Friday, July 25, 2014

Daily Crime Reports 25-07-2014

ದೈನಂದಿನ ಅಪರಾದ ವರದಿ.

ದಿನಾಂಕ 25.07.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-07-2014 ರಂದು ಸಂಜೆ  ಪಿರ್ಯಾದಿದಾರರಾದ ಶ್ರೀಮತಿ ಜಯಂತಿ ರವರು ತನ್ನ ಗಂಡನೊಂದಿಗೆ ಮನೆಯಿಂದ  ಹೊರಟು ಕಾನಪೇಟೆಗೆ ಅಗತ್ಯ ಸಾಮಾನುಗಳನ್ನು ತರಲು ಹೋಗುತ್ತಾ  ಕ್ಯಷ್ಣ ನಗರ ಮಂದಿರದ ಬಳಿ ರಸ್ತೆ ದಾಟಲು  ನಿಂತಿರುವ ಸಮಯ ಸುಮಾರು 7.30 ಗಂಟೆಗೆ ಕೆಎ.19.ಎಎ.3313 ನೇ ಕಾರೊಂದನ್ನು ಅದರ  ಚಾಲಕ ಹರೀಶ್ ಎಂಬವರು ಕಾನ ಕಡೆಯಿಂದ ನಿರ್ಲಕ್ಷತನ ಹಾಗೂ ಆಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದಿದಾರರ ಗಂಡನಿಗೆ ಢಿಕ್ಕಿ ಹೊಡೆದು ಪಿರ್ಯಾದಿದಾರರ ಗಂಡ ಚಂದ್ರಹಾಸ ಶೆಟ್ಟಿಯವರ ಎಡ ಕಾಲಿಗೆ ಗಾಯವಾಗಿ .ಜೆ.ಆಸ್ಪತ್ರೆ ಮಂಗಳೂರು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಕೆ.ಎಂ.ಪ್ರಭಾದೇವಿ ಹಾಗೂ ಅವರ ಮಗಳಾದ ಶ್ರೀಮತಿ ಸುಮಾ ಮಾನ್ವಿ ಇವರು ಮಂಗಳೂರಿನ ಕಸಬಾ ಬಜಾರ್ ಗ್ರಾಮದ ಸರ್ವೆ ನಂ 1530 ವಿಸ್ತೀರ್ಣ 0.65 ಎಕ್ರೆ ಜಾಗದ ವಾರಸುದಾರರಾಗಿರುತ್ತಾರೆ. ಸದ್ರಿ ಆಸ್ತಿಯಲ್ಲಿ ಹಲವಾರು ಬಾಡಿಗೆದಾರರಿದ್ದು, ಸದ್ರಿ ಬಾಡಿಗೆಮನೆಯಲ್ಲಿ ವಾಸವಿರುವ ದೇವಪ್ಪ ಗಟ್ಟಿ ಹಾಗೂ ಅವರ ಮಗ ಫಿರ್ಯಾದಿದಾರರಿಗೆ ತೊಂದರೆ ಕೊಡುತ್ತಿದ್ದು, ದಿನಾಂಕ 23-07-2014 ರಂದು ಫಿರ್ಯಾದಿದಾರರು ಸದ್ರಿ ಜಮೀನಿನ ಬಳಿಗೆ ಹೋದಾಗ ಜಮೀನಿನಲ್ಲಿದ್ದ ರೂ. 25000/- ಕ್ಕಿಂತಲು ಅಧಿಕ ಬೆಲೆಬಾಳುವ ದೇವದಾರು ಮರವನ್ನು ಕಡಿದು ನೆಲಸಮ ಮಾಡಿದ್ದು, ಸ್ಥಳಕ್ಕೆ ತೆರಳಿದ್ದ ಫಿರ್ಯಾದಿದಾರರಿಗೆ ಹಾಗೂ ಅವರ ಮಗಳಾದ ಶ್ರೀಮತಿ ಸುಮಾ ಮಾನ್ವಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನೀವು ಜಾಗಕ್ಕೆ ಕಾಲಿಟ್ಟದ್ದೇ ಆದರೆ ಎಚ್ಚರಿಕೆ ನಮ್ಮನ್ನು ಪ್ರಶ್ನಿಸಲು ನೀವು ಯಾರು? ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದು, ಆರೋಪಿತರು ಜಾಗಕ್ಕೆ ಅತಿಕ್ರಮಣ ಮಾಡಿ ಅನಧಿಕೃತವಾಗಿ ಅರಣ್ಯ ಇಲಾಖೆಗೆ ಅಥವಾ ಫಿರ್ಯಾದಿದಾರರಿಗೆ ತಿಳಿಸದೇ ಯಾವುದೇ ಇಲಾಖೆಯ ಪರವಾನಿಗೆಯನ್ನು ಪಡೆಯದೇ ನಷ್ಠ ಉಂಟುಮಾಡಿರುತ್ತಾರೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-07-2014 ರಂದು ರಾತ್ರಿ ಮಂಗಳೂರು ನಗರದ ಹಂಪನ್ ಕಟ್ಟೆಯಲ್ಲಿರುವ ಫಿರ್ಯಾದುದಾರರಾದ ಫಾ. ಜಾರ್ಜ್ ಸುನೀಲ್ ಡಿ'ಸೋಜಾ ರವರು ಸಹಾಯಕ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಮಿಲಾಗ್ರೀಸ್ ಚರ್ಚ್ ಆಫೀಸ್ ಕಿಟಕಿಯ ಗ್ರಿಲ್ಸ್ ಕಬ್ಬಿಣದ ಸರಳುಗಳನ್ನು ಯಾರೋ ಕಳ್ಳರು ತುಂಡರಿಸಿ ಒಳ ಪ್ರವೇಶಿಸಿ ಸಹಾಯಕ ಎಕೌಂಟೆಂಟ್ ಸನ್ವೀರ್ ಡಿಸೋಜಾ, ಶ್ರೀಮತಿ ಜೆಸ್ಸಿ ಡಿಸೋಜಾ ಹಾಘೂ ಮೆನೆಜರ್ ಡಿ.ಜೆ ಪತ್ರಾವೂ ರವರು ಕುಳಿತುಕೊಳ್ಳುವ ಮೇಜಿನ ಡ್ರವರ್ ಗಳನ್ನು ಬಲತ್ಕಾರವಾಗಿ ತೆಗೆದು ಅದರಲ್ಲಿದ್ದ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ ನಗದು ಹಣ ರೂ 1,22,800/- ನಗದು ಹಣ ರೂ 25,000/- ಮೌಲ್ಯದ ಬಂಗಾರ ಹಣ ಮತ್ತು ರೂ 2200/- ಮೌಲ್ಯದ ನೊಕಿಯೋ ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-07-2014 ರಂದು ಸಂಜೆ 6-58 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಭವ್ಯ ಡಿ.ಎಮ್. ಮಹಿಳಾ ಪೊಲೀಸ್ ಉಪನಿರೀಕ್ಷಕರು, ಸಂಚಾರ ಪೂರ್ವ ಠಾಣೆ ಕದ್ರಿ, ಮಂಗಳೂರು ರವರು ಸಮವಸ್ತ್ರದಲ್ಲಿ ಸಂಚಾರ ನಿಯಂತ್ರಣ ಹಾಗೂ ಸಿಬ್ಬಂಧಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಾ ಕರ್ತವ್ಯದಲ್ಲಿರುವಾಗ ರೈಲ್ವೆ ನಿಲ್ದಾಣ ಕಡೆಯಿಂದ ಹಂಪನಕಟ್ಟೆ ಜಂಕ್ಷನ್ ಕಡೆಗೆ ಬಿಳಿ ಬಣ್ಣದ ಹೋಂಡಾ ಆಕ್ಟಿವ್ ವಾಹನವನ್ನು ಅದರ ಸವಾರಳು ಹೆಲ್ಮೆಟ್ ಧರಿಸದೇ ಚಲಾಯಿಸಿಕೊಂಡು ಬರುತ್ತಿರುವಾಗ, ಜೊತೆಯಲ್ಲಿದ್ದ ಸಿಬ್ಬಂಧಿಯವರು ತಡೆದು ನಿಲ್ಲಿಸಿದಾಗ, ಸವಾರಳು ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾಳೆ. ಸಮಯದಲ್ಲಿ ಪಿರ್ಯಾದಿದಾರರು ಅಲ್ಲಿಗೆ ಹೋಗಿ ಆಕೆಯನ್ನು ವಿಚಾರಿಸಿದಾಗ, ಪಿರ್ಯಾದಿದಾರರನ್ನು ಉದ್ದೇಶಿಸಿ , ಹಿಂದಿ ಭಾಷೆಯಲ್ಲಿ ನೀನು ಯಾರು ನನ್ನನ್ನು ಕೇಳಲ್ಲಿಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಸಮವಸ್ತ್ರದ ಕಾಲರ್ ಪಟ್ಟಿಯನ್ನು ಹಿಡಿದು, ಕೆನ್ನೆಗೆ ಕೈಗಳಿಂದ ಹೊಡೆದು, ಬಲ ಭುಜಕ್ಕೆ, ಎದೆಗೆ, ಅವಳು ಕೈಗಳಿಂದ ಹೊಡೆದು, ಕಾಲಿನಿಂದ ತುಳಿದಿರುತ್ತಾಳೆ. ಆಗ ಗೃಹ ರಕ್ಷಕ ಸಿಬ್ಬಂದಿ ಚಂಪಾ ರವರು ತಡೆಯಲು ಬಂದಾಗ, ಅವರಿಗೂ  ಕೂಡಾ ಅವರ ಎಡ ಕೈಯನ್ನು ತಿರುಚಿ ಹೊಡೆದಿರುತ್ತಾಳೆ. ಅಲ್ಲದೇ ನನ್ನ ಮೇಲೆ ಕೇಸು ಹಾಕಿದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಪಿರ್ಯಾದಿದಾರರು ನೀಡಿದ ನೋಟೀಸ್ ಗೆ ಸಹಿ ಮಾಡಲು ನಿರಾಕರಿಸಿರುತ್ತಾಳೆ. ಆರೋಪಿತರ ಹೆಸರು ತಿಳಿಯಲಾಗಿ ಗಾಂಧಿ ಕಿಂಜಲ್ ಬಿಷಪ್ ಬಾಯಿ ಎಂಬುದಾಗಿ ತಿಳಿದು ಬಂದಿರುತ್ತದೆ. ಪಿರ್ಯಾದಿದಾರರು ಬಳಿಕ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತಾರೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸೈಯದ್ ಅಸ್ಮಲ್ ರವರ ಸಂಬಂಧಿಕರಾದ ಮಂಗಳೂರು ವಾಸಿಗಳಾದ ಶ್ರೀಮತಿ ನಸೀಮಾ ಹಾಗೂ ಮಹಮ್ಮದ್‌‌ ಆಶ್ರಫ್ರವರ ಪುತ್ರ ಮಹಮ್ಮದ್ಹಸನ್‌‌‌ ರಹೀಶ್ರವರು ದಿನಾಂಕ 21-07-2014 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರರ ಮನೆಗೆ ಬಂದಿದ್ದು ನಂತರ ಮನೆಯಲ್ಲಿ ಊಟ ಮುಗಿಸಿಕೊಂಡು ಮಸೀದಿಗೆ ಪ್ರಾರ್ಥನೆ ಮಾಡುವರೇ ಹೋಗುತ್ತೇನೆಂದು ಫಿರ್ಯಾದಿದಾರರ ಹೆಂಡತಿಯಲ್ಲಿ ಹೇಳಿ ಹೋದವನು ಮಸೀದಿಗೆ ಹೋಗದೆ ಆತನು ರಾತ್ರಿ 9-15 ಕರಾವಳಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗುವುದನ್ನು ಫಿರ್ಯಾದಿದಾರರ ಸಂಬಂಧಿ ಶಾಹಿಲ್ರವರು ಕಂಡಂತೆ ಆತನು ಮನೆಗೂ ಹೋಗದೆ, ಫಿರ್ಯಾದಿದಾರರ ಮನೆಗೂ ಬಂದಿರುವುದಿಲ್ಲ ಹಾಗೂ ಹಲವು ಕಡೆ ವಿಚಾರಿಸಿದರೂ ಸಹ ಆತನ ಇರುವಿಕೆ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಬಂದಿರುವುದಿಲ್ಲ.

No comments:

Post a Comment