ದೈನಂದಿನ ಅಪರಾದ ವರದಿ.
ದಿನಾಂಕ 20.07.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶರಣ ಶೆಟ್ಟಿ ರವರು 1991 ರ ಜೂನ್ 2 ರಂದು ಕಾಪು ನಿವಾಸಿ ಸುರೇಶ್ ಡಿ' ಶೆಟ್ಟಿ ಎಂಬುವರನ್ನು ಮಂಗಳೂರಿನ ಕೂಳೂರಿನಲ್ಲಿರುವ ಹೊಟೇಲ್ ಕಾವೇರಿ ಇಂಟರ್ ನ್ಯಾಷನಲ್ ಸಂಭಾಂಗಣದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರಾದಾಯದಂತೆ ವಿವಾಹವಾಗಿದ್ದು, ಮದುವೆಯ ನಂತರ ಗಂಡನೊಂದಿಗೆ ಸಕಲೇಶಪುರದಲ್ಲಿ ವಾಸವಾಗಿದ್ದು, 2 ಹೆಣ್ಣು ಮಕ್ಕಳಿರುತ್ತಾರೆ. ನಂತರ ಅಲ್ಲಿಂದ ಮಂಗಳೂರಿಗೆ ಬಂದು ವಾಸವಾಗಿರುವ ಸಮಯ ಪಿರ್ಯದಿದಾರರ ಗಂಡ ದಿನಾಲೂ ಕುಡಿದು ಬಂದು ಪಿರ್ಯಾದಿದಾರರ ತಾಯಿಯ ಹೆಸರಿನಲ್ಲಿದ್ದ ಪ್ಲಾಟನ್ನು ಆರೋಪಿಯ ಹೆಸರಿಗೆ ಮಾಡಬೇಕೆಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ದಿನಾಂಕ 05-09-2012 ರಂದು ಮದ್ಯ ರಾತ್ರಿ ಪಿರ್ಯಾದಿದಾರರ ಗಂಡ ಪಾನಮತ್ತರಾಗಿ ಬಂದು ಬೂಟು ಕಾಲಿನಿಂದ ಒದ್ದು, ಹೆಲ್ಮೆಟ್ ನಿಂದ ತಲೆಗೆ ಹೊಡೆದು ಪಿರ್ಯಾದಿದಾರರನ್ನು ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದರು. ನಂತರ ಪಿರ್ಯಾದಿದಾರರು ತಾಯಿ ಮನೆಯಲ್ಲಿರುವಾಗ ದಿನಾಂಕ 14-06-2014 ರಂದು ಆರೋಪಿ ಸುರೇಶ್ ಶೆಟ್ಟಿ ಪಿರ್ಯಾದಿಯ ತಾಯಿ ಮನೆಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿ ತಾಯಿ ಉಮಾನಂದಿನಿ ಶೆಟ್ಟಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದರಿಂದ ಈ ಬಗ್ಗೆ ಕದ್ರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿರುತ್ತದೆ. ದಿನಾಂಕ 15-06-2014 ರಂದು ಆರೋಪಿಯು ಪಿರ್ಯಾದಿದಾರರ ತಾಯಿ ಮನೆಗೆ ಬಂದು, ಕದ್ರಿ ಠಾಣೆಯಲ್ಲಿ ಕೊಟ್ಟ ದೂರನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ, ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಾರರ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮನ್ನು ಆಸಿಡ್ ಎರಚಿ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-07-2014 ರಂದು ರಾತ್ರಿ ಸುಮಾರು 09-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಅದ್ರೈನ್ ದಿನಕರನ್ ಫರ್ನಾಂಡಿಸ್ ರವರು ವಾಸಿಸುತ್ತಿರುವ ಮಂಗಳೂರು ಹೊಗೆಬೈಲ್ ಜೆಸ್ಟಾ ಬಿಲ್ಡಿಂಗ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ದ್ವಿಚಕ್ರ ವಾಹನ ಕೆ.ಎ 20 ಇ.ಬಿ 2006 ಬಜಾಜ್ ಡಿಸ್ಕವರ್ ನ್ನು ಪಾರ್ಕ್ ಮಾಡಿದ್ದು, ದಿನಾಂಕ 17-07-2014 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡಿದಾಗ ಪಿರ್ಯಾಧಿದಾರರ ದ್ವಿಚಕ್ರ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರವುದಿಲ್ಲ ಹಾಗೂ ದ್ವಿಚಕ್ರ ವಾಹನ ನಿಲ್ಲಿಸಿದ ಸಮಯ ಸದ್ರಿ ವಾಹನದ ಹ್ಯಾಂಡ್ ಲಾಕ್ ಮಾಡದೇ ಇರುವುದರಿಂದ ಸದ್ರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗದೆ ಇರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.07.2014 ರಂದು ಸಂಜೆ ಸುಮಾರು 3.45 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಪ್ಲೈ ಒವರ್ ಬ್ರಿಡ್ಜ್ ಬಳಿ ಹಾದು ಹೋಗುವ ಸಾರ್ವಜನಿಕ ಡಾಂಬರು ರಸ್ತೆಯಲ್ಲಿ KA19-ED-7230 ನಂಬ್ರ ಮೋಟರ್ ಸೈಕಲ್ ನ ಸವಾರ ದೀಪಕ್ ಎಂಬಾತನು, ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಶ್ರೀ ಫಯಾಜ್ ಎಂಬುವರನ್ನು ಸಹಸವಾರಾನಾಗಿ ಕುಳ್ಳಿರಿಸಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA19-EL-6515 ನಂಬ್ರದ ಆಕ್ಟಿವಾ ಹೊಂಡಾ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರ ಎಡಕಾಲಿನ ಮೋಣಗಂಟಿಗೆ, ಬಲಕೈ ಬುಜಕ್ಕೆ, ತುಟಿಗೆ ಗುದ್ದಿದ ಗಾಯವಾಗಿದ್ದು ಸಹಸವಾರ ಫಯಾಜ್ ನು ತಲೆಗೆ ಮತ್ತು ಎಡಕಾಲಿಗೆ ಗಂಬೀರ ಗಾಯವಾಗಿದ್ದು ಆರೋಪಿಗೂ ಕಾಲಿಗೆ ಮತ್ತು ಹಣೆಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳುಗಳ ಪೈಕಿ ಫಯಾಜ್ ನು ಒಳರೋಗಿಯಾಗಿಯೂ ಆರೋಪಿ ಮತ್ತು ಫಿರ್ಯಾದುದಾರರು ಹೊರರೋಗಿಯಾಗಿಯೂ ಸಿಟಿ ಆಸ್ಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-07-2014 ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ ಮಂಗಳೂರು ನಗರದ ಕಂಕನಾಡಿ ವೃತ್ತದ ಬಳಿಯ ಸೈಂಟ್ ಜೋಸೆಫ್ ಶಾಲೆಯ ದ್ವಾರದ ಬಳಿ ಕೆಎ-05-ಎಂಕೆ-1555 ನಂಬ್ರದ ಬೊಲೆರೋ ವಾಹನವನ್ನು ಅದರ ಚಾಲಕ ಆರೋಪಿಯು ಕರಾವಳಿ ವೃತ್ತ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಂಕನಾಡಿ ವೃತ್ತದಲ್ಲಿ ವೃತ್ತವನ್ನು ಬಳಸದೇ ಒಳಗಡೆಯಿಂದ ನುಗ್ಗಿಸಿಕೊಂಡು ರಸ್ತೆಯ ರಾಂಗ್ ಸೈಡಿನಲ್ಲಿ ಬಂದು ರಸ್ತೆ ಬದಿಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಸಾಗರ್ ಮತ್ತು ನಾಗೇಶ ಎಂಬವರಿಗೆ ಡಿಕ್ಕಿ ನಂತರ ಪಿರ್ಯಾದಿದಾರರಾದ ಶ್ರೀ ಸಿದ್ದು ರವರ ಕೆಎ-19-ಇಎಫ್-0818 ನಂಬ್ರದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ನಂತರ ರಸ್ತೆ ಬದಿಯಲ್ಲಿದ್ದ ರಿಕ್ಷಾ ಚಾಲಕ ಜಾನ್ ರೆಬೆಲ್ಲೋ ಎಂಬವರಿಗೆ ಡಿಕ್ಕಿಯಾಗಿ ಮುಂದಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಎ-19-ಬಿ-9304 ನಂಬ್ರದ ಗೂಡ್ಸ್ ರಿಕ್ಷಾವೊಂದಕ್ಕೆ ಡಿಕ್ಕಿಯಾಗಿ ಮುಂದಕ್ಕೆ ಚಲಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಮ್ಮದ್ ಅಶ್ರಫ್ ಎಂಬವರಿಗೆ ಡಿಕ್ಕಿಯಾಗಿರುವುದಾಗಿದೆ. ಗಾಯಾಳುಗಳ ಪೈಕಿ ನಾಗೇಶ ಎಂಬವರು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹಾಗೂ ಸಾಗರ್, ಜಾನ್ ರೆಬೆಲ್ಲೋ, ಮಹಮ್ಮದ್ ಅಶ್ರಫ್ ಎಂಬವರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17/07/2014 ರಂದು ರಾತ್ರಿ ಸುಮಾರು 21:30 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಚರ್ಚ್ ಗೇಟ್ ಬಳಿ ಕೆಎ19-ಇಎಲ್-5814 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಸರ್ಫರಾಜ್ ಎಂಬಾತನು ಬಿಕರ್ನಕಟ್ಟೆ ಕಡೆಯಿಂದ ನಂತೂರು ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶ್ರೀ ಸಂತೋಷ್ ಜೋಗಿ ರವರು ಸವಾರಿ ಮಾಡುತ್ತಿದ್ದ ಕೆಎ-19-ಇಜಿ-3504 ನಂಬ್ರದ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ ಪರಿಣಾಮ ಬೈಕ್‌ನ ಸವಾರ ಪಿರ್ಯಾದಿದಾರರಿಗೆ ಬಲಕೈ ಮತ್ತು ಸೊಂಟಕ್ಕೆ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರ ಬೈಕ್‌ನ ಸಹಸವಾರೆ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಶಿಲ್ಪ ಸಂತೋಷ್ ಎಂಬವರ ಸೊಂಟಕ್ಕೆ, ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಅಲ್ಲದೇ ಆರೋಪಿಯ ಮೋಟಾರು ಸೈಕಲಿನ ಸಹಸವಾರ ಮೊಹಮ್ಮದ್ ಅಫ್ತಾಲ್ ಎಂಬವರಿಗೂ ಗಾಯವಾಗಿದ್ದು, ಗಾಯಾಳು ಶ್ರೀಮತಿ ಶಿಲ್ಪ ರವರು ಎಸ್ ಸಿ ಎಸ್ ಆಸ್ಪತ್ರೆಯಲ್ಲೂ, ಗಾಯಾಳು ಮೊಹಮ್ಮದ್ ಅಫ್ತಾಲ್ ಎಂಬವರು ಸಿಟಿ ಆಸ್ಪತ್ರೆಯಲ್ಲೂ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ದಾಮೋದರ ರವು ಮಂಗಳೂರು ನಗರದ ಬಲ್ಮಠದ ಲ್ಯಾಂಡ್ ಟ್ರೇಡರ್ಸ್ ನಲ್ಲಿ ಸುಮಾರು 4 ತಿಂಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಬಿಲ್ಡಿಂಗ್ ನ ಕಾಂಟ್ರಾಕ್ಟ್ ನ್ನು ದಿವಾಕರ್ ಇವರಿಗೆ ವಹಿಸಿದ್ದು ದಿವಾಕರ್ ರವರು ಬಲ್ಮಠದ ಲ್ಯಾಂಡ್ ಟ್ರೇಡರ್ಸ್ ನ ಸೈಟ್ ನಲ್ಲಿ ಸೂಪರ್ ವೈಸರ್ ಆಗಿ ಹ್ಯಾರೀಸ್, ಪ್ರವೀಣ್ ಮತ್ತು ನೌಫಾಲ್ ರವರನ್ನು ನೇಮಿಸಿರುತ್ತಾರೆ. ದಿನಾಂಕ 19/07/2014 ರಂದು ಎಂದಿನಂತೆ 3ನೇ ಮಹಡಿಯಲ್ಲಿ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದು ಕೆಳಗಡೆ ಮಿಕ್ಸರ್ ಮಿಲ್ಲರ್ ಮಿಶನ್ ನಲ್ಲಿ ಕಾಂಕ್ರೀಟ್ ಮಿಕ್ಸ್ ಮಾಡಿ ಶ್ರೀ ಯಂಗ್ ಎನ್ನುವರು ರಬ್ಬರ್ ಬುಟ್ಟಿಗೆ ತುಂಬಿಸಿ ಕೊಡುತ್ತಿದ್ದು ಇದನ್ನು ಕೆಳಗಡೆ ಕೆಲಸ ಮಾಡುತ್ತಿದ್ದ ಶ್ರೀ ಮಲ್ಲಿಗಾ ಎಂಬುವರು ವಿದ್ಯುತ್ ಚಾಲಿತ ಮೆಟಿರಿಯಲ್ ಶಿಫ್ಟಿಂಗ್ ಮೆಷಿನ್ ನ ಕಬ್ಬಿಣದ ರೋಪ್ ನ ಕೊಕ್ಕೆಯ ಮೂಲಕ ಮೇಲ್ಗಡೆ ಕಳುಹಿಸಲು ಕೊಕ್ಕೆಗೆ ಸಿಕ್ಕಿದ ಬಳಿಕ ಮೂರನೇ ಮಹಡಿಯಲ್ಲಿ ಕಾಮರಾಜ್ ರವರು ವಿದ್ಯುತ್ ಚಾಲಿತ ಮೆಟಿರಿಯಲ್ ಶಿಫ್ಟಿಂಗ್ ಮೆಷಿನ್ ನ ಮೂಲಕ ಮೇಲಕ್ಕೆ ಎತ್ತುವ ಸಮಯ ಸುಮಾರು ಬೆಳಿಗ್ಗೆ 09.55 ಗಂಟೆಗೆ ಕೆಳಗೆ ಕೆಲಸ ಮಾಡುತ್ತಿದ್ದ ಮಲ್ಲಿಗಾ ರವರ ತಲೆಯ ಮೇಲೆ ಮೆಷಿನ್ ಬಿದ್ದ ಪರಿಣಾಮ ಮಲ್ಲಿಗಾರವರನ್ನು ಚಿಕಿತ್ಸೆಯ ಬಗ್ಗೆ KMC ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಮಯ ಸುಮಾರು 12.10 ಗಂಟೆಗೆ ಮೃತಪಟ್ಟಿರುತ್ತಾರೆ. ಸದ್ರಿ ವಿದ್ಯುತ್ ಚಾಲಿತ ಮೇಟಿರಿಯಲ್ ಶಿಫ್ಟಿಂಗ್ ಮೆಶಿನ್ ನನ್ನು ಸರಿಯಾಗಿ ಪರಿಶೀಲಿಸದೇ ಯಾವುದೇ ವಹಿಸದೇ, ಸೇಫ್ಟೀ ಗಾರ್ಡನ್ನು ಹಾಕದೇ ಈ ಅವಘಡ ಸಂಭವಿಸಿದ್ದು, ಅವಘಡ ಸಂಭವಿಸಲು ಕಾರಣರಾದ ಕಾಮರಾಜ್ ,ಸೈಟ್ ನ ಸೂಪರ್ ವೈಸರ್ ರಾದ ಹ್ಯಾರಿಸ್,ಪ್ರವೀಣ್,ಮತ್ತು ನೌಫಲ್ ಹಾಗೂ ಕಾಂಟ್ರಾಕ್ಟರ್ ದಿವಾಕರ್ ರವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಪಿರ್ಯಾದಿ ನೀಡಿರುವುದಾಗಿದೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-07-2014 ರಂದು 17-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸತಿಶ್ ರವರು ತಾನು ಕೆಲಸ ಮಾಡುತ್ತಿರುವ ಸ್ಧಳವಾದ ಕದ್ರಿ ಕಂಬ್ಳ ಎಂಬಲ್ಲಿ ಹೋಗಿದ್ದು ಅಲ್ಲಿ ಪಿರ್ಯಾದಿದಾರರೊಂದಿಗೆ ಕೆಲಸ ಮಾಡುತ್ತಿರುವ ಶೈಲೇಶ್ ಮತ್ತು ಕಿಶನ್ ಎಂಬವರು ಸಿಕ್ಕಿದ್ದು ಅವರು ಕೆಲಸದ ವಿಚಾರದಲ್ಲಿ ಮಾತನಾಡುವಾಗ ತಮ್ಮ ನಡುವೆ ಮಾತಿಗೆ ಮಾತು ಬೆಳೆದು ಶೈಲೇಶ್ ಎಂಬವರು ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದು ಅದೇ ಸಮಯ ಕಿಶನ್ ಎಂಬವರು ಕಬ್ಬಿಣದ ಸುತ್ತಿಗೆಯಿಂದ ಹಣೆಗೆ ಹಾಗೂ ತಲೆಯ ಹಿಂಭಾಗಕ್ಕೆ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವುಂಟಾಗಿದ್ದು ಈ ಸಮಯ ಜೋರಾಗಿ ಬೊಬ್ಬೆ ಹೊಡೆದಾಗ ಅಕ್ಕಪಕ್ಕದಲ್ಲಿದ್ದವರು ಓಡಿ ಬಂದಾಗ ಸದರಿ ಇಬ್ಬರು ವ್ಯಕ್ತಿಗಳು ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಓಡಿ ಹೋಗಿರುತ್ತಾರೆ . ನಂತರ ಅಲ್ಲಿ ಸೇರಿದವರು ಪಿರ್ಯಾದಿದಾರರನ್ನು ಸಿಟಿ ಆಸ್ಫತ್ರೆಗೆ ಸೇರಿಸಿದಲ್ಲಿ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲು ಮಾಡಿರುತ್ತಾರೆ. ಈ ಕೃತ್ಯಕ್ಕೆ ಕೆಲಸದ ವಿಷಯದ ದ್ವೇಷವೇ ಕಾರಣವಾಗಿರುತ್ತದೆ.
8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ 1 ನೇ ನವೀನ ಕುಮಾರ್, 2ನೇ ಕುಮಾರಿ ಅರ್ಚನ, 3 ನೇ ಕುಮಾರಿ ರಮ್ಯಶ್ರೀ ಎಂಬವರುಗಳು ಮಂಗಳೂರು ಸಿಎಂ.ಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು 4ನೇ ಆರೋಪಿತರಾದ ರಮ್ಯಶ್ರೀ ಮಂಗಳೂರು ಲಾಲ್ ಬಾಗ್ ಶಾಖೆಯ ಮೇಲ್ವಿಚಾರಕಿಯಾಗಿದ್ದು ಹಾಗೂ 3ನೇ ಆರೋಪಿತೆ ಕುಮಾರಿ ಅರ್ಚನಾರವರು ಬಾವುಟಗುಡ್ಡೆ ಶಾಖೆಯ ಮೇಲ್ವಿಚಾರಕಿಯಾಗಿದ್ದು ನವೀನ್ ಕುಮಾರ್ ಭಾವುಟ ಗುಡ್ಡೆ ಶಾಖೆಯ ಕೋ ಆರ್ಡಿನೇಟರ್ ಆಗಿರುತ್ತಾರೆ. ಆರೋಪಿಗಳಾದ ನವೀನ ಕುಮಾರ್ , ಕುಮಾರಿ ಅರ್ಚನ, ಕುಮಾರಿ ರಮ್ಯಶ್ರೀರವರು ಜೊತೆ ಸೇರಿಕೊಂಡು ಕಂಪನಿಯಲ್ಲಿರುವ ಉದ್ಯೋಗಿಗಳ ಸಂಬಳವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮೋಸದಿಂದ ಬಾವಟಗುಡ್ಡ ಕಛೇರಿಯಲ್ಲಿ ರೂ. 30,000 ರಿಂದ 40,000/- ದಿನಾಂಕ 11-07-2014ರಿಂದ 02-05-2014 ರ ಮಧ್ಯಾವದಿಯಲ್ಲಿ ಹಾಗೂ ಲಾಲ್ ಬಾಗ್ ಶಾಖೆಯಲ್ಲಿ ಸುಮಾರು 2 ವರ್ಷಗಳಿಂದ ರೂ. 4,00,000/- ತೆಗೆದು ವಂಚಿಸಿದ್ದಲ್ಲದೇ ಆರೋಪಿ ಚಂದ್ರು ರವರೊಂದಿಗೆ ಸೇರಿಕೊಂಡು ಬಾವಟಗುಡ್ಡ ಕಛೇರಿಗೆ ಅಕ್ರಮ ಪ್ರವೇಶ ಮಾಡಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ತೊಂದರೆ ನೀಡಿದ್ದಲ್ಲದೇ ಆರೋಪಿ ಚಂದ್ರ ರವರು ಪಿರ್ಯಾದುದಾರರಾದ ಕಂಪನಿಯ ಡೆವಲಪ್ ಮೆಂಟ್ ಅಪರೇಷನ್ ಮ್ಯಾನೇಜರ್ ನವೀನ ಶೆಟ್ಟಿರವರಿಗೆ ದೂರವಾಣಿ ಮಖೇನಾ ಬೆದರಿಕೆ ಒಡ್ಡಿರುವುದಾಗಿದೆ.
No comments:
Post a Comment