ದೈನಂದಿನ ಅಪರಾದ ವರದಿ.
ದಿನಾಂಕ 24.07.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 2 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಜಯಲಕ್ಷ್ಮೀ ರವರು ಆರೋಪಿ ಅನಿಲ್ ಕುಮಾರ್ ರವರೊಂದಿಗೆ ಮದುವೆಯಾಗಿ ಸುಮಾರು 14 ವರ್ಷಗಳಾಗಿದ್ದು, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿರುತ್ತಾರೆ. ಆರೋಪಿಯು ಯಾವಾಗಲೂ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದು, ಪಿರ್ಯಾದಿದಾರರು ದುಡಿದ ಹಣವನ್ನೆಲ್ಲಾ ಕಸಿದುಕೊಂಡು, ಹೋಗಿ ಶರಾಬು ಕುಡಿದು ಬಂದು ಪಿರ್ಯಾದಿದಾರರಿಗೆ ಹಾಗೂ ಮಕ್ಕಳಿಗೆ ಹೊಡೆದು ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸರಿಯಾಗಿರಲಿಲ್ಲ. ದಿನಾಂಕ 22-07-2014 ರಂದು ರಾತ್ರಿ ಸುಮಾರು 9.00 ಗಂಟೆಗೆ ಆರೋಪಿಯು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಬಲ ಕೆನ್ನೆಗೆ ಕೈಯಿಂದ ಹೊಡೆದು, ಕೈಯಿಂದ ಕುತ್ತಿಗೆಯನ್ನು ಹಿಡಿದು ಹೊರಕ್ಕೆ ಎಳೆದುಕೊಂಡು ಬಂದು ನೀನು ಬಾರಿ ಪೊಲೀಸ್ ಕಂಪ್ಲೇಂಟ್ ಕೋಡ್ತೀಯಾ ಎಂದು ಹೇಳಿ ಮನೆಯ ಮೇಲೆ ಕಲ್ಲು ಬಿಸಾಡಿ, ಹಂಚುಗಳನ್ನು ಒಡೆದು, ಹಾಗೂ ಮನೆಯಲ್ಲಿದ್ದ ವಸ್ತುಗಳನ್ನು, ಟಿವಿಯನ್ನು, ಒಡೆದು ಹಾಕಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿರುತ್ತಾರೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-07-2014 ರಂದು ಬೆಳಿಗ್ಗೆ ಸಮಯ 8.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರು ಪದ್ಮನೂರು ಬಳಿಯ ಶಾಲೆಗೆ ಹೋಗುವ ತನ್ನ ಬಾವನ ಮಗಳಾದ ಒಂದನೇ ತರಗತಿಯ ಕುಮಾರಿ ಸುನೀತ ಯಾನೆ ಪಾರುಬಾಯಿ ಎಂಬಾಕೆಯನ್ನು ಬಿಟ್ಟು ಬರಲು ಪದ್ಮನೂರು ಪ್ರೆಟ್ರೋಲ್ ಪಂಪ್ ಬಳಿ ರಸ್ತೆಯ ಬದಿ ನಡೆದುಕೂಂಡು ಬರುತ್ತಿದ್ದಾಗ ಪಿರ್ಯಾದಿದಾರಿಂದ 5 ಆಡಿ ಅಂತರದಲ್ಲಿ ಮುಂದಿನಿಂದ ಹೋಗುತ್ತಿದ್ದ ಸುನೀತಾ ಯಾನೆ ಪಾರುಬಾಯಿಗೆ ಕಿನ್ನಿಗೋಳಿಯಿ ಯಿಂದ ಮುಲ್ಕಿ ಕಡೆಗೆ ಕೆಎ.19-ವ್ಯೆ-5427 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದು ತಲೆಗೆ ಕೈ-ಕಾಲು ಗಳಿಗೆ ರಕ್ತಗಾಯವಾಗಿದ್ದು ,ಈ ಆಪಘಾತಕ್ಕೆ ಬೈಕ್ ಚಾಲಕನ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ರೀತಿಯ ಚಾಲನೆಯೇ ಕಾರಣವಾಗಿರುತ್ತದೆ.
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು ಮಧ್ಯಾಹ್ನ 3.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅನಂತ ನಾರಾಯಣ ಮಯ್ಯ ರವರು ಕುಳಾಯಿಯಲ್ಲಿ ನಿಂತಿರುವಾಗ್ಗೆ ಮನೆಯಿಂದ ಮೋಟಾರ್ ಸ್ಯೆಕಲ್ ನಂಬ್ರ.ಕೆಎಲ್.14 ಜಿ.1974 ರಲ್ಲಿ ಪಿರ್ಯಾದಿದಾರರ ಭಾವ ಲಕ್ಷೀನಾರಾಯಾಣ ಕಾರಂತ್ ರವರೂ ಸುರತ್ಕಲ್ ಕಡೆಯಿಂದ ರಾ.ಹೆ.66ರಲ್ಲಿ ಹೋದವರು ವಾಪಸು ಬರುತ್ತಿರುವಾಗ್ಗೆ ಎದುರುನಿಂದ ರಾಂಗ್ ಸ್ಯೆಡ್ನಲ್ಲಿ ಮೋಟಾರ್ ಸ್ಯೆಕಲ್ ನಂಬ್ರ ಕೆಎ.19 .ಎಸ್.8522 ನ್ನು ಅದರ ಸವಾರ ಅಂಬರೀಶ್ ಎಂಬವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿದ ಪರಿಣಾಮ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ಪಿರ್ಯಾದಿದಾರರ ಭಾವರವರು ಮಂಗಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಗಾಯಾಳು ಮಾತಾನಾಡದೆಯಿದ್ದು ಚಿಕಿತ್ಸೆಯಲ್ಲಿ ಇರುತ್ತಾರೆ.
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-07-2014 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸತೀಶ್ ಕುಮಾರ್ ರವರು ಅವರ ಕಂಪೆನಿಯ ಕೆಎ.19 .ಸಿ.4694 ನೇ ಪಿಕಾಪ್ ವಾಹನದ ಚಾಲಕರಾದ ಕ್ಯಷ್ಣಪ್ಪ ಎಂಬವರೊಂದಿಗೆ ಹೊನ್ನಕಟ್ಟೆಯಲ್ಲಿ ಇದ್ದಾಗ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಬಸ್ ಕೆಎ.20.ಸಿ.9132ನೇ ದನ್ನು ಅದರ ಚಾಲಕ ದಯಾನಂದ ಎಂಬವರು ನಿರ್ಲಕ್ಷ, ಅತೀವೇಗ ಹಾಗೂ ಆಜಾಗರೂಕತೆಯಿಂದ ಮಾನವ ಜಿವಕ್ಕೆ ಅಪಾಯಕಾರಿಯಾಗಿ ಚಾಲಯಿಸಿ ಪಿರ್ಯಾದಿದಾರರ ವಾಹನದ ಹಿಂದೆ ಇದ್ದ ಕೆಎ.19.ಎಂ,ಬಿ.1787 ನೇ ನಂಬ್ರದ ಕಾರಿಗೆ ಡಿಕ್ಕಿ ಪಡಿಸಿದ್ದು ಈ ಅಪಘಾತದಿಂದ ಮೂರೂ ವಾಹನಗಳು ಜಖಂಗೊಂಡು ಪಿಕ್ ಅಪ್ ಚಾಲಕ ಕೃಷ್ಣಪ್ಪ ರವರ ಕುತ್ತಿಗೆಗೆ ಗುದ್ದದ ಗಾಯವಾಗಿ ಮಂಗಳೂರು ಗ್ಲೋಬಲ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಪಣಂಬೂರು ಠಾಣಾ ವ್ಯಾಪ್ತಿಯ KIOCL ಕುದರೆಮುಖ Blast Furnace Unit ನ ತೆರೆದ ಶೆಡ್ ಒಂದರಲ್ಲಿ ಇರಿಸಿದ್ದ Compressor ನ Copper Winding Limb's ಗಳ ಪೈಕಿ ಒಂದು Copper Limb's Winding (Electrical material) ತೂಕ ಸುಮಾರು 35 K.G ಬೆಲೆ ಸುಮಾರು 15000/- ರೂಪಾಯಿಯ ಸೊತ್ತನ್ನು ದಿನಾಂಕ 16-07-2014 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈವರೆಗೆ ಹುಡುಕಾಡಿದಲ್ಲಿ ಅದು ಪತ್ತೆಯಾಗದೆ ಇರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-07-2014 ರಂದು ಸಂಜೆ ಸುಮಾರು 7 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ದೇವಕಿ ರವರು ಮತ್ತು ತಮ್ಮ ಊರಿನ ರೇವತಿ, ಲತಾ, ಇಂದಿರಾ, ಕಾಳಿ, ಸುಂದರಿ ರವರೊಂದಿಗೆ ನೇರೋಳು ಕಟ್ಟೆ ಎಂಬಲ್ಲಿಗೆ ಹೋದಾಗ ಪ್ರವೀಣ್ @ ಪುಂಡೇ ರವರಲ್ಲಿ "ನೀವು ಇಲ್ಲಿ ಶರಾಬು ಮಾರಾಟ ಮಾಡಿರುವುದರಿಂದ ನಮಗೆ ತೊಂದರೆಯಾಗುತ್ತದೆ. ನಾವು ಈ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡುತ್ತೇವೆ" ಎಂದು ಹೇಳಿ ಹಿಂತಿರುಗಿದಾಗ ಪ್ರವೀಣ್ ನು ತಮ್ಮೆಲ್ಲರನ್ನು ತಡೆದು ನಿಲ್ಲಿಸಿ "ನೀವುಗಳು ಶರಾಬು ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ದೂರು ನೀಡಿರುತ್ತೀರಿ" ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದ ಆ ಸಮಯ ಆತನಿಂದ ತಪ್ಪಿಸಿ ಕೊಂಡು ಹೋಗುವಾಗ "ಇನ್ನು ಮುಂದೆ ನನ್ನ ವಿರುದ್ದ ಪೊಲೀಸರಿಗೆ ದೂರು ನೀಡಿದರೆ ನಿಮ್ಮನು ಕೊಲ್ಲದೇ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕರುಣಾಕರ ಎಂಬವರು ತೋಡಾರ್ ಗ್ರಾಮದ ಬಾವದಬೆಟ್ಟುನಿಂದ ಕಾಪಿಕಾಡು ಎಂಬಲ್ಲಿರುವ ಮಹಾಕಾಳಿ ದೇವಾಸ್ಥಾನದಲ್ಲಿ ಸಂಕ್ರಾತಿ ಪೂಜೆ ಯಾವಾಗ ಎಂದು ಕೇಳುವ ಸಲುವಾಗಿ ಬಾವದಬೆಟ್ಟು ಕಾಫಿಕಾಡು ದಾರಿಯಲ್ಲಿ ಹೋಗುತ್ತಿದ್ದಾಗ ಸದ್ರಿ ರಸ್ತೆಯನ್ನು ಬಂದ್ ಮಾಡಿರುವುದನ್ನು ನೋಡಿ ಅಲ್ಲೆ ನಿಂತಿದ್ದ ಬಾವಾದಬೆಟ್ಟು ವಾಸಿಗಳಾದ ಪ್ರವೀಣ್ ಮತ್ತು ವರ್ದಮಾನ ಬಲಿಪ ರವರಲ್ಲಿ ದಾರಿಯನ್ನು ಬಂದ್ ಮಾಡಿದ ಬಗ್ಗೆ ಕೇಳಿದೆ. ಆಗ ಅವರಿಬ್ಬರು ಸೇರಿ ಈ ದಾರಿಯಿಂದಾಗಿ ನಿನ್ನನು ಹೋಗಲು ಬಿಡುವುದಿಲ್ಲ ಎಂಬುದಾಗಿ ಹೇಳಿ ಜಾತಿ ನಿಂದನೆಯನ್ನು ಮಾಡಿ ಅದೇ ದಾರಿಯಲ್ಲಿ ಹೋದಲ್ಲಿ ನಿನ್ನ ಕೈ ಕಾಲು ಕಡಿಯುತ್ತೇವೆ ಎಂದು ಜೀವಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಗೆ ಮುಗೇರ ಜಾತಿಗೆ ಸೇರಿದವನೆಂದು ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿರುತ್ತಾರೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18/07/2014 ರಂದು ಪಿರ್ಯಾದಿದಾರರಾದ ಶ್ರೀ ಎ.ಕೆ. ಹಸನ್ ಸಫಿ ರವರ ಬಾಬ್ತು KA 46 1321 ನಂಬ್ರದ ಲಾರಿಯಲ್ಲಿ ಮರಳನ್ನು ತುಂಬಿಸಿ ಬೈಕಂಪಾಡಿ ಕಡೆಗೆ ಕೈಕಂಬ - ಬಜಪೆ ಮಾರ್ಗವಾಗಿ ಹೋಗುತ್ತಿರುವಾಗ ಸಂಜೆ ಸುಮಾರು 4.30 ಗಂಟೆ ಸಮಯಕ್ಕೆ KA 46 1321 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯು ಜಖಂಗೊಂಡಿರುತ್ತದೆ.
9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-07-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಶೋಭಾ ರವರು ಅವರ ಬಾಬ್ತು ವಾಸ್ತವ್ಯದ ಸೂರಿಂಜೆ ಗ್ರಾಮದ ಬೋರ್ಕಟ್ಟೆ ಸಾಯಿ ಕೃಪ ಎಂಬ ಮನೆಯಲ್ಲಿ ಪಿರ್ಯಾದಿದಾರರು ಅವರ ಇಬ್ಬರು ಮಕ್ಕಳ ಜೊತೆ ರಾತ್ರಿ ಸುಮಾರು 11-15 ಗಂಟೆಗೆ ಮನೆಯ ಮುಂದಿನ ಮತ್ತು ಹಿಂಬದಿಯ ಬಾಗಿಲು ಭದ್ರಪಡಿಸಿ ಮಲಗಿದ್ದು ದಿನಾಂಕ 23-07-2014 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ಎದ್ದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆಗೆದಿದ್ದು ಗಾಬರಿಗೊಂಡ ಪಿರ್ಯಾದಿದಾರರು ಮನೆಯ ಮುಂದಿನ ಕೋಣೆಯಲ್ಲಿದ್ದ ಕಪಾಟನ್ನು ನೋಡಿದಾಗ ಅದರೊಳಗಿದ್ದ 1. ಸುಮಾರು 5 ಪವನ್ ತೂಕದ ಹವಳದ ಸರ-1, 2. ಮುತ್ತಿನ ಸರ-1 (2 ಪವನ್), 3. ದಬಲ್ ಕೂರ್ಗಿ ಟೈಪ್ ಬಳೆ-1 (23 ಗ್ರಾಂ), 4. ಬಂಗಾರದ ಐಶ್ವರ್ಯದ ಮಾಲೆ-1 (3 ಒರೆ ಪವನ್), 5. ರೋಪ್ ಚೈನ್ (1 ಒರೆ ಪವನ್ ತೂಕ), 6. ಬಳೆ-1 (7 ಗ್ರಾಂ), 7. ಉಂಗುರ-2(6 ಗ್ರಾಂ), ಒಟ್ಟು 110 ಗ್ರಾಂ ಅಂದಾಜು ಮೌಲ್ಯ 2 ಲಕ್ಷ ಹಾಗೂ ನಗದು ಹಣ 6000/- ಮತ್ತು ಪಿರ್ಯಾದಿದಾರರ ಚುನಾವಣಾ ಗುರುತು ಚೀಟಿ ಇಲ್ಲದೇ ಇದ್ದು ರಾತ್ರಿ ಯಾರೋ ಕಳ್ಳರು ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳಗೆ ಬಂದು ಬಂಗಾರದ ಆಭರಣ, ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಅಶ್ವಿನಿ ರವರು 11-11-2012 ರಂದು ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ನಾರ್ಲಪಡೀಲ್ ನಿವಾಸಿ ಸಂದೀಪ್ ಎಂಬವರನ್ನು ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿರುತ್ತಾರೆ. ಮದುವೆಯಾದ 3 ತಿಂಗಳ ನಂತರ ಪಿರ್ಯಾದುದಾರರ ಪತಿ ಸಂದೀಪ್ ವರದಕ್ಷಿಣೆಗಾಗಿ ಪಿರ್ಯಾದುದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ್ದು, ತನ್ನ ಮನೆಯ ಬಡತನ ಮತ್ತು ಮಾರ್ಯದೆ ಅಂಜಿ ಪಿರ್ಯಾದುದಾರರು ಈ ವಿಚಾರವನ್ನು ಯಾರಲ್ಲಿಯೂ ತಿಳಿಸಿದೇ ಅಸಾಯಕರಾಗಿ ಪತಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಆರೋಪಿತ ಸಂದೀಪ ಟೂರಿಸ್ಟ್ ಬಸ್ಸಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು. ಸರಿಯಾಗಿ ಮನೆಗೆ ಬಾರದೇ ಇದ್ದು, ಇಲ್ಲಸಲ್ಲದ ಕಾರವಣವನ್ನು ತಿಳಿಸಿಸುತ್ತಿದ್ದರು. ಅಲ್ಲದೇ ಸಂದೀಪ್ ಮನೆಗೆ ಬಂದರೆ ಪಿರ್ಯಾದಿಯೊಂದಿಗೆ ಸಂಸಾರ ನಡೆಸದೇ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು. ಅಲ್ಲದೇ ಮದುವೆಯ ಸಮಯ ಪಿರ್ಯಾದುದಾರಲ್ಲಿದ್ದ ಚಿನ್ನಾಭರಣವನ್ನು ಆರೋಪಿತ ಸಂದೀಪ್ ಪಡೆದುಕೊಂಡಿದ್ದು, ಈತನಕ ಅವುಗಳನ್ನು ವಾಪಾಸು ಪಿರ್ಯಾದುದಾರರಿಗೆ ನೀಡಿರುವುದಿಲ್ಲ. ಈ ಬಗ್ಗೆ ಪಿರ್ಯಾದುದಾರರು ಸಂದೀಪ್ನಲ್ಲಿ ವಿಚಾರಿಸಿದರೆ, ನಿನ್ನ ಜಾತಕ ಸರಿಯಿಲ್ಲ, ನಿನ್ನ ಮನೆಯವರು ವರದಕ್ಷಿಣೆ ನೀಡಿರುವುದಿಲ್ಲ. ನೀನು ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂಬಿತ್ಯಾದಿಯಾಗಿ ಮಾನಸಿಕ ಕಿರುಕುಳವನ್ನು ನೀಡುತ್ತಿರುವುದಲ್ಲದೇ ದಿನಾಂಕ 14-07-2014 ರಂದು ಬೆಳಿಗ್ಗೆ 8-00 ಗಂಟೆಗೆ ಸಂದೀಪ್ ಪಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು ಮನೆಯಿಂದ ದಬ್ಬಿ ಹೊರಹಾಕಿರುತ್ತಾನೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-07-2014 ರಂದು ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಇರ್ಸಾದ್ ರವರು ತನ್ನ ಬಾಬ್ತು ರಿಜಿಸ್ಟ್ರೇಷನ್ ಆಗದ ಹೊಸ ಚಾವರ್ಲೆಟ್ ಕಂಪನಿಯ ಕ್ರೂಝ್ ಕಾರನ್ನು ಚಾಲಾಯಿಸಿಕೊಂಡು ದೇರಳಕಟ್ಟೆಯಿಂದ ಉಳ್ಳಾಲ ಕಡೆಗೆ ಬರುತ್ತಾ 18-20 ಗಂಟೆ, ತೊಕ್ಕೊಟ್ಟು ರಾ.ಹೆ. 66 ನೇತಾಜಿ ಆಸ್ಪತ್ರೆಯ ಎದುರು ತಲಪುತ್ತಿದ್ದಂತೆ ಮಂಗಳೂರಿನಿಂದ ಕೇರಳ ಕಡೆಗೆ KL 57 3561 ನೆ ನಂಬ್ರ ಲಾರಿಯನ್ನು ಅದರ ಚಾಲಕ ಅಬ್ದುಲ್ ಬಶೀರ್ ಎಂಬವರು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿನ ಹಿಂಬದಿ ಬಲ ಬದಿಗೆ ಡಿಕ್ಕಿ ಹೊಡೆದುದರಿಂದ ಬಲಬದಿಯ ಡೋರ್ ಸಂಪೂರ್ಣ ಜಖಂಗೊಂಡು ನಷ್ಟವುಂಟಾಗಿರುತ್ತದೆ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.07.2014 ರಂದು ಪಿರ್ಯಾದುದಾರರಾದ ಶ್ರೀ ಮುನ್ನರಾಫ್ ಎಸ್.ಕೆ. ರವರು ಮಂಗಳೂರು ನಗರದ ಶಕ್ತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕ್ಲಾಸಿಕ್ ಪರ್ಲ್ ಎಂಬ ಕಟ್ಟಡದ 2ನೇ ಅಂತಸ್ತಿನಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ಪಿರ್ಯಾದುದಾರರ ಜೊತೆ ಮಾರ್ಚನ್ ಎಂಬವನು ಹೆಲ್ಪರ್ ಆಗಿಯೂ ಮತ್ತು ಇಸ್ಲಾಂ ಎಂಬವರು ಮೇಸ್ತ್ರಿಯಾಗಿಯೂ ಸಾರ್ಣೆ ಕೆಲಸ ಮಾಡುತ್ತಿರುವ ಸಮಯ ಬೆಳಿಗ್ಗೆ ಸುಮಾರು 09:00 ಗಂಟೆಗೆ ಮಾರ್ಚನ್ ರವರು ಪಿರ್ಯಾದುದಾರರಿಗೆ ಬೇಕಾದ ಸಿಮೆಂಟನ್ನು ಹಿಡಿದುಕೊಂಡು ಹೋಗುವ ಸಮಯ ಸದ್ರಿ ಅಂತಸ್ತಿನ ನೆಲದಲ್ಲಿದ್ದ ನೀರಿನಲ್ಲಿ ಕಾಲಿಟ್ಟು ಜಾರಿ ಬಿದ್ದವರು 2ನೇ ಅಂತಸ್ತಿನಿಂದ ನೇರ ನೆಲಮಹಡಿಯ ಕೆಳಗೆ ಬಿದ್ದ ಪರಿಣಾಮ ಮಾರ್ಚನ್ ರವರ ಮೈಕೈಗಳಿಗೆ ಗುದ್ದಿದ ಹಾಗೂ ಮೂಳೆ ಮುರಿತದ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿರದೇ ಇದ್ದವರನ್ನು ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ನಗರದ ಪಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುವುದಲ್ಲದೇ ಕ್ಲಾಸಿಕ್ ಬಿಲ್ಡಿಂಗಿನ ಕಾಂಟ್ರ್ಯಾಕ್ಟರ್ ಆದ ಅಮಲೇಶ್. ಎಸ್.ಕೆ ಎಂಬವರು ಕೆಲಸಗಾರರು ಕೆಲಸ ಮಾಡುವ ಸಮಯ ಧರಿಸಲು ಯಾವುದೇ ರೀತಿಯ ಸುರಕ್ಷಾ ವಸ್ತುಗಳಾದ ಕಾಲಿನ ಶೂ ಮತ್ತು ಸೊಂಟಕ್ಕೆ ಬೆಲ್ಟ್ ನೀಡದೇ ಹಾಗೂ ಕೆಲಸ ಮಾಡುವ ಸ್ಥಳದ ಸುತ್ತ ಕಬ್ಬಿಣದ ರೇಲಿಂಗ್ಸ್ ಗಳನ್ನು ಮುಂಜಾಗ್ರತ ಕ್ರಮವಾಗಿ ಅಳವಡಿಸದೇ ಇರುವುದೇ ಸದ್ರಿ ಅಪಘಾತಕ್ಕೆ ಕಾರಣವಾಗಿರುವುದಾಗಿದೆ.
No comments:
Post a Comment