ದಿನಾಂಕ 15-07-2014 ರಂದು 13:30 ಗಂಟೆಗೆ ಪಿರ್ಯಾಧಿದಾರರಾದ ಮಧು ಆಚಾರ್ಯ ವಾಸ: ಮನೆ ನಂಬ್ರ 18/22, ಅಂಬಿಕಾ, ಗೇರುಕಟ್ಟೆ, ಕಾರ್ನಾಡು ಗ್ರಾಮ, ಮುಲ್ಕಿ, ಎಂಬವರು ಮುಲ್ಕಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶವೇನೆಂದರೆ, ಪಿರ್ಯಾದಿದಾರರು ಕಳೆದ ಡಿಸೆಂಬರ್ ತಿಂಗಳ 1 ನೇ ವಾರದಲ್ಲಿ ಸಂಬಂಧಿಕರ ಮನೆಗೆ ಹೋಗುವಾಗ ತನ್ನ ಮಗಳಿಗೆ ಹಾಕಿದ ಬಂಗಾರವನ್ನು ಪೆಟ್ಟಿಗೆಯಲ್ಲಿಟ್ಟು ಮನೆಯ ಕಾರಿನ ಕೀ ಇಡುವ ಬಳಿಯ ಶೋಕೇಶ್ ನಲ್ಲಿಟ್ಟಿದ್ದು, ನಂತರ ಆ ಪೆಟ್ಟಿಗೆಯಿಂದ ಬಂಗಾರವನ್ನು ತೆಗೆಯದೆ. ಈ ದಿನ ತಾರೀಖು 15-07-2014 ರಂದು ಬೆಳಿಗ್ಗೆ 07:30 ರ ವೇಳೆ ಪಿರ್ಯಾದಿದಾರರು ತನ್ನ ಹೆಂಡತಿ ಸ್ಮಿತಾ ಎಂ ಆಚಾರ್ಯ ಹಾಗೂ ಮಗಳು ಅಂಬಿಕಾ ಎಂ ಆಚಾರ್ಯ ಎಂಬವರೊಂದಿಗೆ ಪಡಬಿದ್ರೆ ಗಣಪತಿ ದೇವಸ್ಥಾನಕ್ಕೆಂದು ಹೊರಟಿದ್ದ ಸಮಯ ಮಗಳಿಗೆ ಬಂಗಾರ ಹಾಕುವರೇ ಬಂಗಾರ ಹಾಕುವ ಪೆಟ್ಟಿಗೆಯನ್ನು ತೆರದು ನೋಡಿದಾಗ ಪೆಟ್ಟಿಗೆಯಲ್ಲಿ ಇಟ್ಟಿದ್ದ 1) ಸುಮಾರು 12 ಗ್ರಾಂ ತೂಕದ ಬಂಗಾರದ ನೆಕ್ಲೇಸ್ -1 , ಇದರ ಅಂದಾಜು ಮೌಲ್ಯ ರೂ 36,000.00/- 2) ಸುಮಾರು 24 ಗ್ರಾಂ ತೂಕದ ಬಂಗಾರದ ಮುಷ್ಠಿ ಹವಳದ ಚೈನ್ -1, ಇದರ ಅಂದಾಜು ಮೌಲ್ಯ ರೂ 72.000.00/- 3) ಸುಮಾರು 14 ಗ್ರಾಂ ತೂಕದ ಅಗಲದ ಡಿಸೈನ್ ನ ಬಂಗಾರದ ಬಳೆ -2 , ಇದರ ಅಂದಾಜು ಮೌಲ್ಯ ರೂ 42.000.00/- 4) ಸುಮಾರು 8 ಗ್ರಾಂ ತೂಕದ ಲಕ್ಷ್ಮೀ ಡಿಸೈನ್ ನ ಬಂಗಾರದ ಕಿವಿಯೊಲೆ -1 ಜೊತೆ, ಇದರ ಅಂದಾಜು ಮೌಲ್ಯ ರೂ 24.000.00/- 5) ಸುಮಾರು 4 ಗ್ರಾಂ ತೂಕದ ಬಂಗಾರದ ಹರಳಿನ ಕೈ ಉಂಗುರ -1, ಇದರ ಅಂದಾಜು ಮೌಲ್ಯ ರೂ 12.000.00/- 6) ಸುಮಾರು 12 ಗ್ರಾಂ ತೂಕದ ಹರಳಿನ ನೆಕ್ಲೇಸ್-1 ಇದರ ಅಂದಾಜು ಮೌಲ್ಯ ರೂ 36,0000/- ಬಂಗಾರದ ಆಭರಣಗಳು ಕಳವಾಗಿದ್ದು, ಕಳವಾದ ಬಂಗಾರದ ಆಭರಣಗಳ ಒಟ್ಟು ತೂಕ – 74 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ ರೂ 2,22000/- ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರ ಕಾರು ಚಾಲಕ ಕೆಲಸ ವಿಶ್ವಾಸ್ ನ ಮೇಲೆ ಸಂಶಯವಿರುವುದಾಗಿ ಎಂಬಿತ್ಯಾದಿದ್ದು ಇದರಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 135/2014 ಕಲಂ 381 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ದಿನಾಂಕ 16-07-2014 ರಂದು 13.00 ಗಂಟೆಗೆ ಈ ಪ್ರಕರಣದ ಆರೋಪಿ ವಿಶ್ವಾಸ್ @ ವಿಶ್ವ ಪ್ರಾಯ 25 ವರ್ಷ, ತಂದೆ: ಶೇಖರ್ ಕೋಟ್ಯಾನ್, ವಾಸ: C/O ರಾಜು ಪೂಜಾರಿ, ಮಹಾಕಾಳಿ ದೈವಸ್ಥಾನದ ಬಳಿ, ದೇರೆಬೈಲು ಗ್ರಾಮ, ಕೊಂಚಾಡಿ ಮಂಗಳೂರು ತಾಲೂಕು, ಸ್ವಂತ ವಿಳಾಸ: ಶ್ರೀನಿವಾಸ ನಿಲಯ, ಶೀನಪ್ಪ ಕೌಂಪೌಂಡ್, ಕೊಡಿಯಾಲ್ ಬೈಲು ವೆಸ್ಟ್ ರೋಡ್ ಮಂಗಳೂರು -3 ಎಂಬಾತನನ್ನು ಪಡುಪಣಂಬೂರು ಪೆಟ್ರೋಲ್ ಪಂಪ್ ಬಳಿ ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದು ಆತನು ನೀಡಿದ ಸ್ವ ಇಚ್ಚಾ ಹೇಳಿಕೆಯಂತೆ ಆರೋಪಿಯು ವಿವಿಧ ಕಡೆ ಗಿರವಿ ಇಟ್ಟಿದ್ದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಅರೋಪಿಯಿಂದ ಸ್ವಾಧೀನ ಪಡಿಸಿಕೊಂಡ 74 ಗ್ರಾಂ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 2,22,000/- ಆಗಿರುತ್ತದೆ.
ಸದ್ರಿ ಕಾಯಾಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಅಯುಕ್ತರಾದ ಶ್ರೀ ಹಿತೇಂದ್ರ ಆರ್ ರವರ ಮಾರ್ಗದರ್ಶನದಂತೆ ಶ್ರೀ ಡಾ.ಕೆ.ವಿ ಜಗದೀಶ್, ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು ಶ್ರೀ ವಿಷ್ಣುವರ್ಧನ್, ಉಪ ಪೊಲೀಸ್ ಆಯುಕ್ತರು (ಅ.ಮತ್ತು ಸಂಚಾರ) ರವರ ನಿರ್ಧೇಶನದಂತೆ ಶ್ರೀ ರವಿಕುಮಾರ್, ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಪಿ.ಎಸ್.ಐ ಪರಮೇಶ್ವರ, ಎ.ಎಸ್.ಐ, ವಾಮನ ಸಾಲ್ಯಾನ್, ಮತ್ತು ಸಿಬ್ಬಂದಿಗಳಾದ ಕಾಂತಪ್ಪ, ವಿಜಯ ಕಾಂಚನ್, ಉಮೇಶ್, ಹರಿಶೇಖರ್, ಜಯರಾಮ, ಮತ್ತು ಜೀಪು ಚಾಲಕ ಮೋಹನ್ ರವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
No comments:
Post a Comment