ದಿನಾಂಕ 04.12.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 01.12.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಅಮೃತಾ ರೈ ರವರ ಮಗಳು 8 ವರ್ಷ ಪ್ರಾಯದ ಅಪೇಕ್ಷಾ ರವರು ನಗರದ ಅಮೃತ ವಿದ್ಯಾಲಯ ಶಾಲೆಗೆ ಹೋಗಿ ಮರಳಿ ಮನೆಗೆ ಆಟೋರಿಕ್ಷಾದಲ್ಲಿ ಬಂದು ಮನೆಯ ಕಂಪೌಂಡದ ಬಳಿ ಇಳಿದು ಮನೆಗೆ ಹೋಗುತ್ತಿರುವ ಸಮಯ 15.50 ಗಂಟೆಗೆ ನೆರೆ ಮನೆ ವಾಸಿಯಾದ ಚಂದ್ರಿಕಾ ಎಂಬವರು ದ್ವಿಚಕ್ರ ವಾಹನ ಕೆಎ.09.ಈಡಿ.1398 ನೇದನ್ನು ಮಠದಕಣಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅಪೇಕ್ಷಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ತರಹದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಉಳ್ಳಾಲ ನರ್ಸಿಂಗ್ ಹೋಂ ನಲ್ಲಿ ದಾಖಲಾಗಿರುವುದಾಗಿದೆ. ಮೊದಲಿಗೆ ದ್ವಿಚಕ್ರ ಸವಾರಿಣಿ ಚಂದ್ರಿಕಾರವರು ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿ ಇದೀಗಾ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿರುವುದರಿಂದ ಪಿರ್ಯಾದಿ ನೀಡಲು ವಿಳಂಭವಾಗಿರುತ್ತದೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.12.2014 ರಂದು ಮದ್ಯಾಹ್ನ 12.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸುರಕ್ಷಿತ್ ಕುಮಾರ್ ರವರು ಉತ್ತಮ ಆಳ್ವರೊಂದಿಗೆ ಪಿಗೋ ಕಾರಿನಲ್ಲಿ ವೆಸ್ಟರ್ನ್ ಇನ್ಸ್ ಟ್ಯೂಟ್ ಸಂಸ್ಥೆಗೆ ಉದ್ಯೋಗಕ್ಕೆ ಹೋಗಿದ್ದು ಆ ಸಮಯ ಸಂಸ್ಥೆಗೆ ಹೋಗುವ ದಾರಿಯ ಎಡಬದಿಯಲ್ಲಿ ಕಾರನ್ನು ಪಾರ್ಕ್ ಮಾಡಿ ವೆಸ್ಟರ್ನ್ ಇನ್ಸ್ ಟ್ಯೂಟ್ ಸಂಸ್ಥೆಗೆ ಹೋಗಿ ಮಾತನಾಡುತ್ತಿರುವಾಗ ಯಾರೋ ಯುವಕರು ಪಾರ್ಕ್ ಮಾಡಿದ ಕಾರಿನ ಬಗ್ಗೆ ಜೋರಾಗಿ ಬೈಯುತ್ತಿರುವುದನ್ನು ಸಂಸ್ಥೆಯ ಸ್ವಾಗತಕಾರಿಣಿ ತಿಳಿಸಿದ ಪ್ರಕಾರ ಪಿರ್ಯಾದಿದಾರರು ಕಾರಿನ ಬಳಿಗೆ ಬಂದಾಗ ಇಬ್ಬರು ಯುವಕರು ಪಿರ್ಯಾದಿದಾರರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ 'ನಿಕ್ಕ್ ಕಾರ್ ನ್ ಸರಿ ಪಾರ್ಕ್ ಮಲ್ಪೆರೆ ಆಪುಜಾ' ಎಂದು ಹೇಳಿದಾಗ ಪಿರ್ಯಾದಿದಾರರು ನಿಮಗೆ ಬದಿಯಲ್ಲಿ ಹೋಗಬಹುದಲ್ಲಾ ಎಂದು ಹೇಳಿದಾಗ ಅವಾಚ್ಯ ಶಬ್ದದಿಂದ ಬೈದು ಅವರಲ್ಲಿ ಒಬ್ಬನು ಕೈಯಿಂದ ಹೊಡೆದು ಇನ್ನೊಬ್ಬನು ಅಲ್ಲಿಯೇ ಬದಿಯಲ್ಲಿ ಬಿದಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿಯವರ ತಲೆಯ ನೆತ್ತಿಯ ಭಾಗಕ್ಕೆ ಎಡ ಕಣ್ಣಿನ ಬದಿಗೆ ಎಡ ಹಣೆಗೆ ಹೊಡೆದು ಗಾಯಗೊಳಿಸಿದಲ್ಲದೇ ನಿನ್ನ ಅಮ್ಮೆರೆಗ್ ಮಗೆ ಇಜ್ಜಾಂದಿಲೆಕ್ಕ ಮಲ್ಲುವೆ ಎಂದು ಬೆದರಿಕೆ ಹಾಕಿ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ರಾಡ್ನಿಂದ ಹಲ್ಲೆ ನಡೆಸಿರುವುದಾಗಿದೆ. ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದವರು ಸೂರಜ್ ಹಾಗೂ ಸನ್ನತ್ ಮೇಲಾಂಟ ಎಂಬವರಾಗಿದ್ದು ಇವರು ಪಿರ್ಯಾದಿದಾರರ ಸ್ನೇಹಿತರಾದ ಉತ್ತಮ ಆಳ್ವರವರ ಪರಿಚಯಸ್ಥರಾಗಿದ್ದು ಇವರು ಪಾರ್ಕಿಂಗ್ ವಿಚಾರದಲ್ಲಿ ಪಿರ್ಯಾದಿ ದಾರರೊಂದಿಗೆ ತಗಾದೇ ಎಬ್ಬಿಸಿ ರಾಡ್ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಉದಯ್ ಕುಮಾರ್ ಮತ್ತು ದಯಾನಂದ ಶೆಟ್ಟಿಯವರು ರಾಷ್ಟೀಯ ಮಾನವ ಹಕ್ಕು ಕೇಂದ್ರದ ಸಂಸ್ಥೆಯಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿಯವರು ಇತ್ತೀಚೆಗೆ ತನ್ನ ವೈಯಕ್ತಿಕ ಕಾರಣದಿಂದ ಸಂಸ್ಥೆಯಲ್ಲಿ ಕೆಲಸ ಮಾಡುವುದ್ದನ್ನು ಬಿಟ್ಟಿದ್ದು, ರಾಷ್ಟೀಯ ಮಾನವ ಹಕ್ಕು ಕೇಂದ್ರದ ಸಂಸ್ಥೆಯಲ್ಲಿ ಪಿರ್ಯಾದಿಯವರು ಕೆಲಸ ಬಿಟ್ಟ ದ್ವೇಷದಿಂದ ದಿನಾಂಕ 25-11-2014 ರಂದು ದಯಾನಂದ ಶೆಟ್ಟಿಯವರು ಪಿರ್ಯಾದಿಯವರಿಗೆ ಮೊಬೈಲ್ ಕರೆ ಮಾಡಿ ಕದ್ರಿ ಪಾರ್ಕ್ ಬಳಿ ಇರುವ ಗ್ರೀನ್ ಪಾರ್ಕ್ ಹೊಟೇಲ್ ಬಳಿ ಬರಲು ತಿಳಿಸಿದ್ದು, ಪಿರ್ಯಾದಿಯವರು ಗ್ರೀನ್ ಪಾರ್ಕ್ ಹೊಟೇಲ್ ಬಳಿ ಬಂದಾಗ ಸಮಯ ರಾತ್ರಿ 8-30 ಗಂಟೆಗೆ ಆರೋಪಿಗಳಾದ ದಯಾನಂದ ಶೆಟ್ಟಿ, ನರೇಂದ್ರ, ಪ್ರಶಾಂತ್ ಆಚಾರ್ಯ, ಟಿಕ್ಕಿ ರಾಜಾ, ಚಿತ್ತರಂಜನ್ @ ಚಿತ್ತು, ಕಿಶೋರ್ ಎಂಬವರುಗಳು ಜೊತೆ ಸೇರಿ ಪಿರ್ಯಾದಿಯವರನ್ನು ತಡೆದು, ಕಬ್ಬಿಣದ ರಾಡು ಮತ್ತು ಕಲ್ಲಿನಿಂದ ಪಿರ್ಯಾದಿಯವರಿಗೆ ಹಲ್ಲೆ ನಡೆಸಿರುವುದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾರೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 2-12-2014ರಂದು ಸಂಜೆ -7-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಹುಸೈನ್ ರವರು ತನ್ನ ಮನೆಯಿಂದ ಬಂಟ್ವಾಳದಲ್ಲಿರುವ ಪತ್ನಿಯ ತಾಯಿ ಮನೆಗೆ ಹೋಗುವರೇ ಅವರ ಬಾಬ್ತು ಕೆಎ-19-ಈಈ-7931ನೇ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಪ್ರಾಂತ್ಯ ವಿಶಾಲನಗರದ ಬಳಿ ಇರುವ ಕರ್ನಾಟಕ ಸಾ ಮಿಲ್ಸ್ ಕ್ರಾಸ್ ರಸ್ತೆಯ ಬಳಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಮಹಾವೀರ ಕಾಲೇಜು ಕಡೆಯಿಂದ ಮೂಡುಬಿದ್ರಿ ಕಡೆಗೆ ಕೆಎ-19-ಎಂಡಿ5035ನೇ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯು ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದು ಅವರ ಮೂಗಿಗೆ ರಕ್ತ ಗಾಯಗೊಂಡು ಬಲಕೈ ತೋಳಿಗೆ, ಕೋಲು ಕೈಗೆ, ಮೊಣಗಂಟಿಗೆ, ಸೊಂಟಕ್ಕೆ ಗುದ್ದಿದ ನೋವು ಉಂಟಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.12.2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಧನಂಜಯ್ (ಹೋಮ್ ಗಾರ್ಡ್) ರವರು ಜಪ್ಪಿನಮೊಗರು ದ್ವಾರದ ಬಳಿ ವಾಹನ ಸಂಚಾರ ನಿಯಂತ್ರಣ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಮಯ ಬೆಳಿಗ್ಗೆ ಸುಮಾರು 10.20 ಗಂಟೆ ಸಮಯಕ್ಕೆ ಒರ್ವ ಗಂಡಸು ವ್ಯಕ್ತಿಯು ಕಂರ್ಬಿಸ್ಥಾನ ದ್ವಾರದ ಕಡೆಯಿಂದ ಬಂದು ರಸ್ತೆ ದಾಟುವರೇ ನಿಂತುಕೊಂಡಿದ್ದರು ಸದ್ರಿ ರಸ್ತೆಯ ಒಂದು ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದುದರಿಂದ ವಾಹನಗಳ ಸಂಚಾರವು ಒಂದೇ ರಸ್ತೆಯಲ್ಲಿ ಸಾಗುತ್ತಿದ್ದು ಸದ್ರಿ ವ್ಯಕ್ತಿಯು ಡಿವೈಡರ್ ರಸ್ತೆ ಮೂಲಕ ಬಂದು ಸ್ವಲ್ಪ ಮುಂದುಗಡೆ ರಸ್ತೆಯನ್ನು ದಾಟುತ್ತಿದ್ದಂತೆ ಪಂಪ್ವೆಲ್ ಕಡೆಯಿಂದ ಕೇರಳ KSRTC ಬಸ್ಸು ನಂಬ್ರ KL15A1 ನೇ ಬಸ್ಸನ್ನು ಅದರ ಚಾಲಕ ತೊಕ್ಕೊಟ್ಟು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ಅಡ್ಡ ದಾಟುತ್ತಿದ್ದ ವ್ಯಕ್ತಿಗೆ ಒಮ್ಮೆಲೇ ಡಿಕ್ಕಿಹೊಡೆದ ಪರಿಣಾಮ ಆತನ ತಲೆಗೆ ರಕ್ತಬರುವ ಗಾಯವಾಗಿದ್ದಲ್ಲದೆ, ಮುಖಕ್ಕೆ, ಬಲಕೈಗೆ ಹಾಗೂ ಇನ್ನಿತರ ಭಾಗಗಳಿಗೆ ಗುದ್ದಿದ ಮತ್ತು ತರಚಿದ ನೋವುಂಟಾಗಿತ್ತು. ಆ ವ್ಯಕ್ತಿಯನ್ನು ವಿಚಾರಿಸಲಾಗಿ ಆತನ ಹಸರು ಕೊರಗಪ್ಪ ಎಂಬುದಾಗಿ ತಿಳಿಸಿರುತ್ತಾರೆ.
No comments:
Post a Comment