ದೈನಂದಿನ ಅಪರಾದ ವರದಿ.
ದಿನಾಂಕ 13.07.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 11.07.2014 ರಂದು ಸಂಜೆ 16.15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಾಲಣ್ಣ ರವರು ತನ್ನ ಮಗಳು 7 ವರ್ಷ ಪ್ರಾಯದ ಅಶ್ವಿನಿಯೊಂದಿಗೆ ಮಂಗಳೂರು ನಗರದ ಅಳಕೆ ಅಶೋಕ್ ರೆಸಿಡೆನ್ಸಿ ಎದುರು ಇರುವ ಅಂಗಡಿಗೆ ಹೋಗಿ ಅಗತ್ಯ ಸಾಮಾಗ್ರಿಗಳನ್ನು ಖರಿದಿಸಿ ಮರಳಿ ವಾಸ್ತವ್ಯದ ಸ್ಥಳಕ್ಕೆಂದು ಹೋಗುವರೇ ಬಗ್ಗೆ ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತುಕೊಂಡಿರುವ ಸಮಯ ಆರೋಪಿ ಮೋಟಾರು ಸೈಕಲ್ ನಂಬ್ರ ಕೆಎ.19.ವಿ.7436 ನೇದರ ಸವಾರ ಶಿವ ಪ್ರಸಾದ್ ರವರು ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ ನ್ಯೂ ಚಿತ್ರ ಕಡೆಯಿಂದ ಮಣ್ಣಗುಡ್ಡೆ ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ನಿಂತುಕೊಂಡಿದ್ದ ಮಗಳು ಅಶ್ವಿನಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಎಡ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಬಲ ಕಾಲಿನ ಮೊಣಗಂಟಿಗೆ, ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಯೆನೊಪೊಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.07.2014 ರಂದು ಪಿರ್ಯಾದಿದಾರರಾದ ಶ್ರೀ ಡೊಕಿನ್ ಡಿ'ಸೋಜಾ ರವರು ಮತ್ತು ಅವರ ಗೆಳೆಯ ಕೌಶಿಕ್ ಬಿ.ಕೆ. ರವರು ಸ್ನೇಹಿತ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ.19.ಈಈ.8663 ನೇದರಲ್ಲಿ ಕೌಶಿಕ್ ಬಿ.ಕೆ ರವರು ಪಿರ್ಯಾದಿದಾರರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡುಅಶೋಕ ನಗರ ಕಡೆಯಿಂದ ಮಣ್ಣಗುಡ್ಡೆ ಕಡೆಗೆ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಾ ಮಣ್ಣಗುಡ್ಡ ದೇವಾಡಿಗ ಸಮಾಜದ ಹತ್ತಿರ ಇರುವ ದುರ್ಗಾ ಅಪಾರ್ಟ್ಮೆಂಟ್ ಎದುರು ತಲುಪುತ್ತಿರುವ ಸಮಯ ಮಧ್ಯಾಹ್ನ 15.00 ಗಂಟೆಗೆ ಆರೋಪಿ ಬಸ್ಸು ಚಾಲಕ ತನ್ನ ಬಾಬ್ತು ಬಸ್ಸು ಕೆಎ.19.ಡಿ.1616ನೇಯದನ್ನು ಮಂಗಳೂರು ನಗರದ ಸಾರ್ವಜನಿಕ ಡಾಮಾರು ರಸ್ತೆಯಾದ ಮಣ್ಣಗುಡ್ಡೆ ಕಡೆಯಿಂದ - ಉರ್ವಾ ಮಾರ್ಕೆಟ್ ಕಡೆಗೆ ಅತೀವೇಗ ಮತ್ತು ಅಜಾಗರು ಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಕೌಶಿಕ್ ರವರು ರಸ್ತೆಗೆ ಬಿದ್ದುದರಿಂದ ಕೌಶಿಕಿಗೆ ಎಡಕಾಲಿಗೆ, ತೊಡೆಗೆ, ಬಲಕೈ ಬೆರಳಿಗೆ ಗಂಭೀರ ಗಾಯ ಮತ್ತು ಎದೆಗೆ ಗುದ್ದಿದ ನೋವು ಹಾಗೂ ಪಿರ್ಯಾದಿದಾರರಿಗೆ ತಲೆಗೆ ಬಲ ಕಾಲಿನ ಮಣಿಗಂಟಿನ ಬಳಿ ರಕ್ತ ಗಾಯ ಹಾಗೂ ಬಲ ಬೆನ್ನಿಗೆ ನೋವು ಹಾಗೂ ಬಲ ಕೈಗೆ ತರಚಿದ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಾರಾಯಣ ನಂಬಿಸನ್ ರವರ ಮಗ 26 ವರ್ಷ ಪ್ರಾಯದ ವಿನೋದ್ ನಂಬಿಸನ್ ಎಂಬಾತನು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾನಸಿಕವಾಗಿ ನೊಂದಿದ್ದು ದಿನಾಂಕ 11-07-2014 ರಂದು ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ವಾಪಾಸು ಬಾರದೇ ಕಾಣೆಯಾಗಿರುತ್ತಾನೆ.
4.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-07-2014 ರಂದು ಕೆಎ-19-ಎಎ-2925ನೇ ಟಾಟಾ 407 ಟಿಂಪೋ ದಲ್ಲಿ ಅದರ ಚಾಲಕನು ಇತರರೊಂದಿಗೆ ಸೇರಿ ಹಸು, ಎತ್ತು ಮತ್ತು ಕರುಗಳನ್ನು ಸೇರಿ ಒಟ್ಟು 32 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿ ಅಮಾನವೀಯ ಹಿಂಸಾತ್ಮಕ ರೀತಿಯಲ್ಲಿ ಅವುಗಳ ಕೈಕಾಲುಗಳನ್ನು ಕಟ್ಟಿ ತುಂಬಿಸಿ ಅತೀ ವೇಗ ಹಾಗೂ ಅಜಾಗರುಕತೆಯಿಂದ ಟಿಂಪೋ ವನ್ನು ಚಲಾಯಿಸುತ್ತಾ ಬಂದು ಬಿಜೈ ಕೆಎಸ್ಅರ್ಟಿಸಿ ಬಳಿ ಕೆಎ-19- ಬಿ-417ನೇ ರಿಕ್ಷಾ ಕ್ಕೆ ಡಿಕ್ಕಿ ಪಡಿಸಿ ಹಾನಿಗೊಳಿಸಿ ವಾಹನವನ್ನು ನಿಲ್ಲಿಸಿದೇ ಮುಂದೆ ಚಲಾಯಿಸಿಕೊಂಡು ಹೋಗಿ ಬಿಜೈ ವೃತ್ತದಿಂದಾಗಿ ಮುಂದೆ ಚಲಾಯಿಸಿಕೊಂಡು ಹೋಗಿ ಅಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಕೆಎ-19-ಎಂ.ಸಿ 2732ನೇ ಪೊರ್ಡ್ ಪಿಗೋ ಕಾರಿಗೆ ಢಿಕ್ಕಿ ಪಡಿಸಿ ಹಾನಿಗೊಳಿಸಿದಲ್ಲದೇ ವಿದ್ಯುತ್ ಕಂಬಕ್ಕೆ ಢಿಕ್ಕಿ ಪಡಿಸಿ ಹಾನಿಗೊಳಿಸಿ ಮುಂದೆ ಸೆರಿನಿಟಿ ಅಪಾರ್ಟ್ ಮೆಂಟ್ ಬಳಿ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದು ಈ ಬಗ್ಗೆ ಮಾಹಿತಿ ತಿಳಿದ ಪಿರ್ಯಾದಿದಾರರಾದ ಬರ್ಕೆ ಪೊಲೀಸ್ ಠಾಣಾ ಹೆಚ್.ಸಿ. 989 ಶ್ರೀ ಮುಕುಂದ ರವರು ಸಿಬ್ಬಂಧಿಯವರೊಂದಿಗೆ ಸದ್ರಿ ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ತೆಗೆದು ಪರಿಶೀಲಿಸಿದಲ್ಲಿ 32 ಜಾನುವಾರುಗಳನ್ನು ತುಂಬಿರುವುದು ಈ ಜಾನುವಾರುಗಳನ್ನು ಹಿಂಸ್ಮಾಕ ರೀತಿಯಲ್ಲಿ ಕಟ್ಟಿ ಹಾಕಿದ್ದು ತುಂಬಿಸಿ ಚಲಾಯಿಸಿಕೊಂಡು ಬಂದುದರಿಂದ ಜಾನುವಾರುಗಳ ಗುದದ್ವಾರದಲ್ಲಿ ಬಳಿ ಹಾಗೂ ಕೈಕಾಲುಗಳಿಗೆ ಗಾಯವಾಗಿರುವುದು ಕಂಡು ಬರುತ್ತದೆ.
5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.07.2014 ರಂದು ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ನಿಝಾಮ್ ರವರು ತನ್ನ ಸ್ನೇಹಿತರಾದ ಇಂತಿಯಾಝ್ ಮತ್ತು ಇಝಾದ್‌ರವರೊಂದಿಗೆ ಮಲಾರ್ ನಿಂದ ಧರ್ಮನಗರಕ್ಕೆ ಹೋಗುವ 51ಜಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಬೆಳಿಗ್ಗೆ 07:15 ಗಂಟೆಗೆ ಮಂಗಳೂರು ತಾಲೂಕು, ಬೋಳಿಯಾರ್ ಗ್ರಾಮದ, ಧರ್ಮನಗರ ಎಂಬಲ್ಲಿ ತಲುಪಿದಾಗ, ಆರೋಪಿಗಳಾದ ಪವನ್ ಮತ್ತು ಇತರ 3 ಜನರು ಬಸ್ಸಿನ ಒಳಗಡೆ ಬಂದು, ಆರೋಪಿ 1ನೇ ಪವನ್ ಪಿರ್ಯಾದಿದಾರರ ಅಂಗಿಯ ಕಾಲರ್‌ನ ಪಟ್ಟಿಯನ್ನು ಹಿಡಿದು ಕೆಳಗಡೆ ಎಳೆದು ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದನು. ಆ ಸಮಯದಲ್ಲಿ ತಡೆಯಲು ಬಂದು ಪಿರ್ಯಾದಿದಾರರ ಸ್ನೇಹಿತರಾದ ಇಂತಿಯಾಜ್ ಮತ್ತು ನಿಝಾದ್ ರವರಿಗೆ ಉಳಿದ ಆರೋಪಿಗಳು ಕೈಯಿಂದ ಮೈಕೈಗೆ ಹೊಡೆದಿದ್ದು, ಗಲಾಟೆಯನ್ನು ಬಸ್ಸಿನ ಸಿಬ್ಬಂದಿಗಳು ಮತ್ತು ಇತರ ಪ್ರಯಾಣಿಕರು ಬಿಡಿಸಿದಾಗ ಆರೋಪಿಗಳು ನಿಮ್ಮನ್ನು ಮುಂದಕ್ಕೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-07-2014ರಂದು ಕೊಚ್ಚಿ ಶಿಪ್ ಯಾರ್ಡ್ ನಿಂದ ದೇವಗಿರಿ ಚಹಾ ಹುಡಿಯನ್ನು ಪಿರ್ಯಾದಿದಾರರಾದ ಶ್ರೀ ಸಾಜಿ ಕುಮಾರ್ ರವು ತನ್ನ ಮಾಲಕರ ಬಾಬ್ತು KL 07 CA 2864ನೇ ನೋಂದಣಿ ಸಂಖ್ಯೆಯ ಲಾರಿಯಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿನ ಯೆಯ್ಯಾಡಿ ಕಡೆಗೆ ಹೊರಟು ದಿನಾಂಕ: 11-07-2014 ರಂದು ರಾತ್ರಿ 11-30 ಗಂಟೆಗೆ ಮಂಗಳೂರು ತಲುಪಿದ್ದು, ರಾತ್ರಿಯಾಗಿದ್ದುದರಿಂದ ಅನ್ ಲೋಡ್ ಮಾಡಲು ಸಾಧ್ಯವಾಗದೇ ಇದ್ದುದರಿಂದ ಕದ್ರಿ ಉದ್ಯಾನವನದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಮಾಡುತ್ತಿದ್ದ ಸಮಯ ದಿನಾಂಕ 12-07-2014ರಂದು ಬೆಳಗಿನ ಜಾವ ಸಮಯ ಸುಮಾರು 03-00 ಗಂಟೆಗೆ ಯಾರೋ ನಾಲ್ಕು ಜನ ಅಪರಿಚಿತ ಯುವಕರು ಸದ್ರಿ ಲಾರಿಯ ಎರಡೂ ಡೋರ್ ಗಳ ಕಡೆಗೆ ತಲಾ ಇಬ್ಬರಂತೆ ನಿಂತುಕೊಂಡು ಅವರಲ್ಲಿ ಓರ್ವ ಪಿರ್ಯಾದಿದಾರರಿಗೆ ಚಾಕುವೊಂದನ್ನು ತೋರಿಸಿ ಸದ್ರಿಯವರ ಲಾರಿಗೆ ಹತ್ತಿ ಪಿರ್ಯಾದಿದಾರರ ಅಂಗಿಯ ಕಿಸೆಗೆ ಬಲಾತ್ಕಾರವಾಗಿ ಕೈಹಾಕಿ ಅವರ ಕಿಸೆಯಲ್ಲಿದ್ದ ನಗದು ಹಣ ರೂ.15,000/-, ಸದ್ರಿಯವರ ಕಿಸೆಯಲ್ಲಿದ್ದ ಡ್ಯಾಶ್ ಬೋರ್ಡ್ ನ ಕೀಯನ್ನು ತೆಗೆದು ಅದರ ಸಹಾಯದಿಂದ ಡ್ಯಾಶ್ ಬೋರ್ಡ್ ನ್ನು ತೆರದು ಅದರಲ್ಲಿದ್ದ ನಗದು ಹಣ ರೂ. 5,000/- ಹಾಗೂ ಸದ್ರಿಯವರ ಕಿಸೆಯಲ್ಲಿದ್ದ ನೋಕಿಯಾ ಕಂಪನಿಯ ಅಂದಾಜು ರೂ.3,000/- ಬೆಲೆ ಬಾಳುವ, 09605508836ನೇ ನಂಬ್ರ ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್, ಹೀಗೆ ಒಟ್ಟು ಅಂದಾಜು 23,000/- ರೂ ಬೆಲೆ ಬಾಳುವ ಸೊತ್ತಗಳನ್ನು ಕಿತ್ತು ಲೂಟಿ ಮಾಡಿಕೊಂಡು ಲಾರಿಯ ಹಿಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಬಾಬ್ತು ಕಾರನ್ನು ಹತ್ತಿ ಪರಾರಿಯಾಗಿರುತ್ತಾರೆ, ಈ ಘಟನೆಯಿಂದ ಗಾಬರಿಗೊಂಡ ಪಿರ್ಯಾದಿದಾರರು ಸದ್ರಿ ಲಾರಿಯಲ್ಲಿದ್ದ ದೇವಗಿರಿ ಚಹಾ ಹುಡಿ ಲೋಡನ್ನು ಮಂಗಳೂರು ನಗರದ ಮೇರಿಹಿಲ್ ನಲ್ಲಿ ಅನ್ ಲೋಡ್ ಮಾಡಿ ನಂತರ ತನ್ನ ಮಾಲಕರಲ್ಲಿ ಚರ್ಚಿಸಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-07-2014ರಂದು ರಾತ್ರಿ ಸಮಯ ಸುಮಾರು 20-45 ರಿಂದ 22-30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ನಾಗರಾಜ ವೀರಪ್ಪ ಕಬ್ಬಿನಡ ರವರು ಮಂಗಳೂರು ನಗರದ ಯೆಯ್ಯಾಡಿಯಲ್ಲಿರುವ ಮಧುವನ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿರುವ ವಿಲೇಜ್ ಫ್ಯಾಮಿಲಿ ರೆಸ್ಟೋರೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬಾಬ್ತು KA 14 P 343ನೇ ನೋಂದಣಿ ಸಂಖ್ಯೆಯ ಇನ್ನೋವಾ ಕಾರನ್ನು ಪಾರ್ಕ್ ಮಾಡಿ ತನ್ನ ಸಂಸಾರದೊಂದಿಗೆ ಊಟಕ್ಕೆ ತೆರಳಿದ್ದ ಸಮಯ ಯಾರೋ ಕಳ್ಳರು ಸದ್ರಿ ಕಾರಿನ ಬಲಬದಿಯ ಮಧ್ಯ ಭಾಗದ ಕಿಟಕಿಯ ಗಾಜನ್ನು ಕಲ್ಲಿನಿಂದ ಒಡೆದು ಕಾರಿ ಒಳಗೆ ಸೀಟಿನ ಮೇಲೆ ಇರಿಸಿದ್ದ ಪಿರ್ಯಾದಿದಾರರ ಪತ್ನಿಯ ಹ್ಯಾಂಡ್ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಕಳವಾದ ಬ್ಯಾಗಿನಲ್ಲಿ ಸುಮಾರು 15 ಗ್ರಾಂ ತೂಕವಿರುವ ಚಿನ್ನದ ಬಳೆ-1, ಸುಮಾರು 2 ಗ್ರಾಂ ತೂಕದ ಚಿನ್ನದ ಕಿವಿಯೋಲೆ-1 ಜೊತೆ ಹಾಗೂ ಸುಮಾರು 600/- ರೂ ನಗದು ಹಣವಿದ್ದುದಾಗಿದೆ, ಸದ್ರಿ ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ.45,000/- ಆಗಬಹುದು.
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.07.2014 ರಂದು ಪಿರ್ಯಾದಿಯವರಾದ ಶ್ರೀ ಶಿವಪ್ರಸಾದ್ ರವರು ಕುಟ್ಟಿ ಬಂಗೇರರವರ ಮೋಟಾರು ಸೈಕಲ್ ನಂಬ್ರ KA 20 H 3946 ನೇದನೆ ಬೈಕ್ನಲ್ಲಿ ಹಿಂಬದಿ ಸವಾರರಾಗಿಕೊಂಡು ಹೋಗುತ್ತಿರುವ ಸಮಯ ಹಂಡೇಲು ಎಂಬಲ್ಲಿ ಬೆಳಿಗ್ಗೆ 07:00 ಗಂಟೆಗೆ ತಲುಪಿದಾಗ ಎದುರುಗಡೆ ಅಂದರೆ ಮಂಗಳೂರು ಕಡೆಯಿಂದ ನವದುರ್ಗ ಬಸ್ಸು ನಂಬ್ರ - KA 19 C 5197 ನೇದನ್ನು ಅದರ ಚಾಲಕ ರಂಜಿತ್ ಎಂಬವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಹಣೆಗೆ ಹಾಗೂ ಎದೆಗೆ ಗಾಯವಾಗಿದ್ದಲ್ಲದೆ, ಬೈಕ್ ಸವಾರ ಕುಟ್ಟಿ ಬಂಗೇರ ರವರ ತಲೆಗೆ ಮತ್ತು ದವಡೆಗೆ ಗಂಭೀರ ಗಾಯವಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12/07/2014 ರಂದು 11.00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕಂದಾವರ ಗ್ರಾಮದ ಕಂದಾವರ ಎಂಬಲ್ಲಿ ಅನಧಿಕೃತವಾಗಿ KA 19 B 7022 ಮತ್ತು KA 20 D 9958 ನಂಬ್ರದ ಲಾರಿಗಳಲ್ಲಿಯೂ ಮತ್ತು ಮಂಗಳೂರು ತಾಲೂಕು ಗಂಜಿಮಠ ಎಂಬಲ್ಲಿ ಸುಮಾರು 11.45 ಗಂಟೆ ಸಮಯಕ್ಕೆ KA 19 2274 ನಂಬ್ರದ ಲಾರಿಯಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ ಅಕ್ರಮವಾಗಿ ಎಲ್ಲಿಂದಲೋ ಕಳವು ಮಾಡಿ ತಮ್ಮ ವಾಹನದಲ್ಲಿ ಮರಳು ಮತ್ತು ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಬಗ್ಗೆ ಪಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಅಸಿಸ್ಟೆಂಟ್ ಡೈರೆಕ್ಟರ್(ಇನ್ ಚಾರ್ಜ್), ಮೈನ್ಸ್ & ಜಿಯೋಲೊಜಿಕಲ್ ಡಿಪಾರ್ಟ್ಮೆಂಟ್, ಮಂಗಳೂರು ರವರು ಪಿರ್ಯಾದು ನೀಡಿರುವುದಾಗಿದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-07-2014 ರಂದು ಮದ್ಯಾಹ್ನ ಸಮಯ 3-00 ಗಂಟೆಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲ ಎನ್‌ಹೆಚ್ 66 ರಲ್ಲಿ ಕುಮಾರಿ ಫದೀದಾ (10 ವರ್ಷ) ಇವಳು ರಸ್ತೆ ದಾಟುವರೇ ನಿಂತುಕೊಂಡಿದ್ದ ಸಮಯ ತೊಕ್ಕೋಟು ಕಡೆಯಿಂದ ತಲಪಾಡಿ ಕಡೆಗೆ ಹೊಗುತ್ತಿದ್ದ ಕಾರು ನಂಬ್ರ ಕೆಎ 19 ಎಂಡಿ 7173 ನೇ ಚಾಲಕ ಅನ್ವರ್ ಸಾದತ್ ನು ತನ್ನ ಬಾಬ್ತು ಕಾರನ್ನು ಅತೀವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫದೀದಾಳಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರಸ್ವರೂಪದ ಗಾಯಗೊಂಡ ಫದೀದಾಳನ್ನು ಚಿಕಿತ್ಸೆಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸಮಯ 6-50 ಗಂಟೆಗೆ ಮೃತಪಟ್ಟಿರುವುದಾಗಿದೆ.
No comments:
Post a Comment