ದೈನಂದಿನ ಅಪರಾದ ವರದಿ.
ದಿನಾಂಕ 02.07.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 3 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-06-2014 ರಂದು 18-30 ಗಂಟೆಗೆ ಫಿರ್ಯಾದುದಾರರಾದ ಹೇಮಾ ಕೆ. ರವರು ಅವರ ಅಕ್ಕನ ಮನೆಗೆ ಹೋಗಿ ದಿನಾಂಕ 30-06-2014 ರಂದು 18-30 ಗಂಟೆಗೆ ವಾಪಸ್ಸು ಮನೆ ಬಂದಾಗ ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯು ಮುರಿದಿದ್ದು ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಒಳಗೆ ಹೋಗಿ ನೋಡಿದಲ್ಲಿ ಮಲಗುವ ಕೋಣೆಯ ಕಪಾಟು ತೆರೆದುಕೊಂಡಿದ್ದು ಬಟ್ಟೆಗಳು ಚಲ್ಲಾಪಿಲ್ಲಿಯಾಗಿತ್ತು. ಹಾಗೂ ಇನ್ನೊಂದು ಕೋಣೆಯ ಒಳಗೆ ಹೋಗಿ ನೋಡಿದಾಗ ಅಲ್ಲಿಯ ಕಪಾಟಿನ ಬಾಗಿಲು ಕೂಡ ತೆರೆದುಕೊಂಡಿದ್ದು ಅದರ ಒಳಗಿದ್ದ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿ ಕಪಾಟಿನಲ್ಲಿಟ್ಟಿದ್ದ ಮೂರು ಸೀರೆ, ಸುಮಾರು 7 ಗ್ರಾಂ ತೂಕದ ಚಿನ್ನದ ಸರ ಮತ್ತು ಪ್ಲಾಸ್ಟಿಕ್ ಡಬ್ಬದಲ್ಲಿದ್ದ ಸುಮಾರು ರೂ.3,000/- ಚಿಲ್ಲರೆ ಹಣ ಕಳವು ಮಾಡಿಕೊಂಡು ಹೋಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-06-2014 ರಂದು ರಂದು ಸಂಜೆ 7-15 ಗಂಟೆಗೆ ಎ.ಜೆ ಆಸ್ಪತ್ರೆಯ ಬಳಿಯ ಫೈಯರ್ ಸರ್ವೀಸ್ ಎದುರು ಚತುಷ್ಪಥ ರಸ್ತೆಯನ್ನು ದಾಟುವರೇ ಪಿರ್ಯಾದುದಾರರಾದ ಶ್ರೀ ಬಾಬು ಮೂಲ್ಯ ರವರು ಒಂದು ಬದಿಯ ರಸ್ತೆ ದಾಟಿ ಡಿವೈಡರ್ ದಾಟಿ ಇನ್ನೊಂದು ಬದಿಯ ರಸ್ತೆಯನ್ನು ದಾಟುವರೇ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಕೆಎ-19-ಕೆ-9302 ನಂಬ್ರದ ಬೈಕ್ ನ್ನು ಅದರ ಸವಾರ ದೀಪಕ್ ಎಂ. ಶೆಟ್ಟಿ ಎಂಬಾತನು ಕೆ.ಪಿ.ಟಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ತಲೆಯ ಹಿಂಭಾಗ, ಬೆನ್ನಿಗೆ, ಬಲಕೈಗೆ ರಕ್ತಗಾಯವಾಗಿದ್ದು, ಹಾಗೂ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಹಾಗೂ ಆರೋಪಿ ದೀಪಕ್ ಎಂ. ಶೆಟ್ಟಿ ಎಂಬಾತನಿಗೂ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-06-2014 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಮಂಗಳೂರು ನಗರದ ಕೊಲಾಸೋ ಆಸ್ಪತ್ರೆಯ ಎದುರುಗಡೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದುದಾರರಾದ ಶ್ರೀ ಧೀರಜ್ ಕೆ.ಜೆ. ರವರ ಎದುರುಗಡೆಯಿಂದ ಸಿಮೆಂಟ್ ಮಿಕ್ಸ್ ರ್ ವಾಹನ ನಂ. ಕೆಎ-19ಡಿ-2631 ನೇದರ ಚಾಲಕನು ಅತೀವೇಗ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಭಾಗದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಢಿಕ್ಕಿ ಮಾಡಿರುವುದಾಗಿದೆ. ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದು, ಅವರನ್ನು ಸದ್ರಿ ವಾಹನದ ಚಾಲಕ ಕೊಲಾಸೋ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸಾವೆಚ್ಚವನ್ನು ನೀಡುವುದಾಗಿ ತಿಳಿಸಿರುತ್ತಾನೆ. ಆದರೆ ಈಗ ಚಿಕಿತ್ಸಾ ವೆಚ್ಚವನ್ನು ನೀಡಲು ನಿರಾಕರಿಸಿದ್ದು, ದಿನಾಂಕ 01-07-2014 ರಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ವಿಳಂಬವಾಗಿ ದೂರು ನೀಡಿರುವುದಾಗಿದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30/06/2014 ರಂದು ರಾತ್ರಿ ಸುಮಾರು 10:45 ಗಂಟೆಗೆ ನವಿನ್ ರಾಜಕ್ ಏಂಬುವರು ಬೈಕ್ ನಂಬ್ರ KA-20-Q-7767 ರಲ್ಲಿ ಸವಾರರಾಗಿ ಕುಲಶೆಖರ ಕಡೆಯಿಂದ ನಂತೂರು ಕಡೆಗೆ ಬರುತ್ತ ಬಿಕರ್ನಕಟ್ಟೆ ಜಯಶ್ರಿ ಗೆಟ್ ಬಳಿ ಬಾಲ ಯೇಸುವಿನ ಬಳಿ ತಲುಪಿದಾಗ ನಂತೂರು ಕಡೆಯಿಂದ ಕಾರು ನಂಬ್ರ KA-03-MB-8994 ನಲ್ಲಿ ಅದರ ಚಾಲಕ ಬಾಲಯೇಸು ಮಂದಿರದ ಎದುರು ರಸ್ತೆ ವಿಭಾಜಕ ತೇರವು ಇರುವ ಜಾಗದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಒಮ್ಮೆಲೆ ಬಲಕ್ಕೆ ತಿರುಗಿಸಿದ ಪರಿಣಾಮ ನವಿನ್ ರಾಜ್ ಸವಾರಿ ಮಾಡಿಕೊಂಡು ಹೊಗುತ್ತಿದ್ದ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಗುದ್ದಿದ ಗಾಯವಾಗಿ ಮೂಳೆ ಮುರಿತವಾಗಿ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
5.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-06-2014 ರಂದು ಸಂಜೆ 18-00 ಗಂಟೆಗೆ ಮಂಗಳೂರು ತಾಲೂಕು ಪಂಜಿಮೊಗರು ಎಂಬಲ್ಲಿನ ಪಿರ್ಯಾದುದಾರರಾದ ಶ್ರೀ ಅಬ್ದುಲ್ ಖಾದರ್ ರವರ ಮನೆಯಿಂದ ಕಾಲೇಜು ಮುಗಿಸಿ ಮನೆಗೆ ಬಂದ ಮೊಹಿದ್ದೀನ್ ಅರ್ಪು (20) ರವರು ತನ್ನ ತಾಯಿ ಸ್ನಾನಕ್ಕೆಂದು ಹೋಗಿದ್ದ ಸಮಯ ಮನೆಯಲ್ಲಿ ಹೇಳದೇ ಮನೆಬಿಟ್ಟು ಹೋಗಿ ಕಾಣೆಯಾಗಿದ್ದು ಇದುವರೆಗೆ ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದವರ ಚಹರೆ:- ಮೊಹಿದ್ದೀನ್ ಅರ್ಪು, ಪ್ರಾಯ 20 ವರ್ಷ, ತಂದೆ-ಅಬ್ದುಲ್ ಖಾದರ್, ಗೋದಿ ಮೈ ಬಣ್ಣ, ಖಾಕಿ ಬಣ್ಣದ ಪ್ಯಾಂಟ್, ಮತ್ತು ಉದ್ದ ತೋಳಿನ ಶರ್ಟ್, ಎತ್ತರ-5, ಅಡಿ 9, ಇಂಚು,ದೃಢಕಾಯ ಶರೀರ, ತಲೆ ಕೂದಲು ಮೇಲಕ್ಕೆ ಬಾಚುತ್ತಾನೆ, ಕನ್ನಡ, ಇಂಗ್ಲೀಷ್ ಹಿಂದಿ, ಮಲಯಾಳ, ತುಳು ಭಾಷೆ ಮಾತಾನಾಡುತ್ತಾನೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-06-2014 ರಂದು 22-00 ಗಂಟೆಯಿಂದ ದಿನಾಂಕ 01-07-2014 ರಂದು ಬೆಳಿಗ್ಗೆ 09-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ PREMLIN ಎಂಬ ಹೆಸರಿನ 24/8/811 ಡೋರ್ ನಂಬ್ರದ ಮನೆಯ ಕಂಪೌಂಡಿನ ಹೊರಗಡೆ ರಸ್ತೆ ಬದಿಯಲ್ಲಿ ಪಿರ್ಯಾದಿದಾರರಾದ ಶ್ರೀ ಹರ್ಷಾ ಎಸ್.ಎಂ. ರವರು ಪಾರ್ಕ್ ಮಾಡಿದ್ದ ಪಿರ್ಯಾದಿದಾರರು ಉಪಯೋಗಿಸುತ್ತಿದ್ದ ಅವರು ಕೆಲಸ ಮಾಡುತ್ತಿರುವ ಅಶೋಕ್ ಲೈಲಾಂಡ್ ಕಂಪನಿಯಗೆ ಸಂಬಂಧಿಸಿದ 2004ನೇ ಮೊಡಲ್ ನ ಸಿಲ್ವರ್ ಬಣ್ಣದ ಅಂದಾಜು ರೂಪಾಯಿ 197340/- ಬೆಲೆ ಬಾಳುವ KA 04 MA 7622 ನೇ ನೊಂದಣಿ ಸಂಖ್ಯೆಯ ಮಹೇಂದ್ರ ಕಂಪನಿಯ ಬೊಲೆರೋ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ವಾಹನದ ಡ್ಯಾಶ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಿಸಿದ ಆರ್. ಸಿ. ಮತ್ತು ಇನ್ಸೂರೆನ್ಸ್ ನ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-06-14 ರಂದು ರಾತ್ರಿ ಸುಮಾರು 11-00 ಗಂಟೆಯಿಂದ ದಿನಾಂಕ: 01-07-14 ರಂದು ಬೆಳಿಗ್ಗೆ 05-03 ಗಂಟೆಯ ಮಧ್ಯದ ಅವಧಿಯಲ್ಲಿ ಮದ್ಯಪದವು ಎಂಬಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ರಾಜ್ ಕುಲಾಲ್ ರವರ ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳಗಡೆ ಬಂದು ಪಿರ್ಯಾದಿದಾರರ ಮಗಳಾದ ರಂಜಿತಾ ಎಂಬಾಕೆಯು ಮಲಗಿದ್ದ ಕೋಣೆಯ ಕಬ್ಬಿಣದ ಕಪಾಟಿನೊಳಗಿದ್ದ ನಗದು ಹಣ ರೂ.23,000/- ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-06-2014 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ 01-07-2014 ರ ಬೆಳಿಗ್ಗೆ 05-45 ಗಂಟೆ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಲಕ್ಷ್ಮೀಶ ಎಂ. ಅಂಚನ್ ರವರ ಮನೆಯ ಹಿಂಬದಿ ಬಾಗಿಲ ಮುಖೇನಾ ಒಳ ಪ್ರವೇಶಿಸಿ ಪಿರ್ಯಾದಿದಾರರ ಕೋಣೆಯೊಳಗಿದ್ದ ಕಪಾಟಿನೊಳಗಡೆ ಇಟ್ಟಿದ್ದ ಪಿರ್ಯಾದಿ ಹೆಂಡತಿ ಬಾಬ್ತು ಬ್ಯಾಗಿನೊಳಗಡೆಯಿಂದ 12000/- ರೂ ನಗದು ಹಣ ಹಾಗೂ ಪಿರ್ಯಾದಿಯ ಅಂಗಿ ಕಿಸೆಯಲ್ಲಿದ್ದ 1000/- ರೂ ನಗದು ಹಣ ಹಾಗೂ ಕಾರ್ಪೋರೇಶನ್ ಬ್ಯಾಂಕಿನ ATM ಕಾರ್ಡ್ ಒಟ್ಟು ರೂ 13000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-06-2014 ರಂದು ಪಿರ್ಯಾದಿದಾರರಾದ ಶ್ರೀ ಮುಹಮ್ಮದ್ ರಿಯಾಜ್ ರವರು ಸಂಜೆ ಕಲ್ಲಾಪು ಬಳಿಯ ನೇತ್ರಾವತಿ ಹೊಳೆಗೆ ಮೀನು ಹಿಡಿಯಲು ತನ್ನ ಬಾಬ್ತು ಬೈಕ್ ನಂಬ್ರ KA-19-EE-9688 ನೇದರಲ್ಲಿ ಹೋಗಿ ಸಂಜೆ ಸುಮಾರು 5:00 ಗಂಟೆಗೆ ಬೈಕನ್ನು ಹೊಳೆಯ ಮೇಲ್ಭಾಗದ ಮಣ್ಣು ರಸ್ತೆಯಲ್ಲಿ ಪಾರ್ಕ್ ಮಾಡಿ ಲಾಕ್ ಹಾಕಿ ಹೋಗಿ ವಾಪಾಸು ಸಂಜೆ 6:30 ಗಂಟೆಗೆ ಬಂದು ನೋಡಿದಾಗ ಬೈಕ್ ಕಾಣಿಸದೆ ಇದ್ದು, ಬೈಕಿನ ಕುರಿತು ಹತ್ತಿರದವರಲ್ಲಿ ವಿಚಾರಿಸಿದ್ದರೂ ಸಿಕ್ಕಿರುವುದಿಲ್ಲ. ಸದ್ರಿ ಬೈಕನ್ನು ಯಾರಾದರೂ ಸ್ನೇಹಿತರು ತೆಗೆದುಕೊಂಡು ಹೋಗಿರಬಹುದೆಂದು ಭಾವಿಸಿ ಇಲ್ಲಿಯ ತನಕ ವಿಚಾರಿಸಿದರೂ ಸಿಗದ ಕಾರಣ ದೂರು ನೀಡಲು ತಡವಾಗಿದ್ದು, ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೈಕಿನ ಅಂದಾಜು ಮೌಲ್ಯ ರೂ. 30,000/- ಆಗಬಹುದು. ಮೋಟಾರು ಸೈಕಲಿನ ಚಾಸೀಸ್ ನಂಬ್ರ MD2DHDHZZUCL04517 ಮತ್ತು ಇಂಜಿನ್ ನಂಬ್ರ DHGBUL04517 ಆಗಿರುತ್ತದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-06-2014 ರಂದು ರಾತ್ರಿ 9-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ರಾಜೇಶ್ ಪುತ್ರನ್ ರವರು ತನ್ನ ಬಾಬ್ತು ಬೈಕಿನಲ್ಲಿ ಮಂಗಳೂರಿನಿಂದ ಸವಾರಿ ಮಾಡಿಕೊಂಡು ಬರುತ್ತಾ, ಮಂಗಳೂರು ತಾಲುಕು ಜಪ್ಪಿನಮೊಗರು ಗ್ರಾಮದ ನೇತ್ರಾವತಿ ಸೇತುವೆ ದಾಟುವಷ್ಟರಲ್ಲಿ ಅವರ ಹಿಂದಿನಿಂದ ಕೆಎ 19 ಎಎ 4964 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನಿಂದ ಚಾಲಾಯಿಸಿಕೊಂಡು ಬಂದು, ಪಿರ್ಯಾದುದಾರರ ಬೈಕ್‌ನ್ನು ಓವರ್ ಟೇಕ್ ಮಾಡಿ ಎದುರುಗಡೆಯಿಂದ ಹೋಗುತ್ತಿದ್ದ ಕೆಎ 19 ಇಕೆ 5486 ನೇ ನಂಬ್ರದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದುದರಿಂದ ದ್ವಿಚಕ್ರವಾಹನ ಸಮೇತ ಅದರ ಸವಾರ ಶಮಂತ್ ರಸ್ತೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಗೊಂಡ ಶಮಂತ್ರವರನ್ನು ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.06.2014 ರಂದು ರಾತ್ರಿ ಫಿರ್ಯಾದಿದಾರರಾದ ಶ್ರೀಮತಿ ಶರ್ಮಿಳಾ ರವರು ತನ್ನ ತವರು ಮನೆಯಾದ ಅಳಪೆ ಗ್ರಾಮದ ಗಾಣದಬೆಟ್ಟು ಮನೆಯಲ್ಲಿರುವಾಗ ಫಿರ್ಯಾದಿದಾರರ ತಮ್ಮ ಶರತ್ ಎಂಬಾತನು ರಾತ್ರಿ 11:30 ಗಂಟೆಗೆ ಮನೆಗೆ ಬಂದು ಫಿರ್ಯಾದಿದಾರರಿಗೆ ನೀನು ತವರು ಮನೆಯಲ್ಲಿ ನಿಲ್ಲುವುದು ಯಾಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಗುದ್ದಿ, ಕಾಲಿನಿಂದ ಎದೆಗೆ ತುಳಿದು, ಕುತ್ತಿಗೆಯನ್ನು ತಿರುಚಿ, ಕೂದಲನ್ನು ಹಿಡಿದು ತಲೆಯನ್ನು ಗೋಡೆಗೆ ಬಡಿದು, ಕೈಯನ್ನು ತಿರುಚಿ ಭುಜಕ್ಕೆ ಗುದ್ದಿ ತೀವ್ರ ಸ್ವರೂಪದ ಗುದ್ದಿದ ಗಾಯ ಮತ್ತು ಒಳ ಜಖಂ ಆಗುವಂತೆ ಹಲ್ಲೆ ಮಾಡಿದ್ದಲ್ಲದೆ, ನೀನು ಬೆಳಿಗ್ಗೆ ಒಳಗೆ ಮನೆ ಬಿಟ್ಟು ಹೋಗದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ಈ ಘಟನೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡ ಫಿರ್ಯಾದಿದಾರರು ಮಂಗಳೂರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.
No comments:
Post a Comment