ದಿನಾಂಕ 08.12.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 7 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-12-14ರಂದು ಪಿರ್ಯಾಧಿದಾರರಾದ ಶ್ರೀ ಬಾಲಕೃಷ್ಣ ರವರು ತಡಂಬೈಲು ಬಳಿಯ ಅಂಗಡಿಯೊಂದಕ್ಕೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಹೋಗುತ್ತಾ ಸಂಜೆ ಸಮಯ 7 ಗಂಟೆಗೆ ತಡಂಬೈಲು ಬಳಿಗೆ ತಲುಪಿದಾಗ ಅವರ ಎಡ ಬದಿಯಿಂದ ಅಂದರೆ ಸುರತ್ಕಲ್ ಕಡೆಯಿಂದ ಉಡುಪಿಕಡೆಗೆ ಕೆಎ-19-ಎಮ್.ಡಿ-847ನೆ ನಂಬ್ರದ ಕಾರನ್ನು ಅದರ ಚಾಲಕ ಯಶವಂತ್ ಕಾಮತ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು, ತಲೆ, ಹಣೆ, ಮುಖಕ್ಕೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-12-14ರಂದು 11:00 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಜಾನ್ ಬ್ಯಾಪಿಸ್ಟನ್ ಡಿ'ಸೋಜಾ ರವರು ತನ್ನ ಬಾಬ್ತು ಕೆಎ-19-ಇಹೆಚ್-2970 ನಂಬ್ರದ ಮೋಟಾರು ಸೈಕಲಿನಲ್ಲಿ ಸುರತ್ಕಲ್ ಕಾನ ಮಾರ್ಗದಲ್ಲಿ ಸಂಚರಿಸುತ್ತಾ ರೈಲ್ವೆ ರೋರೋ ಬಳಿ ತಲುಪಿದಾಗ ಸುರತ್ಕಲ್ ಕಡೆಯಿಂದ ಕಾನ ಕಡೆಗೆ ಕೆಎ-19-ಡಿ-6680 ನಂಬ್ರದ ಕಂಟೈನರ್ ಲಾರಿಯನ್ನು ಅದರ ಚಾಲಕ ದರಿಯಪ್ಪ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ವಾಹನವನ್ನು ಹಿಂದಿಕ್ಕುವ ಭರದಿಂದ ಪಿರ್ಯಾಧಿದಾರರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಾಹನ ಸಮೇತ ರಸ್ತೆಗೆ ಬಿದ್ದು, ಬಲ ಕೈ, ಬಲ ಹಣೆಗೆ, ಬಲ ಕೆನ್ನೆಗೆ ಗುದ್ದಿದ ಗಾಯವಾಗಿದ್ದು, ಬಲ ಕಾಲಿನ ಮೊಣ ಗಂಟಿಗೆ ಹಾಗು ಪಾದಕ್ಕೆ ತರಚಿದ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆಗೆ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ಅಲ್ಲಿಂದ ದಿನಾಂಕ 07-12-14ರಂದು ಅನೂಕೂಲ ದೃಷ್ಟಿಯಿಂದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 06/07.12.2014 ನೇ ರಾತ್ರಿ 1.00 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಪವನ್ ರವರು ಲಾಲ್ ಭಾಗ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಕಡೆಗೆ ಬಾಡಿಗೆ ಆಟೋರಿಕ್ಷಾದಲ್ಲಿ ತನ್ನ ಸ್ನೇಹಿತರಾದ ಸಂಗಮ್ ಮತ್ತು ಪ್ರಥಮ್ ರವರೊಂದಿಗೆ ಹಾಗೂ ಇನ್ನೊಬ್ಬ ಸ್ನೇಹಿತ ಉತ್ತಮ್ ರವರು ಆತನ ಬಾಬ್ತು ಆಕ್ಸೆಸ್ ಸ್ಕೂಟರ್ ನಂ. KA-19-EE-8137 ನೇದ್ದರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ. ಕಡೆಯಿಂದ ಲಾಲ್ ಭಾಗ್ ಕಡೆಗೆ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ KA-19-EJ-2112 ನೇ ನಂಬ್ರದ ಮೋಟಾರು ಸೈಕಲ್ ನ್ನು ಓರ್ವ ಸವಾರ, ಸಹ ಸವಾರಳನ್ನು ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ನೇಹಿತ ಬಾಬ್ತು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ರಸ್ತೆಗೆ ಎಸೆಯಲ್ಪಟ್ಟರು. ಸದ್ರಿ ಅಪಘಾತದಿಂದ ಉತ್ತಮ್ ನ ಮುಖಕ್ಕೆ, ಕಣ್ಣಿಗೆ, ತುಟಿಗೆ ಹಾಗೂ ಹಣೆಗೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆನು. ಇನ್ನೊಂದು ಮೋಟಾರು ಸೈಕಲ್ ಸವಾರ ಹಾಗೂ ಸವಾರಳು ಕೂಡ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.12.2014 ರಂದು ಸಮಯ ಸುಮಾರು 5:00 ಗಂಟೆಗೆ ಕಾರ್ಕಾಳ ಕಡೆಯಿಂಡ ಮೂಡಬಿದ್ರೆ ಕಡೆಗೆ KA 19 ME 3508ನೇ ಕಾರನ್ನು ಅದರ ಚಾಲಕ ಜೋಮಿಚಾನ್ ಎಂಬಾತನು ಮಂಗಳೂರು ತಾಲೂಕು ಪಡುಮಾರ್ನಾಡು ಗ್ರಾಮದ ಬನ್ನಡ್ಕ,, ಎಂಬಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಯಾವುದೋ ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಪಿರ್ಯಾದಿದಾರರಾದ ಶ್ರೀ ರಾಜಕಿರಣ್ ಬಲ್ಲಾಲ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ, KA 21 N 923 ನೇ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದು ನಂತರ ರಭಸವಾಗಿ ಮುಂದೆ ಹೋಗಿ ಪಿರ್ಯಾದಿದಾರರ ಕಾರಿನ ಹಿಂದೆ ಬರುತ್ತಿದ್ದ, KA 19 EF 0445ನೇ ಮೋಟಾರು ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸವಾರ ಸಂದೀಪ್ ಹೆಗ್ಡೆ ಮೃತಪಟ್ಟು, ಮೋಟಾರು ಸೈಕಲ್‌ನ ಸಹ ಸವಾರ ದಿನೇಶ್ ಪೂಜಾರಿ ಎಂಬಾತನು ತೀವ್ರ ಗಾಯಗೊಂಡು, ಹಾಗೂ ಅಪಘಾತಪಡಿಸಿದ ಕಾರಿನಲ್ಲಿದ್ದ, ಸಹ ಪ್ರಯಾಣಿಕರಿಗೆ ಕೂಡಾ ಗಾಯಗೊಂಡಿದ್ದು, ಅಪಘಾತದಿಂದ ಮೋಟಾರು ಸೈಕಲ್ ಹಾಗೂ ಅಪಘಾತಕ್ಕೊಳಗಾದ ಕಾರುಗಳು ಜಖಂಗೊಂಡಿದ್ದು ಅಪಘಾತ ಉಂಟು ಮಾಡಿದ ಕಾರು ಚಾಲಕನು ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಿದೆ ಹಾಗೂ ಅಪಘಾತದ ಮಾಹಿತಿಯನ್ನು ಠಾಣೆಗೆ ನೀಡದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-12-2014 ರಂದು ರಾತ್ರಿ 20-15 ಕ್ಕೆ ಪಿರ್ಯಾಧಿದಾರರಾದ ಶ್ರೀ ಪೌಲ್ ಗೋವಿಯಸ್ ರವರ ಮಗನಾದ ಡಾಲ್ಪಿ ಗೋವಿಯಸ್ ಮತ್ತು ನವಾಜ್ ಎಂಬವರು ಪಿರ್ಯಾಧಿದಾರರ ಮನೆಯ ಎದುರು ಕೆ ಎ 19 ಬಿ 2907 ನೇಯ ಪಿಕಾಪ್ ವಾಹನವನ್ನು ಗೇಟಿನ ಬಳಿ ನಿಲ್ಲಿಸಿ ಬೀಗಾ ತೆಗೆಯಿರಿ ಎಂದಾಗ ಪಿರ್ಯಾಧಿದಾರರು ಮಾನ್ಯ ನ್ಯಾಯಲಯದ ಆದೇಶದ ಪ್ರಕಾರ ಗೇಟ್ ತೆಗೆಯಾಲಾಗುವುದಿಲ್ಲ ಎಂದು ಹೇಳಿದಕ್ಕೆ ಆರೋಪಿ ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಾಳೆ ನಿಮ್ಮ ಜೀವ ತೆಗೆಯುತ್ತೇನೆ ಎಂಬುವುದಾಗಿ ಜೀವ ಬೆದರಿಕೆ ಹಾಕಿ ಪಿರ್ಯಾಧಿದಾರರ ಪತ್ನಿ ಲಿಲ್ಲಿ ಗೋವಿಯಸ್ ಅವರನ್ನು ದೂಡಿಕೊಂಡು ಹೋಗಿ ಒದ್ದೆಯಾದ ಬಟ್ಟೆಯಿಂದ ಅವರ ಮುಖಕ್ಕೆ ಕೈಯಿಂದ ಹೊಡೆದಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-12-2014 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಲತಾ ರವರು ಅವರ ವಾಸ್ತವ್ಯದ ಸುರತ್ಕಲ್ ಗ್ರಾಮದ ತಡಂಬೈಲ್ ನಲ್ಲಿರುವ ಶುಭ್ರ ದೀಪ ಎಂಬ ಮನೆಗೆ ಬೀಗ ಹಾಕಿ ಉಳ್ಳಾಲದಲ್ಲಿರುವ ತವರು ಮನೆಗೆ ಹೋಗಿ ದಿನಾಂಕ 07-12-2014 ರಂದು ಸಂಜೆ 4-00 ಗಂಟೆಗೆ ವಾಪಾಸು ಮನೆಗೆ ಬಂದಾಗ ಮನೆಯ ಮುಂದಿನ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ಪರಿಶೀಲಿಸಿದಾಗ ಮನೆಯ ಬೆಡೆ ರೂಮ್ ನಲ್ಲಿದ್ದ ಕಬ್ಬಿಣದ ಕಪಾಟಿನೊಳಗಿದ್ದ 1) ಸುಮಾರು 6 ಗ್ರಾಂ ತೂಕದ ಒಂದು ಜೊತೆ ಮುತ್ತಿನ ಕಿವಿಯ ಓಲೆ, 2) ಸುಮಾರು 2 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿಯ ಗುಂಡು ಓಲೆ, 3) ಸುಮಾರು 6 ಗ್ರಾಂ ತೂಕದ ಬಂಗಾರದ ಉಂಗುರ-1, 4) ಸುಮಾರು 1 ಗ್ರಾಂ ತೂಕದ ಉರುಕು (ತಾಯತ)-1, ಒಟ್ಟು 15 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಯಾರೋ ಕಳ್ಳರು ಮನೆಯೊಳಗಡೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಸೊತ್ತಿನ ಅಂದಾಜು ಮೌಲ್ಯ ಸುಮಾರು 30,000/- ಆಗಬಹುದು.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-12-2014 ರಂದು ಪಿರ್ಯಾದುದಾರರಾದ ಶ್ರೀ ನೌಷಾದ್ ಹುಸೈನ್ ರವರು ತಮ್ಮ ಅಣ್ಣನ ಬಾಬ್ತು ಕೆಎ-19-ಇಸಿ-5491 ನೇ ಮೋಟಾರ್ ಸೈಕಲ್‌ನಲ್ಲಿ ತಂದೆ ಯುಎ ಖಾದರ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನ ಯೆನೆಪೊಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾವನನ್ನು ನೋಡಿಕೊಂಡು ವಾಪಾಸು ಉಳ್ಳಾಲಕ್ಕೆ ಬರುತ್ತಿರುವಾಗ ಮದ್ಯಾಹ್ನ ಸುಮಾರು 14-15 ಗಂಟೆಗೆ ಉಳ್ಳಾಲ ಗ್ರಾಮದ ಉಳ್ಳಾಲ ಬೈಲು ತಲುಪುವಾಗ್ಗೆ ಪಿರ್ಯಾದುದಾರರ ಎದುರುಗಡೆಯಿಂದ ಅಂದರೆ ಉಳ್ಳಾಲದಿಂದ ತೊಕ್ಕೊಟ್ಟು ಕಡೆಗೆ ಓರ್ವ ಬೈಕ್ ಸವಾರನು ಅತೀ ವೇಗದಿಂದ ಬಂದು ಒಮ್ಮೆಲೆ ಮೊಟಾರ್ ಸೈಕಲ್‌ನ್ನು ಬಲಬದಿಗೆ ತಿರುಗಿಸಿ ಪಿರ್ಯಾದುದಾರರ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಇಬ್ಬರೂ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡ ಭುಜಕ್ಕೆ ಮೂಳೆ ಮುರಿತದ ಗಾಯ, ಕುತ್ತಿಗೆಗೆ, ಎಡ ಭಾಗದ ತೊಡೆಗೆ ಗುದ್ದಿದ ಗಾಯವಾಗಿದ್ದು ತಂದೆಗೆ ತಲೆಯ ಹಿಂಬದಿಗೆ ರಕ್ತಗಾಯವಾಗಿದ್ದು ಅಲ್ಲಿ ಸೇರದ್ದವರು ಚಿಕಿತ್ಸೆಯ ಬಗ್ಗೆ ನೇತಾಜಿ ಆಸ್ಪತ್ರೆಗೆ ಕರೆತಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾ ದಾಖಲು ಮಾಡಿರುತ್ತಾರೆ ಈ ಅಪಘಾತಕ್ಕೆ ಕೆಎ-19-ಇಜಿ-9562 ನೇದರ ಸವಾರ ನಿಶಾನ್ ಅತೀವೇಗ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದೆ ಕಾರಣವಾಗಿರುತ್ತದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-12-2014 ರಂದು ಸಂಜೆ ಸಮಯ 6-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಫೀಕ್ ರವರು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಮಸೀದಿ ರಾಹೆ 66 ಮಂಗಳೂರು ಕಡೆಯಿಂದ ತೊಕ್ಕೋಟು ಕಡೆಗೆ ಹಾದು ಹೋಗುವ ರಸ್ತೆಯ ಬದಿಯಲ್ಲಿ ತನ್ನ ಪತ್ನಿ ಖತೀಜಾ ಹಾಗೂ ಮಗಳು ರಾಫಿ ಮತ್ತು ಮಗು ರಾಜಿಕ್ರೊಂದಿಗೆ ರಸ್ತೆ ದಾಟಲು ನಿಂತಿದ್ದ ಸಮಯ ಮಂಗಳೂರು ಕಡೆಯಿಂದ ತೊಕ್ಕೋಟು ಕಡೆಗೆ ಕೆಎ 19 ಟಿಡಬ್ಲ್ಯೂ 5420 ನೇ ಮೋಟಾರ್ ಸೈಕಲ್ನ್ನು ಅದರ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ವಾಹನ ಚಲಾಯಿಸಿಕೊಂಡು ರಸ್ತೆ ದಾಟಲು ನಿಂತಿದ್ದ ಫಿರ್ಯಾದಿದಾರರಿಗೆ ಹಾಗೂ ಅವರ ಪತ್ನಿ, ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಎಡಕಾಲಿನ ಕೋಲುಕಾಲಿಗೆ ಮೂಳೆಮುರಿತದ ಗಾಯ ಹಾಗೂ ಎಡ ಕಣ್ಣಿನ ಮೇಲ್ಭಾಗ, ತಲೆಯ ಹಿಂಬಾಗಕ್ಕೆ ರಕ್ತ ಬರುವ ಗಾಯವಾಗಿದ್ದು, ಮಗಳು ರಾಫಿಗೆ ಮುಖಕ್ಕೆ ಹಾಗೂ ತಲೆಗೆ ಗಾಯವಾಗಿದ್ದು, ಪತ್ನಿ ಖತೀಜಳು ಕೂಡ ಹಾಗೂ ಮಗು ರಾಜಿಕ್ ಕೂಡ ಗಾಯಗೊಂಡಿರುತ್ತಾರೆ. ಬೈಕ್ ಸವಾರ ಮತ್ತು ಸಹಸವಾರರು ಕೂಡ ಗಾಯಗೊಂಡಿರುತ್ತಾರೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.12.2014 ರಂದು ಪಿರ್ಯಾದುದಾರರಾದ ಶ್ರೀ ಶೇಖ್ ಸಿರಾಜ್ ರವರು ತನ್ನ ಮಗ 15 ವರ್ಷ ಪ್ರಾಯದ ಸುಹೈಲ್ ಎಂಬವನ ಜೊತೆ ವಾಮಂಜೂರಿನಲ್ಲಿರುವ ತಮ್ಮ ಮನೆಯ ಕಡೆಯಿಂದ ತೊಕ್ಕೊಟ್ಟು ಪಂಡಿತ್ ಹೌಸ್ ಕಡೆಗೆ ಹೋಗುವರೇ ಬೆಳಿಗ್ಗೆ ಸುಮಾರು 08;30 ಗಂಟೆ ಸಮಯಕ್ಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಾ ವಾಮಂಜೂರು ನಗರ ಪಾಲಿಕೆ ತೊಟ್ಟಿಯ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಪಿಲಿಕುಳ ರಸ್ತೆಯಿಂದ ವಾಮಂಜೂರು ಕಡೆಗೆ KA-19-EJ-1381ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆ ಬಿದ್ದು ಅವರ ಬಲಕಾಲಿಗೆ ಮೂಳೆ ಮುರಿತದ, ಮುಖಕ್ಕೆ ರಕ್ತ ಬರುವ ಗಾಯಗೊಂಡಿರುವುದಲ್ಲದೇ ಸದ್ರಿ ಆರೋಪಿ ಮೋಟಾರ್ ಸೈಕಲ್ ಸವಾರ ಕೂಡಾ ಬೈಕ್ ಸಮೇತ ರಸ್ತೆಗೆ ಬಿದ್ದು, ಗಾಯಗಳಾಗಿರುವುದಾಗಿದೆ.
No comments:
Post a Comment