ದೈನಂದಿನ ಅಪರಾದ ವರದಿ.
ದಿನಾಂಕ 05.07.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-07-2014 ರಂದು ಸಮಯ ಸುಮಾರು ಸಂಜೆ 05.30 ಗಂಟೆಗೆ MH-02-CK-3189 ನಂಬ್ರದ ಮೋಟರ್ ಸೈಕಲ್ ನ್ನು ಅದರ ಸವಾರ ಜಯರಾಮ ಎಂಬಾತನು ಶಾದಿ ಮಹಲ್ ಕಡೆಯಿಂದ ಜೆಪ್ಪು ಮಾರ್ಕೆಟ್ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಶ್ರೀ ಝುಬೇರ್ ಅಹಮ್ಮದ್ ರವರ ತಾಯಿ ಶ್ರೀ ಮತಿ ಶಮೀಮ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ, ಶ್ರೀ ಮತಿ ಶಮೀಮ್ ರವರು ರಸ್ತೆಗೆ ಬಿದ್ದು ,ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯಾವಾಗಿ ಯುನಿಟಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-07-2014 ರಂದು ರಾತ್ರಿ ಸುಮಾರು 9:30 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಕೈಕಂಬ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಎನ್ಸನ್ ಸಚಿತ್ ಡಿ'ಸೋಜಾ ರವರ ಚಿಕ್ಕಪ್ಪ ಹೆನ್ರಿ ಡಿಸೋಜಾರವರು ನಂತೂರು ಕಡೆಯಿಂದ ಸವಾರಿ ಮಾಡಿಕೊಂಡು ಬಂದು ತೆರೆದ ಡಿವೈಡರ್ ಮೂಲಕ ರಸ್ತೆಯ ಬಲಕ್ಕೆ ಹೋಗುವರೇ ಕೆಎ-19-ವೈ-4263 ನಂಬ್ರದ ಮೋಟಾರು ಸೈಕಲನ್ನು ತಿರುಗಿಸುತ್ತಿದ್ದಾಗ ಕೆಎ-21-ಎ-7957 ನಂಬ್ರದ ಇಂಡಿಕಾ ಕಾರನ್ನು ಅದರ ಚಾಲಕ ವೆಂಕಪ್ಪ ನಾಯಕ್ ಎಂಬಾತನು ಪಡೀಲು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 73ನೇ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಹೆನ್ರಿ ಡಿಸೋಜಾರವರ ಬಲಕೈಗೆ, ಬಲಕಣ್ಣಿನಬಳಿ ಮುಖಕ್ಕೆ, ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಮೋಟಾರು ಸೈಕಲಿನ ಸಹಸವಾರ ಪಿರ್ಯಾದಿದಾರರ ತಮ್ಮ ಜೀವನ್ ತಾವ್ರೋ ಎಂಬವರಿಗೆ ಕೂಡಾ ಗಾಯವಾಗಿದ್ದು, ಗಾಯಾಳು ಹೆನ್ರಿ ಡಿಸೋಜಾರವರು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಗಾಯಾಳು ಜೀವನ್ ತೌರೋರವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-07-2014 ರಂದು ಬೆಳಿಗ್ಗೆ 10:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಹನೀಫ್ ರವರು ತನ್ನ ಬಾಬ್ತು ಬೊಲೆರೋ ವಾಹನ ಸಂಖ್ಯೆ ಕೆಎ-04-ಎಂಇ-4519 ನ್ನು ಕುರ್ನಾಡು ಗ್ರಾಮದ ಮುಡಿಪು ಬಳಿಯಲ್ಲಿ ಪಾರ್ಕ್ ಮಾಡುವ ಸಲುವಾಗಿ, ವಾಹನವನ್ನು ಪಾರ್ಕ್ ಮಾಡುವ ಸ್ಥಳದಲ್ಲಿ ಆರೋಪಿ 2ನೇ ದೇವಪ್ಪಾ ರವರ ಅಂಗಡಿಯ ಎದುರುಗಡೆ ರಸ್ತೆಯಲ್ಲಿ ಅಡ್ಡ ಇಟ್ಟಿದ್ದ ಕಲ್ಲನ್ನು ಸರಿಪಡಿಸುವಾಗ, ಅಲ್ಲಿಗೆ ಬಂದ ಆರೋಪಿ 1 ರಿಂದ 4ನೇಯವರಾದ ತುಳಸಿದಾಸ್, ದೇವಪ್ಪ, ಶಶಿ, ದೇವಪ್ಪ ಆಳ್ವ ರವರುಗಳು ಪಿರ್ಯಾದಿದಾರರ ಶರ್ಟ್ ಕಾಲರ್ ಹಿಡಿದು, ಅಕ್ರಮವಾಗಿ ತಡೆದು ನಿಲ್ಲಿಸಿ, ಪಿರ್ಯಾದಿದಾರರಿಗೆ ಕೈಗಳಿಂದ ಹಲ್ಲೆ ಮಾಡಿದ್ದು, ಆರೋಪಿ ತುಳಸಿದಾಸ್ ನು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಘಟನೆಗೆ ಪಿರ್ಯಾದಿದಾರರು ಆರೋಪಿ ದೇವಪ್ಪ ರವರ ಅಂಗಡಿಯ ಎದುರುಗಡೆ ಇಟ್ಟಿರುವ ಕಲ್ಲು ತೆಗೆದಿರುವ ದ್ವೇಷದಿಂದ ಕೃತ್ಯ ಎಸಗಿರುವುದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-07-2014 ರಂದು ಬೆಳಿಗ್ಗೆ 10:00 ಗಂಟೆಗೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್ ಬಳಿಯಲ್ಲಿ ಪಿರ್ಯಾದಿದಾರರಾದ ಶ್ರೀ ತುಳಸಿದಾಸ್ ರವರು ತನ್ನ ಮಾವ ದೇವಪ್ಪರವರ ಅಂಗಡಿಯ ಬಳಿ ಇದ್ದಾಗ ಅಲ್ಲಿಗೆ ಬಂದ ಆರೋಪಿ ಮಹಮ್ಮದ್ ಹನೀಫ್ ನು ದೇವಪ್ಪರವರ ಅಂಗಡಿಯ ಎದುರುಗಡೆ ಇಟ್ಟಿದ್ದ ಕಲ್ಲನ್ನು ತೆಗೆದು, ದೇವಪ್ಪರವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಬಳಿಕ ಅಲ್ಲಿಯೇ ಇದ್ದ ಪಿರ್ಯಾದಿದಾರರನ್ನು ಕುರಿತು "ಇದಕ್ಕೆ ನೀನು ಕೂಡಾ ಸಪೋರ್ಟ್ ಮಾಡುತ್ತೀ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಅಂಗಿಯ ಕಾಲರ್ ಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಪಿರ್ಯಾದಿದಾರರ ಮೈಕೈಗೆ, ಬೆನ್ನಿಗೆ ಮತ್ತು ಎಡಕೈಗೆ ಕೈಯಿಂದ ಹಲ್ಲೆ ನಡೆಸಿ, ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 4-7-2014 ರಂದು ಮದ್ಯಾಹ್ನ 1-20 ಗಂಟೆಗೆ ಜ್ಯೋತಿ ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ಸು ಕೆಎ-19/ಎಎ-1539 ನೇ ನಂಬ್ರದ ಸುರಕ್ಷ ಬಸ್ಸನ್ನು ಅದರ ಚಾಲಕನು ಪುತ್ತೂರು ಕಡೆಗೆ ಹೋಗುವ ಕೆ.ಎಸ್.ಆರ್.ಟಿ. ಸಂಸ್ಥೆಯ ಕೆಎ-19/ಎಫ್-3047 ಬಸ್ಸಿಗೆ ಅಡ್ಡಗಟ್ಟಿ, ಸದರಿ ಖಾಸಗಿ ಬಸ್ಸಿನ ನಿರ್ವಾಹಕ ಕೆಳಗಿಳಿದು ಬಂದಾಗ ಕೆ.ಎಸ್.ಆರ.ಟಿ.ಸಿ. ಬಸ್ಸಿನ ನಿರ್ವಾಹಕ ಕೃಷ್ಣಪ್ಪ ಬಡಿಗೇರರವರು ಬಸ್ಸಿಗೆ ಹೋಗಲು ದಾರಿ ಬಿಡಿ ಎಂದು ಕೇಳಿದ್ದಕ್ಕೆ ಖಾಸಗಿ ಬಸ್ಸಿನ ನಿರ್ವಾಹಕ ಪಿರ್ಯಾದಿ ಕೃಷ್ಣಪ್ಪರವರಿಗೆ "ಹಿಂದೆ ಹೋಗು ಬೇಕಾದ್ರೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕ ನೌಕರನಾದ ಪಿರ್ಯಾದಿದಾರರ ಸಮವಸ್ತ್ರದ ಶರ್ಟಿನ ಕಾಲರ್ ಹಿಡಿದು ಶರ್ಟ್ ನ ಎಡಕಿಸೆಯನ್ನು ಹರಿದು ಹಾಕಿ, ಕೈಯಿಂದ ಫಿರ್ಯಾದಿದಾರರ ಬಲ ಕಿವಿಯನ್ನು ಎಳೆದು ವಾಪಾಸ್ಸು ಕಿವಿಗೆ ಕೈಯಿಂದ ಹೊಡೆದು ಬಲ ಕೈಯನ್ನು ಹಿಡಿದು ತಿರುಚಿ ಹಲ್ಲೆ ನಡೆಸಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.
6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಜೇಸಿಂತಾ ಅರನ್ಹಾ ರವರು ಮತ್ತು ಅವರ ಮಗ ಕ್ಲೋಡಿನ್ ಜೊತೆ ಯಾಗಿ ದಿನಾಂಕ 03-07-2014 ರಂದು ರಾತ್ರಿ 10.00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕಿನ್ನಿಗೋಳಿ ಬಟ್ಟಕೋಡಿ ಲವ್ ಪ್ಯಾರಾಡೈಸ್ ಮನೆಯಲ್ಲಿ ವಾಸವಾಗಿರುವ ಎಡ್ವರ್ಡ್ ರೊನಾಲ್ಡ್ ಮತ್ತು ಅವರ ಅತ್ತೆ ಸ್ಟೇಪಾನಿಯಾ ಡಿ'ಸೋಜಾ ರವರ ಮನೆಗೆ ಮಲಗಲು ಬಂದವರು ರಾತ್ರಿ 11 ಗಂಟೆಗೆ ಅವರ ಮನೆಯಲ್ಲಿದ್ದ ಸ್ಟೇಪಾನಿಯಾ ರವರೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 04-07-2014 ರಂದು ರಾತ್ರಿ ಸುಮಾರು 1.20 ಗಂಟೆಯ ಸುಮಾರಿಗೆ ಸುಮಾರು 4 ಮಂದಿ ಅಪರಿಚಿತ ಯುವಕರು ಮನೆಯ ಹಿಂಬದಿಯ ಬಾಗಿಲನ್ನು ಯಾವುದೋ ಅಯುಧದಿಂದ ಬಲತ್ಕಾರವಾಗಿ ತೆಗೆದು ಒಳಗಡೆ ಬಂದವರು ಪಿರ್ಯಾದಿದಾರರು ಮಲಗಲು ಉಪಯೋಗಿಸಿದ ಬೆಡ್ ಶೀಟಿನಿಂದ ಅವರನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆಯನ್ನು ಕಟ್ಟಿ ನಂತರ ಮನೆಯ ಹಾಲ್ ನಲ್ಲಿ ಮಲಗಿದ್ದ ಪಿರ್ಯಾದಿದಾರರ ಮಗನನ್ನು ಕೂಡಾ ರೂಮಿನಲ್ಲಿ ಕೂಡಿ ಹಾಕಿ ಬಟ್ಟೆಯಿಂದ ಕಟ್ಟಿ ರೂಮಿಗೆ ಲಾಕ್ ಮಾಡಿದ್ದಲ್ಲದೇ ಸದ್ರಿ ಮನೆಯ ಸ್ಟೇಫಾನಿಯಾ ಡಿ'ಸೋಜಾ ರವರ ರೂಮಿಗೆ ಹೋಗಿ ಬಟ್ಟೆಯಿಂದ ಅವರ ಕೈಯನ್ನು ಕಟ್ಟಿ ಬಾಯಿಗೆ ಬಟ್ಟೆ ತುರುಕಿಸಿ ನಂತರ ಪಿರ್ಯಾದಿದಾರರಲ್ಲಿ ಮನೆಯ ಕೀ ಎಲ್ಲಿದೆ ಎಂದು ಕೇಳಿ ಮನೆಯ ಒಳಗಡೆ ಎಲ್ಲಾ ಕಡೆ ಜಾಲಾಡಿಸಿ ಮನೆಯಲ್ಲಿ 100 ಪವನ್ ಚಿನ್ನ ಹಾಗೂ ಲಕ್ಷಗಟ್ಟೆಲೆ ಹಣ ಇದೆ ಎಂಬುದಾಗಿ ನಮಗೆ ತಿಳಿದಿದೆ. ಅದು ಎಲ್ಲಿದೆ ಎಂಬುದಾಗಿ ತಿಳಿಸಿ, ಕೂಡಲೇ ಹಣ ಬಂಗಾರ ಎಲ್ಲಿದೆ ಎಂದು ಹೇಳಬೇಕು ಎಂದು ಗದರಿಸಿ ಅರೋಪಿಗಳು ತಂದಿದ್ದ ಟಾರ್ಚು ಲೈಟಿನಿಂದ ಮನೆಯಲ್ಲಿ ಹುಡುಕಿ ನಂತರ ಮನೆಯ ಗೋಡ್ರೆಜ್ ನಲ್ಲಿ ಹುಡುಕಾಡಿದಲ್ಲಿ ಹಣ ಬಂಗಾರ ಸಿಗದೇ ಇದ್ದು ಪಿರ್ಯಾಧಿದಾರರ ಮನೆಯ ಕೀ ಇಡುವ ಬ್ಯಾಗಿನ ಪರ್ಸಿನ ಒಳಗಡೆ ಇದ್ದ 1 ಪವನ್ ತೂಕದ ಹವಳದ ಚಿನ್ನದ ಚೈನ ನ್ನು ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ 4 ಮಂದಿ ಅರೋಪಿತರುಗಳು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ಸುಲಿಗೆ ಮಾಡುವ ಸಮಯ ಮನೆಯಲ್ಲಿದ್ದ ಸ್ಟೇಪಾನಿಯಾ ರವರಿಗೆ ಕೈಗೆ ಬಟ್ಟೆಯಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿಸಿದ ಪರಿಣಾಮ ಗಾಯವಾಗಿ ಎರಡು ಹಲ್ಲು ಮುರಿದು ಹೋಗಿದ್ದಲ್ಲದೇ ಬಲಕೈಗೆ ರಕ್ತಗಾಯವುಂಟಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ. ಅರೋಪಿಗಳು ಸುಲಿಗೆ ಮಾಡಿದ ಬಂಗಾರದ ಅಂದಾಜು ಮೌಲ್ಯ ರೂ 25,000/- ಆಗಬಹುದು.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.07.2014 ರಂದು ಸಮಯ ಸುಮಾರು 13:30 ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ಸಂಜೀವ ಶೆಟ್ಟಿ ರವರು KA 19 AA 2098 ನೇ ಆಟೋ ರಿಕ್ಷಾದಲ್ಲಿ ಪಿರ್ಯಾದಿದಾರರ ಮಗಳು ಮಮತಾ, ಮೊಮ್ಮಗಳು ರಿಶಾ ಮತ್ತು ರಿಯಾ ಎಂಬವರುಗಳನ್ನು ಕುಳ್ಳಿರಿಸಿಕೊಂಡು ಸಚ್ಚರಿಪೇಟೆಯಿಂದ ಪಿರ್ಯಾದಿಯ ಮನೆಯಾದ ಬೊಳ ಕಡೆಗೆ ಹೋಗುತ್ತಿರುವ ಸಮಯ ಕಲ್ಳೋಳಿ ಮೂರು ಮಾರ್ಗ ಎಂಬಲ್ಲಿಗೆ ತಲುಪುವಾಗ ಬೋಳ ಕಡೆಯಿಂದ KA 19 MC 7583ನೇ ಇನ್ನೋವಾ ಕಾರು ಚಾಲಕ ವಿನಯ ಎಂಬವನು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿದಾರರ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ ಬಲಕಾಲಿನ ಮಣಿಗಂಟಿಗೆ ರಕ್ತ ಗಾಯ ಹಾಗೂ, ಬಲ ಕಣ್ಣಿನ ಬಳಿ ತರಚಿದ ಗಾಯವಾಗಿರುತ್ತದೆ, ಫಿರ್ಯಾದಿಯ ಮಗಳು ಮತ್ತು ಮೊಮ್ಮಕ್ಕಳಿಗೆ ಸ್ವಲ್ಪ ತರಚಿದ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು, ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02.07.2014 ರಂದು ರಾತ್ರಿ ಸುಮಾರು 21.30 ಗಂಟೆಗೆ ಶ್ರೀಮತಿ. ಶ್ರುತಿಯೂ ತನ್ನ ಪ್ರಾಯ ಸುಮಾರು 3 ವರ್ಷ ವಯಸ್ಸಿನ ಹೃತ್ವಿಕ್ ಎಂಬ ಗಂಡು ಮಗುವಿನೊಂದಿಗೆ ತನ್ನ ತಾಯಿ ಮನೆಯಾದ ವಾಮಂಜೂರು ಸಂತೋಷ್‌ನಗರ ಎಂಬಲ್ಲಿ ಮಲಗಿದ್ದು ಮರುದಿನ ತಾರೀಕು 03.07.2014 ರಂದು ಮುಂಜಾನೆ 05.00 ಗಂಟೆಗೆ ತನ್ನ ತಾಯಿ ಶ್ರೀಮತಿ ಸುಮತಿಯವರು ನೋಡಿದಾಗ ಕಾಣೆಯಾಗಿರುವುದಾಗಿಯೂ, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ: 249/14 ಕಲಂ: ಹೆಂಗಸು ಮತ್ತು ಮಗು ಕಾಣೆ ಎಂಬುದರಡಿಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 04.07.2014 ರಂದು ಬೆಳಿಗ್ಗೆ ಸುಮಾರು 07.00 ಗಂಟೆಗೆ ಶ್ರೀಮತಿ.ಶ್ರುತಿ ಹಾಗೂ ಆಕೆಯ ಪ್ರಾಯ ಸುಮಾರು 3 ವರ್ಷದ ಹೃತ್ವಿಕ್ ಎಂಬವನ ಮೃತಶರೀರವು ವಾಮಂಜೂರು ಸಂತೋಷ್‌ನಗರ ಎಂಬಲ್ಲಿರುವ ಸಾರ್ವಜನಿಕ ನೀರು ತುಂಬಿದ ಕಟ್ಟೆ ಇರುವ ಬಾವಿಯಲ್ಲಿ ತೇಲಾಡಿಕೊಂಡಿರುವುದಾಗಿಯೂ, ಶ್ರೀಮತಿ.ಶ್ರುತಿಯು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೀರು ತುಂಬಿದ ಬಾವಿಗೆ ತನ್ನ ಮಗುವಿನೊಂದಿಗೆ ದುಮುಕಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಶ್ರೀಮತಿ.ಶ್ರುತಿಯು ತನ್ನ ಹೆತ್ತ ಮಗು ಹೃತ್ವಿಕ್ ಎಂಬವನ ಮರಣಕ್ಕೆ ಕಾರಣ ಎಂಬುದಾಗಿಯೂ, ಈ ಬಗ್ಗೆ ಶ್ರೀಮತಿ.ಶ್ರುತಿಯವರ ವಿರುದ್ದ ಕಾನೂನುಕ್ರಮ ಜರುಗಿಸುವಂತೆ ಪಿರ್ಯಾದಿ ನೀಡಿರುವುದಾಗಿದೆ.
No comments:
Post a Comment