ದೈನಂದಿನ ಅಪರಾದ ವರದಿ.
ದಿನಾಂಕ 21.07.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-7-2014 ರಂದು ಮೋಟರ್ ಸೈಕಲ್ ಕೆ. ಎ.20.ಎಲ್.4244ನೇ ದನ್ನು ಅದರ ಸವಾರ ಉಲ್ಲಾಸ್ ಕುಮಾರ್ ಎನ್.ಹೆಚ್.66 ರಲ್ಲಿ ಮುಲ್ಲಿ ಕಡೆಯಿಂದ ಸುರತ್ಕಲ್ ಕಡೆಗೆ ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಆಪಾಯಕಾರಿಯಾಗಿ ಚಲಾಯಿಸಿ ರಾತ್ರಿ 8.50 ಗಂಟೆ ಮುಕ್ಕ ಬಳಿ ನಿಂತಿದ್ದ ಮಂಜುನಾಧರಿಗೆ ಢಿಕ್ಕಿಪಡಿಸಿದ್ದು, ಈ ಅಪಘಾತದಿಂದ ಮಂಜುನಾಥರ ಎಡ ಕಾಲಿಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು ಶ್ರೀನಿವಾಸ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-07-2014 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರಣೀತ್ ರವರು ಮಂಗಳೂರು ತಾಲೂಕು ಕಾಪಿಕಾಡಿನಲ್ಲಿ ಛತ್ರಪತಿ ಶಿವಾಜಿ ಫ್ರೆಂಡ್ಸ್ ಕ್ಲಬ್ನಲ್ಲಿ ಮೀಟಿಂಗ್ ನಲ್ಲಿ ಇರುವಾಗ ಆರೋಪಿಗಳಾದ ಸುಭಾಸ್, ಅಭಿಲಾಷ, ದೊಂಬ ಎಂಬವರು ಪಿರ್ಯಾದಿದಾರರು ಕ್ಲಬ್‌ನ ಸದಸ್ಯತ್ವವನ್ನು ಬಿಡುವ ವಿಚಾರದಲ್ಲಿ ತಗಾದೆ ಎತ್ತಿ ಸುಭಾಸ್ ಎಂಬವನು ಕೈಯಿಂದ ದೂಡಿದ್ದು, ಆ ಸಮಯ ದೊಂಬ ಮತ್ತು ಅಭಿಲಾಷ್ ಸೇರಿ ಪಿರ್ಯಾದಿಗೆ ಕೈಯಿಂದ ಕೆನ್ನೆಗೆ ಹಾಗೂ ಮುಖಕ್ಕೆ ಹೊಡೆದಿರುತ್ತಾರೆ.
3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-07-2014 ರಂದು ಫಿರ್ಯಾದಿದಾರರಾದ ಶ್ರೀ ತುಕಾರಾಮ ಶೆಟ್ಟಿಗಾರ್ ರವರ ಚಿಕ್ಕಪ್ಪನ ಮಕ್ಕಳು ಆಟ ಆಡಲು ಹೋದವರು ಮನೆಗೆ ಬರದೇ ಇದ್ದು ಹುಡುಕಿದಾಗ, ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಮೋನಪ್ಪ ಗೌಡ ಮತ್ತು ಅವರ ಮನೆಯವರಿಗೆ ಸೇರಿದ ಮಳೆಯ ನೀರು ತುಂಬಿದ್ದ ತಡೆಗೋಡೆ ಇಲ್ಲದೆ ನಿರ್ಲಕ್ಷಿಸಿದ ಕಲ್ಲಿನ ಕೋರೆಯ ಹಳ್ಳ ಇದ್ದು, ದಿನಾಂಕ 20-07-2014 ರಂದು 12:00 ಗಂಟೆಯಿಂದ 13:30 ಗಂಟೆ ಸುಮಾರಿಗೆ ವಿಪರೀತ ಗಾಳಿ ಮಳೆ ಇದ್ದು ಕಲ್ಲಿನ ಕೋರೆಯ ಬಳಿ ಮಕ್ಕಳಾದ ಮೇಘಶ್ರಿ ( 12 ವರ್ಷ), ವಾಣಿಶ್ರಿ (11ವರ್ಷ) ಮತ್ತು ಯಕ್ಷಿತಾ ( 6 ವರ್ಷ) ರವರುಗಳು ನಡೆದುಕೊಂಡು ಬರುತ್ತಿರುವಾಗ ದಾರಿಯಲ್ಲಿ ನೀರು ಹರಿಯುತ್ತಿದ್ದು, ಆ ನೀರಿನಲ್ಲಿ ಮಕ್ಕಳು ಕೊಚ್ಚಿಕೊಂಡು ಹೋಗಿ ಕಲ್ಲಿನ ಕೋರೆಯ ಹೊಂಡಕ್ಕೆ ಬಿದ್ದು ಸಾವನಪ್ಪಿರುವುದು ಕಂಡು ಬಂದಿರುತ್ತದೆ. ಈ ಘಟನೆಗೆ ಮೋನಪ್ಪ ಗೌಡ ಮತ್ತು ಅವರ ಮನೆಯವರಿಗೆ ಸೇರಿದ ಕಲ್ಲಿನ ಕೋರೆಯ ಹೊಂಡಕ್ಕೆ ತಡೆಗೋಡೆಯನ್ನು ಕಟ್ಟದೆ ನಿರ್ಲಕ್ಷ್ಯ ತೋರಿರುವುದು ಹಾಗೂ ವಿಪರೀತ ಮಳೆ ಗಾಳಿ ಇದ್ದುದು ಕಾರಣವಾಗಿರುತ್ತದೆ.
No comments:
Post a Comment