Tuesday, December 23, 2014

Daily Crime Report : 23-12-2014

ದಿನಾಂಕ 23.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-12-2014 ರಂದು ಮಧ್ಯಾಹ್ನ 01-30 ಗಂಟೆಯ ಸಮಯ ಫಿರ್ಯಾದಿದಾರರಾದ ಡಾ.ಭಾಸ್ಕರ್ ಎಸ್ ಕೋಟ್ಯಾನ್ ರವರು ತನ್ನ ಬಾಬ್ತು ಕಾರು ಕೆ - 19 ಎಮ್ ಸಿ- 1538 ನೇಯದನ್ನು ಎನ್ ಟಿ ಕೆ ಕಡೆಯಿಂದ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ತಡಂಬೈಲ್ ಜಂಕ್ಷನ್ ಗೆ ತಲುಪಿದಾಗ ಹಿಂದಿನಿಂದ ಬೈಕ್ ನಂಬ್ರ ಕೆ - 19 ಡಿ- 8403 ನೇಯದರ ಆಪಾದಿತ ಸವಾರರಾದ ಪ್ರೇಮಚಂದ್ರ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದಿದ್ದು, ಪರಿಣಾಮ ಬೈಕ್ ಸವಾರರಿಗೆ ತರಚಿತ ಗಾಯವಾಗಿ, ಅವರ ಪತ್ನಿ ಜಯಶ್ರೀ ರವರಿಗೆ ತಲೆಗೆ ಗಾಯವಾಗಿದ್ದು, ಅವರ ಮಗ ಪೃಥ್ವಿ ರಾಜ್ ರವರಿಗೂ ತರಚಿದ ಗಾಯವಾಗಿದ್ದು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:21-12-2014 ರಂದು ರಾತ್ರಿ ಸುಮಾರು 8-15 ಗಂಟೆ ಸಮಯಕ್ಕೆ ಮಂಗಳೂರು ನಗರದ ಕುಲಶೇಖರ ಶಾಲೆಯ ಬಳಿ ಕೆಎ-19-.ಕೆ-6957 ನಂಬ್ರದ ಸ್ಕೂಟರ್ ನ್ನು ಅದರ ಸವಾರ ಆರೋಪಿ ಕಾರ್ತಿಕ್ ಎಂಬಾತನು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ ಪಿರ್ಯಾದುದಾರರಾದ ಶ್ರೀ ಪುನಿತ್ ರವರು ಸವಾರಿಮಾಡಿಕೊಂಡು ಹೋಗುತ್ತಿದ್ದ ಕೆಎ-19-ಇಹೆಚ್-0998 ನಂಬ್ರದ ಆಕ್ಟೀವಾ ಸ್ಕೂಟರ್ ಗೆ ಢಿಕ್ಕಿಪಡಿಸಿದ ಪರಿಣಾಮ ಎರಡೂ ಸ್ಕೂಟರ್ ಸಮೇತ ಸವಾರರು ರಸ್ತೆಗೆ ಬಿದ್ದು, ಪಿರ್ಯಾದುದಾರರ ಹಣೆಗೆ ತಲೆಯ ಹಿಂಬದಿ, ಹಲ್ಲಿಗೆ ಮತ್ತು ಕೈಕಾಲುಗಳಿಗೆ ರಕ್ತಗಾಯ ಅಲ್ಲದೇ ಆರೋಪಿ ಕಾರ್ತಿಕ್ ಮುಖಕ್ಕೆ ಮತ್ತು ಇತರ ಕಡೆಗಳಿಗೆ ಗಾಯಗಳಾಗಿರುತ್ತದೆ. ಗಾಯಾಳುಗಳು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-07-2014 ರಿಂದ 18-12-2014 ನಡುವೆ ಆರೋಪಿಗಳಾದ ಸಿ.ಪಿ.ಕೆ. ಮಹಮ್ಮದ್ಆಲಿ, ಸಂತೋಷ್ಶೆಟ್ಟಿ, ಅಬೂಬಕ್ಕರ್‌‌, ನಜೀರ್ಅಹಮ್ಮದ್‌‌,  ಅಮಾನುಲ್ಲಾ ಮತ್ತು ರಿಯಾಜ್‌‌ ಹಸನ್‌‌ ಆಕ್ರಮವಾಗಿ ಸೇರಿಕೊಂಡು ಸಮಾನ ಉದ್ದೇಶ ಹೊಂದಿ ಒಳಸಂಚನ್ನು ಮಾಡಿಕೊಂಡು ಪಿರ್ಯಾದಿದಾರರಾದ ಶ್ರೀ ಅಬ್ದುಲ್ಕಾದರ್‌‌ ರವರನ್ನು ಸಂಪರ್ಕಿಸಿ ಆಸ್ತಿ ವ್ಯವಹಾರದ ಬಗ್ಗೆ ಮಾತುಕತೆ ನಡೆಸಿ ಪಿರ್ಯಾದಿದಾರರನ್ನು ದಿನಾಂಕ 18-12-2014 ರಂದು ರಾತ್ರಿ 8-00 ಗಂಟೆಗೆ ಆರೋಪಿ 2 ನೇ ಯಿಂದ 6 ನೇ ತನಕದವರು ಜೊತೆ ಸೇರಿ ಪಿರ್ಯಾದಿದಾರರನ್ನು ಪೋರ್ಡ್ಪಿಗೋ ಕಾರು ನಂ ಕೆಎ19-ಎಂಬಿ-3568 ರಲ್ಲಿ ಬಲವಂತವಾಗಿ ಕುಳ್ಳಿರಿಸಿ ಉತ್ತರ ದಕ್ಕೆಯ ಕಡೆಗೆ ಕರೆದುಕೊಂಡು ಬಂದು ಉತ್ತರದಕ್ಕೆಯಲ್ಲಿ ಕಾರಿನಿಂದ ಪಿರ್ಯಾದುದಾರರನ್ನು ಕಾರಿನಿಂದ ಕೆಳಗೆ ಇಳಿಯಲು ಬಿಡದೇ ಬಲವಂತವಾಗಿ ಕೂರಿಸಿ, ಕೈಯಿಂದ ಹೊಡೆದು ಕಾರಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರು ಹೆದರಿ ಆರೋಪಿಗಳು ತೋರಿಸಿದ  ಕೆಲವು ಕಾಗದ ಪತ್ರಗಳಿಗೆ ಸಹಿ ಮಾಡಿದ್ದು, ಅಲ್ಲದೇ ಹಣಕ್ಕಾಗಿ ಪದೇ ಪದೇ ಜೀವ ಬೆದರಿಕೆ ಹಾಕಿದ್ದಾಗಿದೆ. ಪಿರ್ಯಾದಿದಾರರನ್ನು ಆರೋಪಿಗಳು ಉತ್ತರ ದಕ್ಕೆ ಕಡೆಗೆ ಕರೆದುಕೊಂಡು ಬರುವಾಗ ಹುಂಡೈವರ್ಣ ಕಾರು ನಂ ಕೆಎ19-ಎಂಡಿ-7303 ರಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾಗಿದೆ.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-12-2014 ರಂದು ಮಂಗಳೂರು ನಗರದ ಡಿ.ಸಿ. ಕಛೇರಿ ಆವರಣ ಹೊರಗಡೆ ಸ್ಟೇಟ್ ಬ್ಯಾಂಕ್ ಎದುರು ರಸ್ತೆ ಬದಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಕರ್ನಾಟಕದಲ್ಲಿ ನಿಷೇದಿಸಲ್ಪಟ್ಟ ಕೇರಳದ ರಾಜ್ಯದ ಲಾಟರಿ ಟಿಕೆಟನ್ನು ಮಾರಾಟ ಮಾಡುವುದಲ್ಲದೇ, ಮಟ್ಕಾ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದಾನೆ  ಎಂಬುದಾಗಿ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ ರವರಿಗೆ ಬಂದ ಖಚಿತ ವರ್ತಮಾನದಂತೆ, ಪಂಚರು ಹಾಗೂ ಸಿಬ್ಬಂದಿ ಜೊತೆ ಠಾಣೆಯಿಂದ  ಹೊರಟು, ಪಂಚರುಗಳಿಗೆ 100 ರೂ ನೋಟನ್ನು ಕೊಟ್ಟು, ಪಂಚರುಗಳಿಂದ ಆರೋಪಿತನಿಂದ ಮಟ್ಕಾ ವ್ಯವಹಾರಕ್ಕ ಸಂಬಂಧಿಸಿದ 3 ಚೀಟಿ ಹಾಗೂ ಕೇರಳ ಸರ್ಕಾರದ ಧನಶ್ರೀ ಲಾಟರಿ – 1 ನ್ನು ಖರೀದಿಸಿ,  ವರ್ತಮಾನವನ್ನು ಖಚಿತಪಡಿಸಿಕೊಂಡ ಬಳಿಕ  ಮಂಗಳೂರು ನಗರದ  ಡಿ.ಸಿ. ಕಛೇರಿ ಆವರಣದ ಹೊರಗಡೆ  ಸ್ಟೇಟ್ ಬ್ಯಾಂಕ್ ಎದುರು ಧಕ್ಕೆ ಕಡೆಗೆ ಹಾದು ಹೋಗುವ ರಸ್ತೆಯ ದಕ್ಷಿಣ ಬದಿಗೆ ಕಚ್ಛಾ ರಸ್ತೆಯಲ್ಲಿ  ಕೇರಳದ ರಾಜ್ಯದ ಲಾಟರಿ ಟಿಕೆಟನ್ನು ಮಾರಾಟ ಮಾಡುವುದಲ್ಲದೇ, ಮಟ್ಕಾ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ  ಅಬ್ದುಲ್ ಕರೀಮ್ ಎಂಬವನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ಮಟ್ಕಾ ವ್ಯವಹಾರವನ್ನು ಬರೆದಿಟ್ಟಿರುವ ಗೆರೆಯುಳ್ಳ ನೋಟು ಪುಸ್ತಕದ ಹಾಳೆ– 1, ಕೇರಳ ಸರ್ಕಾರದ ಧನಶ್ರೀ ಲಾಟರಿ – 15,    ಕೇರಳ ಸರ್ಕಾರದ WINWIN ಲಾಟರಿ – 11,    ಪೆನ್ನು-1,  ನಗದು ಹಣ ಒಟ್ಟು 1320 /- ,  ಕೇರಳ ರಾಜ್ಯದ ಲಾಟರಿಯ ಫಲಿತಾಂಶದ ವಿವರವುಳ್ಳ ಕಾಗದಗಳು -4, ಬಿಳಿ ಬಣ್ಣದ ಪ್ಲಾಸ್ಟಿಕ್ ತೊಟ್ಟೆ- 1, ಮತ್ತು  ಆರೋಪಿತನಿಂದ ಖರೀದಿಸಿ  ಪಂಚರುಗಳು ಹಾಜರುಪಡಿಸಿದ ಮಟ್ಕಾ ಚೀಟಿ-3,   ಕೇರಳ ಸರ್ಕಾರದ ಧನಶ್ರೀ ಲಾಟರಿ – 1,  ನ್ನು   ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಆರೋಪಿ ಅಬ್ದುಲ್ ಕರೀಮ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಆರೋಪಿ ಹಾಗೂ ಸೊತ್ತುಗಳೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸಿರುವುದಾಗಿದೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಸಂತ ರವರು ಜ್ಯೋತಿನಗರ ರಾಕೇಶ್‌‌ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಮಗುವಿನ ತೊಟ್ಟಿಲು ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿನಾಂಕ: 22.12.2014 ರಂದು 01.15 ಗಂಟೆಗೆ ಅಲ್ಲಿಂದ ತನ್ನ ಬೈಕ್‌‌‌ ಕೆಎ-19-ಇಜಿ-081 ರಲ್ಲಿ ಮನೆಗೆ ಹೊರಟಾಗ ಕಾರ್ಯಕ್ರಮಕ್ಕೆ ಬಂದಿದ್ದ ಒರ್ವ ವ್ಯೆಕ್ತಿಯು ಬಂದು ತನ್ನನ್ನು ಪಾಲ್ದನೆ ಚರ್ಚ್ ವರೆಗೆ ಡ್ರಾಪ್ಮಾಡುವಂತೆ ಕೇಳಿಕೊಂಡ ಮೇರೆಗೆ ಆತನನ್ನು ಕುಳ್ಳಿರಿಸಿಕೊಂಡು ಪಾಲ್ದನೆ ಚರ್ಚ್  ರಸ್ತೆಯಲ್ಲಿ ಬಂದಾಗ 01.30 ಗಂಟೆಗೆ  ಸದ್ರಿ ವ್ಯೆಕ್ತಿಯು ಬೈಕನ್ನು ನಿಲ್ಲಿಸುವಂತೆ ಹೇಳಿದಾಗ ಅಲ್ಲಿಗೆ ಇನ್ನೊಂದು ಬೈಕ್‌‌ನಲ್ಲಿ ಇಬ್ಬರು ಬಂದು ಬೈಕನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಂತೆ ಪಿರ್ಯಾದಿದಾರರ ಹಿಂಬದಿ ಕುಳಿತ್ತಿದ್ದ ವೆಕ್ತಿಯು ಹೆಲ್ಮೆಟ್‌‌ನಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಇನ್ನಿಬ್ಬರು ಮುಖಕ್ಕೆ, ಕಾಲಿಗೆ ಹೊಟ್ಟೆಗೆ ತುಳಿಯುತ್ತಾ, ಇವನನ್ನು ಬಿಡಬಾರದೂ ಇಲ್ಲಿಯೇ ಕೊಂದು ಹಾಕಬೇಕು ಎಂಬಿತ್ಯಾದಿಯಾಗಿ ಹೇಳುತ್ತಾ ಹಲ್ಲೆ ನಡೆಸುತ್ತಿದ್ದು   ಪಿರ್ಯಾದಿದಾರರು ಅವರಿಂದ ತಪ್ಪಿಸಿಕೊಂಡು ಓಡಿಹೋಗದೇ ಇರುತ್ತಿದ್ದರೆ ಸದ್ರಿ ಆರೋಪಿಗಳು ಪಿರ್ಯಾಧಿದಾರರನ್ನು ಕೊಲೆ ಮಾಡುತ್ತಿದ್ದರು. ಪಿರ್ಯಾದಿದಾರರ ಮೇಲಿನ ಯಾವುದೋ ದ್ವೇಷದಿಂದ ಆರೋಪಿಗಳು ಪಿರ್ಯಾದಿದಾರರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾಗಿದ್ದು ಪಿರ್ಯಾಧಿದಾರರು ತಮಗಾದ ಗಾಯದ ಬಗ್ಗೆ ವೆನ್ಲಾಕ್‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೊಲಾಸೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗಣೇಶ್ ಶೆಟ್ಟಿ ರವರು ಅಡ್ಯಾರ್‌‌ಕಟ್ಟೆ ಎಂಬಲ್ಲಿ ಅಂಗಡಿ  ವ್ಯಾಪಾರ ಮಾಡಿಕೊಂಡಿದ್ದು  ದಿನಾಂಕ: 21.12.2014 ರಂದು ಪಿರ್ಯಾದಿದಾರರು ಅಂಗಡಿಯಲ್ಲಿರುವಾಗ ಸಂಜೆ ಸುಮಾರು 4.15 ಗಂಟೆಗೆ  ಪಿರ್ಯಾದಿದಾರರ ಸಂಬಂಧಿ ರವೀಂದ್ರ ಶೇಖ ಎಂಬವರು  ರಸ್ತೆ ಬದಿಯಲ್ಲಿ  ಅಂಗಡಿ ಕಡೆಗೆ ಬರುತ್ತಿದ್ದಾಗ  ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ ಕೆಎ-21-ಎಂ-8917 ನೇ ಸ್ವಿಪ್ಟ್‌‌ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂ ಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ  ಚಲಾಯಿಸಿಕೊಂಡು ಬಂದು  ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರವೀಂದ್ರ ಶೇಖ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆ ಬದಿಗೆ ಬಿದ್ದು ಅವರ ಬಲಕಾಲಿಗೆ ಮತ್ತು ಎಡಕೈಗೆ ಮೂಳೆ ಮುರಿತದ ಗಾಯ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಗಾಯಾಳು ರವೀಂಧ್ರ ಶೇಖ ರವರು ಮಂಗಳೂರು .ಜೆ ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:20.12.2014 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಳಿನಿ ರವರ ಗಂಡ ಹರೀಶ್ಚಂದ್ರ ಗೌಡ(50)  ರವರು ಮಣಿಪಾಲಕ್ಕೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ವರೆಗೆ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಅವರ ಬಗ್ಗೆ ನೆರೆಕರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಲಭ್ಯವಾಗದೇ ಇರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಅಡ್ಯಾರು ದೋಟದ ಲ್ಯಾಂಡ್ಸ್ ಪ್ಲೇವರ್ರೆಸಾರ್ಟ್ಹಿಂಭಾಗದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಪಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಮೈನ್ಸ್ & ಮಿನರಲ್ಸ್ ಜಿಯೋಲಜಿ ಡಿಪಾರ್ಟ್ಮೆಂಟ್, ಮಂಗಳೂರು ರವರು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಸದರಿ ಪ್ರದೇಶಕ್ಕೆ ಬೇಟಿ ನೀಡಿದಾಗ ಸಾರ್ವಜನಿಕರು ಕೆಎ-21--169 ನೇ ವಾಹನವನ್ನು ತಡೆದು ನಿಲ್ಲಿಸಿದ್ದು ಪರಿಶೀಲನೆ ನಡೆಸಿದಾಗ ಸದರಿ ಲಾರಿಯಲ್ಲಿ ಮರಳು ತುಂಬಿರುವುದು ದೃಡಪಟ್ಟಿದ್ದು ಅಕ್ರಮವಾಗಿ ಸರ್ಕಾರದ ಸ್ವತ್ತನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿರುವುದು [ ಸದರಿ ದಿನಾಂಕ: 22.12.2014 ರಂದು ರಾತ್ರಿ 10.40  ಗಂಟೆ ಸಮಯದಲ್ಲಿ] ಅಪರಾದವಾಗಿದ್ದು  ಕರ್ನಾಟಕ ಉಪಖನಿಜ ರಿಯಾಯಿತಿ ನಿಯಾಮವಳಿ 1994 42,43,44 ಮತ್ತು ಎಮ್. ಎಮ್. ಆರ್‌ & ಡಿ ಆಕ್ಟ್ 1957 4{1}, 4{1} {} ರಂತೆ ಕಾನೂನು ಉಲ್ಲಂಘನೆಯಾಗಿರುತ್ತದೆ.

No comments:

Post a Comment