ದೈನಂದಿನ ಅಪರಾದ ವರದಿ.
ದಿನಾಂಕ 17.07.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 16.07.2014 ರಂದು ಪಿರ್ಯಾದಿದಾರರಾದ ಶ್ರೀ ಹರೀಶ್ ಪೂಜಾರಿ ರವರು ತನ್ನ ಬಾಬ್ತು ಆಟೋರಿಕ್ಷಾವನ್ನು ಮಂಗಳೂರು ನಗರದ ಕೆ ಎಸ್ ಆರ್ ಟಿ ಸಿ ಕಡೆಯಿಂದ ಪಿ ವಿ ಎಸ್ ಕಡೆ ಚಲಾಯಿಸಿಕೊಂಡು ಬರುತ್ತಾ ಸಮಯ ರಾತ್ರಿ 21.40 ಗಂಟೆಗೆ ಮಂಗಳೂರು ನಗರದ ಮಾನಸ ಟವರ್ ಬಳಿ ತಲುಪಿದಾಗ ಒಬ್ಬ ವ್ಯಕ್ತಿಯು ರಸ್ತೆ ಮಧ್ಯೆ ಬಿದ್ದಿದ್ದು ಕೆಲವು ಜನರು ಸೇರಿದ್ದು ಅವರಲ್ಲಿ ವಿಚಾರಿಸಿದಾಗ ಪಿ ವಿ ಎಸ್ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ನಂಬ್ರ ತಿಳಿಯದಸಿ ಬಿ ಆರ್ ಮೋಟಾರು ಸೈಕಲನ್ನು ಅದರ ಸವಾರರ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುವರೇ ಎಂದು ಮಾನಸ ಟವರ್ ಎದುರು ರಸ್ತೆಯ ಮಧ್ಯ ಅಳವಡಿಸಿರುವ ಕೋನ್ ಬಳಿ ನಿಂತುಕೊಂಡಿದ್ದ ರಾಮ @ ರಮೇಶ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಮುಖಕ್ಕೆ ಮತ್ತು ತಲೆಗೆ ಗಂಭೀರ ತರಹದ ಗಾಯವಾದವರನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಯೆನೊಪಯ್ಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಅಪಘಾತ ಘಟಿಸಿದ ಬಳಿಕ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ.
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-07-14 ರಂದು ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ರವರಿಗೆ ಬಂದ ಮಾಹಿತಿಯಂತೆ 15.35 ಗಂಟೆ ಸಮಯಕ್ಕೆ ಮೂಡಬಿದ್ರೆ ಠಾಣಾ ಸರಹದ್ದಿನ ಕಲ್ಲಬೆಟ್ಟು ಗ್ರಾಮದ ನೀರಳಿಕೆ ಹಿತ್ಲುಕೆರೆ ಎಂಬಲ್ಲಿನ ಕಾಡಿಲ್ಲಿ ಕೆಲವು ಜನ ಸೇರಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜೂಜಾಟ ಆಡುತ್ತಿದ್ದಾರೆಂದು ಸಿಕ್ಕಿದ ಮಾಹಿತಿ ಮೇರೆಗೆ ಸದ್ರಿ ಜೂಜಾಟಕ್ಕೆ ದಾಳಿ ಮಾಡುವ ಸಲುವಾಗಿ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ 19-ಜಿ-541 ರಲ್ಲಿ ಹಾಗೂ ಪಂಚರೊಂದಿಗೆ ಕಲ್ಲಬೆಟ್ಟು ಗ್ರಾಮದ ನೀರಳಿಕೆ ಹಿತ್ಲುಕೆರೆ ಸ್ಥಳದ ಬಳಿ ಹೋಗಿ ದೂರದಲ್ಲಿ ನಿಂತು ನೋಡುವಾಗ ಕಲ್ಲಬೆಟ್ಟು ಗ್ರಾಮದ ನೀರಳಿಕೆ ಹಿತ್ಲುಕೆರೆ ಎಂಬಲ್ಲಿನ ಕಾಡಿನ ಸ್ಥಳದಲ್ಲಿ ಸಾರ್ವಜನಿಕವಾಗಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 16.00 ಗಂಟೆಗೆ ಮೇಲಿನ ಸ್ಥಳಕ್ಕೆ ದಾಳಿ ಮಾಡಿದ್ದು, ದಾಳಿ ಸಮಯ ಅವರು ಓಡಲು ಪ್ರಯತ್ನಿಸಿದಾಗ ಇಬ್ಬರನ್ನು ಹಿಡಿದು ಪ್ರಶ್ನಿಸಲಾಗಿ ತಾವು ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಿಂದ ಮೂರು ಜನ ಓಡಿಹೋಗಿರುತ್ತಾರೆ.
3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ನಾರ್ಲಪದವು ಎಂಬಲ್ಲಿ ದಾಸ್ತಾನು ಇರಿಸಿದ ಮರಳನ್ನು ಈ ಹಿಂದೆ ಪಿರ್ಯಾದಿದಾರರಾದ ಶ್ರೀ ಗಿರೀಶ್ ಮೋಹನ, ಮೈನ್ಸ್ & ಜಿಯೊಲೊಜಿಕಲ್ ಆಪೀಸರ್, ಮೈನ್ಸ್ & ಜಿಯೊಲೊಜಿಕಲ್ ಡಿಪಾರ್ಟ್ ಮೆಂಟ್, ಮಂಗಳೂರು ರವರು ದಿನಾಂಕ: 12/07/2014 ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ವಶ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದು, ದಿನಾಂಕ: 16/07/2014 ರಂದು ಬೆಳಿಗ್ಗೆ 04.30 ಗಂಟೆ ಸಮಯಕ್ಕೆ ಈ ಮರಳನ್ನು ಎ.ಕೆ. ಹನೀಫ್ ಮತ್ತು ಇತರರು ಸೇರಿ 7 ಲಾರಿಗಳಲ್ಲಿ ಮತ್ತು 1 ಜೆ.ಸಿ.ಬಿ.ಯಲ್ಲಿ ಅದರ ಚಾಲಕರುಗಳು ಹೋಗಿ ಜೆ.ಸಿ.ಬಿ. ಯಂತ್ರದಿಂದ ಟಿಪ್ಪರ್ ಲಾರಿ ಮತ್ತು ಲಾರಿಗಳಿಗೆ ಮರಳನ್ನು ತುಂಬಿ ಅದನ್ನು ಕಳವು ಮಾಡಿ ಸಾಗಿಸಲು ಪ್ರಯತ್ನಿಸಿದ್ದು, ಆರೋಪಿ ಹನೀಫ್ ಮತ್ತು ಆತನ ಸಹಚರರು ಕರ್ನಾಟಕ ಉಪ ಖನಿಜ ನಿಯಮಾವಳಿ ಮತ್ತು ಗಣಿ ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ವಿರುದ್ಧವಾಗಿ ವರ್ತಿಸಿರುವುದಾಗಿದೆ.
4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.07.2014 ರಂದು ಮಧ್ಯಾಹ್ನ ಸುಮಾರು 13.15 ಗಂಟೆಯಿಂದ 14.45 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ನಗರ ಅಡ್ಯಾರ್ ಗ್ರಾಮದ ಅಡ್ಯಾರ್ ಎಂಬಲ್ಲಿರುವ ವಿಶಾಲ್ ವಿಲ್ಲಾ ಎಂಬ ಮನೆಯ ಮುಂಭಾಗ ಸಿಟ್ ಔಟ್‌ನಲ್ಲಿ ಇರಿಸಿದ ಬೀಗದ ಕೀಯನ್ನು ತೆಗೆದು ಅದೇ ಬೀಗದ ಕೀಯಿಂದ ಬೀಗ ತೆಗೆದು ಯಾರೋ ಕಳ್ಳರು ಮನೆ ಒಳಗಡೆ ಪ್ರವೇಶಿಸಿ 2 ಬೆಡ್ ರೂಮ್ಗಳಲ್ಲಿ ಇರಿಸಿದ್ದ ಹೆಚ್‌ಪಿ ಕಂಪೆನಿಯ ಲ್ಯಾಪ್‌ಟಾಪ್-1, ಕಾಂಪ್ಯಾಕ್ ಕಂಪೆನಿಯ ಲ್ಯಾಪ್‌ಟಾಪ್-1 ಹಾಗೂ ಸೋನಿ ಕಂಪೆನಿಯ ಲ್ಯಾಪ್ಟಾಪ್-1 ನ್ನು ಒಟ್ಟು ಮೂರು ಲ್ಯಾಪ್ಟಾಪ್ಗಳನ್ನು ಕಳವು ಮಾಡಿರುವುದಲ್ಲದೆ, ಹೆಚ್ಪಿ ಕಂಪೆನಿಯ ಲ್ಯಾಪ್‌ಟಾಪ್‌ನ ಬ್ಯಾಗ್‌ನಲ್ಲಿ ಇರಿಸಿದ್ದ ಅಭಿಷೇಕ್ ರವರ ಬಾಬ್ತು ವೋಟರ್ ಐಡಿ ಹಾಗೂ ಶಾಲಾ ದಾಖಲಾತಿಗಳನ್ನು ಕೂಡಾ ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವು ಮಾಡಿದ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 84000/- ಆಗಬಹುದು.
No comments:
Post a Comment