ದಿನಾಂಕ 28.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 8 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-12-14 ರಂದು ರಾತ್ರಿ 02:00 ಗಂಟೆಗೆ ಮಂಗಳೂರು ತಾಲೂಕು ಸುರತ್ಕಲ್ ಗ್ರಾಮದ ಅಗರಮೇಲು ಎಂಬಲ್ಲಿ ಬೈಕ್ ನಂಬ್ರ ಕೆಎ-19-ಇಜೆ-5742 ನೇದನ್ನು ಅದರ ಸವಾರ ದೀಪಕ್ ಎಂಬವರು ಹಿಂಬದಿ ಸವಾರ ನಿಕಿಲ್ ರಾಜ್ ಎಂಬವರನ್ನು ಕುಳ್ಳಿರಿಸಿಕೊಂಡು ಚೊಕ್ಕಬೆಟ್ಟು ರಸ್ತೆ ಕಡೆಯಿಂದ ಅಗರಮೇಲು ರಸ್ತೆಯಲ್ಲಿ ಬರುತ್ತಾ ಫಿರ್ಯಾದಿದಾರರಾದ ಶ್ರೀ ಗಣೇಶ್ ರವರ ಗುರುಕೃಪಾ ಮನೆಯ ಬಳಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್ ನ ಹತೋಟಿ ತಪ್ಪಿ ಮಗುಚಿ ಬಿದ್ದು ಬೈಕ್ ಸವಾರ ದೀಪಕ್ ಹಾಗೂ ಹಿಂಬದಿ ಸವಾರ ನಿಕಿಲ್ ರಾಜ್ ರವರಿಗೆ ತಲೆಗೆ ಶರೀರಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014 ರಂದು ಪಿರ್ಯಾದಿದಾರರಾದ ಶ್ರೀ ಗೋಪಿನಾಥ್ ಎನ್. ರವರು ಬೆಳಿಗ್ಗೆ ಎಂದಿನಂತೆ ವಾಕಿಂಗ್‌ಗೆಂದು ಮನೆಯಿಂದ ಹೊರಟು ಲಾಲ್ಬಾಗ್‌ನಿಂದಾಗಿ ನೆಹರು ಅವೆನ್ಯೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 06:00 ಗಂಟೆಗೆ ಉರ್ವಾ ಕೆನರಾ ಹೈಸ್ಕೂಲ್ ಜಂಕ್ಷನ್ ತಲುಪಿದಾಗ, ಪಿರ್ಯಾದಿದಾರರ ಹಿಂದುಗಡೆಯಿಂದ ಸ್ಕೂಟರ್ ನಂಬ್ರ ಕೆ.ಎ-19-ಇ.ಎಲ್-0533 ನೇದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಗೆ, ಬಲಕಿವಿಯ ಬಳಿ, ಬಲಭುಜಕ್ಕೆ, ಬಲಕೈಯ ಮೊಣಗಂಟಿಗೆ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-10-2014 ರಂದು ಅಪರಾಹ್ನ 3-45 ಗಂಟೆ ಸುಮಾರಿಗೆ ಆರೋಪಿಗಳಾದ ಶಿವರಾಜ್ ಶೆಟ್ಟಿ, ಶ್ರೀಮತಿ ತಾರಾ, ಶ್ರೀಮತಿ ಯೋಗಿನಿ, ಶ್ರೀಮತಿ ಯಶೋಧಾ ಇವರುಗಳು ಬೋಳೂರು ಗ್ರಾಮದ ವಾಸು ಶೆಟ್ಟಿ ಕಂಪೌಂಡಿಗೆ ಪಿರ್ಯಾದಿದಾರರ ವಾಸ್ತವ್ಯದ ಮನೆ ಇರುವ ಜಮೀನಿಗೆ ಪಿರ್ಯಾದುದಾರರು ಮನೆಯಲ್ಲಿ ಇಲ್ಲದ ವೇಳೆ ಅಕ್ರಮ ಪ್ರವೇಶ ಮಾಡಿ ಹಾರೆ ಗುದ್ದಳಿಗಳ ಸಹಾಯದಿಂದ ಪಿರ್ಯಾದಿದಾರರ ಮನೆಯ ಬಳಿಯ ತಗಟು ಶೀಟಿನ ತಡೆ ಬೇಲಿಯನ್ನು ಕಿತ್ತು ಹಾಕಿ ಸುಮಾರು ರೂಪಾಯಿ 37,000/- (ಮೂವತ್ತೇಳು ಸಾವಿರ) ನಷ್ಟ ವುಂಟುಮಾಡಿದ್ದಲ್ಲದೇ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಸೌಮ್ಯ ಶೆಟ್ಟಿಯವರಲ್ಲಿ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂಬುವುದಾಗಿ ಹೇಳಿ ಜೀವ ಬೆದರಿಕೆ ಒಡ್ಡಿದ್ದು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ನ್ಯಾಯಾಲಯದ ತೀರ್ಪು ಆಗುವ ತನಕ ರಾಜಿಯಲ್ಲಿ ಮುಗಿಸಲು ಮುಂದಾಗಿದ್ದು ಆದರೆ ಈವರೆಗೆ ಇತ್ಯರ್ಥ ಪಡಿಸದೇ ಇದ್ದುದರಿಂದ ಪಿರ್ಯಾದಿಯನ್ನು ದಿನಾಂಕ 27-12-2014 ರಂದು ನೀಡಿರುವುದಾಗಿದೆ.
4.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014 ರಂದು 18:00 ಗಂಟೆಗೆ ಪೊಲೀಸ್ ನಿರೀಕ್ಷಕ ಆರ್.ಬಿ ಮಾಳೇದವರ್ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ನಲ್ಲಿದ್ದಾಗ ಮಂಗಳೂರು ನಗರದ ಪಬ್ಬಾಸ್ ಐಸ್ಕ್ರಿಂ ಪಾರ್ಲರ್ ಎದರುಗಡೆ ರಸ್ತೆಬದಿಯಲ್ಲಿ ಆಕ್ಟಿವ್ ಹೋಂಡಾ ಸ್ಕೂಟರ್ ನಿಲ್ಲಿಸಿ ಅದರ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ತೊಟ್ಟೆ ಕೈಯಲ್ಲಿ ಹಿಡಿದುಕೊಂಡು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ವರ್ತಮಾನದಂತೆ 18:30 ಗಂಟೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಸದ್ರಿ ವ್ಯಕ್ತಿಗಳನ್ನು ವಿಚಾರಿಸಲಾಗಿ 1. ನಿಖಿಲ್ ಶೆಟ್ಟಿ, 2. ಅಕ್ಷಯ್ ಎಂಬುದಾಗಿ ತಿಳಿಸಿದ್ದು ಸದ್ರಿಯವರು ಮಂಗಳೂರಿನಗ ಪಬ್ಬಾಸ್ ಐಸ್ಕ್ರಿಂ ಪಾರ್ಲರ್ ಗೆ ತಿನ್ನಲು ಬರುವ ಬಿಜೈ ಕೆ.ಎಂ.ಸಿ ಹಾಸ್ಟೆಲ್ನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾ ಮಾರಟ ಮಾಡಲು ಬಂದಿರುವುದಾಗಿ ತಿಳಿದು ಬಂದ ಮೇರೆಗೆ ಆರೋಪಿಗಳು ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಅಪರಾಧ ಎಸಗಿರುವುದಾಗಿ ಈ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ಮತ್ತು ಮಾನ್ಯ ತಹಸೀಲ್ದಾರರು ರವರಿಗೆ ಕೋರಿಕೆ ಪತ್ರವನ್ನು ನೀಡಿ ಬರುವಂತೆ ತಿಳಿಸಿದ್ದು ಅವರು ಸದ್ರಿ ಸ್ಥಳಕ್ಕೆ ಬಂದು ಆರೋಪಿಗಳಾದ 1. ನಿಖಿಲ್ ಶೆಟ್ಟಿ, ಮತ್ತು 2. ಅಕ್ಷಯ್ ಎಂಬವರ ಕೈಯಲ್ಲಿದ್ದ ಒಟ್ಟು 249 ಗ್ರಾಂ ತೂಕದ ರೂ 550/- ಮೌಲ್ಯದ ಗಾಂಜಾ, 2 ಮೊಬೈಲ್, ಪರ್ಸ್ ಹಾಗೂ ಅದರೊಳಗಿದ್ದ ರೂ 150/- ಹಾಗೂ ಕೃತ್ಯ ಸ್ಥಳಕ್ಕೆ ಬರಲು ಉಪಯೋಗಿಸಿದ ಆಕ್ಟವ್ ಹೋಂಡಾ ಸ್ಕೂಟರ್ ಇವುಗಳನ್ನು ಪಂಚರ ಸಮಕ್ಷಮ ಸ್ವಾಧಿನ ಪಡಿಸಿಕೊಂಡು ಸ್ವತ್ತುಗಳು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬಂದು ಆರೋಪಿಗಳ ವಿರುಧ್ದ ಜರುಗಿಸಿರುವುದಾಗಿದೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-12-2014 ರಂದು ಸಂಜೆ ಸುಮಾರು 7-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಲೋವರ್ ಬೆಂದೂರು ಸೈಂಟ್ ತೆರೆಸಾ ಸ್ಕೂಲ್ ಬಳಿ ಯಾವುದೋ ಒಂದು ಸ್ಕೂಟರ್ ನ್ನು ಅದರ ಸವಾರ ಆರೋಪಿಯು ಎಸ್.ಸಿ.ಎಸ್. ಆಸ್ಪತ್ರೆ ಕಡೆಯಿಂದ ಬೆಂದೂರ್ ವೆಲ್ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಕು. ಶೋಭಾ ರವರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಅವರ ಎಡಭುಜದ ಕಾಲರ್ ಬೋನಿಗೆ ಗುದ್ದಿದ ಗಾಯ ಮತ್ತು ತಲೆಯ ಹಿಂಭಾಗಕ್ಕೆ ಹಾಗೂ ಬೆನ್ನಿಗೆ ಗುದ್ದಿದ ನೋವು ಮತ್ತು ಕೈಕಾಲುಗಳಿಗೆ ತರಚಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಪಘಾತದ ಗಡಿಬಿಡಿಯಲ್ಲಿ ಹಾಗೂ ಗಾಯದ ನೋವಿನಿಂದ ಪಿರ್ಯಾದುದಾರರು ಅಪಘಾತ ಪಡಿಸಿದ ಸ್ಕೂಟರ್ ನಂಬ್ರವನ್ನು ಗುರುತಿಸಿರುವುದಿಲ್ಲ. ಅಪಘಾತ ಪಡಿಸಿದ ಸ್ಕೂಟರ್ ಸವಾರನು ಪಿರ್ಯಾದುದಾರರನ್ನು ಎಸ್.ಸಿ.ಎಸ್. ಆಸ್ಪತ್ರೆಗೆ ಸಾಗಿಸಿದ್ದು, ಅಪಘಾತದ ಬಳಿಕ ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಲು ವಿಫಲನಾಗಿರುತ್ತಾನೆ.
6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27/12/2014 ರಂದು ಸಮಯ ಸುಮಾರು 19:00 ಗಂಟೆಗೆ ಮಂಗಳೂರು ನಗರದ ಹಂಪನಕಟ್ಟೆ ಜಂಕ್ಷನ್ ನಲ್ಲಿ ಪಿ ಸಿ 869 ನೇ ಯವರು ವಾಹನ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವಾಗ ಫಳ್ನಿರು ಕಡೆಯಿಂದ ಕಾರು ನಂಬ್ರ KL-14-M-1786 ನೇ ದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಂಪನಕಟ್ಟೆಯಲ್ಲಿ ಫಿರ್ಯಾದುದಾರರಾದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಶ್ರೀ ಸುನೀಲ್ ಕುಮಾರ್ ರವರು ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರನ್ನು ನಿಲ್ಲಿಸದೆ ಹೋಗಿರುತ್ತಾರೆ ಸದ್ರಿಯವರನ್ನು ಪಾಂಡೆಶ್ವರದ ಫೋರಂ ಫೀಜಾ ಮಾಲ್ ಹತ್ತಿರ ನಿಲ್ಲಿಸಿದ್ದನ್ನು ತಿಳಿದು ಅಲ್ಲಿಗೆ ತೆರಳಿ ಕಾರಿನ ಚಾಲಕರನ್ನು ವಿಚಾರಿಸಿದಾಗ ಹೆಸರು ಮಹಮ್ಮದ್ ಶರಿಫ್ ಎಂದು ತಿಳಿದು ಬಂತು ಹಾಗೂ ಸದ್ರಿಯವರು ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಸಂಶಯ ಬಂದು ಆಲ್ಕೋಮೀಟರನಿಂದ ಪರಿಕ್ಷಿಸಿದಾಗ ಕಾರಿನ ಚಾಲಕರು ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಕಂಡುಬಂದಿರುತ್ತದೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-12-2014ರಂದು ಸಂಜೆ ಸಮಯ ಸುಮಾರು 17-00 ಗಂಟೆಯಿಂದ 18-00 ಗಂಟೆಯ ಮಧ್ಯೆ ಮಂಗಳೂರು ನಗರದ ಪದವು ಶಾಲಾ ಗ್ರೌಂಡ್ ಬಳಿ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಸಿದ್ದಾಂತ್ ಶಮ್ಲಾಲ್ ರವರ ತಂದೆ ಶ್ಯಾಮ್ ಲಾಲ್ ಎರ್ಮಾಳ್ ರವರ ಆರ್.ಸಿ ಮಾಲಕತ್ವದ ಪಿರ್ಯಾದಿದಾರರು ಉಪಯೋಗಿಸಿಕೊಂಡಿರುವ ಚಾಸೀಸ್ ನಂಬ್ರ: MB8CF4CAGD8157093, ಇಂಜಿನ್ ನಂಬ್ರ:F4862355061ರ KA19 EJ 3574ನೇ ನೋಂದಣಿ ಸಂಖ್ಯೆಯ 2013ನೇ ಮೊಡೆಲಿನ ಕಪ್ಪು ಬಣ್ಣದ ಅಂದಾಜು ಮೌಲ್ಯ ರೂ. 43,000/- ಬೆಲೆ ಬಾಳುವ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿಚಕ್ರ ವಾಹನದಲ್ಲಿ ಮೂಲ ಆರ್.ಸಿ ಹಾಗೂ ಇನ್ಸೂರೆನ್ಸ್ ಪ್ರತಿ ಕೂಡಾ ಇದ್ದುದಾಗಿದೆ. ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಸದ್ರಿ ಪರಿಸರದ ಸುತ್ತಮುತ್ತ ಹಾಗೂ ನಗರದ ಇತರ ಪಾರ್ಕಿಂಗ್ ಸ್ಥಳಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ.
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.12.214 ರಂದು 12.05 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಭಾರತ್ ಪೆಟ್ರೋಲ್ ಬಂಕ್ ನ ಎದುರು ಮಂಗಳೂರು ಮೂಡಬಿದ್ರೆ ರಸ್ತೆಯಲ್ಲಿ ಆರೋಪಿ ರಾಧಾಕೃಷ್ಣ ಬಸ್ ನಂಬ್ರ: KA-19-AA-179 ನೇದನ್ನು ಮಂಗಳೂರು ಕಡೆಯಿಂದ - ಮೂಡಬಿದ್ರೆ ಕಡೆಗೆ ಅತೀವೇಗ , ದುಡುಕುತನದಿಂದ ಚಲಾಯಿಸಿ ತನ್ನ ಮುಂದಿನಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ: KA-19-EB-272 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಕಾಂತಪ್ಪ ಮತ್ತು ಹಿಂದೆ ಸವಾರಿ ಮಾಡುತ್ತಿದ್ದ ಕುಸುಮ ಎಂಬವರು ಮೋಟಾರ್ ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು, ತೀವ್ರ ರೀತಿಯ ಗಾಯಗೊಂಡಿರುತ್ತಾರೆ.
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014 ರಂದು ಬೆಳಗ್ಗಿನ ಜಾವ 2-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಎ. ವಿಲ್ಸನ್ ಫರ್ನಾಂಡಿಸ್ ರವರು ಮೀನುಗಾರಿಕೆ ನಡೆಸಿ ಮಂಗಳೂರು ಮೀನಿನ ದಕ್ಕೆಯಲ್ಲಿ ಗಿಲ್ ನೆಟ್ ದೋಣಿಯನ್ನು ತಂದು ನಿಲ್ಲಿಸಿದಾಗ ಝಕ್ವಾನ್ ಎಂಬ ಗಿಲ್ ನೆಟ್ ದೋಣಿಯ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಯು ಫಿರ್ಯಾದುದಾರರ ಬಳಿಗೆ ಬಂದು ನೀನು ನಾವು ನಿಲ್ಲಿಸುವ ಸ್ಥಳದಲ್ಲಿ ಯಾಕೆ ದೋಣಿ ನಿಲ್ಲಿಸಿದ್ದಿಯಾ? ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಒಬ್ಬಾತನು ಅಕ್ರಮವಾಗಿ ತಡೆದು ನಿಲ್ಲಿಸಿದಾಗ ಇನ್ನೋರ್ವನು ಐಸ್ ಹುಡಿ ಮಾಡುವ ದೊಣ್ಣೆಯಿಂದ ಫಿರ್ಯಾದುದಾರರ ಎಡ ಬದಿಯ ಕಂಕುಳದ ಕೆಳಗೆ ಬಲವಾಗಿ ಹೊಡೆದಿರುತ್ತಾನೆ. ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದಾಗ ಶ್ರೀನಿವಾಸ್ ತಡೆಯಲು ಬಂದಾಗ ಅವರಿಗೂ ಕೂಡಾ ಆರೋಪಿಗಳು ಕೈಗಳಿಂದ ಹೊಡೆದಿರುತ್ತಾರೆ. ಫಿರ್ಯಾದುದಾರರನ್ನು ದೊಣಿಯ ಮಾಲಕರಾದ ಮಹಮ್ಮದ್ ಆಸೀಫ್ ರವರು ಚಿಕಿತ್ಸೆ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಸುರೇಶ ನ್ಯಾಕ್, ಎಂಬುವರು ಡಾ! ನೌಷಾದ್ ಎಂಬವರ ಜೊತೆಯಲ್ಲಿ ಅವರ ಸಂಸಾರದೂಂದಿಗೆ ದಿನಾಂಕ; 26-12-2014 ರಂದು ಉಡುಪಿಯ ಆರೂರು ಎಂಬಲ್ಲಿಂದ ಗುರುಪುರ ಕೈಕಂಬ ಎಂಬಲ್ಲಿಗೆ ಬಂದಿದ್ದು, ಕೆಲಸ ಮುಗಿಸಿ ವಾಪಾಸು ಉಡುಪಿಗೆ ಹೋಗುವರೆ, ಕೈಕಂಬ, ಬಜಪೆ ರಸ್ತೆಯಲ್ಲಿ ಬರುತ್ತಾ ಕಿನ್ನಿಕಂಬ್ಳ ಎಂಬಲ್ಲಿಗೆ KA 20 Z 2931 ನೇ ಯ ಕಾರಿನಲ್ಲಿ ತಲುಪಿದಾಗ ಎದುರಿನಿಂದ ಅಂದರೆ, ಬಜಪೆ ಕಡೆಯಿಂದ ಕೈಕಂಬ ಕಡೆಗೆ KL 14 B 846 ನೇ ಜೀಪನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೂಂಡು ಬಂದು ರಸ್ತೆಯ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯದುದಾರರು ಮತ್ತು ಡಾ. ನೌಷಾದ , ಮತ್ತು ಸುಮೈಯ್ಯ ನೌಷಾದ್, ಎಂಬವರಿಗೆ ಸಾದಾ ಹಾಗೂ ತೀವ್ರ ತರಹದ ಗಾಯವಾಗಿದ್ದು, ಗಾಯಾಳು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014 ರಂದು ಪಿರ್ಯಾದುದಾರರಾದ ಶ್ರೀ ಸಂತೋಷ್ ಕುಮಾರ್ ರವರು ತಮ್ಮ ಸ್ನೇಹಿತನ ಮರನ ನೋಡಿಕೊಂಡು ಬರುವ ಸಲುವಾಗಿ ಪಿರ್ಯಾದುದಾರರ ಬಾಬ್ತು ಮಾರುತಿ ಒಮ್ನಿ ಕಾರ್ ನಂಬ್ರ ಕೆಎ-19-ಎಂಸಿ-8723ನೇದನ್ನು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ನಾರ್ಲ ಎಂಬಲ್ಲಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಪಿರ್ಯಾದುದಾರರು ನಿಲ್ಲಿಸಿದ್ದ ಒಮ್ನಿ ಕಾರಿನ ಹಿಂಬದಿಯಿಂದ ಟಿಪ್ಪರ್ ಲಾರಿಯನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಒಮ್ನಿಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದ್ದು ನಂತರ ಸ್ವಲ್ಪ ಮುಂದೆ ಹೋಗಿ ಲಾರಿಯನ್ನು ನಿಲ್ಲಿಸಿದ್ದು ಪಿರ್ಯಾದುದಾರರು ಟಿಪ್ಪರ್ ಲಾರಿಯ ಸಮೀಪ ತೆರಳುತ್ತಿದ್ದಂತೆ ಆ ಲಾರಿಯಿಂದ ಕ್ಲೀನರ್ ಆಗಿದ್ದ ವ್ಯಾಕ್ತಿಯು ಓಡಿ ಹೋಗಿರುತ್ತಾನೆ ನಂತರ ಪಿರ್ಯಾದುದಾರರು ತಮ್ಮ ಒಮ್ನಿ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿಯನ್ನು ಪರಿಶೀಲಿಸಲಾಗಿ ಅದರಲ್ಲಿ ಸಾಮಾನ್ಯ ಮರಳನ್ನು ಎಲ್ಲಿಂದಲೋ ಕದ್ದುಕೊಂಡು ಬಂದು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಲಾರಿಯ ನಂಬ್ರವನ್ನು ನೋಡಲಾಗಿ ಕೆಎ-21-ಎ-3590 ಎಂಬುದಾಗಿದ್ದು ಅದರ ಚಾಲಕನ ಹೆಸರು ತಿಳಿದುಕೊಂಡಲ್ಲಿ ವಾಹಿದ್ ಉರ್ ರೆಹಮಾನ್ (26) ತಂದೆ; ಮಹಮ್ಮದ್ ಗೌಸ್ ವಾಸ; ಅಬೂಬಕ್ಕರ್ ಸಿದ್ದಿಕ್ ಮಸೀದಿ ಹಿಂಬಾಗ, ಅಕ್ಕರೆಕೆರೆ, ಉಳ್ಳಾಲ ಎಂಬುದಾಗಿದ್ದು ಲಾರಿಯಿಂದ ಒಡಿಹೋದ ಕ್ಲೀನರ್ನ ಹೆಸರು ನಜೀಬ್ ಎಂದು ತಿಳಿಯಿತು ಈ ಅಪಘಾತದಿಂದ ಪಿರ್ಯಾದುದಾರರ ಬಾಬ್ತು ಮಾರುತಿ ಒಮ್ನಿ ಕಾರಿನ ಹಿಂಬಾಗ ಸಂಪೂರ್ಣ ಜಖಂಗೊಂಡಿರುತ್ತದೆ ಯಾರಿಗೂ ಯಾವುದೇ ಗಾಯವುಂಟಾಗಿರುವುದಿಲ್ಲ ಪಿರ್ಯಾದುದಾರರ ಬಾಬ್ತು ಒಮ್ನಿ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿಯಲ್ಲಿ ಸಾಮಾನ್ಯ ಮರಳನ್ನು ಎಲ್ಲಿಂದಲೋ ಕದ್ದುಕೊಂಡು ಬಂದು ಸದ್ರಿ ಲಾರಿಯಲ್ಲಿ ಅಕ್ರಮ ಸಾಗಾಟ ಮಾಡಿಕೊಂಡು ಟಿಪ್ಪರ್ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬಾಬ್ತು ಮಾರುತಿ ಒಮ್ನಿ ಗೆ ಡಿಕ್ಕಿ ಹೊಡೆದಿರುವುದೇ ಕಾರಣವಾಗಿರುತ್ತದೆ.
12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸುನೀಲ್ ಡಿ'ಸೋಜಾ ರವರ ಒಡೆತನದ ಮೀನುಗಾರಿಕೆಗೆ ಉಪಯೋಗಿಸಲಾಗುವ ಸಾಗರ್ ಸಂಪ್ರೀತ್ ಎಂಬ ಮೋಟಾರ್ ಬೋಟ್ನ್ನು ದಿನಾಂಕ 23-12-2014 ರಂದು ಬೆ 6-00 ಗಂಟೆಗೆ ಅದರ ಚಾಲಕನಾಗಿ ವಿಲಿಯಮ್ ಅಂಬಾಟ್ (48) ಇವರು ಅಜಯ್, ನಾರಾಯಣ್, ಮೆಂಕಟೇಶ್, ವಸಂತ್, ಶ್ರೀಕಾಂತ್ ಎಂಬುವವರುಗಳ ಜೊತೆ ಮೀನುಗಾರಿಕೆಗಾಗಿ ಮಂಗಳೂರು ಬಂದರು ಧಕ್ಕೆಯಿಂದ ಹೊರಟವರು ಮೀನುಗಾರಿಕೆ ಮುಗಿಸಿ ಹಿಂದಿರುಗುವಾಗ ದಿನಾಂಕ 26-12-2014 ರಂದು 10 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಸೋಮೇಶ್ವರ ಸಮ್ಮರ್ ಸ್ಯಾಂಡ್ ಬೀಚ್ ಸಮೀಪ ವಿಲಿಯಮ್ ಅಂಬಟ್ ಎಂಬುವವರು ಸಮುದ್ರದ ಮಧ್ಯೆ ಬಲೆಯು ಹಾಕಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಬಲೆಯನ್ನು ಎಳೆಯುವಾಗ ಆಯತಪ್ಪಿ ಬಿದ್ದು ಕಾಣೆಯಾಗಿರುವುದಾಗಿದೆ. ನಾಪತ್ತೆಯಾದ ಅಂಬಟ್ ರವರನ್ನು ಇತರ ಬೋಟ್ ಗಳ ಸಹಾಯದಿಂದ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ನಾಪತ್ತೆಯಾದ ವ್ಯಕ್ತಿಯ ಚಹರೆ: ಹೆಸರು: ವಿಲಿಯಮ್ ಅಂಬಾಟ್ (48), ಎತ್ತರ: 5.6 ಅಡಿ, ಧೃಢಕಾಯ ಶರೀರ , ಕಪ್ಪು ಮೈಬಣ್ಣ. ಕಪ್ಪು ಹಾಗೂ ಬಿಳಿ ಮಿಶ್ರಿತ ಕುರುಚಲು ಗಡ್ಡ ಮತ್ತು ಕಪ್ಪು ಹಾಗೂ ಬಿಳಿ ಮಿಶ್ರಿತ ತಲೆಕೂದಲು, ಅರ್ಧತೋಳಿನ ಮಾಸಿದ ಬಿಳಿ ಅಂಗಿ ಹಾಗೂ ಕಡು ನೀಲಿ ಬಣ್ಣದ ಅರ್ಧಕಾಲಿನ ಚಡ್ಡಿ ಧರಿಸಿರುತ್ತಾರೆ.
13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-12-2014 ರಂದು ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಮುದಾಸತ್ ರವರ ಬೈಕ್ ಕೆಎ 19 ಆರ್ 4160 ನ್ನು ಪರಿಚಯದ ಮೊಹಮ್ಮದ್ ವಹಾಬ್ ಎಂಬುವವರು ತೆಗೆದುಕೊಂಡು ಹೋಗಿದ್ದು ಮಹಮ್ಮದ್ ನವಾಜ್ ಎಂಬುವವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಹೋಗಿರುವುದರಿಂದ ಮಂಗಳೂರು ತಾಲೂಕು ಜಪ್ಪಿನಮೊಗರು ಗ್ರಾಮದ ನೇತ್ರಾವತಿ ಬ್ರಿಡ್ಜ ಬಳಿ ಬೈಕ್ ಸ್ಕಿಡ್ ಆಗಿ ಸವಾರ ಮೊಹಮ್ಮದ್ ವಹಾಬ್ ಎಂಬುವವರಿಗೆ ತುಟಿಗೆ, ಬಲಕೈಗೆ, ಎಡಭುಜಕ್ಕೆ ರಕ್ತಬರುವ ಗಾಯವಾಗಿದ್ದು ಸಹಸವಾರ ಮುಹಮ್ಮದ್ ನವಾಜ್ ಎಂಬುವವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯ ಉಂಟಾಗಿರುತ್ತದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.12.2014 ರಂದು ಪಿರ್ಯಾದುದಾರರಾದ ಶ್ರೀ ಗಣೇಶ್ ರವರು ತನ್ನ ಬಾಬ್ತು KA-19-EE-8576ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಜೀವನ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಣ್ಣೂರು ಕಡೆಯಿಂದ ಕೋಡೆಕ್ಕಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ NH 75 ರಲ್ಲಿ ವೂಕ್ಸ್ ವೇಗನ್ ಕಾರಿನ ಶೊರೂಂನ ಎದುರು ತಲುಪುತ್ತಿದ್ದಂತೆ ಮಧ್ಯಾಹ್ನ 1:30 ಗಂಟೆ ಸಮಯಕ್ಕೆ ಸದ್ರಿ ಮೋಟಾರ್ ಸೈಕಲ್ಲಿನ ಹಿಂದಿನಿಂದ ಅಂದರೆ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ KA-51-MF-5672ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ಹೋಗುತ್ತಿದ್ದ ಸದ್ರಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರರಿಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ತಲೆಯ ಎಡಭಾಗಕ್ಕೆ, ಹಣೆಯ ಬಲಭಾಗಕ್ಕೆ, ಮುಖಕ್ಕೆ ರಕ್ತಗಾಯ, ಬೆನ್ನಿಗೆ ಚರ್ಮ ಸುಲಿದ ಗಾಯ ಹಾಗೂ ಅಲ್ಲಲ್ಲಿ ತರಚಿತ ಗಾಯವಾಗಿರುವುದಲ್ಲದೇ ಸಹಸವಾರ ಜೀವನ್ ರವರ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ರಕ್ತ ಗಾಯಗೊಂಡಿರುವುದಾಗಿದೆ.
No comments:
Post a Comment