Tuesday, July 8, 2014

Daily Crime Reports 08-07-2014

ದೈನಂದಿನ ಅಪರಾದ ವರದಿ.

ದಿನಾಂಕ 08.07.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-07-2014 ರಂದು ಪಿರ್ಯಾದಿದಾರರಾದ ಶ್ರೀ ಸುರೇಶ್ ಪೂಜಾರಿ ರವರು ತಾನು ಚಾಲಕನಾಗಿ ದುಡಿಯುವ ಬಸ್ಸನ್ನು  ಕೆಲಸ ಮುಗಿಸಿ ರಾತ್ರಿ ಮುಕ್ಕ ಪ್ರೆಟೋಲ್ ಪಂಪ್ ಬಳಿ ನಿಲ್ಲಿಸಿ ತನ್ನ ಮನೆಯ ಕಡೆಗೆ ಹೋಗಲು ಕಂಡೆಕ್ಟರ್ ಲಕ್ಷ್ಮಿರವರೊಂದಿಗೆ ಎನ್,ಹೆಚ್ 66 ಬದಿಯಿಂದಾಗಿ ನಡೆದು ಕೊಂಡು ಹೋಗುತ್ತಾ ರಾತ್ರಿ ಸುಮಾರು 7.45 ಗಂಟೆಗೆ ಮಂಗಳೂರು ಕಡೆಯಿಂದ ಮುಲ್ಕಿಕಡೆಗೆ ಮೋಟಾರ್ ಸೈಕಲೊಂದನ್ನು ಅದರ ಸವಾರ ಮಾನವ ಜೀವಕ್ಕೆ ಆಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎಡಕಾಲಿಗೆ ಡಿಕ್ಕಿ ಪಡಿಸಿ ಗಾಯಗೊಳ್ಳಲು ಕಾರಣವಾಗಿದ್ದು, ಸುರತ್ಕಲ್ ಶೀನಿವಾಸ್ ಅಸ್ಪತ್ರೆ ಯಲ್ಲಿ ಹೊರರೋಗಿಯಾಗಿ ದಾಖಲಾಗಿರುವುದಲ್ಲದೇ ಆರೋಪಿ ಅಪರಿಚಿತ ಸವಾರನು ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುದಾಗಿದೆ.

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04/07/2014 16-00 ಗಂಟೆಯಿಂದ ದಿನಾಂಕ 05/07/2014 09-00 ಗಂಟೆ ಮಧ್ಯೆ ಮಂಗಳೂರು ನಗರದ ಹರಿಪದವು ಅಭಿಮಾನ್ ಹೈಟ್ಸ್ ಅಪಾರ್ಟ ಮೆಂಟ್ ಬಳಿ ಪಿರ್ಯಾದಿದಾರರಾದ ಶ್ರೀ ಶ್ರೀನಿವಾಸ ರವರು ಪಾರ್ಕ್ ಮಾಡಿದ  ತನ್ನ ಮಾಲಕತ್ವದ ಚಾಸಿಸ ನಂ:ME121COGAD2038549, ಇಂಜಿನ್ ನಂ:21CGO38030, ಕಪ್ಪು ಬಣ್ಣದ  2013ನೇ ಮಾಡೆಲಿನ  KA-19 EK-1106ನೇ ನೊಂದಣಿ ಸಂಖ್ಯೆಯ  ಯಮಹಾ ಕಂಪೆನಿಯ FZ  ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅಶ್ಫಕ್ ರವರು ಅವರ ತಂದೆಯವರ ಬಾಬ್ತು ಕೆಎ-19-ಡಿ-2496 ನೇ ಮಹೇಂದ್ರ ಟೆಂಪೋದಲ್ಲಿ ಚಾಲಕನಾಗಿದ್ದು, ದಿನಾಂಕ 07-07-2014 ರಂದು ಬೆಳಿಗ್ಗೆ ಮಂಗಳೂರು ಸೆಂಟ್ರಲ್ ಮಾರ್ಕೇಟ್ನಿಂದ ತರಕಾರಿಗಳನ್ನು ಲೋಡ್ ಮಾಡಿ ಉಳ್ಳಾಲ ಕಡೆಗಳಲ್ಲಿ ಅನ್ ಲೋಡ್ ಮಾಡಿ ವಾಪಾಸು ಪಿರ್ಯಾದಿದಾರರ ಅಣ್ಣ ಮಹಮ್ಮದ್ ಅನ್ಸಾರ್ ರವರೊಂದಿಗೆ ಮಂಗಳೂರು ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 10:30 ಗಂಟೆಗೆ ಕಲ್ಲಾಪು ಕಳೆದು ಸ್ವಲ್ಪ ಮುಂದಕ್ಕೆ ಅಡಂ ಕುದ್ರು ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ತೊಕ್ಕಟು ಕಡೆಗೆ ಕೆಎ-19--1165 ನೇ ನಂಬ್ರದ ಟ್ಯಾಂಕರ್ ಲಾರಿಯನ್ನು ಅದರ ಚಾಲಕನು ರಾಂಗ್ ಸೈಡ್ನಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕೈಗೆ, ಎದೆಗೆ, ಕಾಲಿಗೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ಅಣ್ಣ ಮಹಮ್ಮದ್ ಅನ್ಸಾರ್ ರವರಿಗೆ ತಲೆಗೆ ಎದೆಗೆ, ಕಾಲಿಗೆ, ಕೈಗೆ ಗಾಯವಾಗಿರುತ್ತದೆ. ಅಲ್ಲದೆ ಟೆಂಪೋದ ಮುಂಭಾಗದ ಬಲ ಬದಿಯ ಬಾಡಿಗೆ ಜಖಂಗೊಂಡಿರುತ್ತದೆ.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-07-2014 ರಂದು ಪಿರ್ಯಾದಿದಾರರಾದ ಶ್ರೀ ತಾರನಾಥ್ ರವರು ತನ್ನ ಬಾಬ್ತು ಬೈಕ್ ನಂಬ್ರ KA-19-Y-5401 ನೇದಕ್ಕೆ ಪೆಟ್ರೋಲ್ ಹಾಕಲು ತನ್ನ ಸ್ನೇಹಿತ ಹರೀಶ್ರವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಉಳ್ಳಾಲ ಒಂಭತ್ತುಕೆರೆಯಿಂದ ಕೋಟೆಕಾರು ಪೆಟ್ರೋಲ್ ಪಂವುವಿಗೆ ಹೋಗುತ್ತಾ ಸೋಮೇಶ್ವರ ದೇವಸ್ಥಾನದ ದ್ವಾರದ ಬಳಿ ತಲುಪುವಾಗ ಸಮಯ ಸುಮಾರು 16:20 ಗಂಟೆಗೆ ಕೋಟೆಕಾರು ಕಡೆಯಿಂದ KA-19-D-2616 ನೇ ಟೆಂಪೋ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಸಹಸವಾರ ಹರೀಶ್ರವರಿಗೆ ಬಲ ಕಾಲಿನ ಮೊಣಗಂಟಿನ ಬಳಿ ಗಂಭೀರ ಸ್ವರೂಪದ ಗಾಯ ಹಾಗೂ ತುಟಿ ಮತ್ತು ದವಡೆಗೆ ರಕ್ತ ಗಾಯವಾಗಿರುತ್ತದೆ. ಅಪಘಾತದಿಂದ ಪಿರ್ಯಾಧಿದಾರರಿಗೆ ಯಾವುದೇ ಗಾಯವಾಗಿರುವುದಿಲ್ಲ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.07.2014 ರಂದು ಸಂಜೆ 18.45 ಗಂಟೆಗೆ   ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಲಿ ರವರ ತಂದೆಯವರು ಕಣ್ಣೂರು ಸುಂದರಂ  ಮೋಟಾರ್ಸ್ಬಳಿ ರಾಷ್ಟ್ರೀಯ  ಹೆದ್ದಾರಿಯ  ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಸಮಯ ಮಂಗಳೂರು ಕಡೆಯಿಂದ  ಬಿ.ಸಿ ರೋಡ್‌‌ ಕಡೆಗೆ  ಬೈಕ್‌‌ ನಂಬ್ರ ಕೆಎ19-ಇಹೆಚ್‌‌-6033 ನೇ ದನ್ನು ಅದರ ಚಾಲಕ ಇರ್ಫಾನ್ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂದೆ  ಅಬ್ದುಲ್‌‌ ಖಾದರ್‌‌ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಕಾಲಿಗೆ ಮೂಳೆಮುರಿತವಾಗಿ ಚಿಕಿತ್ಸೆ ಬಗ್ಗೆ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No comments:

Post a Comment