Tuesday, December 2, 2014

Daily Crime Report

 

ದಿನಾಂಕ 02.12.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30/11/2014 ರಂದು ಸಮಯ ಸುಮಾರು 20:30 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಕೃಷ್ಣಭವನದ ಬಳಿ  KA-21-M-7578 ನೇ ನಂಬ್ರದ ಕಾರನ್ನು ಅದರ ಚಾಲಕ ನಂತೂರು ಕಡೆಯಿಂದ ಹೋಗುವ ಎಕಮುಖ ರಸ್ತೆಯಲ್ಲಿ ಬಿಕರ್ನಕಟ್ಟೆ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ರಸ್ತೆಯ ಬದಿ ನಿಂತಿದ್ದ  ಆನಂದ (46) ಎಂಬವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆನಂದರವರ ತಲೆಗೆ, ಎಡಕಾಲಿನ ತೊಡೆಗೆ ರಕ್ತಗಾಯವಾಗಿದ್ದುಗಾಯಾಳು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29/11/2014 ರಂದು ಸಮಯ ಸುಮಾರು ರಾತ್ರಿ 21:30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಸೌಮ್ಯ ಶೆಟ್ಟಿ ರವರು ತಮ್ಮ ಬಾಬ್ತು ಕಾರು ನಂಬ್ರ KA-19-MD-9236 ನೇ ದರಲ್ಲಿ ಚಾಲಕಿಯಾಗಿ ಫಳ್ನಿರ ಕಡೆಯಿಂದ ಕೊಡಿಯಾಲ್ ಕಡೆಗೆ ಹೋಗುತ್ತ ಮಿಲಾಗ್ರಿಸ್ ಚರ್ಚ ಹಾಲ್ ಬಸ್ ನಿಲ್ದಾಣ ಎದುರು ತಲುಪಿದಾಗ ಪಿರ್ಯಾದುದಾರರ ಕಾರಿನ ಹಿಂದಿನಿಂದ ಕೆಎ-19-ಇಬಿ-491 ನಂಬ್ರದ ದ್ವಿಚಕ್ರ ವಾಹನವನ್ನು ಅದರ ಸವಾರ ರಮೇಶ ಎಂಬಾತನು ಫಳ್ನಿರ ಕಡೆಯಿಂದ ಹಂಪನಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ದ್ಚಿಚಕ್ರ ವಾಹನ ಸವಾರ ರಮೇಶನು  ರಸ್ತೆಗೆ ಬಿದ್ದು ಮೂಗಿಗೆ ರಕ್ತ ಗಾಯವಾಗಿದ್ದು, ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಅಪಘಾತದಿಂದ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಮತ್ತು ಆರೋಪಿಯ ದ್ವಿಚಕ್ರ ವಾಹನಕ್ಕೆ ಜಖಂ ಉಂಟಾಗಿದ್ದು, ಆರೋಪಿಯು ಪಿರ್ಯಾದಿದಾರರ ಕಾರಿನ ಜಖಂ ನಷ್ಟ ಭರಿಸುತ್ತೇನೆಂದು ಹೇಳಿ ಬಳಿಕ ನಿರಾಕರಿಸಿದ್ದರಿಂದ ತಡವಾಗಿ ದೂರು ನೀಡಿದ್ದಾಗಿದೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ರೆಹನಾ ಮಹಮ್ಮದ್ ಇಬ್ರಾಹಿಂ ರವರ ಗಂಡ ಮಹಮ್ಮದ್ ಇಬ್ರಾಹಿಂ ರವರು ದಿನಾಂಕ:27-09-2013 ರಂದು 9 ಲಕ್ಷಕ್ಕೆ ಕ್ರಯ ಸಾಧನದಂತೆ ಮಂಗಳೂರು ತಳೂಕು ಮೂಡಬಿದ್ರೆ ಪ್ರಾಂತ್ಯ ಗ್ರಾರದ ಲಾಡಿ ಎಂಬಲ್ಲಿ ಸರ್ವೆ ನಂಬ್ರ 152/2ಫಪಿ23ರಲ್ಲಿ 0.05 ಸೆಂಟ್ಸ್ ಕೃಷಿಯೇತರ ಸ್ಥಿರಾಸ್ತಿ ಹಾಗೂ ಜಾಗದಲ್ಲಿ ಮನೆ ನಂ 11/21(4) ಮನೆಯನ್ನು ಹೊಂದಿದ್ದು ಸದ್ರಿ ಜಾಗವನ್ನು ಬೆಳ್ತಂಗಡಿ ತಾಲೂಕಿನ ಅಬ್ಬಾಸ್ ರವರ ಮಗ ಹೆಚ್ ಹಸನ್ ಕುಟ್ಟಿ ಯವರಿಂದ ಪಡೆದಿದ್ದು, ಹೀಗಿರುವಾಗ ಪಿರ್ಯಾದಿದಾರರ ಗಂಡನ ಹೆಸರಿನಲ್ಲಿ ಪಹಣಿ ಪತ್ರಿಕೆ ಬಾರದಿರುವುದನ್ನು ಕಂಡು ಪಿರ್ಯಾದಿದಾರರು ಮೂಡಬಿದ್ರೆ ನೋಂದಾಣಾಧಿಕಾರಿಯವರ ಕಛೇರಿಗೆ ಹೋಗಿ ವಿಚಾರಿಸಿ ದಾಖಲೆಗಳನ್ನು ನೋಡಿದ್ದಲ್ಲಿ ಸದ್ರಿ ಮಾರಾಟಗಾರ ಹಸನ್ ಕುಟ್ಟಿರವರು ದಿನಾಂಕ: 08.04.2014 ರಂದು ಇದೇ ಜಾಗವನ್ನು ಬೆಂಗಳೂರಿನ ಹನುಮಂತ ನಗರದಲ್ಲಿರುವ ನೋಟರಿ ವಕೀಲ ಟಿ. ಗೋಪಾಲ  ಕೃಷ್ಣ   ಇವರಿಂದ ನೋಟರಿ ಮಾಡಿಸಿ ಪಿರ್ಯಾದಿದಾರರ ಗಂಡನ ಹೆಸರಿನಲ್ಲಿ ತಯಾರಿಸಿದ ಜನರಲ್ ಪವರ್ ಆಫ್ ಅಟರ್ನಿಯ ಸುಳ್ಳು ದಾಖಲೆಯ ಆಧಾರದ ಮೇರೆಗೆ ಸದ್ದರಿ ಜಮೀನನ್ನು ದಿನಾಂಕ: 25.06.2014 ರಂದು ಹಸನ್ ಕುಟ್ಟಿರವರ ಹೆಸರಿಗೆ ನೋಂದಾಯಿಸಿಕೊಂಡಿದ್ದು, ಇವರ ಈ ಕೃತ್ಯಕ್ಕೆ ಹಸನ್ ಕುಟ್ಟಿಯವರ ಭಾವ ಎಚ್  ಅಬ್ದುಲ್ ರವರು ಪ್ರಚೋದನೆ ನೀಡಿ ಸುಳ್ಳು ದಾಖಲೆಯನ್ನು ಮಾಡಿಸಿದ್ದು, ನೋಟರಿ ವಕೀಲರಾದ ಗೋಪಾಲಕೃಷ್ನ ಮಹಮ್ಮದ್ ಆಲಿ ಪವರ್ ಆಫ್ ಅಟರ್ನಿ ಯಲ್ಲಿರುವ ಪೋಟೋದಾರ ಹಾಗೂ ಹಸನ್ ಕುಟ್ಟಿ  ಮೋಸದಿಂದ ವಂಚನೆ ಹಾಗೂ ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸ್ರಷ್ಠಿಸಿ ಮೋಸ ದ ದಸ್ತಾವೇಜನ್ನು   ನೈಜವೆಂದು ಬಳಸಿ ನೋಂದಾವಣಿ ಮಾಡಿ ಪಿರ್ಯಾದಿದಾರರ ಗಂಡನ ಹೆಸರಿನಲ್ಲಿದ್ದ ಸ್ಥಿರಾಸ್ತಿ ಯನ್ನು  ಪುನಃ ಹಸನ್ ಕುಟ್ಟಿಯವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಈ ಬಗ್ಗೆ ಹಸನ್ ಕುಟ್ಟಿರವರಲ್ಲಿ ವಿಚಾರಿಸಿದಾಗ ಅವ್ಯಾಚ್ಚ ಶಬ್ದಗಳಿಂದ ಬೈದು ಇನ್ನು ಮುಂದಕ್ಕೆ ಜಾಗದ ವಿಷಯದಲ್ಲಿ ನೀನು ಹಾಗೂ ಗಂಡ ನನ್ನಲ್ಲಿ ವಿಚಾರಿಸಿದ್ದಲ್ಲಿ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ ಎಂಬುದಾಗಿ ಪಿರ್ಯಾದಿದಾರರರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-11-2014ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರೋಶನ್ ಡಿ'ಸೋಜಾ ರವರು ಅವರ ಬಾಬ್ತು ಕೆಎ-19-ಎಂಇ3174ನೇ ಕಾರಿನಲ್ಲಿ  ಫಿರ್ಯಾದಿದಾರರು , ಅವರ ಪತ್ನಿ ಗ್ರೆಟ್ಟಾ ಹಾಗೂ ಇಬ್ಬರು ಮಕ್ಕಳೊಂದಿಗೆ ಹೋಗುತ್ತಾ ಗ್ರೇಟಳು ಕಾರಿನ ಚಾಲಕಳಾಗಿದ್ದು ಆಶ್ವಸ್ಥ ಪುರ  ಕಡೆಗೆ ಹೋಗುತ್ತಾ ಕುಕ್ಕುದಕಟ್ಟೆ ಎಂಬಲ್ಲಿಗೆ ತಲುಪಿದಾಗ ಎದುರು ಕಡೆಯಂದ ಒಂದು ಮೋಟಾರ್ಸೈಕಲ್ಸವಾರನು ರಸ್ತೆಯ ಮಧ್ಯದಲ್ಲಿ ಚಲಾಯಿಸಿಕೊಂಡು ಬರುತ್ತಿರುದನ್ನು ನೋಡಿ ಮೋಟಾರ್ ಸೈಕಲಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು  ಗ್ರೆಟ್ಟಾಳು ಕಾರನ್ನು ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ಕಂಬಕ್ಕೆ ಢಿಕ್ಕಿಯಾಗಿ ಕಾರಿನಿಂದ ಫಿರ್ಯಾದಿದಾರರು ಎಸೆಯಲ್ಪಟ್ಟು ಅವರ ಎಡ ಬದಿಯ ತೋಳಿಗೆ ಹಾಗೂ ತಲೆಗೆ ಗುದ್ದಿದ ಜಖಂ ಆಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

No comments:

Post a Comment