Thursday, July 10, 2014

Daily Crime Reports 10-07-2014

ದೈನಂದಿನ ಅಪರಾದ ವರದಿ.

ದಿನಾಂಕ 10.07.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08-07-2014 ರಂದು ರಾತ್ರಿ ಸುಮಾರು 11.30 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಶ್ರೀನಿವಾಸ ಎಸ್. ಕಿಣಿ ರವರು ತನ್ನ ಕುಟುಂಬ ಸಮೇತ ಮಂಗಳೂರು ನಗರದ ಬಂದರು ಎಂಬಲ್ಲಿನ ಬಾಂಬೆ ಲಕ್ಕಿ ಹೋಟೆಲ್ ನಲ್ಲಿ ಊಟ ಮಾಡಲೆಂದು ತನ್ನ ಬಾಬ್ತು ಕಾರು ನಂ. KA-19-MD-1157 ನ್ನು ಸದ್ರಿ ಹೋಟೆಲಿನ ಮುಂದುಗಡೆ ರಸ್ತೆಯಲ್ಲಿ ನಿಲ್ಲಿಸಿದ್ದು, ಸಮಯ ಅಲ್ಲಿಯೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ನಂ. MH-05-ES-5843 ನ್ನು ಅದರ ಚಾಲಕ ಅತಿ ವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಅಂದರೆ ರಿವರ್ಸ ತೆಗೆಯುವಾಗ ಪಿರ್ಯಾದಿದಾರರ ಕಾರಿನ ಎಡ ಬದಿಯ ಬಾಗಿಲು ಹಾಗೂ ಕಾರಿನ REAR VIEW MIRROR ನ್ನು ಜಖಂಗೊಳಿಸಿ ಕಾರನ್ನು ನಿಲ್ಲಿಸದೆ ಕಾರು ಸಮೇತ ಪರಾರಿಯಾಗಿರುತ್ತಾನೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕು. ನೇತ್ರಾವತಿ ಸುರನಗಿ ರವರು ಹಾಗೂ ಅವರ ತಂದೆ, ತಾಯಿ ಮತ್ತು ತಮ್ಮ ಗಿರೀಶ್ ರವರು ಧರ್ಮಸ್ಥಳಕ್ಕೆ ಹೋಗುವರೇ ದಿನಾಂಕ : 06.07.2014 ರಂದು  ಬೆಳಿಗ್ಗೆ  06.30 ಗಂಟೆ ಸಮಯಕ್ಕೆ ಚಿಲಿಂಬಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ನಿಂತ್ತುಕೊಂಡಿರುವಾಗ ಕೊಟ್ಟಾರ ಕಡೆಯಿಂದ ಲೇಡಿಹಿಲ್ ಕಡೆಗೆ ಲಘು ಸರಕು ವಾಹನ ಕೆಎ.19.ಎಎ.4150ನೇದನ್ನು ಅದರ ಚಾಲಕನು ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ  ಅತೀವೇಗ ಮತ್ತು ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ಪಿರ್ಯಾದಿದಾರರೊಂದಿಗೆ ನಿಂತ್ತುಕೊಂಡಿದ್ದ ಪಿರ್ಯಾದಿದಾರರ ತಾಯಿಯವರಾದ ವಿಜಯಲಕ್ಷ್ಮೀಯವರಿಗೆ ಡಿಕ್ಕಿ ಹೊಡೆದ ಪರಿಣಾಮ  ರಸ್ತೆಗೆ ಬಿದ್ದು  ತಲೆಗೆ ರಕ್ತ ಗಾಯ ಮತ್ತು ಎಡ ಭುಜ, ಸೊಂಟದ ಎರಡು ಬದಿ, ಎಡ ತೊಡೆಗೆ ಗುದ್ದಿದ ನೋವು ಉಂಟಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ  ಪಡೆದಿರುವುದಾಗಿದೆ. ಪಿರ್ಯಾದಿದಾರರಿಗೆ  ಕಾನೂನಿನ ಸರಿಯಾದ ಅರಿವು ಇಲ್ಲದೇ ಇರುವುದರಿಂದ ದೂರು ನೀಡುವರೇ ತಡವಾಗಿರುತ್ತದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08/07/2014 ರಂದು ಪಿರ್ಯಾದುದಾರರಾದ ಶ್ರೀ ತಾಹೀರ್ ರವರು ಹಾಗೂ ಅವರ ಊರಿನ ಮಹಮ್ಮದ್ ಸಿರಾಜ್ ರವರು ತೊಕ್ಕೊಟ್ಟುವಿನಲ್ಲಿ ಕೆಲಸ ಮುಗಿಸಿ ಸಂಜೆ ರೂಂ ಕಡೆಗೆ ಬರುವರೇ ತೊಕ್ಕೋಟ್ಟುವಿನಿಂದ ಬಸ್  ನಂಬ್ರ KA-19-AA-1006  ರೂಟ್ ನಂಬ್ರ 42  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು ಸಂಜೆ 6:40 ಗಂಟೆಗೆ ಕಂಕನಾಡಿ ಕರಾವಳಿ ಸರ್ಕಲ್ ತಲುಪುವಾಗ ಬಸ್ಸಿನಿಂದ ಇಳಿಯಲು ಬಸ್ಸು ನಿಲ್ಲಿಸಲು ನಿರ್ವಾಹಕನಿಗೆ ತಿಳಿಸಿದಂತೆ ಚಾಲಕನು ಬಸ್ಸನ್ನು ನಿಲ್ಲಸಿದನು ಮಹಮದ್ ಸಿರಾಜ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಾಲಕನು ಒಮ್ಮೆಲೆ ಬಸ್ಸನ್ನು ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ್ದರಿಂದ ಮಹಮದ್ ಸಿರಾಜನು ಕಾಂಕ್ರಿಟ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿದ್ದು  ದಿನಾಂಕ 09/07/2014 ರಂದು ಬೆಳಗ್ಗೆ 06:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುದ್ದಾಗಿದೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 8/07/2014 ರಂದು ಸಮಯ ಸುಮಾರು ರಾತ್ರಿ 7:25 ಗಂಟೆಗೆ ಆಳ್ವಾರಿಸ್ ಮೋಟಾರ್ಸ ಬಸ್ಸು ನಂಬ್ರ KA-20-AB-8178 ನೇ ದನ್ನು ನಂತೂರು ಕಡೆಯಿಂದ ಮೂಡುಶೆಡ್ಡೆ ಕಡೆಗೆ ಚಲಾಯಿಸಿಕೊಂಡು ಹೊಗುವರೇ ಮಂಗಳೂರು ನಗರದ ಕುಲಶೇಖರ ಚರ್ಚ ಗೇಟಿನ ಎದುರುಗಡೆ ರಸ್ತೆಯಲ್ಲಿ ಜನರನ್ನು ಇಳಿಸಲು ಬಸ್ಸನ್ನು ನಿಲ್ಲಿಸಿರುವಾಗ ಬಸ್ಸಿನ ಹಿಂದುಗಡೆಯಿಂದ ಬಂದ ಅಂದರೆ ನಂತೂರು ಕಡೆಯಿಂದ ಬಸ್ಸು ನಂಬ್ರ KA-19-C-1275 ನೆ ನಂಬರಿನ ಬಸ್ಸನ್ನು ಅದರ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಸ್ಸು ನಂಬ್ರ KA-20-AB-8178 ನೇ ದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬಸ್ಸಿನ ಹಿಂಭಾಗ ಸಂಪೂರ್ಣ ಜಖಂ ಆಗಿರುತ್ತದೆ ಅಪಘಾತದಿಂದ ಜನರಿಗೆ ಯಾವುದೆ ತರಹದ ಗಾಯಗಳಾಗಿರುವುದಿಲ್ಲ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/07/2014 ರಂದು 10:40 ಗಂಟೆಗೆ ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ಟಾಟಾ ಕಾರು ನಂಬ್ರ ಕೆಎ-19-ಎಂಡಿ-6063 ನೇದನ್ನು ಅದರ ಚಾಲಕರು ನಂತೂರು ಕಡೆಯಿಂದ ಪಂಪ್ ವೆಲ್ ಜಂಕ್ಷನ್ ಕಡೆಗೆ ಹೋಗುವರೇ ಸಂಚಾರ ಪೊಲೀಸರ್ ಸಿಗ್ನಲ್ ಗಾಗಿ ಕಾಯುತ್ತಿದ್ದು, ಸಿಗ್ನಲ್ ಸಿಕ್ಕೊಡನೆ ಪಂಪ್ ವೆಲ್ ಕಡೆಗೆ ತಿರುಗಿಸಿ ಚಲಾಯಿಸಿಕೋಮಡು ಹೋಗುವ ಸಮಯ ಕ್ರೇನ್ ನಂಬ್ರ ಕೆಎ-19-ಎಂಸಿ-1261 ನೇದನ್ನು ಅದರ ಚಾಲಕರು  ಅತೀವೇಗ ಅಜಾಗರೂಕತೆಯಿಂದ ಪಂಪ್ ವೆಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಟಾಟಾ ಕಾರು ನಂಬ್ರ ಕೆಎ-19-ಎಂಡಿ-6063 ನೇದರ ಹಿಂದಕ್ಕೆ ಹೊಡೆದ ಪರಿಣಾಮ ಟಾಟಾ ಕಾರು ನಂಬ್ರ ಕೆಎ-19-ಎಂಡಿ-6063 ನೇದರ ಹಿಂದಿನ ಭಾಗ ಮತ್ತು ಬಂಪರ್ ಜಖಂಗೊಂಡಿದ್ದು, ಚಾಲಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿಜಯಲತಾ ನಾಯರ್ ರವರು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಐಶ್ವರ್ಯ ಬ್ಯೂಟಿ ಪಾರ್ಲರ್ ಮತ್ತು ಲೇಡೀಸ್ ಗಾರ್ಮೆಂಟ್ಸ್  ಎಂಬ ಅಂಗಡಿಯನ್ನು ನಡೆಸುತ್ತಿದ್ದು, ಅಂಗಡಿಯಲ್ಲಿ ವ್ಯಾಪಾರವನ್ನು ಅಭಿವೃದ್ದಿ  ಪಡಿಸುವ ಉದ್ದೇಶದಿಂದ ಮಂಗಳೂರು ಯೂನಿಯನ್ ಬ್ಯಾಂಕ್, ಪದವು, ಮರೋಳಿ ಬ್ರಾಂಚ್ ನಿಂದ ಸಾಲವನ್ನು ಪಡೆಯುವ ಸಲುವಾಗಿ ತನ್ನ ಪರಿಚಯದ ಹಸೀನಾ ಮತ್ತು ಪುಟ್ಟಸ್ವಾಮಿ ಇವರಿಂದ ಯಂತ್ರೋಪಕರಣಗಳನ್ನು ಖರೀದಿಸುವರೇ ರೂ. 12,75,440/- ಗೆ ಕೊಟೇಷನ್ ಪಡೆದುಕೊಂಡು, ಯೂನಿಯನ್ ಬ್ಯಾಂಕ್ ಗೆ  ನೀಡಿದ್ದು, ಸದ್ರಿ ಬ್ಯಾಂಕಿನ ಮೆನೇಜರ್ ರವರು ಪಿರ್ಯಾದಿದಾರರಿಗೆ ರೂಪಾಯಿ 10,00,000/- ಹಣವನ್ನು ಸಾಲವಾಗಿ ದಿನಾಂಕ 27-07-2013 ರಂದು ಡಿ.ಡಿ.ನಂಬ್ರ 25453164 ನ್ನು ಪಿರ್ಯಾದಿದಾರರಿಗೆ ಕೊಟೇಷನ್ ನೀಡಿದ ಹಸೀನಾ ಮತ್ತು ಪುಟ್ಟ ಸ್ವಾಮಿಯವರ ಬಾಬ್ತು  ಚಿಂತನ್ ಮಾರ್ಕೆಂಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಹೆಸರಿನಲ್ಲಿ ನೀಡಿರುತ್ಥಾರೆ. ಇದನ್ನು ಹಸೀನಾ ಮತ್ತು ಪುಟ್ಟಸ್ವಾಮಿಯು ತಮ್ಮ ಖಾತೆಗೆ ಜಮಾಯಿಸಿ ನಗದೀಕರಿಸಿ, 2 ದಿನಗಳ ಒಳಗಾಗಿ ಯಂತ್ರೋಪಕರಣಗಳನ್ನು ಸರಬರಾಜು ಮಾಡುವುದಾಗಿ ನಂಬಿಸಿ  ಭರವಸೆಯನ್ನು ನೀಡಿ, ಇಂದಿನವರೇಗೂ ಯಂತ್ರೋಪಕರಣಗಳನ್ನು ಪಿರ್ಯಾದಿದಾರರಿಗೆ ಸರಬರಾಜು ಮಾಡದೇ ಮೋಸ ಮಾಡಿರುವುದಲ್ಲದೇ, ಹಣವನ್ನು ಪಿರ್ಯಾದಿದಾರರು ವಾಪಾಸು ಕೇಳಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವುದಾಗಿದೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 8-9/07/2014 ರಂದು ರಾತ್ರಿ 12.30 ಗಂಟೆಯಿಂದ 03.30 ಗಂಟೆಯ ಮಧ್ಯೆ ಸಮಯ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಪದ್ರೆಂಗಿ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ರಾವ್ ರವರು ತನ್ನ ಮನೆಯಲ್ಲಿ ಮಲಗಿದ್ದ ಸಮಯ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ತಪ್ಪಿಸಿ ಮನೆಯ ಒಳಗೆ ನುಗ್ಗಿ ಕಪಾಟಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಒಂದು ಚಿನ್ನದ ಬ್ರಾಸ್ ಲೆಟ್, 2 ಗ್ರಾಂ ತೂಕದ ಉಂಗುರ, ಒಂದು ಬೆಳ್ಳಿಯ ಸರ, 2 ಅರಿಶಿನ ಕುಂಕುಮ ಹಾಕುವ ಬೆಳ್ಳಿ ತಟ್ಟೆಗಳು ಮತ್ತು ನಗದು 6,000/- ರೂ. ಗಳನ್ನು ಅಂದರೆ ಒಟ್ಟು ಸುಮಾರು 38,000/- ರೂ. ಬೆಲೆಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರತ್ತಾರೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09/07/2014 ರಂದು ರಾತ್ರಿ ಗಂಟೆ 09-40 ಸಮಯಕ್ಕೆ  ಮಂಗಳೂರು ತಾಲೊಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಇಂಡಸ್ಟ್ರಿಯಲ್ ಪಾರ್ಕ್ ರಸ್ತೆಯಲ್ಲಿ  ಗಗನ್ ದೀಪ್ ಪ್ರಾಯ 23 ವರ್ಷ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ  ಕೆ.. 19 ಎಲ್. 2802 ನ್ನು ಇಂಡಸ್ಟ್ರಿಯಲ್ ಪಾರ್ಕ್ ನಿಂದ ಎನ್.ಹೆಚ್.  ರಸ್ತೆ ಕಡೆಗೆ ಬಹಳ ದುಡುಕುತನ ಹಾಗೂ ನಿರ್ಲಕ್ಷ್ಯ ತನ ದಿಂದ  ಚಲಾಯಿಸಿಕೂಂಡು ಬಂದ ಪರಿಣಾಮ ಅವರ ಹತೋಟಿ ತಪ್ಪಿ ಮೋಟಾರ್ ಸೈಕಲ್ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೂಡೆದು ಗಗನ್ ದೀಪ್ ರಸ್ತೆಗೆ ಬಿದ್ದು ತಲೆಗೆ ತಿವ್ರವಾಗಿ ಮೆದುಳು ಕಾಣುವಂತಹ ಗಾಯವಾಗಿ ಹಾಗೂ ಕೈಕಾಲುಗಳಿಗೆ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ.

No comments:

Post a Comment