ದೈನಂದಿನ ಅಪರಾದ ವರದಿ.
ದಿನಾಂಕ 11.07.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-07-2014 ರಂದು ಲಾರಿ ನಂಬ್ರ ಕೆಎ-20-ಡಿ-1722ನೇ ದರ ಚಾಲಕ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿ ಮೂಲ್ಕಿ ಆರ್ ಆರ್ ಟವರ್ಸ್ ಮುಂಭಾಗ ಪಿರ್ಯಾದಿದಾರರಾದ ಶ್ರೀ ಪ್ರಸನ್ನ ರವರು ಪ್ರಯಾಣಿಸುತ್ತಿದ್ದ ಕೆ ಎಲ್ 14ಕೆ 3556ನೇಯ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಜನರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು ಕಾರು ಜಖಂಗೊಂಡಿರುತ್ತದೆ ಗಾಯಾಳುಗಳು ಶ್ರೀನಿವಾಸ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
2.ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-07-2014 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಟಿ.ಜೆ. ತಾಕತ್ ರಾವ್ ರವರು ಅವರ ಸ್ವಂತ ಊರಾದ ಅಥಣಿ, ಬೆಳಗಾವಿ ಜಿಲ್ಲೆಗೆ ತೆರಳಿದ್ದು ದಿನಾಂಕ 10-07-2014 ರಂದು ಬೆಳಿಗ್ಗೆ 07-00 ಗಂಟೆಗೆ ವಾಪಸ್ಸು ಮನೆಗೆ ಬಂದು ಮನೆಯ ಎದುರಿನ ಬಾಗಿಲನ್ನು ಕೀ ಸಹಾಯದಿಂದ ತೆರೆಯಲು ಪ್ರಯತ್ನಿಸಿದಾಗ ಬಾಗಿಲು ತೆರೆಯದೆ ಇದ್ದು ಮನೆಯು ಒಳಗಡೆಯಿಂದ ಚಿಲಕ ಹಾಕಿದಂತೆ ಇರುತ್ತದೆ. ನಂತರ ಮನೆಯ ಹಿಂಬದಿಗೆ ಹೋಗಿ ನೋಡಿದಾಗ ಮನೆಯ ಹಿಂಬದಿಯ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ನೋಡಿದಲ್ಲಿ ಮನೆಯ ಹಾಲ್‌ನಲ್ಲಿದ್ದ ಕಪಾಟನ್ನು ಅಲ್ಲೇ ಪಕ್ಕದಲ್ಲಿದ್ದ ಮಂಚದ ಹಾಸಿಗೆಯನ್ನು ಕೆಳಗೆ ಹಾಸಿ ಅದರ ಮೇಲೆ ಕಪಾಟನ್ನು ಮಲಗಿಸಿ ಯಾವುದೋ ಆಯುಧದಿಂದ ಅದನ್ನು ಬಲತ್ಕಾರವಾಗಿ ತೆರೆದಿರುವುದು ಕಂಡು ಬಂತು. ನಂತರ ಬೆಡ್‌ರೂಮಿನಲ್ಲಿದ್ದ ಕಪಾಟನ್ನು ಕೂಡ ತೆರೆದು ಅದರೊಳಗಿದ್ದ ಬಟ್ಟೆಬರೆಗಳೆಲ್ಲಾ ಮಂಚದ ಮೇಲೆ ಹಾಕಿರುವುದು ಕಂಡು ಬಂತು. ಹಾಲ್‌ನಲ್ಲಿದ್ದ ಕಪಾಟಿನ ಒಳಗಡೆಯಿರುವ ಸಣ್ಣ ಲಾಕರ್‌ನಲ್ಲಿಟ್ಟಿದ್ದ ಅಂದಾಜು ಮೌಲ್ಯ ರೂ. 2,22,500/- ಬೆಲೆಬಾಳುವ ಚಿನ್ನದ ಒಡವೆ ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09-07-2014 ರಂದು 12:45 ಗಂಟೆಗೆ ಮಂಗಳೂರು ನಗರದ ಕೆ.ಪಿ.ಟಿ. ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿರುವ ಪೆಟ್ರೋಲ್ ಪಂಪ್ ಕಡೆಯಿಂದ ಕೆಎ-19-ಜೆಡ್-1333 ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಬಾಲಕೃಷ್ಣ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬಲಕ್ಕೆ ತೆರೆದ ಡಿವೈಡರ್ ಮೂಲಕ ಹೋಗುವ ಸಲುವಾಗಿ ರಸ್ತೆಯಲ್ಲಿ ವಾಹನವನ್ನು ಅಡ್ಡವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶ್ರೀ ಜಗದೀಶ ರವರು ಸಹಸವಾರನಾಗಿದ್ದ ಶ್ರೀನಿವಾಸನು ಸವಾರಿ ಮಾಡುತ್ತಿದ್ದ ಕೆಎ-19-ಡಬ್ಲ್ಯೂ- 8601 ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ರಸ್ತೆಗೆ ಬಿದ್ದು ಕೆ.ಪಿ.ಸಿ. ಕಡೆಯಿಂದ ನಿದಾನವಾಗಿ ಬರುತ್ತಿದ್ದ ಕೆಎ-01-ಸಿ-720 ನಂಬ್ರದ ಲಾರಿಯ ಟಯರ್ ನಡಿಗೆ ಬಿದ್ದು ಸಿಕ್ಕಿಕೊಂಡಿದ್ದು, ಬೈಕಿನಡಿಗೆ ಶ್ರೀನಿವಾಸನ ಬಲಕಾಲು ಸಿಕ್ಕಿ ಮೂಳೆಮುರಿತದ ಗಾಯವಾಗಿದ್ದಲ್ಲದೇ ಮೈಕೈಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಗುದ್ದಿದ ನೋವುಂಟಾಗಿರುತ್ತದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09/07/2014 ರಂದು ಸಂಜೆ 3:30 ಗಂಟೆಗೆ ಮಂಗಳೂರು ನಗರದ ಜ್ಯೋತಿ ಬಸ್ಸು ನಿಲ್ದಾಣದ ಬಳಿ ಬಲ್ಮಠ ಕಡೆಗೆ ಹೋಗುವ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಗಣೇಶ ಎಂಬಾತನು ತನ್ನ ಬಾಬ್ತು ಕೆಎಲ್-14-ಎಂ-8783 ನಂಬ್ರದ ಮೋಟಾರು ಸೈಕಲಿನಲ್ಲಿ ಬಲ್ಮಠ ಕಡೆಗೆ ಹೋಗುತ್ತಿದ್ದ ವೇಳೆ ಬಸ್ಸು ನಿಲ್ದಾಣದ ಬಳಿ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಕೆಎ-19-ಡಿ-2178 ಬಸ್ಸನ್ನು ಅದರ ಚಾಲಕ ಆರೋಪಿ ಪ್ರದೀಪ ಎಂಬಾತನು ಒಮ್ಮೆಲೆ ವೇಗವಾಗಿ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಬಸ್ಸು ಗಣೇಶರವರ ಬೈಕ್ಗೆ ಡಿಕ್ಕಿಯಾಗಿ ಬೈಕ್ ಸಮೇತ ಸವಾರನು ರಸ್ತೆಯ ಮದ್ಯದ ಡಿವೈಡರ್ಗೆ ಬಿದ್ದು, ಗಣೆಶನ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದಲ್ಲದೇ ಮೈಕೈಗೆ ಸಣ್ಣಪುಟ್ಟ ಗಾಯವಾಗಿದ್ದು, ಘಟನೆಯನ್ನು ಕಂಡ ಪಿರ್ಯಾದಿದಾರರಾದ ಶ್ರೀ ಅಜಯ್ ಕುಮಾರ್ ರವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಾಯಾಳು ಮಂಗಳೂರು ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/07/14 ರಂದು 12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಆರ್. ಸೆಲ್ವರಾಸು ರವರು ದರ್ವೇಶ್ ಯಾರ್ಡನಲ್ಲಿ ಹೆಚ್ ಆರ್ 55 ಇ 9329 ನೇಯ ಟ್ರೇಲರ್ ಗೆ ಕ್ರೇನ್ ಆಪರೇಟರ್ ರವರು ಕ್ರೇನ್ ನಲ್ಲಿ ಮರದ ದಿಮ್ಮಿಗಳನ್ನು ಲೋಡ್ ಮಾಡುವ ಸಮಯ ಕ್ರೇನ್ ಆಪರೇಟರ್ ರವರ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಮರದ ದಿಮ್ಮಿ ಟ್ರೇಲರ್ ನಿಂದ ಉರುಳಿ ಬಿದ್ದು ಚಾಲಕ ಪೃಥ್ವಿರಾಜ್ ರವರ ಬಲ ಕಾಲಿನ ಕೋಲು ಕಾಲಿಗೆ ಮರದ ದಿಮ್ಮಿ ಬಲವಾಗಿ ತಾಗಿದ ಕಾರಣ ತೀವ್ರ ಸ್ವರೂಪದ ರಕ್ತ ಗಾಯ ಅಲ್ಲದೇ ಅವರು ನೆಲಕ್ಕೆ ಬಿದ್ದು ತಲೆಗೆ ರಕ್ತ ಗಾಯವಾಗಿರುತ್ತದೆ ಈ ಘಟನೆಗೆ ಗಣೇಶ ಶಿಪ್ಪಿಂಗ್ ಕಂಪನಿಯ ಕ್ರೇನ್ ಆಪರೇಟರ್ ರವರ ನಿರ್ಲಕ್ಷ್ಯತನ ಮತ್ತು ಸೂಪರ್ ವೈಜರವರು ಮುಂಜಾಗ್ರತೆ ಕ್ರಮ ವಹಿಸದೆ ಮರದ ದಿಮ್ಮಿಗಳಿಗೆ ಹಗ್ಗವನ್ನು ಬೀಗಿಯದೇ ಇರುವುದೇ ಕಾರಣವಾಗಿರುತ್ತದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.07.2014 ರಂದು 13:30 ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ರೋಹಿತ್ ಹೆಗ್ಡೆ ರವರು ನ KA 19 6897 ನೇ ಲಾರಿಯನ್ನು ಬೆಳುವಾಯಿ ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು 14:00 ಗಂಟೆ ವೇಳೆಗೆ ಚಿಲಿಂಬಿ ಎಂಬಲ್ಲಿಗೆ ತಲುಪಿದಾಗ ಎದಿರುಗಡೆಯಿಂದ ಅಂದರೆ ಕಾರ್ಕಳ ಕಡೆಯಿಂದ ಬಂದ KA C 1223 ನೇ ಶಾಲಾ ಬಸ್ಸನ್ನು ಅದರ ಚಾಲಕ ಲಕ್ಷ್ಮಣ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ KA 19 6897 ನೇ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಬಲ ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ರಮ್ಯಾ ರವರು ಗೌತಮ್ ಎಂಬವರನ್ನು ಸುಮಾರು 7 ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಆನಂತರ 5 ವರ್ಷದ ಮುಂಚೆ ಬಿ.ಸಿ ರೋಡ್ ರಿಜಿಸ್ಟರ್ ಕಛೇರಿಯಲ್ಲಿ ಮದುವೆಯಾಗಿರುತ್ತಾರೆ. ಬಳಿಕ ದಿನಾಂಕ 12-05-2014 ರಂದು ಗೌತಮ್ ನ ಮನೆಯವರಿಗೆ ಹೇಳದೆ ರಮ್ಯ ರವರನ್ನು ಮಂಗಳಾದೇವಿ ದೇವಸ್ಥಾನದಲ್ಲಿ ಮದುವೆಯಾಗಿರುತ್ತಾರೆ. ಗೌತಮ್ ಆಭರಣ ಜುವೆಲ್ಲರ್ಸ್ ಕದ್ರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 08-07-2014 ರಂದು ಮನೆ ಬಿಟ್ಟು ಹೋದ ಗೌತಮ್ ರವರು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಂಗಳೂರು ಸಿ.ಸಿ.ಬಿ.ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ವೆಲೈಂಟೆನ್ ಡಿ'ಸೋಜಾ ರವರಿಗೆ ದಿನಾಂಕ 10-07-2014 ರಂದು ಸಂಜೆ 4-15 ಗಂಟೆಗೆ ಮಾನ್ಯ ಪೊಲೀಸ್ ಉಪ ಆಯುಕ್ತರು, [ಕಾ.ಸು.] ರವರು ಮಾಹಿತಿ ನೀಡಿದಂತೆ ಮಂಗಳೂರು ನಗರದ ರಾವ್ ಎಂಡ್ ರಾವ್ ಸರ್ಕಲ್ ಬಳಿ ಇರುವ ಮಹಾರಾಜ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿರುವ ಡೀಪ್ ಫ್ರೆಂಡ್ಸ್ ಅಸೋಸಿಯೇಷನ್ ನಲ್ಲಿ ಹಲವಾರು ಜನರು ಅಂದರ್ ಬಾಹರ್ ಜೂಜಾಟವಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪಿರ್ಯಾದಿದಾರರು ಪಂಚರುಗಳೊಂದಿಗೆ ಸಿ.ಸಿ.ಬಿ.ಘಟಕದ ಪಿ.ಎಸ್.ಐ., ಸಿಬ್ಬಂದಿ ಹಾಗೂ ದಕ್ಷಿಣ ಠಾಣಾ ಪಿ.ಎಸ್.ಐ. ಶರೀಪ್ ರವರುಗಳು ಮಾಹಿತಿ ಬಂದ ಸ್ಥಳಕ್ಕೆ ಸಂಜೆ 5-00 ಗಂಟೆಗೆ ತಲುಪಿ ಕೋಣೆಯ ಒಳಗೆ ಪ್ರವೇಶಿಸುತ್ತಿದ್ದಂತೆ, ಹಾಲ್ ನಲ್ಲಿ ಹಲವಾರು ಜನರು ನೆಲದ ಮೇಲೆ ಒಂದು ಚಾಪೆಯನ್ನು ಹಾಕಿಕೊಂಡು ವೃತ್ತಾಕಾರವಾಗಿ ಕುಳಿತು ಅಂದರ್-ಬಾಹರ್ ಜೂಜಾಟ ಆಡುತ್ತಿರುವುದು ಕಂಡಿದ್ದು, ಒಬ್ಬ ವ್ಯಕ್ತಿಯು ಕೈಯಲ್ಲಿ ಇಸ್ಪೀಟು ಎಲೆಗಳನ್ನು ಹಿಡಿದುಕೊಂಡು ಅಂದಾರ್ ಬಾಹರ್ ಎಂದು ಇಸ್ಫೀಟು ಎಲೆಗಳನ್ನು ಚಾಪೆಯ ಮೇಲೆ ಹಾಕುತ್ತಿದ್ದು, ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಅವರನ್ನು ಸುತ್ತುವರಿದು, ಈ ಆಟವನ್ನು ಯಾರು ನಡೆಸುತ್ತಿದ್ದಾರೆ ಎಂಬುದಾಗಿ ಕೇಳಿದಾಗ, ಉಲ್ಲಾಸ್ ರೈ ಎಂಬವರು ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಆಟ ಆಡುತ್ತಿದ್ದ ಜನರು ಕೈಯಲ್ಲಿ ಹಣವನ್ನು ಪಣವಾಗಿಡಲು ಹಿಡಿದು ಕೊಂಡಿದ್ದರು. ಪಿರ್ಯಾದಿದಾರರು ಆಟವನ್ನು ನಡೆಸಲು ಯಾವುದಾದರೂ ಅಧೀಕೃತ ಪರವಾನಿಗೆ ಇದೆಯೇ ಎಂದು ಕೇಳಿದಾಗ, ಇಲ್ಲ ಎಂದು ತಿಳಿಸಿದ ಮೇರೆಗೆ ಒಟ್ಟು ಅಲ್ಲಿ ಹಾಜರಿದ್ದ 37 ಆರೋಪಿಗಳನ್ನು ಹಾಗೂ ಅವರ ಕೈಯಲ್ಲಿ ಜೂಜಾಟಕ್ಕೆ ಪಣವಾಗಿ ಹಿಡಿದು ಕೊಂಡಿದ್ದ ಒಟ್ಟು ಹಣ ರೂಪಾಯಿ 1,38,205-00 ಮತ್ತು ಒಂದು ಚಾಪೆ ಹಾಗೂ 52 ಇಸ್ಪೀಟು ಎಲೆಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10/07/2014 ರಂದು 15.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ರವರು ತನ್ನ ಸ್ನೇಹಿತರಾದ ಪ್ರಕಾಶ್ ಎಂಬವರ ಜೊತೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೇಟೆಯಲ್ಲಿರುವ ಬಜಪೆ ಬಾರ್ & ರೆಸ್ಟೋರೆಂಟ್ ಗೆ ಊಟಕ್ಕೆಂದು ಹೋಗಿದ್ದು, ಸ್ನೇಹಿತರಾದ ಪ್ರಕಾಶ್ ರವರು ಬೇಗ ಊಟ ಮುಗಿಸಿ ಎದ್ದು ಹೋಗಿದ್ದು, ಬಾರಿನ ವೈಟರ್ ಬಿಲ್ ತಂದಾಗ ಬಿಲ್ ಪಾವತಿಸಲು ಪಿರ್ಯಾದಿದಾರರ ಬಳಿ ಹಣ ಇಲ್ಲದೇ ಇದ್ದು, ಇದರಿಂದ ಕೋಪಗೊಂಡು ಬಾರಿನ ಮಾಲಕ, ಮ್ಯಾನೇಜರ್ ಮತ್ತು ಇತರ ಇಬ್ಬರು ಸೇರಿ ಪಿರ್ಯಾದಿದಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಮರದ ಸೋಂಟೆಯಿಂದ ಹೊಡೆದು ಪಿರ್ಯಾದಿದಾರರ ಪ್ಯಾಂಟ್ ಶರ್ಟನ್ನು ಬಲಾತ್ಕಾರವಾಗಿ ತೆಗೆಸಿ ವಿವಸ್ತ್ರಗೊಳಿಸಿ ಮಾನಹಾನಿ ಮಾಡಿರುತ್ತಾರೆ.
10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-07-2014 ರಂದು ಸಂಜೆ ಸುಮಾರು 6-00 ಗಂಟೆಯಿಂದ ಈ ದಿನ ದಿನಾಂಕ 10-07-2014 ರಂದು ಬೆಳಿಗ್ಗೆ 11-00 ಗಂಟೆ ಮದ್ಯೆ ಪಿರ್ಯಾದಿದಾರರಾದ ಶ್ರೀ ಜಯದೇವ ರವರ ಅಣ್ಣ ಪಿ ಹರಿಕೃಷ್ಣ ಐತಾಳ್ ರವರ ಮನೆಯಾದ ಮನೆ ನಂಬ್ರ 2-8/5, ವೈಷ್ಣವಿ, ಗ್ರಾಮ ಸಂಘದ ಹಿಂಭಾಗ, ಹೊನ್ನಕಟ್ಟೆ, ಕುಳಾಯಿ ಗ್ರಾಮ ಎಂಬಲ್ಲಿ ಯಾರೋ ಕಳ್ಳರು ಶೌಚಾಲಯದ ಕಿಟಕಿಯ ಕಬ್ಬಿಣದ ಸರಳುಗಳನ್ನು ಮುರಿದು ಶೌಚಾಲಯದ ಮೂಲಕ ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟನ್ನು ಮುರಿದು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಅದರೊಳಗಿದ್ದ ಸುಮಾರು 6 ಗ್ರಾಂ ತೂಕದ ಬಂಗಾರದ ಕಿವಿಯ ಓಲೆ 1 ಜೊತೆ ಹಾಗೂ ಸುಮಾರು 250 ಗ್ರಾಂ ತೂಕದ ಬೆಳ್ಳಿಯ ದೀಪವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ರವರು ಪರಿಶಿಷ್ಟ ವರ್ಗಕ್ಕೆ ಸೇರಿದ ಅದಿ ಕರ್ನಾಟಕ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಅರ್ಜಿದಾರರು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಚಪ್ಪಲಿ ರಿಪೇರಿ ಮಾಡುವ ಸಣ್ಣ ಅಂಗಡಿಯನ್ನು ಇಟ್ಟುಕೊಂಡಿರುತ್ತಾರೆ. ಅದರ ಪಕ್ಕದಲ್ಲಿ ಶ್ರೀಮತಿ. ದಮಯಂತಿಯವರ ಬಾಬ್ತು ಹಾಲಿನ ಅಂಗಡಿ ಇರುತ್ತದೆ. ದಿನಾಂಕ 17-02-2014 ರಂದು ಪಿರ್ಯಾದುದಾರರ ಅಣ್ಣ ತೀರಿ ಹೋಗಿದ್ದರಿಂದ ಪಿರ್ಯಾದುದಾರರು ಆ ದಿನ ತನ್ನ ಚಪ್ಪಲಿ ಅಂಗಡಿಯನ್ನು ತೆರೆಯದೇ ಇದ್ದು, ದಿನಾಂಕ 18-02-2014 ರಂದು ಅಂಗಡಿಗೆ ಬಂದು ನೋಡಿದಾಗ ಅದನ್ನು ಕಿತ್ತು ಹುಡಿಮಾಡಿ ಬಿಸಾಕಿರುವುದು ಕಂಡು ಬಂತು. ಇದರಿಂದ ಪಿರ್ಯಾದುದಾರರಿಗೆ ಸುಮಾರು 25,000/- ರೂಪಾಯಿ ನಷ್ಟ ಉಂಟಾಗಿರುತ್ತದೆ. ಅಲ್ಲದೇ ಪಿರ್ಯಾದುದಾರರು ಚಪ್ಪಲಿ ಅಂಗಡಿಯ ಜಾಗದಲ್ಲಿ ಶ್ರೀಮತಿ. ದಮಯಂತಿಯವರು ತನ್ನ ಬಾಬ್ತು ಹಾಲಿನ ಅಂಗಡಿಯನ್ನು ಇಟ್ಟಿದ್ದರು. ಇದನ್ನು ಅಕ್ಷೇಪಿಸಿ ಪ್ರಶ್ನಿಸಿದ ಪಿರ್ಯಾದಿಗೆ ಶ್ರೀಮತಿ ದಮಯಂತಿಯವರು "ನೀನು ಈ ತರಹ ಬಂದು ಕಿರಿಕಿರಿ ಮಾಡಿದರೆ ರೌಡಿಗಳನ್ನು ಇಟ್ಟು ಹೊಡೆಸುತ್ತೆನೆ. ನೀನು ಚಪ್ಪಲಿ ಹೊಲಿಯುವ ಜಾತಿಯವನು,ಮತ್ತು ಕೀಳು ಜಾತಿಯವನು, ನೀನು ಕೀಳು ಜಾತಿಯವನಾಗಿರುವುದರಿಂದ ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಟ್ಟು ಕೆಲಸ ಮಾಡಬಾರದು ನೀವು ಎಲ್ಲಿಂದಲೋ ಬಂದು ಕೀಳು ಜಾತಿಯವರು" ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ಶ್ರೀಮತಿ. ದಮಯಂತಿಯವರು ಪಿರ್ಯಾದುದಾರರ ಸಂಘದವರ ಮಾತಿನಂತೆ ಚಪ್ಪಲಿ ಅಂಗಡಿಯನ್ನು ರಿಪೇರಿ ಮಾಡಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಆರೋಪಿತೆ ಶ್ರೀಮತಿ. ದಮಯಂತಿಯವರು ಅಂಗಡಿ ರಿಪೇರಿ ಮಾಡಿಸಿಕೊಟ್ಟಿರುವುದಿಲ್ಲ. ಪಿರ್ಯಾದುದಾರರು ತನ್ನ ಚಿಕ್ಕಪ್ಪ ತೀರಿ ಹೋಗಿರುವುದರಿಂದ ಆ ಬಗ್ಗೆ ತಮಿಳುನಾಡಿಗೆ ಹೋಗಿ ದಿನಾಂಕ 09-07-2014 ರಂದು ಅಂಗಡಿಯ ಜಾಗಕ್ಕೆ ಬಂದು ನೋಡಿದಾಗ ಅಂಗಡಿ ಹಾಗೆ ಬಿದ್ದಿದ್ದು, ಅದನ್ನು ಶ್ರೀಮತಿ ದಮಯಂತಿಯವರು ರಿಪೇರಿ ಮಾಡಿಕೊಡದೇ ಇದ್ದುದಲ್ಲದೇ ಜಾತಿ ನಿಂದನೆಗೈದಿರುತ್ತಾರೆ.
No comments:
Post a Comment