ಚಿನ್ನದ ಸೊತ್ತುಗಳು ಕಳವಿಗೆ ಸಂಬಂಧಪಟ್ಟದೆಂದು ದೃಡಪಟ್ಟಿರುತ್ತದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮುಸ್ತಾಫ ರವರ ಸಹೋದರಿ ಅಲಿಮ್ಮರವರ ಮಗಳು ನಾಸೀಯಾಳಿಗೆ ದೇರಳಕಟ್ಟೆ ನಿಟ್ಟೆ ಕಾಲೇಜಿನಲ್ಲಿ ಮೆಡಿಕಲ್ಸೀಟ್ಮಾಡಿಕೊಡುವುದಾಗಿ ಉಪ್ಪಿನಂಗಡಿಯ ಮೊಹಮ್ಮದ್ರಫಿಕ್ರವರು ಫಿರ್ಯಾದಿದಾರರನ್ನು ನಂಬಿಸಿ ಅವರಿಂದ ಸುಮಾರು ಒಂದು ತಿಂಗಳ ಹಿಂದೆ ರೂ. 10,000-00 ಹಣವನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗೇಟಿನ ಬಳಿ ಪಡೆದುಕೊಂಡಿದ್ದು, ಮತ್ತೆ ರೂ. 30,000-00 ಹಣ ಬೇಕು ಎಂದು ತಿಳಿಸಿದಂತೆ ದಿನಾಂಕ. 1-7-2014 ರಂದು ಸದ್ರಿ ವ್ಯಕ್ತಿಯು ಫಿರ್ಯಾದಿದಾರರಿಗೆ ದೇರಳಕಟ್ಟೆ ಕೆ.ಎಸ್.ಹಗ್ಡೆ ಆಸ್ಪತ್ರೆಯ ಗೇಟಿನ ಬಳಿ ಬರುವಂತೆ ತಿಳಿಸಿದ ಮೇರೆಗೆ ಫಿರ್ಯಾದಿದಾರರು ಬಂದಾಗ ಅವರಿಗೆ ಕೆ.ಎಸ್.ಹೆಗ್ಡೆ ಕಾಲೇಜಿನ ರಶೀದಿ ಮತ್ತು ಅದರಲ್ಲಿ ಅದೇ ಕಾಲೇಜಿನ ಸೀಲು ಹಾಕಿರುವ ಪತ್ರವನ್ನು ತೋರಿಸಿದ್ದು. ಬಗ್ಗೆ ಫಿರ್ಯಾದಿದಾರರಿಗೆ ಅನುಮಾನಗೊಂಡು ವಿಚಾರವನ್ನು ತನ್ನ ಅಕ್ಕಳಿಗೆ ತಿಳಿಸಿದ್ದು. ದಿನಾಂಕ 2-7-2014 ರಂದು ಬೆಳಿಗ್ಗೆ ಸದ್ರಿ ಮೊಹಮ್ಮದ್ರಫಿಕ್ನು ಫಿರ್ಯಾದಿದಾರರಿಗೆ ಪೋನ್ ಮಾಡಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಕಾಲೇಜಿನ ಗೇಟಿನ ಬಳಿ ರೂ. 30,000 ಹಣ ತೆಗೆದುಕೊಂಡು ಬರುವಂತೆ ತಿಳಿಸಿದ ಮೇರೆಗೆ ಫಿರ್ಯಾದಿದಾರರು ಬಂದಂತೆ ಅವರಿಗೆ ನಸೀಯಾಳಿಗೆ ಮೆಡಿಕಲ್ಕಾಲೇಜಿನಲ್ಲಿ ಸೀಟು ನೊಂದಾಯಿಸಿರುವ ಪೇಪರ್ನ್ನು ತೋರಿಸಿದಂತೆ ಫಿರ್ಯಾದಿದಾರರು ಪೇಪರಿನ ಪೊಟೋವನ್ನು ವಾಟ್ಸ್ಅಪ್ನಲ್ಲಿ ತೆಗೆದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆಫೀಸ್ಗೆ ಹೋಗಿ ವಿಚಾರಿಸಿದಾಗ ಸದ್ರಿ ಮೊಹಮ್ಮದ್ರಫಿಕ್ನು ಸದ್ರಿ ಆಸ್ಪತ್ರೆಯ ನಕಲಿ ಸೀಲು ಹಾಗೂ ರಸೀದಿ ಮಾಡಿಕೊಂಡು ಫಿರ್ಯಾದಿದಾರರ ಅಕ್ಕನ ಮಗಳು ನಸೀಯಾಳಿಗೆ ಮೆಡಿಕಲ್ ಸೀಟ್ಮಾಡಿಕೊಡುವುದಾಗಿ ಅವರಿಂದ ರೂಪಾಯಿ 10,000-00 ಹಣವನ್ನು ಪಡೆದುಕೊಂಡು ಮೋಸ ಮಾಡಿರುವುದಾಗಿದೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 28-6-2014 ರಂದು ಫಿರ್ಯಾದಿದಾರರಾದ ಶ್ರೀ ಎಂ. ಮುರುಗೇಶ್ ರವರು ರಮೇಶ, ದೇವರಾಜ್, ಗೌರಮ್ಮ, ಶಾಂತಪ್ಪ, ಮಧುಸೂದನ್ಮತ್ತಿತರ 20 ಮಂದಿಯೊಂದಿಗೆ ದೇವಸ್ಥಾನಗಳನ್ನು ಸಂದರ್ಶನ ಮಾಡಲು ತಮ್ಮ ಊರಾದ ತಮಿಳುನಾಡು ರಾಜ್ಯದ ಕೃಷ್ಣಗಿರಿಯ ಹುಸ್ಸೂರುನಿಂದ ಟೆಂಪೋಟ್ರಾವೆಲ್ಸ್ನಲ್ಲಿ ಹೊರಟು ಬಂದವರು ಬೆಂಗಳೂರು ಯಡಿಯೂರ್ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರವಣ ಬೆಳಗೋಳ, ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ದಿನಾಂಕ. 29-6-2014 ರಂದು ಬೆಳಿಗ್ಗೆ 05-30 ಗಂಟೆಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸೋಮೇಶ್ವರ ಬೀಚ್ನೋಡಿ ಅಲ್ಲಿಂದ ವಾಪಾಸು ತಮ್ಮ ಊರಿಗೆ ಹೊರಡಲು ಟೆಂಪೋ ಟ್ರಾವೆಲ್ಸ್ವಾಹನಕ್ಕೆ ಹತ್ತಿ ಹೊರಡುವ ಸಮಯದಲ್ಲಿ ಅವರ ಜೊತೆಯಲ್ಲಿ ಬಂದ ದೇವರಾಜ್‌ (41) ರವರು ಕಾಣೆಯಾಗಿದ್ದು, ಅವರನ್ನು ಸೋಮೇಶ್ವರ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಸದ್ರಿಯವರು ಊರಿಗೆ ವಾಪಾಸು ಹೋಗಿರಬಹುದೆಂದು ಭಾವಿಸಿ ಫಿರ್ಯಾದಿದಾರರು ಇತರರೊಂದಿಗೆ ತಮ್ಮ ಊರಾದ ತಮಿಳುನಾಡಿಗೆ ಹೋಗಿ ಕಾಣೆಯಾದ ದೇವರಾಜ್ರವರು ಊರಿಗೆ ವಾಪಾಸು ಹೋಗದೇ ಇದ್ದುದರಿಂದ ತಿಳಿದು ದೇವರಾಜ್ರವರು ಪತ್ತೆಯಾಗದೇ ಇದ್ದುದರಿಂದ ಫಿರ್ಯಾದಿದಾರರು ದಿನಾಂಕ 3-7-2014 ರಂದು ಉಳ್ಳಾಲ ಠಾಣೆಗೆ ಬಂದು ಕಾಣೆಯಾದ ದೇವರಾಜ್ರವರನ್ನು ಪತ್ತೆ ಹಚ್ಚಿಕೊಡುವಂತೆ ಪಿರ್ಯಾದಿ ನೀಡಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.07.2014 ರಂದು ಪಿರ್ಯಾದುದಾರರಾದ ಶ್ರೀ ಆಂಟೋನಿ ಲುವಿಸ್ ಮೆನೇಜಸ್ ರವರು ಮಂಗಳೂರು ನಗರದ ಪಚ್ಚನಾಡಿ ರೈಲ್ವೆ ಬ್ರಿಡ್ಜ್ ಬಳಿ ತಮ್ಮ ಮನೆ ಸಮೀಪವಿರುವ ಅಂಗಡಿಗೆ ಸಾಮಾನು ಖರೀದಿಸಲು ಹೋಗಿ ವಾಪಾಸ್ಸು ಮನೆಗೆ ಬರುವ ಸಮಯ ಪಿರ್ಯಾದುದಾರರ ತಂದೆ ಶ್ರೀ ಫೆಲಿಕ್ಸ್ ಮೆನೇಜಸ್ ಎಂಬವರು ಪಿರ್ಯಾದುದಾರರಲ್ಲಿ ಮಾತನಾಡಿ ರಸ್ತೆ ದಾಟಿ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಬೆಳಿಗ್ಗೆ ಸುಮಾರು 08:45 ಗಂಟೆಗೆ ವಾಮಂಜೂರು ಕಡೆಯಿಂದ KA 19 EH 6385ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಭರತ್ ಭವಾನಿ ಶಂಕರ್ ಎಂಬವನು ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಸವಾರಿಮಾಡಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೆಲಿಕ್ಸ್ ಮೆನೇಜಸ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಫೆಲಿಕ್ಸ್ ಮೇನೇಜಸ್ ರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯ, ಮೈಕೈಗಳಿಗೆ ತರಚಿದ ಹಾಗೂ ರಕ್ತ ಬರುವ ಗಾಯಗೊಂಡವರು ಚಿಕಿತ್ಸೆ ಬಗ್ಗೆ ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಆರೋಪಿ ಮೋಟಾರ್ ಸೈಕಲ್ ಸವಾರನು ಕೂಡಾ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸಣ್ಣಪುಟ್ಟ ತರಚಿದ ಗಾಯಗೊಂಡಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ. ಸುಮತಿ, ಗಂಡ: ಕೇಶವ ಆಚಾರ್ಯ, ಸಂತೋಷ್ ನಗರ, 'ಶ್ರುತಿ ನಲಯ' ವಾಮಂಜೂರು ಪಚ್ಚನಾಡಿ ಗ್ರಾಮ, ಮಂಗಳೂರು ಎಂಬವರ ಹಿರಿಯ ಮಗಳು ಶ್ರುತಿ, ಪ್ರಾಯ: 24 ವರ್ಷ ಎಂಬಾಕೆಯನ್ನು ಸುಮಾರು 4 ವರ್ಷದ ಮೊದಲು ಪುತ್ತೂರಿನ ನರಿಮೊಗರಿನ ಕೊಡಂಕೇರಿ ಎಂಬಲ್ಲಿನ ರಮೇಶ್ ಆಚಾರ್ಯ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ಮೂರು ವರ್ಷದ ಹೃತ್ವಿಕ್ ಎಂಬ ಗಂಡು ಮಗುವಿನೊಂದಿಗೆ ಪುತ್ತೂರಿನ ಹಾರಾಡಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನ ಮಗುವಿನೊಂದಿಗೆ ವಾಸ್ತವ್ಯವಿದ್ದು ತನ್ನ ಗಂಡ ಜೀವನಕ್ಕೆ ಹಣವನ್ನು ಸರಿಯಾಗಿ ನೀಡುತ್ತಿಲ್ಲವಾಗಿ ತಿಳಿಸಿದಂತೆ ಆಕೆಯನ್ನು ಸುಮಾರು 1 ವರ್ಷದ ಮೊದಲು ಮಗುವಿನೊಂದಿಗೆ ಪಿರ್ಯಾದಿದಾರರು ಮನೆಗೆ ಬರಮಾಡಿಕೊಂಡಿರುವುದಾಗಿಯೂ ಅದರಂತೆ ವಾಮಂಜೂರಿನಿಂದ ಒಂದು ವಾರದಿಂದ ಶಕ್ತಿನಗರದ ಬ್ಯೂಟಿ ಪಾರ್ಲರ್ ಗೆ ಕೆಲಸಕ್ಕೆ ಹೋಗುತ್ತಿದ್ದು ದಿನಾಂಕ 02.07.2014 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದು ರಾತ್ರಿ ಸುಮಾರು 09:30 ಗಂಟೆಗೆ ಮನೆ ಮಂದಿಯವರೊಂದಿಗೆ ಮಲಗಿದ್ದ ಪಿರ್ಯಾದಿದಾರರ ಮಗಳು ಆಗ ಆಕೆಯ ಮಗು ಹೃತ್ವಿಕ್ ಎಂಬಾತನು ದಿನಾಂಕ 03.07.2014 ರಂದು ಮುಂಜಾನೆ ಸುಮಾರು 05:00 ಗಂಟೆಯಿಂದ ಮಗುವಿನೊಂದಿಗೆ ಕಾಣೆಯಾಗಿರುವುದಾಗಿದೆ.

No comments:

Post a Comment