Monday, December 22, 2014

Daily Crime Report : 22-12-2014

ದಿನಾಂಕ 22.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ       
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
4
 
 
 
 
 
 
 
 
 
 
 
 
 
 
 
 
 
 
 
 
 
 
 
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 21-12-2014   ರಂದು 14:30 ಗಂಟೆಗೆ ಮಂಗಳೂರು ನಗರದ ಗೂಡ್ಸ್ಶೆಡ್ಡೆ ಎಂಬಲ್ಲಿ ಸುಮಾರು 30 ವರ್ಷ ಪ್ರಾಯದ ಮಾರಿಮುತ್ತು ಎಂಬಾತನು ಊಟ ಮಾಡಲೆಂದು ಗೂಡ್ಸ್ಶೆಡ್ಒಳಗಿನ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ಗೂಡ್ಸ್ಲಾರಿಯೊಂದನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಮಾರಿಮುತ್ತುಗೆ ಡಿಕ್ಕಿ ಹೊಡೆದು, ಮಾರಿಮುತ್ತುನ ತಲೆಯ ಹಿಂಬದಿಗೆ ತೀವ್ರ ತರಹದ ರಕ್ತ ಗಾಯ ಮತ್ತು ಮುಖಕ್ಕೆ ಹಾಗೂ ಕೈಗಳಿಗೆ ಸಾಮಾನ್ಯ ತರಹದ ಗಾಯವುಂಟಾಗಿ ಮೃತಪಟ್ಟದ್ದಾಗಿರುತ್ತದೆ. ಮೃತಶರೀರವನ್ನು ಅಪಘಾತ ಸ್ಥಳದಿಂದ 25 ಅಡಿ ದೂರದಲ್ಲಿ ಮಲಗಿಸಿದಲ್ಲದೇ, ತೀವ್ರ ಗಾಯಗೊಂಡ ಮಾರಿಮುತ್ತುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸದೇ ಅಲ್ಲದೇ ಅಪಘಾತದ ಬಗ್ಗೆ ಹತ್ತಿರದ ಪೊಲೀಸ್ಠಾಣೆಗೆ ಮಾಹಿತಿಯನ್ನು ನೀಡದೇ ಗೂಡ್ಸ್ಲಾರಿಯನ್ನು ಅದರ ಚಾಲಕರು ಅಪಘಾತ ಸ್ಥಳದಿಂದ ಚಲಾಯಿಸಿಕೊಂಡು ಹೋಗಿರುವುದಾಗಿದೆ.
 
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.12.2014 ರಂದು 15.00 ಗಂಟೆಗೆ ಪಿರ್ಯಾದಿದಾರರಾದ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ಬಿ. ಮಳೆದವರ್ ರವರು ಠಾಣೆಯಲ್ಲಿದ್ದಾಗ ಮಂಗಳೂರು ನಗರದ ಕೊಟ್ಟಾರ ಅಬ್ಬಕ್ಕನಗರದ ಬಳಿ ವಿಶಾಲವಾದ ಬಯಲು ಪ್ರದೇಶದಲ್ಲಿ ಕೋಳಿಯನ್ನು ಕಾದಾಡುವುದಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿರುತ್ತದೆ. ಸ್ಥಳಕ್ಕೆ ದಾಳಿ ನಡೆಸಲು ಠಾಣೆಯಲ್ಲಿ ಲಭ್ಯವಿದ್ದ ಸಿಬ್ಬಂದಿಯವರ ಜೊತೆ ಸದ್ರಿ ಸ್ಥಳಕ್ಕೆ 15.30 ಗಂಟೆಗೆ ತಲುಪಿದಾಗ ಸದ್ರಿ ಸ್ಥಳದಲ್ಲಿ ಕೆಲವು ಜನರು ಸುತ್ತುವರಿದು ನಿಂತುಕೊಂಡು ಅವರೊಳಗೆ "ಎನ್ನ ಐವ್ವ, ಎನ್ನ ನೂದು" ಎಂದು ಹೇಳುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಅಲ್ಲಿದ್ದ ಕೆಲವರು ಓಡಿ ಹೋಗಿದ್ದು ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಅಲ್ಲಿದ್ದ ಕೆಲವರನ್ನು ಸುತ್ತುವರಿದು  ಹಿಡಿದು ನಿಲ್ಲಿಸಿದ್ದು, ಅವರ ಪೈಕಿ ಕೆಲವರ ಕೈಯಲ್ಲಿ ಕೋಳಿ ಇದ್ದು, ಅವರನ್ನು ಹಿಡಿದು ವಿಚಾರಿಸಲಾಗಿ ಕೋಳಿ ಅಂಕ ಜೂಜಾಟ ಆಡಲು ಬಂದಿರುವುದಾಗಿ ತಿಳಿಸಿದ್ದು, ಓಡಿ ಹೋದವರ ಬಗ್ಗೆ ವಿಚಾರಿಸಿದ್ದಲ್ಲಿ ತಿಳಿದಿಲ್ಲವಾಗಿಯೂ ತಿಳಿಸಿದ್ದು, ಇದ್ದವರ ಹೆಸರು ವಿಳಾಸ ಕೇಳಿ 17 ಜನರನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದು ಅವರುಗಳ ಹೆಸರು, ವಿಳಾಸ ಪಡೆಯಲಾಯಿತು. ವಶಕ್ಕೆ ಪಡೆದುಕೊಂಡ ಆರೋಫಿಗಳನ್ನು ಅಂಗಜಫ್ತಿ ಮಾಡಲಾಗಿ ಒಟ್ಟು ರೂಪಾಯಿ 6,065/- ಹಣವು ಕೋಳಿ ಜೂಜಾಟದಲ್ಲಿ ಪಣವಾಗಿಡುವುದಕ್ಕೆ ಉಪಯೋಗಿಸುವುದಾಗಿಯೂ, ಅಲ್ಲದೆ ಆರೋಫಿಗಳ ವಶದಲ್ಲಿದ್ದ 13 ಕೋಳಿಗಳನ್ನು, ಮತ್ತು ಅವುಗಳ ಕಾಲಿಗೆ ಕಟ್ಟಿದ್ದ ಹಗ್ಗಗಳ ಸಮೇತ ಅಲ್ಲದೆ ಸದ್ರಿ ಸ್ಥಳದಲ್ಲಿ ಬಿಟ್ಟು ಹೋಗಿದ್ದ  19 ಬೈಕ್ಗಳು  ಒಂದು ಅಟೋರಿಕ್ಷಾ ಮತ್ತು ಆರೋಫಿಗಳ ವಶದಲ್ಲಿದ್ದ 12 ಮೊಬೈಲ್ಗಳನ್ನು ಪಂಚರುಗಳ ಸಮಕ್ಷಮ ಮಹಜರು ಬರೆದು ಅಮಾನತುಪಡಿಸಿಕೊಂಡಿರುವುದು.
 
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.12.2014 ರಂದು 14.45 ಗಂಟೆಗೆ ಮಂಗಳೂರು ನಗರದ ಕದ್ರಿ ಬಿ.ಎಸ್.ಎನ್.ಎಲ್ ಕಛೇರಿ ಎದುರುಗಡೆ ರಸ್ತೆಯಲ್ಲಿ ಟಾಟಾ ಎಸಿ  ನಂಬ್ರ  ಕೆಎ19-ಡಿ 2390ನೇ  ವಾಹನವನ್ನು ಆರೋಪಿ ರಾಮ್ಸಿ ಪ್ರವೀಣ್ ರೋಡ್ರಿಗಸ್   ಎಂಬಾತನು ಕೆಪಿಟಿ ಕಡೆಯಿಂದ ನಂತೂರು ಕಡೆಗೆ ರಾಷ್ಟ್ರೀಯ  ಹೆದ್ದಾರಿ 66 ರಲ್ಲಿ ಅತೀ ವೇಗ ಮತ್ತು  ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ಮಣ್ಣು ರಸ್ತೆಯಲ್ಲಿ  ನಿಲ್ಲಿಸಿದ  ಪಿರ್ಯಾದುದಾರರಾದ ಶ್ರೀ ಡೆನಿಯಲ್ ಜೊಸೇಫ್ ರವರ ಬಾಬ್ತು ಕೆಎ19-ವಿ-2745 ನಂಬ್ರದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್  ಸಂಪೂರ್ಣ ಜಖಂ ಆಗಿರುತ್ತದೆ.
 
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-12-2014 ರಂದು ಬೆಳಿಗ್ಗೆ 09-00 ಗಂಟೆಗೆ ಪಂಜಿಮೊಗರು ವಾರ್ಡ್  ಮಹಾನಗರಪಾಲಿಕೆಯ ಸದಸ್ಯರಾದ ದಯಾನಂದ ಶೆಟ್ಟಿ ಮತ್ತು ಫಿರ್ಯಾಧುದಾರರಾದ ಶ್ರೀ ಅಕ್ತರ್ ತೋನ್ಸೆ ರವರ ಮನೆಯ ಎದುರಿನ ಮನೆಯವರಾದ ಪಿ.ಅಮೀರ್ ಎಂಬವರು ಸುಮಾರು 40-50 ಜನ ಸಾರ್ವಜನಿಕರನ್ನು ಕರೆದುಕೊಂಡು ಅಕ್ರಮ ಕೂಟ ಸೇರಿ ಫಿರ್ಯಾಧುದಾರರ ಮನೆಯ ಹಿತ್ತಲಿಗೆ ಅಕ್ರಮ ಪ್ರವೇಶ ಮಾಡಿ ಬಲವಂತವಾಗಿ ಫಿರ್ಯಾಧುದಾರರ ಮನೆಯ ತೆಂಗಿನ ಮರವನ್ನು ಕಡಿದು ಫಿರ್ಯಾಧುದಾರರಿಗೆ ನಷ್ಟ ಉಂಟು ಮಾಡಿರುತ್ತಾರೆ.
 
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-12-2014 ರಂದು ಬೆಳಿಗ್ಗೆ ಸುಮಾರು 08:32 ಗಂಟೆಗೆ ಮಂಗಳೂರು ನಗರದ ಮಿಲಾಗ್ರೀಸ್ ಕ್ರಾಸ್ ರಸ್ತೆಯಲ್ಲಿರುವ ಆಂದ್ರಾ ಬ್ಯಾಂಕ್ ಟಿ ಎಮ್ ಅನ್ನು ಅದರ ಸೆಕ್ಯೂರಿಟಿ ಗಾರ್ಡ್ ಆದ ಸುರೇಶ್ ನು ನೋಡಿದಾಗ ಟಿ ಎಮ್ ಹಾಳು ಗೆಡವಿದ್ದು ಕಂಡು ಬಂದಿದ್ದು, ಅವರು ಕೂಡಲೇ ಸಹಾಯಕ ಮ್ಯಾನೇಜರ್ ಆದ ವಿಜಯಾ ರಾಮ್ ದಾಸ್ ರವರಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದು, ವಿಜಯಾ ರಾಮ್ ದಾಸ್ ರವರು ಆಂದ್ರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ರವರಿಗೆ ದೂರವಾಣಿಯಲ್ಲಿ 09:00 ಗಂಟೆಗೆ ತಿಳಿಸಿದ್ದು, ಅವರು ಟಿ ಎಮ್  ನ್ನು ನೋಡಿ ಪರಿಶೀಲಿಸಿ ನಂತರ ಬೆಳಿಗ್ಗೆ ಸುಮಾರು 11:30 ಗಂಟೆಗೆ ಸದ್ರಿ  ಬ್ಯಾಂಕ್ ಟಿ ಎಮ್ ಅನ್ನು ಯಾರೋ ಹಾಳು ಗೆಡವಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿಯೂ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದಾಗಿದೆ.
 
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಉಳ್ಳಾಲ ಗ್ರಾಮದ ಮಾರ್ಗತ್ತಲೆ ಎಂಬಲ್ಲಿ ಜುಗಾರಿ ಆಟವನ್ನು ಆಡುತ್ತಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ನಿರೀಕ್ಷಕರಾದ ಶ್ರೀ ಸವಿತ್ರ ತೇಜ್ ರವರು ಸಿಬ್ಬಂದಿಗಳೊಡನೆ ಇಲಾಖಾ ಜೀಪಿನಲ್ಲಿ ತೆರಳಿ ದಾಳಿ ನಡೆಸಿದಾಗ ಅಲ್ಲಿ 7 ಜನರು ಸೇರಿಕೊಂಡು ಹಣವನ್ನು ಪಣವಾಗಿಟ್ಟು ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದು ಆರೋಪಿಗಳನ್ನು ಮತ್ತು ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. (ನಗದು ಹಣ ರೂ. 6200/- ಬೇರೆ ಬೇರೆ ಮಾದರಿಯ  ಇಸ್ಟೀಟು ಎಲೆಗಳು 52 ಮತ್ತು ಪಾಲಿಥಿನ್ಗೋಣಿಚೀಲ.)
 
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.12.2014 ರಂದು ಪಿರ್ಯಾದುದಾರರಾದ ಶ್ರೀ ಆರ್. ರಂಗಸ್ವಾಮಿ ರವರು ತಮ್ಮ ಬಾಬ್ತು KA-19-AA-2933 ನೇ ನಂಬ್ರದ ಗೂಡ್ಸ್ ಟೆಂಪೋದಲ್ಲಿ ತನ್ನ ಹೆಂಡತಿ ನೇತ್ರಾವತಿ ಎಂಬವರನ್ನು ಕುಳ್ಳಿರಿಸಿಕೊಂಡು ಕುಲಶೇಖರ ಕೈಕಂಬ ಕಡೆಯಿಂದ ಹೊರಟು ವಾಮಂಜೂರು ತಲುಪಿ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ಟೆಂಪೋವನ್ನು ತಿರುಗಿಸಿ ಮಂಗಳೂರು ಕಡೆಗೆ ಬರುವ ರಸ್ತೆಯ ತೀರಾ ಬದಿಯಲ್ಲಿ ಅಂದರೆ ಮಣ್ಣು ರಸ್ತೆಯಲ್ಲಿ ಟೆಂಪೋವನ್ನು ನಿಲ್ಲಿಸಿ ಪೆಟ್ರೋಲ್ ಬಂಕ್ ಬಳಿ ಇರುವ ಟಯರ್ ಅಂಗಡಿಗೆ ಹೋಗಲು ಪಿರ್ಯಾದುದಾರರು ರಸ್ತೆಯನ್ನು ದಾಟುತ್ತಿರುವ ಸಮಯ ಸಂಜೆ ಸುಮಾರು 6:45 ಗಂಟೆಗೆ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ KA-19-Z-1258ನೇ ನಂಬ್ರದ ಆಲ್ಟೋ ಕಾರನ್ನು ಅದರ ಚಾಲಕಿ ಪದ್ಮಿನಿ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯ, ಹಣೆಗೆ, ತಲೆಗೆ, ಬಲಭುಜದ ಬಳಿ, ಎಡಭುಜದ ಬಳಿ ಗುದ್ದಿದ ಹಾಗೂ ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.

No comments:

Post a Comment