Monday, July 14, 2014

Daily Crime Reports 14-07-2014

ದೈನಂದಿನ ಅಪರಾದ ವರದಿ.

ದಿನಾಂಕ 14.07.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.07.2014 ರಂದು ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ, ಮೊಂಟೆಪದವು ಶಾಂತನಗರ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಎನ್.ಕೆ. ಮಹಮ್ಮದ್ ರವರ ಎವರೆಸ್ಟ್ಫ್ಲೈವುಡ್ಫ್ಯಾಕ್ಟರಿಯಲ್ಲಿ ಫ್ಯಾಕ್ಟರಿಯ ಮೇನೇಜರ್ಹೊನ್ನಪ್ಪ ಗೌಡ ಎಂಬವರು ಇರುವಾಗ ರಾತ್ರಿ 22:00 ಗಂಟೆಯ ಸಮಯಕ್ಕೆ 4-5 ಜನ ಅಪರಿಚಿತ ಯುವಕರು ಫ್ಯಾಕ್ಟರಿಯ ಒಳಗೆ ಅತಿಕ್ರಮಣ ಪ್ರವೇಶ ಮಾಡಿ "ಪೊಲೀಸರಿಗೆ ಬಾರೀ ಮಾಹಿತಿ ಕೊಡುತ್ತೀರಾ" ಎಂದು ಅವಾಚ್ಯ ಶಬ್ದಗಳಿಂದ ಬೈದು ನೀವು ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಕಲ್ಲುಗಳನ್ನು ಕಚೇರಿಯ ಕಿಟಕಿಗಳಿಗೆ ಬಿಸಾಡಿ ಗಾಜುಗಳನ್ನು ಪುಡಿ ಮಾಡಿದ್ದು, ಇದನ್ನು ನೋಡಿ ಹೊನ್ನಪ್ಪ ಗೌಡರು ಬೊಬ್ಬೆ ಹೊಡೆದಾಗ ಆರೋಪಿಗಳು ಅಲ್ಲಿಂದ ಓಡಿ ಹೋಗಿರುತ್ತಾರೆ. ಆರೋಪಿಗಳು ಕಿಟಕಿಯ ಗಾಜುಗಳಿಗೆ ಕಲ್ಲು ಬಿಸಾಡಿದ್ದರಿಂದ ಫ್ಯಾಕ್ಟರಿಗೆ ಸುಮಾರು ರೂ. 20,000/- ನಷ್ಟ ಉಂಟಾಗಿರುತ್ತದೆ. ಘಟನೆಗೆ ದಿನಾಂಕ 12.07.204 ರಂದು ಫ್ಯಾಕ್ಟರಿಯ ಕಾರ್ಮಿಕರು ಊರಿಗೆ ಹೋಗುವ ಸಮಯ ಅವರಿಗೆ 6 ಅಪರಿಚಿತ ಕಿಡಿಗೇಡಿಗಳು ಕಿರುಕುಳ ನೀಡಿದ್ದು ಬಗ್ಗೆ ಫಿರ್ಯಾದಿದರರು ಪೊಲೀಸರಿಗೆ ಮಾಹಿತಿ ನೀಡಿದ ದ್ವೇಷದಿಂದ ಕೃತ್ಯ ಎಸಗಿರುವುದಾಗಿದೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.07.2014 ರಂದು ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ರಮೇಶ್ ಕುಮಾರ್ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ತಾಲೂಕು  ಕಲ್ಲಬೆಟ್ಟು ಗ್ರಾಮದ  ಗೋವು ಗುಡ್ಡೆ ಎಂಬಲ್ಲಿ ಮನ್ಸೂರ್ ಎಂಬವರ  ಮನೆಗೆ ಸಿಬ್ಬಂಧಿಗಳೊಂದಿಗೆ ಪಂಚರ ಸಮಕ್ಷಮದಲ್ಲಿ ಧಾಳಿ ಮಾಡಿದಾಗ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು, ಸದ್ರಿ ವಾಸದ ಮನೆಯ ಹಿಂಬದಿಯ ಕೋಣೆಯನ್ನು  ಕಸಾಯಿಖಾನೆಯನ್ನಾಗಿ ಪರಿವರ್ತಿಸಿ ಜಾನುವಾರುಗಳನ್ನು ಮಾಂಸಕ್ಕಾಗಿ ವಧೆ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಮಾಂಸವನ್ನು ತಯಾರಿಸುತ್ತಿದ್ದ , ಸುಮಾರು 85 ಕೆ.ಜಿ ಮಾಂಸ ಹಾಗೂ ಹಾಗೂ  ಹಿಂಸಾತ್ಮಕ ರೀತಿಯಲ್ಲಿ  ಕಾಲು ಹಾಗೂ ಕೈಗೆ ಕಟ್ಟಿ ಹಾಕಿದ ಕಪ್ಪು ಬಣ್ಣದ ಜೀವಂತ ದನ  ಹಾಗೂ ಒಂದು ಕಂದು ಬಣ್ಣದ ಗಂಡು ಕರುವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಜಾನಾವಾರು ಮಾಂಸದ ಒಟ್ಟು ಮೌಲ್ಯ 8500/- ಹಾಗೂ ಜಾನುವಾರುಗಳ ಮೌಲ್ಯ 1500/- ಆಗಬಹುದು, ಒಟ್ಟು ಮೌಲ್ಯ : 10000/-  ಆಗಬಹುದು. ಆರೋಪಿಗಳು ಎಲ್ಲಿಂದಲೋ  ಜಾನುವಾರುಗಳನ್ನು ಕಳವು ಮಾಡಿಕೊಂಡು ತಂದು ವಾಸ ಮಾಡುವ ಮನೆಯ ಹಿಂಬದಿಯ ಕೋಣೆಯನ್ನು ಅಕ್ರಮ  ಕಸಾಯಿಖಾನೆಯನ್ನಾಗಿ ಪರಿವರ್ತಿಸಿ ಜಾನುವಾರುಗಳನ್ನು ಮಾಂಸಕ್ಕಾಗಿ ವಧೆ ಮಾಡಿರುವುದಾಗಿದೆ.

 

3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-07-2014 ರಂದು ರಾತ್ರಿ ಸುಮಾರು 20.40 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಸುರೇಂದ್ರ ಮಲ್ಲಿ ರವರ ಬಾಬ್ತು KA 19 EB 9304 ನೇ ನಂಬರಿನ ಮೋಟಾರ್ಸೈಕಲ್ನಲ್ಲಿ ವಾಮಂಜೂರಿನ ಟೆಲಿಪೋನ್ಎಕ್ಷ್ ಚೇಂಜ್ ಎದುರುಗಡೆ ತಲುಪುವಾಗ ಗುರುಪುರ ಕಡೆಯಿಂದ ಎದುರುಗಡೆಯಿಂದ KA 19 B-8208 ನೇ ಮಿನಿ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಮುಖಕ್ಕೆ ರಕ್ತ ಬರುವ ಹಾಗೂ ತರಚು ಗಾಯವಾಗಿದ್ದು, ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.07.2014 ರಂದು ಪಿರ್ಯಾದುದಾರರಾದ ಶ್ರೀಮತಿ ಲಲಿತಾ ಜಿ. ರವರು ಮಂಗಳೂರು ನಗರದ ಗರೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಇರುವ ತಮ್ಮ ಮನೆಯಲ್ಲಿ ರಾತ್ರಿ ಊಟವಾದ ಬಳಿಕ ಮನೆಯ ಬಾಗಿಲಿನ ಚಿಲಕಗಳನ್ನು ಭದ್ರವಾಗಿ ಮುಚ್ಚಿ ತಮ್ಮ ಗಂಡನೊಂದಿಗೆ ಮಲಗಿರುವ ಸಮಯ 13.07.2014 ರಂದು ಬೆಳಿಗ್ಗೆ ಸುಮಾರು 04:00 ಗಂಟೆಗೆ ಯಾರೋ ಒಬ್ಬ ವ್ಯಕ್ತಿ ಪಿರ್ಯಾದುದಾರರ ಮನೆಯ ಎದುರಿನ ಕಿಟಕಿಯ ಸರಳುಗಳನ್ನು ಬಗ್ಗಿಸಿ ಮನೆಯ ಒಳಗೆ ಬಂದು ಪಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿದಂತಾಗಿ ಪಿರ್ಯಾದುದಾರರು ಎಚ್ಚರಗೊಂಡಾಗ ಯಾರೋ ಒಬ್ಬ ವ್ಯಕ್ತಿ ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ತೂಕದ 24 ಇಂಚಿನ ಕರಿಮಣಿ ಸರವನ್ನು ಎಳೆದು ತುಂಡು ಮಾಡಿ ಬಾಗಿಲಿನ ಮೂಲಕ ಹೊರಗೆ ಓಡಿ ಹೋಗಿರುವುದಾಗಿದೆ.

No comments:

Post a Comment