ದೈನಂದಿನ ಅಪರಾದ ವರದಿ.
ದಿನಾಂಕ 27.07.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 4 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ-7-5-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಝೀನತ್ ಬಾನು ರವರು ಬೋಳಾರದ ಮುಸ್ತಫ ತನ್ವೀರ್ ಎಂಬವರನ್ನು ಮುಸ್ಲಿಂ ಸಂಪ್ರಾದಾಯದಂತೆ ಅಕುಳ ಯಶಸ್ವಿ ಹಾಲ್ ನಲ್ಲಿ ಮದುವೆಯಾಗಿದ್ದು, ಮದುವೆಯ ಸಮಯ ಪಿರ್ಯಾದಿಗೆ 75 ಪವನ್ ಚಿನ್ನವನ್ನು ನೀಡಿದ್ದು ಮದುವೆಯ ನಂತರ ಆರೋಪಿ ಮನೆಯಲ್ಲಿ ಅತ್ತೆ ಮಾವ, ನಾದಿನಿಯವರೊಂದಿಗೆ ವಾಸವಾಗಿದ್ದು, ಪಿರ್ಯಾದಿಯ ಗಂಡ 30 ಪವನು ಚಿನ್ನವನ್ನು ಪಡೆದು ಮಾರಾಟ ಮಾಡಿದ್ದು ಈ ಬಗ್ಗೆ ಕೇಳಿದಾಗ ಅದು ಮದುವೆಗೆ ಸಾಲ ಮಾಡಿದ ಕಾರಣ ಮಾರಿರುತ್ತೇನೆಂದು ಹೇಳಿ ಉಳಿದ ಚಿನ್ನವನ್ನು ಕೊಡುವಂತೆ ತೊಂದರೆ ಮಾಡುತ್ತಿದ್ದು, ನೀನು ಕುರೂಪಿ ನಾನು ಮನಸ್ಸು ಮಾಡಿದರೆ 100 ಪವನ್ ಚಿನ್ನ, ಕಾರು ಕೊಡುವ ಹೆಣ್ಣು ಸಿಗುತ್ತಿದ್ದಳು ಎಂದು ಬೈಯುತ್ತಿದ್ದರು. ದಿನಾಂಕ-21-06-2014 ರಂದು ನೀನು ನನಗೆ ಅಗತ್ಯವಿಲ್ಲ ನಿನ್ನ ತವರು ಮನೆಗೆ ಹೋಗು ನಿನಗೆ ಸೌದಿಯಿಂದ ತಲಾಕ್ ಕೊಡುತ್ತೇನೆ ಎಂದು ಬೆದರಿಸಿ ಸೌದಿಗೆ ಹೋಗಿದ್ದು ನನ್ನ ಅತ್ತೆ ಮಾವ ನಾದಿನಿಯವರು ಸೇರಿ ಇನ್ನು 50 ಪವನು ಚಿನ್ನ 1 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಿದ್ದು, ದಿನಾಂಕ 26-07-2014 ರಂದು ಬೆಳ್ಳಿಗ್ಗೆ 10-15 ಗಂಟೆಗೆ ಅತ್ತೆ, ನಾದಿನಿ ಮತ್ತು ಮಾವ ಒಟ್ಟಿಗೆ ಸೇರಿ ಪಿರ್ಯಾದಿಯನ್ನು ಮನೆಯಿಂದ ಹೊರ ನಡೆಯುವಂತೆ ಒತ್ತಾಯಿಸಿದ್ದು ಪಿರ್ಯಾದಿ ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನೀನು ಕುರೂಪಿ ನಿನ್ನ ಮುಖಕ್ಕೆ ನನ್ನ ಮಗ ಬೇರೆ ಕೇಡು ಎಂದು ನಿಂದಿಸಿ ಬಲಕೆನ್ನೆಗೆ ಹಲ್ಲೆ ಮಾಡಿರುತ್ತಾರೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:25-07-2014 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣ ಶೆಟ್ಟಿ ರವರು ರಾತ್ರಿ ಮಂಗಳೂರು ತಾಲುಕು ಬೋಳಿಯಾರು ಗ್ರಾಮದ ಮಲರಾಯಬಿಡು ಎಂಬಲ್ಲಿ ಇರುವ ಮನೆಯ ಹಟ್ಟಿಯಲ್ಲಿ ಜರ್ಸಿ ಜಾತಿಯ ಜಾನುವಾರುವನ್ನು ಕಟ್ಟಿ ಹಾಕಿದ್ದು, ದಿನಾಂಕ:26-07-2014 ರಂದು ರಾತ್ರಿ ಸುಮಾರು 2-00 ಗಂಟೆಗೆ ಎದ್ದು ನೋಡಿದಾಗ ಯಾರೋ ಕಳ್ಳರು ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಜಾನುವಾರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ಜಾನುವಾರುವಿನ ಅಂದಾಜು ಮೌಲ್ಯ ರೂ/-20,000 ಆಗಬಹುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೋಹನದಾಸ್ ರವರು ಮ್ಯಾನೇಜರ್ ಆಗಿರುವ ಲ್ಯಾಂಡ್ ಟ್ರೇಡರ್ಸ್ ಸಂಸ್ಥೆಗೆ ದಿನಾಂಕ: 24-07-2014 ರಂದು ಬೆಂಗಳೂರಿನಿಂದ ಪಿ.ರಾಘವ ಚೆಟ್ಟಿ, ಪಿ.ನಾರಾಯಣ ಸ್ವಾಮಿ ಚೆಟ್ಟಿ ರವರ ಸಂಸ್ಥೆಯಿಂದ SNT ಟ್ರಾನ್ಸ್ ಪೋರ್ಟ್ ಲಾರಿ ನಂಬ್ರ MH-43 E 9450ನೇದರಲ್ಲಿ ಕಬ್ಬಿಣದ ಸರಳುಗಳನ್ನು ಸಾಗಾಟ ಮಾಡುತ್ತಿದ್ದ ಚಾಲಕ ಶರತ್ ಇತರರೊಂದಿಗೆ ಸೇರಿಕೊಂಡು ಲ್ಯಾಂಡ್ಸ್ ಟ್ರೇಡ್ಸ್ ಸಂಸ್ಥೆಯ ಮಂಗಳೂರು ನಗರದ ಬೆಂದೂರವೆಲ್ ನ ನಿರ್ಮಾಣ ಹಂತದ ಅಟ್ಲಾಂಟಿಸ್ ಕಟ್ಟಡಕ್ಕೆ ತಲುಪಬೇಕಾದ 23,250 ಕೆ.ಜಿ ಕಬ್ಬಿಣದ ಸರಳುಗಳ ಪೈಕಿ ಸುಮಾರು 490 ಕೆ.ಜಿ ಕಬ್ಬಿಣದ ಸರಳುಗಳನ್ನು ಸಾಗಾಟದ ಸಮಯ ದಾರಿ ಮಧ್ಯೆ ದುರುಪಯೋಗ ಪಡಿಸಿ ಸಂಸ್ಥೆಗೆ ನಂಬಿಕೆ ದ್ರೋಹ ಮಾಡಿರುತ್ತಾರೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-07-2014 ರಂದು 15-45 ಗಂಟೆಗೆ ಮಂಗಳೂರು ತಾಲೂಕು ಪಂಜ ಗ್ರಾಮದ ಅಚ್ಚಣ್ಣ ದೇವಾಡಿಗರ ಮನೆಯ ಬಳಿ ಲಚ್ಚಿಲು ಎಂಬಲ್ಲಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕ ಕ್ಕೆ ಪಿರ್ಯಾದುದಾರರಾದ ಮುಲ್ಕಿ ಠಾಣಾ ಪಿ.ಎಸ್.ಐ. ಶ್ರೀ ಪರಮೇಶ್ವರ ರವರು ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ಮಾಡಿ ಕೋಳಿ ಅಂಕ ಜೂಜಾಟ ಆಡುತ್ತಿದ್ದ ಸುಧಾಕ, ಕೇಶವ, ಗಣೇಶ್ ದೇವಾಡಿಗ, ಗಣೇಶ್ ದೇವಾಡಿಗ ಎಂಬ 4 ಆರೋಪಿಗಳನ್ನು ದಸ್ತಗಿರಿ ಮಾಡಿ, ಕೋಳಿ ಅಂಕ ಜೂಜಾಟಕ್ಕೆ ಬಳಸಿದ ನಗದು ಹಣ 700/-, 2 ಬಾಲು ಕತ್ತಿ, ಸುತ್ತಲೂ ಉಪಯೋಗಿಸಿದ 2 ಕಪ್ಪು ಬಣ್ಣದ ನೂಲು, ಮತ್ತು 7 ವಿವಿಧ ಜಾತಿಯ ಹುಂಜಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಮಡಿರುವುದಾಗಿದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-07-2014 ರಂದು ಯುನಿವರ್ಸಿಟಿ ಕಾಲೇಜಿನ ವಿಧ್ಯಾರ್ಥಿ ಸಂಘದ ಚುನಾವಣಾ ಪ್ರಕ್ರಿಯೆಯು ಬೆಳಿಗ್ಗೆ 10-00 ಗಂಟೆಗೆ ಪ್ರಾರಂಭವಾಗಿರುತ್ತದೆ. ಹೀಗೆ ಚುನಾವಣೆಯು ಮದ್ಯಾಹ್ನ 2-30 ಗಂಟೆಗೆ ಮುಗಿದಿದ್ದು, ಚುನಾವಣೆಯ ಬಳಿಕ ವಿಧ್ಯಾರ್ಥಿಗಳು ವಿಜಯೋತ್ಸವದಲ್ಲಿದ್ದರು. ನಂತರ ಮದ್ಯಾಹ್ನ 2-40 ಗಂಟೆಗೆ ಫಿರ್ಯಾದುದಾರರಾದ ಡಾ. ಸತ್ಯನಾರಾಯಣ, ಪ್ರಿನ್ಸಿಪಾಲ್, ಯುನಿವರ್ಸಿಟಿ ಕಾಲೇಜ್, ಮಂಗಳೂರು ರವರು ಕಾಲೇಜಿನ ಕಂಪೌಂಡಿನ ಒಳಗಡೆ ನಿಲ್ಲಿಸಿದ್ದ ಬಸ್ ಬಗ್ಗೆ ವಿಚಾರಿಸಿದಾಗ ಅಲ್ಲೇ ಇದ್ದ ಒರ್ವ ಯುವಕ ಫಿರ್ಯಾದುದಾರರನ್ನು ಉದ್ದೇಶಿಸಿ "ಬಸ್ ನಿಲ್ಲಿಸಿದರ ಬಗ್ಗೆ ಕೇಳಲು ನೀನು ಯಾರು? ನಿನ್ನ ಕೆಲಸ ನೀನು ನೋಡಿಕೊ" ಎಂದು ಏಕವಚನದಲ್ಲಿ ಅವಾಚ್ಯವಾಗಿ ಬೈದಿರುತ್ತಾನೆ. ಅಲ್ಲದೇ "ನನ್ನ ವಿಚಾರಕ್ಕೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ" ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಆತನ ಹೆಸರು ಯತೀಶ್ ಎಂದು ತಿಳಿದು ಬಂದಿರುತ್ತದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-07-2014 ರಂದು 10.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಡೆಪ್ಯೂಟಿ ಡೈರೆಕ್ಟರ್, ಮೈನ್ಸ್ & ಜಿಯೊಲಾಜಿಕಲ್ ಡಿಪಾರ್ಟ್ಮೆಂಟ್, ಮಂಗಳೂರು ತಾಲ್ಲೂಕು ರವರು ಮಂಗಳೂರು ತಾಲೂಕಿನ ಮರವೂರು ಗ್ರಾಮದ ಪಲ್ಗುಣಿ ನದಿ ಬದಿಯಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಮರವೂರಿಂದ ಬಜಪೆ ರಸ್ತೆ ಕಡೆಗೆ ಬರುವಾಗ ಕರಂಬಾರು ಹತ್ತಿರ ತಪಾಸಣೆ ಮಾಡುತ್ತಿದ್ದಾಗ ಕೆ ಎ 19 ಸಿ 3211 ನಂಬ್ರದ ಲಾರಿಯಲ್ಲಿ ತುಂಬಿಸಿ ಸಾಗಿಸಲು ಪ್ರಯತ್ನಿಸಿದ ಸಮಯ ಸದ್ರಿ ವಾಹನದ ಚಾಲಕನಲ್ಲಿ ಮರಳು ಸಾಗಾಟದ ಪರವಾನಿಗೆ ಇದೆಯೇ ಎಂದು ಕೇಳಿ ಅದನ್ನು ತೋರಿಸುವಂತೆ ತಿಳಿಸಿದಾಗ. ಆತ ಯಾವುದೇ ದಾಖಲೆಗಳನ್ನು ತೋರಿಸದೇ ಪಿರ್ಯಾದಿದಾರರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವರ ಮೇಲೆ ಲಾರಿಯನ್ನು ಹಾಯಿಸಿ ಕೊಲೆಗೆ ಪ್ರಯತ್ನಿಸಿದ್ದು, ತಪ್ಪಿಸಿಕೊಂಡಾಗ ಲಾರಿಯನ್ನು ಅಲ್ಲಿಂದ ಚಲಾಯಿಸಿಕೊಂಡು ಹೋಗಿದ್ದು. ಅದನ್ನು ಹಿಂಬಾಲಿಸಿ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿ ಅದನ್ನು ಸುರತ್ಕ್ ಲ್ ಠಾಣಾ ಸರಹದ್ದಿನಲ್ಲಿ ಸುರತ್ಕ ಲ್ ಠಾಣಾ ಸಿಬಂದ್ದಿಯವರ ಸಹಾಯದಿಂದ ಪತ್ತೆ ಮಾಡಿದಾಗ ಚಾಲಕನು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾಗಿದೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-07-2014 ರಂದು ಪಿರ್ಯಾದಿದಾರರಾದ ಶ್ರೀ ಸುರೇಂದ್ರ ಪುತ್ರನ್ ರವರು ಅವರ ಪತ್ನಿಯನ್ನು ಅಸೌಖ್ಯದ ನಿಮಿತ್ತ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಅವರ ಆರೈಕೆ ಬಗ್ಗೆ ಪಿರ್ಯಾದಿದಾರರು ಮತ್ತು ಅವರ ಮಗಳು ಆಸ್ಪತ್ರೆಯಲ್ಲಿದ್ದು ದಿನಾಂಕ 25-07-2014 ರಂದು ಪಿರ್ಯಾದಿದಾರರು ಪತ್ನಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ 26-07-2014 ರಂದು ಬೆಳಿಗ್ಗೆ ಮನೆಯೊಳಗಿದ್ದ ಕಪಾಟನ್ನು ಪರಿಶೀಲಿಸಿದಾಗ ಅದರೊಳಗಿದ್ದ ಸುಮಾರು 2 ಪವನ್ ತೂಕದ ಬಂಗಾರದ ಸರ-1, ಸುಮಾರು 3 ಪವನ್ ತೂಕದ ಬಂಗಾರದ ಬಳೆ-2 ಹಾಗೂ ರೂ 10000/- ಇಲ್ಲದೇ ಇದ್ದು ಯಾರೋ ಕಳ್ಳರು ದಿನಾಂಕ 11-07-2014 ರಂದು ಬೆಳಿಗ್ಗೆ 09-00 ಗಂಟೆಯಿಂದ ದಿನಾಂಕ 26-07-2014 ರಂದು ಬೆಳಿಗ್ಗೆ 09-00 ಗಂಟೆ ಮದ್ಯೆ ಪಿರ್ಯಾದಿದಾರರ ಮನೆಯೊಳಗಿದ್ದ ಕಪಾಟಿನಿಂದ ಸುಮಾರು 5 ಪವನ್ ಬಂಗಾರದ ಒಡವೆ ಅಂದಾಜು ಮೌಲ್ಯ 1 ಲಕ್ಷ ಹಾಗೂ ರೂ 10000/- ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-07-2014 ರಂದು ಪಿರ್ಯಾದುದಾರರಾದ ಶ್ರೀ ನೌಫಾಲ್ ರವರು ಮತ್ತು ಅವರ ಅಕ್ಕ ಸಾಜಿದಾ ಹ್ಯಾರಿಸ್, ಬರ್ಜಿಸ್ ಹ್ಯಾರಿಸ್, ಬಹಿಯಾ ಹ್ಯಾರಿಸ್ರವರೊಂದಿಗೆ ತಮ್ಮ ಬಾಬ್ತು KL-11-AB-2324ನೇ ಇನ್ನೋವಾ ವಾಹನವನ್ನು ಕುತ್ತಾರ್ನಿಂದ ಮಂಗಳೂರಿನ ಕಡೆಗೆ ಬರ್ಜಿಸ್ ಹ್ಯಾರಿಸ್ ರವರು ಚಾಲಕರಾಗಿ ಕಾರನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಜಪ್ಪಿನಮೊಗರು ಗ್ರಾಮದ ನೇತ್ರಾವತಿ ಸೇತುವೆಯ ಸಮೀಪದ ಆಡಂಕುದ್ರು ಎಂಬಲ್ಲಿ ತಲುಪುತ್ತಿದ್ದಂತೆ ಸಂಜೆ ಸುಮಾರು 04-30 ಗಂಟೆಯ ಸಮಯಕ್ಕೆ ರಸ್ತೆಗೆ ನಾಯಿಯೊಂದು ಅಡ್ಡ ಬಂದಾಗ ಬರ್ಜಿಸ್ ಹ್ಯಾರೀಸ್‌ನು ಕಾರನ್ನು ನಿರ್ಲಕ್ಷತನದಿಂದ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರು ರಸ್ತೆಯ ಎಡಭಾಗ ಸುಮಾರು 10 ಅಡಿ ಆಳಕ್ಕೆ ಉರುಳಿ ಬಿತ್ತು ಇದರಿಂದಾಗಿ ಕಾರಿನಲ್ಲಿದ್ದವರಿಗೆ ಯಾವುದೇ ಗಾಯ ನೋವುಗಳುಂಟಾಗಿರುವುದಿಲ್ಲ ಆದರೆ ಕಾರಿನ ಮುಂಭಾಗದ ಗ್ಲಾಸ್, ಸೈಡ್‌ನ ಎಲ್ಲಾ ಗಾಜುಗಳು, ಹಿಂಬದಿ ಗಾಜು, ಕಾರಿನ ರೂಫ್, ಮುಂಬಾಗದ ಬಾನೆಟ್, ಎಡ ಭಾಗದ ಬಾಗಿಲು ಮತ್ತಿತರ ಭಾಗಗಳು ಜಖಂಗೊಂಡಿರುತ್ತದೆ ಈ ಅಪಘಾತಕ್ಕೆ ಬರ್ಜಿಸ್ ಹ್ಯಾರಿಸ್ ನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಎಸ್. ಮೋಹನ್ ರವರು ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಯಾಗಿರುತ್ತಾರೆ. ಪಿರ್ಯಾದುದಾರರು ತಮ್ಮ ಸಿಬ್ಬಂದಿಯವರ ಜೊತೆಯಲ್ಲಿ ಖಚಿತ ಮಾಹಿತಿಯಂತೆ ದಿನಾಂಕ 10-07-2014 ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ತೊಕ್ಕೊಟ್ಟು, ಸಂಕೋಳಿಗೆ ಎಂಬಲ್ಲಿ ರಾ.ಹೆ. 66 ರಲ್ಲಿ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ವಾಹನ ಸಂಖ್ಯೆ (1) KA 55 942, (2) KL 13 U 4726, (3) KA 01 AA 6271, (4) KL 57 D 1290, (5) KA 21 A 4876 ನೇಯದ್ದನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಮರುಳು ತುಂಬಿರುವುದು ಕಂಡು ಬಂದಿರುತ್ತದೆ. ಸದರಿ ಈ ಎಲ್ಲಾ ವಾಹನ ಚಾಲಕರಿಗೆ ಉಪ ಖನಿಜ ಸಾಗಾಟಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿ ಮಹಾರಾಷ್ಟ್ರದ ನಂದೇಡ ಜಿಲ್ಲೆಯ ಬಿಲೋಳಿ ತಾಲೂಕಿನ ಗುಂಜಿಗಾಂವ್ ಪ್ರದೇಶದಿಂದ ಕೇರಳದ ಮಂಜರ ಪ್ರದೇಶಕ್ಕೆ ಮರಳು ಸಾಗಾಟ ನಡೆಸಲು ನೀಡಿರುವ ಪರವಾನಿಗೆಗಳನ್ನು ಹಾಜರುಪಡಿಸಿ ಪರಾರಿಯಾಗಿರುತ್ತಾರೆ. ಪರವಾನಿಗೆಯನ್ನು ಪರಿಶೀಲಿಸಿದಾಗ ಮಹಾರಾಷ್ಟ್ರದಿಂದ ಮಂಗಳೂರು ತನಕ ವಾಹನ ಚಲಿಸಿದ್ದು, ಈ ಬಗ್ಗೆ ಯಾವುದೇ ತನಿಖಾ ಠಾಣೆಯಲ್ಲಿ ಪರಿಶೀಲನೆ ನಡೆಸಿದ ಮೊಹರುಗಳು ಹಾಕಿರುವುದಿಲ್ಲ. ಅಲ್ಲದೇ ಪರವಾನಿಗೆಯ ಅವಧಿಯನ್ನು ನಿಗದಿಪಡಿಸಿದ ದಿನಾಂಕವನ್ನು ಹಾಕಿರುವುದು ಕಂಡು ಬಂದಿರುವುದಿಲ್ಲ. ಅಲ್ಲದೇ ಮರಳನ್ನು ಪರಿಶೀಲಿಸಿದಾಗ ಅದು ಸ್ಥಳೀಯ ಮರಳು ಎಂಬಂತೆ ಕಂಡು ಬಂದಿರುತ್ತದೆ. ಈ ಮರಳನ್ನು ಮಂಗಳೂರಿನ ಸ್ಥಳೀಯ ಪ್ರದೇಶಗಳಲ್ಲಿ ಕಳ್ಳತನದಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ರೀತಿ ವಂಚಿಸಿ ಸಾಗಾಟ ನಡೆಸುತ್ತಿರುವುದು ಎಮ್.ಎಮ್. 1957 ರ 4(1) ಮತ್ತು 21 ಹಾಗು ಕರ್ನಾಟಕ ಉಪಖನಿಜ ರಿಯಾಯ್ತಿ ನಿಯಮ 1994 ರ 31(ಆರ್) 42, 43(2) ಉಪನಿಯಮಗಳ ನಿಯಮ ಉಲ್ಲಂಘನೆಯಾಗಿರುತ್ತದೆ.
No comments:
Post a Comment