Tuesday, July 22, 2014

Daily Crime Reports 22-07-2014

ದೈನಂದಿನ ಅಪರಾದ ವರದಿ.

ದಿನಾಂಕ 22.07.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು ಸೀತಾರಾಮ ಕೋಟ್ಯನ್ ಎಂಬವರು ಅವರ ಬಾಬ್ತು ಸ್ಯೆಕಲ್ಲ್ಲಿ ಕಾವೂರು ರಸ್ತೆ ಕಡೆಯಿಂದ ಕೂಳೂರು ಕಡೆಗೆ ಮಂಗಳೂರು ಸುರತ್ಕಲ್ ರಾ.ಹೆ.66 ಕ್ಕೆ ಬಂದು ಅಲ್ಲಿಂದ ಸುರತ್ಕಲ್ ಕಡೆಗೆ ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಕೆ..19.ಬಿ.9287 ನೇ ಖಾಸಗಿ ಬಸ್ಸಿನ ಚಾಲಕ ಜನಾರ್ಧನ್ ಎಂಬವರು ಸದ್ರಿ ಬಸ್ಸನ್ನು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೂಳೂರು ಜಂಕ್ಷನ್ ನಲ್ಲಿ ಸೀತಾರಾಮ ಕೋಟ್ಯಾನ್ ಹೋಗುತ್ತಿದ್ದ ಸೈಕಲ್ ಗೆ ಅಪರಾಹ್ನ 2.30 ಗಂಟೆಗೆ ಹಿಂದಿನಿಂದ ಡಿಕ್ಕಿ ಉಂಟು ಮಾಡಿದ್ದು ಇದರ ಪರಿಣಮ ಸೀತಾರಾಮ ಕೋಟ್ಯನ್ ರವರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಹಾಗೂ ಶರೀರಕ್ಕೆ ಗಂಭೀರ ಗಾಯಗೊಂಡ ವರನ್ನು ವೆನ್ಲಾಕ್ ಅಸ್ಪತ್ರೆ ಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಅಪರಾಹ್ನ 3.35 ಗಂಟೆಗೆ ಮೃತಪಟ್ಟರುವುದಾಗಿ ಅಫಘಾತಕ್ಕೆ ಬಸ್ಸಿನ ಚಾಲಕನ ಅಜಾಗರೂಕತೆಯ ಚಾಲನೇ ಕಾರಣವಾಗಿರುತ್ತದೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19.07.2014 ರಂದು  ಮೂಡಬಿದ್ರೆ ಸರಕಾರಿ  ಮಾದರಿ ಹಿರಿಯ  ಪ್ರಾಥಮಿಕ  ಶಾಲೆಯಲ್ಲಿ  8ನೇ ತರಗತಿಯಲ್ಲಿರುವ ವಿದ್ಯಾರ್ಥಿ ಹನುಮಂತ  ಎಂಬಾತನಿಗೆ ದೈಹಿಕ ಶಿಕ್ಷಕರಾದ ರಾಘವೇಂದ್ರ ರಾವ್ಎಂಬವರು "ನನ್ನ ಮೇಲೆ ಶಾಲೆಗೆ ಬಂದ ಬಿಇಓ  ರವರಿಗೆ ಚಾಡಿ  ಹೇಳಿದ್ದಿ" ಎಂದು  ಕೈಯಿಂದ ಕೆನ್ನೆಗೆ ಹೊಡೆದು  ಹಲ್ಲೆ ಮಾಡಿರುತ್ತಾರೆ. ಅಲ್ಲದೆ   ಹಿಂದೆಯು  ಸದ್ರಿಯವರ ವರ್ತನೆ ಸರಿಯಾಗಿರುವುದಿಲ್ಲ ಎಂದು ಪಿರ್ಯಾದಿದಾರರಾದ ಶಾಲೆಯ ಮುಖ್ಯೋಪದ್ಯಾಯರಾದ ಶ್ರೀ  ಜೆ ಅಪ್ಪಯ್ಯ  ನಾಯ್ಕ್ರವರು ಹಲವು  ಬಾರಿ  ತಿಳಿಸಿದ್ದರೂ, ಮಾತನ್ನು ಗಣನೆಗೆ ತೆಗೆದುಕೊಳ್ಳದೆ ವಿದ್ಯಾರ್ಧಿಗಳಿಗೆ ವಿನಾಃ  ಕಾರಣ  ಹಲ್ಲೆ ಮಾಡುತ್ತಾರೆ. ಈ ಬಗ್ಗೆ ಮೂಡಬಿದ್ರೆ ಠಾಣಾ NCR  No 460/14 ರಂತೆ ದಾಖಲಿಸಿದ್ದು, ದಿನಾಂಕ 21/07/2014  ರಂದು  ಮಾನ್ಯ  ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿದ್ದಾಗಿದೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು ಪಿರ್ಯಾದಿದಾರರಾದ ಶ್ರೀ ವರುಣ ಪಿ. ರವರು ಮಂಗಳೂರು  ರೈಲ್ವೆ  ಜಂಕ್ಷನ್  ನಿಂದ ಆಟೋರಿಕ್ಷಾವೊಂದರಲ್ಲಿ, ಮಂಗಳೂರು ಸೆಂಟ್ರಲ್ ರೈಲ್ಚೆ ನಿಲ್ದಾಣಕ್ಕೆ ಹೊರಟು, ಸಂಜೆ 5-00 ಗಂಟೆಯ ವೇಳೆಗೆ ಮಂಗಳೂರು ಕರುಣಾ ಲಾಡ್ಜ್ ಬಳಿ ಇಳಿದಾಗ, ಅಲ್ಲೇ ಇದ್ದ ಅಪರಿಚಿತ ಮೂವರು ವ್ಯಕ್ತಿಗಳು ಪಿರ್ಯಾದಿದಾರರ ಬಳಿಗೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವರುಗಳ ಪೈಕಿ ಓರ್ವನು ಹಿಂದಿ ಭಾಷೆಯಲ್ಲಿ 'ಲಡ್ಕಿ ಚಾಯಿಯೇ ಕ್ಯಾ' ಎಂದು ಕೇಳಿದನು. ಕೂಡಲೇ ಪಿರ್ಯಾದಿದಾರರು ನಹಿ ಚಾಯಿಯೇ ಎಂದು ಹೇಳಿದಾಗ, ಇನ್ನೋರ್ವ ಅಪರಿಚಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಅದೇ ವೇಳೆಗೆ ಜತೆಗಿದ್ದ ಇನ್ನೋರ್ವ ಅಪರಿಚಿತನು 'ಮಾರೋ ಸಾಲೆಕೊ' ಎಂದು ಹಿಂದಿಯಲ್ಲಿ ಹೇಳಿ, ಆತನೇ ಅಲ್ಲೇ ಬಿದ್ದಿದ್ದ ಮರದ ರೀಪಿನಿಂದ ಬಲವಾಗಿ ಪಿರ್ಯಾದಿಯ ಬೆನ್ನಿಗೆ ನಿರಾಂತರವಾಗಿ ಹೊಡೆದಿದ್ದು, ಇನ್ನೋರ್ವನು ಇನ್ನೊಂದು ರೀಪಿನಿಂದ ಪಿರ್ಯಾದಿಯ ಬಲ ಕೈಯ ಭುಜದ ಕೆಳಭಾಗಕ್ಕೆ ಬಲವಾಗಿ ಹೊಡೆದಿದ್ದು, ಹೊಡೆತದ ಪರಿಣಾಮ ಪಿರ್ಯಾದಿದಾರರ ಬೆನ್ನ ಮೇಲೆ ಸುತ್ತಲೂ ಹಾಗೂ ಕೈಗಳ ಭಾಗದಲ್ಲಿ ತೀವ್ರವಾಗಿ ರಕ್ತ ಹೆಪ್ಪು ಗಟ್ಟಿದ ಗಾಯವಾಗಿರುತ್ತದೆ. ಇನ್ನೋರ್ವನು ಕೈಗಳಿಂದ ಪಿರ್ಯಾದಿದಾರರ ತಲೆಯ ಭಾಗಕ್ಕೆ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿರುತ್ತಾನೆ. ಇದರಿಂದ ಕುತ್ತಿಗೆಯ ಭಾಗಕ್ಕೆ, ಕೆಳ ತುಟಿಯ ಬಳಿ ರಕ್ತ ಹೆಪ್ಪು ಗಟ್ಟಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಗಳ ಪೈಕಿ ಓರ್ವನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಮರದ ರೀಪನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-07-2014 ರಂದು 19-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಸುರತ್ಕಲ್ ಠಾಣಾ ಸರಹದ್ದಿನ ಸುರತ್ಕಲ್ ಶಾರದಾ ಕಲ್ಯಾಣ ಮಂಟಪದ ಕಂಪೌಂಡ್ ಒಳಗಡೆಯಲ್ಲಿರುವ ಶಾರದಾ ರಿಕ್ರೆಯೇಷನ್ ಅಸೋಸಿಯೇಶನ್ ಎಂಬ ಕಟ್ಟಡದ ಒಳಗೆ ಪ್ರಕಾಶ್ ಸುವರ್ಣ, ಹರೀಶ್ ಬಿ. ಅಡಿಯಾರ್, ರವಿ, ದೇವೇಂದ್ರ ಎಂಬವರು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಜೂಜಿನ ಆಟವನ್ನು ಆಡುತ್ತಿರುವುದಾಗಿ ಮಾಹಿತಿ ಆದಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೈಟೈನ್ ಡಿ'ಸೋಜಾ ರವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ,  ಆಟ ವಾಡುತ್ತಿರುವ 4 ಜನ ಆರೋಪಿಗಳನ್ನು , ರೂ 4284/- ನಗದು ಹಣ ಜುಗಾರಿ ಆಟಕ್ಕೆ ಉಪಯೋಗಿಸಿರುವ 52 ಇಸ್ಪೀಟ್ ಎಲೆ ಹಾಗೂ ರೆಕ್ಸಿನ್ ನ್ನು ವಶಕ್ಕೆ ಪಡೆದು ಸೂಕ್ತ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವುದಾಗಿದೆ.

No comments:

Post a Comment