Wednesday, July 30, 2014

Daily Crime Reports 30-07-2014

ದೈನಂದಿನ ಅಪರಾದ ವರದಿ.

ದಿನಾಂಕ 30.07.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-07-2014 ರಂದು ಸಂಜೆ 5:15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ ರವರು ಮುಡಿಪು ಎಂಬಲ್ಲಿ ಇರಾ ಕಡೆಗೆ ಹೋಗುವ ರಸ್ತೆಯ ಜಂಕ್ಷನ್ ಬದಿಯಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ, ಬಾಕ್ರಬೈಲ್ ಕಡೆಯಿಂದ ಬಂದ ಮೋಟಾರ್ ಸೈಕಲ್ಗೆ, ಮುಡಿಪು ಕಡೆಯಿಂದ ಮೋಟಾರ್ ಸೈಕಲ್ ನಂಬ್ರ ಕೆಎ-19-ಯು-3966 ನೇದನ್ನು ಅದರ ಸವಾರ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು, ಮುಂದಕ್ಕೆ ಬಂದು, ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಹಣೆಗೆ, ಬಲ ಕೋಲು ಕೈಗೆ, ಬಲಕಾಲ ಮಂಡಿಯ ಕೆಳಗೆ ರಕ್ತ ಗಾಯವಾಗಿರುತ್ತದೆ ಹಾಗೂ ಬೈಕ್ನಲ್ಲಿದ್ದ ವ್ಯಕ್ತಿಗೆ ಹಾಗೂ ಸವಾರಳಾದ ಹುಡುಗಿಗೆ ಕೂಡಾ ಪೆಟ್ಟಾಗಿರುತ್ತದೆ. ಅಪಘಾತವುಂಟು ಮಾಡಿದ ಮೋಟಾರ್ ಸೈಕಲ್ ಸವಾರ ಬೈಕನ್ನು ಬಿಟ್ಟು ಓಡಿ ಹೋಗಿ ಪರಾರಿಯಾಗಿರುತ್ತಾನೆ.  

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-07-2014 ರಂದು ಮಂಗಳೂರು ತಾಲೂಕು ಕರಿಂಜೆ ಗ್ರಾಮದ ಪಂಜಿಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಕ್ರಿಸ್ಟಿನ್ ಪಿಂಟೊ ರವರು ತನ್ನ ಸೊಸೆ ಅವಿತಾ ಮೆನೆಜಸ್ರೊಂದಿಗೆ ಮನೆಯಲ್ಲಿದ್ದ ಸಮಯ ಸುಮಾರು ಸಂಜೆ ಸುಮಾರು 6.45  ಗಂಟೆಗೆ ಆರೋಪಿ ಪಿರ್ಯಾದಿದಾರರ ಗಂಡ ಇಜಿದೋರ್ಪಿಂಟೋ ದಿನಾಂಕ 28-07-2014 ರಂದು ಮನೆಯಿಂದ ಗಲಾಟೆ ಮಾಡಿ ಹೋಗಿದ್ದವರು ವಾಪಾಸು ಮನೆಗೆ ಬಂದು ಪಿರ್ಯಾದಿದಾರರನ್ನು ಹಾಗೂ ಸೊಸೆ ಅವಿತಾ ಪಿಂಟೋರವರನ್ನು ಹೊರಗೆ ಹೋಗದಂತೆ ತಡೆದು ನಿಲ್ಲಿಸಿ "ನೀವು ಮನೆಯಲ್ಲಿ ದೊಡ್ಡ ಜನರ" ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪಿರ್ಯಾದಿಗೆ ಹಾಗೂ  ಸೊಸೆ ಅವಿತಾ ಮೆನೆಜಸ್ರವರಿಗೆ ಹೊಡೆದು ನೋವುಂಟು ಮಾಡಿರುತ್ತಾರೆ ಅಲ್ಲದೇ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ. ಎಂದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರಟು ಹೋಗಿರುತ್ತಾರೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-07-2014 ರಂದು ಬೆಳಿಗ್ಗೆ 11-30 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಚಕ್ ಪೋಸ್ಟ್ ಸಮೀಪ, ಮಂಗಳೂರು ಕಡೆಯಿಂದ ಕೆಎ 19 ಸಿ 8995 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾ|ಯಿಸಿಕೊಂಡು ಹೋಗಿ, ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಜಮಾಲ್ ರವರ ಮಾವ ಮಹಮ್ಮದ್ ಜಾಕಿರ್ ಎಂಬವರು ಬಜಪೆ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಕೆಎ 19 ಕ್ಯೂ 9965 ನಂಬ್ರದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದ ಮಹಮ್ಮದ್ ಜಾಕೀರ್ ರವರ ತಲೆಯ ಮೇಲೆ ಟಿಪ್ಪರ್ ಲಾರಿಯ ಟಯರು ಹರಿದು ಹೋದುದರಿಂದ ಮಹಮ್ಮದ್ ಜಾಕೀರ್ ರವರು ತೀವ್ರ ತರಹದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.

No comments:

Post a Comment