ಮುಲ್ಕಿ ಪೊಲೀಸ್ ಠಾಣಾ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳರ ಬಂಧನ
~~~~*****~~~
ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಪರಮೇಶ್ವರ ರವರು ದಿನಾಂಕ 04-12-2014 ರಂದು ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ಜೀಪು ಕೆಎ-19-ಜಿ-332 ನೇದರಲ್ಲಿ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕೊಲ್ನಾಡು ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಗ್ಗೆ ಸಮಯ 10-00 ಗಂಟೆ ಸುಮಾರಿಗೆ ಹಳೆಯಂಗಡಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲನ್ನು ನಿಲ್ಲಿಸುವರೇ ಸೂಚನೆಯನ್ನು ನೀಡಿದಾಗ ಮೋಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲನ್ನು ಮೆಲ್ಲನೆ ನಿಲ್ಲಿಸಿದಂತೆ ಮಾಡಿ ನಂತರ ಒಮ್ಮೆಲೇ ಮುಂದೆ ಕೊಂಡು ಹೋದಾಗ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸುಮಾರು 100 ಅಡಿಯಷ್ಟು ಮುಂದಕ್ಕೆ ಬೆನ್ನಟ್ಟಿ ಹೋಗಿ ಮೋಟಾರ್ ಸೈಕಲ್ ಸವಾರರಿಬ್ಬರನ್ನು ಮೋಟಾರ್ ಸೈಕಲ್ ಸಮೇತ ನಿಲ್ಲಿಸಿ ಸದ್ರಿ ಇಬ್ಬರ ಹೆಸರು, ವಿಳಾಸ ಕೇಳಲಾಗಿ ಮೋಟಾರ್ ಸೈಕಲ್ ಸವಾರನ ಹೆಸರು ಸಂದೀಪ್, ಪ್ರಾಯ 29 ವರ್ಷ, ತಂದೆ: ಅಶೋಕ, ವಾಸ: ವಾಮನ್ ನಾಯ್ಕ್ ಕಂಪೆನಿಯ ಹಿಂಬದಿ, ಜೆಪ್ಪು, ಮಾರ್ನಮಿಕಟ್ಟೆ, ಮಂಗಳೂರು ಎಂದು ತಿಳಿಸಿರುತ್ತಾರೆ. ಸಹ ಸವಾರನ ಹೆಸರು ಕೇಳಲಾಗಿ ಶುಭನಾಥ, ಪ್ರಾಯ 29 ವರ್ಷ, ತಂದೆ: ಸಾಮ್ಯುವೆಲ್, ವಾಸ: ಕೇರಾಪ್ ಶಶಿ, ಶಶಿ ಕಂಪೌಂಡ್ , ಆನಂದನಗರ, ಆಕಾಶ ಭವನ, ಮಂಗಳೂರು ಎಂದು ತಿಳಿಸಿರುತ್ತಾನೆ. ಮೋಟಾರ್ ಸೈಕಲ್ ನ್ನು ಪರಿಶೀಲಿಸಿ ನೋಡಲಾಗಿ ಬಜಾಜ್ ಕಂಪೆನಿಯ ಪಲ್ಸರ್ ಮೋಟಾರ್ ಸೈಕಲ್ ಆಗಿದ್ದು ಇದರ ಎದುರಿನ ನಂಬರ್ ಪ್ಲೇಟ್ ತರಚಿ ಹೋಗಿದ್ದು, ಹಿಂಭಾಗದ ನಂಬರ್ ಪ್ಲೇಟನ್ನು ಪರಿಶೀಲಿಸಿದ್ದಲ್ಲಿ ಸದ್ರಿ ನಂಬರ್ ಪ್ಲೇಟ್ ಕೂಡಾ ಉಜ್ಜಿದಂತೆ ಕಂಡು ಬಂದಿದ್ದು ಸರಿಯಾಗಿ ಪರಿಶೀಲಿಸಿ ನೋಡಲಾಗಿ BR 2 H 1776 ಎಂದು ಆಗಿರುತ್ತದೆ. ಇದರ ಇಂಜಿನ್ ನಂಬ್ರ ಪರಿಶೀಲಿಸಿ ನೋಡಲಾಗಿ DHGBPH08924 ಆಗಿದ್ದು, ಚಾಸಿಸ್ ನಂಬ್ರ MD2DHDHZZPCH69669 ಆಗಿರುತ್ತದೆ. ಸದ್ರಿ ಮೋಟಾರ್ ಸೈಕಲ್ ನ ದಾಖಲಾತಿ ದಾಖಲಾತಿ ಇಲ್ಲವೆಂದು ತಿಳಿಸಿದ್ದು, ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಸದ್ರಿ ಮೋಟಾರ್ ಸೈಕಲನ್ನು ಕಳೆದ 2013 ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಕರಾವಳಿ ಉತ್ಸವದ ಎದುರು ಭಾಗದಲ್ಲಿ ನಿಲ್ಲಿಸಿದ್ದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಕೂಲಂಕುಷವಾಗಿ ವಿಚಾರಿಸಿದಾಗ ಇನ್ನೊರ್ವ ಪರಿಚಯದ ಬಂಟ್ವಾಳದ ಯತೀಶ್ ಎಂಬಾತನೊಂದಿಗೆ ಸೇರಿಕೊಂಡು ಕಳೆದ ಡಿಸೆಂಬರ್ ತಿಂಗಳಿನಿಂದ ಈ ವರ್ಷದ ಫೆಬ್ರವರಿ ತಿಂಗಳವರೆಗೆ ಮಂಗಳೂರಿನ ಸಿಟಿ ಸೆಂಟರ್ ಬಳಿ, ತೊಕ್ಕೊಟ್ಟಿನ ಮಾಯಾ ಬಾರ್ ನ ಬಳಿ, ಕುಲಶೇಖರದ ಬಾರ್ ಬಳಿ, ಕರಾವಳ ಉತ್ಸವದ ಮೈದಾನದಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿ ಮಾರಾಟದ ಬಗ್ಗೆ ಕಟೀಲಿನ ಧೀರಜ್ ಎಂಬಾತನಿಗೆ ಕೊಟ್ಟಿರುವುದಾಗಿ ತಿಳಿಸಿದಂತೆ ಆರೋಪಿತರನ್ನು ದಸ್ತಗಿರಿ ಮಾಡಿ ಕಳವಿಗೆ ಸಂಬಂಧಪಟ್ಟ ಮೋಟಾರ್ ಸೈಕಲ್ BR 2 H 1776 ನೇದನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣಾ ಅ.ಕ್ರ. ನಂಬ್ರ 196/2014 ಕಲಂ : 41 (1) (ಡಿ) 102 ಸಿ.ಆರ್.ಪಿ.ಸಿ. ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅರೋಪಿತರುಗಳಿಂದ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಿವರ
ಕ್ರ ಸಂ | ವಾಹನದ ಮಾದರಿ | ಇಂಜಿನ್ ನಂ | ಚೇಸಿಸ್ ನಂಬ್ರ |
1 | HONDA ACTIVA | 5122636 | ME4JF083L78091193 |
2 | PULSOR BLACK | DHGBPH08924 | MD2DHDHZZPCH69669 |
3 | PULSOR BLACK | DHZWELI6193 | MD2AIICZ5EWL21516 |
4 | PULSOR BLACK | DHGBRF91984 | MD2DHDHZZRCF90805 |
5 | PULSOR BLACK | DHGBTE33455 | MD2DHDHZZTCE45838 |
ಆರೋಪಿಗಳ ಹೆಸರು ವಿಳಾಸ ಹಾಗೂ ಪೋಟೊ
1) ಸಂದೀಪ್, ಪ್ರಾಯ 29 ವರ್ಷ, ತಂದೆ: ಅಶೋಕ, ವಾಸ: ವಾಮನ್ ನಾಯ್ಕ್ ಕಂಪೆನಿಯ ಹಿಂಬದಿ, ಜೆಪ್ಪು, ಮಾರ್ನಮಿಕಟ್ಟೆ, ಮಂಗಳೂರು 2) ಶುಭನಾಥ, ಪ್ರಾ 29 ವರ್ಷ, ತಂದೆ: ಸಾಮ್ಯುವೆಲ್, ಕೆರಾಪ್. ಶಶಿ, ವಾಸ: ಶಶಿ ಕಂಪೌಂಡ್ ಆನಂದನಗರ, ಆಕಾಶ ಭವನ, ಮಂಗಳೂರು 3) ಧೀರಜ್, ಪ್ರಾಯ 27 ವರ್ಷ, ತಂದೆ: ದಿ|| ದಿನಕರ, ವಾಸ: ದುರ್ಗಾ ನಗರ, ಕೊಂಡೇಲ ಹೌಸ್, ಕಟೀಲು ಮಂಗಳೂರು ತಾಲೂಕು 4) ಯತೀಶ್, ಪ್ರಾಯ 27 ವರ್ಷ, ತಂದೆ: ಬಾಬು ಬೆಳ್ಚಡ, ವಾಸ: ಕೊಳಕೆ, ಸಜೀಪ ಮೂಡ ಗ್ರಾಮ, ಬಂಟ್ವಾಳ ತಾಲೂಕು |
ಸದ್ರಿ ಕಾಯಾಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಅಯುಕ್ತರಾದ ಶ್ರೀ ಹಿತೇಂದ್ರ ಆರ್ ರವರ ಮಾರ್ಗದರ್ಶನದಂತೆ ಶ್ರೀ ಡಾ.ಕೆ.ವಿ ಜಗದೀಶ್, ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು ಶ್ರೀ ವಿಷ್ಣುವರ್ಧನ್, ಉಪ ಪೊಲೀಸ್ ಆಯುಕ್ತರು (ಅ.ಮತ್ತು ಸಂಚಾರ) ರವರ ನಿರ್ಧೇಶನದಂತೆ ಶ್ರೀ ರವಿಕುಮಾರ್, ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಪಿ.ಎಸ್.ಐ ಪರಮೇಶ್ವರ, ಎ.ಎಸ್.ಐ ಮೋಹನ್, ಮತ್ತು ಸಿಬ್ಬಂದಿಗಳಾದ ಧರ್ಮೆಂದ್ರ, ರಾಜೇಶ್, ಶೈಲೇಂದ್ರ, ವಾದಿರಾಜ್, ಸುಧೀರ್ ಮತ್ತು ಜೀಪು ಚಾಲಕ ಮೋಹನ್ ರವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
No comments:
Post a Comment